ಬುಟೇನ್ ನಲ್ಲಿರುವ ಕ್ರಿಯಾಗುಂಪು

[೧] C4H10 ಸೂತ್ರ ಇರುವ ಒಂದು ಸಾವಯವ ರಾಸಾಯನಿಕ ಸಂಯುಕ್ತ ಮತ್ತು ನಾಲ್ಕು ಕಾರ್ಬನ್ ಅಥವಾ ಇಂಗಾಲದ ಪರಮಾಣುಗಳಿರುವ ಒಂದು ಆಲ್ಕೇನ್. ಕೋಣೆಯ ತಾಪಮಾನ ಮತ್ತು ಒತ್ತಡದಲ್ಲಿ ಅದೊಂದು ಅನಿಲ. ಇದು ಬಣ್ಣ ರಹಿತ, ತೀರಾ ಸುಲಭವಾಗಿ ಉರಿಯಬಲ್ಲ ಅನಿಲ. ವಾಸ್ತವದಲ್ಲಿ ಬುಟೇನ್ ಹೆಸರನ್ನು ಸಮಾಂಗಿ (ಐಸೊಮರ್- ಒಂದೇ ರಸಾಯನಿಕ ಸೂತ್ರವಿದ್ದು ಪರಮಾಣು ಜೋಡಣೆಯಲ್ಲಿ ಭಿನ್ನವಾಗಿರುವ ಸಂಯುಕ್ತ) ಎನ್-ಬುಟೇನ್ ಮತ್ತು ಐಸೊಬುಟೇನ್‌ಗಳೆರಡಕ್ಕೂ (ಮತ್ತು ಅವುಗಳ ಮಿಶ್ರಣ) ಐಯುಪಿಎಸಿ ನಿರ್ದಿಷ್ಟವಾಗಿ ಎನ್-ಬುಟೇನ್‌ಗೆ ಮಾತ್ರ ಬುಟೇನ್ ಹೆಸರನ್ನು ಬಳಸುತ್ತದೆ.

ಸಮಾಂಗಿಗಳು ಬದಲಾಯಿಸಿ

ಸಾಮಾನ್ಯ ಹೆಸರು ಸಾಮಾನ್ಯ ಬುಟೇನ್
ಕವಲೊಡೆಯದ ಬುಟೇನ್
ಎನ್-ಬುಟೇನ್
ಐಸೊಬುಟೇನ್
-ಬುಟೇನ್
ಐಯುಪಿಎಸಿ ಹೆಸರು ಬುಟೇನ್ 2-ಮಿಥೈಲ್‌ಪ್ರೊಪೇನ್
ಅಣ್ವಿಕ
ಚಿತ್ರ
   
ಸ್ಕೆಲಟಲ್
ಚಿತ್ರ
   

ರಸಾಯನಿಕ ಕ್ರಿಯೆಗಳು ಮತ್ತು ಗುಣಗಳು ಬದಲಾಯಿಸಿ

ಆಮ್ಲಜನಕ ಸಾಕಷ್ಟು ಇರುವಾಗ ಬುಟೇನ್ ದಹನವು ಕಾರ್ಬನ್ ಡೈಆಕ್ಸೈಡ್ ಮತ್ತು ನೀರು ಕೊಡುತ್ತದೆ ಮತ್ತು ಆಮ್ಲಜನಕ ಮಿತಿಯಲ್ಲಿದ್ದರೆ ಇಂಗಾಲ (ಸೂಟ್) ಅಥವಾ ಕಾರ್ಬನ್ ಮಾನಾಕ್ಸೈಡ್ ಮತ್ತು ನೀರು ರೂಪಗೊಳ್ಳ ಬಹುದು. ಸಾಕಷ್ಟು ಆಮ್ಲಜನಕ ಇದ್ದಾಗ:

2 C4H10 + 13 O2 → 8 CO2 + 10 H2O

ಆಮ್ಲಜನಕದ ಮಿತಿಯಿದ್ದಾಗ:

2 C4H10 + 9 O2 → 8 CO + 10 H2O

ಬುಟೇನ್‌ನ ಶಾಖಪ್ರಮಾಣ (ಹೀಟ್ ಕಂಟೆಂಟ್ ಅಥವಾ ಎನ್ತಾಲ್ಪಿ) 3200 ಬಿಟಿಯು/ಕ್ಯೂಬಿಕ್ ಫೀಟ್‌ಗೆ (ಬ್ರಿಟಿಶ್‌ ಥರಮಲ್ ಘಟಕ-ಒಂದು ಪೌಂಡ್ ನೀರನ್ನು ಒಂದು ಡಿಗ್ರಿ ಎಪ್‌ಗೆ ಹೆಚ್ಚಿಸಲು ಬೇಕಾಗುವ ಕೆಲಸ. ಇದು ಸುಮಾರು 1055 ಜ್ಯೂಲ್‌ಗಳು) ಮತ್ತು ಇದು ಪ್ರೊಪೇನ್‌ಗಿಂತ ಹೆಚ್ಚು. ಆದರೆ ಬುಟೇನ್‌ನ ಅನಾನುಕೂಲವೆಂದರೆ ಕಡಿಮೆ ತಾಪಮಾನದಲ್ಲಿ ಅದರ ಆವಿಯೊತ್ತಡ ಕಡಿಮೆ ಎನ್ನುವುದು. ಹೀಗಾಗಿ ಶೇ 50 ರಷ್ಟು ಬುಟೇನ್ ಮತ್ತು ಶೇ 50ರಷ್ಟು ಪ್ರೊಪೇನ್ ಮಿಶ್ರಣವನ್ನು ಮಾಡಲಾಗುತ್ತದೆ ಮತ್ತು ಇದರ ಶಾಖಪ್ರಮಾಣ ಸುಮಾರು 2850 ಬಿಟಿಯು/ಕ್ಯೂಬಿಕ್ ಫೀಟ್.[೨]

ಉಪಯೋಗಗಳು ಬದಲಾಯಿಸಿ

 
ಕ್ಯಾಂಪ್ ಸ್ಟೌವ್‌ಗಳಿಗೆ ಇಂದನವಾಗಿ ಬಳಸುವ ಬುಟೇನ್ ಡಬ್ಬಿ
 
ಬುಟೇನ್ ಲೈಟರ್
 
ಬುಟೇನ್ ಟಾರ್ಚ್

ಬುಟೇನ್ ದ್ರವರೂಪದ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ ಅಥವಾ ಲಿಕ್ವಿಫೈಡ್‌ನ ಪೆಟ್ರೋಲಿಯಂ ಗ್ಯಾಸ್‌) ಒಂದು ಭಾಗ. ಸಾಮಾನ್ಯವಾಗಿ ಇದನ್ನು ಪ್ರೊಪೇನ್‌ನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಹೆಚ್ಚಾಗಿ ಪ್ಲಾಸ್ಟಿಕ್ ಮತ್ತು ಇತರ ಉಪಯೋಗಗಳಿಗೆ ಬಳಸುವ ಇಥಿಲೀನ್ ಮತ್ತು ಸಿಂಥೆಟಿಕ್ ರಬ್ಬರನ ತಾಯರಿಕೆಯಲ್ಲಿ ಮೊನಮರ್ ಆಗಿ ಬಳಸುವ 1,3-ಬುಟಡೈಯಿನ್ ತಯಾರಿಕೆಗೆ ಬಳಸಲಾಗುತ್ತದೆ.[೩][೪][೫][೬] ಇದನ್ನು ಸಿಗರೇಟ್ ಲೈಟರ್‌ಗಳಲ್ಲಿ ಇಂದನ ಮತ್ತು ಸುಂಗಧದ್ರವ್ಯ (ಡಿಯೊಡೊರಾಂಟ್-ಮೈವಾಸನೆ ಕಳೆಯಲು) ಸಿಂಚನಕ್ಕೆ ಮೂಲ ದ್ರವ್ಯವನ್ನು ಮುಂತ್ತಳುವ ಅನಿಲವಾಗಿ ಸಹ ಬಳಸಲಾಗುತ್ತದೆ.[೭]

ರಿಫ್ರಿಜೇಟರ್‌ಗಳಲ್ಲಿ ಬುಟೇನ್ ವಿಶೇಷವಾಗಿ ಐಸೊಬುಟೇನ್‌ನ್ನು ಓಜೋನ್‌ ಪದರಕ್ಕೆ ಮಾರಕವಾದ ಹ್ಯಾಲೊಮೀಥೇನ್‌ಗಳ ಬದಲು ಬಳಸಲಾಗುತ್ತದೆ. ಬುಟೇನ್ ಆಧಾರದ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಣೆಯ ಒತ್ತಡವು- ಇತರ ಆರ್-12 (ಡೈಕ್ಲೋರೊಡೈಫ್ಲೋರೊ ಮೀಥೇನ್) ನಂತಹ ಹ್ಯಾಲೊಮೀಥೇನ್‌ಗಳು ಬಳಸುವ ಆಟೊಮ್ಯಾಟಿವ್ ಏರ್‌ ಕಂಡೀಶನಿಂಗ್ ನಂತಹ ವ್ಯವಸ್ಥೆಗಳಿಗಿಂತ ಕಡಿಮೆ ಇರುತ್ತದೆ. ಹೀಗಾಗಿ ಶುದ್ಧ ಬುಟೇನ್‌ ಬಳಸಿದರೆ ಕಾರ್ಯಕ್ಷಮತೆ ಕಡಿಮೆ ಯಾಗುತ್ತದೆ. ಆದ್ದರಿಂದ ಐಸೊಬುಟೇನ್ ಮತ್ತು ಪ್ರೊಪೇನ್‌ಗಳನ್ನು ಮಿಶ್ರಣ ಮಾಡಿ ಆರ್-12 ತಂಪಾಗಿಸುವ ವ್ಯವಸ್ಥೆಗೆ ಹೋಲಿಸುವ ಕಾರ್ಯಕ್ಷಮತೆ ಪಡೆಯಲಾಗುತ್ತದೆ.[೮]

ಕೆಲವು ದೇಶಗಳಲ್ಲಿ ಬುಟೇನ್‌ನ್ನು ಕ್ಯಾಂಪ್‌ಗಳಲ್ಲಿನ ಸ್ಟೌವ್‌ಗೆ (ಅಡಿಗೆಯ ಸ್ಟೌವ್) ಇಂದನ ಆಗಿ ಬಳಸಲು ಚಿಕ್ಕ ಡಬ್ಬಿಗಳಲ್ಲಿ ತುಂಬಿಸಿ ಮಾರಲಾಗುತ್ತದೆ.[೯] ಬುಟೇನ್ ಟಾರ್ಚ್ (ಇದು ಬುಟೇನ್ ಇಂದನ ಬಳಸಿ ಜ್ವಾಲೆಯನ್ನು ಸೂಸುವ ಒಂದು ಪರಿಕರ, ಲೋಹವನ್ನು ಕರಗಿಸುವಷ್ಟು ಶಾಖ ಕೊಡಬಲ್ಲದು.) 2800 ಡಿಗ್ರಿ ಎಫ್. ನಷ್ಟು (1537.78 ಡಿಗ್ರಿ ಸಿ.) ಅಧಿಕ ಉತ್ಪಾದನೆ ಮಾಡಬಲ್ಲ ಇದನ್ನು ಹಲ್ಲಿಗೆ ಸಂಬಂಧಿಸಿದ ಉಪಕರಣಗಳು, ಕನ್ನಡಕ ತಯಾರಿಕೆ ಮುಂತಾದ ಹಲವು ವೈದ್ಯಕೀಯ ಪರಿಕರ ತಯಾರಿಯಲ್ಲಿ, ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಉಪಕರಣಗಳ ಸ್ಟೆರಲೈಜ್ ಮಾಡಲು ಬಳಸಲಾಗುತ್ತದೆ. ಅಲ್ಲದೆ ಆಭರಣ ಕೈಗಾರಿಕೆಯಲ್ಲಿ ಸಹ ಬಳಸಲಾಗುತ್ತದೆ. ಈ ಟಾರ್ಚನ್ನು ಉಕ್ಕು, ತಾಮ್ರ ಮುಂತಾದ ಲೋಹಗಳ ಮರುರೂಪಣೆ, ಬೆಸುಗೆಗೆ ಬಳಸಲಾಗುತ್ತದೆ.[೧೦]

ಇಂತಹ ಬಳಕೆಯಲ್ಲಿ ಬುಟೇನ್‌ಗೆ ಸಾಮಾನ್ಯವಾಗಿ ತೀರಾ ಸಣ್ಣ ಪ್ರಮಾಣದಲ್ಲಿ ಹೈಡ್ರೊಜನ್ ಸಲ್ಬೈಡ್ ಮತ್ತು ಮರ್ಕಾಪ್ಟಾನ್ (ಥಿಯೊಲ್ ಎಂದು ಸಹ ಕರೆಯಲಾಗುವ ಒಂದು ಸಾವಯವ ಸಲ್ಫರ್ ರಸಾಯನಿಕ ಸಂಯುಕ್ತ) ಅನಿಲಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಇವು ಬುಟೇನ್ ಅನಿಲಕ್ಕೆ ಕೆಟ್ಟ ವಾಸನೆಯನ್ನು ಕೊಡುತ್ತವೆ. ಬುಟೇನ್ ಅನಿಲ ಸೋರುವಿಕೆಯನ್ನು ಗುರುತಿಸಲು ಇದನ್ನು ಮಾಡಲಾಗುತ್ತದೆ. ಈ ಅನಿಲಗಳು ಸ್ವತಹ ವಿಷಕಾರಿಯಾದರೂ ಇವುಗಳ ಪ್ರಮಾಣ ತೀರ ಸಣ್ಣದಿದ್ದು ಬುಟೇನ್‌ನ ತಕ್ಷಣದ ಅಪಾಯದೆಡೆ ಗಮನ ಸೆಳೆಯುತ್ತವೆ.[೧೧]

ಅಪಾಯಗಳು ಬದಲಾಯಿಸಿ

ಇದನ್ನು ಉಸಿರಾಡುವುದು ಸುಖಭ್ರಮೆ, ಅರೆನಿದ್ರಾವಸ್ಥೆ, ಸಂವೇದನೆ-ರಹಿತತೆ, ಉಸಿರುಕಟ್ಟುವಿಕೆ, ಅನಿಯಮಿತ ಹೃದಯ ಬಡಿತ, ರಕ್ತದೊತ್ತಡದಲ್ಲಿ ಏರಿಳಿತ ಮತ್ತು ತಾತ್ಕಾಲಿಕ ನೆನಪು ಅಳಿಸುವಿಕೆಗೆ ಕಾರಣವಾಗ ಬಲ್ಲದು. ನೇರವಾಗಿ ಒತ್ತಡದಲ್ಲಿ ಸಂಗ್ರಹಿಸಲಾದ ಅನಿಲ ಸೇವನೆ ಉಸಿರಾಟದಲ್ಲಿ ಆಮ್ಲಜನಕ ಕೊರತೆ, ಹೃದಯ ಸ್ತಂಭನಗಳ ಮೂಲಕ ಸಾವಿಗೆ ಕಾರಣವಾಗ ಬಲ್ಲದು.[೧೨] ಬುಟೇನ್ ಯುನೈಟೆಡ್ ಕಿಂಗ್‌ಡಂನಲ್ಲಿ (1971 ರಿಂದ 2004ರ ವರುಷಗಳಲ್ಲಿ) ಅತಿಹೆಚ್ಚು ದುರ್ಬಳಕೆಗೆ ಒಳಗಾದ ಆವಿಯಾಗಬಲ್ಲ ಅನಿಲ. ಆವಿಯಾಗಬಲ್ಲ ಅನಿಲಗಳ ದುರ್ಬಳಕೆಯಿಂದ ಉಂಟಾದ ಸಾವುಗಳಲ್ಲಿ ಬುಟೇನ್ ಭಾಗವು ಶೇ 85.3 (ಲೈಟರ್ ಇಂದನ-ಶೇ 82.5, ಬುಟೇನ್ ಅನಿಲ ಡಬ್ಬಿ- ಶೇ 2.8 ) ಇದ್ದರೆ ಒಟ್ಟಾರೆ ಆವಿಯಾಗಬಲ್ಲ ಅನಿಲ ದುರ್ಬಳಕೆಯ ಸಾವಿನಲ್ಲಿ ಶೇ 39.5 (ಲೈಟರ್ ಇಂದನ- ಶೇ 38.2, ಬುಟೇನ್ ಅನಿಲ ಡಬ್ಬಿ- ಶೇ 1.3) ಇತ್ತು.[೧೩] ಬುಟೇನ್‌ನ ತಕ್ಷಣ ದಹಿಸಬಲ್ಲ ಗುಣವೂ ಸಹ ಅಪಾಯಕಾರಿಯಾಗ ಬಲ್ಲದು.

ಉಲ್ಲೇಖಗಳು ಬದಲಾಯಿಸಿ

  1. ‌ವಿಕಿಪೀಡಿಯ ಇಂಗ್ಲೀಶ್ Butane ಪುಟದ ಭಾಗಶಹ ಅನುವಾದ, ಪಡೆದ ದಿನಾಂಕ 2016-12-06
  2. Johnson Bill, Kevin Standiford, Practical Heating Technology. Cengage Learning, 2008, 2nd revised edition, ISBN 141808039X, 9781418080396, pages 101-102
  3. MarkWest Energy Partners, L.P. Form 10-K. Sec.gov
  4. Copano Energy, L.L.C. Form 10-K. Sec.gov. Retrieved on 2012-12-03.
  5. Targa Resources Partners LP Form10-k. Sec.gov. Retrieved on 2012-12-03.
  6. Crosstex Energy, L.P. FORM 10-K. Sec.gov
  7. A Primer on Gasoline Blending Archived 2017-01-13 ವೇಬ್ಯಾಕ್ ಮೆಷಿನ್ ನಲ್ಲಿ.. An EPRINC Briefing Memorandum
  8. Butane Archived 2016-11-21 ವೇಬ್ಯಾಕ್ ಮೆಷಿನ್ ನಲ್ಲಿ. Brothes Gas, (Conmpany), Retrived on 2016-12-06
  9. Reference, What are some uses of butane?, Retrived on 2016-12-06
  10. Butanesource.com, Retrived on 2016-12-06
  11. Discussion about Toxic Residues in Butane-Extracted Hash Oil collected by Erowid 1.1 Nov 2013 (original 1.0, Jan 2006) The Vaults of EROWID, Retrived on 2016-12-06
  12. Neurotoxic Effects from Butane Gas, THC Farmer, retrived on 2016-12-06
  13. Field-Smith M, Bland JM, Taylor JC, et al. "Trends in death Associated with Abuse of Volatile Substances 1971–2004" (PDF). Page 40, Department of Public Health Sciences. London: St George’s Medical School. Archived from the original (PDF) on March 27, 2007.
"https://kn.wikipedia.org/w/index.php?title=ಬುಟೇನ್&oldid=1204877" ಇಂದ ಪಡೆಯಲ್ಪಟ್ಟಿದೆ