ಮುಂಜಾನೆಯ ಮಂಜು

ಕನ್ನಡ ಚಲನಚಿತ್ರ

ಮುಂಜಾನೆಯ ಮಂಜು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಮುಂಜಾನೆಯ ಮಂಜು
ಮುಂಜಾನೆಯ ಮಂಜು
ನಿರ್ದೇಶನಪಿ.ಹೆಚ್.ವಿಶ್ವನಾಥ್
ನಿರ್ಮಾಪಕಸಂದೇಶ್ ನಾಗರಾಜ್
ಪಾತ್ರವರ್ಗಅಂಬರೀಶ್ ಸುಧಾರಾಣಿ, ತಾರಾ ಅಶ್ವಥ್, ರಮೇಶ್ ಭಟ್, ಅವಿನಾಶ್
ಸಂಗೀತಹಂಸಲೇಖ
ಛಾಯಾಗ್ರಹಣಆರ್.ಮಂಜುನಾಥ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಸಂದೇಶ್ ಕಂಬೈನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

ಚಿತ್ರ: ಮುಂಜಾನೆಯ ಮಂಜು (೧೯೯೩/1993)

ಸಾಹಿತ್ಯ: ಹಂಸಲೇಖ

ಸಂಗೀತ: ಹಂಸಲೇಖ

ಹಾಡಿದವರು: ಡಾ.ರಾಜ್‌ಕುಮಾರ್

ಹಾಡಿನ ಸಾಹಿತ್ಯ ಬದಲಾಯಿಸಿ

ಮನೆ ಮುಂದೆ ಸೀಗೆ ಬೇಲಿ ಬೇಡ

ಇದ್ರು ಮೇಲೆ ಬಟ್ಟೇನ್ ಹಾಕೋದ್ ಬೇಡ

ವೇದ ಸುಳ್ಳೆ ಆದ್ರು ಗಾದೆ ಸುಳ್ಳೆ

ಹೂವೆ ಇದ್ರು ಬೇಲಿ ತುಂಬ ಮುಳ್ಳೆ


ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ

ಬೊಂಬೆಗಳ ಕಾಯಕವೆ ಕುಣಿಯುವುದಮ್ಮ

ಮನಸಿನ ಕೈಯೊಳಗೆ ನಾವ್ ಮಾನವರಮ್ಮ

ಮಾನವರ ಕಾಯಕವೆ ಮಣಿಯುವುದಮ್ಮ


ಬೇವಿನ್ ಗಿಡಕೆ ಬೆಲ್ಲ ಸುರಿಯೋದ್ ದಂಡ

ಗಂಡ ಬಿಟ್ಟ ಹೆಣ್ಣು ಸೆರಗಿನ್ ಕೆಂಡ

ಮನವೆಂಬ ಬನಕೆ ಮದುವೆ ಬೇಲಿಯ

ಬಿಗಿದಿರುವುದು ಏಕೆ ಎಂದು ಅರಿತೆಯ

ನಗೊ ಹೆಣ್ಣು ಅಳೊ ಗಂಡು ಒಂದೆ

ನಂಬಿ ಮೋಸ ಹೋದ್ರೆ ತಪ್ಪು ನಮ್ದೆ

ಪರನಾರಿಯ ನೋಡದಿರಲು ಗಂಡಸು

ಜೊತೆಯಾದಳು ತಾಳಿ ಹೊರುವ ಹೆಂಗಸು

ನಿನ್ನ ಮನೆ ನಿನ್ನ ಪತಿ ಅಂಕೆಯಲಿರಲಿ

ಜೀವ ಕೊಡೊ ಗೆಳತಿಯರು ಶಂಕೆಯಲಿರಲಿ


ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ

ಬೊಂಬೆಗಳ ಕಾಯಕವೆ ಕುಣಿಯುವುದಮ್ಮ

ಮನಸಿನ ಕೈಯೊಳಗೆ ನಾವ್ ಮಾನವರಮ್ಮ

ಮಾನವರ ಕಾಯಕವೆ ಮಣಿಯುವುದಮ್ಮ


ತಲೆ ಬಾಗಲ್ ದಾನ ಕೊಡೋದ್ ಯಾಕೆ

ರಾತ್ರಿ ಪೂರ ಜಗ್ಲೀಲ್ ಕಾಯೋದ್ ಯಾಕೆ

ಅತಿ ಪ್ರೀತಿಯ ಮಾಡೊ ಮನಸು ನಿನ್ನದು

ಕೆಡಬಹುದು ಎನುವ ಮನಸು ಅವನದು

ಸಲ್ಗೆ ಕೊಟ್ರೆ ನಾಯಿ ಮಡಕೆ ಮುಟ್ತು

ಅಯ್ಯೊ ಅಂದ್ರೆ ಶಾಪ ನೆತ್ತಿಗ್ ಏರ್ತು

ನೆಲೆ ಕಾಣದ ಹೆಣ್ಣು ಮನಸು ಅವಳದು

ಅಪವಾದವ ಹುಡುಕೊ ಮನಸು ಜನರದು

ಹೇಳಿದರೆ ಕೇಳದಿರೊ ಮಾರನ ಮನಸು

ಜಾರಿದರೆ ಉಳಿಯುವುದೆ ಪ್ರೇಮದ ಕನಸು


ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ

ಬೊಂಬೆಗಳ ಕಾಯಕವೆ ಕುಣಿಯುವುದಮ್ಮ

ಮನಸಿನ ಕೈಯೊಳಗೆ ನಾವ್ ಮಾನವರಮ್ಮ

ಮಾನವರ ಕಾಯಕವೆ ಮಣಿಯುವುದಮ್ಮ