ಶಹಾಪುರ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿರುವ ನಗರ ಮತ್ತು ತಾಲೂಕು ಕೇಂದ್ರ. ಈ ಹಿಂದೆ ಗುಲಬಗಾ೯ ಜಿಲ್ಲೆಯಲ್ಲಿ ಇದ್ದು, ಜಿಲ್ಲಾ ವಿಭಜನೆಯ ನಂತರ ಈಗ ಇದು ಯಾದಗಿರಿ ಜಿಲ್ಲೆಗೆ ಸೇರಿರುತ್ತದೆ. ಈ ನಗರದ ಜನಸಂಖ್ಯೆ ೫೩,೩೬೬. ರಾಜ್ಯದ ರಾಜಧಾನಿ ಬೆಂಗಳೂರು 597 ಕಿ.ಮೀ.ಇರುತ್ತದೆ. ಕಲಬುರ್ಗಿ 80 ಕಿ.ಮೀ, ಯಾದಗಿರಿ 35 ಕಿ.ಮೀ. ಹಾಗು ಹೈದರಾಬಾದ ನಗರವು 210 ಕಿ.ಮೀ. ಇರುತ್ತದೆ.

ಶಹಾಪುರ
ಸಗರನಾಡು
ನಗರ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಯಾದಗಿರಿ
ಲೋಕ ಸಭೆ ಚುನಾವಣಾ ಕ್ಷೇತ್ರರಾಯಚೂರು
Elevation
೪೨೮ m (೧,೪೦೪ ft)
Population
 (೨೦೧೧)
 • Total೫೩,೩೬೬
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
PIN
585223
ದೂರವಾಣಿ ಕೋಡ್08479
Vehicle registrationka 33
Websitehttp://www.shahapuracity.mrc.gov.in

ಇತಿಹಾಸ ಬದಲಾಯಿಸಿ

ಈ ನಗರದ ಹಳೆಯ ಹೆಸರು " ಸಗರ"ಎೆಂದು ತಿಳಿದು ಬರುತ್ತದೆ. ವಿಜಯನಗರದ ಕೊನೆಯ ಅರಸು ರಾಮರಾಯ (ಶ್ರೀ ಕೃಷ್ಣದೇವರಾಯನ ಅಳಿಯ) ನಿಗೆ ಸಗರ ಸಂಕ್ರಮಣರಾಯ ವೆಂಬ ಬಿರುದು ಇದ್ದಿರುತ್ತದೆ. ಮುಸ್ಲಿೆಂ ಅರಸರ ಕಾಲಕ್ಕೆ ಈ ನಗರದ ಹೆಸರು"ನಸ್ರತಾಬಾದ್","ಶಹಪುರ" ವೆಂದು ಬದಲಾವಣೆಯಾಗಿರುತ್ತದೆ. ಮುಸ್ಲಿೆಂ ಅರಸರ ಆಕ್ರಮಣವಾದಾಗ ಈ ನಗರ ಬೆಟ್ಟಗಳ ಆಚೆ ದೂರದ ಬಯಲು ಪ್ರದೇಶದಲ್ಲಿ ಸ್ಥಳಂತರವಾಗತ್ತು. ಹಾಳುಬಿದ್ದ ಈಗಿನ ನಗರದ "ಹಳೆಸಗರ" ಭಾಗವಾಗಿರುತ್ತದೆ. ಹಾಗೆಯೇ ಇತಿಹಾಸದ ಪುಟಗಳನ್ನು ಶೋಧಿಸಿದಾಗ "ಕೃಷ್ಣ ಮತ್ತು ಭೀಮಾ ನದಿಗಳ ನಡುವಿನ ( ಜೇವರಗಿ,ಶಹಪುರ,ಸುರಪುರ ತಾಲೂಕಗಳ) ಪ್ರದೇಶವನ್ನು ಸಗರನಾಡು ಎೆಂದು ಗುರುತಿಸಲ್ಪಟ್ಟಿರುತ್ತದೆ. ಶಹಪುರದ ಕೋಟೆಯು ಕ್ರಿ.ಶ.950-1150ರ ಮಧ್ಯದಲ್ಲಿ ನಿರ್ಮಿಸಲ್ಪಟ್ಟಿರಬಹುದೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿರತ್ತಾರೆ.ಈ ಕೋಟೆಯಲ್ಲಿ 7 ಮಹಾದ್ವಾರಗಳು, 7 ಉಕ್ಕಿನ ತೋಪುಗಳನ್ನು ಕಾಣಸಿಗುತ್ತವೆ.ಹಾಗೂ1 ಹಳೆಗನ್ನಡ 1 ಪರ್ಶಿಯನ್ , 1 ಅರೇಬಿಕ್ ಶಾಸನಗಳನ್ನು ಕೂಡ ನೋಡಬಹುದು. ಹಳೆಗನ್ನಡದ ಶಾಸನದ ಪ್ರಕಾರ ಈ ನಗರದ ಇತಿಹಾಸವು ಸಾವಿರ ವರ್ಷದಷ್ಟು ಹಳೆಯದ್ದೆಂದು ತಿಳಿದುಬರುತ್ತದೆ.

ಪ್ರೇಕ್ಷಣೀಯ ಸ್ಥಳಗಳು ಬದಲಾಯಿಸಿ

ಶಹಾಪುರ ನಗರದಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ.

  • ಶಹಾಪುರ ಕೋಟೆ
  • ಬುದ್ಧ ಮಲಗಿದ ದ್ರಶ್ಯ (ಬೆಟ್ಟ)
  • ಮೌನೇಶ್ವರ ಬೆಟ್ಟ
  • ಭೀಮರಾಯನಗುಡಿ
  • ದಿಗ್ಗಿ ಸಂಗಮೇಶ್ವರಗುಡಿ
  • ಚರಬಸವೇಶ್ವರ ಗುಡಿ
  • ಮಂದಾಕಿನಿ ತೀರ್ಥ
  • ಆನೆಸೊಂಡಿ ಬಾವಿ (ಕೋಟೆ)
  • ತಾವರಕೆರೆ
  • ಮೇಲಗಿರಿ ಮಲ್ಲಿಕಾರ್ಜುನ ಬೆಟ್ಟ (ಪರ್ವತ)
  • ವಿಶ್ವಮಾತಾ ಗುರುಕುಲ ಗೋಶಾಲೆ

(28 ಭಾರತೀಯ ದೇಸಿ ಗೋವುಗಳ ರಕ್ಷಣೆ,‌ಸಂವರ್ಧನೆ, ಅಭಿವೃದ್ಧಿ ಕೇಂದ್ರ )

  • ವಿಭೂತಿ ಹಳ್ಳಿ

ದೊರನಹಳ್ಳಿ ಮಾಹಂತೆಶ್ವರ ಗುಡ್ಡ

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ಶಹಾಪುರ&oldid=1085712" ಇಂದ ಪಡೆಯಲ್ಪಟ್ಟಿದೆ