ಭಾರತೀಯ ತಂತ್ರಜ್ಞಾನ ಸಂಸ್ಥೆ ಧಾರವಾಡ

ಭಾರತೀಯ ತಂತ್ರಜ್ಞಾನ ಸಂಸ್ಥೆ ಧಾರವಾಡ (ಐಐಟಿ ಧಾರವಾಡ) ಪ್ರಧಾನ ಸ್ವಾಯತ್ತ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯವಾಗಿದೆ.ಇದು ಜುಲೈ 2016 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.ಇದು ಕರ್ನಾಟಕ ರಾಜ್ಯದ ಧಾರವಾಡ ನಗರದ ಹೊರವಲಯದಲ್ಲಿರುವ ಬೇಲೂರು ಗ್ರಾಮದ ನೀರು ಮತ್ತು ಭೂಮಿ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (WALMI) ನ ಆವರಣದಲ್ಲಿ ತನ್ನ ತಾತ್ಕಾಲಿಕ ಕ್ಯಾಂಪಸ್ ನೆಲೆಗೊಂಡಿದೆ.[೧] 

ಭಾರತೀಯ ತಂತ್ರಜ್ಞಾನ ಸಂಸ್ಥೆ ಧಾರವಾಡ
Indian Institute of Technology
Dharwad
ಪ್ರಕಾರಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆ
ಸ್ಥಾಪನೆ2016
ಸಲಹೆಗಾರ ಸಂಸ್ಥೆಐ.ಐ.ಟಿ ಮುಂಬಯಿ
ಪದವಿ ಶಿಕ್ಷಣ120 ವಿಧ್ಯಾರ್ಥಿಗಳು (40*3ವಿಭಾಗ)
ಸ್ಥಳಧಾರವಾಡ, ಕರ್ನಾಟಕ, ಭಾರತ
ಆವರಣತಾತ್ಕಾಲಿಕ - ನೀರು ಮತ್ತು ಭೂಮಿ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (WALMI)
ಸಂಕ್ಷಿಪ್ತ ಹೆಸರುಐಐಟಿ ಡಿಹೆಚ್
ಜಾಲತಾಣiitdh.ac.in

ವಿಭಾಗಗಳು ಬದಲಾಯಿಸಿ

ಐಐಟಿ ಧಾರವಾಡ 4 ವರ್ಷಗಳ (8 ಸೆಮಿಸ್ಟರ್) ಬಿ ಟೆಕ್ ಪದವಿ ನೀಡುತ್ತದೆ.ಇದು 3 ವಿಭಾಗಗಳನ್ನು ಹೊಂದಿದ್ದು.ಪ್ರತಿ ವಿಭಾಗವು 40 ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳುತ್ತದೆ. ಮೊದಲ ಸೆಮಿಸ್ಟರ್ ಸಮಯದಲ್ಲಿ ಎಲ್ಲಾ ವಿಭಾಗಗಳು ಸಾಮಾನ್ಯ ಪಠ್ಯಕ್ರಮ ಹೊಂದಿರುತ್ತದೆ.

ವಿಭಾಗಗಳು
  • ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್
  • ವಿದ್ಯುತ್ ಎಂಜಿನಿಯರಿಂಗ್
  • ಯಾಂತ್ರಿಕ ಎಂಜಿನಿಯರಿಂಗ್[೨] 

ಆಪ್ತಸಲಹಾ ಯೋಜನೆಯ ಭಾಗವಾಗಿ, ಐಐಟಿ ಬಾಂಬೆ ,ಐಐಟಿ-ಧಾರವಾಡದ ಮೆಂಟೊರ್ ಆಗಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಐಐಟಿ ಬಾಂಬೆಯಲ್ಲಿ ಒಂದು ಐಐಟಿ ಮೇಲ್ವಿಚಾರಣೆ ಸೆಲ್ ಸ್ಥಾಪಿಸಿದೆ ಮತ್ತು ಸಮಿತಿ ಸದಸ್ಯರು ಧಾರವಾಡ ಐಐಟಿ ಸ್ಥಾಪನೆ ಪ್ರಕ್ರಿಯೆಯ ಮೇಲ್ವಿಚಾರಣೆಯ, ವಿಶೇಷ ಕರ್ತವ್ಯ ಅಧಿಕಾರಿಗಳಾಗಿ ಗೊತ್ತುಪಡಿಸಿದೆ.

ಇತಿಹಾಸ ಬದಲಾಯಿಸಿ

1990 ರಲ್ಲಿ ಧಾರವಾಡಕ್ಕೆ ಐಐಟಿ ಕೋರಿ ಕೇಂದ್ರಕ್ಕೆ ದಿವಂಗತ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಎಸ್. ಆರ್. ಬೊಮ್ಮಾಯಿ ಪ್ರಸ್ತಾಪನೆಯನ್ನು ಸಲ್ಲಿಸಿದ್ದರು. 1998 ರಲ್ಲಿ,ಕೇಂದ್ರ , ಮಾಜಿ ಇಸ್ರೋ ಅಧ್ಯಕ್ಷ ಮತ್ತು ಬಾಹ್ಯಾಕಾಶ ವಿಜ್ಞಾನಿ ಯು ಆರ್ ರಾವ್ ಅದ್ದಕ್ಷತೆಯಲ್ಲಿ ಒಂದು ಸಮಿತಿ ರಚಿಸಿತು.ಆ ಸಮಿತಿ ತನ್ನ ವರದಿಯಲ್ಲಿ ಹುಬ್ಬಳ್ಳಿ-ಧಾರವಾಡ ದಲ್ಲಿ ಐಐಟಿ ಸ್ಥಾಪಿಸಲು ಶಿಫಾರಸು ಮಾಡಿತ್ತು. 2015-16 ಕೇಂದ್ರ ಬಜೆಟ್ನಲ್ಲಿ ಒಂದು ಐಐಟಿಯನ್ನು ಕರ್ನಾಟ ರಾಜ್ಯಕ್ಕೆ ಮಂಜೂರು ಮಾಡಿತ್ತು ಮತ್ತು ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಐಐಟಿ ಸ್ಥಾಪಿಸಲು ಮೂರು ಸ್ಥಳಗಳ ಸಲಹೆ ನೀಡಿತು. (ಧಾರವಾಡ, ಮೈಸೂರು ಮತ್ತು ರಾಯಚೂರು). ಮಾನವ ಸಂಪನ್ಮೂಲ ಸಚಿವಾಲಯವು ನೇಮಕ ಮಾಡಿದ ಸಮಿತಿ ಎಲ್ಲಾ ಮೂರು ನಗರಗಳನ್ನು ಭೇಟಿ ನಂತರ, ಧಾರವಾಡ ನಗರದ ಆಯ್ಕೆ ಮಾಡಿತು.[೩] 

ಹಾಸ್ಟೆಲ್ ಮತ್ತು ಕ್ರೀಡಾ ಸೌಲಭ್ಯಗಳು ಬದಲಾಯಿಸಿ

ಹಾಸ್ಟೆಲ್ 150 ವಿದ್ಯಾರ್ಥಿಗಳು ಸಾಮರ್ಥ್ಯ ಹೊಂದಿದೆ ಮತ್ತು ಹಾಸ್ಟೆಲ್ ಬ್ಲಾಕ್ 200 ಮೀಟರ್ ಶೈಕ್ಷಣಿಕ ಕಟ್ಟಡದಿಂದ ದೂರದಲ್ಲಿದೆ.ಇಂಟರ್ನೆಟ್, ಮನರಂಜನಾ ಸೌಲಭ್ಯ ಮತ್ತು ಪ್ರತ್ಯೇಕ ಊಟದ ಹಾಲ್ ಹೊಂದಿದೆ.

ವೈದ್ಯಕೀಯ ಸೌಲಭ್ಯಗಳು ಬದಲಾಯಿಸಿ

ಕ್ಯಾಂಪಸ್ ಸ್ಥಳೀಯ ಆಸ್ಪತ್ರೆಗಳ ಮತ್ತು ವೈದ್ಯರ ಭೇಟಿ ಸೇವೆ ಹೊಂದಿದೆ .ವಿದ್ಯಾರ್ಥಿಗಳು, ಸಿಬ್ಬಂದಿಗಳು ಸ್ಥಳೀಯ ಆಸ್ಪತ್ರೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. "ಧಾರವಾಡ ಐಐಟಿ ತರಗತಿಗಳು ಆರಂಭ". kannada.oneindia.com accessdate 1 November 2016.
  2. "Academics". www.bio.iitb.ac.in accessdate 1 November 2016. Archived from the original on 18 ಅಕ್ಟೋಬರ್ 2016. Retrieved 1 ನವೆಂಬರ್ 2016.
  3. "Dharwad's dream for IIT comes true". m.timesofindia.com accessdate 1 November 2016.