ಮಾನ್ಮತ್ ನ ಜೆಫ್ರಿ (1095-1154). ಇಂಗ್ಲಿಷ್ ಪಾದ್ರಿ ಚರಿತ್ರಕಾರ. ಸೇಂಟ್ ಆಸಫ್‍ನ ಬಿಷಪ್ ಆಗಿದ್ದ (1152-54).

ಇವನು ಹಿಸ್ಟೋರಿಯ ಬ್ರಿಟನಮ್ ಎಂಬ ಗ್ರಂಥವನ್ನೂ ಬ್ರಿಟನ್ ಕುರಿತ ದಂತಕಥೆಗಳ ಇನ್ನೊಂದು ಕೃತಿಯನ್ನೂ ಬರೆದ. ಎರಡನೆಯದು ನಷ್ಟವಾಗಿದೆ. ಈ ಗ್ರಂಥಗಳಲ್ಲಿ ಟ್ರೋಜನರಿಂದ ಮುಂದಕ್ಕೆ ಬ್ರಿಟಿಷ್ ದೊರೆಗಳ ವಂಶವನ್ನು ಗುರುತಿಸಿದ್ದಾನೆ. ಮುಂದಿನ ಅರ್ಧ ಶತಮಾನದಲ್ಲಿ ಇವನ ಮೊದಲನೆಯ ಗ್ರಂಥದ ವಸ್ತುವನ್ನೇ ಭಾಗಶಃ ಆಧರಿಸಿ, 6ನೆಯ ಶತಮಾನದಲ್ಲಿ ಬ್ರಿಟನ್ನರ ದೊರೆಯಾಗಿದ್ದನೆನ್ನಲಾದ ಆರ್ಥರನ ಸಾಹಸಗಳನ್ನು ಕುರಿತ ಸಾಹಸಕಾರ್ಯಗಳ ಕಥೆಗಳು ಪ್ರಚಲಿತವಾದುವು. ಬೆವರ್ಲಿಯ ಆಲ್ಫ್ರೆಡ್ ಆ ಗ್ರಂಥವನ್ನು ಸಂಗ್ರಹಿಸಿ ಒಂದು ಗ್ರಂಥ ಬರೆದ. ಇದು ಇಬ್ಬರಿಂದ ಆಂಗ್ಲೊ-ನಾರ್ಮನ್ ಭಾಷೆಗೆ ಭಾಷಾಂತರವಾಯಿತು. ಇವುಗಳಲ್ಲಿ ಒಂದು ಭಾಷಾಂತರ ಇಂಗ್ಲಿಷಿಗೆ ಅನುವಾದ ಹೊಂದಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: