ಮೊಬೈಲ್ ಫೋನ್ ಟ್ರ್ಯಾಕಿಂಗ್‌

ಮೊಬೈಲ್ ಫೋನ್ ಟ್ರ್ಯಾಕಿಂಗ್‌ ನ ಮೂಲಕ, ಚಲನೆಯ ವೇಳೆಯಲ್ಲೂ ಕೂಡ ಮೊಬೈಲ್ ಫೋನ್ ಸಾಧ್ಯ ಇರುವ ಸ್ಥಳವನ್ನು ಪತ್ತೆ ಹಚ್ಚುವುದು. ಮೊಬೈಲ್‌ಗಳನ್ನು ಪತ್ತೆಹಚ್ಚಲು ನಿರ್ದಿಷ್ಟ ಮೊಬೈಲ್‌ಗಳು ಹತ್ತಿರದ ಮೊಬೈಲ್ ಸಂಕೇತ ಸಂಚಲಕ ಗಳ ಜೊತೆ ಕನಿಷ್ಠ ಸಂಪರ್ಕ ಇರಿಸಿಕೊಂಡಿರಬೇಕಾಗುತ್ತದೆ. ಆದರೆ ಈ ಕಾರ್ಯಕ್ಕೆ ಸಕ್ರೀಯ ಕರೆಯ ಅವಶ್ಯಕತೆ ಇರುವುದಿಲ್ಲ. ನಂತರ ಹತ್ತಿರದ ಏರಿಯಲ್ ಪಟಸ್ಥಂಬಗಳ ಸಂಕೇತ ಬಲವನ್ನು ಅವಲಂಬಿಸಿದ ಮಲ್ಟಿಲ್ಯಾಟರೇಶನ್‌ನಿಂದ ಜಿಎಸ್‌ಎಮ್ ಸ್ಥಳೀಕರಣವು ಪೂರೈಸಲ್ಪಡುವುದು.[೧]ಮೊಬೈಲ್ ಸ್ಥಾನೀಕರಣ , ಅಂದರೆ ಸ್ಥಳ ಅವಲಂಬಿತ ಸೇವೆ ಇದು ಮೊಬೈಲ್ ಫೋನ್ ಬಳಕೆದಾರರ ನಿಜವಾದ ಸಂಬಂಧವನ್ನು ವ್ಯಕ್ತಪಡಿಸುತ್ತದೆ, ಇದು ದೂರಸಂಪರ್ಕ ಸಂಸ್ಥೆಗಳಿಂದ ಅಂದಾಜು ತಾತ್ಕಾಲಿಕವಾಗಿ ಮೊಬೈಲ್ ಫೋನ್, ಎಲ್ಲಿ ಇರುವುದು ಮತ್ತು ಹಾಗೆಯೇ ಅದರ ಬಳಕೆದಾರರ (ಆಳುವವರ) ನೆಲೆ ಕೂಡ ತಿಳಿಯಲು ಬಳಸಲ್ಪಡುವ ಒಂದು ತಂತ್ರಜ್ಞಾನ. ಹೆಚ್ಚು ಸರಿಯಾಗಿ ಬಳಸಲ್ಪಡುವ ಪದ ಸ್ಥಳೀಕರಣ , ಸ್ಥಾನೀಕರಣ ಕಾರ್ಯಕ್ಕಿಂತ ಹೆಚ್ಚು ಉದ್ದೇಶವನ್ನು ಉಲ್ಲೇಖಿಸುತ್ತದೆ. ಇಂತಹ ಸೇವೆಯು ಸ್ಥಳ-ಅವಲಂಬಿತ ಸೇವೆಗಳ (ಎಲ್‌ಬಿಎಸ್) ವರ್ಗದಲ್ಲಿ ಅಯ್ಕೆಯಾಗಿರುತ್ತದೆ.[೨]

ತಂತ್ರಜ್ಞಾನ ಬದಲಾಯಿಸಿ

ಸ್ಥಳೀಕರಣ ತಂತ್ರಜ್ಞಾನವು ವಿದ್ಯುತ್ ಮಟ್ಟ ಅಳೆಯುವುದನ್ನು ಮತ್ತು ಅಂಟೆನಾದ ವಿನ್ಯಾಸವನ್ನು ಅವಲಂಬಿಸಿರುತ್ತದೆ ಹಾಗೂ ಮೊಬೈಲ್ ಫೋನೊಂದು ಯಾವಾಗಲೂ ಹತ್ತಿರದ ಕೇಂದ್ರ ಸ್ಥಳದೊಂದಿಗೆ ನಿಸ್ತಂತುವಾಗಿ ಸಂಪರ್ಕದಲ್ಲಿರುವ ಪರಿಕಲ್ಪನೆಯನ್ನು ಬಳಸುತ್ತದೆ, ಇದರಿಂದ ಒಂದುವೇಳೆ ನೀವು ದೂರವಾಣಿಯು ಯಾವ ಕೇಂದ್ರ ಸ್ಥಳದ ಸಂಪರ್ಕದಲ್ಲಿದೆಯೆಂದು ತಿಳಿದರೆ, ನೀವು ಆ ದೂರವಾಣಿ ಅದರ ಕೇಂದ್ರ ಸ್ಥಳದ ಹತ್ತಿರದಲ್ಲಿದೆಯೆಂದು ಅರಿಯಬಹುದು. ಮುಂದುವರಿದ ವ್ಯವಸ್ಥೆಯು, ಮೊಬೈಲ್ ಫೋನ್ ಯಾವ ಕ್ಷೇತ್ರದಲ್ಲಿ ಇರುವುದು ಮತ್ತು ಕೇಂದ್ರ ಸ್ಥಳದಿಂದ ಅದು ಇರುವ ದೂರವನ್ನು ಕೂಡ ಅಂದಾಜಿಗೆ ತಿಳಿಸಿಕೊಡುತ್ತದೆ. ಏರಿಯಲ್ ಸ್ತಂಭಗಳ ಪಾರ್ಶ್ವದ ಮಧ್ಯದಲ್ಲಿ ಸಂಕೇತಗಳು ಒಳತೂರಿದ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ನಿಕಟತೆಯನ್ನು ಅಂದಾಜಿಸಬಹುದಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ಉತ್ತಮ ಫಲಿತಾಂಶವನ್ನು ಪಟ್ಟಣ ಪ್ರದೇಶಗಳಲ್ಲಿ 50ಮೀಟರ್ ಆಸುಪಾಸಿನ ಅತ್ಯುತ್ತಮ ಅಂದಾಜನ್ನು ಪಡೆಯಬಹುದಾಗಿದೆ. ಇಲ್ಲಿ ಮೊಬೈಲ್ ದಟ್ಟಣೆ ಮತ್ತು ಏರಿಯಲ್ ಸ್ತಂಭಗಳ (ಕೇಂದ್ರ ಸ್ಥಳಗಳ) ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇದು ಸಾಧ್ಯವಾಗುತ್ತದೆ. ಗ್ರಾಮೀಣ ಹಾಗೂ ನಿರ್ಜನ ಪ್ರದೇಶಗಳು ಕೇಂದ್ರ ಸ್ಥಳಗಳ ನಡುವೆ ಮೈಲುಗಟ್ಟಲೆ ಅಂತರವನ್ನು ಹೊಂದಿರುತ್ತವೆ. ಅದರಿಂದ ಉದ್ದೇಶಿತ ಮೊಬೈಲ್ ಯಾವ ಪ್ರದೇಶದಲ್ಲಿದೆ ಎಂದು ನಿಖರವಾಗಿ ಕಂಡುಕೊಳ್ಳುವುದು ಸುಲಭಸಾಧ್ಯವಲ್ಲ. ಜಿ.ಎಸ್.ಎಮ್ ಸ್ಥಳ ನಿರ್ಬಂಧನೆಯನ್ನು ಜಿ.ಎಸ್.ಎಮ್ ಮೊಬೈಲ್ ಫೋನುಗಳ ಸ್ಥಳ ಪತ್ತೆಗೆ ಮತ್ತು ಬಳಕೆದಾರರ ಸ್ಥಳ ಗುರುತಿಸುವಿಕೆಗೆ ಬಳಸಲಾಗುತ್ತಿದೆ.

ಸ್ಥಳ ಆಧಾರಿತ ವ್ಯವಸ್ಥೆಯನ್ನು ವಿಸ್ತಾರವಾಗಿ ವಿಂಗಡಿಸಲಾಗಿದೆ.

  • ಪ್ರಸಾರ ಕೇಂದ್ರ ಆಧಾರಿತ
  • ಹ್ಯಾಂಡ್‌ಸೆಟ್‌ ಆಧಾರಿತ
  • ಸಂಕೀರ್ಣ

ಪ್ರಸಾರ ಕೇಂದ್ರ ಆಧಾರಿತ ಬದಲಾಯಿಸಿ

ಪ್ರಸಾರ ಕೇಂದ್ರ ಆಧಾರಿತ ಕಾರ್ಯ ವಿಧಾನವು ಹ್ಯಾಂಡ್‌ಸೆಟ್‌ ಇರುವ ಸ್ಥಳವನ್ನು ಕಂಡುಹಿಡಿಯಲು ಆಯಾ ಸ್ಥಳದಲ್ಲಿ ನೆಟ್‌ವರ್ಕ್ ಸೇವೆ ಒದಗಿಸುವವರ ಪ್ರಸಾರ ಜಾಲವನ್ನು ಬಳಸಿಕೊಳ್ಳುತ್ತದೆ. ಪ್ರಸಾರ ಕೇಂದ್ರ ಆಧಾರಿತ ಕಾರ್ಯವಿಧಾನದ ಅನುಕೂಲತೆಗಳು (ಮೊಬೈಲ್ ಬಳಸುವವರ ದೃಷ್ಟಿಯಿಂದ) ಏನೆಂದರೆ ಹ್ಯಾಂಡ್‌ಸೆಟ್‌ಗಳಿಗೆ ಯಾವುದೇ ಪರಿಣಾಮವಾಗದಂತೆ ಸಮರ್ಪಕವಾಗಿ ಕಾರ್ಯಗತಗೊಳಿಸಬಹುದು. ಪ್ರಸಾರಕೇಂದ್ರ ಆಧಾರಿತ ತಂತ್ರಜ್ಞಾನದಲ್ಲಿ ನಿಖರತೆಯು ವ್ಯತ್ಯಾಸವಾಗಬಹುದು. ಅತ್ಯಂತ ಕಡಿಮೆ ನಿಖರತೆಯಾಗಿ ಉಪಕರಣ ಗುರುತಿಸುವಿಕೆಯು ಮತ್ತು ಅತಿ ಹೆಚ್ಚು ನಿಖರತೆಯಾಗಿ ಟ್ರೈಯಾಂಗ್ಯುಲೇಶನ್.ಉ ಪ್ರಸಾರಕೇಂದ್ರ-ಆಧಾರಿತ ತಂತ್ರಜ್ಞಾನದ ನಿಖರತೆಯು, ಪಟ್ಟಣ ಪ್ರದೇಶಗಳಲ್ಲಿ ಅತಿ ಹೆಚ್ಚು ಸಾಧ್ಯವಿರುವ ನಿಖರತೆಯನ್ನು ಸಾಧಿಸುವುದರೊಂದಿಗೆ ಕೇಂದ್ರ ಸ್ಥಳದ ಕೇಂದ್ರೀಕೃತ ಸೆಲ್‌ಗಳನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ. ಪ್ರಸಾರ ಕೇಂದ್ರ-ಆಧಾರಿತ ತಂತ್ರಜ್ಞಾನದಲ್ಲಿನ ಒಂದು ಮೂಲ ಸವಾಲು ಎಂದರೆ ಇದು ಕಾರ್ಯನಡೆಸುವವರ ವ್ಯವಸ್ಥೆಯೊಳಗೇ ಯಂತ್ರಾಂಶ ಮತ್ತು ತಂತ್ರಾಂಶ ಅಳವಡಿಕೆಯನ್ನು ಒಳಗೊಂಡಿರುವುದರಿಂದ, ಸೇವೆ ಒದಗಿಸುವಲ್ಲಿಯೇ ಕೆಲಸ ಮಾಡುವ ಅವಶ್ಯಕತೆಯಿರುತ್ತದೆ. ಅನೇಕ ವೇಳೆ, ಶಾಸನಬದ್ಧ ರಚನೆಯು, ಅಂದರೆ E911 ನಂತಹವು, ಸೇವೆ ಒದಗಿಸುವುದರ ಸಹಕಾರವನ್ನು ಬಲವಂತಪಡಿಸಲು ಹಾಗೆಯೇ ಮಾಹಿತಿಯ ಗೋಪ್ಯತೆಯನ್ನು ರಕ್ಷಿಸಲು ಅದರ ಅಳವಡಿಕೆಯ ಅವಶ್ಯಕತೆಯಿರುತ್ತದೆ.

ಹ್ಯಾಂಡ್‌ಸೆಟ್‌ ಆಧಾರಿತ ಬದಲಾಯಿಸಿ

ಹ್ಯಾಂಡ್‌ಸೆಟ್‌-ಆಧಾರಿತ ತಂತ್ರಜ್ಞಾನವು ಅದರ ಸ್ಥಳವನ್ನು ತಿಳಿಯಲು, ಕೈಸೆಟ್ಟಿನಲ್ಲಿ ಗ್ರಾಹಕನ ತಂತ್ರಾಂಶ ಅಳವಡಿಕೆಯ ಅವಶ್ಯಕತೆಯನ್ನು ಹೊಂದಿರುತ್ತದೆ. ಈ ತಂತ್ರಜ್ಞಾನವು ಹ್ಯಾಂಡ್‌ಸೆಟ್‌ ಇರುವ ಸ್ಥಳವನ್ನು ಹೀಗೆ ಅರಿಯುವುದು, ಸೆಲ್ ಗುರುತಿಸುವುದರ ಮೂಲಕ ಇದರ ಜಾಗವನ್ನು ಎಣಿಸುವುದು, ಇಲ್ಲವೆ ಮನೆಯ ಮತ್ತು ಪಕ್ಕದ ಸೆಲ್‌ಗಳ ಸಂಕೇತ ಬಲದಿಂದ ಗೊತ್ತುಪಡಿಸುವುದು ಅಥವಾ ಒಂದು ವೇಳೆ ಹ್ಯಾಂಡ್‌ಸೆಟ್‌ ಜಿಪಿಎಸ್ ಕೋಷ್ಠದಿಂದ ಅನಾವರಣಗೊಂಡಿದ್ದರೆ ಅಕ್ಷಾಂಶ ಮತ್ತು ರೇಖಾಂಶಗಳಿಂದ ತಿಳಿಯುವುದು. ಎಣಿಸಲ್ಪಟ್ಟ ಸ್ಥಳವು ನಂತರ ಕೈಸೆಟ್ಟಿನಿಂದ ಸ್ಥಳದ ಸರ್ವರ್‌ಗೆ ಕಳುಹಿಸಲ್ಪಡುವುದು. ಈ ತಂತ್ರಜ್ಞಾನದ ಮೂಲ ಅನಾನುಕೂಲತೆಯೆಂದರೆ (ಮೊಬೈಲ್ ಬಳಕೆದಾರರ ದೃಷ್ಟಿ ಕೋನದಲ್ಲಿ) ಕೈಸೆಟ್ಟಿನಲ್ಲಿ ತಂತ್ರಾಂಶದ ಅಳವಡಿಕೆ. ಇದು ಮೊಬೈಲ್ ಬಳಕೆದಾರ ಸಕ್ರಿಯ ಸಹಕಾರವನ್ನು ಹಾಗೆಯೇ ಕೈಸೆಟ್ಟಿನ ವಿವಿಧ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ ತಂತ್ರಾಶದ ಅವಶ್ಯಕತೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ, ಇಂತಹ ತಂತ್ರಾಂಶಗಳನ್ನು ನಿರ್ವಹಿಸಲು ಸ್ಮಾರ್ಟ್ ಫೋನ್ಸ್ ಅಂದರೆ, ಸಿಂಬಿಯಾನ್, ವಿಂಡೋಸ್ ಮೊಬೈಲ್, ಐಫೋನ್ / ಐಫೋನ್ ಓಎಸ್, ಅಥವಾ ಎಂಡ್ರಾಯಿಡ್‌ನಂತಹವನ್ನು ಅವಲಂಬಿಸಿದ್ದು ಸಮರ್ಥವಿರುತ್ತದೆ. ಇದರ ಒಂದು ಯೋಜಿತ ಕೆಲಸವೆಂದರೆ ತಯಾರಕರಿಂದ ಎಂಬಡೆಡ್ ಯಂತ್ರಾಂಶ ಅಥವಾ ತಂತ್ರಾಂಶವನ್ನು ಕೈಸೆಟ್ಟಿನಲ್ಲಿ ಅಳವಡಿಸುವುದು. ಈ ಮಾರ್ಗವು ಮಹತ್ವದ ಪ್ರಗತಿಯನ್ನು ಸಾಧಿಸಲಿಲ್ಲ, ಏಕೆಂದರೆ ಬೇರೆ ಬೇರೆ ಉತ್ಪಾದಕರನ್ನು ಸಮಾನ ಯಾಂತ್ರಿಕ ರಚನೆಗೆ ಸಹಕರಿಸಲು ಮನಗಾಣಿಸುವುದು ಕಷ್ಟದಾಯಕವಾದದ್ದು ಮತ್ತು ಇನ್ನೊಂದೆಂದರೆ ಖರ್ಚಿನ ವಿಷಯವನ್ನು ಸಂಬಂಧಿಸಿದ್ದು. ಈ ತಂತ್ರಜ್ಞಾನದ ಕೊರತೆ ಎಂದರೆ ವಿದೇಶಿ ಹ್ಯಾಂಡ್‌ಸೆಟ್‍ಗಳು ರೋಮಿಂಗ್‌ನಲ್ಲಿದ್ದರೆ ಅವುಗಳನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ. ಪ್ರಸಾರ ಕೇಂದ್ರ ಆಧಾರಿತ ಸ್ಥಳ ಟ್ರ್ಯಾಕಿಂಗ್‌ ಗಣನ ವಿಧಾನ ಪ್ರಮಾಣೀಕರಿಸಲು ಈ ಕೆಳಗಿನ ಉದಾಹರನೆ ಸೂಕ್ತವಾದುದು :ಗ್ಲೋಬಲ್ ಜಿಎಸ್‌ಎಮ್ ರಚನೆ ಮತ್ತು ಇಟಿಎಸ್‌ಐ ಪ್ರಕಾರ, ಜಿಎಸ್‌ಎಮ್ ಸೇವೆ ಒದಗಿಸುವವರ ಮಾಹಿತಿಯು ಕಂಟ್ರೋಲ್ ಚಾನೆಲ್ ಮೂಲಕ ಸರಬರಾಜಾಗುವುದು ಮತ್ತು ಕಂಟ್ರೋಲ್ ಚಾನೆಲ್ ಕಾರ್ಯವು ಉಚಿತವಾದದ್ದು. ಕುತೂಹಲಕಾರಿ ಅಂಶ ಏನೆಂದರೆ, ಎಲ್ಲ ಲಭ್ಯವಿರುವ ಜಿಎಸ್‌ಎಮ್ ಮೊಡೆಮ್/ಮೊಬೈಲ್‌ಗಳು (ಟೆಲಿಟ್, ಸಿಮ್‌ಕಾಮ್, ಹೆಚ್‌ಟಿಸಿ, ನೋಕಿಯಾ ಮುಂತಾದವುಗಳು) ಪಕ್ಕದ ಸೆಲ್‌ಗಳನ್ನು ಮತ್ತು ಅದರ ಆರ್‌ಎಸ್‌ಎಸ್‌ಐ ಮೌಲ್ಯವನ್ನು ಹಿಡಿತದಲ್ಲಿಡಲು ಕೆಲವು ಅಧಿಕ ಸೌಲಭ್ಯಗಳನ್ನು ಹೊಂದಿರುತ್ತವೆ. ನಿಯಮದಂತೆ ನೀವು 1+6=7 ಸೆಲ್ ಮಾಹಿತಿಯನ್ನು ಪಡೆಯುವಿರಿ (1 ಮೂಲ ಸೆಲ್ ಗುರುತು, 7 ಬಿಸಿಸಿಹೆಚ್ ಮಾಹಿತಿ+ 7 ಆರ್‌ಎಸ್‌ಎಸ್‌ಐ). ಒಂದು ವೇಳೆ ನೀವು ಏಳು ಸೆಲ್‌ಗಳ ಸ್ಥಾನಗಳನ್ನು ತಿಳಿದರೆ, ಮೊಬೈಲ್ ಫೋನ್‌ನ ಸ್ಥಳವನ್ನು ಹೆಚ್ಚು ಖಚಿತವಾಗಿ ತಿಳಿಯಲು ಸಾಧ್ಯವಾಗುತ್ತದೆ (<100 ಮೀಟರ್‌ಗಳಿಗಿಂತ).

ಸಂಕೀರ್ಣ ಬದಲಾಯಿಸಿ

ಮೊಬೈಲ್ ಫೋನಿನ ಸ್ಥಳ ತಿಳಿಯಲು ಸಂಕೀರ್ಣ ಸ್ಥಾನೀಕರಣ ಪದ್ಧತಿಯು ಎರಡರ ಸಂಯೋಗ ಪ್ರಸಾರ-ಕೇಂದ್ರ ಆಧಾರಿತ ಮತ್ತು ಹ್ಯಾಂಡ್‌ಸೆಟ್‌ ಆಧಾರಿತ ತಂತ್ರಜ್ಞಾನವನ್ನು ಬಳಸುತ್ತದೆ. ಇದಕ್ಕೆ ಒಂದು ಉದಾಹರಣೆ ಅಸಿಸ್ಟೆಡ್ ಜಿಪಿಎಸ್, ಯಾವುದು ಸ್ಥಳ ಗುರುತಿಸಲು ಜಿಪಿಎಸ್ ಹಾಗೂ ಪ್ರಸಾರಕೇಂದ್ರ ಮಾಹಿತಿಯೆರಡನ್ನೂ ಬಳಸುತ್ತದೆ. ಈ ಮೂರರಲ್ಲಿ ಸಂಕೀರ್ಣ-ಆಧಾರಿತ ತಂತ್ರಜ್ಞಾನವು ಅತ್ಯುತ್ತಮ ನಿರ್ದಿಷ್ಟತೆಯನ್ನು ನೀಡುತ್ತದೆ. ಆದರೆ ಕೆಲವು ಮಿತಿಗಳನ್ನು ಹೊಂದಿರುತ್ತದೆ ಮತ್ತು ಪ್ರಸಾರಕೇಂದ್ರ ಹಾಗೂ ಹ್ಯಾಂಡ್‌ಸೆಟ್‌ ಆಧಾರಿತ ತಂತ್ರಜ್ಞಾನಗಳ ಸವಾಲುಗಳನ್ನು ಹೊಂದಿದೆ.

ಎಲ್‌ಬಿಎಸ್ ತಂತ್ರಜ್ಞಾನಕ್ಕೆ ಉದಾಹರಣೆಗಳು ಬದಲಾಯಿಸಿ

  • ವಿದ್ಯುತ್‌ಕೋಶ (ಸೆಲ್) ಗುರುತಿಸುವಿಕೆ - ಈ ಪದ್ಧತಿಯ ನಿಖರತೆಯು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಕಡಿಮೆ ಕೇವಲ ಕೆಲವೇ ನೂರು ಮೀಟರುಗಳಷ್ಟು, ಆದರೆ ಅರೆನಗರ ಪ್ರದೇಶಗಳಲ್ಲಿ ಹಾಗೂ ಹಳ್ಳಿ ಪ್ರಾಂತ್ಯಗಳಲ್ಲಿ 35 ಕಿಮೀ.[೩] ಗಳಷ್ಟು ಕಡಿಮೆ ಮಟ್ಟದ್ದು. ನಿಖರತೆಯು, ಸ್ಥಾನೀಕರಣದ ವೇಳೆ ಹ್ಯಾಂಡ್‌ಸೆಟ್‌ ಸೇವೆ ಒದಗಿಸುತ್ತಿರುವ ತಿಳಿದ ವ್ಯಾಪ್ತಿಕ್ಷೇತ್ರದ ನಿರ್ದಿಷ್ಟ ಪ್ರಸಾರಕೇಂದ್ರದ ಮೂಲ ಸ್ಥಳವನ್ನು ಅವಲಂಬಿಸಿರುತ್ತದೆ.
  • ಅಧಿಕಗೊಳಿಸಿದ ವಿದ್ಯುತ್ಕೋಶ (ಸೆಲ್) ಗುರುತಿಸುವಿಕೆ - ಈ ಪದ್ಧತಿಯಲ್ಲಿ, ಒಬ್ಬರು ವಿದ್ಯುತ್ಕೋಶ (ಸೆಲ್) ಗುರುತಿಸುವಿಕೆಗೆ ಸಮನಾದ ಅದನ್ನು ಹೋಲುವ ನಿಖರತೆಯನ್ನು ಪಡೆಯಬಹುದು, ಆದರೆ ಗ್ರಾಮೀಣ ಪ್ರದೇಶಗಳಲ್ಲಿ, ಇದು 550 ಮೀಟರುಗಳ ವೃತ್ತಾಕಾರ ಕ್ಷೇತ್ರಗಳಲ್ಲಿ ಇರುವುದು.
  • ಯು-ಟಿಡಿಒಎ - ಮೇಲ್‌ಸಂಪರ್ಕ-ಆಗಮನದ ವೇಳೆ ವ್ಯತ್ಯಾಸ - ಪ್ರಸಾರಕೇಂದ್ರ, ವೇಳೆ ವ್ಯತ್ಯಾಸ ಮತ್ತು ಇದರಿಂದ ಪ್ರತೀ ಕೇಂದ್ರ ಸ್ಥಳದಿಂದ ಮೊಬೈಲ್ ಫೋನ್‌ನ ಅಂತರ ತಿಳಿಯುವುದು.
  • ಟಿಒಎ - ಆಗಮನದ ವೇಳೆ - ಯು-ಟಿಡಿಒಎ ಹಾಗೆಯೇ, ಆದರೆ ಈ ತಂತ್ರಜ್ಞಾನವು ಎರಡು ಕೇಂದ್ರಗಳ ಮಧ್ಯದ ಅಂತರದ ಬದಲಾಗಿ ಸಂಪೂರ್ಣವಾಗಿ ಒಂದು ನಿಖರ ಕೇಂದ್ರ ಸ್ಥಳದಲ್ಲಿ ಅದರ ಆಗಮನದ ವೇಳೆಯನ್ನು ಬಳಸಿಕೊಳ್ಳುವುದು.
  • ಎಒಎ - ಆಗಮನದ ಕೋನ - ಎಒಎ ಯಂತ್ರ ವಿನ್ಯಾಸವು ಮೊಬೈಲ್ ಫೋನನ್ನು ಒಂದು ಬಿಂದುವಿನಲ್ಲಿ ಎಲ್ಲಿ ತಂತಿಯು ಪ್ರತೀ ಕೇಂದ್ರ ಸ್ಥಳದ ಕೋನದ ಜೊತೆ ವಿಭಾಗವಾಗುವುದೋ ಅಲ್ಲಿ ಪತ್ತೆಹಚ್ಚುವುದು.
  • ಇ-ಒಟಿಡಿ - ಇ-ಒಟಿಡಿ ಇದು ಯು-ಟಿಡಿಒಎ ಗೆ ಸದೃಶವಾದದ್ದು ಆದರೆ ಸ್ಥಳವು ಕೇಂದ್ರ ಸ್ಥಳದಿಂದಲ್ಲ, ಮೊಬೈಲ್ ಫೋನ್‌ನಿಂದ ಅಂದಾಜಿಸಲ್ಪಡುವುದು. ಈ ಪದ್ಧತಿಯಲ್ಲಿ ನಿಖರತೆಯು 50 ರಿಂದ 200 ಮೀ. ವ್ಯತ್ಯಾಸದಲ್ಲಿ, ಪ್ರಸಾರಕೇಂದ್ರದಲ್ಲಿ ಲಭ್ಯವಾಗುವ ಎಲ್‌ಎಮ್‌ಯು ಸಂಖ್ಯೆಗಳನ್ನು ಅವಲಂಬಿಸಿರುತ್ತದೆ.
  • ಅಸಿಸ್ಟೆಡ್-ಜಿಪಿಎಸ್ - ಬಹುಪಾಲು ಜಿಪಿಎಸ್-ಆಧಾರಿತ ತಂತ್ರಜ್ಞಾನ ಯಾವುದು, ಕೇಂದ್ರಸ್ಥಳದಲ್ಲಿ ವಾತಾವರಣದಿಂದ/ಸ್ಥಳ ಲಕ್ಷಣಗಳಿಂದ ಉಂಟಾಗುವ ಜಿಪಿಎಸ್ ತೊಂದರೆಯನ್ನು ಸರಿಪಡಿಸಲು ಆಪರೇಟರ್‌ನನ್ನು ಬಳಸಿಕೊಳ್ಳುತ್ತದೆ. ಜಿಪಿಎಸ್ ಸ್ಥಾನೀಕರಣ ತಂತ್ರಜ್ಞಾನವು ಒಳಾವರಣ ಹಾಗೂ ಪಟ್ಟಣ ಪ್ರದೇಶದ ವಾತಾವರಣದಲ್ಲಿ ಸೆಲ್‌ ಆಧಾರಿತ ಸ್ಥಾನೀಕರಣ ವಿಧಾನವನ್ನು ಉಪಯೋಗಿಸಿಕೊಳ್ಳುತ್ತದೆ.
  • ಸಂಕೀರ್ಣ - ಮೇಲೆ ತಿಳಿಸಿದಂತೆ, ಸಂಕೀರ್ಣ ಸ್ಥಾನೀಕರಣ ಪದ್ಧತಿಯು ಯಾವ ಸಂಕೇತಗಳು ಸದ್ಯದಲ್ಲಿ ಲಭ್ಯವಿದೆ ಎನ್ನುವುದನ್ನು ಅವಲಂಬಿಸಿ ವಿವಿಧ ಕ್ರಮಗಳನ್ನು ಬಳಸುತ್ತದೆ.

ಕಾರ್ಯಕಾರಿ ಉದ್ದೇಶ ಬದಲಾಯಿಸಿ

ಫೋನಿನಲ್ಲಿ ರೂಟ್ ಕಾಲ್‌ ಮಾಡಲು ಸೆಲ್ ಸ್ತಂಭಗಳು ಫೋನಿನಿಂದ ಕಳಿಸಲ್ಪಡುವ ಸಂಕೇತವನ್ನು ಆಲಿಸುತ್ತವೆ ಮತ್ತು ಯಾವ ಸ್ತಂಭವು ಫೋನಿನ ಸಂಪರ್ಕ ಸಾಧಿಸಲು ಉತ್ತಮವಾದುದೆಂದು ನಿರ್ಧರಿಸುತ್ತದೆ. ಫೋನಿನ ಸ್ಥಳ ಬದಲಾವಣೆಯಾದ ಹಾಗೆ, ಏರಿಯಲ್ ಸ್ಥಂಭಗಳು ಸಂಕೇತವನ್ನು ಪರೀಕ್ಷಿಸುತ್ತದೆ ಮತ್ತು ಫೋನನ್ನು ಸೂಕ್ತವಾದ ಪಕ್ಕದ ಸ್ತಂಭಕ್ಕೆ ವರ್ಗಾಯಿಸುತ್ತದೆ ಹಲವಾರು ಏರಿಯಲ್ ಸ್ತಂಭಗಳಿಂದ, ಸಂಬಂಧಪಟ್ಟ ಸಂಕೇತ ಬಲಗಳನ್ನು ಹೋಲಿಕೆ ಮಾಡುವುದರಿಂದ ಸಾಮಾನ್ಯವಾಗಿ ಒಂದು ಫೋನಿನ ಸ್ಥಳವನ್ನು ಸರಿಸುಮಾರಾಗಿ ಅಂದಾಜಿಸಬಹುದು. ಇನ್ನುಳಿದ ಅಂಶವೆಂದರೆ ಆಂಟೆನಾ ಕೋನಿಯ ಸ್ಥಳವನ್ನು ಪತ್ತೆಹಚ್ಚುತ್ತದೆಯೋ ಮತ್ತು ಹಂತವನ್ನು ಬೇಧಿಸಲು ಸಹಾಯಮಾಡುವ ಏರಿಯಲ್ ವಿನ್ಯಾಸವನ್ನು ಹೊಂದಿದೆಯೊ ಎಂಬುದನ್ನು ನೋಡಿಕೊಳ್ಳಬೇಕು. ಹೊಸ ಫೋನ್‌ಗಳು ಅವು ಕಾರ್ಯಗತದಲ್ಲಿದ್ದಾಗ ಮತ್ತು ಟೆಲಿಫೋನ್ ಕರೆಯಲ್ಲಿ ಸಕ್ರಿಯವಿಲ್ಲದೇ ಇರುವಾಗ ಕೂಡ ಫೋನ್ ಟ್ರ್ಯಾಕಿಂಗ್‌ಗೆ ಅವಕಾಶ ನೀಡುವುದು. ರೋಮಿಂಗ್ ಕಾರ್ಯದಲ್ಲಿ ಫೋನ್‌ನ ಸಿಗ್ನಲ್‌ ಅನ್ನು ಒಂದು ಕೇಂದ್ರ ಸ್ಥಳದಿಂದ ಮತ್ತೊಂದಕ್ಕೆ ವರ್ಗಾಯಿಸುವುದರ ಮೂಲಕ ಉಂಟಾಗುವುದು.[೪]

ಆಸಕ್ತಿ ಹೊಂದಿದವರು ಬದಲಾಯಿಸಿ

ಫೋನ್‌ ಇರುವ ಸ್ಥಳವನ್ನು ಒಂದು ಸಾಮಾನ್ಯ ಜಾಲ ತಾಣದಲ್ಲಿ ತೋರಿಸುವ ಮೂಲಕ "ಸ್ನೇಹಿತರು ಮತ್ತು ಕುಟುಂಬವು" ಅವರು ಕೊನೆಯಲ್ಲಿ ಫೋನ್‌ ಯಾವ ಸ್ಥಾನದಲ್ಲಿ ಇತ್ತು ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಬಹುದು. ಹೊಸ ಫೋನ್‌ಗಳು ಯಾವ ಸಮಾನ ಪ್ರಕಾರದಲ್ಲಿ ಬಳಸಲ್ಪಡುವ ಜಿಪಿಎಸ್ ರಿಸೀವರ್‌ಗಳ ರಚನೆಯನ್ನು ಹೊಂದಿರಬಹುದು ಎಂಬುದರ ಮೇಲೆ ಇನ್ನೂ ಹೆಚ್ಚಿನ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ.

ಖಾಸಗಿತನ ಬದಲಾಯಿಸಿ

ಸ್ಥಳೀಕರಣ ಅಥವಾ ಸ್ಥಾನೀಕರಣ ಎನ್ನುವುದು ಸೂಕ್ಷ್ಮವಾದ ಖಾಸಗಿ ವಿಷಯಕ್ಕೆ ಸಂಬಂಧಿಸಿದ್ದು, ಆದರೂ ಇದು ಬೇರೊಬ್ಬರಿಗೆ ಒಬ್ಬ ವ್ಯಕ್ತಿಯ ಅನುಮತಿ ಇಲ್ಲದೆ, ಅವರ ತಪಾಸಣೆ ನಡೆಸಲು ಅನುಮತಿ ನೀಡುವುದು. ಸ್ಥಾನೀಕರಣ ಕೆಲಸಕ್ಕೆ ಕಠಿಣ ನಿಯಮಗಳನ್ನು ಮತ್ತು ಭದ್ರತಾ ಕ್ರಮಗಳನ್ನು ಬಲವಾಗಿ ಸೂಚಿಸಲಾಗುವುದು ಹಾಗೂ ಸೇವೆ ಒದಗಿಸುವವರು, ಬಳಕೆದಾರರ ಮೊಬೈಲ್ ಫೋನಿನ ಸ್ಥಾನೀಕರಣ ಮಾಹಿತಿಯನ್ನು ಅಂದಾಜಿಸುವುದರೊಳಗೆ ಬಳಕೆದಾರರು ಒಂದು ಸೂಚಿತ, ಸ್ಪಷ್ಟ ಒಪ್ಪಿಗೆಯನ್ನು ಸೇವೆ ಒದಗಿಸುವವರಿಗೆ ನೀಡಬೇಕು. ಯುರೋಪ್‌ನಂತ ದೇಶಗಳಲ್ಲಿ ಸಂವಹನ ಗುಪ್ತತೆ ಯ ಸಾಂವಿಧಾನಿಕ ಗ್ಯಾರಂಟಿಯನ್ನು ಪಡೆಯುವ ಮೂಲಕ ಮೊಬೈಲ್‌ ಫೋನ್‌ ಮೂಲಕ ಪಡೆದುಕೊಂಡ ಸ್ಥಳ ವಿವರಗಳನ್ನು ಸಂವಹನ ಎಂದೇ ಪರಿಗಣಿಸಿ ಗುಪ್ತವಾಗಿಡಲಾಗುವುದು. ಸಂಯುಕ್ತ ರಾಷ್ಟ್ರದಲ್ಲಿ ದೂರಸಂಪರ್ಕದ ಖಾಸಗಿತನಕ್ಕೆ ಸ್ಪಷ್ಟ ಶಾಸನಾಧಾರಿತ ಖಾತರಿಯಿಲ್ಲ, ಅದಕ್ಕಾಗಿ ಕಾನೂನಿನಲ್ಲಿ ಸ್ಥಳ ಮಾಹಿತಿ ಬಳಕೆಯು ಮಿತಕ್ಕೊಳಪಟ್ಟಿದೆ. ಜರ್ಮನಿಯಲ್ಲಿರುವ ತೆರಿಗೆ ಕಟ್ಟುವ ವಿಧಾನದಂತೆ ಸ್ಥಾನೀಕರಣ ವಿಧಾನದ ಉಪಕರಣಗಳೂ ಕೂಡ ಸೂಕ್ಷ್ಮ ವಿಷಯವಾಗಿದ್ದು ಸಂವಹನ ಗುಪ್ತತೆಯ ಪ್ರಕಾರ ಸಾಂವಿಧಾನಿಕ ಪರಿಮಿತಿಯಲ್ಲಿ ಬರುತ್ತವೆ. ಇಲ್ಲಿ ತೆರಿಗೆ ಸಂಬಂಧಿ ಅಂಶಗಳನ್ನು ರಸ್ತೆ ತೆರಿಗೆಗಿಂತ ಇತರ ವಿಷಯಗಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಇದು ವಿಚಿತ್ರ ಸನ್ನಿವೇಶವನ್ನು ಉಂಟುಮಾಡಿದ್ದು ಈ ರೀತಿಯ ತಂತ್ರಜ್ಞಾನ ಬಳಸಿಕೊಂಡು ಅಪರಾಧ ನಡೆಸಿದರೂ ಕೂಡ ಅದನ್ನು ಹೊರಗೆಡಹುವುದು ಸಾಧ್ಯವಾಗುವುದಿಲ್ಲ., ಅಧಿಕೃತವಾಗಿ, ಹಕ್ಕುದಾರರು (ಆರಕ್ಷಕರಂಥಹವರು) ತುರ್ತು ಸಂದರ್ಭಗಳಲ್ಲಿ ಅಂದರೆ ಎಲ್ಲಿ ಜನರು (ಅಪರಾಧಿಗಳನ್ನು ಒಳಗೊಂಡು) ಕಾಣೆಯಾದಾಗ ಫೋನಿನ ಸ್ಥಳ ಪತ್ತೆಹಚ್ಚಲು ಅನುಮತಿಯನ್ನು ಪಡೆಯಬಹುದು. ಎಫ್‌ಬಿಐ ಮೊದಲು ಈ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದ್ದು ಎನಿಸುತ್ತದೆ. ಎಲ್ಲೋ ದೂರದಲ್ಲಿದ್ದುಕೊಂಡು ಮೊಬೈಲ್‌ ಫೋನ್‌ನ ಮೈಕ್ರೊಫೋನ್‌ ಅನ್ನು ಚಾಲ್ತಿಗೊಳಿಸುವ ಮೂಲಕ ಆಚೀಚೆಯ ಅಪರಾಧಿಗಳ ಸಂವಹನವನ್ನು ಮುದ್ರಿಸಿಕೊಳ್ಳಲು ಪ್ರಾರಂಭಿಸಿತು. ಇದನ್ನು ಸ್ಥಾನೀಕರಣವಿಲ್ಲದೇ ಅಥವಾ ಇರುವ ಸಮಯದಲ್ಲೂ ಬಳಸಬಹುದಾಗಿದೆ. ಈ ತಂತ್ರವನ್ನು ’ರೋವಿಂಗ್‌ ಬಗ್‌’ ಎಂದು ಕರೆಯಲಾಗುತ್ತದೆ ಮತ್ತು ಇದಕ್ಕೆ ಯು.ಎಸ್‌ನ ನ್ಯಾಯಾಂಗೀಯ ಇಲಾಖೆಯು ಒಪ್ಪಿಗೆ ನೀಡಿದೆ.[೫] ಯುಎಸ್‌ಎ ಈ ರೀತಿಯ ಟ್ರ್ಯಾಕಿಂಗ್‌ ಮಾಡಲು ಪೋಲೀಸರು ಸರಿಯಾದ ಕಾರಣವಿರುವ ವಾರಂಟ್‌ ತೋರಿಸಬೇಕು ಎಂದು ಕಾನೂನು ಮಾಡಲಾಗಿದೆ.[೬] ಎಲೆಕ್ಟ್ರಾನಿಕ್ ಫ್ರಂಟೀಯರ್‌ ಫೌಂಡೇಷನ್ ಕೆಲವು ಪ್ರಕರಣಗಳನ್ನು ಟ್ರ್ಯಾಕ್‌ ಮಾಡುತ್ತಿದ್ದು ಇದರಲ್ಲಿ ಯುಎಸ್‌ಎ ವಿ.ಪೆನ್‌ ರೆಜಿಸ್ಟರ್‌ ಸರ್ಕಾರವು ದರೋಡೆಕೋರರನ್ನು ಹಾಗೂ ರಾಜಕೀಯ ಕ್ರಾಂತಿಕಾರರನ್ನು ಟ್ರ್ಯಾಕ್‌ ಮಾಡುತ್ತಿದೆ.[೭] ಕೆಲವು ’ಉಚಿತ’ ಟ್ರ್ಯಾಕಿಂಗ್‌ ಸೇವೆಗಳು ಸೆಲ್ಯುಲಾರ್‌ ದೂರವಾಣಿ ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಮೂಲಕ ’ಟೆಲೆಮಾರ್ಕೇಟರ್ಸ್‌’ ಪಟ್ಟಿಗೆ ಇದನ್ನು ಸೇರಿಸಲು ಸಹಾಯ ಮಾಡುತ್ತವೆ.

ಇವನ್ನೂ ನೋಡಿ ಬದಲಾಯಿಸಿ

ಆಕರಗಳು ಬದಲಾಯಿಸಿ

  1. "Tracking a suspect by mobile phone: Tracking SIM and handset". BBC News. 2005-08-03. Retrieved 2010-01-02.
  2. "ಲೊಕೇಶನ್ ಬೇಸ್ಡ್ ಸರ್ವೀಸಸ್ ಫಾರ‍್ ಮೊಬೈಲ್ಸ್ : ಟೆಕ್ನಾಲಜೀಸ್ ಆ‍ಯ್‌೦ಡ್ ಸ್ಟಾಂಡರ್ಡ್ಸ್“[ಶಾಶ್ವತವಾಗಿ ಮಡಿದ ಕೊಂಡಿ], ಶು ವಾಂಗ್, ಜಂಗ್ವಾನ್ ಮಿನ್ ಆ‍ಯ್‌೦ಡ್ ಬೈಯಂಗ್ ಕೆ. ಯಿ, IEEE ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆನ್ ಕಮ್ಯುನಿಕೇಶನ್ (ಐಸಿಸಿ) 2008, ಬೀಜಿಂಗ್, ಚೀನಾ
  3. Gsm#Cellular radio network
  4. "Roving Bug in Cell Phones Used By FBI to Eavesdrop on Syndicate". The Chicago Syndicate.
  5. "FBI taps cell phone mic as eavesdropping tool". ZDNet. Archived from the original on 2008-05-15. Retrieved 2010-04-19.
  6. http://www.washingtonpost.com/wp-dyn/content/article/2008/09/11/AR2008091103292.html
  7. "Cell Tracking".

ಬಾಹ್ಯ ಕೊಂಡಿಗಳು ಬದಲಾಯಿಸಿ