ಒಂದು ವಿದ್ಯುತ್ ಸಂಕೇತಗಳ ಅಲೆಯನ್ನು ಶೋಧಕದಲ್ಲಿ ಹಾಯಿಸಿದಾಗ ಸಂಕೇತಗಳಲ್ಲಿರುವ ಕೆಲ ತರಂಗಾಂತರಗಳನ್ನು ಮಾತ್ರ ಹರಿಯಬಿಟ್ಟು ಕೆಲವನ್ನು ತಡೆಯುತ್ತದೆ. ಶೋಧಕವನ್ನು ನಾವು ವಿದ್ಯುತ್ ಸೋಸುವಿಕೆ, ಜಾಲರಿ/ಜರಡಿ ಹಿಡಿಯುವಿಕೆ ಎಂದು ಹೇಳಬಹುದು. ಯಾವುದೇ ಒಂದು ವಿದ್ಯುತ್ ಸಂಕೇತವನ್ನು ತೆಗೆದುಕೊಂಡರೆ ಅದರಲ್ಲಿ ನಾನ ತರಹದ ತರಂಗಾಂತರಗಳಿರುತ್ತವೆ. ಕೆಲ ಉಪಯೋಗಗಳಲ್ಲಿ ಆಯ್ದ ತರಂಗಾಂತರಗಳನ್ನು ಮಾತ್ರ ಒಳಬಿಟ್ಟು ಉಳಿದವನ್ನು ತೆಗೆದು ಹಾಕಬೇಕಾಗುತ್ತದೆ. ಅದಕ್ಕಾಗಿ ಶೋಧಕವನ್ನು ಬಳಸಿ ಸೋಸುವಿಕೆಯನ್ನು ಕೈಗೊಳ್ಳಬೇಕಾಗುತ್ತದೆ.

ಟಿವಿಯ ಸಿಗ್ನಲ್ ಛೇದಕ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಸೋಸುವಿಕೆಯನ್ನು ನಾವು ದಿನ ನಿತ್ಯ ಬಳಸುವ ಕಾಫಿ ಜಾಲರಿಗೆ ಹೋಲಿಸಬಹುದು. ಶೋಧಕಗಳಲ್ಲಿ ಪ್ರಮುಖವಾಗಿ ೨ ಬಗೆ. ೧. Passive ಸಾಧನಗಳನ್ನು (Resistor, Capacitor & Inductor) ಉಪಯೋಗಿಸಿ ನಿರ್ಮಿಸಿರುವ ಶೋಧಕ. ೨. Active ಸಾಧನಗಳನ್ನು (OP-Amp) ಉಪಯೋಗಿಸಿ ನಿರ್ಮಿಸಿರುವ ಶೋಧಕ.

Passive ಶೋಧಕದಲ್ಲಿ ಹೊರಬರುವ ವಿದ್ಯುತ್ ಸಂಕೇತದ ಪರಿಮಾಣ ಒಳಬಂದದ್ದಕ್ಕಿಂತ ಕಡಿಮೆಯಾಗಿರುತ್ತದೆ, ಕೆಲ ಉಪಯೋಗಗಳಲ್ಲಿ ಇದು ಸಲ್ಲದು, ಅದಕ್ಕಾಗಿ Active ಶೋಧಕಗಳನ್ನು ಬಳಸಬೇಕಾಗುತ್ತದೆ. Active ಶೋಧಕಗಳಲ್ಲಿ OP-Amp ಸಾಧನವನ್ನು ಬಳಸಿ ವಿದ್ಯುತ್ ಸಂಕೇತದ ಪರಿಮಾಣವನ್ನು ಉನ್ನತೀಕರಿಸಿ/ವರ್ಧಿಸಿ/ಎತ್ತರಿಸಿ ಹೊರಬಿಡಲಾಗುತ್ತದೆ.

ಶೋಧಕಗಳನ್ನು ಒಂದು ವಿದ್ಯುತ್ ಸಂಕೇತದ ಅಲೆಯಲ್ಲಿರುವ ಗೋಜು-ಗದ್ದಲಗಳನ್ನು (Noise) ತೆಗೆದುಹಾಕಲು ಬಳಸಬಹುದು.

"https://kn.wikipedia.org/w/index.php?title=ಶೋಧಕ&oldid=740169" ಇಂದ ಪಡೆಯಲ್ಪಟ್ಟಿದೆ