ರಾಜಕುಮಾರಿಯ ದಿನಚರಿಗಳು

Lua error in package.lua at line 80: module 'Module:Pagetype/setindex' not found.

ರಾಜಕುಮಾರಿಯ ದಿನಚರಿಗಳು ಒಂದು ಗಮನಾರ್ಹವಾದ ಕಾದಂಬರಿಯ ಸರಣಿ ಅಥವಾ ಮಾಲಿಕೆ, ಇದು ಚಿಕ್-ಲಿಟ್ ಮತ್ತು YA ಕಲ್ಪಿತಸತ್ಯ ದ ಶೈಲಿ ಅಥವಾ ಪ್ರಕಾರದಲ್ಲಿ ಮೆಗ್ ಕ್ಯಾಬಟ್ ಬರೆದದ್ದು ಮತ್ತು ಈ ಶೀರ್ಷಿಕೆ ಅಡಿಯಲ್ಲಿ ಇದರ ಪ್ರಥಮ ಸಂಪುಟ 2000ರಲ್ಲಿ ಪ್ರಕಟವಾಯಿತು. ಅನೇಕ ಕಾದಂಬರಿಗಳಂತೆ ರಾಜಕುಮಾರಿಯ ದಿನಚರಿಗಳು ಅಧ್ಯಾಯದ ಪ್ರಕಾರವಿರದೆ ದಿನಚರಿಯಲ್ಲಿ ಎಷ್ಟೆಷ್ಟು ದಾಖಲಾಗಿದೆಯೋ ಆ ಪ್ರಕಾರ ವಿಂಗಡನೆಗೊಂಡಿದೆ.

ಈ ಕಾದಂಬರಿ ಸರಣಿ ಬರೆಯಲು ತಮಗೆ ಪ್ರೇರಣೆಯಾಗಿದ್ದು ತನ್ನ ತಂದೆ ತೀರಿ ಹೋದ ಬಳಿಕ ತನ್ನ ತಾಯಿ ತನ್ನ ಶಿಕ್ಷಕರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದ ಘಟನೆ, ಕಾದಂಬರಿಯಲ್ಲಿ ಮಿಯಾದ ತಾಯಿ ಮಾಡಿದಂತೆ, ಎಂದು ವೆಬ್ ಸೈಟ್‌ನಲ್ಲಿ ಕಾದಂಬರಿಗಾರ್ತಿ ಕ್ಯಾಬಟ್ ಬರೆದುಕೊಂಡಿರುತ್ತಾರೆ. ತಾನು ಚಿಕ್ಕವಳಿದ್ದಾಗ, ತಾನೊಂದು ರಾಜಕುಮಾರಿ, ರಾಜ ಮತ್ತು ರಾಣಿ ನನ್ನ ನಿಜವಾದ ತಂದೆ ತಾಯಿಗಳು ಅವರು ಶೀಘ್ರವೇ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ ಮತ್ತು ಆಗ ಎಲ್ಲರೂ ನನ್ನ ಬಳಿ ಒಲವಿನಿಂದಿರುತ್ತಾರೆ, ನಾವು ಸುಖವಾಗಿ ಬಾಳಬಹುದು ಎಂದು ಯಾವಾಗಲೂ ಹೇಳುತ್ತಿದ್ದೇನಂತೆ, ಆ ಕಾರಣದಿಂದಲ್ಲೇ ರಾಜಕುಮಾರಿಯ ಪಾತ್ರದ ಬಗ್ಗೆ ನನಗೆ ಒಂಥರಾ ಅಕ್ಕರೆ ಆದುದರಿಂದ ಪುಸ್ತಕದಲ್ಲಿ ಆ ಪಾತ್ರವನ್ನು ಆನಂದ ಮತ್ತು ಪಾರದರ್ಶತೆಗಾಗಿ ಅದನ್ನು ಅಂಟಿಸಿರುವುದು. ಹೀಗೆ ರಾಜಕುಮಾರಿಯ ದಿನಚರಿಗಳು ಜನಿಸಿದ್ದು ಎನ್ನುತ್ತಾರೆ. [೧]

ಈ ಪುಸ್ತಕದಲ್ಲಿ ಸಂಸ್ಕೃತಿಯ ಅನೇಕ ಉಲ್ಲೇಖಿತಗಳಿವೆ ಅವುಗಳಲ್ಲಿ ಗಾಯಕರ ಬಗ್ಗೆ, ಚಲನಚಿತ್ರಗಳ ಬಗ್ಗೆ ಮತ್ತು ಆಧುನಿಕ ಸಂಸ್ಕೃತಿಯ ಕಾರ್ಯನೀತಿಗಳ ಒಲವಿನ ಬಗ್ಗೆ ಮಾಹಿತಿಯಿದೆ. ಆದರೆ ಅನೇಕ ವಿಮರ್ಶಕರು ಈ ಪರಿಯ ಕಥನ ಶೈಲಿಯನ್ನು ನಿಷ್ಕರುಣದಿಂದ ಕಂಡಿದ್ದಾರೆ. ಇದಕ್ಕೆ ಸ್ಪಂದಿಸಿ, ಕ್ಯಾಬಟ್ ಇಂಗ್ಲೀಷ್ ಶಿಕ್ಷಕಿಯ ಪಾತ್ರದ ಮೂಲಕ ರಾಜಕುಮಾರಿಯ ತರಬೇತಿ ನಲ್ಲಿ ಮಿಯಾಳ ಬರವಣಿಗೆಯನ್ನು ಟೀಕಿಸುವಂತೆ ಚಿತ್ರಿಸಿ ಅದರಲ್ಲಿ ಮಿಯಾಳು "ಸಮರ್ಥ ಪಾಪ್ ಸಂಸ್ಕೃತಿಯ ಉಲ್ಲೇಖಗಳ" ಮೇಲೆ ತುಂಬಾ ಅವಲಂಬಿಸಿದ್ದೀಯ ಎಂದು ಹೇಳಿಸುತ್ತಾಳೆ.

ಮಿಯಾ 18ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ಈ ಮಾಲಿಕೆಯು ಕೂಡ ತನ್ನ ಹತ್ತನೇ ಪುಸ್ತಕದೊಡನೆ ಮುಕ್ತಾಯಗೊಳ್ಳುತ್ತದೆ ಎಂದು ಕ್ಯಾಬಟ್ ಹೇಳಿಕೆಯನ್ನಿತ್ತಳು.[೨] ಆದಾಗ್ಯೂ, ಭವಿಷ್ಯತ್ತಿನಲ್ಲಿ ತಾನು ಮಿಯಾಳ ಬದುಕಿಗೆ ಆಗಾಗ ಭೇಟಿ ಕೊಡುವುದಾಗಿಯೂ ಹೇಳುತ್ತಾಳೆ.

ಸರಣಿಯ ವಿವರಣೆ ಬದಲಾಯಿಸಿ

ಕಥಾ ವಸ್ತುವಿನ ಸಾರಾಂಶಗಳು ತಮ್ಮ-ತಮ್ಮ ಪ್ರತ್ಯೇಕ ಸಂಪುಟಗಳ ಪುಟಗಳಿಗೆ ಚಲಿಸುತ್ತವೆ.

ಸುಮಾರಾದ ಗುಣದ ಹದಿಹರೆಯದವಳಾದ ಮಿಯಾಳ ಪ್ರಾಯದ ಸಂಕ್ಷೋಭೆಗಳನ್ನೊಳಗೊಂಡ ಕಥೆ, ಭವ್ಯ ಪರಂಪರೆಯ ರಾಜವಂಶದ ಕುಲದ ರಾಜಕುಮಾರಿಯ ಕಥೆ ಚಾಲ್ತಿಯಲ್ಲಿರುವ ಪತ್ರಿಕೆ ಅಥವಾ ನಿಯತಕಾಲಿಕದಲ್ಲಿ ದಾಖಲೆಗೊಂಡಿರುತ್ತದೆ ಮತ್ತು ಅದರಲ್ಲಿ ಅವಳ ಹದಿಹರೆಯದ ಕೋಪ-ತಾಪ, ಪ್ರೀತಿ ಮತ್ತು ನಂಬಿಕೆದ್ರೋಹ ಮುಂತಾದವುಗಳನ್ನು ತೀಕ್ಷ್ಣ ಅನಿಸಿಕೆಯಲ್ಲಿ ಪರಿಶೋಧಿಸಲಾಗಿದೆ.

ಪಾತ್ರಗಳು ಬದಲಾಯಿಸಿ

ರಾಜಕುಮಾರಿ ಅಮೇಲಿಯಾ ಮಿಗ್ನಾನೆಟ್ಟೆ ಥರ್ಮೊಪಾಲಿಸ್ ರೆನಾಲ್ಡೋ ಬದಲಾಯಿಸಿ

ಮಿಯಾ ಥರ್ಮೊಪಾಲಿಸ್ ಹೆಸರಿನೊಡನೆ ಗುರುತಿಸಲು ಆದ್ಯತೆ.

ರಾಕಿ ಥರ್ಮೊಪಾಲಿಸ್-ಗಿಯಾನಿನಿಗೆ ಇವಳು ತುಂಬಾ ಮುದ್ದಿನ, ಗೀಳಿನ ತಂಗಿ, ಇವಳು ಗಿಯಾನಿಯನ್ನು ಅತಿಯಾಗಿ ರಕ್ಷಿಸುತ್ತಾಳೆ, ಇದರಿಂದಾಗಿಯೇ ಇವಳ ಆಪ್ತಮಿತ್ರಳಾದ ಲಿಲ್ಲಿ ಮಾಸ್ಕೋವಿಟ್ಸ್ ಇವಳನ್ನು ಎಂಟನೇ ಪುಸ್ತಕದವರೆಗೂ "ಬೇಬಿ-ಲಿಕ್ಕರ್" ಅಥವಾ ಚಿಕ್ಕದಾಗಿ BL ಎಂದು ಉಲ್ಲೇಖಿಸುತ್ತಾಳೆ.

ಲಿಲ್ಲಿಯ ಹಿರಿಯಣ್ಣ ಮೈಖೇಲ್ ಮಾಸ್ಕೋವಿಟ್ಸ್ ಜೊತೆ ಇವಳ ಸಂಬಂದ್ಧವಿದೆ. ಅವರ ಸಂಬಂದ್ಧ ತುಂಬಾ ದಿನದ್ದು ಮತ್ತು ಅಪರೂಪಕ್ಕೊಮೊಮ್ಮೆ ಭಂಗವುಂಟಾಗುವಂತಹುದು.

ಪುಸ್ತಕ ಎಂಟರಲ್ಲಿರುವಂತೆ, ಅವನು ಒಂದು ವರ್ಷ ಅವಧಿಗಾಗಿ ಜಪಾನಿಗೆ ತೆರಳುವ ಮುನ್ನ ಅವನು ಜಿಡಿಥ್ ಗರ್ಷನರ್ ಜೊತೆ ಸಂಬಂದ್ಧ ಹೊಂದಿದ್ದರಿಂದ ಅವನ "ವಿಶ್ವಾಸಘಾತುಕತನದಿಂದ" ಕೋಪಗೊಂಡು ಅವನು ಕೊಟ್ಟಿದ್ದ ಹಿಮದ ಹರಳುಗಳ ಕಂಠಹಾರವನ್ನು ಮಿಯಾ ಎಸೆದು ಬಿಟ್ಟಳು. ಜಪಾನಿನಲ್ಲಿ ಮೈಖೇಲ್ ರೋಬೋಟಿಕ್ ಕೈಯ ಮಾತೃಕೆಯೊಂದನ್ನು ಸಿದ್ಧಪಡಿಸಿದ, ಜಪಾನೀ ಕಂಪನಿಯು ಇದನ್ನು ಹೃದಯ ಶಸ್ತ್ರಚಿಕಿತ್ಸೆಗಾಗಿ ಬಳಸುವುದಾಗಿ ಹೇಳಿತು, ತದನಂತರ ಮೈಖೇಲ್ ತಾನು ರಾಜಕುಮಾರಿಯೊಬ್ಬಳ ಡೇಟಿಂಗ್ ಮಾಡುವ ಯೋಗ್ಯತೆವುಳ್ಳವನಾಗಬೇಕೆಂಬ ಆಸೆಯಿಂದ ಪ್ರಚೋದಿತನಾಗಿ ಈ ಆವಿಷ್ಕಾರವನ್ನು ಮಾಡಿದೆನು ಎಂದು ಹೇಳುತ್ತಾನೆ.

ಒಂಬತ್ತನೇ ಪುಸ್ತಕದಲ್ಲಿ ಮಿಯಾ ಮನೋವಿಜ್ಞಾನಿ ಡಾ.ಕ್ನುಟ್ಜ್‌ಗೆ ತಾನು ಮೈಖೇಲ್ ಮುಂದೆ ಕುಬ್ಜಳಾಗುತ್ತಿದ್ದೇನೆನ್ನುವ ಅಥವಾ ಕೀಳಿರಿಮೆ ಭಾವನೆಯನ್ನು ವ್ಯಕ್ತ ಪಡಿಸುತ್ತಾಳೆ ಮತ್ತು ಇವನಿಗಿಂತ ಉತ್ತಮನಾದವನನ್ನು ಕೂಡಿ ಇವನನ್ನು ದೂರ ಮಾಡಬೇಕೆಂದುಕೊಳ್ಳುತ್ತಾಳೆ ಹೇಗೂ ಅವನ ವಿಶ್ವಾಸ ಘಾತುಕತನ ಒಂದು ನೆಪವಾಗಿ ಇದ್ದೇ ಇತ್ತು. ಆದರೂ ಸಂಬಂದ್ಧವನ್ನು ಕಾಪಾಡಿಕೊಳ್ಳಲು ಹವಣಿಸುತ್ತಾಳೆ ಆದರೆ ಮೈಖೇಲ್ ಇದನ್ನು ತಿರಸ್ಕರಿಸುತ್ತಾನೆ; ಆನಂತರ ಪುನ: ಸ್ನೇಹಿತರೂ ಆಗುತ್ತಾರೆ. ಜಪಾನಿನಲ್ಲಿ ಮೈಖೇಲ್ ಕುಬೇರನಾಗುವ ಮೊದಲು ಇಂದ್ರಿಯ ನಿಗ್ರಹ ಮಾಡಿ ಸಂಯಮಿಗಿದ್ದನೆಂದು ಹೇಳಲಾಗುತ್ತದೆ.

ಮಿಯಾ ಅವನ ಪ್ರಿಯಕರಳಾಗಿಯೇ ಉಳಿಯುತ್ತಾಳೆ; ಆದರೆ ಮೈಖೇಲ್ ಭಾವನೆಗಳಲ್ಲಿ ಸ್ಪಷ್ಟತೆಯಿರುವುದಿಲ್ಲ, ಆದಾಗ್ಯೂ ಇದಕ್ಕೂ ಮುನ್ನ ಅವಳನ್ನು ಮದುವೆ ಆಗಿ ಅವಳ ವಾದ್ಯ ತಂಡದೊಳಗಿರುವ ಆಸೆಯನ್ನು ಗಂಭೀರವಾಗಿಯೇ ವ್ಯಕ್ತಪಡಿಸಿದ್ದ. ಪುಸ್ತಕದ ಅಂತ್ಯದಲ್ಲಿ ಮೈಖೇಲ್ ಮಿಯಾಳನ್ನು ಚುಂಬಿಸಿ ತಾನು ಅವಳನ್ನು ಪ್ರೀತಿಸದಿರುವುದಕ್ಕೆ ಸಾಧ್ಯವೇ ಇಲ್ಲವೆಂದು ಹೇಳಿ ಅವಳನ್ನು ಕಾಯಿಸುವುದೂ ತನಗೆ ಸರಿಯಲ್ಲವೆಂದೂ ಹೇಳಿದ. ಆನಂತರ ಅವರು ದೃಢ ಸಂಬಂದ್ಧದ ದಂಪತಿಗಳಾದರು.

ಡವಾಗೆರ್‌ನ ರಾಜಕುಮಾರಿ ಕ್ಲಾರಿಸ್ಸೆ ರೆನಾಲ್ಡೋ ಬದಲಾಯಿಸಿ

ಮಿಯಾ ಇವಳನ್ನು "ಗ್ರಾಂಡ್‌ಮಿರೆ" ಎಂದು ಉಲ್ಲೇಖಿಸುತ್ತಾಳೆ, ಹಾಗೆಂದರೆ ಫ್ರೆಂಚ್ ಭಾಷೆಯಲ್ಲಿ "ಅಜ್ಜಿ" ಎಂದರ್ಥ. ಕ್ಲಾರಿಸ್ಸೆ ಮಾರೀ ಗ್ರಿಮಾಳ್ಡಿ ರೆನಾಳ್ಡೋ ಜಿನೋವಿಯಾದ ರಾಣಿಯ ತಂಡದವಳು ಮತ್ತು ಮಿಯಾಳಿಗೆ ತಂದೆಯ ಕಡೆಯಿಂದ ಅಜ್ಜಿ. ಅವಳು ಯುವತಿಯಾಗಿದ್ದಾಗ ರಾಜಕುಮಾರ ರೂಪರ್ಟ್ ರೆನಾಳ್ಡೋನನ್ನು ವರಿಸಿದಳು ಅವಳಿಗೊಬ್ಬ ಮಗ ಫಿಲೀಪ್ ಎಂಬುವವನೊಬ್ಬನು ಇದ್ದನು. ಆಕೆ ಸ್ವಾಭಾವಿಕವಾಗಿ ಮಿಯಾಳ ಉದ್ದನೆಯ ಹೆಸರು ಮತ್ತು ಬಿರುದಲ್ಲಿ ಅವಳ ತಾಯಿಯ ಮನೆತನದ ಹೆಸರಾದ "ಥರ್ಮಾಪಾಲಿಸ್" ಎಂಬುದನ್ನು ಹೇಳದೆ ಬಿಟ್ಟುಬಿಡುತ್ತಾಳೆ. ಇಂಗ್ಲೀಷ್ ಗೊತ್ತಿದ್ದರೂ ಆಕೆ ಫ್ರೆಂಚ್ ಭಾಷೆಯಲ್ಲೇ ಹೆಚ್ಚು ಮಾತನಾಡುವುದು.

ಮಿಯಾಳೊಂದಿಗೆ ಬಹಳಷ್ಟು ವಿಷಯಗಳು ಸಹಮತವಿದೆ ಆದರೂ ಮಿಯಾ ಏನಾದರು ಬೇಸರದಲ್ಲಿದ್ದರೆ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ, ಆಗಾಗೆ ಒಬ್ಬರಿಗೊಬ್ಬರು ತಲೆ ಒಡೆದುಕೊಳ್ಳುತ್ತಾರೆ (ಅಂದರೆ ಜಗಳವಾಡುತ್ತಿರುತ್ತಾರೆ). ಆಕೆ ಎರಡು ಅರಮನೆಯಲ್ಲಿ ವಾಸಿಸುತ್ತಾಳೆ ಮತ್ತು ಅತ್ಯಂತ ಶ್ರೀಮಂತ ಬದುಕನ್ನು ಬದುಕುತ್ತಾಳೆ ಆದಾಗ್ಯೂ ಅದನ್ನು ಅವಳು ಲೆಕ್ಕಿಸುವುದಿಲ್ಲ. ಸ್ಪ್ಯಾನಿಶ್ ಬೌರ್ಬನ್ ಮತ್ತು ಇಂಗ್ಲೀಷ್ ವಿಂಡ್ಸರ್ ಕುಟುಂಬಗಳಂತಹ ರಾಜಮನೆತನದವರೊಡನೆ ಆಕೆಗೆ ಉತ್ತಮ ಸ್ನೇಹ-ಸಖ್ಯವಿದೆ. ಉಲ್ಲೇಖಿಸಬಾರದ ವಿಷಯವೆಂದರೆ ಅವಳಿಗೆ ಡ್ಯಾನಿಶ್ ರಾಜಮನೆತನದೊಂದಿಗೆ ಸಂಬಂದ್ಧವಿರುವುದು.

ಲಿಲ್ಲಿ ಮಾಸ್ಕೋವಿಟ್ಜ್ ಬದಲಾಯಿಸಿ

ಮಿಯಾಳ ಸ್ನೇಹಿತಳಾದ ಇವಳು ತುಂಬಾ ಬುದ್ಧಿವಂತಳು ಮತ್ತು ಅಭಿಪ್ರಾವುಳ್ಳವಳು. ಇವಳ ದೃಢ ನಿಲುವುಗಳಿಂದಾಗಿ ಮಿಯಾಳೂ ಇವಳೂ ಆಗಾಗ್ಗೆ ಒಬ್ಬರಿಗೊಬ್ಬರು ಗುಮ್ಮಿಕೊಳ್ಳುವುದುಂಟು ವಿಶೇಷವಾಗಿ ಲಿಲ್ಲಿ ತನ್ನ ಬಗ್ಗೆ ತುಂಬಾ ಕಟು ವಿಮರ್ಶಕಳು ಎಂದು ಗೊತ್ತಾದಾಗ. ಲಿಲ್ಲಿಯನ್ನು ಸೌಂಧರ್ಯವಂತಳು ಎಂದು ಪರಿಗಣಿಸುವ ಹಾಗಿಲ್ಲ, ಮಿಯಾ ಅವಳನ್ನು ಅಗಲವಾದ ಚಪಟೆ ಮೂಗಿನ ನಾಯಿಯ ತಳಿಯ ತರಹ ಎಂದು ವಿವರಿಸುತ್ತಾಳೆ ಆದರೂ ಲಿಲ್ಲಿಗೆ ತುಂಬು ದೇಹವಿರುವುದರಿಂದ ಅವಳಿಗೆ ಅನೇಕ ಪ್ರಣಯಿಗಳು ದೊರಕುತ್ತಾರೆ. ಲಿಲ್ಲಿ ಒಂದು ದೂರದರ್ಶನ ಶೋ "ಲಿಲ್ಲಿ ಟೆಲ್ಸ್ ಲೈಕ್ ಇಟ್ ಇಸ್" ಅನ್ನು ನಡೆಸಿಕೊಡುತ್ತಾಳೆ, ಇದರಲ್ಲಿ ಲಿಲ್ಲಿ ರಾಜಕೀಯ ಮತ್ತು ಸಾಮಾಜಿಕ ಘಟನೆಗಳನ್ನು ಚರ್ಚಿಸುತ್ತಾಳೆ.

ಮೈಖೇಲ್ ಮಾಸ್ಕೋವಿಟ್ಜ್ ಬದಲಾಯಿಸಿ

ಮಿಯಾಳ ನಿಜವಾದ ಪ್ರೇಮಿ.

ಮಿಯಾ ಹೇಳುವಂತೆ, ಮೈಖೇಲ್ ನಾಲ್ಕನೆಯ ಶ್ರ‍ೇಣಿಯಲ್ಲಿ ಹಾಗೂ ತಾನು 1ನೇ ಶ್ರ‍ೇಣಿಯಲ್ಲಿದ್ದಾಗ, ಮೈಖೇಲ್ ತನಗೆ ಶಾಲೆಯ ಪ್ರಾಜೆಕ್ಟ್ ತಂದು ಕೊಟ್ಟ ದಿನದಿಂದ ಅವಳು ಅವನನ್ನು ಪ್ರೀತಿಸುತ್ತಿದ್ದಾಳೆ. ಮೊದಲ ಪುಸ್ತಕದ ಅಂತ್ಯದಿಂದ ಮೂರನೆಯ ಪುಸ್ತಕದವರೆಗೂ ಮಿಯಾಳಿಗೆ ಮೈಖೇಲ್ ಮೇಲೆ ಬದಲು ಬಯಸದ ಬಾಯಿಕಟ್ಟಿದ ಮೂಕ ಭಾವನೆಗಳು ಈ ಭಾವನೆಗಳಿಗೆ ಮೈಖೇಲ್ 3ನೇ ಪುಸ್ತಕದಲ್ಲಿ ಸ್ಪಂದಿಸುತ್ತಾನೆ. ಮೈಖೇಲ್ ಜಪಾನಿಗೆ ಹೋಗುವವರೆಗೂ ಅಂದರೆ ಮಿಯಾಳ ವಿಶ್ವವಿದ್ಯಾನಿಲಯದ ಅಥವಾ ಪ್ರೌಢಶಾಲೆಯ ಎರಡನೆಯ ವರ್ಷದುದ್ದಕ್ಕೂ ಅವರ ಸಂಬಂದ್ಧ ಮುಂದುವರೆಯಿತು ಆ ಅವಧಿಯಲ್ಲೇ ಮೈಖೇಲ್‌ಗೆ ಜುಡಿಥ್ ಗರ್ಷನರ್ ಜೊತೆಗಿನ ಸಂಬಂದ್ಧ ಮಿಯಾಳಿಗೆ ಗೊತ್ತಾಗಿ ಅವರ ಸಂಬಂದ್ಧ ಕಡಿದು ಬಿತ್ತು. ಆದಾಗ್ಯೂ ಮೈಖೇಲ್ ಎರಡು ವರ್ಷದ ನಂತರ ಜಪಾನಿನಿಂದ ಹಿಂದಿರುಗಿದ, ಅಷ್ಟರಲ್ಲಿ ಅವನು ರೋಬೋಟಿಕ್ ಕೈಯನ್ನು ಸಂಶೋಧಿಸಿ ಕುಬೇರನಾಗಿದ್ದನು, ಮಿಯಾ ತಾನಿನ್ನೂ ಅವನನ್ನು ಪ್ರೀತಿಸುತ್ತಿರುವುದಾಗಿ ಅವನನ್ನು ಮರೆತ್ತಿಲ್ಲವೆಂದು ಕಂಡುಕೊಂಡಳು. ಅವನು ಅವಳನ್ನು ಭೇಟಿಯಾದಾಗಲೆಲ್ಲಾ ಚೆಲ್ಲಾಟವಾಡುತ್ತಿದ್ದನು ಮತ್ತು ಚುಂಬಿಸುತ್ತಿದ್ದನು ಕೊನೆಗೊಂದು ದಿನ ತಾನು ಇನ್ನೂ ಮಿಯಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಅವಳಿಗಾಗಿ ತಾನು ಇನ್ನೂ ಕಾಯುವುದಾಗಿ ಹೇಳಿದನು. 10ನೇ ಪುಸ್ತಕದ ಕೊನೆಯಲ್ಲಿ ಅವರಿಬ್ಬರು ಜೊತೆಗೂಡುತ್ತಾರೆ.

ಮೈಖೇಲ್ ತೀರಾ ಚುರುಕಾದ, ನೋಡಲು ಸುಂದರವಾದ, ಒಳ್ಳೆ ಮೈಕಟ್ಟನ್ನು ಹೊಂದಿರುವ ಹುಡುಗ ಎನ್ನಲಾಗಿದೆ ಅವನು ಯಾವಾಗಲೂ ಹಾಡುಗಳನ್ನು ಬರೆಯುತ್ತಲ್ಲೋ ಕಂಪ್ಯೂಟರ್ ಮುಂದೆ ಕಾರ್ಯನಿರ್ವಹಿಸುತ್ತಲ್ಲೋ ಕೋಣೆಯಲ್ಲಿ ಬಂಧಿಯಾಗಿರುತ್ತಾನೆ. AEHSನಲ್ಲೇ ಎರಡನೆಯ ಅತಿ ಸುಂದರ ಅವನು ಎಂದು ಮಿಯಾ ಹೇಳುತ್ತಾಳೆ ಮತ್ತು ಅವನ ಕುತ್ತಿಗೆಯಿಂದ ಹೊಮ್ಮುವ ವಾಸನೆಯನ್ನು ತಾನು ಇಷ್ಟಪಡುವುದಾಗಿಯೂ ಹೇಳುತ್ತಾಳೆ. ಕೆಲವೊಮ್ಮೆ ಅವಳ ನಡವಳಿಕೆಯಿಂದ ಅವನಿಗೆ ಬೇಸರವುಂಟಾದರೂ ಮಿಯಾಳನ್ನು ಮೈಖೇಲ್ ತೀರಾ ಆಳಕ್ಕೆ ಪ್ರೀತಿಸುತ್ತಾನೆ. ಮಿಯಾ ತನಗೆ ವಿರುದ್ಧವಾಗಿದ್ದರೂ ಮೈಖೇಲ್ ಅದನ್ನೇ ಇಷ್ಟಪಡುತ್ತಾನೆ ಮತ್ತು ಅವಳನ್ನು ಮದುವೆಯಾಗಲು ಸಿದ್ಧನಿದ್ದಾನೆ. ಆದರೆ ಅವನಿಗೆ ಅವನ ಬುದ್ಧಮತ್ತೆಯನ್ನು ಸಾಬೀತು ಪಡಿಸುವುದು ಮೊದಲ ಆದ್ಯತೆ ಇದರಿಂದಾಗಿಯೇ ಮೈಖೇಲ್ ಜಪಾನಿಗೆ ಹೋಗುವ ಮುನ್ನ, 8ನೇ ಪುಸ್ತಕದಲ್ಲಿ ಅವರಿಬ್ಬರು ಬೇರೆಯಾಗುವುದು. ಮಿಯಾ ಅವನನ್ನು ಎಂದೂ ಸಂಶಯ ದೃಷ್ಟಿಯಿಂದಲ್ಲೇ ನೋಡುತ್ತಾಳೆ, ಅವನು ತನ್ನ ಅತಿಯಾಗಿ ಒಳ್ಳೆಯವನಾದ ಕಾರಣ ಎಲ್ಲಾದರೂ ಒಂದಿಷ್ಟು ವ್ಯತ್ಯಾಸವಾದರೂ ಅವನು ತನ್ನಿಂದ ದೂರವಾಗುತ್ತಾನೆ ಎಂದೇ ಭಾವಿಸುತ್ತಾಳೆ. ಅವರಿಬ್ಬರೂ ಬೇರೆಯಾಗುವುದರಿಂದ ಅವರಿಗೆ ಅನುಕೂಲವೇ ಆಗುತ್ತದೆ, ಅವರು ಮಾಗುವುದಕ್ಕೆ, ಪ್ರೌಢ ಬುದ್ಧಿಗಳಿಸುವುದಕ್ಕೆ ಅವಕಾಶವಾಗುತ್ತದೆ ಮತ್ತು ಮತ್ತೆ ಅವರಿಬ್ಬರು ಒಂದಾದಾಗ ದೃಢ ಸಂಗಾತಿಗಳಾಗಲು ಆಸ್ಪದವಾಗುತ್ತದೆ.

ಆಧೀನ ಪಾತ್ರಗಳು ಬದಲಾಯಿಸಿ

  • ಲಾರ್ಸ್ ವ್ಯಾನ್ ಡೆರ್ ಹೂಟೆನ್ : ಮಿಯಾಳ ಸ್ವೀಡಿಶ್ ಅಂಗರಕ್ಷಕ. ಮಿಯಾ ಯಾವುದಾದರೂ ವಿಚಾರದಲ್ಲಿ ವಿವೇಕಹೀನಳಾಗಿ ತೀರ್ಮಾನಗಳನ್ನು ತೆಗೆದುಕೊಂಡು ಕಾರ್ಯಕೈಗೊಂಡರೆ ಅದಕ್ಕೆ ತನ್ನ ವಿರೋಧ ವ್ಯಕ್ತಪಡಿಸಿಯೂ ಮಿಯಾಳ ಯೋಜನೆಗಳನ್ವಯವೇ ನಡೆದುಕೊಳ್ಳುತ್ತಾನೆ. ಮಿಯಾ ಮತ್ತು ಮೈಖೇಲ್ ಭೇಟಿಯಾದಾಗ ಕುರುಡನಂತೆ ಇದ್ದು ಬಿಡುವ ಅವನ ಸ್ವಭಾವಕ್ಕೆ ಮಿಯಾ ಕೃತಜ್ಞಳಾಗಿದ್ದಾಳೆ. ಮೊದಲನೇ ಪುಸ್ತಕದಲ್ಲಿ ಇರುವಂತೆ ಈತನಿಗೆ ಮೈಖೇಲ್ ಜೊತೆ ಹೊಂದಾಣಿಕೆ ಚನ್ನಾಗಿ ಆಗುತ್ತದೆ, ಮಿಯಾ ಮೈಖೇಲ್ ಅನ್ನು ಇಷ್ಟಪಡುವುದೇ ಇದಕ್ಕೆ ಕಾರಣವಾಗಿದೆ ಆದರೆ ಲಿಲ್ಲಿ ಬಗ್ಗೆ ಅವನಿಗೆ ಅಂಥ ಅಭಿಪ್ರಾಯ ಇಲ್ಲದಿದ್ದರೂ ಟೀನಾ ಅಂಗರಕ್ಷಕ ವಾಹಿಮ್ ಜೊತೆ ಸ್ನೇಹದಿಂದಿರುತ್ತಾನೆ.
  • ಟೀನಾ ಹಕಿಮ್ ಬಾಬ : ಪ್ರಸ್ತುತ

ಆಲ್ಬರ್ಟ್ ಏಯ್ನ್‌ಸ್ಟೇಯ್ನ್ನಲ್ಲಿ ಎರಡನೆಯ ವರ್ಷದಲ್ಲಿ ಓದುತ್ತಿರುವ ಟೀನಾ ಸೌದಿ ಅರೇಬಿಯಾದ ತೈಲ ಮುಖಂಡ ಮತ್ತು ಬ್ರಿಟಿಷ್ ಮಾಜಿ ಅದ್ಭುತರೂಪದರ್ಶಿಯ ಮಗಳು.ಇವಳನ್ನು ವಿಲಕ್ಷಣ ಹೆಣ್ಣೆಂದು ಉಲ್ಲೇಖಿಸಲಾಗಿದೆ. ಅವಳ ತಂದೆಯ ಘನತೆಯಿಂದಾಗಿ ಅವಳಿಗೆ ವಾಹಿಮ್ ಎನ್ನುವ ಅಂಗರಕ್ಷಕನಿದ್ದಾನೆ, ಅವನು ಬೇರೆ ವಿದ್ಯಾರ್ಥಿಗಳಿಂದ ಅವಳನ್ನು ದೂರವಿಟ್ಟರೂ ಲಿಲ್ಲಿ ಜೊತೆ ಜಗಳವಾಡಿ ಬಂದ ಮಿಯಾ ಇವಳ ಪಕ್ಕದಲ್ಲಿ ಕುಳಿತರೆ ಮಾತ್ರ ದೂರವುಳಿಯುತ್ತಾನೆ, ಇದು ಮೊದಲ ಕಾದಂಬರಿಯಲ್ಲೇ ಕಂಡು ಬರುತ್ತದೆ. ಎಲ್ಲಾ ಮೂರು ಹೆಣ್ಣು ಮಕ್ಕಳು ಬಹು ಬೇಗನೇ ಗೆಳೆತನ ಬೆಳೆಸಿಕೊಂಡು ಬಿಡುತ್ತಾರೆ ಮತ್ತು ಟೀನಾ ವಾರಕ್ಕೊಮ್ಮೆ ಖರ್ಚಿಗೆ ಸಿಗುವ ಹಣದಲ್ಲಿ ಸ್ವಲ್ಪವನ್ನು ಲಿಲ್ಲಿಯ ಟೆಲಿವಿಷನ್ ಷೋಗಾಗಿ ಕೊಡುವ ಧಾರಾಳತನ ಪ್ರದರ್ಶಿಸುತ್ತಾಳೆ. ಟ್ರಿನಿಟಿಯ ಬೇರೆ ಶಾಲೆಯ ಡೇವ್ ಫಾರೂಖ್-ಎಲ್-ಅಬಾರ್ ಜೊತೆ ಓಡಾಡುತ್ತಾಳೆ; ಆನಂತರ ಲಿಲ್ಲಿಯ ಜೊತೆ ಸಂಬಂದ್ಧ ಮುರಿದುಕೊಂಡ ಬೋರಿಸ್ ಪೆಲ್ಕೋವ್‌ಸ್ಕಿ ಜೊತೆ ಡೇಟಿಂಗ್ ಮಾಡುತ್ತಾಳೆ. ಎಂಟನೇ ಕಾದಂಬರಿ ಅಷ್ಟು ಹೊತ್ತಿಗೆ ಮಿಯಾ ಮತ್ತು ಲಿಲ್ಲಿಯ ಸ್ನೇಹಕ್ಕೆ ಭಂಗವುಂಟಾಗುತ್ತದೆ ಮತ್ತು ಮಿಯಾ ಟೀನಾ ಜೊತೆ ಹೆಚ್ಚು ಗೆಳೆತನದಿಂದಿದ್ದು ಬಿಡುತ್ತಾಳೆ. ಟೀನಾ ಯಾವಾಗಲೂ ಪ್ರಣಯಭರಿತ ಕಾದಂಬರಿಗಳನ್ನೇ ಹೆಚ್ಚು ಓದುತ್ತಿದ್ದುದರಿಂದ ಅವಳನ್ನು ಮಿಯಾ ಪ್ರಣಯ ಪರಿಣಿತಳು ಎಂದು ಪರಿಗಣಿಸುತ್ತಾಳೆ. ಯಾವಾಗಲೂ ಕಲ್ಪನಾವಿಲಾಸದಲ್ಲೇ ಇದ್ದು ಬಿಡುವ ಟೀನಾ ಮೂಢಳು ಎಂದು ಮಿಯಾ ಮೊದಲುಗೊಂಡು ಎಲ್ಲರು ಭಾವಿಸಿದರೂ ಟೀನಾ ವಿದ್ಯಾಭ್ಯಾಸದಲ್ಲಿ ಮತ್ತು ಸಾಮಾಜಿಕ ವಿಚಾರಗಳಲ್ಲಿ ತೀರಾ ಬುದ್ಧಿವಂತಳು. ಒರಟು ಲಿಲ್ಲಿಗಿಂತ ಸೂಕ್ಷ್ಮವಾದ ವಿಚಾರಗಳಿಗೆ ಸಲಹೆ ಬೇಕೆಂದಲ್ಲಿ ಮಿಯಾ ಟೀನಾಳನ್ನೇ ಅವಲಂಬಿಸುತ್ತಾಳೆ.

  • ಫ್ರಾಂಕ್ ಗಿಯಾನಿನಿ : ಮಿಯಾಳ ಮನೆಪಾಠದ ಮತ್ತು ಬೀಜಗಣಿತದ ಶಿಕ್ಷಕ. ಮಿಯಾಳ ತಾಯಿ ಹೆಲೆನ್ ಜೊತೆ ಡೇಟಿಂಗ್ ಮಾಡುತ್ತಾನೆ ಮತ್ತು ಮಿಯಾಳ ಮಲತಮ್ಮ ರಾಕಿಗೆ ಆಕೆ ಗರ್ಭಿಣಿ ಆದಮೇಲೆ ಅವಳನ್ನು ಮದುವೆಯಾಗುತ್ತಾನೆ. ನೆರೆಹೊರೆಯವರು ಕೋಪಗೊಳ್ಳುವಷ್ಟು ಜೋರಾಗಿ ಡ್ರಮ್ ಬಾರಿಸುತ್ತಾನೆ. ಅವನ ಮಲಮಗಳ ಪ್ರಸಿದ್ಧಿ ಬಗ್ಗೆ ಅವನು ಗೊಂದಲಗೊಳ್ಳುವುದಿಲ್ಲ ಮತ್ತು ಮಿಯಾಳನ್ನು ಎಲ್ಲಾ ವಿದ್ಯಾರ್ಥಿಗಳನ್ನು ಗಮನಿಸುವಹಾಗೆಯೇ ಗಮನಿಸುತ್ತಾನೆ. ಶಾಲೆಯ ಅವಧಿಯ ನಂತರ ಅವನ ಬೀಜಗಣಿತದ ವಿಮರ್ಶಾ ತರಗತಿಗಳನ್ನು ಮಿಯಾ ಮೆಚ್ಚುತ್ತಾಳೆ. ಅವರ ಸಂಬಂದ್ಧ ತುಸು ಮುಜುಗರದಿಂದಲ್ಲೇ ಪ್ರಾರಂಭವಾದರೂ ಏಳನೇ ಕಂತಿನ ನಂತರ ಗಿಯಾನಿನಿ ಜೊತೆಗಿನ ಮಿಯಾಳ ಸಂಬಂದ್ಧ ಚನ್ನಾಗಿರುತ್ತದೆ.
  • ಜಾನ್ ಪಾಲ್ "ಜೆ.ಪಿ." ರೆಯ್ನಾಳ್ಡ್‌ಸ್ ಅಬರ್ನಾಥಿ IV : "ಜೋಳವನ್ನು ಮೆಣಸಿನಕಾಯಿಯೊಳಗೆ ಹಾಕಿದರೆ ವಿರೋಧಿಸುವ ಆಸಾಮಿ" ಎಂದು ಪ್ರಸಿದ್ಧಿಯಾದವನು, ಜೆ.ಪಿ ಮಿಯಾಳನ್ನು ಗ್ರ್ಯಾಂಡ್‌ಮಿರೆಯ ಶಾಲೆಯ ಸಂಗೀತದಲ್ಲಿ ಭೇಟಿಯಾಗಿರುತ್ತಾನೆ. ರಾಜಕುಮಾರಿಯ ಪಾರ್ಟಿಯಲ್ಲಿ ಇತರ ಸ್ನೇಹಿತರೊಡನೆ ಕುಳಿತುಕೊಳ್ಳಲು ಅವನಿಗೆ ಸೂಚಿಸುತ್ತಾಳೆ. ಪ್ರಭಾವಂತನಾಗಿರುವ ಹಾಗೂ ಸುಂದರನಾಗಿಯೂ ಇರುವ ಇವನು ಆಶ್ಚರ್ಯಕರರೀತಿಯಲ್ಲಿ ಮಿಯಾಳ ಆತ್ಮೀಯ ಸ್ನೇಹಿತರಲ್ಲಿ ಒಬ್ಬನಾಗಿ ಬಿಡುತ್ತಾನೆ. ಪುಸ್ತಕ 7ರಲ್ಲಿ ಲಿಲ್ಲಿ ಮತ್ತು ಜೆ.ಪಿ ದಂಪತಿಗಳಾಗಿಬಿಡುತ್ತಾರೆ. ಜೆ.ಪಿ.ಯನ್ನು ಮೊದಲು ’ವಿಶಾಲ ತೋಳುಗಳುಳ್ಳ, ಜೋತಾಡುವ ಕಂದು ಬಣ್ಣದ ಕೂದಲು ಮತ್ತು ಆಶ್ಚರ್ಯ ತರುವ ನೀಲಿ ಕಣ್ಣುಗಳಿರುವವನು’ ಎಂದು ವರ್ಣಿಸಲಾಗಿತ್ತು ಆದರೆ ಎಂಟು ಮತ್ತು ಒಂಬತ್ತನೇಯ ಕಾದಂಬರಿಗಳಲ್ಲಿ ಮಿಯಾ ಮತ್ತು ಜೆ.ಪಿ ಜೊತೆಗಿದ್ದರೆ ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಾರೆ ಕಾರಣ ಅವರಿಬ್ಬರೂ ಉದ್ದಕ್ಕೆ ಇದ್ದು ಹೊಂಬಣ್ಣವನ್ನು ಹೊಂದಿದ್ದಾರೆ ಎನ್ನಲಾಗಿದೆ. ಎಂಟನೇ ಪುಸ್ತಕದಲ್ಲಿ ಜೆ.ಪಿ. ಮಿಯಾಳ ರಸಾಯನ ತರಗತಿಯಲ್ಲಿ ಜೊತೆಗಾರ ಎಂದು ಬರೆದಿದೆ. ವಿಧಿನಿಶ್ಚಿತ ಘಟನೆಗಳು ನಡೆದ ಸ್ವಲ್ಪ ದಿನಗಳ ತರುವಾಯ ಪುಸ್ತಕ 9ರಲ್ಲಿ ಬರೆದಿರುವಂತೆ ಜೆ.ಪಿ. ಮತ್ತು ಮಿಯಾ ಬ್ರಾಡ್‌ವೇನಲ್ಲಿ ಬ್ಯೂಟಿ ಆಂಡ್ ದಿ ಬೀಸ್ಟ್ ಅನ್ನು ವೀಕ್ಷಿಸಲು ಹೋದರು ಮತ್ತು ಅವರಿಬ್ಬರೂ ತಮ್ಮ ಸಂಗೀತದ ಅವಧಿವರೆಗಾದರೂ ತಮ್ಮ ಮಾಸ್ಕೋವಿಕ್ಜಗಳನ್ನು ಮರೆಯುವುದಾಗಿ ಶಪಥಗೈಯುತ್ತಾರೆ.ಸಂಗೀತದ ತರಗತಿಗೆ ಗೆಳೆಯರಂತೆ ಹೋಗುತ್ತಾರೆ ಆದರೆ ಬಹುಬೇಗ ಜೆ.ಪಿ. ತನ್ನ ಪ್ರೇಮವನ್ನು ನಿವೇದಿಸಿಕೊಳ್ಳುತ್ತಾನೆ ಮತ್ತು ಅತಿಶೀಘ್ರದಲ್ಲಿ ಅವರಿಬ್ಬರು ದಂಪತಿಗಳಾಗುತ್ತಾರೆ. ಕೊನೆಯ ಪುಸ್ತಕದಲ್ಲಿ ಅವರಿಬ್ಬರೂ ದೂರವಾಗುತ್ತಾರೆ ಅವಳಿಗೆ ಅವನು ಸುಳ್ಳು ಹೇಳಿದ್ದು ಗೊತ್ತಾಗುತ್ತದೆ.
  • ಬೋರಿಸ್ ಪೆಲ್ಕೋವ್ಸ್‌ಕಿ : ರಷಿಯಾದ ವಯಲಿನ್ ವಾದನದ ಕಲಾನಿಪುಣ ಮತ್ತು ಪುಸ್ತಕ ಐದರವರೆಗೂ ಲಿಲ್ಲಿಯ ಗೆಳೆಯ. ಇವನ ಸ್ವಭಾವಗಳೆಂದರೆ ಸ್ವೆಟರನ್ನು ಪ್ಯಾಂಟಿನೊಳಗೆ ಸೇರಿಸಿ ಹೊಲಿದುಕೊಂಡಿರುವುದು, ಬಾಯಿಂದಲ್ಲೇ ಉಸಿರಾಡುವುದು ಮತ್ತು ತರಗತಿಗಳಲ್ಲಿ ಅಥವಾ ಯಾವುದಾದರೂ ಕಾರ್ಯಕ್ರಮದಲ್ಲಿ ಸುಮ್ಮನಿರಬೇಕಾದ ಸಂದರ್ಭದಲ್ಲಿ ಬಹಳ ಚನ್ನಾಗಿ ವಯಲಿನ್ ನುಡಿಸುವುದು. ಲಿಲ್ಲಿ ಅವನನ್ನು ದೂರ ಮಾಡಿದ ಮೇಲೆ ಟೀನಾ ಹಕಿಂ ಬಾಬಾ ಜೊತೆ ಡೇಟಿಂಗ್ ಶುರು ಹಚ್ಚಿಕೊಂಡ. ಎರಡನೆಯ ವರ್ಷದ ಅವಧಿಗೂ ಮುನ್ನ ಬೇಸಿಗೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾನೆ, ಭಾರ ಎತ್ತುವ ಪಂದ್ಯಗಳನ್ನು ಆಡುತ್ತಾನೆ ಮತ್ತು ಮಿಯಾಳಂತೆ ಅವಳ ಬದುಕಿನ ಗುಣಮಟ್ಟದಂತೆ ಇರುತ್ತಾನೆ. ಬೋರಿಸ್ ಒಂಥರಾ "ಇದ್ದದ್ದು ಇದ್ದಹಾಗೆ ಹೇಳುವವನು ಅಥವಾ ಬಾಯಿಯೇ ತೆರೆಯದೆ ಮೌನವಾಗಿದ್ದು ಬಿಡುವವನು". ಒಂಬತ್ತನೇ ಕಂತಿನ ಪ್ರಕಾರ ಬೋರಿಸ್ ಮೈಖೇಲ್ ಜೊತೆ ಸಂಪರ್ಕದಲ್ಲಿ ಇದ್ದ ಹಾಗೆ ಕಾಣುತ್ತದೆ ಯಾಕೆಂದರೆ ಸ್ವಲ್ಪ ದಿನ ಮೈಖೇಲ್ ಜೊತೆ ಸಂಗೀತದ ತಂಡದಲ್ಲಿ ಇದ್ದ ಆದುದರಿಂದಲ್ಲೇ ಇರಬೇಕು ಆತ ಮಿಯಾಳಿಗೆ ಮೈಖೇಲ್‌ನ ಇ-ಮೇಲ್‌ಗಳಿಗೆ ಉತ್ತರಿಸಲು ಅಂಗಲಾಚುತ್ತಾನೆ. ಇದರಿಂದ ಮಿಯಾ ಮೈಖೇಲ್ ಅನ್ನು ಮರೆತ್ತಿಲ್ಲ ಎಂದಾಗುತ್ತದೆ ಎನ್ನುತ್ತಾನೆ.
  • ಜೋಶ್ ರಿಚ್ಟರ್ : ಮೊದಲ ಐದು ಪುಸ್ತಕದ ಪ್ರಕಾರ ಆಲ್ಬರ್ಟ್ ಏಯ್ನ್‌ಸ್ಟೇಯ್ನ್ ಅತ್ಯಂತ ಹಿರಿಯ ಜನಪ್ರಿಯ ವ್ಯಕ್ತಿ. ಈತ ಲಾನಾ ವೇಯ್ನ್‌ಬರ್ಗರ್ ಜೊತೆ ಡೇಟಿಂಗ್ ಮಾಡುತ್ತಿದ್ದಾಗ ಮಿಯಾಳಿಗೆ ಈತನ ಮೇಲೆ ಅತ್ಯಂತ ವ್ಯಾಮೋಹವಿತ್ತು. ಸಮಾರೋಪ ಭಾಷಣತಂಡದಲ್ಲಿ ಒಬ್ಬನಾಗಿ ಸಹವರ್ತಿಯಾಗಿದ್ದ. ಮಿಯಾ ಇವನನ್ನು ಶಾಲೆಯಲ್ಲೇ ತುಂಬ ಆಕರ್ಷಕ ಹುಡುಗ ಎಂದು ಒಮ್ಮೆ ವರ್ಣಿಸಿದ್ದಳು ; ಅವನು ತುಂಬಾ ಉದ್ದಕ್ಕಿದ್ದಾನೆ ಮತ್ತು ಉತ್ತಮ ಸ್ನಾಯಗಳುಳ್ಳವನಾಗಿದ್ದಾನೆ ಮತ್ತು ಅವನ ನೀಲಿ ಕಣ್ಣುಗಳು ವಿದ್ಯುತ್‌ನಂತೆ ಇದೆ ಎಂದು ವರ್ಣಿಸಿದ್ದಾಳೆ. ಮೊದಲ ಪುಸ್ತಕದ ಕೊನೆಯಲ್ಲಿ ಜೋಶ್ ರಿಚ್ಟರ್ ಮಿಯಾಳನ್ನು ಕಲ್ಚರಲ್ ಡೈವರ್ಸಿಟಿ ಡ್ಯಾನ್ಸ್‌ಗೆ ಕರೆದುಕೊಂಡು ಹೋಗುತ್ತಾನೆ ಮತ್ತು ಶಾಲೆಯ ಪ್ರವೇಶದ್ವಾರದ ಬಳಿ ಮೆಟ್ಟಿಲಿನ ಮೇಲೆ ಅವಳನ್ನು ಚುಂಬಿಸುತ್ತಾನೆ. ಮೀಡಿಯಾದೊಳಗೆ ಮಿಂಚಲು ಅವನು ತನ್ನನ್ನು ಬಳಸಿಕೊಂಡಿದ್ದಾನೆ ಎಂದು ಗೊತ್ತಾದೊಡನೆ ಮಿಯಾ ಅವನನ್ನು ತಿರಸ್ಕರಿಸಲಾರಂಭಿಸಿದಳು ಮತ್ತು ಅವನಿಂದ ತಪ್ಪಿಸಿಕೊಳ್ಳಲಾರಂಭಿಸಿದಳು ಆದರೆ ಅದರಲ್ಲಿ ಸಂಪೂರ್ಣವಾಗಿ ಯಶಸ್ಸಾಗುತ್ತಿರಲಿಲ್ಲ ಯಾಕೆಂದರೆ ಅವರಿಬ್ಬರ ಲಾಕರ್‌ಗಳು ಪಕ್ಕ-ಪಕ್ಕದಲ್ಲಿದ್ದವು.
  • ಲಾನಾ ವೇಯ್ನ್‌ಬರ್ಗರ್ : ಇವಳು ಅತ್ಯಂತ ಜನಪ್ರಿಯ ಕಿರಿಯ ಚೀಯರ್ ಲೀಡರ್ ಇವಳಿಗೆ ಉದ್ದನೆಯ ಹೊಂಬಣ್ಣದ ಕೂದಲುಗಳಿವೆ, ನಸು-ಹಳದಿಯ ಮೈ ಬಣ್ಣ, ಹಸುಳೆಗಳ ತರಹ ನೀಲಿ ಕಣ್ಣುಗಳು ಮತ್ತು ದೊಡ್ದ ಆಕಾರದ ಮೊಲೆಗಳು. ಕಾದಂಬರಿಯ ಕಂತುಗಳ ಆರಂಭದಿಂದ ಹಿಡಿದು ಐದು ಮತ್ತು ಆರನೆಯ ಪುಸ್ತಕಗಳ ಮಧ್ಯ ಬರುವುದರ ಪ್ರಕಾರ ಬೇಸಿಗೆಯವರೆಗೂ ಜೋಶ್ ರಿಚ್ಟರ್ ಜೊತೆ ಡೇಟಿಂಗ್ ಮಾಡುತ್ತಾಳೆ,ಅವನ ಕಾಲೇಜಿಗೂ ಇವಳಿಗೂ ನಾಲ್ಕು ಮೈಲಿ ಅಂತರವಿರುವುದರಿಂದ ಅವರು ದೂರವಾಗಿಬಿಡುತ್ತಾರೆ. ಲಾನಾನ ಕಿರಿಯ ಸಹೋದರಿ, ಗ್ರೇಟ್ಚನ್, ಸಂಪುಟ ಎಂಟರವರೆಗೂ AEHSನಲ್ಲಿ ಪ್ರಾರಂಭವಾಗುತ್ತದೆ ಮತ್ತು ಲಾನಾನ ವ್ಯಕ್ತಿತ್ವದಂತಯೇ ಇವಳ ವ್ಯಕ್ತಿತ್ವವೂ ಇರುತ್ತದೆ. ಒಂಬತ್ತನೆಯ ಕಾದಂಬರಿಯವರೆಗೂ ಲಾನಾಗೆ ಮಿಯಾ ಮೇಲೆ ಸೇಡಿನಿಂದ ಕೂಡಿದ ಮನೋಭಾವವಿತ್ತು, ಆದರೆ ಮಿಯಾಳ ತಂಡದಲ್ಲಿ ಲಿಲ್ಲಿ ಇನ್ನು ಮುಂದೆ ಇಲ್ಲವೆಂದಾದ ಮೇಲೆ ಲಾನಾ ಸ್ನೇಹದ ದೊಡ್ಡ ಪಾಲನ್ನೇ ಮಿಯಾಳಿಗೆ ಕೊಡಬಯಸುತ್ತಾಳೆ. ಸ್ವಲ್ಪ ಒಡ್ಡೊಡ್ಡಾಗಿದ್ದರೂ ಮಿಯಾ ಮತ್ತು ಲಾನಾ ಉತ್ತಮ ಗೆಳೆಯರಾದರು.
  • ಶಮೀಕಾ ಟೇಯ್ಲರ್ : ಮಿಯಾಳ ಗೆಳೆಯರಲ್ಲಿ ಇವಳೂ ಒಬ್ಬಳು ಮತ್ತು ಇವಳಿಗೊಬ್ಬಳು ಅತೀ ರಕ್ಷಿಸುವ ತಂದೆಯಿದ್ದಾನೆ. ಇವಳು ಚೀಯರ್‌ಲೀಡಿಂಗ್ ತಂಡವನ್ನು ಸೇರಿದ ಮೇಲೆ ಲಾನಾ ಹೇಳುತ್ತಾಳೆ ಆಫ್ರೀಕನ್ ಅಮೇರಿಕನ್ ಶಮೀಕಾ ಈ ತಂಡದ ಅಸಹಜ ಸ್ವಭಾವದ ಒಂದು ಪಾಲು" ಎನ್ನುತ್ತಾಳೆ. ಆದಾಗ್ಯೂ ಶಮೀಕಾ ಜನಪ್ರಿಯಳಾಗುತ್ತಾಳೆ, ಏಳು ಮತ್ತು ಎಂಟನೇ ಕಂತಿನ ಪ್ರಕಾರ ಅವಳು ಮಿಯಾಳ ತಂಡವನ್ನು ತ್ಯಜಿಸಿರುವುದಾಗಿ ಸ್ಪಷ್ಟವಾಗುತ್ತದೆ ಆದರೆ ಗೆಳೆತನ ಬಿಟ್ಟಿರುವುದಿಲ್ಲ ಆದರೆ ಒಂಬತ್ತರ ಪುಸ್ತಕದಲ್ಲಿ ಲಾನಾ ಮತ್ತು ತೃಷಾ ಸ್ನೇಹಿತರಾದಾಗ ಮರಳಿ ಬಂದಿರುತ್ತಾಳೆ.
  • ಲಿಂಗ್ ಸು ವೋಂಗ್ : ಇವಳೊಬ್ಬ ಏಷಿಯಾ ಅಮೇರಿಕಾ ಕಲಾವಿದೆ ಮಿಯಾಳ ಗೆಳತಿ, ಇವಳು ಅಸ್ಪಷ್ಟವಾದ, ಓದಲಾಗದ ಶಾಸನಗಳ ಬರವಣಿಗೆಯ ಕಲಾವಿದೆ. ಮಿಯಾಳ ಪ್ರಕಾರ ಇವಳು ಬಹಳ ಸುಂದರಿ ಇದನ್ನು ಮೊದಲ ಪುಸ್ತಕದಲ್ಲೇ ಸುಮಾರು ಏಳು ಸಾರಿ ಕೇಳಿರುತ್ತಾಳೆ. ಮಿಯಾಳಿಂದ ಬೇರೆಯಾಗುವವರೆಗೂ ಪುಸ್ತಕ ಏಳರ ಪ್ರಕಾರ ಸರಕಾರಿ ಶಾಲೆಯಲ್ಲಿ ಖಜಾಂಚಿಯಾಗಿರುತ್ತಾಳೆ. ಇಡೀ ತಂಡದಲ್ಲಿ, ಲಿಂಗ್ ಸು ಪೆರಿನ್ ಥಾಮಸ್‌ಗೆ ಬಹಳ ಸನಿಹದ ಗೆಳತಿಯಾಗಿರುತ್ತಾಳೆ.
  • ಇಟಾಲಿಯ ರಾಜಕುಮಾರ ರೆನಿ :ಇವನು ಮಿಯಾಳ ಸಂಬಂದ್ಧಿ, ನಾಲ್ಕನೆಯ ಕಂತಿನ ಕಾದಂಬರಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾನೆ. ಕ್ಲಾರೀಸ್ ಇವರಿಬ್ಬರನ್ನು ಗಂಟು ಹಾಕಲು ನೋಡುತ್ತಾನೆ ಆದರೆ ಉಭಯತ್ರರಿಗೂ ಇಷ್ಟವಿಲ್ಲದಿರುವುದರಿಂದ ಈ ಪ್ರಯತ್ನ ಯಶಸ್ಸಾಗುವುದಿಲ್ಲ. ರೆನಿಯನ್ನು ವಿಪರೀತ ಸುಂದರ ಎಂದು ವರ್ಣಿಸಲಾಗಿದೆ; ಮಿಯಾಳು ಗಮನಿಸಿದಂತೆ ಅವನಿಗೆ "ಮನಸ್ಸಿಗೆ ನಾಟುವಂಥ" ಬಲಿಷ್ಟ ಮೈಕಟ್ಟು, ಕಟ್ಟು ಮಸ್ತು ಎದೆ, ಉತ್ತಮ ಹೊಟ್ಟೆ ಭಾಗ (ಸಿಕ್ಸ್ ಪ್ಯಾಕ್) ಇದೆ ಹಾಗೂ ಸಮುದ್ರತೀರದಲ್ಲಿ ಧರಿಸಲು ಇಷ್ಟ ಪಡುವ ಸಣ್ಣ ಸ್ಪೀಡೋಸ್‌ನಿಂದ ಅದು ಇನ್ನೂ ಎದ್ದು ಕಾಣುತ್ತದೆ. ಇವನ ಸಾಹಸಕೃತ್ಯಗಳಲ್ಲಿ, ಸರಕಾರಿ ಅಧಿಕಾರಿಯೊಬ್ಬನ ಪತ್ನಿಯ ಜೊತೆ ಸ್ಟ್ರಿಪ್-ಟೆನ್ನಿಸ್ ಆಡುವುದು, ಲಿಲ್ಲಿ ಮತ್ತು ಇತರ ರಾಜವಂಶದವರೊಡನೆ ಸ್ಟ್ರಿಪ್ ಬೋಲಿಂಗ್ ಆಡುವುದು, ಮೇಲಿನ ಉಡುಪಿಲ್ಲದೆ ಪೂಲ್‌ಹೌಸ್‌ಗಳಲ್ಲಿ ಸೂರ್ಯಸ್ತಾನ ಮಾಡುವವರನ್ನು ರಂಜಿಸುವುದು, ಪ್ರಧಾನ ಮಂತ್ರಿಯ ಹದಿನೆಂಟು ವರ್ಷದ ಮಗಳೊಡನೆ ಆಗಾಗ ಕಣ್ಮರೆಯಾಗುವುದು ಮತ್ತು ಅರಮನೆಯ ಆಡಳಿತದ ಕಛೇರಿಯಲ್ಲಿ ತನ್ನ ಕೆಳಗಿನ ಭಾಗವನ್ನು ಫೋಟೋಕಾಪಿ ಮಾಡಿಕೊಳ್ಳುವುದು ಸೇರಿರುತ್ತದೆ. ಒಬ್ಬ ಶೂ ವಿನ್ಯಾಸಕ ರೆನಿಯ ಪೂರ್ವಜರ ಅರಮನೆಯನ್ನು ಕೊಂಡುಕೊಂಡ ಮೇಲೆ ಇವನು ಪದಚ್ಯುತಗೊಂಡ ಮತ್ತು ಪ್ಯಾಲಿಯಸ್ ಡಿ ಜಿನೋವಿಯಾದಲ್ಲಿ ವಾಸಿಸಲಾರಂಭಿಸಿದ. ಒಂಬತ್ತನೇಯ ಕಂತಿನ ಪ್ರಕಾರ ರೆನಿ ಕಂಟೆಸ್ಸಾದ ಟ್ರೆವಾನ್ನಿಯ ಸೋದರ ಸೊಸೆ ಬೆಲ್ಲಾಳನ್ನು ಗರ್ಭಿಣಿ ಮಾಡಿದ ಮತ್ತು ಅವರಿಬ್ಬರು ತಕ್ಷಣವೇ ಮದುವೆಯಾದರು ; ಆದಾಗ್ಯೂ, ಅವರ ಸುತ್ತ-ಮುತ್ತಣ ಪರಿಸರ ಅವರಿಗೆ ಅಷ್ಟೇನೂ ಅನುಕೂಲಕರವಾಗಿರಲಿಲ್ಲ ಆದರೂ ಅವರ ಸಾಂಸಾರಿಕ ಜೀವನ ಮಾತ್ರ ಸಂತೋಷವಾಗಿತ್ತು. ಹತ್ತನೆಯ ಪುಸ್ತಕದ ಪ್ರಕಾರ ಮಿಯಾಳ ತಂದೆಯ ವಿರುದ್ಧ ಜಿನೋವಿಯಾದ ಪ್ರಧಾನ ಮಂತ್ರಿಯ ಪಟ್ಟಕ್ಕೆ ಸ್ಪರ್ಧಿಸಿದ್ದ.
  • "ಮಾಮಾವ್" ಶಿರ್ಲೇ ಥರ್ಮಾಪಾಲಿಸ್ ಮತ್ತು "ಪಾಪಾವ್" ಥರ್ಮಾಪಾಲಿಸ್ : ಇಂಡಿಯಾನದಿಂದ ಹೆಲೆನಳ ತಂದೆ-ತಾಯಿ,ಇವರಿಬ್ಬರ ಜೊತೆ ಹಗೆ ಸಾಧಿಸುತ್ತಾಳೆ. ಆದಾಗ್ಯೂ ಅವರು ಒಬ್ಬರಿಗೊಬ್ಬರು ಭೇಟಿ ಮತ್ತು ಸಂಪರ್ಕದಲ್ಲಿರುತ್ತಾರೆ ಮತ್ತು ಎರಡನೆಯ ಕಾದಂಬರಿಯಲ್ಲಿ ಅಮೇರಿಕಾದ ಜೀವನಶೈಲಿಯನ್ನು ಸುಸ್ಪಷ್ಟವಾಗಿ ರೂಢಿಗತ ಮಾಡಿಕೊಂಡಿರುವುದು ಕಂಡು ಬರುತ್ತದೆ. ಮಿಯಾ ಮತ್ತು ಅವಳ ಧಾರಳತನವನ್ನು ಹೆಲೆನ್ ತಂದೆ ತಾಯಿ ತಿರಸ್ಕರಿಸುವುದರಿಂದ ಅವರನ್ನು ಆದಷ್ಟು ಕಡಿಮೆ ಭೇಟಿಯಾಗುತ್ತಾಳೆ. ಥರ್ಮಾಪಾಲಿಸ್ ತಂದೆ-ತಾಯಿಗಳು ಇಂಡಿಯಾನದ ವರ್ಸೈಲೆಸ್‌ನಲ್ಲಿ ಹಾರ್ಡ್‌ವೇರ್ ಅಂಗಡಿಯೊಂದನ್ನು ನಡೆಸುತ್ತಿರುತ್ತಾರೆ.
  • ಹ್ಯಾಂಕ್ ಥರ್ಮಾಪಾಲಿಸ್ : ಇವನು ಮಿಯಾಳ ನಂಟ ಮತ್ತು ಹೆಲೆನಳ ಸಹೋದರಿಯ ಮಗ, (ಇವನನ್ನು ಕಂಡರೆ ಹೆಲೆನಳಿಗೂ ಅಷ್ಟಕ್ಕಷ್ಟೇ ಕಾರಣ ಹೆಲೆನ್ ರಿಪಬ್ಲಿಕನ್ ಪಕ್ಷದವಳು) ಇವನು ತನ್ನ ಅನೇಕ ಸಮಯವನ್ನು ಇಂಡಿಯಾನದಲ್ಲಿ ತಾತ-ಅಜ್ಜಿಯ ಸಂಗದಲ್ಲಿ ಕಳೆಯುತ್ತಾನೆ. ಅವರು ಹೆಲೆನ್ ಮತ್ತು ಮಿಯಾಳನ್ನು ಒಮ್ಮೆ ನೋಡಲು ಬಂದಾಗ, (ಇವನು ಮಿಯಾಳಿಗೆ ಸೋದರ ಸಂಬಂದ್ಧಿಯಾಗಬೇಕಾಗಿರುವುದರಿಂದ ಮಿಯಾ ಇವನನ್ನು ಅಷ್ಟೊಂದು ಗಮನಿಸುವುದಿಲ್ಲ) ಆದರೆ ಇವನು ಲಿಲ್ಲಿಯ ಜೊತೆ ತಾನು ರೂಪದರ್ಶಿಯಾಗಬೇಕೆನ್ನುವ ತನ್ನ ಆಸೆಯನ್ನು ವ್ಯಕ್ತಪಡಿಸಿದಾಗ ಲಿಲ್ಲಿ ಅದನ್ನು ಏರ್ಪಡಿಸುತ್ತಾಳೆ, ಅದರಿಂದಾಗಿ ಕಾಲ್ವಿನ್ ಕ್ಲೇಯ್ನ್ ಜೊತೆ ಒಪ್ಪಂದವಾಗುತ್ತದೆ. ಅಲ್ಲಿಂದಾಚೆ ಅವನು ನ್ಯೂಯಾರ್ಕ್‌ನಲ್ಲಿ ನೆಲೆಸುತ್ತಾನೆ ಮತ್ತು ಪ್ರಸಿದ್ಧ ಒಳ ಉಡುಪುಗಳ ರೂಪದರ್ಶಿಯಾಗುತ್ತಾನೆ.
  • ಕೆನ್ನೆಥ್ "ಕೆನ್ನಿ" ಶೋವಾಲ್ಟರ್ : ಮಿಯಾಳ ಗೆಳೆಯ. ಈ ಕೆನ್ನಿ ಜೀವವಿಜ್ಞಾನ ಶಾಸ್ತ್ರ ಮತ್ತು ರಸಾಯನ ವಿಜ್ಞಾನದಲ್ಲಿ ಬಹಳ ಬುದ್ಧಿವಂತನಾಗಿರುತ್ತಾನೆ ಮತ್ತು ಇವನು ಅನಿಮೆಯ ಅಭಿಮಾನಿ. ಇವನು ದೊಡ್ದವನಾದ ಮೇಲೆ ಕ್ಯಾನ್ಸರ್ ಖಾಯಿಲೆ ಗುಣಪಡಿಸುವ ಔಷಧವನ್ನು ಕಂಡು ಹಿಡಿಯಬೇಕೆಂದು ಅಪೇಕ್ಷಿಸುತ್ತಾನೆ. ಮಿಯಾ ಮತ್ತು ಇವನು ಬೇರೆಯಾದಮೇಲೂ ಮಿಯಾಳ ಬಗ್ಗೆ ಇವನಿಗೆ ಪ್ರಣಯದ ಬಯಕೆಯಿರುವುದು ಕಂಡು ಬರುತ್ತದೆ. ಆರನೇಯ ಪುಸ್ತಕದಲ್ಲಿ ತನಗೊಂದು "ಸಂಪೂರ್ಣ"ವಾದ ಗೆಳತಿ ಇದ್ದಾಳೆ ಅವಳ ಹೆಸರು ಹೀಥರ್ ಎಂದಿರುತ್ತಾನೆ ನಂತರ ಅದು ಕೇವಲ ತಾನು ಮಿಯಾಳನ್ನು ಅಸೂಯೆ ಪಡಿಸುವುದಕ್ಕಾಗಿ ಸೃಷ್ಟಿಸಿದ್ದು ಎಂದು ಒಪ್ಪಿಕೊಳ್ಳುತ್ತಾನೆ. ನಂತರ ಕೆನ್ನಿ, ಲಿಲ್ಲಿಯ ಜೊತೆ ಸೂಕ್ತವಾಗಿ ಪ್ರತಿಫಲವನ್ನು ಹಂಚಿಕೊಳ್ಳುವ ಉತ್ತಮ ಬಾಂಧವ್ಯವನ್ನು ಹೊಂದುತ್ತಾನೆ ಮತ್ತು ಮಿಯಾಳಿಗಿಂತ ಲಿಲ್ಲಿ ಇವನಿಗೆ ಸರಿಕಾಣುತ್ತಾಳೆ.
  • ಪೆರಿನ್ ಥಾಮಸ್ : AEHSನಲ್ಲಿ ಇವನೊಬ್ಬ ವಿದ್ಯಾರ್ಥಿ, ಮೊದಲಿಗೆ ಪೆರಿನ್ ಗಂಡೋ ಹೆಣೋ ಎಂದು ಮಿಯಾಳಿಗೆ ಗುರುತಿಸುವುದು ಕಷ್ಟವಾಗಿತ್ತು. ಅವಳು ಹೆಣ್ಣು ಅಂತಾಗಿ ಕೊನೆಗೆ ಮಿಯಾಳಿಗೆ ಉತ್ತಮ ಗೆಳತಿಯಾದಳು. ಗ್ರ್ಯಾಂಡ್‌ಮಿರೆ ಸಂಗೀತ ಶಾಲೆಯಲ್ಲಿ ಇವಳನ್ನು ಗಂಡು ಎಂದುಕೊಂಡು ಗಂಡಿನ ಪಾತ್ರವನ್ನು ಕೊಡಲಾಗಿತ್ತು.
  • ತ್ರಿಶಾ ಹೇಯ್ಸ್ : ಇವಳನ್ನು ತ್ರಿಶ್ ಎಂದೂ ಕರೆಯಲಾಗುತ್ತದೆ; ಮಿಯಾಳನ್ನು ಭೀತಗೊಳಿಸುವುದಕ್ಕೆ ಸಹಾಯಮಾಡಿದವಳು ಆನಂತರ ಲಾನಾನ ವಿಲಕ್ಷಣ ಅನಿಸಿಕೆಯ ಮೇರೆಗೆ ಗೆಳೆಯರಾದರು.
  • ಜುಡಿಥ್ ಗರ್ಷನರ್ : ಮೈಖೇಲ್‌ನ ಗೆಳತಿ, ಇವಳಲ್ಲಿ ಮೈಖೇಲ್‌ಗೆ ಪ್ರಣಯ ಭಾವನೆಯಿದೆ ಎಂದು ಮಿಯಾಳಿಗೆ ಅನುಮಾನ. ಎಂಟನೆಯ ಪುಸ್ತಕದ ಕೊನೆಯಲ್ಲಿ ಇವಳೇ ಮಿಯಾ ಮತ್ತು ಮೈಖೇಲ್ ಬೇರೆಯಾಗುವುದಕ್ಕೆ ಕಾರಣಳಾಗುತ್ತಾಳೆ. ಯಾಕೆಂದರೆ ಇವಳು, ದೈಹಿಕವಾಗಿ ಸಂಭೋಗವನ್ನರಿಯದ ಮೈಖೇಲ್‌ ಅನ್ನು ಆ ಅರಿವು ಕೊಟ್ಟು ಆ ಪ್ರಥಮ ಅವಕಾಶವನ್ನು ತನ್ನಿಂದ ಕಿತ್ತುಕೊಂಡಳೆಂದು ಮತ್ತು ಮೈಖೇಲ್ ಇದನ್ನು ತನಗೆ ತಿಳಿಸಿದೆ ಮೋಸಮಾಡಿದ್ದಾನೆ ಎಂದು ಮಿಯಾಳು ಆರೋಪಿಸಿ ದೂರವಾಗುತ್ತಾಳೆ. ಇವಳು ಆಬೀಜಸಂತಾನದ ಪ್ರಕ್ರಿಯೆಯಲ್ಲಿ ಫ್ರೂಟ್ ಫ್ಲೈಸ್ ಮಾಡುವುದರಲ್ಲಿ ಪ್ರಸಿದ್ಧಳು.
  • ಕರೇನ್ ಮಾರ್ಟಿನೆಜ್ : ಇವರು ಇಂಗ್ಲೀಷ್ ಶಿಕ್ಷಕರು ಇವರು ಮಿಯಾಳನ್ನು ಅವಳ ಬರವಣಿಗೆಯನ್ನು ಯಾವಾಗಲೂ ವಿಮರ್ಶಿಸುತ್ತಿರುತ್ತಾರೆ ಬಹುಶ: ವೈಯಕ್ತಿಕವಾಗಿ ಕಾಳಜಿ ವಹಿಸಿವುದಕ್ಕೆ ಇದೊಂದು ನೆಪವೂ ಆಗಿರಬಹುದು. ಟೀನಾ ಇವಳು ತುಂಬಾ ಸುಂದರಿ ಎಂದು ಭಾವಿಸಿದ್ದಾಳೆ ಅದಕ್ಕೆಂದೇ ಇವಳನ್ನು ಮ್ಯಾಗೀ ಗಿಲೆನ್‌ಹಾಲ್ ಗೆ ಹೋಲಿಸಿ ಮತ್ತು ಆಗಾಗೆ ಅವಳ ಬಟ್ಟೆಗಳ ಬಗ್ಗೆ ವ್ಯಾಖ್ಯಾನಿಸುತ್ತಿರುತ್ತಾಳೆ. ಅಂತಿಮವಾಗಿ, ಕೊನೆ ಪುಸ್ತಕ ಫಾರೆವರ್ ರಾಜಕುಮಾರಿನಲ್ಲಿ, ಮಿಯಾಳ ತಂದೆ ಪ್ರಿನ್ಸ್ ಫಿಲೀಪ್‌ಗೂ ಮತ್ತು ಮಾರ್ಟಿನೆಜ್‌ಗೂ ಭವಿಷ್ಯತ್ತಿನಲ್ಲಿ ಸಂಬಂದ್ಧ ಏರ್ಪಡುವ ಭರವಸೆ ಸೂಚಿಸುತ್ತದೆ.
  • ರಾಕಿ ಥರ್ಮಾಪಾಲಿಸ್-ಗಿಯಾನಿನಿ : ಮಿಯಾಳ ಮಲ-ತಮ್ಮ ; ಅವಳ ತಾಯಿ ಹೆಲೆನ್ ಮತ್ತು ಬೀಜಗಣಿತದ ಶಿಕ್ಷಕ ಗಿಯಾನಿನಿಯವರ ಮಗ. ಇವನ ಬಗ್ಗೆ ಮಿಯಾಗೆ ನಂಬಲಸಾಧ್ಯವಾದಷ್ಟು ಕಾಳಜಿ, ಕೆಲವೊಮ್ಮೆ ಹೆಲೆನ್‌ಗೆ ಇದು ಕಿರಿಕಿರಿಯ ವಿಷಯ, ತನಗೆ ಮಗನನ್ನು ಸಾಕಲು ಬರುವುದಿಲ್ಲವೆ ತಾನು ಅಸಮರ್ಥಳೇ ಎಂಬುದು ಅವಳ ಪ್ರಶ್ನೆ. ಲಿಲ್ಲಿಯು ಕೂಡ ಮಿಯಾಳು ತನ್ನ ಮಲ ತಮ್ಮನ ಬಗ್ಗೆ ಅತಿಯಾದ ಕಾಳಜಿವಹಿಸುತ್ತಾಳೆ ಎಂದೇ ಭಾವನೆ ಆರನೇ ಪುಸ್ತಕದಲ್ಲಿ ಇದರ ಬಗ್ಗೆ ಮಿಯಾಳನ್ನು ಅಣಕಿಸುತ್ತ ಬೇಬಿ-ಲಿಕ್ಕರ್ ಎನ್ನುತ್ತಿರುತ್ತಾಳೆ.
  • ಸೆಬಾಸ್ಟಿಯಾನೊ ಗ್ರಿಮಾಳ್ಡಿ : ಮಿಯಾಳ ಎರಡನೆಯ ಸಾಲಿನ ಸೋದರ ಸಂಬಂದ್ಧಿ, ಜಿನೋವಿಯಾದ ಪಟ್ಟಾಭಿಷೇಕಕ್ಕೆ ಅರ್ಹ ಸಾಲಿನವನು. ಅವನು ಪ್ರವರ್ಧಮಾನಕ್ಕೆ ಬರುತ್ತಿರುವ ವಸ್ತ್ರ ವಿನ್ಯಾಸಕ ಮತ್ತು ಅವನು ಮಿಯಾಳ ಗೌನನ್ನು ಕೂಡ ವಿನ್ಯಾಸಗೊಳಿಸಿದ್ದಾನೆ, ಮತ್ತು ಉಚ್ಚಾರ ಸಂಬಂದ್ಧಿ ತೊಂದರೆ ಇದೆ.(ಉದಾಹರಣೆಗೆ: "ಬಟ್ಟರ್ ಎನ್ನುವುದಕ್ಕೆ ಬಟ್ಟ್ ಎನ್ನುತ್ತಾನೆ")
  • ರುಥ್ ಮತ್ತು ಮಾರ್ಟಿ ಮಾಸ್ಕೋವಿಜ್ : ಮೈಖೇಲ್ ಮತ್ತು ಲಿಲ್ಲಿಯ ತಂದೆ-ತಾಯಿಗಳು. ಇವರಿಬ್ಬರೂ ಮನೋವಿಶ್ಲೇಷಕರು. ಏಳನೇ ಕಂತಿನ ಪುಸ್ತಕದಲ್ಲಿ ಬೇರ್ಪಡುತ್ತಾರೆ ಮತ್ತು ಎಂಟನೆಯದರಲ್ಲಿ ಮತ್ತೆ ಒಂದಾಗುತ್ತಾರೆ. ಏಳನೆಯ ಕಂತಿನ ಪುಸ್ತಕದ ಪ್ರಕಾರ ಅವರು ತಮ್ಮ ಬದುಕಿನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಮಕ್ಕಳ ಜೊತೆ ಸೂಕ್ಷ್ಮವಾದ ವಿಚಾರಗಳನ್ನು ಪ್ರಸ್ತಾಪಿಸಬೇಕಾದರೂ ಮನೋವಿಶ್ಲೇಷಿಸುತ್ತಾರೆ ಈ ಸ್ವಭಾವದಿಂದ ಲಿಲ್ಲಿಯ ಮೇಲೆ ಕೆಟ್ಟ ಪರಿಣಾಮ ಬೀರಿರುತ್ತದೆ. ತುಂಬಾ ಗ್ರಹಣಶಕ್ತಿಯುಳ್ಳ ಮೈಖೇಲ್ ಅವರ ಗಮನವನ್ನು ತಪ್ಪಿಸಿ ತನ್ನನ್ನು ತಾನೇ ನೋಡಿಕೊಂಡು ಬಿಡುತ್ತಾನೆ.

ಸಂಪುಟಗಳು ಬದಲಾಯಿಸಿ

ಚೆಲ್ಸೇಯ್ ಮ್ಯಾಕ್‌ಲಾರೆನ್ :

  • ಪ್ರಿನ್ಸೆಸ್ ಲೆಸನ್ಸ್ , ಮಾರ್ಚ್ 2003
  • ಪರ್ಫೆಕ್ಟ್ ಪ್ರಿನ್ಸೆಸ್ , ಮಾರ್ಚ್ 2004
  • ಹಾಲಿಡೇ ಪ್ರಿನ್ಸೆಸ್ , ನವೆಂಬರ್ 2005

ಅವ್ಯವಸ್ಥೆ ಬದಲಾಯಿಸಿ

ಏಪ್ರಿಲ್ 6, 2006ರಂದು, ಪಾರ್ಟಿ ಪ್ರಿನ್ಸೆಸ್ ಪುಸ್ತಕದ ಹಿಂಬದಿಯ ಪುಟದಲ್ಲಿ ತಪ್ಪೊಂದನ್ನು ಪ್ರಕಟಿಸಿದಳು. ನ್ಯೂ ಜೀಲ್ಯಾಂಡ್ ಆಂಡ್ ಆಸ್ಟ್ರೇಲಿಯಾದಲ್ಲಿ ಕ್ಯಾಬಟ್‌ನ ಚಿತ್ರದ ಬದಲಾಗಿ ಜಾರ್ಜಿಯಾ ಬಿಂಗ್ ನ ಚಿತ್ರವನ್ನು ಪ್ರಕಟಿಸಲಾಗಿತ್ತು. "ಚಿಂತಿಸಬೇಡಿ" ಎಂದಳು. ಜಾರ್ಜಿಯಾ ಬಿಂಗ್ ಫೋಟೋವನ್ನು ಹೊತ್ತಿದ್ದ ಪ್ರಿನ್ಸೆಸ್ ಡೈಯರೀಸ್ 7 ನ ಪ್ರತಿಗಳನ್ನು ಮಾರುಕಟ್ಟೆಗಳಿಂದ ಹಿಂದೆಗೆದು ಸರಿಯಾದ ಫೋಟೋ ಇರುವ ಪ್ರತಿಗಳನ್ನು ಇಡಲಾತು.

ಡೆಸೆಂಬರ್ 2006ರಲ್ಲಿ, ವ್ಯಾಲೆಂಟೈನ್ ಪ್ರಿನ್ಸೆಸ್ ಪುಸ್ತಕದ ಮುಖಪುಟದಲ್ಲಿ ಪ್ರಕಟವಾಗಿರುವ ಭಾವಾಂಶದಲ್ಲಿ ತಪ್ಪಾಗಿಬಿಟ್ಟಿದೆ ಎಂದು ಕ್ಯಾಬಟ್ ಪ್ರಕಟಿಸಿದಳು. ಮಿಯಾ ಹಳೆಯ ಡೈರಿಗಳನ್ನು ನೋಡುತ್ತಿರುವಂತೆ ನಿರೂಪಿಸಲಾಗಿದೆ, ಬೋರಿಸ್ ಮತ್ತು ಟೀನಾ ಡೇಟಿಂಗ್ ಮಾಡುತ್ತಿರಲಿಲ್ಲ ಬದಲಾಗಿ ಬೋರಿಸ್ ಮತ್ತು ಲಿಲ್ಲಿ ಮಾಡುತ್ತಿದ್ದರು. ಆದಾಗ್ಯೂ ಪುಸ್ತಕದ ಕವಾಟಿನ ಮೇಲೆ ಬೋರಿಸ್ ಮತ್ತು ಟೀನಾ ದಂಪತಿಗಳು ಎಂದಿದೆ. ಇದನ್ನು ಪ್ರಕಾಶಕ ಸಂಸ್ಥೆಯವರು ಸರಿಪಡಿಸುತ್ತಾರೆ ಎಂದು ಕ್ಯಾಬಟ್ ಪ್ರಕಟಿಸಿದಳು. ಟೀನಾ ಡೇವ್ ಜೊತೆ ಡೇಟಿಂಗ್ ಮಾಡುತ್ತಿದ್ದಳು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ಬದಲಾಯಿಸಿ

ರೂಪಾಂತರಗಳು ಬದಲಾಯಿಸಿ

2001 ಮತ್ತು 2004ರಲ್ಲಿ ಕ್ರಮವಾಗಿ ವಾಲ್ಟ್ ಡಿಸ್ನೀ ಪಿಕ್ಚರ್ಸ್ ರವರು ದಿ ಪ್ರಿನ್ಸೆಸ್ ಡೈರೀಸ್ ಮತ್ತು The Princess Diaries 2: Royal Engagement ಅನ್ನು ದೊಡ್ಡ ತೆರೆಯ ಮೇಲೆ ತಂದರು ಅದರಲ್ಲಿ ಅನ್ನೇ ಹ್ಯಾಥ್ವೇ ಮತ್ತು ಜೂಲೀ ಆಂಡ್ರೀವ್ಸ್ ನಟಿಸಿದ್ದಾರೆ. ಅನೇಕ ಸಂದರ್ಶನಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ಚಿತ್ರ ತಯಾರಕರನ್ನು ವಂದಿಸಿದ್ದಾಳೆ, ಈ ಚಿತ್ರ ತನ್ನ ಪುಸ್ತಕ ಅಧಿಕವಾಗಿ ಮಾರಾಟವಾಗುವುದಕ್ಕೆ ಕಾರಣವಾಯಿತು ಮತ್ತು ತಾನು ಇವತ್ತು ಏನು ಯಶಸ್ಸು ಸಾಧಿಸಿದ್ದೇನೆಯೋ ಅದಕ್ಕೆ ಬಹುಮಟ್ಟಿಗೆ ಇದೇ ಕಾರಣ ಎಂದು ಹೇಳಿದ್ದಾಳೆ.

ಮೇ 2006ರಲ್ಲಿ, 19 ವರ್ಷದ ಕಾವ್ಯ ವಿಶ್ವನಾಥನ್ ಎನ್ನುವ ಲೇಖಕಿ, ಕ್ಯಾಬಟ್‌ನ ಪ್ರಿನ್ಸೆಸ್ ಡೈರೀಸ್ ಮತ್ತು ಇನ್ನು ಅನೇಕ ಪುಸ್ತಕಗಳಿಂದ ಪ್ಯಾರಾಗಳನ್ನು ಎರವಲು ಪಡೆದು ತನ್ನ ಕಾದಂಬರಿ ಹೌ ಓಪಲ್ ಮೇಹ್ತಾ ಗಾಟ್ ಕಿಸ್ಡ್, ಗಾಟ್ ವೈಲ್ಡ್ ಮತ್ತು ಗಾಟ್ ಎ ಲೈಫ್ ಎನ್ನುವುದರಲ್ಲಿ ಬಳಸಿದ್ದಾಳೆ. ಆದರೆ ವಿಶ್ವನಾಥನ್ ಕಾದಂಬರಿಗಳನ್ನು ಷೆಲ್ಫ್‌ಗಳಿಂದ ಹಿಂದೆಗೆಯಲಾಯಿತು.[೧೦]

ಮೆಟಾ-ಉಲ್ಲೇಖಗಳು ಬದಲಾಯಿಸಿ

  • "ದಿ ಮೂವೀ"ಯ ಬಗ್ಗೆ ಅನೇಕ ಉಲ್ಲೇಖಗಳನ್ನು ಮಿಯಾ ಮಾಡಿದ್ದಾಳೆ, ಪುಸ್ತಕದಲ್ಲಿ ತನ್ನ ಬದುಕಿನ ಬಗ್ಗೆ ಮಾಡಿದ ಚಿತ್ರವಾಗಿದೆ. ನಿಜವಾದ ಚಿತ್ರಗಳಿಗೆ ಸಂಬಂಧಿಸಿದವನ್ನು ಉಲ್ಲೇಖಿಸುತ್ತಾಳೆ ಉದಾಹರಣೆಗೆ : ಅವಳ ಸತ್ತ ತಂದೆ, ಮತ್ತು ಮೈಖೇಲ್ ಜೊತೆ ಮುರಿದುಕೊಂಡದ್ದು (ಇದು ಘಟಿಸುತ್ತದೆ ಎಂದು ಎಂದೂ ಅಂದುಕೊಂಡಿರಲಿಲ್ಲ). ಕಡಿಮೆ ಮಟ್ಟದಲ್ಲಿ ಮತ್ತು ನೈಜವಲ್ಲದ ರೀತಿಯಲ್ಲಿ ತನ್ನನ್ನು ಚಿತ್ರೀಸಲಾಗಿದೆ ಎಂದು ದೂರಿದಳು, ಮತ್ತು ಟೀನಾ ಹಕೀಂ ಬಾಬಾಳನ್ನು ಅದರಲ್ಲಿ ಇರದ ಹಾಗೆ ನೋಡಿಕೊಳ್ಳಲಾಗಿತ್ತು ಕಾರಣ ಅವರ ಅಪ್ಪನ ಅತಿಯಾಗಿ ರಕ್ಷಿಸುವ ಬುದ್ಧಿಯಿಂದಾಗಿ ಅವರು ನಿಷೇಧಿಸಿಸಹುದೆಂದು ಕೈಬಿಡಲಾಗಿತ್ತು.
  • ಮಿಯಾ ಇನ್ನಿತ್ತರ ರಾಜಕುಮಾರಿ ಯ ಪುಸ್ತಕಗಳ ಬಗ್ಗೆ ಉಲ್ಲೇಖಿಸುತ್ತಾಳೆ : ನಾಲ್ಕನೆಯ ಪುಸ್ತಕದಲ್ಲಿ ಹೇಳಿರುವ ಪ್ರಕಾರ ಮೂರು ಅಥವಾ ನಾಲ್ಕು ಅನಧಿಕೃತ ಪುಸ್ತಕಗಳು ಇವೆ ಅದರಲ್ಲಿ ಒಂದು ಉತ್ತಮ ಮಾರಾಟದ ಪುಸ್ತಕವೆಂದು ಹೇಳಲಾಗಿದೆ. ಮೂಲ ದಿ ಪ್ರಿನ್ಸೆಸ್ ಡೈರೀಸ್ ಕಾದಂಬರಿಯೂ ಕೂಡ ಬೆಸ್ಟ್‌ಸೆಲ್ಲರ್ ಪಟ್ಟಿಯಲ್ಲಿ ಸೇರಿತು.
  • ಎಂಟನೆಯ ಕಾದಂಬರಿಯಲ್ಲಿ ಉಲ್ಲೇಖಿಸಿರುವ ಹಾಗೆ ಸಮಂಥಾ ಮಡಿಸನ್ ಮತ್ತು ಜೆಸ್ಸಿಕಾ ಮಾಸ್ಟ್ರಿಯಾನಿ ಎಂಬ ಇಬ್ಬರು ನಾಯಕಿಯರು ಮೆಗಾ ಕ್ಯಾಬಟ್‌ನ ಇತರ ಪುಸ್ತಕಗಳ ಕಥೆಯನ್ನು ತೆಗೆದು ನಿರ್ಮಿಸಿರುವ ಚಿತ್ರಗಳಲ್ಲಿ ನಟಿಸಿರುತ್ತಾರೆ (ಆಲ್-ಅಮೇರಿಕನ್ ಗರ್ಲ್ ಮತ್ತು 1-800-ವ್ಹೇರ್-ಆರ್-ಯೂ ಕ್ರಮವಾಗಿ).

ಇವನ್ನೂ ಗಮನಿಸಿ ಬದಲಾಯಿಸಿ

ಆಕರಗಳು ಬದಲಾಯಿಸಿ

ಅಡಿಟಿಪ್ಪಣಿಗಳು ಬದಲಾಯಿಸಿ

  1. ದಿ ಪ್ರಿನ್ಸೆಸ್ ಡೈರೀಸ್, ವಾಲ್ಯೂಂ I, ಮೆಗ್ ಕ್ಯಾಬಟ್
  2. "ಮೆಗ್ ಕ್ಯಾಬಟ್ FAQಗಳು". Archived from the original on 2006-12-10. Retrieved 2010-05-25.
  3. ೩.೦ ೩.೧ FAQಗಳು Archived 2006-12-10 ವೇಬ್ಯಾಕ್ ಮೆಷಿನ್ ನಲ್ಲಿ. ಮೆಗ್ ಕ್ಯಾಬಟ್ ವೆಬ್‌ಸೈಟ್.
  4. "ALA |2001 ಬೆಸ್ಟ್ ಬುಕ್ಸ್ ಫಾರ್ ಯಂಗ್ ಅಡಳ್ಟ್ಸ್"
  5. "ALA |2001 ಕ್ವಿಕ್ ಪಿಕ್ಸ್ ಫಾರ್ ರಿಲಕ್ಟಂಟ್ ಯಂಗ್ ಅಡಳ್ಟ್ ರೀಡರ್ಸ್"
  6. ""ದಿ ಪ್ರಿನ್ಸೆಸ್ ಡೈರೀಸ್, ವಾಲ್ಯೂಂ I"". Archived from the original on 2007-01-29. Retrieved 2010-05-25.
  7. ""ಯಂಗ್ ಅಡಳ್ಟ್ಸ್ ಚಾಯ್ಸಸ್ ಫಾರ್ 2002"" (PDF). Archived from the original (PDF) on 2013-12-15. Retrieved 2010-05-25.
  8. ""ವಾಲಂಟೀಯರ್ ಸ್ಟೇಟ್ ಬುಕ್ ಅವಾರ್ಡ್ ವಿನ್ನರ್ಸ್ 1978–ಪ್ರೆಸೆಂಟ್"". Archived from the original on 2006-06-22. Retrieved 2010-05-25.
  9. ""ಪಾಸ್ಟ್ ವಿನ್ನರ್ಸ್ ಆಫ್ ದಿ ಎವರ್‌ಗ್ರೀನ್ ಯಂಗ್ ಅಡಳ್ಟ್ ಬುಕ್ ಅವಾರ್ಡ್"". Archived from the original on 2006-10-02. Retrieved 2010-05-25.
  10. "‘ಓಪಲ್’ ಸಿಮಿಲ್ಲರ್ ಟು ಮೋರ್ ಬುಕ್ಸ್" Archived 2008-02-23 ವೇಬ್ಯಾಕ್ ಮೆಷಿನ್ ನಲ್ಲಿ., ಪಾರಸ್ ಡಿ. ಭಯಾನಿ ಆಂಡ್ ಡೇವಿಡ್ ಜೋವೂ, ದಿ ಹಾರ್ವರ್ಡ್ ಕ್ರಿಮ್ಸನ್, ಮೇ 2, 2006

ಬಾಹ್ಯ ಕೊಂಡಿಗಳು ಬದಲಾಯಿಸಿ

ಟೆಂಪ್ಲೇಟು:TPD