ರವಿ ಕುಮಾರ್ ದಹಿಯಾ ಒಬ್ಬ ಭಾರತೀಯ ಕುಸ್ತಿಪಟು, 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 57 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತರು[೧] ಹಾಗೂ 2019 ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ರಲ್ಲಿ ಕಂಚಿನ ಪದಕ ಮತ್ತು ಎರಡು ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದಾರೆ.

ರವಿ ಕುಮಾರ್ ದಹಿಯಾ
ವೈಯುಕ್ತಿಕ ಮಾಹಿತಿ
ಜನನ (1997-12-12) ೧೨ ಡಿಸೆಂಬರ್ ೧೯೯೭ (ವಯಸ್ಸು ೨೬)
ನಾಹ್ರಿ, ಸೋನಿಪತ್, ಹರಿಯಾಣ, ಭಾರತ
ಎತ್ತರ5 ft 7 in (170 cm)
Sport
ದೇಶಭಾರತ
ಕ್ರೀಡೆಕುಸ್ತಿ
ಸ್ಪರ್ಧೆಗಳು(ಗಳು)57 kg

ಆರಂಭಿಕ ಜೀವನ ಬದಲಾಯಿಸಿ

ರವಿ ಕುಮಾರ್ ದಹಿಯಾರವರು 1997 ರಲ್ಲಿ ಜನಿಸಿದರು. ಹರಿಯಾಣದ ಸೋನಿಪತ್ ಜಿಲ್ಲೆಯ ನಹ್ರಿ ಗ್ರಾಮ ಅವರ ಜನ್ಮಸ್ಥಳ. 10 ನೇ ವಯಸ್ಸಿನಿಂದ, ದಹಿಯಾ ಉತ್ತರ ದೆಹಲಿಯ ಛತ್ರಸಲ್ ಕ್ರೀಡಾಂಗಣದಲ್ಲಿ ಸತ್ಪಾಲ್ ಸಿಂಗ್ ಅವರಿಂದ ತರಬೇತಿ ಪಡೆದರು. ಅವರ ತಂದೆ ರಾಕೇಶ್ ದಹಿಯಾ, ಸಣ್ಣ ಕೃಷಿಕರು.

ಉಲ್ಲೇಖಗಳು ಬದಲಾಯಿಸಿ