ಮುಕ್ಕಾಲಿಯು ಸಾಗಿಸಬಲ್ಲ ಮೂರು ಕಾಲಿನ ಚೌಕಟ್ಟು ಅಥವಾ ಬಡು. ಇದನ್ನು ಬೇರೊಂದು ವಸ್ತುವಿನ ತೂಕಕ್ಕೆ ಆಧಾರವಾಗಲು ಮತ್ತು ಅದರ ಸ್ಥಿರತೆಯನ್ನು ಕಾಪಾಡಲು ವೇದಿಕೆಯಾಗಿ ಬಳಸಲಾಗುತ್ತದೆ. ಮುಕ್ಕಾಲಿಯು ಕೆಳಮುಖದ ಬಲಗಳು ಮತ್ತು ಸಮತಲ ಅಕ್ಷಗಳ ದಿಕ್ಕಿನಲ್ಲಿನ ಸಮತಲ ಬಲಗಳು ಹಾಗೂ ಚಲನೆಗಳ ವಿರುದ್ಧ ಸ್ಥಿರತೆಯನ್ನು ಒದಗಿಸುತ್ತದೆ. ಲಂಬ ಕೇಂದ್ರದಿಂದ ದೂರವಿರುವ ಮೂರು ಕಾಲುಗಳ ಸ್ಥಾಪನೆಯು ಮುಕ್ಕಾಲಿಗೆ ಪಾರ್ಶ್ವ ಬಲಗಳನ್ನು ತಡೆದುಕೊಳ್ಳಲು ಹೆಚ್ಚು ಉತ್ತಮ ಬಲದ ಅವಕಾಶ ನೀಡುತ್ತದೆ

ಮೋಜಣಿದಾರನ ಮುಕ್ಕಾಲಿ

ಸಾಂಸ್ಕೃತಿಕ ಬಳಕೆ ಬದಲಾಯಿಸಿ

ಚೀನಾ ಮತ್ತು ಗ್ರೀಸ್‍ನ ಪ್ರಾಚೀನ ಜನರು ಸೇರಿದಂತೆ ಅನೇಕ ಸಂಸ್ಕೃತಿಗಳು ಮುಕ್ಕಾಲಿಗಳನ್ನು ಆಭರಣಗಳು, ಪಾರಿತೋಷಕಗಳು, ಬಲಿಪೀಠಗಳು, ಅಡುಗೆ ಪಾತ್ರೆಗಳು ಅಥವಾ ಕಡಾಯಿಗಳು, ಮತ್ತು ಅಲಂಕಾರಿಕ ಪಿಂಗಾಣಿ ಸಾಮಾನುಗಳಾಗಿ ಬಳಸುತ್ತಿದ್ದವು. ಕ್ರಿ.ಪೂ. ೭ನೇ ಮತ್ತು ೮ನೇ ಸಹಸ್ರಮಾನದಲ್ಲಿನ ಅತ್ಯಂತ ಮುಂಚಿನ ನವಶಿಲಾಯುಗ ಸಂಸ್ಕೃತಿಗಳಾದ ಸೀಶಾನ್ ಹಾಗೂ ಪೇಯ್ಲಿಗಾಂಗ್‍‍ನ ಕಾಲದಿಂದ ಮುಕ್ಕಾಲಿ ಸಾಮಾನುಗಳು ಚೀನಾದಲ್ಲಿ ಪುರಾತತ್ವ ಸಂಗ್ರಹಗಳ ಭಾಗವಾಗಿವೆ.[೧]

ಉಲ್ಲೇಖಗಳು ಬದಲಾಯಿಸಿ

  1. Stark, Miriam T. (2006). Archaeology of Asia. Blackwell Publishing. p. 44. ISBN 978-1-4051-0213-1.