ರೆಡ್ ಹ್ಯಾಟ್ ಮುಕ್ತ ತಂತ್ರಾಂಶಕ್ಕೆ ಮೀಸಲಾದ ಕೆಲಸಗಳನ್ನು ಕೈಗೊಳ್ಳುವ ಅತಿ ದೊಡ್ಡ ಮತ್ತು ಅತಿ ಗುರುತಿಸಲ್ಪಟ್ಟ ಸಂಸ್ಥೆಗಳಲ್ಲಿ ಒಂದು. ೧೯೯೩ ರಲ್ಲಿ ಆರಂಭಿಸಲ್ಪಟ್ಟ ಈ ಸಂಸ್ಥೆ ೭೦೦ ಕೆಲಸಗಾರರನ್ನು ಪ್ರಪಂಚದ ೨೨ ಸ್ಥಳಗಳಲ್ಲಿ ಹೊಂದಿದೆ. ಇದರ ಮುಖ್ಯ ಕಛೇರಿ ಇರುವುದು ಅಮೆರಿಕಾದ ರಾಲೀ, ನಾರ್ತ್ ಕೆರೊಲೈನಾ ದಲ್ಲಿ.

ರೆಡ್ ಹ್ಯಾಟ್ Linux
ಉದ್ಯಮ / ವಿನ್ಯಾಸಗಾರRed Hat
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗUnix-like
Working stateಅಪ್ರಚಲಿತ
Source modelಮುಕ್ತ ತಂತ್ರಾಂಶಕ್ಕೆ
Initial releaseಮೇ ೧೩. ೧೯೯೫
ಅತಿನೂತನ ಸ್ಥಿರವಾದ ಬಿಡುಗಡೆ9 alias Shrike / ಮಾರ್ಚ ೩೧, ೨೦೦೩
(ಗಣಕಯಂತ್ರದ) ಕಟ್ಟು ನಿರ್ವಾಹಕRPM Package Manager
ಕರ್ನೆಲ್ ಶ್ರೇಣಿMonolithic Linux kernel
ಲೈಸನ್ಸು Various
ಅಂತರ್ಜಾಲwww.redhat.com

ಮುಖ್ಯವಾಗಿ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ, ಅದರ ಅಭಿವೃದ್ಧಿ, ನಿರ್ವಹಣೆ ಮತ್ತು ಅಂತರಜಾಲ ವಿಷಯಗಳಿಗೆ ಸಂಬಂಧಪಟ್ಟ ಮುಕ್ತ ತಂತ್ರಾಂಶಗಳ ಬೆಳವಣಿಗೆ ಈ ಸಂಸ್ಥೆಯ ಕ್ಷೇತ್ರಗಳು.

ಚರಿತ್ರೆ ಬದಲಾಯಿಸಿ

ಮಾರ್ಕ್ ಈವಿಂಗ್ ರಿಂದ ೧೯೯೩ ರಲ್ಲಿ ರೆಡ್ ಹ್ಯಾಟ್ ಸ್ಥಾಪಿಸಲ್ಪಟ್ಟಿತು. ೧೯೯೫ ರಲ್ಲಿ ಕೆನಡಾ ದ ಎಸಿಸಿ ಕಾರ್ಪೊರೇಷನ್ ನೊಂದಿಗೆ ರೆಡ್ ಹ್ಯಾಟ್ ಸೇರಿದ ನಂತರ, ಬಾಬ್ ಯಂಗ್ ೧೯೯೯ ರ ವರೆಗೆ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ೧೯೯೯ ರಲ್ಲಿ ೬೦ ಲಕ್ಷ ಶೇರುಗಳನ್ನು ಮಾರುಕಟ್ಟೆಗೆ ಬಿಟ್ಟ ಸಂಸ್ಥೆ ೧೯೯೯ ರಲ್ಲಿ ಸಿಗ್ನಸ್ ಸೊಲೂಷನ್ಸ್ ಎಂಬ ಇನ್ನೊಂದು ಸಂಸ್ಥೆಯೊಂದಿಗೆ ಸೇರಿತು.

ತಂತ್ರಾಂಶಗಳು ಬದಲಾಯಿಸಿ

ರೆಡ್ ಹ್ಯಾಟ್ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಈ ಸಂಸ್ಥೆಯ ಮುಖ್ಯ ತಂತ್ರಾಂಶ. ಇದರ ಅಭಿವೃದ್ಧಿ ಹಾಗೂ ವಿತರಣೆ ಅನೇಕ ವರ್ಷಗಳಿಂದ ನಡೆದಿದೆ. ಇತ್ತೀಚೆಗೆ, ರೆಡ್ ಹ್ಯಾಟ್ ಲಿನಕ್ಸ್ ನ ೯ ನೇ ಆವೃತ್ತಿಯ ನಂತರ, ಫೆದೋರಾ ಲಿನಕ್ಸ್ ನ ಜೊತೆಗೂ ರೆಡ್ ಹ್ಯಾಟ್ ಕೆಲಸ ಮಾಡುತ್ತಿದೆ. ಫೆದೋರಾ ಲಿನಕ್ಸ್ ನ ಇನ್ನೊಂದು ವಿತರಣೆಯಾಗಿದ್ದು "ಫೆದೋರಾ ಪ್ರಾಜೆಕ್ಟ್" ಇದನ್ನು ನಿಭಾಯಿಸುತ್ತದೆ. ರೆಡ್ ಹ್ಯಾಟ್ ಈ ಪ್ರಾಜೆಕ್ಟ್ ನ ಸಹಾಯಕ ಸಂಸ್ಥೆಗಳಲ್ಲಿ ಒಂದು.

ಬಾಹ್ಯ ಸಂಪರ್ಕಗಳು ಬದಲಾಯಿಸಿ