ವೈದಿಕ ಪೌರೋಹಿತ್ಯ

ಪಂಡಿತ
ಅಧ್ವರ್ಯು ಇಲ್ಲಿ ಪುನರ್ನಿರ್ದೇಶಿಸುತ್ತದೆ. ಮುಂದಾಳು ಲೇಖನಕ್ಕಾಗಿ ಇಲ್ಲಿ ನೋಡಿ.

ವೈದಿಕ ಧರ್ಮದ ಪುರೋಹಿತರು ಯಜ್ಞ ಕ್ರಿಯೆಯ ಯಾಜಕರು. ಈ ಆಚಾರಕ್ಕೆ ತರಬೇತಿ ಪಡೆದ ವ್ಯಕ್ತಿಗಳಾಗಿ ಮತ್ತು ಅದರ ಆಚರಣೆಯಲ್ಲಿ ನುರಿತವರಾಗಿದ್ದ ಅವರನ್ನು ಋತ್ವಿಜರೆಂದು ಕರೆಯಲಾಗುತ್ತಿತ್ತು. ಒಂದು ಸಾಮಾಜಿಕ ವರ್ಗದ ಸದಸ್ಯರಾಗಿದ್ದ ಅವರನ್ನು ಸಾರ್ವತ್ರಿಕವಾಗಿ ವಿಪ್ರ ಅಥವಾ ಕವಿ ಎಂದು ಕರೆಯಲಾಗುತ್ತಿತ್ತು. ಅಂತಿಮವಾಗಿ ಹದಿನಾರು ಋತ್ವಿಜರ ಪೂರಕ ಪ್ರಮುಖ ಸಮಾರಂಭಗಳಿಗೆ ರೂಢಿಯಾಯಿತು. ಈ ಹದಿನಾರರಲ್ಲಿ ನಾಲ್ಕು ಮುಖ್ಯ ಪುರೋಹಿತರು ಮತ್ತು ಅವರ ಸಹಾಯಕರಿರುತ್ತಿದ್ದರು.

ಹಳೆಯ ಉಲ್ಲೇಖಗಳು ಅತ್ಯಂತ ಮುಂಚಿನ ಕಾಲದಲ್ಲಿ ಅಧ್ಯಕ್ಷತೆ ವಹಿಸುವ ಪುರೋಹಿತನಾಗಿ ಹೋತೃ, ಜೊತೆಗೆ ಬಹುಶಃ ಅವನ ಸಹಾಯಕನಾಗಿ ಮಾತ್ರ ಅಧ್ವರ್ಯು ಇರುತ್ತಿದ್ದನೆಂದು ಏಕಪ್ರಕಾರವಾಗಿ ಸೂಚಿಸುತ್ತವೆ. ಏಳು ಹೋತಾರರು ಎಂಬ ಪದಗುಚ್ಛ ಋಗ್ವೇದದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಕಂಡುಬರುತ್ತದೆ. ಅದನ್ನು ಋಗ್ವೇದದ ಋಕ್ಕು ೨.೧.೨ ಹೀಗೆ ಹೇಳುತ್ತದೆ,

तवाग्ने होत्रं तव पोत्रमृत्वियं तव नेष्ट्रं त्वमग्निदृतायतः । तव प्रशास्त्रं त्वमध्वरीयसि ब्रह्मा चासि गृहपतिश्च नो दमे ॥२॥

ಮೇಲಿನ ಋಕ್ಕು ಪುರೋಹಿತರನ್ನು ಹೋತೃ, ಪೋತೃ, ನೇಷ್ಟೃ, ಅಗ್ನೀಧ, ಪ್ರಶಾಸ್ತೃ (ಅಂದರೆ ಮೈತ್ರಾವರುಣ) ಮತ್ತು ಅಧ್ವರ್ಯು ಎಂದು ಒಂದೊಂದಾಗಿ ಹೇಳುತ್ತದೆ.

  • ಹೋತೃ ಆವಾಹನೆಗಳು ಮತ್ತು ಪ್ರಾರ್ಥನ ಮಾಲೆಗಳ ವಾಚಕ. ಇವು ಋಗ್ವೇದದಿಂದ ತೆಗೆದುಕೊಳ್ಳಲಾದ ಒಂಟಿ ಶ್ಲೋಕಗಳು, ತೃಕ ಎಂಬ ತ್ರಯಗಳು, ಅಥವಾ ಪ್ರಗಾಥ ಎಂಬ ಯುಗ್ಮಗಳು, ಅಥವಾ ಪೂರ್ಣ ಸೂಕ್ತಗಳನ್ನು ಒಳಗೊಳ್ಳಬಲ್ಲವಾಗಿದ್ದವು. ಕ್ರಿಯಾವಿಧಿಯ ಪ್ರತಿ ಹಂತಕ್ಕೆ ಆವಾಹನೆಯ ಅಗತ್ಯವಿದ್ದುದರಿಂದ, ಹೋತೃ ಪ್ರಮುಖ ಅಥವಾ ಅಧಿಕಾರದ ಪಾತ್ರವನ್ನು ಹೊಂದಿರುತ್ತಿದ್ದನು.
  • ಅಧ್ವರ್ಯು ಯಾಗದ ಭೌತಿಕ ವಿವರಗಳ ಉಸ್ತುವಾರಿ ವಹಿಸುತ್ತಿದ್ದನು (ವಿಶೇಷವಾಗಿ ಅಧ್ವರದ್ದು, ಸೋಮಯಜ್ಞಕ್ಕೆ ಒಂದು ಪದ). ಅಧ್ವರ್ಯು ನೆಲವನ್ನು ಅಳೆಯುವುದು, ಬಲಿಪೀಠವನ್ನು ಕಟ್ಟುವುದು, ಯಾಗದ ಪಾತ್ರೆಗಳನ್ನು ತಯಾರಿಸುವುದು, ಕಟ್ಟಿಗೆ ಮತ್ತು ನೀರು ತರುವುದು, ಬೆಂಕಿಯನ್ನು ಹೊತ್ತಿಸುವುದು, ಪ್ರಾಣಿಯನ್ನು ತಂದು ಬಲಿ ಕೊಡುವುದು, ಮುಂತಾದ ಕರ್ತವ್ಯಗಳನ್ನು ಮಾಡುತ್ತಿದ್ದನು. ಪ್ರತಿ ಕ್ರಿಯೆಯ ಜೊತೆಗೆ ಯಜುರ್ವೇದದಿಂದ ತೆಗೆದುಕೊಳ್ಳಲಾದ ಸಂಬೋಧನಾತ್ಮಕ ಅಥವಾ ದೈವಾನುಗ್ರಹದ ಸೂತ್ರಗಳು (ಯಜುಸ್). ಕಾಲ ಕಳೆದಂತೆ, ಅಧ್ವರ್ಯುವಿನ ಪಾತ್ರ ಪ್ರಾಮುಖ್ಯತೆಯಲ್ಲಿ ಬೆಳೆಯಿತು, ಮತ್ತು ಋಗ್ವೇದದ ಅನೇಕ ಋಕ್ಕುಗಳನ್ನು ಯಜುರ್ವೇದದ ಪಠ್ಯಗಳಲ್ಲಿ ಹಾಗೆಯೇ ಅಥವಾ ಅಳವಡಿತ ರೂಪದಲ್ಲಿ ಒಳಗೊಳ್ಳಲಾಯಿತು.