ವಿದೇಶೀ ವಿನಿಮಯ ಮಾರುಕಟ್ಟೆ

ವಿದೇಶೀ ವಿನಿಮಯ ಮಾರುಕಟ್ಟೆಯು (ಫ಼ೋರೆಕ್ಸ್, ಅಥವಾ ಚಲಾವಣೆ ಮಾರುಕಟ್ಟೆ) ಚಲಾವಣೆಗಳ ವಿನಿಮಯಕ್ಕಾಗಿ ಇರುವ ಒಂದು ಜಾಗತಿಕ ವಿಕೇಂದ್ರೀಕೃತ ಅಥವಾ ನೇರ ಮಾರುಕಟ್ಟೆ. ಈ ಮಾರುಕಟ್ಟೆಯು ಪ್ರತಿಯೊಂದು ಚಲಾವಣೆಗೆ ವಿದೇಶೀ ವಿನಿಮಯ ದರಗಳನ್ನು ನಿರ್ಧರಿಸುತ್ತದೆ. ಇದು ಪ್ರಸಕ್ತ ಅಥವಾ ನಿರ್ಧಾರಿತ ಬೆಲೆಗಳಲ್ಲಿ ಚಲಾವಣೆಗಳನ್ನು ಖರೀದಿಸುವ, ಮಾರಾಟಮಾಡುವ ಮತ್ತು ವಿನಿಮಯ ಮಾಡುವ ಎಲ್ಲ ಅಂಶಗಳನ್ನು ಒಳಗೊಳ್ಳುತ್ತದೆ. ವ್ಯಾಪಾರ ಪ್ರಮಾಣದ ಸಂಬಂಧದಲ್ಲಿ, ಇದು ಬಹುಮಟ್ಟಿಗೆ ವಿಶ್ವದಲ್ಲಿನ ಅತಿ ದೊಡ್ಡ ಮಾರುಕಟ್ಟೆಯಾಗಿದೆ ಮತ್ತು ಇದರ ನಂತರ ಸಾಲದ ಮಾರುಕಟ್ಟೆ ಬರುತ್ತದೆ.[೧]

ಹೆಚ್ಚು ದೊಡ್ಡ ಅಂತರರಾಷ್ಟ್ರೀಯ ಬ್ಯಾಂಕ್‍ಗಳು ಈ ಮಾರುಕಟ್ಟೆಯಲ್ಲಿನ ಮುಖ್ಯ ಭಾಗೀದಾರರಾಗಿರುತ್ತವೆ. ವಿಶ್ವದ ಸುತ್ತಲಿನ ಹಣಕಾಸು ಕೇಂದ್ರಗಳು ವಿಶಾಲ ವ್ಯಾಪ್ತಿಯ ಬಹು ಬಗೆಗಳ ಖರೀದಿದಾರರು ಮತ್ತು ಮಾರಾಟಗಾರರ ನಡುವೆ ವಾರಾಂತ್ಯಗಳನ್ನು ಹೊರತುಪಡಿಸಿ ಹಗಲು ರಾತ್ರಿ ವ್ಯವಹಾರದ ಹಿಡಿಗೂಟಗಳಾಗಿ ಕಾರ್ಯನಿರ್ವಹಿಸುತ್ತವೆ.

ಉಲ್ಲೇಖಗಳು ಬದಲಾಯಿಸಿ

  1. Record, Neil, Currency Overlay (Wiley Finance Series)

ಬಾಹ್ಯ ಸಂಪರ್ಕಗಳು ಬದಲಾಯಿಸಿ