ಶಿಖರ (ವಾಸ್ತುಶಿಲ್ಪ)

ಶಿಖರ ಶಬ್ದವು ಉತ್ತರ ಭಾರತಹಿಂದೂ ದೇವಾಲಯ ವಾಸ್ತುಶಿಲ್ಪದಲ್ಲಿ ಮೇಲೇರುವ ರಚನೆಯನ್ನು ಸೂಚಿಸುತ್ತದೆ. ಹಲವುವೇಳೆ ಇದನ್ನು ಜೈನ ದೇವಸ್ಥಾನಗಳಲ್ಲೂ ಬಳಸಲಾಗುತ್ತದೆ. ಪ್ರಧಾನ ದೇವರನ್ನು ಸ್ಥಾಪಿಸಲಾದ ಗರ್ಭಗೃಹ ಕೋಣೆಯ ಮೇಲಿನ ಶಿಖರವು ಉತ್ತರ ಭಾರತದ ಹಿಂದೂ ದೇವಸ್ಥಾನದ ಅತ್ಯಂತ ಎದ್ದುಕಾಣುವ ಭಾಗವಾಗಿರುತ್ತದೆ.[೧]

ಖಜುರಾಹೋದ ಆದಿನಾಥ ದೇವಸ್ಥಾನದ ಶಿಖರ

ದಕ್ಷಿಣ ಭಾರತದಲ್ಲಿ, ಇದರ ಸಮಾನಾರ್ಥಕ ಪದವೆಂದರೆ ವಿಮಾನ. ಶಿಖರ ಪದದಿಂದ ಭಿನ್ನವಾಗಿ ಇದು ಕೆಳಗಿನ ಗರ್ಭಗೃಹ ಸೇರಿದಂತೆ ಇಡೀ ಕಟ್ಟಡವನ್ನು ಸೂಚಿಸುತ್ತದೆ.

ರೂಪಗಳು ಬದಲಾಯಿಸಿ

ಶಿಖರವನ್ನು ಮೂರು ಮುಖ್ಯ ರೂಪಗಳಾಗಿ ವರ್ಗೀಕರಿಸಬಹುದು:

  • ರೇಖಾ ಪ್ರಸಾದ. ಇದರಲ್ಲಿ ಶಿಖರವು ನಾಲ್ಕು ಮುಖಗಳನ್ನು ಹೊಂದಿರುತ್ತದೆ. ಪ್ರತಿ ಮುಖವು ಮುಂಚಾಚಿದ ಭಾಗ ಅಥವಾ ರಥವನ್ನು ಒಳಗೊಳ್ಳಬಹುದು.
  • ಶೇಖರಿ. ರೇಖಾ ಪ್ರಸಾದ ಆಕಾರಕ್ಕೆ ಊರುಶೃಂಗ ಎಂದು ಕರೆಯಲ್ಪಡುವ ಲಗತ್ತಾದ ಉಪಶೃಂಗಗಳು ಸೇರಿರುತ್ತವೆ. ಇವು ಮುಖ್ಯ ಆಕಾರವನ್ನು ನಕಲು ಮಾಡುತ್ತವೆ.
  • ಭೂಮಿಜ. ಸ್ತಂಭವು ಕಿರು ಶೃಂಗಗಳನ್ನು ಅಡ್ಡಡ್ಡ ಮತ್ತು ಲಂಬ ಸಾಲುಗಳಲ್ಲಿ ಮೇಲನವರೆಗೆ ಹೊಂದಿರುತ್ತದೆ.[೨] ಇದರಿಂದ ಪ್ರತಿ ಮುಖದಲ್ಲಿ ಜಾಲರಿಯಂತಹ ಪರಿಣಾಮ ಉಂಟಾಗುತ್ತದೆ.

ಟಿಪ್ಪಣಿಗಳು ಬದಲಾಯಿಸಿ

  1. "Shikhara". Encyclopædia Britannica. Retrieved 4 August 2015.
  2. "bhumija (Indian architecture)". Encyclopædia Britannica. Archived from the original on 11 November 2007. Retrieved 2007-12-30.