ಮಾದಿಗ

ಹಿಂದೂ ಧರ್ಮದ ಜಾತಿ

ಮಾದಿಗ ಅಥವಾ ಆದಿಜಾಂಬವರು ಭಾರತಕ್ಕೆ ಜಂಬುದ್ವಿಪ ಎಂದು ಹೆಸರು ಇರಲು ಈ ಜನಾಂಗವೇ ಕಾರಣ. ರಾಮಾಯಣದಲ್ಲಿ ಬರುವ ಜಾಂಬವಂತ ಇದೇ ಕುಲದವನು ಎಂದು ಪುರಾಣ ಹೇಳುತ್ತದೆ. ಮಹಾಭಾರತದಲ್ಲಿಯೂ ಕೂಡ ಆದಿಜಾಂಬವ ಉಲ್ಲೇಖವಿದೆ. ಕೃಷ್ಣನ ಪತ್ನಿ ಜಾಂಬವತಿ ಇದೇ ಕುಲದವಳು. ಇವರು ಹೆಚ್ಚಾಗಿ ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕಂಡು ಬರುತ್ತಾರೆ. ಇವರನ್ನು ಆದಿಜಾಂಬವರು, ಮಾತಂಗರು, ಮಾದಿಗೌಡ, ಮಾದಿಗರು ಮುಂತಾದ ಹೆಸರುಗಳಿಂದಲೂ ಗುರುತಿಸುತ್ತಾರೆ. ಜಾತಿ ಪದ್ಧತಿಯಲ್ಲಿ ಇವರು ಅತ್ಯಂತ ತುಳಿಯಲ್ಪಟ್ಟವರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇವರನ್ನು ಪರಿಶಿಷ್ಟ ಜಾತಿ ಎಂದು ವರ್ಗೀಕರಣ ಮಾಡಿರುತ್ತಾರೆ. ಸಾಂಪ್ರದಾಯಿಕವಾಗಿ ಇವರ ಕಸುಬು ಕೃಷಿ, ಚರ್ಮ ಹದಮಾಡುವುದು, ತಮ್ಮಟೆ, ಡೋಲು ಇತ್ಯಾದಿಗಳನ್ನು ತಯಾರಿಸುವುದು. ಮಾದಿಗರು, ಮಹಾರ್.

ಮಾದಿಗ
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
ಆಂಧ್ರ ಪ್ರದೇಶ, ಕರ್ನಾಟಕ
ಭಾಷೆಗಳು
ತೆಲುಗು ಭಾಷೆ, ಕನ್ನಡ
ಧರ್ಮ
ಹಿಂದೂ, ಕ್ರೈಸ್ತ, Judaism, ಬೌದ್ಧ ಧರ್ಮ,ಲಿಂಗಾಯತ

ವ್ಯಕ್ತಿಗಳು ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ಮಾದಿಗ&oldid=1198363" ಇಂದ ಪಡೆಯಲ್ಪಟ್ಟಿದೆ