ಮುಚ್ಚಂಜೆಯು (ಮುಸ್ಸಂಜೆ) ಸಂಧ್ಯಾಕಾಲದ ಅತಿ ಅಂಧಕಾರದ ಹಂತದಲ್ಲಿ, ಅಥವಾ ಖಗೋಳೀಯ ಸಂಧ್ಯಾಕಾಲದ ಅತ್ಯಂತ ಕೊನೆಯಲ್ಲಿ ಸೂರ್ಯಾಸ್ತದ ನಂತರ ಮತ್ತು ರಾತ್ರಿಗೆ ಸ್ವಲ್ಪ ಮುನ್ನ ಸಂಭವಿಸುತ್ತದೆ. ಮುಚ್ಚಂಜೆಯ ಮೊದಲು, ಸಂಧ್ಯಾಕಾಲದ ಮುಂಚಿನ ಹಂತದಿಂದ ಮಧ್ಯಮ ಹಂತದ ಅವಧಿಯಲ್ಲಿ, ನಿರಭ್ರ ಸಂದರ್ಭಗಳಲ್ಲಿ ಆಕಾಶದಲ್ಲಿ ಹೊರಾಂಗಣದಲ್ಲಿ ಕೃತಕ ದೀಪಗಳಿಲ್ಲದೆ ಓದುವಷ್ಟು ಬೆಳಕು ಇರಬಹುದು, ಆದರೆ ನಾಗರಿಕ ಸಂಧ್ಯಾಕಾಲದ ಅಂತ್ಯದಲ್ಲಿ ಭೂಮಿಯು ಸೂರ್ಯನ ಕೇಂದ್ರವು ಸ್ಥಳೀಯ ಕ್ಷಿತಿಜಕ್ಕಿಂತ 6° ಕೆಳಗಿರುವ ಬಿಂದುವಿಗೆ ತಿರುಗಿದಾಗ, ಹೊರಗಡೆ ಓದಲು ಕೃತಕ ದೀಪವ್ಯವಸ್ಥೆಯು ಬೇಕಾಗುತ್ತದೆ. ಮುಚ್ಚಂಜೆ ಪದವು ಸಾಮಾನ್ಯವಾಗಿ ಖಗೋಳೀಯ ಮುಚ್ಚಂಜೆ, ಅಥವಾ ರಾತ್ರಿ ಶುರುವಾಗುವ ಮುನ್ನ ಸಂಧ್ಯಾಕಾಲದ ಅತಿ ಅಂಧಕಾರದ ಭಾಗವನ್ನು ಸೂಚಿಸುತ್ತದೆ.

ತಾಂತ್ರಿಕವಾಗಿ, ಮುಚ್ಚಂಜೆಯ ಮೂರು ಹಂತಗಳೆಂದರೆ:

  • ನಾಗರಿಕ ಮುಚ್ಚಂಜೆ - ಸೂರ್ಯನ ಬಿಂಬದ ಕೇಂದ್ರವು ಸಂಜೆಯ ವೇಳೆ ಕ್ಷಿತಿಜದ ಕೆಳಗೆ 6° ಇಳಿದ ಸಮಯ. ಇದು ನಾಗರಿಕ ಸಂಧ್ಯಾಕಾಲದ ಅಂತ್ಯವನ್ನು ಗುರುತಿಸುತ್ತದೆ.
  • ಸಮುದ್ರಯಾನ ಮುಚ್ಚಂಜೆ- ಸೂರ್ಯವು ಸಂಜೆಯ ವೇಳೆ ಕ್ಷಿತಿಜದ ಕೆಳಗೆ 12° ಚಲಿಸಿದಂತೆ ತೋರುತ್ತದೆ. ಇದು ಸಮುದ್ರಯಾನ ಸಂಧ್ಯಾಕಾಲದ ಅಂತ್ಯವನ್ನು ಗುರುತಿಸುತ್ತದೆ.
  • ಖಗೋಳೀಯ ಮುಚ್ಚಂಜೆ- ಸಂಜೆಯ ವೇಳೆ ಸೂರ್ಯನ ಸ್ಥಾನವು ಕ್ಷಿತಿಜದ ಕೆಳಗೆ 18° ಇರುತ್ತದೆ. ಇದು ಸಮುದ್ರಯಾನ ಮುಚ್ಚಂಜೆಯ ವೇಳೆ ಆರಂಭವಾಗುವ ಖಗೋಳೀಯ ಸಂಧ್ಯಾಕಾಲದ ಅಂತ್ಯವನ್ನು ಗುರುತಿಸುತ್ತದೆ.[೧]

ಉಲ್ಲೇಖಗಳು ಬದಲಾಯಿಸಿ

  1. "Dusk – Definition and Meaning". www.timeanddate.com.