ಶ್ರೀ ಎಂಬುವುದು ಒಂದು ಭಾರತೀಯ ಶಬ್ದವಾಗಿದೆ. ಇದು ಐಶ್ವರ್ಯ ಮತ್ತು ಏಳಿಗೆಯನ್ನು ಸೂಚಿಸುತ್ತದೆ ಮತ್ತು ಇದನ್ನು ಮುಖ್ಯವಾಗಿ ಗೌರವಸೂಚಕ ಪದವಾಗಿ ಬಳಸಲಾಗುತ್ತದೆ.

ದೇವನಾಗರಿ ಲಿಪಿಯಲ್ಲಿ ಶ್ರೀ

ಬಳಕೆ ಬದಲಾಯಿಸಿ

ಶ್ರೀ ಶಬ್ದವು ಸಂಬೋಧನೆಯ ಒಂದು ಸುಶಿಷ್ಟ ರೂಪವಾಗಿದೆ ಮತ್ತು ಇಂಗ್ಲಿಷ್‍ನ "ಮಿಸ್ಟರ್" ಅಥವಾ "ಮಿಸಸ್"ಗೆ ಸಮಾನವಾಗಿದೆ.[೧]

ಶ್ರೀ ಪದವನ್ನು ಆಗಾಗ್ಗೆ ಕೆಲವು ಹಿಂದೂ ದೇವತೆಗಳಿಗೆ ಗುಣವಾಚಕವಾಗಿ ಬಳಸಲಾಗುತ್ತದೆ. ಈ ಬಳಕೆಯಲ್ಲಿ ಇದರರ್ಥ ಪವಿತ್ರ ಎಂದಾಗಿದೆ. ಭಾಷೆ ಮತ್ತು ಸಾಮಾನ್ಯ ಬಳಕೆಯಲ್ಲಿ, ಶ್ರೀ ಪದವನ್ನು ಹಾಗೆಯೇ ಬಳಸಲಾದಲ್ಲಿ (ಇದರ ನಂತರ ಯಾವುದೇ ಹೆಸರು ಅನುಸರಿಸದಿದ್ದರೆ) ಇದು ದೇವರನ್ನು ಸೂಚಿಸುತ್ತದೆ.

ಶ್ರೀ ದೇವಿಯು (ಅಥವಾ ಸಂಕ್ಷಿಪ್ತವಾಗಿ ಶ್ರೀ, ವಿಷ್ಣುವಿನ ಪತ್ನಿ ಲಕ್ಷ್ಮಿಯ ಮತ್ತೊಂದು ಹೆಸರಾಗಿದೆ) ಹಿಂದೂ ನಂಬಿಕೆಗಳ ಪ್ರಕಾರ ಸಂಪತ್ತಿನ ದೇವತೆಯಾಗಿದ್ದಾಳೆ. ಇಂದಿನ ಸಾಂಪ್ರದಾಯಿಕ ವೈಷ್ಣವರಲ್ಲಿ, ಶ್ರೀ ಒಂದು ಪೂಜ್ಯ ಪದವಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. Howard Measures (1962). Styles of address: a manual of usage in writing and in speech. Macmillan. pp. 136, 140. Retrieved 19 January 2011.
"https://kn.wikipedia.org/w/index.php?title=ಶ್ರೀ&oldid=987152" ಇಂದ ಪಡೆಯಲ್ಪಟ್ಟಿದೆ