ಸತ್ಯನಾರಾಯಣ

ಸತ್ಯನಾರಾಯಣ ಪೂಜೆ

ಸತ್ಯನಾರಾಯಣ ವಿಷ್ಣುವಿನ ಇನ್ನೊಂದು ಹೆಸರು.

ಸತ್ಯನಾರಾಯಣ

ಪರಿಚಯ

ಸತ್ಯನಾರಾಯಣನು ಸಾಮಾನ್ಯವಾಗಿ ತಿಂಗಳ ಹುಣ್ಣಿಮಯ ದಿನ, ಹಿಂದೂಗಳಿಂದ ಪೂಜಿಸಲ್ಪಡುವ ವಿಷ್ಣುವಿನ ಮತ್ತೊಂದು ರೂಪ. ಭಗವಾನ್ ವಿಷ್ಣುವಿನ ನಾರಾಯಣ ರೂಪ ಸತ್ಯದ ಅವತಾರ ಎಂದು ಪರಿಗಣಿಸಲಾಗಿದೆ. ಸತ್ಯನಾರಾಯಣ ಪೂಜೆ ಒಂದು ಪೂಜೆ. ಸತ್ಯನಾರಾಯಣ ದೇವರನ್ನು ಜನರು ಗೌರವಯುತವಾಗಿ ಕಥೆ ವಾಚನಮಾಡಿ ಪೂಜಿಸುತ್ತಾರೆ. ಅನೇಕ ಜನರು ನಂತರ ಅಥವಾ ಒಂದು ಮಂಗಳಕರ ಸಂದರ್ಭದಲ್ಲಿ ಅಥವಾ ಜೀವನದಲ್ಲಿ ಯಾವುದೇ ಯಶಸ್ಸು ಸಿಗಲೆಂದು ಈ ಪೂಜೆ ನಡೆಸುತ್ತಾರೆ. ಶ್ರೀ ಸತ್ಯನಾರಾಯಣ ಪೂಜೆ ಗುಜರಾತ್, ಬಂಗಾಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಭಾರತದ ಅನೇಕ ಭಾಗಗಳಲ್ಲಿ ಅತ್ಯಂತ ಜನಪ್ರಿಯ ಆಚರಣೆಯಾಗಿದೆ. ಮಹಾರಾಷ್ಟ್ರದಲ್ಲಿ, ಸತ್ಯನಾರಾಯಣ ಪೂಜೆ ಏಕಾದಶಿ ಅಥವಾ ಚತುರ್ಥಿ ಮೇಲೆ ಮಾಡಲಾಗುತ್ತದೆ.

ಸತ್ಯನಾರಾಯಣ ಪೂಜೆ

ವಿಧಿವಿಧಾನಗಳು

ವ್ರತವೆಂದರೆ ಧಾರ್ಮಿಕ ಶಪಥ, ಧಾರ್ಮಿಕ ಆಚರಣೆ, ಅಥವಾ ಕರ್ತವ್ಯವೆಂದು. ಎಲ್ಲ ಕಡೆಯ ಹಿಂದೂಗಳು ಆರೋಗ್ಯ, ಸಂಪತ್ತು, ಸಮೃದ್ಧಿ, ವೈಭವ, ಶಿಕ್ಷಣ, ತೊಂದರೆ ಮತ್ತು ಕಾಯಿಲೆಯಿಂದ ಪರಿಹಾರದ ದೈವಿಕ ಅನುಗ್ರಹಕ್ಕೆ ಶ್ರೀ ಸತ್ಯನಾರಾಯಣ ವ್ರತವನ್ನು ನಡೆಸುತ್ತಾರೆ. ಇದನ್ನು ವ್ಯಾಪಾರ ಅಥವಾ ವೃತ್ತಿ ಬೆಳವಣಿಗೆಯಲ್ಲಿನ ಯಶಸ್ಸಿನ ಕಾರಣ, ಮದುವೆಯಂತಹ ಸಾಮಾಜಿಕ ಕಾರ್ಯಗಳ ಸಮಯದಲ್ಲಿ, ಗೃಹಪ್ರವೇಶ ಸಮಾರಂಭಗಳು, ಮತ್ತು ಮಕ್ಕಳ ನಾಮಕರಣದಲ್ಲಿ ನಡೆಸಬಹುದಾಗಿದೆ. ಈ ಪೂಜೆಯನ್ನು ಮೊದಲು ಋಷಿಗಳಿಗೆ ಸೂತ ಪುರಾಣಿಕರಿಂದ ಸ್ಕಂದ ಪುರಾಣದ ರೇವಾ ಖಂಡದಲ್ಲಿ ಉಲ್ಲೇಖಿಸಲಾಗಿದೆ. ವಿವರಗಳು ಸಾಮಾನ್ಯವಾಗಿ ಪೂಜೆ ಜೊತೆ ಓದಲಾಗುವ ಕಥೆಯ ಭಾಗವಾಗಿವೆ.

ಶ್ರೀ ಸತ್ಯ ನಾರಾಯಣ ಪೂಜೆಯು ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಬಿಹಾರ, ಬಂಗಾಳ, ಒರಿಸ್ಸಾ, ಮಹಾರಾಷ್ಟ್ರ, ಅಸ್ಸಾಂ, ಮತ್ತು ಗೋವಾ ಸೇರಿದಂತೆ ಭಾರತದ ಬಹುತೇಕ ಭಾಗಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ.[೧]

ಆಚರಣೆ

ಸತ್ಯ ನಾರಾಯಣ ಪೂಜೆಯನ್ನು ಸಾಮಾನ್ಯವಾಗಿ ಪ್ರತಿ ತಿಂಗಳ ಹುಣ್ಣಿಮೆಯ ದಿನ, ಏಕಾದಶಿ (ಹುಣ್ಣಿಮೆಯ ಅಥವಾ ಅಮಾವಾಸ್ಯೆ ನಂತರ 11 ನೇ ದಿನ), ಕಾರ್ತಿಕ ಪೂರ್ಣಿಮಾ, ಸೂರ್ಯ ಗ್ರಹಣ ದಿನ ಅಥವಾ ಸಂಕ್ರಾಂತಿಯಂದು (ಆಶಾಢ ಚಾಂದ್ರಮಾಸ ಹೊರತುಪಡಿಸಿ) ಮಾಡಲಾಗುತ್ತದೆ. ಇದನ್ನು ದೇವರಿಗೆ ಉಪಕಾರದ ಅರ್ಪಣೆಯಾಗಿ, ವಿಶೇಷ ಸಂದರ್ಭಗಳಲ್ಲಿ ಮತ್ತು ಸಾಧನೆಗಳ ಕಾಲದಲ್ಲಿ ನಡೆಸಲಾಗುತ್ತದೆ. ಈ ಸಂದರ್ಭಗಳು ಕೆಲವನ್ನು ಹೆಸರಿಸಿದರೆ, ಮದುವೆ, ವಿಶ್ವವಿದ್ಯಾಲಯದ ಪದವಿ, ಹೊಸ ಕೆಲಸದ ಆರಂಭ, ಹೊಸ ಮನೆ ಖರೀದಿಯನ್ನು ಒಳಗೊಂಡಿರುತ್ತವೆ. ಜೊತೆಗೆ, ಈ ಅತ್ಯಂತ ಶ್ರೇಯಸ್ಕರ ಪೂಜೆಯ ನೆರವೇರಿಕೆ ಸಾಮಾನ್ಯವಾಗಿ ಒಂದು ಕುಟುಂಬವನ್ನು ಆರಂಭಿಸಲು ಪ್ರಯತ್ನಿಸುತ್ತಿರುವ ಜೋಡಿಗೆ ಮಗುವನ್ನು ಪ್ರದಾನಮಾಡುತ್ತದೆ.[೨]

ಸತ್ಯನಾರಾಯಣ ಪೂಜೆಯನ್ನು ಯಾವುದೇ ಕಾರಣಕ್ಕೆ ಯಾವುದೇ ದಿನ ನಡೆಸಬಹುದಾಗಿದೆ. ಇದು ಯಾವುದೇ ಹಬ್ಬಕ್ಕೆ ಸೀಮಿತವಾದ ಪೂಜೆಯಲ್ಲ, ಆದರೆ ಪೂರ್ಣಿಮಾ (ಹುಣ್ಣಿಮೆಯ ದಿನ) ಈ ಪೂಜೆಗೆ ನಿರ್ದಿಷ್ಟವಾಗಿ ಶ್ರೇಯಸ್ಕರ ಎಂದು ಪರಿಗಣಿಸಲಾಗುತ್ತದೆ. ಸಂಜೆ ಈ ಪೂಜೆಯನ್ನು ನಡೆಸುವುದು ಹೆಚ್ಚು ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಒಬ್ಬರು ಬೆಳಗ್ಗೆಯೂ ಈ ಪೂಜೆಯನ್ನು ಮಾಡಬಹುದು.[೩]

ಈ ಪೂಜೆಯು ಸರಳವಾಗಿದೆ, ಯಾರಾದರೂ ಮಾಡಬಹುದು, ಮತ್ತು ಇದನ್ನು ನಿರ್ವಹಿಸಲು ಪುರೋಹಿತರ ಅಗತ್ಯವಿಲ್ಲ. ಪೂಜೆಯನ್ನು ಬಾಂಗ್ಲಾದೇಶದಲ್ಲಿ ಕೆಲವು ಬೌದ್ದರು ನಡೆಸುತ್ತಾರೆ.

  1. https://en.wikipedia.org/wiki/Satyanarayan_Puja
  2. panditjiusa.com/satyanarayan_vidhi.htm
  3. www.puja.net/Pages/Yagyas/Journal/04Events/Satyanarayana/SatyaPuja.htm