ಶಾಸಕನು ಕಾನೂನುಗಳನ್ನು ಬರೆದು ಅಂಗೀಕರಿಸುವ ವ್ಯಕ್ತಿ, ವಿಶೇಷವಾಗಿ ಶಾಸನ ಸಭೆಯ ಸದಸ್ಯನಾಗಿರುವವನು. ಶಾಸಕರು ಸಾಮಾನ್ಯವಾಗಿ ರಾಜಕಾರಣಿಗಳಾಗಿದ್ದು ಇವರನ್ನು ಹಲವುವೇಳೆ ರಾಜ್ಯದ ಜನರು ಚುನಾಯಿಸುತ್ತಾರೆ.[೧] ಶಾಸನಸಭೆಗಳು ರಾಷ್ಟ್ರಗಳನ್ನು ಮೀರಿರಬಹುದು (ಉದಾಹರಣೆಗೆ ಯೂರೋಪಿಯನ್ ಸಂಸತ್ತು), ರಾಷ್ಟ್ರೀಯವಾಗಿರಬಹುದು (ಉದಾಹರಣೆಗೆ, ಅಮೇರಿಕ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್), ಪ್ರಾದೇಶಿಕವಾಗಿರಬಹುದು (ಉದಾಹರಣೆಗೆ, ವೇಲ್ಸ್‌ನ ರಾಷ್ಟ್ರೀಯ ಶಾಸನಸಭೆ), ಅಥವಾ ಸ್ಥಳೀಯವಾಗಿರಬಹುದು (ಉದಾಹರಣೆಗೆ, ಸ್ಥಳೀಯ ಪ್ರಾಧಿಕಾರಗಳು).

ಪಕ್ಷಿನೋಟ ಬದಲಾಯಿಸಿ

ಅಧಿಕಾರಗಳ ಬೇರ್ಪಡಿಸುವಿಕೆಯ ರಾಜಕೀಯ ಸಿದ್ಧಾಂತಕ್ಕೆ ಶಾಸಕರು ಕಾರ್ಯಾಂಗ ಮತ್ತು ನ್ಯಾಯಾಂಗದ ಸದಸ್ಯರಿಂದ ಸ್ವತಂತ್ರವಾಗಿರುವ ವ್ಯಕ್ತಿಗಳಾಗಿರಬೇಕಾಗುತ್ತದೆ. ಕೆಲವು ರಾಜಕೀಯ ವ್ಯವಸ್ಥೆಗಳು ಈ ತತ್ವಕ್ಕೆ ಬದ್ಧವಾಗಿರುತ್ತವೆ, ಇತರ ವ್ಯವಸ್ಥೆಗಳು ಆಗಿರುವುದಿಲ್ಲ. ಉದಾಹರಣೆಗೆ, ಯುನೈಟೆಡ್ ಕಿಂಗ್‌ಡಂ‌ನಲ್ಲಿ, ಕಾರ್ಯಾಂಗವನ್ನು ಶಾಸಕರಿಂದ (ಸಂಸತ್ತಿನ ಸದಸ್ಯರು) ಬಹುತೇಕ ಪ್ರತ್ಯೇಕವಾಗಿ ರಚಿಸಲಾಗಿರುತ್ತದೆ, ಮತ್ತು ನ್ಯಾಯಾಂಗವು ಬಹುತೇಕವಾಗಿ ಸ್ವತಂತ್ರವಾಗಿರುತ್ತವೆ.

ಉಲ್ಲೇಖಗಳು ಬದಲಾಯಿಸಿ

  1. Little, T.H.; Ogle, D.B. (2006). The Legislative Branch of State Government: People, Process, and Politics. ABC-CLIO's about state government. ABC-CLIO. p. 4. ISBN 978-1-85109-761-6. Retrieved June 26, 2019.
"https://kn.wikipedia.org/w/index.php?title=ಶಾಸಕ&oldid=985024" ಇಂದ ಪಡೆಯಲ್ಪಟ್ಟಿದೆ