ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿ

ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಯು ಮನಃಶಾಸ್ತ್ರದ ಒಂದು ಸಿದ್ಧಾಂತ, ಇದನ್ನು ಅಬ್ರಹಾಂ ಮ್ಯಾಸ್ಲೊ ೧೯೪೩ರಲ್ಲಿ ತಮ್ಮ "ಅ ಥಿಯರಿ ಆಫ಼್ಹ ಹ್ಯುಮನ್ ಮೋಟಿವೇಶನ್" ಎಂಬ ಪತ್ರಿಕೆಯಲ್ಲಿ ಪ್ರಸ್ತಾಪಿಸಿದರು. ಮ್ಯಾಸ್ಲೊ ರವರು ತರುವಾಯ ತಮ್ಮ ಆಲೋಚನೆಗಳನ್ನು,ತಮ್ಮ ಭಾವನೆಗಳನ್ನು ಮಾನವನ ಜನಸಿದ್ಧಾಂತದ ಕುತುಹಲದ ವಿಕ್ಷಣೆಗೆ ನಿಸ್ತರಿಸಲಾಗುತ್ತದೆ. ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಯ ಸಿದ್ಧಾಂತ ಇನ್ನಿತರ ಮಾನವನ ಮನಃಶಾಸ್ತ್ರ ಬೆಳವಣಿಗೆಯ ಸಿದ್ಧಾಂತಗಳನ್ನು ಹೋಲುತ್ತದೆ. ಆ ಸಿದ್ಧಾಂತಗಳಲ್ಲಿ ಕೆಲವೊಂದು ಮಾನವನ ಅಭಿವೃದ್ಧಿಯ ಹಂತಗಳನ್ನು ವರ್ಣಿಸುತ್ತದೆ. ಮ್ಯಾಸ್ಲೊ ತನ್ನ ಸಿದ್ಧಾಂತದಲ್ಲಿ ಶಾರೀರಿಕ, ಸುರಕ್ಷತೆ, ಆತ್ಮೀಯತೆ, ಪ್ರೀತಿ, ಗೌರವ, ಸ್ವಯಂ-ವಾಸ್ಥವೀಕರಣ, ಸ್ವಯಂ-ಉತ್ಕೃಷ್ಟತೆ"ಯನ್ನು ಬಳಸಲಾಗಿದೆ.

ಅಗತ್ಯ ವರ್ಗಶ್ರೇಣಿ

ಮ್ಯಾಸ್ಲೊ ರವರು ಅಸ್ವಸ್ಥ ಅಥವಾ ನರರೋಗಿ ಜನರ ಬಗ್ಗೆ ಅಧ್ಯಯನ ಮಾಡುವ ಬದಲು ಅನುಕರಣೀಯ ವ್ಯಕ್ತಿಗಳ ಅಧ್ಯಯನವನ್ನು ಮಾಡುತ್ತಾರೆ.ಅವರಲ್ಲಿ ಕೆಲವರ ಹೆಸರು ಇಲ್ಲಿದೆ. ಅಲ್ಬರ್ಟ್ ಐನ್‍ಸ್ಟೈನ್, ಜೇನ್ ಆಡಮ್ಸ್, ಎಲೀನರ್ ರೊಸ್ಟೆಲ್ಟ್ ಮತ್ತು ಫ಼್ರೆಡೆರಿಕ್ ಡಗ್ಲಾಸ್. ದುರ್ಬಲ,ಗಿಡ್ಡಾದ, ಅಪಕ್ವ ಮತ್ತು ಅನಾರೋಗ್ಯಕರವಾದ ಸಂಶೋಧನೆಗಲನ್ನು ಮಾಡಿದರೆ ಅದರ ಪಲಿತಾಂಶವೂ ಹಾಗೆಯೇ ಇರಿತ್ತದೆ. ಮ್ಯಾಸ್ಲೊ ರವರು ಕಾಲೇಜೊಂದರಲ್ಲಿ ಶೇ.೧%ರಷ್ಟು ಜನಸಂಖ್ಯೆಯ ಆರೋಗ್ಯಕರ ವಿದ್ಯಾರ್ಥಿಗಳ ಅಧ್ಯಯನವನ್ನು ಮಾಡಿದ್ದಾರೆ. ಮ್ಯಾಸ್ಲೊ ರವರ ಸಿದ್ಧಾಂತವು "ಪ್ರೇರಣೆ ಮತ್ತು ವ್ಯಕ್ತಿತ್ವ" ಎಂಬ ಪುಸ್ತಕದ ಮೂಲಕ ೧೯೫೪ರಲ್ಲಿ ಸಂಪೂರ್ಣವಾಗಿ ವ್ಯಕ್ತಪಡಿಸಲಾಯಿತು. ಈ ಶೇಣಿಯು ಇಂದಿಗೂ ಬಹಳ ಪ್ರಸುದ್ಧಿಯಾಗಿದೆ.' ಸಮಾಜಶಾಸ್ತ್ರದ ಅಧ್ಯಯನ,ಆಡಳಿತ ತರಬೇತಿ, ಮಾಧ್ಯಮಿಕ ಮತ್ತು ಉನ್ನತ ಮನೋವಿಜ್ನಾನ ಸೂಚನೆಗಳಿಗೆ ಒಂದು ಚೌಕಟ್ಟನ್ನು ರೊಪಿಸಿದೆ. ಇದು ಅತ್ಯಂತ ಜನಪ್ರಿಯವಾಗಿಯೇ ಉಳಿದಿದೆ.[೧]

ಶ್ರೇಣಿ ವ್ಯವಸ್ಠೆ ಬದಲಾಯಿಸಿ

ಮ್ಯಾಸ್ಲೊರವರ ವರ್ಗಶ್ರೇಣಿಯು ಗೋಪುರಾಕೃತಿಯಲ್ಲಿ ಚಿತ್ರಿಸಲಾಗಿದೆ (ಪಿರಮಿಡ್).ಮೂಲಭುತ ಸೌಕರ್ಯ ಅಥವಾ ಅಗತ್ಯಗಳನ್ನು ಕೆಳ ಮಟ್ಟದಲ್ಲಿ ತೋರಿಸಿದರೆ ಸ್ವಯಂ-ವಾಸ್ತವೀಕರಣವನ್ನು ಮೇಲೆ ಭಾಗದಲ್ಲಿ ತೋರಿಸಲಾಗಿದೆ. ಮ್ಯಾಸ್ಲೊ ರವರು ಈ ಪೆರಮಿಡನ್ನು ತಮ್ಮ ಯಾವುದೇ ಬರವಣಿಗೆಯಲ್ಲಿ ಉಪಯೋಗಿಸಿಲ್ಲ ಆದರೆ ಇದು ಹಂತ ಹಂತವಾಗಿ ಬೆಳವಣಿಗೆಯನ್ನು ಕಂಡಹಾಗೆ ಅದೇ ನಿಜವಾಗಿ ಪ್ರತಿನಿಧಿಸುತ್ತಾ ಹೋಯಿತು.ಮ್ಯಾಸ್ಲೊ ರವರ ಪಿರಮಿಡ್ ಈ ಕೆಳಗಿನ ನಾಲ್ಕು ಪದರಗಳನ್ನು ವಿವರಿಸುತ್ತದೆ. ಅವು " ಅಗತ್ಯಗಳು,ಗೌರವ, ಗೆಳೆತನ ಮತ್ತು ಪ್ರೀತಿ,ರಕ್ಷಣೆ,ಸುಖಭೋಗಗಳು.ಮೂಲಭುತ ಅಗತ್ಯಗಳನ್ನು ಮಾನವನು ಪೂರೈಸಿಕೊಳ್ಳುವಲ್ಲಿ ಆತ ವಿಫಲನಾದರೆ ನಿರಾಸಕ್ತನಾಗುತ್ತಾನೆ,ಉದ್ವಿಗ್ನನಾಗುತ್ತಾನೆ.ಮೋದಲು ಜೀವನಾವಶ್ಯಕಗಳನ್ನು ಪೂರೈಸಬೇಕು ಅನಂತರ ಬೇರೆ ಎಲ್ಲಾ ವಿಚಾರಗಳು ಬರುತ್ತದೆ ಎಂಬುದನ್ನು ಈ ಸಿದ್ಧಾಂತ ಹೇಳುತ್ತದೆ.

ಸಾಮಾನ್ಯವಾಗಿ ಮಾನವನು ತನ್ನ ಅಗತ್ಯಕ್ಕಿಂತಲೂ ಮೀರಿ ಆಸೆ ಪಟ್ಟರೆ ಆತನ ಪ್ರೇರಣೆಯಲ್ಲಿ ವ್ಯತ್ಯಾಸಕಾಣುತ್ತದೆ.ಅವರು ಸುಧರಣೆಗಾಗಿ ಹೋರಾಡಬೇಕಾಗುತ್ತದೆ.ಮನುಷ್ಯನ ಮನಸ್ಸು ಹಾಗೂ ಮೆದುಳು ಸಂಕೀರ್ಣ ಅದು ಸಮಾನಾಂತರವಾಗಿ ಪ್ರಕ್ರಿಯಿಸುತ್ತದೆ.ಹಾಗಾಗಿ ಮ್ಯಾಸ್ಲೊ ರವರ ಶ್ರೇಣಿಯ ವಿವಿದ ಹಂತದ ವಿವಿದ ರೀತಿಯ ಪ್ರೇರಣೆಗಳು ಒಂದೇ ಬಾರಿ ಸಂಭವಿಸಬಹುದು. ಮ್ಯಾಸ್ಲೊ ರವರು ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ಅದರಿಂದ ಸಿಗುವ ತೃಪ್ತಿಯನ್ನು ಬಹಳ ಸ್ಪಷ್ಟವಾಗಿ ಈ ಮೂಲಕ ತಿಳಿಸಿದ್ದಾರೆ."ಸಾಪೇಕ್ಷ,ಸಾಮಾನ್ಯ ಎಂದು ಹೇಳಿದ್ದಾರೆ.ಮ್ಯಾಸ್ಲೊ ರವರು ಒಬ್ಬ ವ್ಯಕ್ತಿಯು ತನಗೆ ಅಗತ್ಯವಿರುವುದರ ಬಗ್ಗೆ ಯಾವಾಗಬೇಕಾದರು ಗಮನಹರಿಸುತ್ತಾನೆ ಎಂದು ಹೇಳುವುದರ ಬದಲು, ಕೆಲವು ಅಗತ್ಯಗಳು ಮಾನವ ಜೀವಿಯ ಮೇಲೆ ಪ್ರಭಾವ ಬೀರುತ್ತದೆ,ಅವನನ್ನು ಅದು ಆಳುತ್ತದೆ. ಹಾಗಾಗಿ ಮ್ಯಾಸ್ಲೊ ರವರು ವಿವಿಧ ರೀತಿಯ ಪ್ರೇರಣೆಗಳು ಮಾನವನ ಮನಸ್ಸಿಗೆ ಯಾವಾಗ ಬೇಕಾದರು ಬರಬಹುದು ಎಂದು ಹೇಳಿದ್ದಾರೆ. ಆದರೆ ಅವರು ಅಗತ್ಯಗಳನ್ನು ಗುರುತಿಸುವಲ್ಲಿ ಹೆಚ್ಚು ಗಮನ ಹರಿಸುತ್ತಾರೆ ಹಾಗೂ ಅದನ್ನು ಹೇಗೆ ಪೂರೈಸುವುದು ಎಂದು ಹೇಳಿದ್ದಾರೆ.

ಶಾರೀರಿಕ ಅಗತ್ಯಗಳು ಬದಲಾಯಿಸಿ

ಶಾರೀರಿಕ ಅಗತ್ಯಗಳು ಎಂದರೆ ಮಾನವನ ಬದುಕಿಗೆ,ಜೀವನಕ್ಕೆ ಬೇಕಾಗಿರುವ ಅಗತ್ಯಗಳು. ಈ ಅಗತ್ಯಗಳು ಪೂರೈಕೆಯಾಗದೆ ಇದ್ದಲ್ಲಿ ಮಾನವನ ದೇಹ ಸರಿಯಾಗಿ ಕೆಲಸ ಮಾಡುವುದಿಲ್ಲ ಮತ್ತು ಅಂತಿಮವಾಗಿ ಆ ದೇಹ ವಿಫಲವಾಗುತ್ತದೆ, ಹಾಗಾಗಿ ಶಾರೀರಿಕ ಅಗತ್ಯಗಳು ಬಹಳ ಮುಖ್ಯ ಹಾಗೂ ಪ್ರಮುಖ ಅಂಶ. ಅದನ್ನು ಮೂದಲು ಪೂರ್ಣಗೂಳಿಸಬೇಕು. ನೀರು, ಗಾಳಿ, ಆಹಾರ ಇವೇ ಮೂದಲಾದವುಗಳು ಮಾನವನ ಬದುಕಿಗೆ ಬೇಕಾದ ವಸ್ತುಗಳು. ಕೇವಲ ಮಾನವನಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಇದು ಬೇಕು. ಉಡುಪು ಹಾಗೂ ಆಶ್ರಯವು ಸಹ ಮಾನವನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

 
ಮ್ಯಾಸ್ಲೊರವರ ವರ್ಗ ಶ್ರೇಣಿ

ಸುರಕ್ಷತೆಯ ಅಗತ್ಯಗಳು ಬದಲಾಯಿಸಿ

ಮಾನವ ಜೀವಿಯು ಒಂದು ಬಾರಿ ತಮ್ಮ ಮೂಲ-ಭೂತಸೌಕರ್ಯಗಳನ್ನು ಪೂರೈಸಿಕೊಂಡಮೇಲೆ ಆತನನ್ನು ಸುರಕ್ಷತೆಯ ಅಗ್ತ್ಯಗಳು ಆಳುತ್ತವೆ. ಆತನ ಒಲವು ಸುರಕ್ಷತೆಯ ಮೇಲೆ ಬೇರುತ್ತದೆ. ಸುರಕ್ಷತೆಯ ಅನುಪಸ್ಥಿತಿಯಲ್ಲಿ ನೈಸರ್ಗಿಕ ವಿಕೋಪ, ಯುದ್ಧ, ಕೌಟುಂಬಿಕ ಕಲಹ, ಬಾಲ್ಯದಲ್ಲಿನ ಹಿಂಸೆಯ ಸಂದರ್ಭ ಉಂಟಾದರೆ ಮ್ಯಾಸ್ಲೊ ರವರ ಈ ಹಂತವು ಉಪಯೋಗಕ್ಕೆ ಬರುತ್ತದೆ. ಸುರಕ್ಷತೆ ಇಲ್ಲದಿದ್ದಲ್ಲಿ ಆಘಾತಕಾರಿ ಒತ್ತಡವನ್ನು ಅನುಭವಿಸಬೇಕು. ಆರ್ಥಿಕ ರಕ್ಷಣೆ ಇಲ್ಲದಿದ್ದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ನಿರುದ್ಯೋಗವಿದ್ದಲ್ಲಿ ಆರ್ಥಿಕ ಸಹಾಯ ಬೇಕೇ ಬೇಕು,ಈ ರೀತಿಯ ಸಂದರ್ಭದಲ್ಲಿ ಉಳಿತಾಯ ಖಾತೆಗಳು, ವಿಮಾ ಯೋಜನೆಗಳು,ಕೆಲಸದ ಭದ್ರತೆ, ಏಕಪಕ್ಷೀಯ ಅಧಿಕಾರ, ಅಂಗವೈಕಲ್ಯ ಆದ್ಯತೆ ಇತ್ಯಾದಿಗಳು ಈ ಹಂತದಲ್ಲಿ ಸೇರಿದೆ. ಇದರಲ್ಲಿ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿದೆ ಕಾರಣ ಮಕ್ಕಳಿಗೆ ಹೆಚ್ಚು ರಕ್ಷಣೆ ಯನ್ನು ನೀಡುತ್ತಾರೆ.

ಸುರಕ್ಷತೆ ಮತ್ತು ಭದ್ರತೆಯಲ್ಲಿ ಈ ಕೆಳಗಿನವುಗಳು ಒಳಗೊಂಡಿದೆ;-

ಪ್ರೀತಿ ಮತ್ತು ಸಂಭಂದಗಳು ಬದಲಾಯಿಸಿ

ಶಾರೀರಿಕ ಮತ್ತು ರಕ್ಷಣೆಯ ಅಗತ್ಯಗಳು ಪೂರೈಕೆಯಾದ ನಂತರ ಪ್ರೀತಿ ಮತ್ತು ಸಂಭಂದಗಳ ಅಗತ್ಯಗಳು ಮಾನವನಿಗೆ ಉಂಟಾಗುತ್ತದೆ.ಮಾನವನ ಜೀವನ ಪರಸ್ಪರ ಹೊಂದಾಣಿಕೆ ಹಾಗೂ ಸಂಭಂದಗಳ ಭಾವನೆಗಳೊಂದಿಗೆ ಬೆರೆತಿದೆ. ಹಾಗಾಗಿ ಮ್ಯಾಸ್ಲೊ ರವರ ಅಗತ್ಯ ಶ್ರೇಣಿಯ ಮೂರನೆ ಹಂತದಲ್ಲಿ ಪ್ರೀತಿ ಮತ್ತು ಸಂಭಂದಗಳ ಬಗ್ಗೆ ಹೇಳಿದ್ದಾರೆ.ಈ ಅಗತ್ಯವು ಬಾಲ್ಯದಲ್ಲಿ ಬಲವಾಗಿರುತ್ತದೆ ಮತ್ತು ಕಡೆಗಾಲದಲ್ಲಿ ಮಕ್ಕಳು ತಮ್ಮ ಪೋಷಕರನ್ನು ನೋಡಿಕೊಳ್ಳದೆ ಇದ್ದಾಗ ಇದರ ಅವಶ್ಯಕತೆ ಉಂಟಾಗುತ್ತದೆ.[೨]

ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಯ ಈ ಹಂತದ ಕೊರತೆಯು ಈ ಕೆಳಗಿನ ಕಾರಣಗಳಿಗಾಗಿ; ಆಸ್ಪತ್ರೆಯ ವ್ಯವಸ್ಥೆ, ಅಲಕ್ಷ್ಯ, ಬಹಿಷ್ಕಾರ ಇತ್ಯಾದಿ ವ್ಯಕ್ತಿಯ ಸಂಭಂದಗಳ ನಿರ್ವಹಣಾ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಆ ರೀತಿಯ ಸಂಭದಗಳಲ್ಲಿ ಈ ಕೆಳಗಿನವುಗಳು ಸೇರಿದೆ:-

ಮ್ಯಾಸ್ಲೊ ರವರ ಪ್ರಕಾರ ಮಾನವನು ತನ್ನ ಸಾಮಾಜೀಕ ಪಂಗಡಗಳೊಡನೆ ಕೂಡುವ ಮನೋಭಾವವನ್ನು ಹೊಂದಿರಬೇಕು. ಅದು ದೊಡ್ಡ ಗುಂಪಾಗಿರಲಿ ಅಥವಾ ಚಿಕ್ಕ ಗುಂಪಾಗಿರಲಿ ಇಲ್ಲರೋಡನೆ ಕೂಡಿ ಬಾಳಬೇಕು. ಉದಾಹರಣೆಗೆ ಕೆಲವು ದೊಡ್ದ ಸಾಮಾಜೀಕ ಗುಂಪುಗಳು,ವೃತ್ತಿಪರ ಸಂಸ್ಥೆಗಳು, ಕ್ರೀಡಾ ತಂಡಗಳು, ಕ್ಲಬ್,ಸಹ ಕಾರ್ಮಿಕರು,ಧಾರ್ಮಿಕ ಗುಂಪುಗಳು ಮತ್ತು ಇತರ ಪಂಗಡಗಳು.ಕೆಲವು ಸಣ್ಣ ಸಾಮಾಜಿಕ ಗುಂಪುಗಳ ಉದಾಹರಣೆ ಕುಟುಂಬ ಸದಸ್ಯರು,ನಿಖಟ ಸಖ,ಮಾರ್ಗದರ್ಶಕರು,ಸಹೋದ್ಯೋಗಿಗಳು ಮತ್ತು ಆಪ್ತರನ್ನು ಸೇರಿದೆ. ಮನುಷ್ಯ ಇತರರನ್ನು ಪ್ರೀತಿಸಬೇಕು ಹಾಗೂ ಬೇರೆಯವರು ತನ್ನನ್ನು ಪ್ರೀತಿಸುವಂತಿರಬೇಕು. ಹಲವರು ಒಂಟಿತನ,ಸಾಮಾಜಿಕ ಆತಂಕ, ಅನಾರೋಗ್ಯದ ಕಿನ್ನತೆಗೆ ಒಳಗಾಗಿರುತ್ತಾರೆ ಆದರೆ ಇಲ್ಲಿ ಪ್ರೀತಿ ಹಾಗೂ ಸಂಭಂದಗಳು ಮುಖ್ಯ ಪಾತ್ರ ವಹಿಸುತ್ತದೆ. ಪ್ರೀತಿ ಹಾಗೂ ಸಂಭಂದಗಳಿಂದ ಮಾನಸಿಕಾ ಭದ್ರತಾ ಅವಷ್ಯಕತೆಗಳನ್ನು ಜಯಿಸಲು ಸಾಧ್ಯ.

ಗೌರವ ಬದಲಾಯಿಸಿ

ಪ್ರತಿಯೊಬ್ಬ ಮಾನವ ಗೌರವಾನ್ವಿತನಾಗಿರಬೇಕೆಂದು ಭಾವಿಸುತ್ತಾನೆ. ಗೌರವದ ಜೊತೆಗೆ ಮನುಷ್ಯನಿಗೆ ಸ್ವಾಭಿಮಾನವೂ ಅತ್ಯಗತ್ಯ. ಮಾನವನ ಬಯಕೆಯನ್ನು ಇತರರು ಒಪ್ಪಿಕೊಂಡು ಅದಕ್ಕೆ ಬೆಲೆ ನೀಡಬೇಕು ಇದನ್ನು ಗೌರವ ಪ್ರಸ್ತುತ ಪಡಿಸುತ್ತದೆ. ಮಾನವನು ತನ್ನನ್ನು ತಾನು ಗುರುತಿಸಿ ಕೊಳ್ಳುವಲ್ಲಿ ತಲ್ಲೀನನಾಗಿರುತ್ತಾನೆ.ಅದೇ ಆತನ ಹವ್ಯಾಸವಾಗಿರುತ್ತದೆ. ಈ ಒಂದು ಕೆಲಸವು ಕೊಡುಗೆಯ ಭಾವನೆಯನು ನೀಡುತ್ತದೆ. ಕೆಳಮಟ್ಟದ ಗೌರವ ಅಥವಾ ಕಡಿಮೆ ಗುಣದ ಗೌರವ ಮ್ಯಾಸ್ಲೊ ರವರ ಶ್ರೇಣಿಯನ್ನು ಸಮನಾಗಿರಲು ಬಿಡುವುದಿಲ್ಲ.ಕೆಳಮಟ್ಟದ ಗೌರವವಿರುವವರು ಬೇರೆಯವರಿಂದ ಹೆಚ್ಚು ಅಪೇಕ್ಷಿಸುತ್ತಾರೆ, ಅವರಿಗೆ ಹೆಚ್ಚು ಹಸರು ಮಾಡುವ ಆಸೆ ಇರುತ್ತದೆ. ಯಾವುದೇ, ಎಷ್ಟೇ ದೊಡ್ದ ಹೆಸರು ಗಳಿಸಿದರೂ ತಾನು ಪೂರ್ವದಲ್ಲಿ ಹೇಗಿದ್ದೆ ಇಂಬ ಅರಿವು ಇಲ್ಲದಿದ್ದರೆ ಅವನ ಹೆಸರಿಗೆ ಯಾವೂದೇ ಬೆಲೆ ಇರುವುದಿಲ್ಲ. ಮನಃಶಾಸ್ತ್ರದ ಪ್ರಕಾರ ಅಸಮತೂಲನೆ ಇದ್ದರೆ ಉದಾಹರಣೆಗೆ ಖಿನ್ನತೆ ಇತ್ಯದಿ, ಮಾನವನನ್ನು ದೊಡ್ದಮಟ್ಟಕ್ಕೆ ಏರಲು ಬಿಡುವುದಿಲ್ಲ ಅದು ಆತನನ್ನು ತಡೆಯುತ್ತದೆ.

ಮ್ಯಾಸ್ಲೊ ರವರು ಎರಡು ರೀತಿಯ ಗೌರವಗಳನ್ನು ಪ್ರಖ್ಯಾತಿಸಿದ್ದಾರೆ: ಕೆಳಮಟ್ಟದ್ದು ಹಾಗೂ ಮೇಲ್ಮಟ್ಟದ್ದು. ಕೆಳಮಟ್ಟದ ಗೌರವದಲ್ಲಿ ಮಾನವ ತನ್ನನ್ನು ಬೇರೆಯವರು ಗೌರವಿಸಬೇಕೆಂದು ಭಾವಿಸುತ್ತಾನೆ ಆದರೆ ಮೇಲ್ಮಟ್ಟದ ಗೌರವ ಸ್ವಾಭಿಮಾನ ಉಳ್ಳದ್ದು.[೩]

ಸ್ವಯಂ-ವಾಸ್ತವೀಕರಣ ಬದಲಾಯಿಸಿ

"ವ್ಯಕ್ತಯು ಏನೇಆಗಿದ್ದರೂ ಮೊದಲು ಮಾನವನಾಗಿರಬೇಕು" ,ಈ ಉಲ್ಲೇಖವು ವಾಸ್ತವೀಕರಣದ ಗ್ರಹಿಕೆಗೆ ತಳಹದಿಯಾಗಿದೆ. ಈ ಹಂತದಲ್ಲಿ ಮಾನವನ ಸಂಪೂರ್ಣ ಸಾಮರ್ಥ್ಯವೇನು ಹಾಗೂ ಹಾಗೂ ಆತ ಆ ಸಾಮರ್ಥ್ಯದಿಂದ ಏನು ಕೈಗುಳ್ಳುತ್ತಾನೆ ಎಂದು ಮ್ಯಾಸ್ಲೊರವರು ತಿಳಿಸಿದ್ದಾರೆ. ಮನುಷ್ಯ ಏನಾಗಬೇಕು ಎಂದು ಇಚ್ಚಿಸುತ್ತಾನೋ ತಾನು ಸಾದಿಸಲು ಏನೇನು ಇದೆಯೋ ಎಲ್ಲವನ್ನೂ ಈ ಹಂತದಲ್ಲಿ ತಿಳಿಸಿದ್ದಾರೆ.ಒಬ್ಬ ವ್ಯಕ್ತಿ ತಾನು ಏನನ್ನುಸಾಧಿಸಬೇಕೂ, ತಾನು ಏನನ್ನು ಗ್ರಹಿಸಬೇಕೊ ಅದರ ಮೇಲೆ ಗಮನ ಹರಿಸಬೇಕು ಒಬ್ಬೊಬ್ಬರ ಗುರಿ ಬೇರೆಯದ್ದೆ ಆಗಿರುತ್ತದೆ. ಕೆಲವರು ಆದರ್ಶ ಪೂಷಕರಾಗಿರಬೇಕೆಂದಿರುತ್ತಾರೆ, ಇನ್ನೂ ಕೆಲವರು ಕಟ್ಟುಮಸ್ಥಾಗಿರಬೇಕೆಂದಿರುತ್ತಾರೆ, ಕೆಲವರಿಗೆ ಚಿತ್ರಕಲೆ ಮಾಡುವುದು, ಚಿತ್ರಗಳನ್ನು ಬಿಡಿಸುವ ಆಸೆ ಇರುತ್ತದೆ. ಕೆಲವರಿ ಆವಿಷ್ಕಾರಗಳನ್ನು ವ್ಯಕ್ತಪಡಿಸುವುದಾಗಿರುತ್ತದೆ. ಮ್ಯಾಸ್ಲೊ ರವರ ಪ್ರಕಾರ ಈ ಹಂತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಒಬ್ಬ ವ್ಯಕ್ತಿ ತನ್ನ ಹಿಂದಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದೇ ಅಲ್ಲದೆ ಅದರಲ್ಲಿ ನಿಪುಣನಾಗಿರಬೇಕು.[೪]

ಸ್ವಯಂ-ಉತ್ಕೃಷ್ಟತೆ ಬದಲಾಯಿಸಿ

ಮ್ಯಾಸ್ಲೂ ರವರು ತಮ್ಮ ಸ್ವಂತದ ಸ್ವಯಂ-ವಾಸ್ತವೀಕರಣದ ಟೀಕೆಯ ನಂತರ ಅವರು ತಮ್ಮ ಅಗತ್ಯಳ ಹಾದಿಯನ್ನು ಶ್ರೇಣಿಯ ಮುಖಾಂತರ ಬೇರೆ ಕಡೆಗೆ ಆಯಾಮಿಸುತ್ತಾರೆ ಅದೇ ಸ್ವಯಂ-ಉತ್ಕೃಷ್ಟತೆ. ಒಟ್ಟಾರೆ ಈ ಮ್ಯಾಸ್ಲೊ ರವರ ವರ್ಗ ಶ್ರೇಣಿಯ ಪ್ರತಿ ಹಂತದ ಅಗತ್ಯಗಳು ಒಂದಕ್ಕೊಂದು ಪರಸ್ಪರ ಸಂಬಂಧಿಸಿದೆ, ಯಾವೂದೂ ಬೇರೆಯಲ್ಲ.

ಉಲ್ಲೇಖಗಳು ಬದಲಾಯಿಸಿ

</reference>

ನಿಮ್ಮ ಲೇಖನವು ಸ್ವಚ್ಛವಾಗಿದೆ ಹಾಗೂ ಇತರರಿಗೆ ಅನುಕೂಲಕರವಾಗಿದೆ. ಇನ್ನೂ ಹೆಚ್ಚು ಕೊಡುಗೆಗಳನ್ನು ನೀಡಿ.

  1. https://web.archive.org/web/20100211014419/http://honolulu.hawaii.edu/intranet/committees/FacDevCom/guidebk/teachtip/maslow.htm
  2. http://psychclassics.yorku.ca/Maslow/motivation.htm
  3. http://study.com/academy/lesson/the-needs-theory-motivating-employees-with-maslows-hierarchy-of-needs.html
  4. http://www.edpsycinteractive.org/topics/conation/maslow.html