ಮುದ್ದೇಬಿಹಾಳ ಒಂದು ನಗರ ಹಾಗೂ ತಾಲ್ಲೂಕು ಕೇಂದ್ರ .ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಮುದ್ದೇಬಿಹಾಳ ಪಟ್ಟಣವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿ - 41 ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೮೦ ಕಿ.ಮಿ. ದೂರ ಇದೆ.

ಮುದ್ದೇಬಿಹಾಳ
ಮುದ್ದೇಬಿಹಾಳ
village
Population
 (೨೦೧೨)
 • Total೩೫೦೦೦
Websitewww.muddebihaltown.gov.in

ಮುದ್ದೇಬಿಹಾಳದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.

ಚರಿತ್ರೆ ಬದಲಾಯಿಸಿ

ಬಾಸರಗೌಡ ನಾಡಗೌಡರ ಪೂರ್ವಜರಾದ ಪರಮಣ್ಣನವರಿಂದ ೧೬೮೦ ರಲ್ಲಿ ಸ್ಥಾಪಿಸಲಾಯಿತು.ಅದೇ ಮನೆತನದ ಹುಚ್ಚಪ್ಪನವರು ೧೭೨೦ ರಲ್ಲಿ ಕೋಟೆ ಕಟ್ಟಿಸಿದ್ದರು.

ಮುದ್ದೇಬಿಹಾಳ ನಗರವು ವಿಜಯಪುರ ಜಿಲ್ಲೆಯ ಪಡುಮೂಲೆಯ ಒಂದು ತಾಲೂಕು. ಹೀಗೆ ಪಡುಮೂಲೆಯ ತಾಲೂಕೆಂದು ಹೆಸರು ಬರಲು ತಾಲೂಕಿನ ತಾಳಿಕೋಟಿ, ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿರುವುದೇ ಕಾರಣ. ತಾಳಿಕೋಟಿಯು ತಾಲೂಕು ಕೇಂದ್ರ ಮುದ್ದೇಬಿಹಾಳಕ್ಕಿಂತ ವ್ಯಾಪಾರ ಮುಂತಾದ ಕ್ಷೇತ್ರಗಳಲ್ಲಿ ಮುಂದಿದೆ. ಜಿಲ್ಲೆಯ ಅತ್ಯಂತ ಚಿಕ್ಕ ಗಾತ್ರದ ತಾಲೂಕು. ಐತಿಹಾಸಿಕವಾಗಿ ಪ್ರಸಿದ್ಧವಾದ ಅನೇಕ ಸ್ಥಳಗಳು ಇಲ್ಲಿವೆ. ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ೧೫೬೫ರ ತಾಳಿಕೋಟಿ(ರಕ್ಕಸ ತಂಗಡಗಿ) ಯುದ್ಧ ಸ್ಥಳಗಳು ಇಲ್ಲಿವೆ.

ಈ ತಾಲೂಕಿನಲ್ಲಿ ಒಟ್ಟು ೩೧ ಗ್ರಾಮ ಪಂಚಾಯತಿಗಳು ಹಾಗೂ ೪ ಹೋಬಳಿಗಳನ್ನು ಒಳಗೊಂಡಿದೆ. ೪ ಹೋಬಳಿಗಳೆಂದರೆ,

  • ಮುದ್ದೇಬಿಹಾಳ
  • ತಾಳಿಕೋಟಿ
  • ನಾಲತವಾಡ
  • ಢವಳಗಿ

ಇಲ್ಲಿರುವ ಒಂದು ಈಶ್ವರ ದೇವಾಲಯ ಪ್ರಸಿದ್ದ. ಬಸರಕೋಡ ಗ್ರಾಮದಲ್ಲಿ ಜಕಣಾಚಾರ್ಯರಿಂದ ನಿರ್ಮಿತವಾದ ಒಂದು ಜೈನ ದೇವಾಲಯವು,೧೭೫೦ ರಲ್ಲಿ ಮಲ್ಲಿಕಾರ್ಜುನ,೧೮೦೫ ರಲ್ಲಿ ೩ ಲಿಂಗ ಗುಡಿ. ೨ ಮಸೀದಿಗಳಲ್ಲಿ ಪಾಂಚ್ ಪೀರ್ ಮಸೀದಿ-ಪಂಚ ಪಾಂಡವ ದೇವಾಸ್ಥಾನವೆಂದು ಹಿಂದುಗಳಿಗೆ ಪ್ರಸಿದ್ದವಾಗಿದೆ.

ಮುದ್ದೇಬಿಹಾಳ ಪುರಸಭೆ Archived 2013-08-10 ವೇಬ್ಯಾಕ್ ಮೆಷಿನ್ ನಲ್ಲಿ.

ಧಾರ್ಮಿಕ ಕೇಂದ್ರಗಳು ಬದಲಾಯಿಸಿ

  • ಬಸರಕೋಡ - ಅಮರ ಶಿಲ್ಪಿ ಜಕನಾಚಾರಿಯಿಂದ 1805ರಲ್ಲಿ ಮಲ್ಲಿಕಾರ್ಜುನ ಮತ್ತು ಮೂರು ಲಿಂಗ ದೇವಾಲಯಗಳ ನಿರ್ಮಾಣವಾಗಿದೆ ಎನ್ನುತ್ತಾರೆ.
  • ನಾಲತವಾಡ - ಮಹಾ ದಾಸೋಹಿ ಮಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಮಹಾಮಠ ವಿದೆ.
  • ತಾಳಿಕೋಟೆ - ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮಠವಿದೆ.

ಭೌಗೋಳಿಕ ಬದಲಾಯಿಸಿ

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಮುದ್ದೇಬಿಹಾಳ ತಾಲ್ಲೂಕವು ಉತ್ತರಕ್ಕೆ ಸಿಂದಗಿ ಜಿಲ್ಲೆ , ಪಶ್ಚಿಮಕ್ಕೆ ಬಸವನ ಬಾಗೇವಾಡಿ ತಾಲ್ಲೂಕು ಮತ್ತು ವಿಜಯಪುರ ತಾಲ್ಲೂಕು, ದಕ್ಷಿಣಕ್ಕೆ ರಾಯಚೂರ ಜಿಲ್ಲೆ ಮತ್ತು ಪೂರ್ವಕ್ಕೆ ಗುಲ್ಬರ್ಗಾ ಜಿಲ್ಲೆ ಇದೆ. ಈ ತಾಲ್ಲೂಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ಇದೆ. ಮುದ್ದೇಬಿಹಾಳ ತಾಲ್ಲೂಕವು ೧೪೩ ಹಳ್ಳಿಗಳು, ೩೨ ಗ್ರಾಮ ಪಂಚಾಯತಗಳು, ೪ ಹೊಬಳಿಗಳನ್ನೊಳಗೊಂಡಿದೆ.

ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ತಾಳಿಕೋಟಿ ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.

ಹವಾಮಾನ ಬದಲಾಯಿಸಿ

  • ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆ ಕಾಲ - 35°C - 42°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು ಮಳೆಗಾಲ - 18°C - 28°Cಡಿಗ್ರಿ ಸೆಲ್ಸಿಯಸ್
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಮಳೆ ಮಾಪನ ಕೇಂದ್ರಗಳು ಬದಲಾಯಿಸಿ

  • ಮುದ್ದೇಬಿಹಾಳ - ತಾಳಿಕೋಟ, ನಾಲತವಾಡ, ಢವಳಗಿ, ನಾರಾಯಣಪುರ.

ಸಾಂಸ್ಕೃತಿಕ ಬದಲಾಯಿಸಿ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ, ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ವಿಜಯಪುರದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.

ಆಹಾರ (ಖಾದ್ಯ) ಬದಲಾಯಿಸಿ

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರ ದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಸಾಕ್ಷರತೆ ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ತಾಲ್ಲೂಕಿನಲ್ಲಿ ಪುರುಷರು 2.5 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 4 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ.

ಜನಸಂಖ್ಯೆ ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು 4.5 ಲಕ್ಷಕ್ಕೂ ಹೆಚ್ಚು ಇದೆ. 3 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 2 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ ಮುದ್ದೇಬಿಹಾಳ ನಗರದ ಜನಸಂಖ್ಯೆಯು 50 ಸಾವಿರಕ್ಕೂ ಅಧಿಕವಾಗಿದೆ. ಪ್ರತಿಶತ 70%ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ತಾಲ್ಲೂಕಿನಲ್ಲಿ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 940 ಜನ ಮಹಿಳೆಯರಿದ್ದಾರೆ. ಕರ್ನಾಟಕದಲ್ಲಿ 3.56% ಜನಸಂಖ್ಯೆ ಹೊಂದಿದೆ.

ಭಾಷೆಗಳು ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ.

ದೇವಾಲಯಗಳು ಬದಲಾಯಿಸಿ

ಶ್ರೀ ಶಿವಶರಣ ವೀರೇಶ್ವರರ ಮಠ ನಾಲತವಾಡ, ಅಯ್ಯನಗುಡಿ ಗಂಗಾಧರೇಶ್ವರ ದೇವಸ್ಥಾನ ನಾಲತವಾಡ, ಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯ ನಾಗಲಿಂಗೇಶ್ವರ ,ಪವಾಡ ಬಸವೇಶ್ವರ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು ಬದಲಾಯಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು ಬದಲಾಯಿಸಿ

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಕೃಷಿ ಬದಲಾಯಿಸಿ

ಕೃಷಿ ಮುದ್ದೇಬಿಹಾಳ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು ಇತ್ಯಾದಿ.

ನೀರಾವರಿ ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಸಂಸ್ಕೃತಿ ಬದಲಾಯಿಸಿ

 
ಲಂಬಾಣಿ ಜನಾಂಗದ ಮಹಿಳೆ
 
ಉತ್ತರ ಕರ್ನಾಟಕದ ಊಟ
 
ಕೃಷ್ಣ ಗೋಪಾಲ ಜೋಶಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ.

ಕಲೆ ಬದಲಾಯಿಸಿ

ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.

ಆರ್ಥಿಕತೆ ಬದಲಾಯಿಸಿ

ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.

ವ್ಯಾಪಾರ ಬದಲಾಯಿಸಿ

ಮುದ್ದೇಬಿಹಾಳ, ನಾಲತವಾಡ ಮತ್ತು ತಾಳಿಕೋಟಿ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.

ಉದ್ಯೋಗ ಬದಲಾಯಿಸಿ

ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.

ಶಿಕ್ಷಣ ಬದಲಾಯಿಸಿ

ಪ್ರಮುಖ ಶಿಕ್ಷಣ ಸಂಸ್ಥೆಗಳು

  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಮುದ್ದೇಬಿಹಾಳ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಮುದ್ದೇಬಿಹಾಳ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಮುದ್ದೇಬಿಹಾಳ
  • ಸರಕಾರಿ ಉರ್ದು ಪ್ರೌಡ ಶಾಲೆ, ಮುದ್ದೇಬಿಹಾಳ
  • ಲಯನ್ಸ್ ಶಾಲೆ, ಮುದ್ದೇಬಿಹಾಳ
  • ಸರಕಾರಿ ಪ್ರೌಡ ಶಾಲೆ, ಮುದ್ದೇಬಿಹಾಳ
  • ಜ್ಣಾನಭಾರತಿ ಪ್ರೌಡ ಶಾಲೆ, ಮುದ್ದೇಬಿಹಾಳ
  • ವಿ.ಬಿ.ಸಿ. ಪ್ರೌಡ ಶಾಲೆ, ಮುದ್ದೇಬಿಹಾಳ
  • ಎಮ್.ಜಿ.ಎಮ್.ಕೆ.(ಆಂಗ್ಲ ಮಾಧ್ಯಮ) ಪ್ರೌಡ ಶಾಲೆ, ಮುದ್ದೇಬಿಹಾಳ
  • ಎಮ್.ಜಿ.ವಿ.ಸಿ. ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಎಮ್.ಜಿ.ಎಮ್.ಕೆ. ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಅಂಜುಮನ್ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಎಮ್.ಜಿ.ವಿ.ಸಿ. ಕಲಾ, ವಾಣಿಜ್ಯ ಮತ್ತು ವಿಜ್ಣಾನ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಶ್ರೀ ವೀರೇಶ್ವರ ಕಲಾ ಮಹಾವಿದ್ಯಾಲಯ, ನಾಲತವಾಡ, ಮುದ್ದೇಬಿಹಾಳ
  • ಶ್ರೀ ಸಿದ್ರಾಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಮುದ್ದೇಬಿಹಾಳ
  • ಬಾಪೂಜಿ ಕೈಗಾರಿಕಾ ತರಬೇತಿ ಕೇಂದ್ರ, ಮುದ್ದೇಬಿಹಾಳ
  • ಎ.ಪಿ.ಜೆ.ಅಬ್ದುಲ್ ಕಲಾಮ್ ಕೈಗಾರಿಕಾ ತರಬೇತಿ ಕೇಂದ್ರ, ಮುದ್ದೇಬಿಹಾಳ
  • ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಶಿವಯೋಗಿ ಸಂಗಮಾರ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಶ್ರೀ ವೀರೇಶ್ವರ ಶಿಕ್ಷಣ ಮಹಾವಿದ್ಯಾಲಯ, ನಾಲತವಾಡ, ಮುದ್ದೇಬಿಹಾಳ

ಪ್ರಮುಖ ವ್ಯಕ್ತಿಗಳು ಬದಲಾಯಿಸಿ

 
ಮುದ್ದೇಬಿಹಾಳ ತಾಲ್ಲೂಕು
  • ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು
  • ಶ್ರೀ ಶರಣ ವೀರೇಶ್ವರರ ನಾಲತವಾಡ
  • ಸಿದ್ದು ನಾಲತವಾಡ
  • ರಾಜು ತಾಳಿಕೋಟಿ

ರಾಜಕೀಯ ಬದಲಾಯಿಸಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವಾಗಿದೆ.

ಮುದ್ದೇಬಿಹಾಳ ಪುರಸಭೆಯು 1973ರಲ್ಲಿ ರಚನೆಯಾಯಿತು. ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಮುದ್ದೇಬಿಹಾಳ ಮತಕ್ಷೇತ್ರ(2018)ದಲ್ಲಿ 1,03,038 ಪುರುಷರು, 97,844 ಮಹಿಳೆಯರು ಸೇರಿ ಒಟ್ಟು 2,00,882 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸ-ತಂಗಡಗಿಯಲ್ಲೇ. ಇಲ್ಲಿನ ಮಿಣಜಗಿಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ಮಹಿಳಾ ರಾಜಕಾರಣಿಗೆ ಮನ್ನಣೆ ನೀಡಿದ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ. ನಾಲ್ಕು ದಶಕಗಳಿಂದ ಎರಡು ಮನೆತನಕ್ಕಷ್ಟೇ ಮನ್ನಣೆ ನೀಡಿರುವುದು ಇಲ್ಲಿನ ವೈಶಿಷ್ಟ್ಯ.

ಆಂಗ್ಲರ ಅಧಿಪತ್ಯ ಅಳಿದು 70 ವರ್ಷಗಳಾದರೂ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಮತದಾರ ಪ್ರಭು ಇನ್ನೂ ದೇಸಗತಿ ಮನೆತನಕ್ಕೆ ಮಣೆ ಹಾಕುತ್ತಿರುವುದು ಕ್ಷೇತ್ರದ ವಿಶೇಷ. ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡ ಹಾಗೂ ಜಗದೇವರಾವ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು ಅಧಿಕಾರದ ಫಲ ನೀಡುತ್ತಲೇ ಇದ್ದಾರೆ. 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಚುನಾವಣೆವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ.

1994ರಲ್ಲಿ ನಡೆದ ಚುನಾವಣೆಯಲ್ಲಿ ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದ ವಿಮಲಾಬಾಯಿ ದೇಶಮುಖ ಜಿಲ್ಲೆಯ ಎರಡನೇ ಮಹಿಳಾ ಶಾಸಕಿ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಜಗದೇವರಾವ ಅವರ ಪತ್ನಿ ವಿಮಲಾಬಾಯಿ ಸಫಲರಾದರು. 1994ರಲ್ಲಿ ಅನುಕಂಪದ ಆಧಾರದ ಮೇಲೆ ವಿಮಲಾದೇವಿ ಭರ್ಜರಿ ಜಯಸಾಧಿಸಿದರು.

ಮುದ್ದೇಬಿಹಾಳ ಕೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದ ಸಿ.ಎಸ್‌.ನಾಡಗೌಡರು ಪಂಚಾಯಿತಿಯಿಂದ ಈ ಮಟ್ಟಕ್ಕೆ ಬೆಳೆದವರು. 1986ರಲ್ಲಿ ನಾಲತವಾಡ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಡಗೌಡರಿಗೆ 1989ರ ಅಸೆಂಬ್ಲಿ ಚುನಾವಣೆಯಲ್ಲಿ ಅದೃಷ್ಟ ಒಲಿಯಿತು. ಅಲ್ಲಿಂದೀಚೆಗೆ 5 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯ ಸಚೇತಕ, ಪ್ರಸ್ತುತ ಸರಕಾರದಲ್ಲಿ ದಿಲ್ಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ.

1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಮಲ್ಲಪ್ಪ ಮುರಗೆಪ್ಪ ಸಜ್ಜನ(ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ (1978ರಿಂದ 2018ರವರೆಗಿನ ನಾಲ್ಕು ದಶಕಗಳ ಅವಧಿ) ಆಯ್ಕೆಯಾದವರು ಪಂಚಮಸಾಲಿ ಮತ್ತು ರಡ್ಡಿ ಸಮುದಾಯದವರು.

ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ.ಎಸ್‌.ನಾಡಗೌಡ (ರಡ್ಡಿ) ಶಾಸಕರು. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ ಬಿಜೆಪಿಯ ಮಂಗಳಾದೇವಿ ಬಿರಾದಾರ ಪ್ರಬಲ ಪೈಪೋಟಿ ನೀಡಿದ್ದಾರೆ.

ಪಕ್ಷವಾರು ಸಾಧನೆ ಪರಿಗಣಿಸಿದರೆ ಸದರಿ ಕ್ಷೇತ್ರ ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದೆ. 1957ರ ಸಾರ್ವತ್ರಿಕ ಚುನಾವಣೆ ಗಣನೆಗೆ ತೆಗೆದುಕೊಳ್ಳುವುದಾದರೆ ಅಂದಿನ ಭಾರತೀಯ ಕಾಂಗ್ರೆಸ್ ಪಕ್ಷದ ಸಿದ್ಧಾಂತಿ ಪ್ರಾಣೇಶ ಗುರುಭಟ್ಟರು, ಆ ಬಳಿಕ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ, ಹಾಗೂ ಮಲ್ಲಪ್ಪ ಮುರಗೆಪ್ಪ ಸಜ್ಜನ ಸಾಲಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ ಸಾಧನೆ. ಪ್ರಪ್ರಥಮ ಬಾರಿಗೆ ಜನತಾ ಪಕ್ಷದಿಂದ ಜಗದೇವರಾವ ಅವರು ಅಧಿಕಾರ ಕಸಿದುಕೊಂಡು ಹ್ಯಾಟ್ರಿಕ್ ಸಾಧನೆ ಮೆರೆದರು.

1966ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾದ ಬಳಿಕ ತಾಳಿಕೋಟೆ ಕ್ಷೇತ್ರವು ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಲೀನವಾಯಿತು. ಮೊದಲೆರಡು ಚುನಾವಣೆಯಲ್ಲಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿದ್ದ ತಾಳಿಕೋಟೆಯಿಂದ 1957ರಲ್ಲಿ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲರು ಸ್ವತಂತ್ರ ಅಭ್ಯರ್ಥಿಯಾಗಿ(15,200) ಗೆಲುವು ಸಾಧಿಸಿದರು. ಇವರ ವಿರುದ್ಧ ಭಾರತೀಯ ಕಾಂಗ್ರೆಸ್ ಪಕ್ಷದಿಂದ ಶರಣಯ್ಯ ಬಸಲಿಂಗಯ್ಯ ವಸ್ತ್ರದ (12,804) ಪರಾಜಯಗೊಂಡರು. ಆ ಬಳಿಕ 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಭಾರತೀಯ ಕಾಂಗ್ರೆಸ್​ನಿಂದ ಅವಿರೋಧ ಆಯ್ಕೆಯಾದರು.

ಕ್ಷೇತ್ರದ ವಿಶೇಷತೆ

  • 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲರು ಭಾರತೀಯ ಕಾಂಗ್ರೆಸ್​ನಿಂದ ಜಿಲ್ಲೆಯಲ್ಲಿ ಈವರೆಗೆ ಅವಿರೋಧ ಆಯ್ಕೆಯಾದ ಏಕೈಕ ಶಾಸಕರಾಗಿದ್ದು ವಿಶೇಷವಾಗಿದೆ.
  • ಜಗದೇವರಾವ ದೇಶಮುಖರವರು ಇಂಧನ ಖಾತೆ ಸಚಿವರಾಗಿದ್ದರು.
  • ವಿಮಲಾಬಾಯಿ ದೇಶಮುಖರವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು.
  • ಸಿ.ಎಸ್.ನಾಡಗೌಡರು ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕ, ನವದೆಹಲಿ ವಿಶೇಷ ಪ್ರತಿನಿಧಿಯಾಗಿದ್ದು ಕ್ಷೇತ್ರದ ಮೈಲಿಗಲ್ಲು.
  • ಜನತಾ ಪಕ್ಷದಿಂದ ಜಗದೇವರಾವರವರು ಹ್ಯಾಟ್ರಿಕ್ ಆಯ್ಕೆಯಾಗಿದ್ದು ಕ್ಷೇತ್ರದ ವಿಶೇಷತೆಯಾಗಿದೆ.
  • ಸಿ.ಎಸ್.ನಾಡಗೌಡರು ಕಾಂಗ್ರೆಸ್ ಪಕ್ಷದಿಂದ ಹ್ಯಾಟ್ರಿಕ್ ಬಾರಿಸಿ ಐದು ಬಾರಿ ಆಯ್ಕೆಯಾಗಿದ್ದು ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ.
  • ನಾಡಗೌಡ ಹಾಗೂ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ.
  • ಎ.ಎಸ್.ಪಾಟೀಲ(ನಡಹಳ್ಳಿ)ಯವರು ಮೊದಲ ಬಾರಿಗೆ 2018ರಲ್ಲಿ ಬಿಜೆಪಿಯಿಂದ ಗೆದ್ದಿರುವುದು ವಿಶೇಷವಾಗಿದೆ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2018 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಎ.ಎಸ್.ಪಾಟೀಲ(ನಡಹಳ್ಳಿ) ಬಿಜೆಪಿ 63512 ಸಿ.ಎಸ್.ನಾಡಗೌಡ ಕಾಂಗ್ರೆಸ್ 54879
2013 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ ಕಾಂಗ್ರೆಸ್ 34747 ವಿಮಲಾಬಾಯಿ ದೇಶಮುಖ ಕೆ.ಜೆ.ಪಿ 22545
2008 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ ಕಾಂಗ್ರೆಸ್ 24065 ಮಂಗಳಾದೇವಿ ಬಿರಾದಾರ ಬಿ.ಜೆ.ಪಿ 21662
2004 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ ಕಾಂಗ್ರೆಸ್ 30203 ವಿಮಲಾಬಾಯಿ ದೇಶಮುಖ ಜೆ.ಡಿ.ಎಸ್. 27776
1999 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ ಕಾಂಗ್ರೆಸ್ 43662 ವಿಮಲಾಬಾಯಿ ದೇಶಮುಖ ಜೆ.ಡಿ.ಯು. 32632
1994 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವಿಮಲಾಬಾಯಿ ದೇಶಮುಖ ಜೆ.ಡಿ. 39149 ಸಿ.ಎಸ್.ನಾಡಗೌಡ ಕಾಂಗ್ರೆಸ್ 21756
1989 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ ಕಾಂಗ್ರೆಸ್ 31933 ಜಗದೇವರಾವ್ ದೇಶಮುಖ ಜೆ.ಡಿ. 29840
1985 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಜಗದೇವರಾವ್ ದೇಶಮುಖ ಜೆ.ಎನ್.ಪಿ. 35056 ಬಸವರಾವ್ ಜಗ್ಗಲ ಕಾಂಗ್ರೆಸ್ 16052
1983 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಜಗದೇವರಾವ್ ದೇಶಮುಖ ಜೆ.ಎನ್.ಪಿ. 21885 ರಾಮರಾವ್ ಭಗವಂತ ಸ್ವತಂತ್ರ 9530
1978 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಜಗದೇವರಾವ್ ದೇಶಮುಖ ಜೆ.ಎನ್.ಪಿ. 28857 ಮಲ್ಲಪ್ಪ ಸಜ್ಜನ ಕಾಂಗ್ರೆಸ್ 11486
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಮಲ್ಲಪ್ಪ ಸಜ್ಜನ ಕಾಂಗ್ರೆಸ್ 17778 ಶಿವಶಂಕರಪ್ಪ ಗುರಡ್ಡಿ ಎನ್.ಸಿ.ಓ 17021
1967 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಶಿವಶಂಕರಪ್ಪ ಗುರಡ್ಡಿ ಕಾಂಗ್ರೆಸ್ 19452 ಶ್ರೀಶೈಲಪ್ಪ ಮಸಳಿ ಎಸ್.ಡ್ಬ್ಲೂ.ಎ 14740
1962 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಶಿವಶಂಕರಪ್ಪ ಗುರಡ್ಡಿ ಕಾಂಗ್ರೆಸ್ 13969 ಶ್ರೀಶೈಲಪ್ಪ ಮಸಳಿ ಎಸ್.ಡ್ಬ್ಲೂ.ಎ 10680
1957 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿದ್ಧಾಂತಿ ಪ್ರಾಣೇಶ ಭಟ್ ಕಾಂಗ್ರೆಸ್ 12888 ಶಿವಬಸವಸ್ವಾಮಿ ವಿರಕ್ತಮಠ ಸ್ವತಂತ್ರ 11657
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿದ್ಧಾಂತಿ ಪ್ರಾಣೇಶ ಭಟ್ ಕಾಂಗ್ರೆಸ್ 16627 ಭೀಮನಗೌಡ ಪಾಟೀಲ ಕೆ.ಎಂ.ಪಿ.ಪಿ 7745

ಆರೋಗ್ಯ ಬದಲಾಯಿಸಿ

ಮುದ್ದೇಬಿಹಾಳ ನಗರದಲ್ಲಿ ಸರಕಾರಿ ತಾಲ್ಲೂಕು ಆಸ್ಪತ್ರೆಯಿದೆ.

ವಿದ್ಯುತ್ ಪರಿವರ್ತನಾ ಕೇಂದ್ರಗಳು ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು

  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮುದ್ದೇಬಿಹಾಳ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಂಗಡಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಢವಳಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ನಾಲತವಾಡ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಾಳಿಕೋಟಿ

ಬ್ಯಾಂಕಗಳು ಬದಲಾಯಿಸಿ

  • ವಿಜಯ ಬ್ಯಾಂಕ, ಮುದ್ದೇಬಿಹಾಳ
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಮುದ್ದೇಬಿಹಾಳ
  • ಡಿ.ಸಿ.ಸಿ. ಬ್ಯಾಂಕ, ಮುದ್ದೇಬಿಹಾಳ
  • ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ, ಮುದ್ದೇಬಿಹಾಳ
  • ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ, ಮುದ್ದೇಬಿಹಾಳ
  • ಯೂನಿಯನ್ ಬ್ಯಾಂಕ ಆಫ್ ಇಂಡಿಯಾ ಮುದ್ದೇಬಿಹಾಳ
  • ಸಿಂಡಿಕೇಟ್ ಬ್ಯಾಂಕ, ಮುದ್ದೇಬಿಹಾಳ
  • ಕಾರ್ಪೋರೇಶನ್ ಬ್ಯಾಂಕ, ಮುದ್ದೇಬಿಹಾಳ
  • ಕರ್ನಾಟಕ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)
  • ಮುಸ್ಲಿಂ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)
  • ತಾಳಿಕೋಟ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)
  • ಭಾವಸಾರ ಕ್ಷತ್ರೀಯ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)
  • ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್, ನಾಲತವಾಡ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)

ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು ಬದಲಾಯಿಸಿ

ಅಡವಿ ಸೋಮನಾಳ, ಆಲೂರ, ಬಿ.ಸಾಲವಾಡಗಿ, ಬಂಟನೂರ, ಬಸರಕೋಡ, ಬಾವೂರ, ಬಿದರಕುಂದಿ, ಬಿಜ್ಜೂರ, ಢವಳಗಿ, ಹಡಲಗೇರಿ, ಹಿರೇಮುರಾಳ, ಹಿರೂರ, ಹುಲ್ಲೂರ, ಇಂಗಳಗೇರಿ, ಕಾಳಗಿ, ಕವಡಿಮಟ್ಟಿ, ಕೊಡಗಾನೂರ, ಕೋಳೂರ, ಕೊಣ್ಣೂರ, ಕುಂಟೋಜಿ, ಮಡಿಕೇಶ್ವರ, ಮಿಣಜಗಿ, ಮೊಕಿಹಾಳ, ನಾಗಬೇನಾಳ, ನಾಲತವಾಡ, ರಕ್ಕಸಗಿ, ರೂಡಗಿ, ತಂಗಡಗಿ, ತುಂಬಗಿ, ಯರಝರಿ, ಯಲಗೂರ.

ಮುದ್ದೇಬಿಹಾಳ ತಾಲ್ಲೂಕಿನ ಪಿನಕೋಡ್ ಸಂಕೇತಗಳು ಬದಲಾಯಿಸಿ

ಢವಳಗಿ - ೫೮೬೧೧೬, ನಾಲತವಾಡ - ೫೮೬೧೨೪, ತಂಗಡಗಿ - ೫೮೬೧೨೯,ಮುದ್ದೇಬಿಹಾಳ - ೫೮೬೨೧೨, ತಾಳಿಕೋಟಿ - ೫೮೬೨೧೪,

ಮುದ್ದೇಬಿಹಾಳ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು ಬದಲಾಯಿಸಿ

ಢವಳಗಿ, ತಾಳಿಕೋಟಿ, ಮುದ್ದೇಬಿಹಾಳ, ನಾಲತವಾಡ.

ಪಟ್ಟಣ ಪಂಚಾಯತಿಗಳು ಬದಲಾಯಿಸಿ

ಆರಕ್ಷಕ (ಪೋಲಿಸ್) ಠಾಣೆ ಬದಲಾಯಿಸಿ

ಮುದ್ದೇಬಿಹಾಳ ನಗರದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿ ಹೊಂದಿದೆ.

ಮುದ್ದೇಬಿಹಾಳ ತಾಲ್ಲೂಕಿನ ಪೋಲಿಸ್ ಠಾಣೆಗಳು ಬದಲಾಯಿಸಿ

  • ಪೋಲಿಸ್ ಠಾಣೆ, ಮುದ್ದೇಬಿಹಾಳ
  • ಪೋಲಿಸ್ ಠಾಣೆ, ತಾಳಿಕೋಟ
  1. ಹೊರ ಪೋಲಿಸ್ ಠಾಣೆ, ನಾಲತವಾಡ

ಸಕ್ಕರೆ ಕಾರ್ಖಾನೆಗಳು ಬದಲಾಯಿಸಿ

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ನಾಲತವಾಡ, ಕಾಳಗಿ, ಕೊಣ್ಣೂರ, ಮಡಿಕೇಶ್ವರ, ಕಾರಗನೂರ, ತಮದಡ್ಡಿ, ತಂಗಡಗಿ, ಢವಳಗಿ, ಅಡವಿ ಸೋಮನಾಳ, ಬಂಟನೂರ

ಪಶು ಆಸ್ಪತ್ರೆಗಳು ಬದಲಾಯಿಸಿ

  • ಪಶು ಆಸ್ಪತ್ರೆ, ಮುದ್ದೇಬಿಹಾಳ

ಪಶು ಚಿಕಿತ್ಸಾಲಯಗಳು

ನಾಲತವಾಡ, ಕೊಡಗಾನೂರ, ತಂಗಡಗಿ, ಮಿಣಜಗಿ, ತುಂಬಗಿ, ಕಾಳಗಿ, ಢವಳಗಿ, ರಕ್ಕಸಗಿ, ಬಂಟನೂರ, ಮಡಿಕೇಶ್ವರ, ಯರಝರಿ.

ಪ್ರಾಥಮಿಕ ಪಶು ಚಿಕಿತ್ಸಾಲಯಗಳು

ಬಸರಕೋಡ, ಅಡವಿ ಸೋಮನಾಳ, ಇಂಗಳಗೇರಿ, ಹಿರೇಮುರಾಳ, ಬಿ.ಸಾಲವಾಡಗಿ, ಕೊಣ್ಣೂರ, ದೇವರ ಹುಲಗಬಾಳ, ತಮದಡ್ಡಿ .

ಆಕರ್ಷಣೆಗಳು ಬದಲಾಯಿಸಿ

ಈ ತಾಲೂಕಿನಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಸ್ಥಳಗಳೂ ಇವೆ.

ತಾಲ್ಲೂಕು ಪಂಚಾಯತಿಗಳು ಬದಲಾಯಿಸಿ

  • ತಾಲ್ಲೂಕು ಪಂಚಾಯತ, ಮುದ್ದೇಬಿಹಾಳ

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಟ್ಟು 20 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಮುದ್ದೇಬಿಹಾಳ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ಜಿಲ್ಲಾ ಪಂಚಾಯತ ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ಉಚಿತ ಪ್ರಸಾದನಿಲಯಗಳು ಬದಲಾಯಿಸಿ

ಮುದ್ದೇಬಿಹಾಳ ,ತಾಳಿಕೋಟೆ, ಢವಳಗಿ, ಕೊಡಗಾನೂರ, ಕೊಣ್ಣೂರ, ರಕ್ಕಸಗಿ.

ಗ್ರಂಥಾಲಯಗಳು (ವಾಚನಾಲಯಗಳು) ಬದಲಾಯಿಸಿ

  • ನಗರ ಕೇಂದ್ರ ಗ್ರಂಥಾಲಯ, ಮುದ್ದೇಬಿಹಾಳ

ದೂರವಾಣಿ ಸಂಕೇತಗಳು ಹಾಗೂ ವಿನಿಮಯ ಕೇಂದ್ರಗಳು ಬದಲಾಯಿಸಿ

  • ಮುದ್ದೇಬಿಹಾಳ - 08356

ಮುದ್ದೇಬಿಹಾಳ ತಾಲ್ಲೂಕಿನಲ್ಲಿರುವ ಬಿ.ಎಸ್.ಎನ್.ಎಲ್ ದೂರವಾಣಿ ವಿನಿಮಯ ಕೇಂದ್ರಗಳು

ಬಿ.ಸಾಲವಾಡಗಿ, ಬಸರಕೋಡ, ಢವಳಗಿ, ಹಿರೇಮುರಾಳ, ಹಿರೂರ, ಹುಲ್ಲೂರ, ಗುಂಡಕನಾಳ, ಇಂಗಳಗೇರಿ, ಕೊಣ್ಣೂರ, ಮಡಿಕೇಶ್ವರ, ಮುದ್ದೇಬಿಹಾಳ , ನಾಲತವಾಡ, ತಂಗಡಗಿ, ತಾಳಿಕೋಟಿ.

ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು ಬದಲಾಯಿಸಿ

ದೂರವಾಣಿ ಕೈಪಿಡಿ ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕು ಸರ್ಕಾರಿ ಕಾರ್ಯಾಲಯಗಳು

  • ತಹಸಿಲ್ದಾರರ ಕಾರ್ಯಾಲಯ - 323750
  • ಖಜಾನೆ ಕಾರ್ಯಾಲಯ - 323680
  • ಆಹಾರ ಮತ್ತು ನಾಗರಿಕ ಪುರೈಕೆ ಕಾರ್ಯಾಲಯ - 323220
  • ಭೂಮಿ ಕಾರ್ಯಾಲಯ - 323050
  • ಉಪನೋಂದನಿ ಅಧಿಕಾರಿಗಳ ಕಾರ್ಯಾಲಯ - 220297

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು) ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)

ಬಳಬಟ್ಟಿ, ಬಳಗಾನೂರ, ಬಸರಕೋಡ, ಬಂಟನೂರ, ಬಿದರಕುಂದಿ, ಬೊಮ್ಮನಹಳ್ಳಿ, ಢವಳಗಿ, ಗಾಳಿಪೂಜಿ, ಗರಸಂಗಿ, ಗುಂಡಕನಾಳ, ಹಗರಗೊಂಡ, ಹಿರೂರ, ಹಿರೇಮುರಾಳ, ಹುಲ್ಲೂರ, ಜಂಬಲದಿನ್ನಿ, ಕಂದಗನೂರ, ಕವಡಿಮಟ್ಟಿ, ಕೇಸಾಪುರ, ಕೊಡಗಾನೂರ, ಕೋಳೂರ, ಕೊಣ್ಣೂರ, ಕುಚಬಾಳ, ಲಿಂಗದಳ್ಳಿ, ಮಡಿಕೇಶ್ವರ, ಮಲಗಲದಿನ್ನಿ, ಮಿಣಜಗಿ, ಮುದ್ದೇಬಿಹಾಳ, ಮುಕಿಹಾಳ, ನಾಗಬೇನಾಳ, ನಾಲತವಾಡ, ನಾವದಗಿ, ರಕ್ಕಸಗಿ, ಸರೂರ, ಟಕ್ಕಲಕಿ, ತಮದಡ್ಡಿ, ತಂಗಡಗಿ, ತಾರನಾಳ, ತುಂಬಗಿ, ಯಲಗೂರ, ಯರಝರಿ.

ಕೆರೆಗಳು ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನ ಕೆರೆಗಳು

ಹೊಕ್ರಾಣಿ, ಮುದ್ನಾಳ, ಗೆದ್ದಲಮರಿ, ಬಸರಕೋಡ, ತಾರನಾಳ, ತಮದಡ್ಡಿ, ಗುಂಡಕರಜಗಿ-ರೂಡಗಿ, ಹಗರಗೊಂಡ, ಅರಸನಾಳ, ಮದಿನಾಳ, ಆಲಕೊಪ್ಪರ, ಅಗಸಬಾಳ, ಇಂಗಳಗೇರಿ-ಗುಡ್ನಾಳ, ಮಡಿಕೆ ಶಿರೂರ, ಅಡವಿ ಹುಲಗಬಾಳ, ಮಲಕಾಪುರ, ತಾರನಾಳ.

ಮುದ್ದೇಬಿಹಾಳ ತಾಲ್ಲೂಕಿನ ಜಿನುಗು ಕೆರೆಗಳು

ಜಲಪುರ, ವನಹಳ್ಳಿ, ಬಳಗಾನೂರ, ಕೋಳೂರ, ಮಲಗಾಲದಿನ್ನಿ.

ಆಣೆಕಟ್ಟುಗಳು ಬದಲಾಯಿಸಿ

  • ನಾರಾಯಣಪುರ ಆಣೆಕಟ್ಟು(ಬಸವ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಸಿದ್ದಾಪುರ ಗ್ರಾಮದ ಬಳಿ ಕಟ್ಟಲಾಗಿದೆ.

ಕೃಷಿ ಮಾರುಕಟ್ಟೆಗಳು ಬದಲಾಯಿಸಿ

ಮುದ್ದೇಬಿಹಾಳ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು

  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮುದ್ದೇಬಿಹಾಳ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತಾಳಿಕೋಟ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ನಾಲತವಾಡ

ರೈತ ಸಂಪರ್ಕ ಕೇಂದ್ರಗಳು ಬದಲಾಯಿಸಿ

  • ಮುದ್ದೇಬಿಹಾಳ - ತಾಳಿಕೋಟ, ನಾಲತವಾಡ, ಢವಳಗಿ.

ಹಾಲು ಉತ್ಪಾದಕ ಘಟಕಗಳು ಬದಲಾಯಿಸಿ

ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.

ಮುದ್ದೇಬಿಹಾಳ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ಹಂಡರಗಲ್ಲ, ಹುಲ್ಲೂರ, ಕಂದಗನೂರ, ನಾಗರಾಳ, ರೊಡಗಿ, ಯರಝರಿ.

ಬೆಳೆಗಳು ಬದಲಾಯಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಅಕ್ಕಿ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ದಾಳಿಂಬೆ, ಚಿಕ್ಕು , ನಿಂಬೆ,ಮಾವು, ಬಾಳೆ,ಬಾರಿಹಣ್ಣು , ಕಬ್ಬು , ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯಗಳು ಬದಲಾಯಿಸಿ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿಗಳು ಬದಲಾಯಿಸಿ

ತೋಳ, ನರಿ, ಕತ್ತೆಕಿರುಬ, ಕಾಡುಹಂದಿ, ಮೊಸಳೆ, ಮೊಲ, ಕಾಡುಬೆಕ್ಕು, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಅಗ್ನಿಶಾಮಕ ಠಾಣೆಗಳು ಬದಲಾಯಿಸಿ

  • ಅಗ್ನಿಶಾಮಕ ಠಾಣೆ, ಮುದ್ದೇಬಿಹಾಳ

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಬದಲಾಯಿಸಿ

ರಾಜ್ಯ ಹೆದ್ದಾರಿಗಳು

ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾಲತವಾಡ - ನಾರಾಯಣಪುರ - ಲಿಂಗಸಗೂರ.

ರಾಜ್ಯ ಹೆದ್ದಾರಿ - 60 => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ.

ರಾಜ್ಯ ಹೆದ್ದಾರಿ - 61 => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ.

ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.

ಚಿತ್ರ ಮಂದಿರಗಳು ಬದಲಾಯಿಸಿ

ಮುದ್ದೇಬಿಹಾಳ

  • 1. ಗಿರಿಜಾ ಶಂಕರ ಚಿತ್ರ ಮಂದಿರ
  • 2. ಲಕ್ಷ್ಮಿ, ಚಿತ್ರ ಮಂದಿರ

ತಾಳಿಕೋಟ

  • 1. ಅಮೀರ ಚಿತ್ರ ಮಂದಿರ
  • 2. ಮಹಾವೀರ ಚಿತ್ರ ಮಂದಿರ
  • ನಾಲತವಾಡ
  • ರಘುವೀರ್ ಚಿತ್ರ ಮಂದಿರ

ದಿಕ್ಕುಗಳು ಬದಲಾಯಿಸಿ