ಸಿಂಹಳ ಭಾಷೆ

ಶ್ರೀಲಂಕಾದಲ್ಲಿ ಬಳಸುವ ಹಿಂದೂ-ಆರ್ಯ(ಇಂಡೋ -ಆರ್ಯನ್ )ಭಾಷೆ

ಶ್ರೀಲಂಕಾ ದೇಶದ ಅಧಿಕೃತ ಭಾಷೆ. ಇಂಡೋಆರ್ಯನ್ ಭಾಷಾವರ್ಗಕ್ಕೆ ಸೇರಿದೆ. ಬಂಗಾಲಿ, ಮರಾಠಿ, ಹಿಂದಿ, ಪಂಜಾಬಿ, ದಿವೇರಿ, ಮುಂತಾದ ಭಾಷೆಗಳು ಇಂಡೋ ಆರ್ಯನ್ ಭಾಷಾವರ್ಗಕ್ಕೆ ಸೇರಿದೆ. ಸಿಂಹಳ ಭಾಷೆಗೆ ಬಹಳ ಹತ್ತಿರವಾದ ಭಾಷೆಯೆಂದರೆ ಮಾಲ್ಡಿವ್ ದ್ವೀಪಗಳಲ್ಲಿ ಬಳಕೆಯಲ್ಲಿರುವ ದಿವೇರಿ. ಈ ಲಿಪಿ ಇಂಡಿಕ್ ಮತ್ತು ಸೆಮಿಟಿಕ್ ಸಂಪ್ರದಾಯಗಳ ಸಮ್ಮಿಶ್ರಣ. ಸಿಂಹಳದಿಂದಲೆ ದಿವೇಹಿ ನಿಷ್ಪನ್ನಗೊಂಡದ್ದು, ಅದು ಸಿಂಹಳದ ಸೋದರ ಭಾಷೆಯೆಂದು ಎಡ್ವರ್ಡ್ ಪೆರೆರಾ ಅಭಿಪ್ರಾಯ ಪಟ್ಟಿದ್ದಾರೆ. ಎಷ್ಟೋ ಆಧುನಿಕ ಯೂರೋಪಿಯನ್ ಭಾಷೆಗಳಿಗೆ ಗ್ರೀಕ್ ಮತ್ತು ಲ್ಯಾಟಿನ್ ಮೂಲವಾಗಿರುವಂತೆ, ಸಿಂಹಳ ಮತ್ತಿತರ ಇಂಡೋ ಆರ್ಯನ್ ಭಾಷೆಗಳಿಗೆ ಮೂಲ ಸಂಸ್ಕೃತ ಭಾಷೆಯಾಗಿದೆ. ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆಯೆಂದು ಭಾವಿಸುವುದಾಗಿದೆ.ಇಂಡೋ ಆರ್ಯನ್ ಅಥವಾ ದ್ರಾವೀಡ ಭಾಷೆಗಳಲ್ಲಿ ಕಾಣದಿರುವ ಹಲವು ಭಾಷಾಂಶಗಳು ಸಿಂಹಳ ಭಾಷೆಯಲ್ಲಿವೆ.ವಿಶೇಷವಾಗಿ ಧ್ವನಿ ವ್ಯವಸ್ಥೆಯನ್ನು ಗಮನಿಸಬಹುದು. ಇಂತಹ ಅಂಶಗಳು ಆಫ್ರಿಕನ್ ಅಥವಾ ಪಾಲಿನೇಷ್ಯನ್ ಭಾಷೆಗಳಿಂದ ಬಂದಿರಬಹುದೆಂದು ಊಹಿಸಲಾಗಿದೆ. ಅದಲ್ಲದೆ ಡಚ್, ಮಲಯ್, ಪೋರ್ಚುಗೀಸ್ ಮತ್ತು ಇಂಗ್ಲೀಷಿನಿಂದಲು ಅನೇಕ ಪದಗಳನ್ನು ಸ್ವೀಕರಿಸಿದೆ. ಇದರಿಂದ ಸಿಂಹಳ ಭಾಷೆಯ ಬೆಳವಣಿಗೆ ಸಾಧ್ಯವಾಗಿದೆ.

ಸಿಂಹಳದಲ್ಲಿ ಹದಿನಾಲ್ಕು ಸ್ವರಧ್ವನಿಗಳಿವೆ. ಅದರಂತೆ ೭ ಹ್ರಸ್ವಸ್ವರಗಳು ೭ ಧೀರ್ಘ ಸ್ವರಗಳು ಇಂಡೋ ಆರ್ಯನ್ ಮತ್ತು ದ್ರಾವೀಡ ಭಾಷೆಗಳಲ್ಲಿಲ್ಲದ ೨ ವಿಶಷ್ಟ ಸ್ವರಗಳು ಈ ಭಾಷೆಯಲ್ಲಿವೆ. ಈ ಭಾಷೆಯಲ್ಲಿರುವ ಇಪ್ಪತ್ತಾರು ವ್ಯಂಜನ ಧ್ವನಿಗಳಲ್ಲಿ ನಾಲ್ಕು ಪೂರ್ವ ನಾಸಿಕ ಸ್ಪರ್ಶಧ್ವನಿಗಳಿವೆ. ಸಿಂಹಳ ಸಾಮಾನ್ಯ ವಾಕ್ಯ ಕರ್ತೃ, ಕರ್ಮ, ಕ್ರಿಯಪದಗಳಿಂದ ಕೂಡಿದೆ. ಲಿಂಗ ವಚನ ವಿಭಕ್ತಿ ವ್ಯವಸ್ಥೆಗಳಲ್ಲಿ ಕರ್ತೃ ಕ್ರಿಯೆಯೊಂದಿಗೆ ಅನ್ವಯ ವಾಗುತ್ತದೆ‌. ಈ ಪ್ರಕ್ರಿಯೆ ಸಾಹಿತ್ಯಕ ಸಿಂಹಳದಲ್ಲಿ ಕಾಣಿಸಿಕೊಳ್ಳುವಂತದ್ದು, ಸಿಂಹಳವನ್ನು ಎಡಗಡೆಯಿಂದ ಬಲಗಡೆಗೆ ಬರೆಯುತ್ತಾರೆ. ಇಂಗ್ಲೀಷಿನಲ್ಲಿರುವಂತೆ ಇದರಲ್ಲಿ ದೊಡ್ಡಾಕ್ಷರಗಳಿರುವುದಿಲ್ಲ. ಬರಹ ವ್ಯವಸ್ಥೆ ಅಕ್ಷರಾತ್ಮಕ. ರೋಮನ್ ಲಿಪಿಯಲ್ಲಾದರೆ ಸ್ವರ ಮತ್ತು ವ್ಯಂಜನಗಳು ಬೇರೆ ಬೇರೆ ಘಟಕಗಳು, ಆದರೆ ಅಕ್ಷರಾತ್ಮಕ ಬರಹದಲ್ಲಿ ವ್ಯಂಜನದೊಂದಿಗೆ ಸ್ವರವು ಸೇರಿಕೊಂಡಿರುತ್ತದೆ.

ಭಾಷಾ ಕುಟುಂಬ ಬದಲಾಯಿಸಿ

ಬರವಣಿಗೆ ವ್ಯವಸ್ಥೆ ಬದಲಾಯಿಸಿ

ಸಿಂಹಳಿ ಭಾಷೆಯ ಕೆಲವು ಪ್ರಸಿದ್ದ ಪ್ರಾದೇಶಿಕ ಭಾಷೆಗಳು ಬದಲಾಯಿಸಿ

ಹೆಚ್ಚಿನ ಓದಿಗಾಗಿ ಬದಲಾಯಿಸಿ

ಭಾಷಾ ಕುಟುಂಬ :

  • ಇಂಡೋ ಯೂರೋಪಿಯನ್
  • ಇಂಡೋ ಇರಾನಿಯನ್
  • ಇನ್ಸುರ್ ಇಂಡಿಕ್
  • ಸಿಂಹಳ

ಬರವಣಿಗೆ ವ್ಯವಸ್ಥೆ: * ಸಿಂಹಳ ಲಿಪಿ ಎರಡು ಕೇಂದ್ರೀಯ ಸ್ವರಗಳ ಹೊರತಾಗಿ ಸಿಂಹಳದ ಹಾಡುನುಡಿಯ ಸಾಂಪ್ರದಾಯಿಕ ವರ್ಣಮಾಲೆಯಲ್ಲಿ ನಲವತ್ತು ಧ್ವನಿಗಳಿವೆ. ಸಂಸ್ಕೃತ, ಪಾಲಿ, ಪ್ರಾಕೃತ ಮೂಲದಿಂದ ಪದಗಳನ್ನು ಬರೆಯಲು ಹದಿನೆಂಟು ಅಧಿಕ ಅಕ್ಷರಗಳನ್ನು ವರ್ಣಮಾಲೆಗೆ ಸೇರಿಸಲಾಗಿದೆ. ಸಿಂಹಳವನ್ನು ಬರೆಯಲು ಲಿಪಿ ಪ್ರಾಚೀನ ಬ್ರಾಹ್ಮಿಲಿಪಿಯಿಂದ ವಿಕಾಸಗೊಂಡಿದೆ. ದ್ರಾವೀಡ ಬರೆದ ವ್ಯವಸ್ಥೆಯಿಂದಲೂ ಕೆಲವು ಅಕ್ಷರಗಳನ್ನು ಸಿಂಹಳ ಎರವಲು ಪಡೆದಿದೆ. ಸಿಂಹಳ ಭಾಷೆಯಲ್ಲಿ ಮೂಲದಲ್ಲಿದ್ದ ಕೆಲವು ಅಕ್ಷರಗಳು ಕಣ್ಮರೆಯಾಗಿ ಅವುಗಳ ಸ್ಥಾನದಲ್ಲಿ ಕೆಲವು ದ್ರಾವಿಡ ಅಕ್ಷರಗಳು ಸೇರ್ಪಡೆಯಾಗಿದೆ.ಇಂಡೋ ಯೂರೋಪಿಯನ್ ಭಾಷಾವರ್ಗಕ್ಕೆ ಸೇರಿದ ಕುಟುಂಬವಾಗಿದೆ. ಇದನ್ನು ೧೯ ಮಿಲಿಯನ್ ಜನರು ಮಾತನಾಡುತ್ತಾರೆ. ಸ್ಥಳೀಯ ಭಾಷಿಕರು ೧೬ ಮಿಲಿಯನ್ ಜನ ಮಾತನಾಡುತ್ತಾರೆ. [೧] ಸಿಂಹಳ ಲಿಪಿ‌ ಧ್ವನ್ಯಾತ್ಮಕವಾಗಿದ್ದು ಬರೆಯುವಂತೆಯೆ ಉಚ್ಚಾರ ವ್ಯವಸ್ಥೆ ಇರುವಂತದ್ದು. ಸಂಸ್ಕೃತ ಪಾಲಿ ಭಾಷಾಪದಗಳು ಸಿಂಹಳದಲ್ಲಿ ತದ್ಬವಗೊಂಡಿವೆ. ದಕ್ಷಿಣ ದ್ರಾವಿಡ ಭಾಷಾವರ್ಗದ ತಮಿಳಿನ ಪ್ರಭಾವವನ್ನು ಸಿಂಹಳದಲ್ಲಿ ಗುರುತಿಸಬಹುದು. ೧೧ನೇ ಶತಮಾನದ ಹೋತ್ತಿಗೆ ಅನೇಕ ಪದಗಳು ತಮಿಳಿನಿಂದ ಸಿಂಹಳಕ್ಕೆ ಸೇರಿವೆ. ಈ ಎಲ್ಲಾ ಸ್ವೀಕರಣಗಳಿಂದಾಗಿ ಇಂದಿನಿಂದ ದಿನಗಳಲ್ಲಿ ಸಿಂಹಳ ಭಾಷೆ ಸಂಪತ್ಬರಿತವಾಗಿದೆ. ಐತಿಹಾಸಿಕ ಮತ್ತು ತೌಲನಿಕ ಅಧ್ಯಯನದ ದೃಷ್ಠಿಯಿಂದ ಗಮನಾರ್ಹವಾಗಿದೆ.https://lanka.com/about/destinations/colombo

ಸಿಂಹಳಿ ಭಾಷಯ ಕೆಲವು ಪ್ರಸಿದ್ದ ಪ್ರಾದೇಶಿಕ ಭಾಷೆಗಳು :

  • ಮೊನರಗಲ,ಬದುಲ್ಲಾ
  • ಗ್ಯಾಲೆ
  • ಕ್ಯಾಂಡಿ
  • ಕೆಗಲ್ಲೆ


ಉಲ್ಲೇಖಗಳು ಬದಲಾಯಿಸಿ

  1. https://www.amazon.com/dp/1983168858