ಮಾನಸ ಗಂಗೋತ್ರಿ[೧]ಮೈಸೂರು ವಿಶ್ವವಿದ್ಯಾನಿಲಯದ ಮುಖ್ಯ ಕ್ಯಾಂಪಸ್. ಇದು ೧೯೬೦ರಲ್ಲಿ ನಿರ್ಮಿತವಾಯಿತು. ಸುಮಾರು ೭೪೦ ಏಕರೆಯಷ್ಟು ವಿಸ್ತೀರ್ಣವಿರುವ ಈ ಪ್ರಾಕೃತಿಕ ಸೌಂದರ್ಯದ ನೆಲೆಯು ಮೈಸೂರು ನಗರದ ಪಶ್ಚಿಮ ದಿಕ್ಕಿನಲ್ಲಿರುವ ಕುಕ್ಕರಹಳ್ಳಿ ಕೆರೆಯ ಪಶ್ಚಿಮ ದಂಡೆಯಲ್ಲಿದೆ. ವಿಶ್ವವಿದ್ಯಾನಿಲಯದ ಮುಖ್ಯ ಕಾರ್ಯಾಲಯವಾದ ಕ್ರಾಫರ್ಡ್ ಹಾಲ್ ಕೆರೆಯ ಪೂರ್ವ ದಂಡೆಯಲ್ಲಿದೆ. ಜ್ಞಾನಾರ್ಥಿಗಳ ಬೌದ್ಧಿಕ ಕಾರ್ಯಚಟುವಟಿಕೆಗಳಿಗೆ ಸ್ಪೂರ್ತಿಯ ತಾಣವಾಗಿರುವ ಈ ಕ್ಷೇತ್ರಕ್ಕೆ ಮಾನಸ ಗಂಗೋತ್ರಿಯೆಂದು ರಾಷ್ಟ್ರಕವಿ ಕುವೆಂಪು ಅವರು ನಾಮಕರಣ ಮಾಡಿದರು.ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಜನಾಕರ್ಷಣೆಯ ಕೇಂದ್ರ ಬಿಂದು, ಕ್ಲಾಕ್ ಟವರ್ನನ ಗಡಿಯಾರ. 70 ಲಕ್ಷ ರೂ. ವೆಚ್ಚದಲ್ಲಿ ಈ ಗಡಿಯಾರವನ್ನು ನಿರ್ಮಾಣ ಮಾಡಲಾಗಿತ್ತು.

ಮಾನಸ ಗಂಗೋತ್ರಿ
ಮೈಸೂರು ವಿಶ್ವವಿದ್ಯಾಲಯ ಓರಿಯೆಂಟಲ್ ಗ್ರಂಥಾಲಯ
ಮೈಸೂರು ವಿಶ್ವವಿದ್ಯಾಲಯ ಓರಿಯೆಂಟಲ್ ಗ್ರಂಥಾಲಯ
Coordinates: 12°18′08″N 76°39′00″E / 12.30210°N 76.65007°E / 12.30210; 76.65007
Country ಭಾರತ
Stateಕರ್ನಾಟಕ
Districtಮೈಸೂರು
Time zoneUTC+5:25 (IST)
PIN
570006
Telephone code0821
ಮಹಾರಾಜ ಕಾಲೇಜು
University Boulevard
ಜಿಲ್ಲಾಧಿಕಾರಿ ಕಚೇರಿ
ಕ್ರಾಫರ್ಡ್ ಭವನ, ಮೈಸೂರು ವಿಶ್ವವಿದ್ಯಾಲಯ

ಕುವೆಂಪು ಮತ್ತು ಮಾನಸಗಂಗೋತ್ರಿ ಬದಲಾಯಿಸಿ

  • ಕುವೆಂಪು ಅವರ ಕನಸಿನ ಕೂಸು ಮಾನಸ ಗಂಗೋತ್ರಿ[೨]. ಮೊದಲು ಮಹಾರಾಜ ಕಾಲೇಜಿನಲ್ಲಿ ಆರಂಭಗೊಂಡಿದ್ದ ಸ್ನಾತಕೋತ್ತರ ಕನ್ನಡ ವಿಭಾಗಗಳು ಮಾನಸ ಗಂಗೋತ್ರಿ ಶುರುವಾದೊಡನೆ ಅಲ್ಲಿನ ಕನ್ನಡ ಅಧ್ಯಯನ ಸಂಸ್ಥೆಗೆ ಸೇರ್ಪಡೆಗೊಂಡಿತು. ಹಲವಾರು ಸ್ನಾತಕೋತ್ತರ ವಿಭಾಗಗಳು, ಡಿಪ್ಲೊಮೊ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.
  • ಕುವೆಂಪು ಅವರು ‘ಕನ್ನಡ ಡಿಂಡಿಮ’ವನ್ನು ಬರೆದದ್ದು 1960ರಲ್ಲಿ, ಮೈಸೂರು ವಿಶ್ವವಿದ್ಯಾನಿಲಯದ ವಿಶಾಲ ಮಾನಸ ಗಂಗೋತ್ರಿ ಆವರಣಕ್ಕೆ ಸ್ನಾತಕೋತ್ತರ ವಿಭಾಗಗಳನ್ನು ವರ್ಗಾಯಿಸುವ ಸಂದರ್ಭದಲ್ಲಿ. ಕುಲಪತಿಗಳಾಗಿ ಅವರು ತೆಗೆದುಕೊಂಡಿದ್ದ ಈ ನಿರ್ಧಾರಕ್ಕೆ ವ್ಯಾಪಕವಾದ ವಿರೋಧವೂ ವ್ಯಕ್ತವಾಗಿತ್ತು.
  • ಮಾನಸ ಗಂಗೋತ್ರಿಯ ಉದ್ಘಾಟನೆಯ ಸಂದರ್ಭದಲ್ಲಿ ಮತ್ತು ನಂತರದ ವರ್ಷಗಳಲ್ಲಿ ಹಲವಾರು ಬಾರಿ ಜ್ಞಾನಸೃಷ್ಟಿ ಮತ್ತು ಪ್ರಸರಣಗಳ ಭಾಷೆಯಾಗಿ ಕನ್ನಡವನ್ನು ಬೆಳೆಸುವ ಬಗ್ಗೆ ಕುವೆಂಪು ಮಾತನಾಡಿದರು. ಮಾನಸಗಂಗೋತ್ರಿಯಂತಹ ಹತ್ತಾರು ಆವರಣಗಳನ್ನು ಕರ್ನಾಟಕದಾದ್ಯಂತ ನಾವು ನಂತರದ ಆರು ದಶಕಗಳಲ್ಲಿ ಕಟ್ಟಿಕೊಂಡಿದ್ದೇವೆ. ಆದರೆ ಜಗತ್ತಿನ ಭಾಷೆಗಳ ಜೊತೆಗೆ ಸರಿಸಮನಾಗಿ ಕನ್ನಡ ಬೆಳೆಯುವ ಕುವೆಂಪು ಅವರ ಕನಸು ಇನ್ನೂ ಹಾಗೆಯೆ ಉಳಿದಿದೆ.

ಮಾನಸ ಗಂಗೋತ್ರಿಯಲ್ಲಿರುವ ಸ್ನಾತಕೋತ್ತರ ವಿಭಾಗಗಳು ಬದಲಾಯಿಸಿ

  1. ಗಣಿತಶಾಸ್ತ್ರ
  2. ರಸಾಯನಶಾಸ್ತ್ರ
  3. ಭೌತಶಾಸ್ತ್ರ
  4. ಕಂಪ್ಯೂಟರ್ ವಿಭಾಗ
  5. ಸಂಸ್ಕೃತ ವಿಭಾಗ
  6. ಭೂಗೋಳ ಶಾಸ್ತ್ರ
  7. ಪುರಾತತ್ವ್ತ ಇಲಾಖೆ
  8. ಜೈನಶಾಸ್ತ್ರ
  9. ಜಯಲಕ್ಷ್ಮೀ ವಸ್ತುಸಂಗ್ರಹಾಲಯ
  10. ರೌಂಡ್ ಕ್ಯಾಂಟೀನ್ (ಉಪಹಾರ ಮಂದಿರ)
  11. ಸೆನೆಟ್ ಭವನ
  12. ವಿದ್ಯಾರ್ಥಿ ಕ್ಷೇಮಪಾಲನ ಕಚೇರಿ
  13. ಗಾಂಧಿ ಭವನ
  14. ಕುಕ್ಕರಹಳ್ಳಿ ಕೆರೆ
  15. ಮಾನಸ ಅತಿಥಿ ಗೃಹ
  16. ಗ್ರಂಥಾಲಯ ವಿಜ್ಞಾನ
  17. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ
  18. ಜನಾಕರ್ಷಕ ಗಡಿಯಾರ[೩]
  19. ಸಂಖ್ಯಾಶಾಸ್ತ್ರ
  20. ವಾಣಿಜ್ಯ ಶಾಸ್ತ್ರ
  21. ಗ್ರಂಥಾಲಯ
  22. ಆರೋಗ್ಯಕೇಂದ್ರ
  23. ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು
  24. ವಿಶ್ವವಿದ್ಯಾನಿಲಯದ ವಸತಿ ಗೃಹಗಳು
  25. ತೋಟಗಾರಿಕೆ ಇಲಾಖೆ
  26. ಮಾನಸ ವಸತಿ ಮಂದಿರ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಬದಲಾಯಿಸಿ

  1. ಕನ್ನಡ
  2. ಜಾನಪದ
  3. ಭಾಷಾಶಾಸ್ತ್ರ
  4. ದಕ್ಷಿಣ ಭಾರತೀಯ ಅಧ್ಯಯನ

ಮಾನವಿಕ ವಿಭಾಗಗಳು ಬದಲಾಯಿಸಿ

  1. ಸಮಾಜಶಾಸ್ತ್ರ
  2. ರಾಜ್ಯಶಾಸ್ತ್ರ
  3. ಇತಿಹಾಸ
  4. ಪತ್ರಿಕೋದ್ಯಮ
  5. ತತ್ವ್ತಶಾಸ್ತ್ರ

ಡಿಪ್ಲೊಮೊ ವಿಭಾಗಗಳು ಬದಲಾಯಿಸಿ

  1. ಕನ್ನಡ
  2. ಜಾನಪದ
  3. ಭಾಷಾಶಾಸ್ತ್ರ
  4. ಅನುವಾದ
  5. ಮಹಿಳಾ ಅಧ್ಯಯನ
  6. ಜೈನಶಾಸ್ತ್ರ

ವಿದ್ಯಾರ್ಥಿನಿ ನಿಲಯಗಳು ಬದಲಾಯಿಸಿ

  1. ಸ್ನಾತಕೋತ್ತರ ವಿದ್ಯಾರ್ಥಿನಿ ನಿಲಯ- ಬ್ಲಾಕ್ ೧
  2. ಸ್ನಾತಕೋತ್ತರ ವಿದ್ಯಾರ್ಥಿನಿ ನಿಲಯ- ಬ್ಲಾಕ್ ೨
  3. ಸ್ನಾತಕೋತ್ತರ ವಿದ್ಯಾರ್ಥಿನಿ ನಿಲಯ- ಬ್ಲಾಕ್ ೩
  4. ಸ್ನಾತಕೋತ್ತರ ವಿದ್ಯಾರ್ಥಿ ನಿಲಯ- ಬ್ಲಾಕ್ ೧
  5. ಸ್ನಾತಕೋತ್ತರ ವಿದ್ಯಾರ್ಥಿ ನಿಲಯ- ಬ್ಲಾಕ್ ೨
  6. ಸ್ನಾತಕೋತ್ತರ ವಿದ್ಯಾರ್ಥಿನ ನಿಲಯ- ಬ್ಲಾಕ್ ೩

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಬದಲಾಯಿಸಿ

ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ' ಎಂಬ ಉದಾತ್ತವಾದ ಧ್ಯೇಯವನ್ನಿಟ್ಟುಕೊಂಡು 1992 ರ 'ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕಾಯ್ದೆ' ಯ ಪ್ರಕಾರ ಶಾಸನಾತ್ಮಕವಾಗಿಯೇ ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ 'ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ'[೪] ಸ್ಥಾಪನೆಗೊಂಡಿತು. 1996 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭವಾದ ವಿವಿ 2014 ರವರಗೆ ಯಾವುದೇ ತೊಂದರೆಯಲ್ಲದೆ ನಡೆದುಕೊಂಡು ಬಂದಿತು.

ಉಲ್ಲೇಖಗಳು ಬದಲಾಯಿಸಿ

  1. ಒನ್ಇಂಡಿಯಾ ಕನ್ನಡ
  2. "ಸಮಾಜಮುಖಿ.ಕಾಂ". Archived from the original on 2022-01-24. Retrieved 2018-03-01.
  3. "ಈನಾಡು ಇಂಡಿಯಾ". Archived from the original on 2018-02-24. Retrieved 2018-03-01.
  4. ಸಂಪದ