ಬೈಜ್‍ನಾಥ್ ದೇವಾಲಯ ಸಂಕೀರ್ಣ

ಬೈಜ್‍ನಾಥ್ ದೇವಾಲಯ ಸಂಕೀರ್ಣವು 18 ಹಿಂದೂ ದೇವಾಲಯಗಳ ಸಮೂಹವಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ಬೈಜ್‍ನಾಥ್ ಪಟ್ಟಣದಲ್ಲಿದೆ. ಈ ಸಂಕೀರ್ಣವು ಬಾಗೇಶ್ವರ ಜಿಲ್ಲೆಯಲ್ಲಿ ಗೋಮತಿ ನದಿಯ ದಡದಲ್ಲಿದೆ. ಪಾರ್ವತಿಯನ್ನು ಪತಿ ಶಿವನೊಂದಿಗೆ ಚಿತ್ರಿಸಿರುವ ವಿಶ್ವದ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿರುವುದಕ್ಕೆ ಈ ದೇವಾಲಯಗಳು ಪ್ರಖ್ಯಾತವಾಗಿವೆ.[೧] ಶಿವರಾತ್ರಿ ಮತ್ತು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಯಾತ್ರಿಕರು ಇಲ್ಲಿಗೆ ಆಗಮಿಸುತ್ತಾರೆ.

ಬೈಜ್‍ನಾಥ್‍ನಲ್ಲಿನ ದೇವಾಲಯಗಳ ಗುಂಪು

102 ಕಲ್ಲಿನ ವಿಗ್ರಹಗಳಿದ್ದು, ಅವುಗಳಲ್ಲಿ ಕೆಲವು ಪೂಜಿಸಲ್ಪಡುತ್ತಿದ್ದರೆ, ಇತರವುಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಮೀಸಲಾಗಿರಿಸಿದೆ. ಬೈಜ್‍ನಾಥ್ ದೇವಾಲಯದ ಸಂಕೀರ್ಣದಲ್ಲಿರುವ ಪ್ರಧಾನ ದೇವತೆಗಳೆಂದರೆ ವೈದ್ಯನಾಥ್ (ಶಿವ), ಪಾರ್ವತಿ, ನೃತ್ಯ ಗಣಪತಿ, ಕಾರ್ತಿಕೇಯ, ನರಸಿಂಹ, ಬ್ರಹ್ಮ, ಮಹಿಷಾಸುರ ಮರ್ದಿನಿ, ಸಪ್ತ ನರ್ತಕಿಯರು, ಸೂರ್ಯ, ಗರುಡ ಮತ್ತು ಕುಬೇರ.

ಉಲ್ಲೇಖಗಳು ಬದಲಾಯಿಸಿ

  1. Sharma, Seema (13 November 2016). "Tourists disappointed on not finding antique idols in Baijnath temples - Times of India" (in ಇಂಗ್ಲಿಷ್). Baijnath: ದಿ ಟೈಮ್ಸ್ ಆಫ್‌ ಇಂಡಿಯಾ. Retrieved 8 June 2017.

ಗ್ರಂಥಸೂಚಿ ಬದಲಾಯಿಸಿ