ರಾಷ್ಟ್ರೀಯ ಉತ್ಪನ್ನ

ರಾಷ್ಟ್ರೀಯ ಉತ್ಪನ್ನ (GDP) ಒಂದು ದೇಶದ ಅರ್ಥವ್ಯವಸ್ಥೆಯನ್ನು ಅಳೆಯುವ ಒಂದು ಮಾಪನ. ಆ ದೇಶದಲ್ಲಿ ಒಂದು ವರ್ಷದಲ್ಲಿ ಉತ್ಪನ್ನವಾಗುವ ಎಲ್ಲಾ ಸರಕುಗಳ ಮತ್ತು ಆರ್ಥಿಕ ಅನುಕೂಲಗಳ ಒಟ್ಟು ಮಾರುಕಟ್ಟೆಯ ಬೆಲೆಯು ಅದರ ರಾಷ್ಟ್ರೀಯ ಉತ್ಪನ್ನವಾಗುತ್ತದೆ. ಈ ಉತ್ಪನ್ನವನ್ನು ಆ ರಾಷ್ಟ್ರದ ಜನಸಂಖ್ಯೆಯಿಂದ ಭಾಗಿಸಿದರೆ, ಆ ಮಾಪನವನ್ನು ತಲಾ ರಾಷ್ಟ್ರೀಯ ಉತ್ಪನ್ನ ಎಂದು ಕರೆಯಲಾಗುತ್ತದೆ.[೧] ಅಥವಾ ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದ ಜನರ ಒಟ್ಟು ಆದಾಯ ಹಾಗೂ ಉತ್ಪಾದನೆ (ಸರಕು),ಉದ್ಯೋಗದ ಅಥವಾ ಸೇವಾಕ್ಷೇತ್ರದ ಮಾರುಕಟ್ಟೆ ಮೌಲ್ಯಾದಾಯ ಎಲ್ಲದರ ಒಟ್ಟು ಮೌಲ್ಯವೇ- ಜಿಡಿಪಿ(gross domestic product- GDP)[೨]

ವಿವಿಧ ದೇಶಗಳ ತಲಾ ಒಬ್ಬರ ರಾಷ್ಟ್ರೀಯ ಉತ್ಪನ್ನವನ್ನು ತೋರಿಸುವ ಚಿತ್ರ

ಅಳೆಯುವ ವಿಧಾನ ಬದಲಾಯಿಸಿ

  • ಸಾಧಾರಣವಾಗಿ ರಾಷ್ಟ್ರೀಯ ಉತ್ಪನ್ನವನ್ನು ಖರ್ಚುಗಳ ಮೂಲಕ ಅಳೆಯಲಾಗುತ್ತದೆ
ರಾಷ್ಟ್ರೀಯ ಉತ್ಪನ್ನ = ಬಳಕೆ + ಬಂಡವಾಳ ಹೂಡಿಕೆ + ಸರ್ಕಾರಿ ವೆಚ್ಚ + (ರಫ್ತುಗಳು − ಆಮದುಗಳು)
  • ಬಳಕೆ ಎಂಬುದು ದೇಶದ ಜನರು ತಮ್ಮ ದಿನನಿತ್ಯದ ಜೀವನಕ್ಕಾಗಿ ಉಪಯೋಗಿಸುವ ಸಾಮಗ್ರಿಗಳು ಮತ್ತು ಅನುಕೂಲಗಳನ್ನು ಒಳಗೊಳ್ಳುತ್ತದೆ. ಆಹಾರ, ಬಾಡಿಗೆ, ವೈದ್ಯಕೀಯ ವೆಚ್ಚಗಳು ಇತ್ಯಾದಿ ಇದರಲ್ಲಿ ಸೇರುತ್ತದೆ.
  • ಬಂಡವಾಳ ಹೂಡಿಕೆ ಉದ್ಯಮಗಳು ತಮ್ಮ ಕೆಲಸಗಳಿಗಾಗಿ ಉಪಯೋಗಿಸುವ ವೆಚ್ಚ. ಉದಾಹರಣೆಗೆ ಉದ್ಯಮವು ಯಂತ್ರಗಳನ್ನು ಅಥವಾ ತಂತ್ರಾಂಶಗಳನ್ನು ಕೊಳ್ಳಲು ಹೂಡುವ ಬಂಡವಾಳ. ಆರ್ಥಿಕ ಬಂಡವಾಳ ಹೂಡಿಕೆ (ಉದಾ. ಶೇರ್ಗಳ ಕೊಳ್ಳುವಿಕೆ) ಇದರಲ್ಲಿ ಸೇರುವುದಿಲ್ಲ.
  • ಸರ್ಕಾರಿ ವೆಚ್ಚ ಎಲ್ಲಾ ಸರ್ಕಾರಿ ವೆಚ್ಚಗಳನ್ನು ಒಳಗೊಳ್ಳುತ್ತದೆ. ತನ್ನ ಕೆಲಸಗಾರರ ವೇತನಗಳು, ಸೇನೆಗಾಗಿ ಕೊಳ್ಳುವ ಶಸ್ತ್ರಾಸ್ತ್ರಗಳು, ಇತ್ಯಾದಿ.
  • ರಫ್ತುಗಳು ದೇಶದಿಂದ ಹೊರಹೊಯ್ಯುವ ಸಂಪತ್ತನ್ನು ಉತ್ಪನ್ನದಿಂದ ತಗೆಯಲಾಗುತ್ತದೆ.
  • ಆಮದುಗಳು ದೇಶಕ್ಕೆ ತರುವ ಸಂಪತ್ತನ್ನೂ ಇದಕ್ಕೆ ಸೇರಿಸಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ