ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಯೋಗಿಕ ಪಂಥಗಳಲ್ಲಿ ಸಮಾಧಿ ಪದವು ಧ್ಯಾನಸ್ಥ ಪ್ರಜ್ಞೆಯ ಸ್ಥಿತಿಯನ್ನು ಸೂಚಿಸುತ್ತದೆ. ಯೋಗಿಕ ಸಂಪ್ರದಾಯಗಳಲ್ಲಿ, ಇದು ಧ್ಯಾನದ ಅಭ್ಯಾಸದಿಂದ ಸಾಧಿಸಲಾದ ವಿಚಾರಯುತ ಮಗ್ನತೆ ಅಥವಾ ಬಾಹ್ಯಜ್ಞಾನವಿಲ್ಲದ ಸ್ಥಿತಿ.[೧]

ಅಷ್ಟಾಂಗ ಯೋಗ ಸಂಪ್ರದಾಯದಲ್ಲಿ, ಇದು ಪತಂಜಲಿಯ ಯೋಗಸೂತ್ರಗಳಲ್ಲಿ ಗುರುತಿಸಲಾದ ಎಂಟನೇ ಹಾಗೂ ಅಂತಿಮ ಅಂಗವಾಗಿದೆ.[೨][೩]

ಸಮಾಧಿಯು ಧ್ಯಾನದ ಉದ್ದೇಶದೊಂದಿಗೆ ಒಂದಾಗುವಿಕೆಯಾಗಿದೆ. ಧ್ಯಾನದ ಕ್ರಿಯೆ ಮತ್ತು ಧ್ಯಾನದ ಉದ್ದೇಶದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಸಮಾಧಿ ಎರಡು ಪ್ರಕಾರಗಳದ್ದಾಗಿದೆ, ಧ್ಯಾನದ ಉದ್ದೇಶದ ಆಸರೆ ಇರುವಂಥದ್ದು ಮತ್ತು ಇಲ್ಲದಿರುವಂಥದ್ದು:

  • ಸಂಪ್ರಜ್ಞಾತ ಸಮಾಧಿ ಅಥವಾ ಸವಿಕಲ್ಪ ಸಮಾಧಿ ಅಥವಾ ಸಬೀಜ ಸಮಾಧಿ. ಇದು ಉದ್ದೇಶದ ಆಸರೆಯಿಲ್ಲದ ಧ್ಯಾನ. ಸಂಪ್ರಜ್ಞಾತ ಸಮಾಧಿಯು ವಿವೇಚನೆ, ಪರ್ಯಾಲೋಚನೆ, ಆನಂದ, ನನ್ನತನಕ್ಕೆ ಸಂಬಂಧಿಸಿದೆ.
  • ಅಸಂಪ್ರಜ್ಞಾತ ಸಮಾಧಿ ಅಥವಾ ನಿರ್ವಿಕಲ್ಪ ಸಮಾಧಿ ಅಥವಾ ನಿರ್ಬೀಜ ಸಮಾಧಿ: ಇದು ಉದ್ದೇಶವಿರದ ಧ್ಯಾನವಾಗಿದ್ದು, ಅತ್ಯಂತ ಸೂಕ್ಷ್ಮವಾದ ಅಂಶವಾದ ಪುರುಷ ಅಥವಾ ಪ್ರಜ್ಞೆಯ ಜ್ಞಾನವಾಗಿ ಪರಿಣಮಿಸುತ್ತದೆ.

ವ್ಯಾಖ್ಯಾನಗಳು ಬದಲಾಯಿಸಿ

  1. ಸರ್ಬಕರ್: ಸಮಾಧಿ ಎಂದರೆ ಧ್ಯಾನದ ಹೀರಿಕೊಳ್ಳುವಿಕೆ.

ವ್ಯುತ್ಪತ್ತಿಶಾಸ್ತ್ರ ಬದಲಾಯಿಸಿ

ಸಂಸ್ಕೃತ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. Sarbacker 2012.
  2. "The eight limbs, The core of Yoga". Expressions of Spirit.
  3. "8 Limbs of Yoga: Samādhi". families.
"https://kn.wikipedia.org/w/index.php?title=ಸಮಾಧಿ&oldid=1198721" ಇಂದ ಪಡೆಯಲ್ಪಟ್ಟಿದೆ