ವಿಲೆಂ ಐಂಥೊವೆನ್

ಡಚ್ ಶರೀರಶಾಸ್ತ್ರಜ್ಞ

ವಿಲೆಂ ಐಂಥೊವೆನ್(21 ಮೇ 1860 – 29 ಸೆಪ್ಟೆಂಬರ್r 1927) ಎಲೆಕ್ಟೋಕಾರ್ಡಿಯೋಗ್ರಾಫ್ನ್ನು ಕಂಡುಹಿಡಿದ ನೆದರ್‍ಲ್ಯಾಂಡ್ಸ್ ದೇಶದ ವಿಜ್ಞಾನಿ. ೧೯೨೪ರ ಸಾಲಿನ ವೈದ್ಯಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ದೊರೆತಿದೆ[೧].ಲೀಡನ್ ವಿಶ್ವವಿದ್ಯಾನಿಲಯದಲ್ಲಿ ಅಂಗರಚನಾವಿಜ್ಞಾನದ ಪ್ರಾಧ್ಯಾಪಕ. ಗುಂಡಿಗೆಯಲ್ಲೇಳುವ ವಿದ್ಯುತ್ತಿನ ವಿಚಾರದಲ್ಲಿ ಮೊದಲಿನಿಂದಲೂ ಬಲು ಆಸಕ್ತನಾಗಿದ್ದು, ಗುಂಡಿಗೆ ಬಡಿದುಕೊಳ್ಳುವಾಗ ಏಳುವ ವಿದ್ಯುತ್ತಿನ ಸೂಕ್ಷ್ಮತಮ ವಿದ್ಯುದ್ವಿಭವ ವ್ಯತ್ಯಾಸಗಳನ್ನು ತೋರುವ ದಾರದ ಗ್ಯಾಲ್ವನೊಮೀಟರನ್ನು ಕಂಡುಹಿಡಿದ. ಅದು ಸೂಚಿಸುವ ವ್ಯತ್ಯಾಸಗಳನ್ನು ಗುರುತಿಸುವ ಯಂತ್ರಸಾಧನವಾಗಿ ಎಲೆಕ್ಟ್ರೊಕಾರ್ಡಿಯೋಗ್ರಾಫ್ ಸುಮಾರು 20 ವರ್ಷಗಳ ಕಾಲ ಬಳಕೆಯಲ್ಲಿತ್ತು. ಹೀಗೆ ಗುರುತಿಸಿದ ಚಿತ್ರವನ್ನು ಗುಂಡಿಗೆಯ ತಂತಿ ಸುದ್ದಿ ಎಂದು ಅವನು ಕರೆಯುತ್ತಿದ್ದ. ಇದೇ ಅಲ್ಲದೆ ಇದನ್ನು ಚಿತ್ರಿಸಲು ಮೈಯಲ್ಲಿ ತಂತಿಗಳನ್ನು ಎಲ್ಲೆಲ್ಲಿ ತಗುಲಿಸಬೇಕೆಂದೂ ಇವನು ನಿರ್ಧರಿಸಿದ್ದು ಈಗಲೂ ಜಾರಿಯಲ್ಲಿದೆ. ಇಂದು ಬಳಕೆಯಲ್ಲಿರುವ ಸುಧಾರಿತ ಎಲೆಕ್ಟ್ರೊಕಾರ್ಡಿಯೋಗ್ರಾಫ್ ಕೂಡ ಇದೇ ಮಾದರಿಯದು.

ವಿಲೆಂ ಐಂಥೊವೆನ್
Willem Einthoven in 1906
ಜನನ(೧೮೬೦-೦೫-೨೧)೨೧ ಮೇ ೧೮೬೦
Semarang, Dutch East Indies
ಮರಣ29 September 1927(1927-09-29) (aged 67)
Leiden, Netherlands
ರಾಷ್ಟ್ರೀಯತೆDutch
ಕಾರ್ಯಕ್ಷೇತ್ರPhysiology
ಸಂಸ್ಥೆಗಳುUniversity of Leiden
ಅಭ್ಯಸಿಸಿದ ವಿದ್ಯಾಪೀಠUniversity of Utrecht
ಪ್ರಸಿದ್ಧಿಗೆ ಕಾರಣElectrocardiogram
ಗಮನಾರ್ಹ ಪ್ರಶಸ್ತಿಗಳುNobel Prize in Medicine in 1924

ಉಲ್ಲೇಖಗಳು ಬದಲಾಯಿಸಿ

  1. "Willem Einthoven". IEEE Global History Network. IEEE. Archived from the original on 21 ನವೆಂಬರ್ 2014. Retrieved 10 August 2011.

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: