ವೈಶೇಷಿಕ ದರ್ಶನ ಬದಲಾಯಿಸಿ

ವೈಶೇಷಿಕವು ಷಡ್ದರ್ಶನಗಳಲ್ಲಿ ಒಂದು
ವೈಶೇಷಿಕವು ಒಂದು ವಿಶಿಷ್ಟ ಅರ್ಥಾತ್ ವಿಶೇಷತೆಯುಳ್ಳ ದರ್ಶನವೆಂದು ಪರಿಗಣಿಸಲಾಗಿದೆ. ನ್ಯಾಯ ಮತ್ತು ವೈಶೇಷಿಕವು ಒಂದೇ ಗುಂಪಿಗೆ ಸೇರಿದವು. ನ್ಯಾಯವು ಪ್ರಮಾಣ ಶಾಸ್ತ್ರ -ಜ್ಞಾನ ಮೀಮಾಂಸೆ ಮತ್ತು ತರ್ಕಗಳನ್ನು ವಿವರಿಸುತ್ತದೆ. :ವೈಶೇಷಿಕವು ಪ್ರಮೇಯ ಶಾಸ್ತ್ರ, -ಎಂದರೆ ಪದಾರ್ಥ ವಿವರಣೆ ಯಾಗಿದೆ. ಮನುಷ್ಯರಲ್ಲಿ - ಪದಾರ್ಥಗಳಲ್ಲಿ ಪರಸ್ಪರ ಸಮಾನತೆ ಇದ್ದರೂ, ಪ್ರತಿಯೊಂದೂ ಬೇರೆ ಬೇರೆಯಾಗಿದೆ. ಪ್ರತಿಯೊಂದಕ್ಕೂ ಪ್ರತ್ಯೇಕ ವಿಶೇಷತೆ ಇದೆ. (ಉದಾಹರಣೆ ; ಒಬ್ಬರಂತೆ ಮತ್ತೊಬ್ಬರಿಲ್ಲ. -ಒಂದು ವಸ್ತುವಿನಂತೆ ಮತ್ತೊಂದಿಲ್ಲ.) . ಇದು ಈ ದರ್ಶನದ ಮುಖ್ಯ ತಳಹದಿ.
ಕಣಾದನು ಈ ದರ್ಶನದ ಸೂತ್ರಧಾರ. ಈತನಿಗೆ ಕಶ್ಯಪ , ಕಾಶ್ಯಪ, ಉಲೂಕ ಎಂಬ ಹೆಸರುಗಳಿವೆ. ಈತನು ಕಣವಾದಿಯಾದ್ದರಿಂದ , ಇವನನ್ನು ಕಣಾದ ಎಂದೂ ಕರೆಯುತ್ತಾರೆ. ಇವನ ಕಾಲ ಸುಮಾರು ಕ್ರಿ . ಪೂ. ೨--೪ ನೇ ಶತಮಾನ.
ಪ್ರಶಸ್ತಪಾದನ - "ಧರ್ಮಸಂಗ್ರಹ", ; ಉದಯನ ನ -"ಕಿರಣಾವಳಿ", ಗ್ರಂಥಗಳು ಪ್ರಸಿದ್ಧ . ಅಣ್ಣಂಭಟ್ಟನ "ತರ್ಕಸಂಗ್ರಹ"ವೂ ಪ್ರಸಿದ್ಧ . ಇದು ಕಾಲಾಂತರದಲ್ಲಿ ವೇದವನ್ನು ಒಪ್ಪಿಕೊಂಡು, ಆಸ್ತಿಕ ಧರ್ಮವೆನ್ನಿಸಿಕೊಂಡಿದೆ.

ಪದಾರ್ಥ ಬದಲಾಯಿಸಿ

ವಸ್ತುವಿಗೆ ಪದಾರ್ಥವೆನ್ನುವರು .ಪದಾರ್ಥಗಳು ಏಳು. ೧.ದ್ರವ್ಯ, ; ೨. ಗುಣ. ; ೩. ಕರ್ಮ. ; ೪. ಸಾಮಾನ್ಯ. ; ೫. ವಿಶೇಷ. ; ೬. ಸಮವಾಯು. ; ಇವು ಆರು ಸತ್ತಾತ್ಮಕ ; ೭. ಅಭಾವ.- ಸೇರಿ ಏಳು . ಲೋಕವಿಲ್ಲಾ ಈ ಏಳು ಪದಾರ್ಥಗಳೇ ಆಗಿವೆ .
ದ್ರವ್ಯ : ಕಾರ್ಯಕ್ಕೆ ಸಮವಾಯು ಕಾರಣವಾಗಿ ಇರುವಿಕೆ (ಉದಾಹರಣೆ : ಮಡಕೆಗೆ ಮಣ್ಣು ಸಮವಾಯು ಕಾರಣ) ಗುಣಕ್ಕೆ ,ಕರ್ಮಕ್ಕೆ ಆಶ್ರಯವಾದುದು ದ್ರವ್ಯ. ದ್ರವ್ಯಗಳು ಒಂಭತ್ತು. ಪೃಥ್ವಿ , ಜಲ, ತೇಜ , ವಾಯು , ಆಕಾಶ , ಕಾಲ , ದಿಕ್ಕು , ಆತ್ಮ , ಮತ್ತು ಮನಸ್ಸು . ಪೃಥ್ವಿಯು ಗಂಧ ಗುಣವುಳದ್ದು. ಅದು ಮುಖ್ಯ ಗುಣ (ಅದರಲ್ಲಿ ರೂಪ,ರಸ, ಸ್ಪರ್ಶ ಗಳಿದ್ದರೂ ಕೂಡ.) ; ಹೀಗೆ
ಜಲಕ್ಕೆ ಶೀತ ಮುಖ್ಯ ಗುಣ -ಇತರ ಗುಣಗಳು ಇದ್ದರೂ ಕೂಡ. ಅದೇ ರೀತಿ ತೇಜಕ್ಕೆ ಉಷ್ಣ , ವಾಯುವಿಗೆ ಸ್ಪರ್ಶ , ಆಕಾಶಕ್ಕೆ ಶಬ್ದ . (ಆಕಾಶವು ನಿತ್ಯವಾಗಿದೆ.) ಕಾಲಕ್ಕೆ ಅಜ್ಞಾನ ಗುಣ , ದಿಕ್ಕಿಗೆ ಹತ್ತಿರ - ದೂರ , ಪೂರ್ವ ಪಶ್ಚಿಮ -ಇತ್ಯಾದಿ. ಗುಣ.
ಆತ್ಮ : ಇಂದ್ರಿಯಗಳ ಅನುಭವಕ್ಕೆ ಕರ್ತೃ . ಅದರ ಫಲವನ್ನು ಅನುಭವಿಸುವವನು ಆತ್ಮ : ಜೀವವೂ ಆತ್ಮ .

ಉಸಿರಾಟ , ಕಣ್ಣು ಮಿಟಕಿಸುವುದು , ಚೇತನ ಕೆಲಸವಾದ್ದರಿಂದ, .ಆತ್ಮನಿದ್ದಾನೆ. ಹಲವು ಇಂದ್ರಿಯಗಳ ಅನುಭವವನ್ನು ಒಂದೇ ವಸ್ತು ಪಡೆಯುತ್ತದೆ - ಅದು ಆತ್ಮ . ಸುಖ , ದುಃಖ ಅಪೇಕ್ಷೆ ಇವುಗಳ ಆಶ್ರಯ -ಆತ್ಮ .

ಆತ್ಮಗಳು ಅನೇಕ. ಏಕೆಂದರೆ ಒಂದೊಂದು ಶರೀರದ ಅನುಭವ ಒಂದೊಂದು ರೀತಿ. ಮನಸ್ಸು ಆತ್ಮಕ್ಕೆ ಸಹಕಾರಿ ; ಅದು ಆತ್ಮಕ್ಕಿಂತ ಬೇರೆ.
ಮನಸ್ಸು : ಮನಸ್ಸು ಆತ್ಮಕ್ಕಿಂತ ಬೇರೆ . ಮನಸ್ಸು ಬೇರೆ ಕಡೆ ತಲ್ಲೀನವಾದರೆ ಆತ್ಮವಿದ್ದರೂ ಗ್ರಹಿಸುವುದಿಲ್ಲ . ಆದ್ದರಿಂದ ಆತ್ಮ -ಮನಸ್ಸು ಬೇರೆ ಬೇರೆ .
ಗುಣ : ದ್ರವ್ಯದಲ್ಲಿರುವ ಪದಾರ್ಥವೇ ಗುಣ . ಗುಣದ ಅಸ್ತಿತ್ವವು ದ್ರವ್ಯದ ಮೂಲಕ ತಿಳಿಯುತ್ತದೆ. ಸ್ವತಂತ್ರವಾಗಿ ಅಲ್ಲ. ಸಿಹಿ ಎಂಬುದೇ ಬೇರೆ ಇಲ್ಲ (ಸಕ್ಕರೆ ಇದ್ದರೆ ಮಾತ್ರಾ ಸಿಹಿ ಇರುತ್ತದೆ ) . ಗುಣಕ್ಕೆ ಗುಣವಿಲ್ಲ .
ಕಣಾದನು ಹದಿನೇಳು ಗುಣಗಳನ್ನೂ ಭಾಷ್ಯಕಾರರು ಇನ್ನೂ ಏಳು ಗುಣಗಳನ್ನೂ ಹೇಳಿದ್ದಾರೆ . ಶಬ್ದ , ಸ್ಪರ್ಶ, ರೂಪ , ರಸ , ಗಂಧ , ಸಂಖ್ಯಾ , ಪರಿಣಾಮ (ಗಾತ್ರ) , ಪೃಥಕ್ (ಬೇರೆ ಬೇರೆ ಆಗುವಿಕೆ) , ಸಂಯೋಗ , ವಿಭಾಗ , ಗುರುತ್ವ , ದ್ರವತ್ವ , ಸ್ನೇಹ , ಸಂಸ್ಕಾರ , ಅಪರತ್ವ , ಪರತ್ವ , ಬುದ್ಧಿ , ಸುಖ , ದುಃಖ , ಇಚ್ಛೆ , ದ್ವೇಷ , ಪ್ರಯತ್ನ , ಧರ್ಮ , ಅಧರ್ಮ .

ಪರಮಾಣುವಾದ ಬದಲಾಯಿಸಿ

ಜಗತ್ತಿಗೆ ಮೂಲ ಉಪಾದಾನ ಕಾರಣ (ಮೂಲವಸ್ತು) ಯಾವುದು ? ಎಂಬುದು - ದಾರ್ಶನಿಕರು ಉತ್ತರಿಸಬೇಕಾದ ಪ್ರಶ್ನೆ (ಹಿಂದೆ -ಈಗ ವಿಜ್ಞಾನ) . ಸಾಂಖ್ಯರು ಪ್ರಕೃತಿ ಎನ್ನುತ್ತಾರೆ ; ಅದ್ವೈತಿಗಳು ಮಾಯೆ ಎನ್ನುತ್ತಾರೆ -ಇತ್ಯಾದಿ .
ಬಿಸಿಲು ಕೋಲಿನಲ್ಲಿ ಕಾಣುವ ಧೂಳಿನ ಕಣದ ಆರನೆಯ ಒಂದು ಭಾಗವೇ ಪರಮಾಣು ಎಂದು ವೈಶೇಷಿಕರು ಹೇಳುತ್ತಾರೆ. ಇದು ಅವಿಭಾಜ್ಯ ವಸ್ತು. ಎರಡು ಪಮಾಣು ಒಂದು ದ್ವಣುಕ ; ಮೂರು ದ್ವ ಣುಕ ಸೇರಿ ಒಂಗು ತ್ರ್ಯಣುಕ .ಇದು ದೃಷಿ ಗೋಚರ. ಪರಮಾಣು ಶಾಶ್ವತ . ಉಳಿದೆಲ್ಲಾ ಶಾಶ್ವತ. - ತ್ರ್ಯಣಕುಗಳಿಂದ ದೃಷ್ಟಿ ಗೋಚರ ಜಗತ್ತು ಆಗಿದೆ. ಬೇರೆ ಬೇರೆ ರೀತಿಯಲ್ಲಿ ಪರಮಾಣು ಸೇರಿ ಈ ವಿವಿಧ ವಿಚಿತ್ರ ಪ್ರಪಂಚ ಆಗಿದೆ.
ಅವು ಯಾಕೆ ಸೇರಿದವು ? ಸ್ಪಂದನ ಏಕೆ ಆಯಿತು ? ಅದೃಷ್ಡವೇ ಕಾರಣ. ಇದು ಗೋಚರವಾದ ಜಗತ್ತಿನ ಬಗೆಗ ವೈಶೇಷಿಕರ ಸಿದ್ಧಾಂತ .

ಪ್ರಮಾಣಗಳು ಬದಲಾಯಿಸಿ

ಇದನ್ನೆಲ್ಲಾ ಸಾಧಿಸಿ ತೋರಿಸಲು. ವೈಶೇಷಿಕವು , ಪ್ರತ್ಯಕ್ಷ , ಅನುಮಾನ ((inference :The reasoning involved in drawing a conclusion or making a logical judgment on the basis ofcircumstantial evidence and prior conclusions rather than on the basis of direct observation), ಎಂಬ ಪ್ರಮಾಣಗಳನ್ನು ಮಾತ್ರಾ ಸ್ವೀಕರಿಸಿದೆ. ಉಳಿದದ್ದೆಲ್ಲಾ ಅದರಲ್ಲೇ ಬರುತ್ತದೆ ಎಂದು ಹೇಳುತ್ತದೆ.

ಶಬ್ದ ಬದಲಾಯಿಸಿ

ಶಬ್ದ ಪ್ರಮಾಣ

ವೇದಗಳನ್ನು ಜ್ಞಾನಿಗಳ ವಾಕ್ಯಗಳಾದುದರಿಂದ ಪ್ರಮಾಣವೆನ್ನುತ್ತಾರೆ.

ಈಶ್ವರ - ಮೋಕ್ಷ ಬದಲಾಯಿಸಿ

ನ್ಯಾಯ ವೈಶೇಷಿಕ ದರ್ಶನಗಳು ಮೂಲತಃ ನಿರೀಶ್ವರ ದರ್ಶನಗಳು , ನಂತರ ಈಶ್ವರನನ್ನು ಒಪ್ಪಿಕೊಂಡರು. ಇವರ ಈಶ್ವರನಿಗೆ ನಿಗ್ರಹ -ಅನುಗ್ರಹ ಶಕ್ತಿ ಇಲ್ಲ. ಈಶ್ವರನು ಮಡಕೆ ಮಾಡುವ ಕುಂಬಾರನ ತಂದೆ ಇದ್ದಂತೆ. ಮನುಷ್ಯನ ಉನ್ನತಿ - ಅವನತಿಗೆ ಅವನ ಕರ್ಮವೇ ಕಾರಣ. -ಈಶ್ವರನಲ್ಲ .. ಈಶ್ವರನು ಆತ್ಮ ಗಳಲ್ಲಿ ಒಂದು ಶ್ರೇಷ್ಟ ಆತ್ಮ .
ಅದೃಷವೆಂಬ ಧರ್ಮ-ಅಧರ್ಮಗಳ ಪ್ರವಾಹ ನಿಂತು ಹೋದಾಗ . ಆತ್ಮನಿಗೆ ಮೋಕ್ಷ ಸಿಗುವುದು. ಪದಾರ್ಥಗಳ ಯತಾರ್ಥ ಜ್ಞಾನವಾದರೆ ಮೋಕ್ಷ . ನಿಷ್ಕಾಮ ಕರ್ಮದ ಮೂಲಕವೂ ಜ್ಞಾನ ಲಭಿಸುವುದು.

ಸಮೀಕ್ಷೆ ಬದಲಾಯಿಸಿ

ಇದು ವಾಸ್ತವವಾದಿ ದರ್ಶನ ( realism) . ಆಕಾಲದಲ್ಲೇ ಅಣುಗಳಿಂದ ಜಗತ್ತಾಗಿದೆ ಎಂಬ ಭಾವನೆ ವೈಜ್ಞಾ ನಿಕವಾಗಿದ್ದು ,ಚರ್ವಾಕ , ಸಾಂಖ್ಯ, ಜೈನದೊಂದಿಗೆ ಈ ದರ್ಶನ ಸಾಮ್ಯವನ್ನು ಹೊಂದಿದೆ.[೧][೨]

ಓಂ ಸತ್ಸತ್

ನೋಡಿ ಬದಲಾಯಿಸಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;[[ರೆಣುಕರ ಆದಿಯಾಗಿ ಪಂಚಾಚಾರ್ಯಾರುಗಳಾದ ರೇಣುಕಾರಾಧ್ಯರು ಧಾರುಕಾರಾಧ್ಯ ಏಕೋರಾಮರಾಧ್ಯ ಪಂಡಿತಾರಾಧ್ಯ ವಿಶ್ವಾರಾಧ್ಯರುಗಳು ವಿಷಿಶ್ಟಾಧ್ವೈತ]] ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮಮೋಕ್ಷ

ಉಲ್ಲೇಖ ಬದಲಾಯಿಸಿ

  1. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
  2. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.]]