ಮೋಸ ನಿಜವಿರದ ಅಥವಾ ಸಂಪೂರ್ಣ ಸತ್ಯವಿರದ (ಅರೆಸತ್ಯ ಅಥವಾ ಕಡೆಗಣಿಕೆ) ವಿಷಯಗಳಲ್ಲಿ ನಂಬಿಕೆಗಳನ್ನು ಪ್ರಸಾರಮಾಡುವ ಕ್ರಿಯೆ. ಮೋಸವು ಮರೆಮಾಚುವಿಕೆ, ಪ್ರಚಾರ, ಮತ್ತು ಕೈಚಳಕ, ಜೊತೆಗೆ ಗಮನ ಭಂಗ, ಮರೆವೇಷ, ಅಥವಾ ಗುಟ್ಟುಮಾಡುವಿಕೆಯನ್ನು ಒಳಗೊಳ್ಳಬಹುದು. ವಂಚಕತನದಲ್ಲಿರುವಂತೆ, ಆತ್ಮ ವಂಚನೆಯೂ ಇರುತ್ತದೆ.

ಮೋಸವು ಹಲವುವೇಳೆ ಸಂಬಂಧಿತ ಪಾಲುದಾರರ ನಡುವೆ ನಂಬಿಕೆದ್ರೋಹ ಮತ್ತು ಅಪನಂಬಿಕೆಯ ಅನಿಸಿಕೆಗಳಿಗೆ ಕಾರಣವಾಗುವ ಒಂದು ಪ್ರಮುಖ ಸಂಬಂಧ ಅತಿಕ್ರಮಣ. ಮೋಸವು ಸಂಬಂಧಗಳ ನಿಯಮಗಳನ್ನು ಉಲ್ಲಂಘಿಸುತ್ತದೆ ಮತ್ತು ನಿರೀಕ್ಷೆಗಳ ನಕಾರಾತ್ಮಕ ಉಲ್ಲಂಘನೆ ಎಂದು ಪರಿಗಣಿಸಲ್ಪಡುತ್ತದೆ. ಸ್ನೇಹಿತರು, ಸಂಬಂಧಿತ ಪಾಲುದಾರರು, ಮತ್ತು ಅಪರಿಚಿತರು ಸಹ ಬಹುತೇಕ ಸಮಯದಲ್ಲಿ ಪ್ರಾಮಾಣಿಕರಾಗಿರುತ್ತಾರೆಂದು ಬಹುತೇಕ ಜನ ನಿರೀಕ್ಷಿಸುತ್ತಾರೆ. ಬಹುತೇಕ ಸಂಭಾಷಣೆಗಳು ಸತ್ಯವಲ್ಲವೆಂದು ಜನರು ನಿರೀಕ್ಷಿಸಿರುತ್ತಿದ್ದರೆ, ವಿಶ್ವಾಸಾರ್ಹ ಮಾಹಿತಿ ಪಡೆಯಲು ಇತರರೊಡನೆ ಮಾತನಾಡುವುದು ಮತ್ತು ಸಂವಹಿಸುವುದಕ್ಕೆ ಗೊಂದಲಗೊಳಿಸುವಿಕೆ ಮತ್ತು ತಪ್ಪು ಮಾರ್ಗದರ್ಶನ ಅಗತ್ಯವಾಗುತ್ತದೆ. ಪ್ರಣಯ ಮತ್ತು ಸಂಬಂಧಿತ ಸಂಗಾತಿಗಳ ನಡುವೆ ಗಮನಾರ್ಹ ಪ್ರಮಾಣದ ಮೋಸ/ವಂಚನೆ ಇರುತ್ತದೆ.[೧]

ಮೋಸ ಮತ್ತು ಅಪ್ರಾಮಾಣಿಕತೆ ಅಪಕೃತ್ಯ, ಅಥವಾ ಒಪ್ಪಂದ ಕಾನೂನಿನಲ್ಲಿ ನಾಗರಿಕ ದಾವೆಗೆ ಕಾರಣಗಳನ್ನು ರೂಪಿಸಬಲ್ಲದು, ಅಥವಾ ವಂಚನೆಗಾಗಿ ಕ್ರಿಮಿನಲ್ ಕಾನೂನಿನ ಕ್ರಮ ಜರುಗಿಸುವುದಕ್ಕೆ ಇಂಬು ನೀಡಬಲ್ಲದು. ಮೊಸವು ನಿರಾಕರಣೆ ಮತ್ತು ವಂಚನೆಯಲ್ಲಿ ಮಾನಸಿಕ ಸಂಗ್ರಾಮದ ಪ್ರಮುಖ ಭಾಗವಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. Guerrero, L., Anderson, P., Afifi, W. (2007). Close Encounters: Communication in Relationships (2nd ed.). Los Angeles: Sage Publications.
"https://kn.wikipedia.org/w/index.php?title=ಮೋಸ&oldid=752886" ಇಂದ ಪಡೆಯಲ್ಪಟ್ಟಿದೆ