ಭಾರತರು ಋಗ್ವೇದದಲ್ಲಿ ಉಲ್ಲೇಖಿಸಲ್ಪಟ್ಟ ಒಂದು ಬುಡಕಟ್ಟಾಗಿದ್ದರು. ಇವರ ಉಲ್ಲೇಖ ವಿಶೇಷವಾಗಿ ಭಾರತ ಋಷಿಗಳಾದ ವಿಶ್ವಾಮಿತ್ರರಿಗೆ ಆರೋಪಿಸಲಾದ ಮಂಡಲ ೩ರಲ್ಲಿ ಆಗಿದೆ. ಭಾರತರು ಕ್ರಿ.ಪೂ. ಎರಡನೇ ಸಹಸ್ರಮಾನದಲ್ಲಿ ರಾವಿ ನದಿಯ ಸುತ್ತ ವಾಸಿಸುತ್ತಿದ್ದ ವೈದಿಕ ಬುಡಕಟ್ಟಾಗಿದ್ದರು ಎಂದು ವಿದ್ವಾಂಸರು ನಂಬುತ್ತಾರೆ.[೧][೨][೩] ಭಾರತ ಶಬ್ದವನ್ನು ಅಗ್ನಿ (ಅಕ್ಷರಶಃ, "ಕಾಪಾಡಬೇಕಾದುದು", ಅಂದರೆ ಮನುಷ್ಯರ ಆರೈಕೆಯಿಂದ ಜೀವಂತವಾಗಿರಿಸಬೇಕಾದ ಬೆಂಕಿ) ಮತ್ತು ಮಂಡಲ ೨ರಲ್ಲಿ ರುದ್ರನ ಒಂದು ಹೆಸರಾಗಿಯೂ ಬಳಸಲಾಗುತ್ತದೆ.[೪]

ಮಂಡಲ ೭ (೭.೧೮ ಇತ್ಯಾದು) ಭಾರತರು ದಾಶರಾಜ್ಙ ಯುದ್ಧದಲ್ಲಿ ಭಾಗವಹಿಸಿದರು ಮತ್ತು ವಿಜಯಿಗಳಾದರು ಎಂದು ಉಲ್ಲೇಖಿಸುತ್ತದೆ. ಈ ಯುದ್ಧದಲ್ಲಿ ಭಾರತರ ಮುಖಂಡ ಸುದಾಸನ ವಿಜಯದ ಕಾರಣ, ಭಾರತರು ಕುರುಕ್ಷೇತ್ರ ಪ್ರದೇಶದಲ್ಲಿ ನೆಲೆಸಲು ಸಾಧ್ಯವಾಯಿತು.[೫] ವಿವಿಧ ವೈದಿಕ ಬುಡಕಟ್ಟುಗಳ ನಡುವಿನ ಮುಂಚಿನ ಅಧಿಕಾರ ಸಂಘರ್ಷಗಳಲ್ಲಿ ಇವರು ಯಶಸ್ವಿಯಾಗಿದ್ದರು ಎಂದು ತೋರುತ್ತದೆ. ಹಾಗಾಗಿ ವೈದಿಕೋತ್ತರ ಸಂಪ್ರದಾಯದಲ್ಲಿ (ಮಹಾಭಾರತ), ಸಂಪೂರ್ಣ ಭಾರತದ ಪ್ರಾಚೀನ ವಿಜೇತನಾದ, ನಾಮಸೂಚಕ ಪೂರ್ವಜನು ಸಾಮ್ರಾಟ ಭರತನಾಗುತ್ತಾನೆ. ಇವನ ರಾಜ್ಯವನ್ನು ಭಾರತ ಎಂದು ಕರೆಯಲಾಗುತ್ತದೆ.[೬] ನಂತರ ಭಾರತದ ಅರಸನು ಪುರು ಅರಸನೊಂದಿಗೆ ಮೈತ್ರಿ ಮಾಡಿ ಅವನನ್ನು ಕೂಡಿಕೊಂಡು ಕುರು ರಾಜ್ಯವನ್ನು ರಚಿಸಿದನು.[೭] ಇಂದು ಭಾರತ ಎಂಬುದು ನಮ್ಮ ದೇಶದ ಒಂದು ಅಧಿಕೃತ ಹೆಸರಾಗಿದೆ.[೮]

ಉಲ್ಲೇಖಗಳು ಬದಲಾಯಿಸಿ

  1. Scharfe, Hartmut E. (2006), "Bharat", in Stanley Wolpert (ed.), Encyclopedia of India, vol. 1 (A-D), Thomson Gale, pp. 143–144, ISBN 0-684-31512-2
  2. Thapar, Romila (2002), The Penguin History of Early India: From the Origins to AD 1300, Allen Lane; Penguin Press, p. 114, ISBN 0141937424 {{citation}}: Unknown parameter |publicationdate= ignored (help)
  3. Witzel, Michael (1995), "Early Sanskritization. Origins and Development of the Kuru State." (PDF), Electronic Journal of Vedic Studies, 1–4: 1–26, archived from the original (PDF) on 2012-02-20, retrieved 2017-12-29
  4. Pāṇini; Katre, Sumitra Mangesh (1989-01-01). Aṣṭādhyāyī of Pāṇini (in ಇಂಗ್ಲಿಷ್). Motilal Banarsidass Publ. ISBN 9788120805217.
  5. ORIGINS AND DEVELOPMENT OF THE KURU STATE by Michael Witzel, Harvard University [೧] Archived 2011-11-05 ವೇಬ್ಯಾಕ್ ಮೆಷಿನ್ ನಲ್ಲಿ.
  6. Julius Lipner (2010) "Hindus: Their Religious Beliefs and Practices.", p.23
  7. National Council of Educational Research and Training, History Text Book, Part 1, India
  8. Article 1 of the English version of the Constitution of India: "India that is Bharat shall be a Union of States."
"https://kn.wikipedia.org/w/index.php?title=ಭಾರತರು&oldid=1057152" ಇಂದ ಪಡೆಯಲ್ಪಟ್ಟಿದೆ