ವಿನಾಯಕ ತೊರವಿ(ಜನನ: ಸೆಪ್ಟೆಂಬರ್ ೪ ೧೯೪೮)ಇವರು ಗ್ವಾಲಿಯರ್ ಘರಾನಾ ಪದ್ಧತಿಯ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರು.

ವಿನಾಯಕ ತೊರವಿ
ವಿನಾಯಕ ತೊರವಿ
ವಿನಾಯಕ ತೊರವಿ

ಜನನ ಬದಲಾಯಿಸಿ

೧೯೪೮ರ ೪ ನೆಯ ಸೆಪ್ಟಂಬರ ಪವಿತ್ರ ಗಣೇಶ ಚತುರ್ಥಿಯಂದು ಕೀರ್ತನಕಾರರ ಮನೆತನದಲ್ಲಿ ವಿನಾಯಕ ತೊರವಿಯವರ ಜನ್ಮವಾಯಿತು, ಹೀಗಾಗಿ ಹುಟ್ಟಿನಿಂದಲೇ ಸಂಗೀತದ ಸಂಸ್ಕಾರ ಪ್ರಾರಂಭವಾಯಿತು.

ವ್ರುತ್ತಿಯಿಂದ ಕೆನರಾ ಬ್ಯಾಂಕ್ ನಿರ್ವಾಹಕರಾಗಿದ್ದರೂ ಪ್ರವ್ರುತ್ತಿಯಿಂದ ಖ್ಯಾತ ಹಿಂದೂಸಸ್ಥಾನಿ ಗಾಯಕರೆನಿಸಿರುವ ಶ್ರೀ ವಿನಾಯಕ ತೊರವಿಯವರು ಕರ್ನಾಟಕದ ಹೆಸರಾಂತ ಗಾಯಕರಲ್ಲಿ ಪ್ರಮುಖರು. ಹಿಂದೂಸ್ತಾನಿ ಸಂಗೀತ.


ಸಂಗೀತ ಬದಲಾಯಿಸಿ

ವಿನಾಯಕ ತೊರವಿಯವರು ಹಾಡುತ್ತಿರುವುದು ಆ ಕಾಲದ ಸಂಗೀತ ವಿದ್ವಾಂ ಸರಾದ ತಮ್ಮಣ್ಣ ಗುರುವ, ನಾರಾಯಣರಾವ ಮುಜುಂದಾರ ಹಾಗು ನಾರಾಯಣಾಚಾರ ದಂಡಾಪುರ ಅವರಲ್ಲಿ ಸಂಗೀತ ಕಲಿತು ಮುಂದೆ ಗ್ವಾಲಿಯರ್ ಘರಾಣೆಯ ಹೆಸರಾಂತ ಗಾಯಕ ಪಂಡಿತ್ ಗುರುರಾವ್ ದೇಶಪಾಂಡೆಯವರ ಶಿಷ್ಯರಾದರು. ಅನಂತರ ಗುರುಕುಲ ಪಧ್ಧತಿಯಲ್ಲಿ ಹನ್ನೆರಡು ವರ್ಷ ಹಿಂದೂಸ್ಥಾನಿ ಸಂಗೀತದ ತಾಲೀಮು ಪಡೆದು, ಸತತ ಅಭ್ಯಾಸ, ನಿರಂತರ ಪ್ರಯತ್ನಶೀಲತ, ಪ್ರಯೋಗ ಮನೋಭಾವದಿಂದ ಪ್ರಬುಧ ಗಾಯಕರಾಗಿ ಹೊರಹೊಮ್ಮಿರುವ ಶ್ರೀ ವಿನಾಯಕ ತೊರವಿಯವರು ಬಿ. ಕಾಂ. ಹಾಗು ಸಂಗೀತ ಎಂ. ಎ. ಪದವಿಗಳನ್ನು ಪಡೆದಿದ್ದಾರೆ.[೧] ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೦), ಮಾನವ ಸಂಪನ್ಮೂಲ ಅಭಿವ್ರುದ್ಧಿ ಇಲಾಖೆಯ ರಿಸರ್ಚ್ ಫೆಲೋಶಿಪ್, ಮುಂಬೈನ ಸೂರಸಿಂಗಾರ್ ಸಂಸದ್ ನೀಡಿದ 'ಸುರುಮಣೆ' ಪ್ರಶಸ್ತಿ. ಕರ್ನಾಟಕ ಸಂಗೀತ ರತ್ನ ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ ಹಾಗು ಕರ್ನಾಟಕ ಸಂಗೀತ ನ್ರುತ್ಯ ಅಕಾಡೆಮಿಯ 'ಕರ್ನಾಟಕ ಕಲಾ ತಿಲಕ' (೧೯೯೪-೯೫) ಪ್ರಶಸ್ತಿ ಮುಂತಾದವುಗಳು ಉಲ್ಲೇಖನೀಯವಾಗಿವೆ.

ವೃತ್ತಿಜೀವನ ಬದಲಾಯಿಸಿ

೧೯೮೪ ರಿಂದ ಬೆಂಗಳೂರಿನಲ್ಲಿ ತಮ್ಮ ಗುರು ಪಂಡಿತ್ ಗುರುರಾವ್ ದೇಶಪಾಂಡೆ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಅಹೋರಾತ್ರಿ ಸಂಗೀತ ಸಮಾರಾಧನೆ ನಡೆಸುತ್ತ ಬಂದಿದ್ದಾರೆ. ದೇಶದ ಮಹಾನ್ ಸಂಗೀತಗಾರರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಸಂಗೀತ ನ್ರುತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ತೊರವಿ.

ಉಲ್ಲೆಖ ಬದಲಾಯಿಸಿ

  1. http://pavaman.tripod.com/vinayaktorvi/ [ಶಾಶ್ವತವಾಗಿ ಮಡಿದ ಕೊಂಡಿ]