ಬೀಗಲ್ ಎನ್ನುವುದು ಸಣ್ಣ ಮತ್ತು ಮಧ್ಯಮ ಗಾತ್ರದ ನಾಯಿಯ ಒಂದು ತಳಿ. ಇದು ಹೌಂಡ್ ಗುಂಪಿನ ಪ್ರಾಣಿಯಾದರೂ ಫಾಕ್ಸ್ ಹೌಂಡ್(ನರಿಬೇಟೆನಾಯಿ)‌ಗೆ ಸಮೀಪದ ಸಾದೃಶ್ಯ ಹೊಂದಿದೆ. ಆದರೆ ಇದಕ್ಕೆ ಸಣ್ಣ, ಕೊಂಚ ಉದ್ದ ಕಾಲುಗಳು ಮತ್ತು ಮೃದುವಾದ, ಸಣ್ಣ ಆಕಾರದ ಕಿವಿಗಳಿರುತ್ತವೆ (ಹೌಂಡ್ ವಾಸನೆ ಹಿಡಿದು ಬೇಟೆಯಾಡುವ ನಾಯಿ ಜಾತಿ). ಬೀಗಲ್ಸ್‌ಗಳು ವಾಸನೆ ಹಿಡಿದು ಬೇಟೆಯಾಡುವ ನಾಯಿಗಳು. ಪ್ರಾಥಮಿಕವಾಗಿ ಇವುಗಳನ್ನು ಕುಂದಿಲಿ, ಮೊಲ ಮತ್ತಿತರ ಪ್ರಾಣಿಗಳನ್ನು ಹಿಡಿಯಲು ಮತ್ತು ಕ್ರೀಡೆಗಾಗಿ ಬಳಸಲಾಗುತ್ತದೆ. ಅತ್ಯದ್ಭುತ ವಾಸನಾ ಸಾಮರ್ಥ್ಯ ಇರುವುದರಿಂದ ಇವುಗಳನ್ನು ನಿಷೇಧಿತ ಕೃಷಿ ಉತ್ಪನ್ನಗಳ ಆಮದುಗಳನ್ನು ಮತ್ತು ಆಹಾರ ಸಾಮಾಗ್ರಿಗಳಲ್ಲಿಸೋಂಕು ಹರಡುವುದನ್ನು ಪತ್ತೆಹಚ್ಚುವ ಪತ್ತೆದಾರಿ ನಾಯಿಗಳಾಗಿ ವಿಶ್ವಾದ್ಯಾಂತ ಬಳಸಲಾಗುತ್ತದೆ. ಅವು ಜನಪ್ರಿಯ ಸಾಕುಪ್ರಾಣಿಗಳಾಗಿವೆ ಏಕೆಂದರೆ ಅವುಗಳ ಆಕರ್ಷಕ ಆಕಾರ, ಸುಲಭವಾಗಿ ಪಳಗಿಸಬಲ್ಲ ಮತ್ತು ಅನುವಂಶೀಯವಾಗಿ ಯಾವುದೇ ಆರೋಗ್ಯದ ಸಮಸ್ಯೆಗಳಿಗೆ ಅವು ಈಡಾಗುವುದಿಲ್ಲ. ಈ ಗುಣಲಕ್ಷಣಗಳಿಂದಾಗಿ ಇದನ್ನು ಇತರ ಪ್ರಾಣಿಗಳ ಪ್ರಯೋಗಕ್ಕಾಗಿಯೂ ಬಳಸಲಾಗುತ್ತದೆ.

ಬೀಗಲ್
Other names ಇಂಗ್ಲೀಷ್ ಬೀಗಲ್
Traits
Dog (Canis lupus familiaris)

ಬೀಗಲ್ ಮಾದರಿಯ ನಾಯಿಗಳು 2,000 ವರ್ಷಗಳ ಹಿಂದೆಯೇ ಪ್ರಚಲಿತವಿದ್ದವು; ಇದರ ಆಧುನಿಕ ತಳಿಯನ್ನು 1830 ರಲ್ಲಿ ಗ್ರೇಟ್ ಬ್ರಿಟನ್ ನಲ್ಲಿ ಅಭಿವೃದ್ಧಿಪಡಿಸಲಾಯಿತು. ಇದರ ಅಭಿವೃದ್ಧಿಗೆ ವಿಭಿನ್ನ ಜಾತಿಗಳನ್ನು ಸಂಕರಿಸಲಾಯಿತು, ಉದಾಹರಣೆಗಾಗಿ, ಟ್ಯಾಲ್ಬೊಟ್ ಹೌಂಡ್, ದಿ ನಾರ್ಥ್ ಕಂಟ್ರಿ ಬೀಗಲ್, ದಿ ಸದರ್ನ್ ಹೌಂಡ್ ಮತ್ತು ಸಂಭವನೀಯವಾಗಿ ಹ್ಯಾರಿಯರ್ ಜಾತಿಯನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡಲಾಗಿದೆ.

ಬೀಗಲ್‌ಗಳನ್ನು ಜನಪ್ರಿಯ ಸಂಸ್ಕೃತಿಗಳಲ್ಲಿ ಅದೂ ಎಲೆಜೆಬೆತ್ ಕಾಲದಲ್ಲಿ ಸಾಹಿತ್ಯ ಮತ್ತು ವರ್ಣ ಕಲೆಗಾರಿಕೆಯಲ್ಲಿ ಬಳಸಿಕೊಳ್ಳಲಾಯಿತು. ಇತ್ತೀಚಿಗೆಯಂತೂ ಚಲನಚಿತ್ರ, ಟೆಲಿವಿಸನ್ ಮತ್ತು ಕಾಮಿಕ್ ಪುಸ್ತಕಗಳಲ್ಲಿ ಬಳಸಲಾಗುತ್ತದೆ. ಪೀನಟ್ಸ್ ಕಾಮಿಕ್ ಪಟ್ಟಿಸ್ನೂಪಿ ಪಾತ್ರವು "ವಿಶ್ವದ ಅತ್ಯಂತ ಪ್ರಸಿದ್ದ" ಬೀಗಲ್ ಆಗಿ ಮಾರ್ಪಟ್ಟಿದೆ.[೧]

ಇತಿಹಾಸ ಬದಲಾಯಿಸಿ

ಆರಂಭಿಕ ಬೀಗಲ್-ಮಾದರಿ ನಾಯಿಗಳು ಬದಲಾಯಿಸಿ

ಇದೇ ತೆರನಾದ ಆಕಾರ ಮತ್ತು ಉದ್ದೇಶ ಹೊಂದಿದ ಆಧುನಿಕ [a]ಬೀಗಲ್ ಪ್ರಕಾರವನ್ನುಪ್ರಾಚೀನ ಗ್ರೀಸ್ ಇತಿಹಾಸದಲ್ಲಿ[೨] ಗುರುತಿಸಬಹುದಾಗಿದೆ.[೨] ನೀವು ಕ್ರಿ.ಪೂ. 5ನೇ ಶತಮಾನಕ್ಕೆ ಹೋದರೆ ಕ್ಸೆನೊಫೊನ್ ಎಂಬಾತ ಜನಿಸಿದ್ದು ಕ್ರಿ.ಪೂ. 433 ಸಮಯದಲ್ಲಿ; ಈತ ತನ್ನ ಬೇಟೆಗಾರಿಕಾ ವಿಷಯ ಗಳಲ್ಲಿ ಅಥವಾ ಬೇಟೆಯ ಚಟುವಟಿಕೆಗಳಿಗಾಗಿ ಸಿನೆಜೆಟಿಕಸ್ ಅಂದರೆ ಇದು ಹೌಂಡ್ ಗೆ ಉಲ್ಲೇಖಿಸಲ್ಪಡುತ್ತದೆ. ಇದು ಕುಂದಿಲಿ ಅಂದರೆ ಮೊಲದ ಜಾತಿಗೆ ಸೇರಿದ ಪ್ರಾಣಿಗಳನ್ನು ವಾಸನೆ ಹಿಡಿದು ಕಾಲ್ನಡಿಗೆಯಲ್ಲಿಯೇ ಅದನ್ನು ಹಿಂಬಾಲಿಸಿ ಬೇಟೆಯಾಡಿದ ಉದಾಹರಣೆಗಳಿವೆ. ಆಗಿನ ಕ್ಯಾನುಟ್ ಜಂಗಲ್ ಕಾನೂನಿನಲ್ಲಿ ಒಂದು ಸುಗ್ರಿವಾಜ್ಞೆಯನ್ನು ಹೊರಡಿಸಿ ಯಾವ ನಾಯಿಯು ಕೊಂಬಿನ ಚಿಗರೆಯ ಬೆನ್ನಟ್ಟುವ ಸಾಮರ್ಥ್ಯ ಹೊಂದಿದೆಯೋ ಅದರ ಒಂದು ಕಾಲನ್ನು ಊನಗೊಳಿಸಬೇಕೆಂಬ ಸೂಚನೆ ಹೊರಟಿತು.[೩] ಇಂತಹ ಕಾಯಿದೆಗಳನ್ನು ನೋಡಿದರೆ 1016ರ ಸುಮಾರಿಗೆ ಇಂಗ್ಲೆಂಡಿನಲ್ಲಿ ಬೀಗಲ್ ಮಾದರಿಯ ನಾಯಿಗಳಿದ್ದುವೆಂದು ಹೇಳಬಹುದು. ಆದರೆ ಇಂತಹ ಕಾಯಿದೆಗಳನ್ನು ಮಧ್ಯಕಾಲೀನ ಯುಗದಲ್ಲಿ ಬರೆದಿದ್ದು, ಅರಣ್ಯಕ್ಕೆ ಒಂದು ರಕ್ಷಣೆ ಮತ್ತು ಸಾಂಪ್ರದಾಯಿಕತೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ನಿಯಮಗಳು ಬಂದಿರಬೇಕು.[೪]

 
ದಕ್ಷಿಣದ ಹೌಂಡ್ ಬಹುಶಃ ಪ್ರಾಚೀನ ಕಾಲದ ಬೀಗಲ್ ಎನ್ನಬಹುದು.

ಸುಮಾರು 11 ನೆಯ ಶತಮಾನದಲ್ಲಿ ವಿಲಿಯಮ್ ದಿ ಕಾಂಕರರ್ ಎಂಬಾತ ಟ್ಯಾಲ್ ಬೊಟ್ ಹೌಂಡ್ಅನ್ನು ಬ್ರಿಟನ್‌ಗೆ ತಂದ. ಈ ಟ್ಯಾಲ್ ಬೊಟ್ ಪ್ರಮುಖವಾಗಿ ಬಿಳಿ, ನಿಧಾನ, ಆಳದ ಗಂಟಲಿನ ವಾಸನೆ ಹಿಡಿಯುವ ಹೌಂಡ್. ಇದನ್ನು ಸೇಂಟ್ ಹುಬರ್ಟ್ ಹೌಂಡ್‌ನಿಂದ ಪಡೆಯಲಾಗಿತ್ತು. ನಂತರ 8 ನೆಯ ಶತಮಾನದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಯಿತು. ಕೆಲವು ಸಂದರ್ಭದಲ್ಲಿ ಇಂಗ್ಲೀಷ್ ಟ್ಯಾಲ್‌ಬೊಟ್ಸ್‌ಗಳನ್ನು ಗ್ರೆಹೌಂಡ್ ನೊಂದಿಗೆ ಸಂಕರಿಸಿ ಅದಕ್ಕೆ ಹೆಚ್ಚಿನ ವೇಗ ನೀಡಲು ಈ ಪ್ರಯೋಗ ಮಾಡಲಾಗುತ್ತಿತ್ತು.[೫] ನಶಿಸಿ ಹೋಗುತ್ತಿರುವ ಟ್ಯಾಲ್‌ಬೊಟ್ ಬಹುತೇಕ ಇಂದಿನ ಸದರ್ನ್ ಹೌಂಡ್ ಬೆಳೆಯಲು ಕಾರಣವಾಗಿರಬಹುದು. ಬಹುಶಃ ಇದು ಈಗಿನ ಆಧುನಿಕ ಬೀಗಲ್‌ನ ತಲೆಮಾರಿರಬೇಕು.[b]

ಮಧ್ಯಯುಗೀನ ವೇಳೆಯಿಂದ ಬೀಗಲ್ ಅನ್ನು ಅನುವಂಶೀಯ ಸಣ್ಣ ಹೌಂಡ್ಸ್‌ಗೆ ಸೇರಿದ್ದೆಂದು ಹೇಳಬಹುದು. ಆದರೆ ಇವುಗಳು ಇತ್ತೀಚಿನ ಸಂಕರಿತ ತಳಿಗಳಿಂದ ಕೊಂಚ ವಿಭಿನ್ನವಾಗಿವೆ. ಬೀಗಲ್ ಮಾದರಿಯ ಸಣ್ಣ ನಾಯಿಗಳು ಎಡ್ವರ್ಡ್ II ಮತ್ತು ಹೆನ್ರಿ VII ಕಾಲದಲ್ಲಿ ಇದ್ದ ಬಗ್ಗೆ ವಿವರಗಳು ದೊರೆಯುತ್ತವೆ. ಇವರಿಬ್ಬರಲ್ಲೂ ಈ ತಳಿಯ ನಾಯಿಗಳ ಗುಂಪೊಂದಿತ್ತು. ಇವುಗಳು ಆಗಿನ ಪರಿಸ್ಥಿಗೆ ಹೊಂದಿಕೊಂಡಿದ್ದವು. ರಾಣಿ ಎಲಿಜಾಬೆತ್ I ಕೂಡಾ ಪಾಕೆಟ್ ಬೀಗಲ್ ಮಾದರಿಯ ನಾಯಿಯನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡಿದ್ದು 8 to 9 inches (20 to 23 centimetres) ಕಾಣಬರುತ್ತದೆ. ಎಷ್ಟು ಚಿಕ್ಕದೆಂದರೆ ಒಂದು "ಜೇಬಿ"ನಲ್ಲಿ ಅಥವಾ ಕೈಚೀಲದಲ್ಲಿ ಹಿಡಿಸುವ ಇದರ ಆಕಾರವಿದ್ದರೂ ಅದು ತನ್ನ ಬೇಟೆಗೆ ಹಿಂದೆ ಬಿದ್ದಿಲ್ಲ. ದೊಡ್ದ ಆಕಾರದ ಹೌಂಡ್‌ಗಳು ಬೇಟೆಯನ್ನು ಬೆನ್ನಟ್ಟಿ ಅದನ್ನು ನೆಲಕ್ಕೆ ಬೀಳಿಸಿದಾಗ ಸಣ್ಣ ನಾಯಿಗಳೂ ಸಹ ಗಿಡಗಂಟಿಗಳ ಬಳಸುವ ದಾರಿಯಿಂದ ಓಡಿ ಬೇಟೆ ಹಿಡಿಯಲು ನೆರವಾಗುತ್ತವೆ. ಎಲಿಜಾಬೆತ್ I ಇವುಗಳನ್ನು ಹಾಡುವ ಬೀಗಲ್ ‌ಗಳೆಂದು ಹೇಳುತ್ತಿದ್ದಳು. ಅಲ್ಲದೇ ಅರಮನೆಯ ಅತಿಥಿಗಳಿಗೆ ಇವು ಅತ್ತಿಂದಿತ್ತ ಸುಳಿದಾಡಿ ಮನರಂಜನೆ ಒದಗಿಸಲು ಬಳಸಲಾಗುತಿತ್ತು. ಆಕೆ ತನ್ನ ಪಾಕೆಟ್ ಬೀಗಲ್ಅನ್ನು ಊಟದ ಟೇಬಲ್ ಸುತ್ತ ಕಪ್‌ಗಳ ಬಳಿ ಸುಳಿದಾಡಲು ಅನುಮತಿಸುತ್ತಿದ್ದರು.[೬] ಹತ್ತೊಂಬತ್ತನೆಯ ಶತಮಾನದಲ್ಲಿ ಈ ತಳಿಗಳು ಒಂದಕ್ಕೊಂದು ಬದಲಿ ಸಂಕರದಿಂದ ಎರಡು ಹೆಸರುಗಳನ್ನು ಪಡೆದಿದ್ದವು. ಇವೇ ಆಗ ಸಣ್ಣ ಗಾತ್ರದ ಪ್ರಕಾರವಾಗಿದ್ದವು. ಜಾರ್ಜ್ ಜೆಸ್ಸೆನ ರಿಸರ್ಚ್ ಇಂಟು ದಿ ಹಿಸ್ಟರಿ ಆಫ್ ದಿ ಬ್ರಿಟಿಶ್ ಡಾಗ್ (ಬ್ರಿಟಿಶ್ ನಾಯಿಗಳ ಆರಂಭಿಕ ಇತಿಹಾಸ)ದಲ್ಲಿ 1866 ರಿಂದ ಇದರ ಬಗ್ಗೆ ಉಲ್ಲೇಖಗಳಿವೆ. 17ನೆಯ ಶತಮಾನದ ಕವಿ ಮತ್ತು ಬರಹಗಾರ ಗೆರ್ವೇಸ್ ಮರ್ಖಮ್ ಪ್ರಕಾರ, ಬೀಗಲ್‌ಗಳು ಮನುಷ್ಯನ ಅಂಗೈಯಲ್ಲಿ ಹಿಡಿಯುವ ಗಾತ್ರ ಹೊಂದಿವೆ ಎಂದು ಹೇಳಿದ್ದಾನೆ ಮತ್ತು ಇದು:

little small mitten-beagle, which may be companion for a ladies kirtle, and in the field will run as cunningly as any hound whatere, only their musick is very small like reeds.[೭]

ಪಾಕೆಟ್ ಬೀಗಲ್‌‌‌ಗಾಗಿ ವಿಶಿಷ್ಟ ಗುಣಲಕ್ಷಣಗಳನ್ನು 1901ರಲ್ಲಿ ಚಿತ್ರಿಸಲಾಗಿದೆ; ಇಂತಹ ಅನುವಂಶೀಯ ಗುಣಗಳು ಇಂದು ನಶಿಸಿವೆ; ಅದಲ್ಲದೇ ಆಧುನಿಕ ಮಾದರಿಯಲ್ಲಿ ಪ್ರಾಚೀನತೆ ತುಂಬಿ ಮರುಜೀವ ಕೊಡುವ ಪ್ರಯತ್ನ ಮಾಡಲಾಗಿದೆ.[೮]

ಹದಿನೆಂಟನೆಯ ಶತಮಾನ ಬದಲಾಯಿಸಿ

 
ಈ ಚಿತ್ರವು 19 ನೆಯ ಶತಮಾನದಲ್ಲಿನ ನಾಯಿಯ ಭಾರದ ಶರೀರ ಮತ್ತು ನಂತರದ ಶುದ್ದ ತಳಿಯ ಯಾವುದೇ ಲಕ್ಷಣಗಳಿಲ್ಲ.

ಸುಮಾರು 1700 ರ ಹೊತ್ತಿಗೆ ಎರಡು ಬೇಟೆಗಾಗಿಯೇ ಮೀಸಲಾದ ತಳಿಗಳನ್ನು ಅಭಿವೃದ್ಧಿಪಡಿಸಲಾಯಿತು. ಇವುಗಳನ್ನು ಮೊಲ ಮತ್ತು ಮೊಲದ ಜಾತಿಪ್ರಾಣಿಗಳ ಬೇಟೆಗೆ ಬಳಸಲಾಯಿತು: ಸದರ್ನ್ ಹೌಂಡ್ ಮತ್ತು ನಾರ್ತ್ ಕಂಟ್ರಿ ಬೀಗಲ್(ಅಥವಾ ನಾರ್ದರ್ನ್ ಹೌಂಡ್) ಎಂಬವು ಪ್ರಮುಖವಾದವು. ಈ ಸದರ್ನ್ ಹೌಂಡ್ ಎತ್ತರ, ತೂಕದ ನಾಯಿ ಜೊತೆಗೆ ಅದು ಚೌಕಾಕಾರದ ತಲೆ, ಉದ್ದ ಮತ್ತು ಮೃದು ಕಿವಿಗಳು ಇದರಲ್ಲಿ ಸಾಮಾನ್ಯವಾಗಿದ್ದವು. ಇವುಗಳು ದಕ್ಷಿಣದ ರಿವರ್ ಟ್ರೆಂಟ್ (ಟ್ರೆಂಟ್ ನದಿ) ಭಾಗದಲ್ಲಿ ದೊರೆಯುತ್ತಿದ್ದವಲ್ಲದೇ ಟ್ಯಾಲ್‌ಬೊಟ್ ಹೌಂಡ್‌ಗೆ ಸಂಬಂಧಿಯಾಗಿದ್ದವು. ಇವು ನಿಧಾನಗತಿಯದಾದರೂ ಶಕ್ತಿ ಮತ್ತು ಉತ್ತಮ ವಾಸನಾ ಗ್ರಹಣದ ಶಕ್ತಿ ಹೊಂದಿದ್ದವು. ನಾರ್ತ್ ಕಂಟ್ರಿ ಬೀಗಲ್ ಬಹುಶಃ ಟ್ಯಾಲ್‌ಬೊಟ್ ಮತ್ತು ಗ್ರೆಯ್ ಹೌಂಡ್‌ನ ಸಂಕರಿತ ತಳಿಯಾಗಿರಬಹುದು. ಇದು ಯಾರ್ಕ್ ಶೈರ್‌ನಲ್ಲಿ ಅಗ್ಗವಾಗಿ ಅಭಿವೃದ್ಧಿಪಡಿಸಬಹುದಿತ್ತು. ಅಲ್ಲದೇ ಉತ್ತರ ಕೌಂಟಿ ಭಾಗದಲ್ಲಿ ಸಾಮಾನ್ಯವಾಗಿತ್ತು. ಇದು ಸದರ್ನ್ ಹೌಂಡ್‌ಗಿಂತ ಸಣ್ಣದಾಗಿತ್ತಲ್ಲದೇ ಕಡಿಮೆ ತೂಕ ಮತ್ತು ಚೂಪಾದ ಬಾಯಿ ಹೊಂದಿತ್ತು. ಆದರೆ ಅದು ಸದರ್ನ್ ತಳಿಗಳಿಗಿಂತ ವೇಗ ಪಡೆದಿತ್ತಲ್ಲದೇ ಅದರ ವಾಸನೆ ಗ್ರಹಣ ಶಕ್ತಿ ಕೊಂಚ ಕಡಿಮೆ ಅಭಿವೃದ್ಧಿಯಾಗಿತ್ತು.[೯] ನರಿಗಳ ಬೇಟೆ ಹೆಚ್ಚಾಗಿ ಜನಪ್ರಿಯವಾಯಿತು, ಎರಡೂ ತೆರನಾದ ಬೇಟೆನಾಯಿಗಳು ಕಣ್ಮರೆಯಾದವು. ಹೀಗೆ ಬೀಗಲ್-ತರಹದ ನಾಯಿಗಳನ್ನು ದೊಡ್ಡ ತಳಿ ಸ್ಟಾಗ್ ಹೌಂಡ್ಸ್‌ ಒಂದಿಗೆ ಮಿಶ್ರ ತಳಿ ಮಾಡಿ ಸಂಕರಿಸಿದಾಗ ಆಧುನಿಕ ಫಾಕ್ಸ್ ಹೌಂಡ್ ಅಭಿವೃದ್ಧಿಯಾಯಿತು. ಆದರೆ ಬೀಗಲ್ ಗಾತ್ರದ ಮಾದರಿಗಳು ನಶಿಸುವ ಅಂಚಿಗೆ ಬಂದವು; ಆದರೆ ದಕ್ಷಿಣ ಭಾಗದ ರೈತರು ಕೆಲವನ್ನು ಮೊಲದಂತಹ ಪ್ರಾಣಿಗಳ ಬೇಟೆಗೆ ಅದೇ ಪ್ರಕಾರದ ತಳಿ ಬೆಳೆಸಲು ಮುಂದಾದರು.

ಆಧುನಿಕ ತಳಿಯ ಅಭಿವೃದ್ಧಿ ಬದಲಾಯಿಸಿ

ರೆವರೆಂಡ್ ಫಿಲಿಪ್ ಹನಿವುಡ್ ಎಸ್ಸೆಕ್ಸ್(ಇಂಗ್ಲೆಂಡಿನ ಚಿಕ್ಕ ದ್ವೀಪ ಪ್ರದೇಶ)ನಲ್ಲಿ ಬೀಗಲ್ ಸಂತತಿಗೆ ಹೊಸ ರೂಪ ನೀಡಲು 1830 ರಲ್ಲಿ ಪ್ರಯತ್ನಿಸಿದ. ಈ ಮಿಶ್ರ ತಳಿಯು ನಂತರದ ಆಧುನಿಕ ಬೀಗಲ್ ಅಭಿವೃದ್ಧಿಗೆ ಮೂಲವಾಯಿತು. ಆದರೆ ಈ ಮಿಶ್ರ ತಳಿಯ ಬಗ್ಗೆ ಯಾವುದೇ ವಿವರಗಳು ದೊರೆಯುವದಿಲ್ಲ. ಇವುಗಳು ನಾರ್ತ್ ಕಂಟ್ರಿ ಬೀಗಲ್ಸ್ ಮತ್ತು ಸದರ್ನ್ ಹೌಂಡ್ಸ್‌ಗಳನ್ನು ಆಗ ಪ್ರತಿನಿಧಿಸಲ್ಪಟ್ಟವು. ವಿಲಿಯಮ್ ಯೋಟ್ಟ್ ಪ್ರಕಾರ ಇವುಗಳಿಂದ ಬಹುಶಃ ಹ್ಯಾರಿಯರ್ಸ್ ಜಾತಿಯು ಹೆಚ್ಚಿನ ಬೀಗಲ್‌ಗಳಿಗೆ ದಾರಿ ಮಾಡಿಕೊಟ್ಟಿರಬಹುದು. ಆದರೆ ಹ್ಯಾರಿಯರ್‌ನ ಮೂಲದ ಬಗ್ಗೆ ಸ್ಪಷ್ಟತೆ ಇಲ್ಲ.[೧೦] ಹನಿವುಡ್‌ನ ಬೀಗಲ್‌ಗಳು ಸಣ್ಣವಾಗಿದ್ದವು, ಎದ್ದು ನಿಂತರೆ ಭುಜದ ಸಮೀಪಕ್ಕೆ ಸುಮಾರು 10 inches (25 centimetres) ಎತ್ತರಕ್ಕೆ ಬರುವ ಆಕಾರದವಾಗಿದ್ದವು. ಜಾನ್ ಮಿಲ್ಸ್ (ದಿ ಸ್ಪೊರ್ಟ್ಸ್ ಮನ್ ಲೈಬ್ರರಿ ಕೃತಿಯಲ್ಲಿ) ಪ್ರಕಾರ ಇವು ಅಪ್ಪಟ ಬಿಳಿ ಬಣ್ಣದ್ದಾಗಿದ್ದವು. ಪ್ರಿನ್ಸ್ ಅಲ್ಬರ್ಟ್ ಮತ್ತು ಲಾರ್ಡ್ ವಿಂಟರ್ಟನ್ ಕೂಡಾ ಬೀಗಲ್‌ನ ಒಂದು ತಳಿಯನ್ನು ಇದೇ ಸಮಯದಲ್ಲಿ ಹೊಂದಿದ್ದರು. ಈ ರಾಯಲ್ ತಳಿಯು ಆಗ ತನ್ನ ಮಹತ್ವ ಪಡೆದಿತ್ತು. ಆದರೆ ಹನಿವುಡ್ ತಂದ ತಳಿ ಮಾತ್ರ ಉತ್ತಮವಾಗಿತ್ತೆಂದು ನಂಬಲಾಗಿದೆ.[೧೧]

 
ಆರಂಭಿಕ ಬೀಗಲ್ ನ ಚಿತ್ರಣಗಳು(ಎಡದಿಂದ ಬಲಕ್ಕೆ ಮೇಲಿನಿಂದ):1833,1835,ಸ್ಟೇನ್ಹೆಂಜಿಸನ್ ಮಧ್ಯಮ(1859 ಯೊಟ್ಟುನ 1852 ರ "ಬೀಗಲ್ "ಪ್ರತಿರೂಪದ ಮರುಪಯೋಗ)ಮತ್ತು ಡ್ವಾರ್ಫ್ ಬೀಗಲ್ (1859)

ಆಧುನಿಕ ತಳಿಗಳ ಅಭಿವೃದ್ಧಿಯಲ್ಲಿ ಹನಿವುಡ್ ಪ್ರಸಿದ್ದಿ ಪಡೆದರೂ ಬೇಟೆಯಾಡುವ ತಳಿಗಳನ್ನು ಬೆಳೆಸಲು ಆತ ಹೆಚ್ಚು ತನ್ನ ಚಟುವಟಿಕೆಯನ್ನು ಕೇಂದ್ರೀಕರಿಸಿದನು. ಆದ್ದರಿಂದ ಥಾಮಸ್ ಜಾನ್ಸನ್ ಉತ್ತಮ ಮತ್ತು ಆಕರ್ಷಕ ಅಲ್ಲದೇ ಬೇಟೆಗೆ ಸಿದ್ಧವಾದ ಮಿಶ್ರತಳಿಗಳ ಹೆಚ್ಚಳಕ್ಕೆ ಕಾರ್ಯಪ್ರವೃತ್ತನಾಗಿದ್ದನು. ಹೀಗೆ ವಿಭಿನ್ನ ಎರಡು ಒಂದು ಕಠಿಣ ಮತ್ತು ಮೃದು ಸ್ವಭಾವದ ಮಿಶ್ರತಳಿಗಳ ಉತ್ತೇಜನಕ್ಕೆ ನಾಂದಿಯಾಯಿತು. ಗಡಸು ಸ್ವಭಾವದ ಬೀಗಲ್ 20 ನೆಯ ಶತಮಾನದ ಅಂತ್ಯದವರೆಗೂ ಬದುಕಿತ್ತು; ಇವು 1969 ರಲ್ಲಿ ಶ್ವಾನ ಪ್ರದೇಶದ ಸಂದರ್ಭದಲ್ಲಿ ಕಾಣಿಸಿದ ಉದಾಹರಣೆಗಳಿವೆ. ಈಗ ಇದು ಸಂಪೂರ್ಣ ಅಳಿದು ಸ್ಟ್ಯಾಂಡರ್ಡ್ ಬೀಗಲ್ ಗುಂಪಿಗೆ ಸೇರಿದೆಯೋ ಎನ್ನಲಾಗಿದೆ.[೧೨]

ಸುಮಾರು 1840 ರಲ್ಲಿ ಒಂದು ಸ್ಟ್ಯಾಂಡರ್ಡ್ ಬೀಗಲ್ ಮಾದರಿಯು ಅಭಿವೃದ್ಧಿ ಪಡೆಯಿತು: ಆಗ ನಾರ್ತ್ ಕಂಟ್ರಿ ಬೀಗಲ್ ಮತ್ತು ಸದರ್ನ್ ಹೌಂಡ್ ನಡುವಿನ ವ್ಯತ್ಯಾಸ ಮಾಯವಾಯಿತು. ಆದರೆ ಅವುಗಳೆರಡಲ್ಲಿ ಇನ್ನೂ ಗಾತ್ರ, ಗುಣಲಕ್ಷಣ ಮತ್ತು ಅದರ ನಂಬುಗೆಯ ಗುಣ ಸಮರೂಪದ್ದಾಗಿ ಕಾಣುತ್ತದೆ.[೧೩] 1856ರಲ್ಲಿ, "ಸ್ಟೋನ್‌ಹೆಂಜ್‌" (ದಿ ಫೀಲ್ಡ್ ಪತ್ರಿಕೆಯ ಸಂಪಾದಕ ಜೊನ್ ಹೆನ್ರಿ ವಾಲ್ಶ್‌ನ ಕಲ್ಪಿತನಾಮ) ಮ್ಯಾನ್ಯುವಲ್ ಆಫ್ ಬ್ರಿಟಿಷ್ ರೂರಲ್ ಸ್ಪೋರ್ಟ್ಸ್‌ ‌ನಲ್ಲಿ ಬರೆದಿರುವ ಲೇಖನದಲ್ಲಿ ಈ ಬೀಗಲ್ ಜಾತಿಗಳನ್ನು ಇನ್ನೂ ನಾಲ್ಕು ತೆರನಾದ ತಳಿಗಳಾಗಿ ವಿಂಗಂಡಿಸಿದ್ದಾನೆ: ಮಧ್ಯಮ ಗಾತ್ರದ ಬೀಗಲ್; ಕುಳ್ಳ ಅಥವಾ ಮಡಿಲು-ನಾಯಿ ಬೀಗಲ್; ಫಾಕ್ಸ್ ಬೀಗಲ್ (ಫಾಕ್ಸ್ ಹೌಂಡ್‌ನ ಸಣ್ಣ, ನಿಧಾನಗತಿಯ ರೂಪಾಂತರ); ಮತ್ತು ಒರಟು-ಚರ್ಮದ ಅಥವಾ ಟೆರಿಯರ್ ಬೀಗಲ್, ಇದನ್ನು ಅವನು ಇತರ ಪ್ರಭೇದಗಳಲ್ಲಿ ಯಾವುದಾದರೊಂದರ ಮತ್ತು ಸ್ಕಾಟಿಷ್ ಬೆರಿಯರ್ ತಳಿಗಳೊಂದರ ಮಿಶ್ರ ತಳಿಯಾಗಿ ವರ್ಗೀಕರಿಸಿದನು.[೧೪] ಸ್ಟೋನ್‌ಹೆಂಜ್ ಪ್ರಮಾಣಕ ವಿವರಣೆಯ ಆರಂಭವನ್ನೂ ನೀಡುತ್ತಾನೆ:

In size the beagle measures from 10 inches, or even less, to 15. In shape they resemble the old southern hound in miniature, but with more neatness and beauty; and they also resemble that hound in style of hunting.[೧೪]

1887ರಲ್ಲಿ ಅಳಿವಿನ ಅಪಾಯವು ಕ್ಷೀಣಿಸಿತು: ಆ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ 18 ಬೀಗಲ್‌ ಬೇಟೆ ನಾಯಿಯ ತಂಡಗಳಿದ್ದವು.[೧೫] ಬೀಗಲ್‌ ಕ್ಲಬ್ 1890ರಲ್ಲಿ ಸ್ಥಾಪನೆಯಾಯಿತು ಹಾಗೂ ಮೊದಲ ಪ್ರಮಾಣಕ ತಳಿಯು ಅದೇ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿತು.[೧೬] ನಂತರದ ವರ್ಷದಲ್ಲಿ ಅಸೋಸಿಯೇಶನ್ ಆಫ್ ಮಾಸ್ಟರ್ಸ್ ಆಫ್ ಹ್ಯಾರಿಯರ್ಸ್ ಆಂಡ್ ಬೀಗಲ್ಸ್ ಸ್ಥಾಪಿತವಾಯಿತು. ಎರಡೂ ಸಂಸ್ಥೆಗಳು ಉತ್ತಮ ತಳಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದ್ದವು ಹಾಗೂ ಬೀಗಲ್‌ನ ಪ್ರಮಾಣಕ ಪ್ರಕಾರವನ್ನು ಉತ್ಪತ್ತಿ ಮಾಡಲು ಬಹಳ ಆಸಕ್ತಿಯನ್ನು ಹೊಂದಿದ್ದವು‌.[೧೭] 1902ರಲ್ಲಿ ಬೇಟೆ ನಾಯಿಗಳ ತಂಡದ ಸಂಖ್ಯೆಯು 44ರಷ್ಟಕ್ಕೆ ಏರಿತು.[೧೫]

ರಫ್ತು ಬದಲಾಯಿಸಿ

ಬೀಗಲ್‌ಗಳು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1840ರ ಸಂದರ್ಭದಲ್ಲಿದ್ದವು. ಆದರೆ ಮೊದಲು ನಾಯಿಗಳನ್ನು ಬೇಟೆಗಾಗಿ ಆಮದು ಮಾಡಿಕೊಳ್ಳಲಾಗಿತ್ತು ಹಾಗೂ ಅವು ವಿವಿಧ ಗುಣಮಟ್ಟದ್ದಾಗಿದ್ದವು. 1830ರಲ್ಲಿ ಹನಿವುಡ್ಅನ್ನು ಮಾತ್ರ ಸಾಕಲು ಆರಂಭಿಸಿದರಿಂದ, ಈ ನಾಯಿಗಳು ಆಧುನಿಕ ತಳಿಯ ಸೂಚಕಗಳಾಗಿದ್ದವು ಮತ್ತು ಅವುಗಳ ವಿವರಣೆಯು ನೇರ-ಕಾಲಿನ ಡ್ಯಾಚ್‌ಶಂಡ್‍‌ನಂತೆ ಕಂಡುಬರುತ್ತದೆ, ಅವುಗಳ ಬಲಹೀನ ತಲೆಯು ಪ್ರಮಾಣಕ-ತಳಿಯೊಂದಿಗೆ ಸ್ವಲ್ಪ ಪ್ರಮಾಣದ ಹೋಲಿಕೆಯನ್ನು ಹೊಂದಿದೆ. ಒಂದು ಉತ್ತಮ ಗುಣಮಟ್ಟದ ತಳಿಯನ್ನು ಉತ್ಪಾದಿಸುವ ಗಂಭೀರ ಪ್ರಯತ್ನಗಳು 1870ರ ಆರಂಭದಲ್ಲಿ ನಡೆದವು. ಆ ಸಂದರ್ಭದಲ್ಲಿ ಇಲಿನೋಯ್ಸ್‌ನ ಜನರಲ್ ರಿಚಾರ್ಡ್ ರೋವೆಟ್ಟ್ ಕೆಲವು ನಾಯಿಗಳನ್ನು ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡು ಸಾಕಲು ಆರಂಭಿಸಿದನು. ರೋವೆಟ್ಟ್‌ನ ಬೀಗಲ್‌ಗಳು ಮೊದಲ ಅಮೆರಿಕನ್ ಪ್ರಮಾಣಕ ತಳಿಯ ಮಾದರಿಗಳಾಗಿ ರೂಪುಗೊಂಡವೆಂದು ನಂಬಲಾಗಿದೆ. ಇದನ್ನು ರೋವೆಟ್ಟ, L. H. ಟ್ವಾಡೆಲ್ ಮತ್ತು ನಾರ್ಮನ್ ಎಲ್ಮೋರ್ 1887ರಲ್ಲಿ ಅಭಿವೃದ್ಧಿಗೊಳಿಸಿದರು.[೧೮] ಬೀಗಲ್‌ಅನ್ನು ಅಮೆರಿಕನ್ ಕೆನ್ನೆಲ್ ಕ್ಲಬ್ (AKC) 1884ರಲ್ಲಿ ತಳಿಯಾಗಿ ಸ್ವೀಕರಿಸಿತು. ಆ ತಳಿಯು 20ನೇ ಶತಮಾನದಲ್ಲಿ ಪ್ರಪಂಚದಾದ್ಯಂತ ಹರಡಿತು.

ಜನಪ್ರಿಯತೆ ಬದಲಾಯಿಸಿ

 
ಸುಮಾರು 20 ನೆಯ ಶತಮಾನದಲ್ಲಿ ಆಕರ್ಷಕವಾದ ಒಂದೇ ರೂಪದ ತಳಿಯನ್ನು ಅಭಿವೃದ್ಧಿಪಡಿಸಲಾಯಿತು.

ಅಸೋಸಿಯೇಶನ್ ಆಫ್ ಮಾಸ್ಟರ್ಸ್ ಆಫ್ ಹ್ಯಾರಿಯರ್ಸ್ ಆಂಡ್ ಬೀಗಲ್ಸ್ 1889ರಲ್ಲಿ ಆರಂಭವಾದ ಪೀಟರ್‌ಬರೋದಲ್ಲಿನ ನಿಯತ ಪ್ರದರ್ಶನವನ್ನು ನಡೆಸುವ ಅಧಿಕಾರವನ್ನು ಪಡೆಯಿತು. UKಯಲ್ಲಿನ ಬೀಗಲ್‌ ಕ್ಲಬ್‌ 1896ರಲ್ಲಿ ಅದರ ಮೊದಲ ಪ್ರದರ್ಶನವನ್ನು ಮಾಡಿತು.[೧೬] ತಳಿಯ ನಿಯತ ಪ್ರದರ್ಶನವು ಏಕರೂಪದ ಪ್ರಕಾರದ ಅಭಿವೃದ್ಧಿಗೆ ಕಾರಣವಾಯಿತು. ವಿಶ್ವ ಸಮರ Iರ ಸಂದರ್ಭದಲ್ಲಿ ಎಲ್ಲಾ ಪ್ರದರ್ಶನಗಳು ರದ್ದುಗೊಳ್ಳುವವರೆಗೆ ಬೀಗಲ್‌ ಯಶಸ್ವಿಯಾಗಿ ಮುಂದುವರಿಯಿತು. ಯುದ್ಧದ ನಂತರ ತಳಿಯು ಮತ್ತೆ UKಯಲ್ಲಿ ಉಳಿಯುವುದಕ್ಕಾಗಿ ಕಷ್ಟಪಟ್ಟಿತು: ಪಾಕೆಟ್ ಬೀಗಲ್‌‌ಗಳ ಕೊನೆಯ ತಳಿಯು ಈ ಸಂದರ್ಭದಲ್ಲಿ ನಶಿಸಿಹೋಯಿತು ಹಾಗೂ ದಾಖಲಾತಿಯು ಎಲ್ಲದಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿಯಿತು. ಕೆಲವು ತಳಿಗಾರರು (ಮುಖ್ಯವಾಗಿ ರೆನಲ್ಟನ್ ಕೆನ್ನೆಲ್ಸ್) ನಾಯಿಯ ಬಗೆಗಿನ ಆಸಕ್ತಿಗೆ ಪುನಃಚೈತ್ಯನ್ಯವನ್ನು ಒದಗಿಸಿದರು ಹಾಗೂ ವಿಶ್ವ ಸಮರ IIರ ಹೊತ್ತಿಗೆ ತಳಿಯು ಮತ್ತೆ ಚೆನ್ನಾಗಿ ಅಭಿವೃದ್ಧಿಗೊಂಡಿತು. ಯುದ್ಧವು ಕೊನೆಗೊಂಡ ನಂತರ ದಾಖಲಾತಿಗಳು ಮತ್ತೆ ಇಳಿಕೆಯನ್ನು ಕಂಡವು. ಆದರೆ ಹೆಚ್ಚುಕಡಿಮೆ ತಕ್ಷಣವೇ ಮತ್ತೆ ಚೇತರಿಸಿಕೊಂಡವು.[೧೯] 1959ರಲ್ಲಿ ದೆರವುಂಡ ವಿಕ್ಸೆನ್ ಕ್ರಫ್ಟ್ಸ್‌ನಲ್ಲಿ "ಬೆಸ್ಟ್ ಇನ್ ಶೊ" ಗೆದ್ದುಕೊಂಡಿತು.[೧೬]

ಶುದ್ಧತಳಿ ನಾಯಿಗಳಾದ ಬೀಗಲ್‌ಗಳು ಅವುಗಳ ಸ್ಥಳೀಯ ಪ್ರದೇಶಕ್ಕಿಂತ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಹೆಚ್ಚು ಪ್ರಸಿದ್ಧವಾಗಿವೆ. ನ್ಯಾಷನಲ್ ಬೀಗಲ್‌ ಕ್ಲಬ್ ಆಫ್ ಅಮೆರಿಕವು 1888ರಲ್ಲಿ ಸ್ಥಾಪನೆಯಾಯಿತು ಹಾಗೂ 1901ರಲ್ಲಿ ಬೀಗಲ್‌ ಬೆಸ್ಟ್ ಇನ್ ಶೊ ಪ್ರಶಸ್ತಿಯನ್ನು ಗೆದ್ದುಕೊಂಡಿತು. UKಯಲ್ಲಿ ವಿಶ್ವ ಸಮರ Iರ ಸಂದರ್ಭದಲ್ಲಿ ಚಟುವಟಿಕೆಗಳು ತೀರ ಕಡಿಮೆಯಾಗಿದ್ದವು. ಆದರೆ ಯುದ್ಧವು ಕೊನೆಗೊಂಡಾಗ ತಳಿಯು U.S.ನಲ್ಲಿ ಉತ್ತಮ ಚೇತರಿಕೆಯನ್ನು ಕಂಡಿತು. 1928ರಲ್ಲಿ ಇದು ವೆಸ್ಟ್‌ಮಿಂಸ್ಟರ್ ಕೆನ್ನೆಲ್ ಕ್ಲಬ್‌ನ ಪ್ರದರ್ಶನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. 1939ರಲ್ಲಿ ಚಾಂಪಿಯನ್ ಮೀಡೊವ್ಲಾರ್ಕ್ ಡ್ರಾಫ್ಟ್ಸ್‌ಮ್ಯಾನ್ ಎಂಬ ಬೀಗಲ್‌ ವರ್ಷದ ಅತ್ಯುತ್ತಮ ಅಮೆರಿಕನ್-ತಳಿ ನಾಯಿ ಎಂಬ ಪ್ರಶಸ್ತಿಗಳಲ್ಲಿ ಮೊದಲ ಸ್ಥಾನವನ್ನು ಪಡೆಯಿತು.[೨೦] 2008ರ ಫೆಬ್ರವರಿ 12ರಂದು K-ರನ್ಸ್ ಪಾರ್ಕ್ ಮಿ ಇನ್ ಫರ್ಸ್ಟ್ (ಯುನೊ) ಎಂಬ ಬೀಗಲ್‌, ಕೆನ್ನೆಲ್ ಕ್ಲಬ್‌ನ ಪ್ರದರ್ಶನದಲ್ಲಿ ಬೆಸ್ಟ್ ಇನ್ ಶೊ ವರ್ಗವನ್ನು ಸ್ಫರ್ಧೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಗೆದ್ದುಕೊಂಡಿತು.[೨೧] ಉತ್ತರ ಅಮೆರಿಕದಲ್ಲಿ ಅದು ಪ್ರಮುಖ ಹತ್ತು ಹೆಚ್ಚು-ಪ್ರಸಿದ್ಧ ತಳಿಗಳ ಪಟ್ಟಿಯಲ್ಲಿ ಸುಮಾರು 30 ವರ್ಷಗಳ ಕಾಲ ಇತ್ತು.[೨೨] 1953ರಿಂದ 1959ರವರೆಗೆ ಬೀಗಲ್‌ ಅಮೆರಿಕನ್ ಕೆನ್ನೆಲ್ ಕ್ಲಬ್‌ನಲ್ಲಿ ದಾಖಲಾದ ತಳಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿತ್ತು;[೨೩] 2005 ಮತ್ತು 2006ರಲ್ಲಿ ಇದು ದಾಖಲಾದ 155 ತಳಿಗಳಲ್ಲಿ 5ನೇ ಸ್ಥಾನವನ್ನು ಪಡೆದಿತ್ತು.[೨೪] UKರಲ್ಲಿ ಇದು ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ಅಲ್ಲಿನ ಕೆನ್ನೆಲ್ ಕ್ಲಬ್‌ನ ದಾಖಲಾತಿಗಳ ಶ್ರೇಣೀಕರಣದಲ್ಲಿ ಅದು 2005 ಮತ್ತು 2006ರಲ್ಲಿ ಅನುಕ್ರಮವಾಗಿ 28ನೇ ಮತ್ತು 30ನೇ ಸ್ಥಾನವನ್ನು ಪಡೆದುಕೊಂಡಿತ್ತು.[೨೫]

ಹೆಸರು ಬದಲಾಯಿಸಿ

ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಶನರಿಯ ಪ್ರಕಾರ, ಇಂಗ್ಲಿಷ್ ಸಾಹಿತ್ಯದಲ್ಲಿ ಎಸ್ಕ್ವೈರ್ ಆಫ್ ಲೊ ಡಿಗ್ರಿ ಯಲ್ಲಿ ಬೀಗಲ್‌ ಹೆಸರಿನ ಮೊದಲ ಸೂಚನೆಯು ಸುಮಾರು 1475ರಲ್ಲಾಯಿತು. "ಬೀಗಲ್‌" ಹೆಸರಿನ ಮೂಲವು ಅನಿಶ್ಚಿತವಾಗಿದೆ. ಆದರೂ ಈ ಪದವನ್ನು ಫ್ರೆಂಚ್‌ನ ಬೀಗ್ವೆಯೂಲ್ (ಬೇಯರ್ "ತೆರೆದ ವ್ಯಾಪಕ" ಮತ್ತು ಗ್ವೆಯೂಲ್ "ಬಾಯಿ"ಯಿಂದ "ತೆರೆದ ಗಂಟಲು" ಎಂಬರ್ಥವಿದೆ)[೨೬] ಅಥವಾ "ಸ್ವಲ್ಪ" ಎಂಬರ್ಥವಿರುವ ಹಳೆಯ ಇಂಗ್ಲಿಷ್, ಫ್ರೆಂಚ್ ಅಥವಾ ಗೇಲಿಕ್ ಪದ ಬೀಗ್ ‌ನಿಂದ ಪಡೆಯಲಾಗಿದೆಯೆಂದು ಸೂಚಿಸಲಾಗಿದೆ. ಇತರ ಸಂಭಾವ್ಯಗಳೆಂದರೆ ಫ್ರೆಂಚ್‌ನ ಬೀಗ್ಲರ್ (ಅಂದರೆ "ಕೆಳಗೆ") ಮತ್ತು ಜರ್ಮನ್ ಬೀಗೆಲೆ (ಅಂದರೆ "ಗದರಿಸಲು").

ಕೆಲ್ಟಿಕ್ ಕಾಲದಿಂದ ಐರ್ಲ್ಯಾಂಡ್‌ನಲ್ಲಿರುವ ಕಪ್ಪು ಮತ್ತು ಹಳದಿ-ಕಂದುಬಣ್ಣದ ಕೆರ್ರಿ ಬೀಗಲ್‌ ಬೀಗಲ್‌ ವಿವರಣೆಯನ್ನು ಏಕೆ ಹೊಂದಿದೆ ಎಂಬುದು ತಿಳಿದಿಲ್ಲ. 22 to 24 inches (56 to 61 centimetres)ನಲ್ಲಿ ಇದು ಆಧುವಿಕ ಕಾಲದ ಬೀಗಲ್‌ಗಿಂತ ಗಮನಾರ್ಹವಾಗಿ ಉದ್ದವಾಗಿದೆ ಮತ್ತು ಆರಂಭಿಕ ಕಾಲದಲ್ಲಿ ಮತ್ತೂ ದೊಡ್ಡದಾಗಿತ್ತು. ಬೀಗಲ್‌ನ ವಾಸನೆ ಹಿಡಿಯುವ ಸಾಮರ್ಥ್ಯವು ಆರಂಭದ ತಳಿಗಳನ್ನು ಕೆರ್ರಿ ಬೀಗಲ್‌ ಒಂದಿಗೆ ಮಾಡಿದ ಮಿಶ್ರ-ತಳಿಯಿಂದ ಬಂದಿರಬಹುದೆಂದು ಕೆಲವು ಬರಹಗಾರರು ಸೂಚಿಸುತ್ತಾರೆ. ಮೂಲತಃ ಇದನ್ನು ಸಾರಂಗಗಳನ್ನು ಬೇಟೆಯಾಡಲು ಬಳಸಲಾಗುತ್ತಿತ್ತು. ಇಂದು ಮೊಲ ಮತ್ತು ಡ್ರ್ಯಾಗ್ ಬೇಟೆಗಾರಿಕೆಗೆ ಉಪಯೋಗಿಸಲಾಗುತ್ತದೆ.[೨೭]

ವಿವರಣೆ ಬದಲಾಯಿಸಿ

ರೂಪ ಬದಲಾಯಿಸಿ

 
ಕೆನಲ್ ಕ್ಲಬ್ (UK)ನ ಗುಣಮಟ್ಟದ ಅಳತೆಗಾಗಿ ಆರಿಸಿದ್ದೆಂದರೆ ಬೀಗಲ್ ನ ಉತ್ತಮ ದರ್ಜೆಗೆ ಅದು ಉತ್ತಮ ಪ್ರಭಾವ ಬೀರುವ ಪಕ್ವ ತಳಿಯಾಗಿರಬೇಕೆ ವಿನಹ ಕಚ್ಚಾ ಗುಣಮಟ್ಟವನ್ನಲ್ಲ.

ಬೀಗಲ್‌ನ ರೂಪವು ಸಾಮಾನ್ಯವಾಗಿ ಫಾಕ್ಸ್ ಹೌಂಡ್ಅನ್ನು ಹೋಲುತ್ತದೆ. ಆದರೆ ತಲೆಯು ಅಗಲವಾಗಿರುತ್ತದೆ ಮತ್ತು ಮೂತಿಯು ಗಿಡ್ಡವಾಗಿರುತ್ತದೆ, ಅಭಿವ್ಯಕ್ತಿಯು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ ಹಾಗೂ ದೇಹಕ್ಕೆ ಹೋಲಿಸಿದರೆ ಕಾಲುಗಳು ಗಿಡ್ಡವಾಗಿರುತ್ತವೆ.[೨೮] ಇದರಿಂದಾಗಿ ಬೀಗಲ್‍‌ಗಳಿಗೆ ಹೆಚ್ಚಾಗಿ ಅವುಗಳ ಗ್ರಹಿಸುವ ಶಕ್ತಿಯನ್ನು ಬಳಸಲು ತರಬೇತಿ ನೀಡಲಾಗುತ್ತದೆ ಹಾಗೂ ಅವು ತುಂಬಾ ಕೆಳಕ್ಕೆ ಬಾಗಬಹುದು. ಅವು ಸಾಮಾನ್ಯವಾಗಿ 13 and 16 inches (33 and 41 centimetres) ಎತ್ತರದ ಸ್ಕಂದವನ್ನು ಹಾಗೂ 18 and 35 lb (8.2 and 15.9 kg)ನಷ್ಟು ತೂಕವನ್ನು ಹೊಂದಿರುತ್ತವೆ. ಹೆಣ್ಣು ಜಾತಿಗಳು ಗಾತ್ರದಲ್ಲಿ ಗಂಡಿಗಿಂತ ಸಣ್ಣದಿರುತ್ತವೆ.[೨೯]

ಅವು ಮಧ್ಯಮ-ಗಾತ್ರದ, ಚೌಕಾಕಾರದ ಮೂತಿಯೊಂದಿಗೆ ಮೃದು, ಗುಮ್ಮಟಾಕಾರದ ತಲೆಬುರುಡೆಯನ್ನು ಹಾಗೂ ಕಪ್ಪು (ಅಥವಾ ಕೆಲವೊಮ್ಮೆ ಯಕೃತ್ತಿನ) ಬಣ್ಣದ, ಗಮ್-ಡ್ರಾಪ್ ಆಕಾರದ ಮೂಗನ್ನು ಹೊಂದಿರುತ್ತವೆ. ದವಡೆಯು ಗಟ್ಟಿಮುಟ್ಟಾಗಿರುತ್ತದೆ ಹಾಗೂ ಮೇಲಿನ ಹಲ್ಲುಗಳು ಕೆಳಗಿನ ಹಲ್ಲುಗಳ ಮೇಲೆ ಸಂಪೂರ್ಣವಾಗಿ ಸರಿಹೊಂದುವುದರೊಂದಿಗೆ, ದವಡೆಗೆ ಚೌಕದಲ್ಲಿ ಸಾಲಾಗಿ ಜೋಡಿಸಲ್ಪಟ್ಟಿರುತ್ತವೆ. ಕಣ್ಣಗಳು ದೊಡ್ಡದಾಗಿದ್ದು, ಕೆಂಗಂದು ಅಥವಾ ಕಂದು ಬಣ್ಣದಲ್ಲಿದ್ದು, ಪತ್ತೇದಾರಿ-ರೀತಿಯಲ್ಲಿ ಕಂಡುಬರುತ್ತವೆ. ದೊಡ್ಡ ಕಿವಿಗಳು ಉದ್ದವಾಗಿ, ಮೃದುವಾಗಿ ಮತ್ತು ಕೆಳಗೆ ಬಾಗಿದ್ದು, ಸ್ವಲ್ಪವಾಗಿ ಮುಖದತ್ತ ತಿರುಗಿ ತುದಿಯಲ್ಲಿ ಸುರುಳಿಯಾಗಿರುತ್ತವೆ. ಬೀಗಲ್‌ಗಳು ಗಟ್ಟಿಮುಟ್ಟಾದ, ಮಧ್ಯಮ-ಗಾತ್ರದ ಕತ್ತನ್ನು (ಅದು ಸಾಕಷ್ಟು ಉದ್ದವಾಗಿದ್ದು, ವಾಸನೆಯನ್ನು ಗ್ರಹಿಸಲು ಸುಲಭವಾಗಿ ನೆಲಕ್ಕೆ ಬಾಗಲು ನೆರವಾಗುತ್ತದೆ) ಹೊಂದಿರುತ್ತವೆ. ಕತ್ತಿನ ಚರ್ಮವು ಸ್ವಲ್ಪ ಮಟ್ಟಿಗೆ ಮಡಿಚಿಕೊಂಡಿರುತ್ತದೆ, ಆದರೆ ಡ್ಯೂಲ್ಯಾಪ್ ಇರುವ ಉದಾಹರಣೆಯೂ ಇದೆ; ಅಗಲವಾದ ಎದೆಯು ಕ್ರಮೇಣ ಸಣ್ಣದಾಗಿ ಹೊಟ್ಟೆ ಮತ್ತು ನಡುವಾಗಿರುತ್ತದೆ ಹಾಗೂ ಗಿಡ್ಡ, ಸ್ವಲ್ಪ ಮಟ್ಟಿಗೆ ಬಾಗಿದ, ತುದಿಯಲ್ಲಿ ಬಿಳಿ ಬಣ್ಣದ, ಬಾಲವನ್ನು ("ಸ್ಟರ್ನ್" ಎನ್ನುತ್ತಾರೆ) ಹೊಂದಿರುತ್ತದೆ. "ಫ್ಲ್ಯಾಗ್" ಎನ್ನುವ ಬಾಲದ ಬಿಳಿ ತುದಿಯಿರುವ ತಳಿಯನ್ನು ಆರಿಸಿ ಬೆಳೆಸಲಾಗುತ್ತದೆ. ವಾಸನೆಯನ್ನು ಗ್ರಹಿಸಿಕೊಂಡು ನಾಯಿಯು ತಲೆಯನ್ನು ಕೆಳಗೆ ಹಾಕಿಕೊಂಡು ಹೋಗುವಾಗ ಅದನ್ನು ಸುಲಭವಾಗಿ ಗುರುತಿಸಲು ಇದು ಅನುವು ಮಾಡಿಕೊಡುತ್ತದೆ.[೩೦] ಬಾಲವು ಹಿಂದಕ್ಕೆ ಸುರುಳಿಯಾಗಿರುವುದಿಲ್ಲ. ಆದರೆ ನಾಯಿಯು ಸಕ್ರಿಯವಾಗಿರುವಾಗ ಇದು ನೇರವಾಗಿರುತ್ತದೆ. ಬೀಗಲ್‌ ಚೆನ್ನಾಗಿ ಬೆಳೆದ ಮಾಂಸಖಂಡಗಳ್ಳುಳ್ಳ ಶರೀರವನ್ನು ಹಾಗೂ ಮಧ್ಯಮ-ಗಾತ್ರದ, ಮೃದು, ದಪ್ಪವಾದ ಚರ್ಮವನ್ನು ಹೊಂದಿರುತ್ತದೆ. ಮುಂದಿನ ಕಾಲುಗಳು ನೇರವಾಗಿದ್ದು, ಶರೀರದ ಕೆಳಗಿರುತ್ತವೆ. ಹಿಂಭಾಗದ ಕಾಲುಗಳು ಮಾಂಸಖಂಡಗಳಿಂದ ಕೂಡಿರುತ್ತವೆ ಮತ್ತು ಮಂಡಿಕೀಲಿನಲ್ಲಿ ಚೆನ್ನಾಗಿ ಬಾಗುತ್ತವೆ.[೩೧]

ಬಣ್ಣಗಳು ಬದಲಾಯಿಸಿ

 
ಒಂದು ಪೊಲಿಶ್ ಪ್ರದರ್ಶನದಲ್ಲಿ ಬೀಗಲ್ ಗಳು ಮಸಕಾದ ತ್ರಿವರ್ಣವನ್ನು ತೋರಿರುವುದು.

ಬೀಗಲ್‌‌ಗಳು ಅನೇಕ ಬಣ್ಣಗಳಲ್ಲಿ ಕಂಡುಬರುತ್ತವೆ. ಮೂರು ಬಣ್ಣಗಳು (ಹೆಚ್ಚು ಕಪ್ಪು ಬಣ್ಣದೊಂದಿಗೆ ಬಿಳಿ ಮತ್ತು ನಸು-ಕಂದು ಛಾಯೆ) ಸಾಮಾನ್ಯವಾಗಿದ್ದರೂ, ಬೀಗಲ್‌ಗಳು ಯಾವುದೇ ಬೇಟೆನಾಯಿಗಳ ಬಣ್ಣದಲ್ಲಿ ಕಂಡುಬರಬಹುದು.

ಮೂರುಬಣ್ಣದ ನಾಯಿಗಳು ಅನೇಕ ಛಾಯೆಗಳಲ್ಲಿ ಕಂಡುಬರುತ್ತವೆ. ಕಡುಗಪ್ಪು ಬಣ್ಣದ ಕಟಿಸಂಧಿಯ ("ಬ್ಲ್ಯಾಕ್‌ಬ್ಲ್ಯಾಕ್" ಎಂದೂ ಕರೆಯುತ್ತಾರೆ) "ಕ್ಲಾಸಿಕ್ ಟ್ರಿ"ಯಿಂದ ಹಿಡಿದು "ಡಾರ್ಕ್ ಟ್ರಿ" (ಇದರಲ್ಲಿ ಮಂಕಾದ ಕಂದು ಬಣ್ಣದ ಗುರುತುಗಳು ಕಡುವಾಗಿರುವ ಕಪ್ಪು ಗುರುತುಗಳೊಂದಿಗೆ ಬೆರೆತಿರುತ್ತವೆ) ಮತ್ತು "ಫೇಡೆಡ್ ಟ್ರಿ"(ಇದರಲ್ಲಿ ಮಂಕಾದ ಕಪ್ಪು ಗುರುತುಗಳು ಕಡು ಕಂದು ಬಣ್ಣದ ಗುರುತುಗಳೊಂದಿಗೆ ಕೂಡಿರುತ್ತವೆ)ಯವರೆಗೆ ಅನೇಕ ಪ್ರಕಾರಗಳಲ್ಲಿ ಕಂಡುಬರುತ್ತವೆ. ಕೆಲವು ಮೂರುಬಣ್ಣದ ನಾಯಿಗಳು ಅಪೂರ್ಣವಾದ ಸಂಯೋಜನೆಯನ್ನು ಹೊಂದಿರುತ್ತವೆ, ಕೆಲವೊಮ್ಮೆ ಅವನ್ನು ಪೈಡ್ ಎಂದು ಕರೆಯಲಾಗುತ್ತದೆ. ಈ ನಾಯಿಗಳು ಹೆಚ್ಚಾಗಿ ಕಪ್ಪು ಮತ್ತು ಕಂದು ಬಣ್ಣದ ತೇಪೆಯ ಕೂದಲಿನೊಂದಿಗೆ ಬಿಳಿ ಚರ್ಮವನ್ನು ಹೊಂದಿರುತ್ತವೆ. ಮೂರುಬಣ್ಣದ ಬೀಗಲ್‌ಗಳು ಹುಟ್ಟುವಾಗ ಹೆಚ್ಚುಕಡಿಮೆ ಯಾವಾಗಲೂ ಕಪ್ಪು ಮತ್ತು ಬಿಳಿ ಬಣ್ಣದಲ್ಲಿರುತ್ತವೆ. ಬಿಳಿ ಭಾಗಗಳು ವಿಶಿಷ್ಟವಾಗಿ ಎಂಟು ದಿನಗಳಲ್ಲಿ ದೃಢವಾಗುತ್ತವೆ. ಆದರೆ ಕಪ್ಪು ಭಾಗಗಳು ಮರಿಗಳು ಬೆಳೆದಂತೆ ಕ್ರಮೇಣ ಕಂಡು ಬಣ್ಣಕ್ಕೆ ತಿರುಗುತ್ತವೆ. (ಕಂದು ಬಣ್ಣವು ಸಂಪೂರ್ಣವಾಗಿ ಹರಡಲು ಒಂದರಿಂದ ಎರಡು ವರ್ಷಗಳಷ್ಟು ಕಾಲವನ್ನು ತೆಗೆದುಕೊಳ್ಳುತ್ತದೆ.) ಕೆಲವು ಬೀಗಲ್‌ಗಳು ಅವುಗಳ ಬಣ್ಣವನ್ನು ಕ್ರಮೇಣ ಬದಲಾಯಿಸಿಕೊಳ್ಳುತ್ತವೆ ಮತ್ತು ಅವುಗಳ ಕಪ್ಪು ಗುರುತುಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತವೆ.

ಎರಡು-ಬಣ್ಣ ಜಾತಿಗಳು ಯಾವಾಗಲೂ ಮತ್ತೊಂದು ಬಣ್ಣದೊಂದಿಗೆ ಬಿಳಿಯನ್ನು ಆಧಾರ ಬಣ್ಣವಾಗಿ ಹೊಂದಿರುತ್ತವೆ. ಹಳದಿ-ಕಂದು ಮತ್ತು ಬಿಳಿ ಬಣ್ಣವು ಎರಡು-ಬಣ್ಣದ ಜಾತಿಯಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಆದರೆ ನೇಕ ಇತರ ಬಣ್ಣಗಳೂ ಇರುತ್ತವೆ - ನಿಂಬೆ ಬಣ್ಣ, ತುಂಬಾ ನಸು-ಹಳದಿ-ಕಂದುಬಣ್ಣ; ಕೆಂಪು, ಹೆಚ್ಚುಕಡಿಮೆ ಕಿತ್ತಳೆ, ಕಂಬುಬಣ್ಣ; ಹಾಗೂ ಯಕೃತ್ತಿನ ಬಣ್ಣ, ಕಡು ಕಂದು ಮತ್ತು ಕಪ್ಪು ಬಣ್ಣ. ಯಕೃತ್ತಿನ ಬಣ್ಣವು ಹೆಚ್ಚು ಸಾಮಾನ್ಯವಾಗಿರುವುದಿಲ್ಲ ಮತ್ತು ಕೆಲವು ಪ್ರಮಾಣಕ ಜಾತಿಗಳಲ್ಲಿ ಅವಕಾಶ ಕೊಡುವುದಿಲ್ಲ; ಇದು ಹಳದಿ ಕಣ್ಣುಗಳೊಂದಿಗೆ ಕಂಡುಬರುತ್ತದೆ. ಬಣ್ಣಬಣ್ಣದ ಮಚ್ಚೆಗಳಿರುವ ಜಾತಿಗಳು ಬಿಳಿ ಅಥವಾ ಕಪ್ಪು ಬಣ್ಣದ್ದಾಗಿದ್ದು, ಬೇರೆಬೇರೆ ಬಣ್ಣದ ಮಚ್ಚೆಗಳನ್ನು (ಟಿಕಿಂಗ್ ) ಹೊಂದಿರುತ್ತವೆ, ಉದಾಹರಣೆಗಾಗಿ ನೀಲಿ-ಮಚ್ಚೆಯ ಅಥವಾ ನೀಲಿ-ಕಲೆಯ ಬೀಗಲ್. ಅದು ಹೊಂದಿರುವ ಮಚ್ಚೆಗಳು ಮಧ್ಯರಾತ್ರಿಯ-ನೀಲಿ ಬಣ್ಣದಂತೆ ಕಾಣುತ್ತವೆ, ಇದು ಬ್ಲೂಟಿಕ್ ಕೂನ್‌ಹಾಂಡ್‌ನ ಬಣ್ಣವನ್ನು ಹೋಲುತ್ತದೆ. ಕೆಲವು ಮೂರು-ಬಣ್ಣಗಳ ಬೀಗಲ್‌ಗಳು ಅವುಗಳ ಬಿಳಿಭಾಗದಲ್ಲಿ ವಿವಿಧ ಬಣ್ಣಗಳ ಮಚ್ಚೆಗಳನ್ನು ಹೊಂದಿರುತ್ತವೆ.[೩೨][೩೩]

ವಾಸನೆ ಗುರುತಿಸುವಿಕೆ ಬದಲಾಯಿಸಿ

ಬೇಟೆನಾಯಿಯಂತೆಯೇ, ಬೀಗಲ್‌ ತೀಕ್ಷ್ಣವಾದ ವಾಸನೆ ಗುರುತಿಸುವ ಶಕ್ತಿ ಹೊಂದಿದೆ.[೩೪] 1950ರ ದಶಕದಲ್ಲಿ ಜಾನ್‌ ಪಾಲ್‌ ಸ್ಕಾಟ್‌ ಹಾಗೂ ಜಾನ್‌ ಫುಲ್ಲರ್‌ ಹದಿಮೂರು ವರ್ಷಗಳ ಕಾಲ ನಾಯಿಗಳ ವರ್ತನೆ ಕುರಿತು ಅಧ್ಯಯನ ಆರಂಭಿಸಿದರು. 1-acre (4,000 m2) ಕ್ಷೇತ್ರದಲ್ಲಿ ಇಲಿಯೊಂದನ್ನು ಇಟ್ಟು, ನಾಯಗಳು ಅದನ್ನು ಗುರುತಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ ಎಂದು ಪ್ರಯೋಗ ನಡೆಸುವ ಮೂಲಕ, ಈ ಸಂಶೋಧನೆಯ ಅಂಗವಾಗಿ ಅವರು ನಾಯಿಗಳ ವಿವಿಧ ಜಾತಿಗಳ ವಾಸನೆ ಗುರುತಿಸುವ ಕ್ಷಮತೆಗಳನ್ನು ಪರೀಕ್ಷಿಸಿದರು. ಬೀಗಲ್‌ ನಾಯಿಗಳು ಒಂದು ನಿಮಿಷದೊಳಗೇ ಇಲಿಯನ್ನು ಪತ್ತೆಮಾಡಿದವು, ಆದರೆ ಫಾಕ್ಸ್‌ ಟೆರಿಯರ್‌ಗಳು ಹದಿನೈದು ನಿಮಿಷ ತೆಗೆದುಕೊಂಡವು, ಸ್ಕಾಟಿಷ್‌ ಟೆರಿಯರ್‌ಗಳು ಇಲಿಯನ್ನು ಪತ್ತೆ ಮಾಡಲು ವಿಫಲವಾದವು. ಬೀಗಲ್‌ ನಾಯಿಗಳು ಗಾಳಿಯಲ್ಲಿನ ವಾಸನೆಗಿಂತಲೂ, ಭೂಮಿಯ ಮೇಲೆ ಹಾದಿ ಹಿಡಿದ ಜಾಡಿನ ವಾಸನೆಯನ್ನು ಗುರುತಿಸಬಲ್ಲವು. ಈ ಕಾರಣಕ್ಕಾಗಿ, ಪರ್ವತಾರೋಹಣ ರಕ್ಷಣಾ ದಳಗಳು ಬೀಗಲ್‌ ನಾಯಿಗಳ ಬದಲಿಗೆ ಕೋಲ್ಲೀ ಜಾತಿಯ ನಾಯಿಗಳನ್ನು ಬಳಸುತ್ತವೆ. ಕೋಲ್ಲೀ ನಾಯಿಗಳು ಗಾಳಿಯಲ್ಲಿನ ವಾಸನೆ ಗುರುತಿಸುವ ಕ್ಷಮತೆಯೊಂದಿಗೆ ಅತ್ಯುತ್ತಮ ದೃಷ್ಟಿ ಕುಡ ಹೊಂದಿವೆ.[೩೪] ಬೀಗಲ್‌ ನಾಯಿಗಳ ಉದ್ದನೆಯ ಕಿವಿಗಳು ಹಾಗೂ ದೊಡ್ಡ ತುಟಿಗಳು ಬಹುಶಃ ಮೂಗಿನ ಸನಿಹದ ವಾಸನೆಯನ್ನು ಗುರುತಿಸಲು ನೆರವಾಗುತ್ತವೆ.[೩೫]

ಮಾರ್ಪಾಡುಗಳು ಬದಲಾಯಿಸಿ

ತಳಿಯ ವೈವಿಧ್ಯತೆಗಳು ಬದಲಾಯಿಸಿ

ಅಮೆರಿಕನ್‌ ಕೆನೆಲ್‌ ಕ್ಲಬ್‌ ಮತ್ತು ಕೆನಡಿಯನ್‌ ಕೆನೆಲ್‌ ಕ್ಲಬ್‌ ಬೀಗಲ್‌ ನಾಯಿಯ ಎರಡು ಪ್ರತ್ಯೇಕ ಜಾತಿಗಳನ್ನು ಗುರುತಿಸಿವೆ: 13 inches (33 cm) ಗಿಂತ ಕಡಿಮೆಯಿರುವ ನಾಯಿಗಳಿಗೆ 13-ಅಂಗುಲಗಳು, 13 and 15 inches (33 and 38 centimetres) ನಡುವಿನ ನಾಯಿಗಳಿಗೆ 15-ಅಂಗುಲಗಳದ್ದು. ಕೆನೆಲ್‌ ಕ್ಲಬ್‌ (UK) ಹಾಗೂ FCIಗೆ ಸೇರಿರುವ ಶ್ವಾನ ಸಮುದಾಯಗಳು ಒಂದೇ ರೀತಿಯ ನಾಯಿಗಳನ್ನು ಗುರುತಿಸುತ್ತವೆ, ಅವುಗಳ ಎತ್ತರ 13 and 16 inches (33 and 41 centimetres) ನಡುವೆಯಿರುತ್ತವೆ.

 
ಒಂದು ಚಿಕ್ಕ ಮರಿ,ಒಂದು ಬೀಗಲ್ /ಪಗ್ ವಿಜಾತಿ ತಳಿಯು ಎರಡೂ ರೀತಿಯ ಗುಣಲಕ್ಷಣ ತೋರುತ್ತದೆ.

ಕೆಲವೊಮ್ಮೆ ಇಂಗ್ಲಿಷ್‌ ಹಾಗೂ ಅಮೆರಿಕನ್‌ ಜಾತಿಗಳನ್ನೂ ಉಲ್ಲೇಖಿಸಲಾಗಿದೆ. ಆದರೆ, ಈ ವ್ಯತ್ಯಾಸದ ಕುರಿತು ಯಾವುದೇ ಕೆನೆಲ್‌ ಕ್ಲಬ್‌ನಿಂದ ಅಧಿಕೃತ ಅಂಗೀಕಾರ ದೊರೆತಿಲ್ಲ. ಅಮೆರಿಕನ್‌ ಕೆನೆಲ್‌ ಕ್ಲಬ್‌ ನಿರ್ದಿಷ್ಟಪಡಿಸಿದ ಪ್ರಮಾಣಗಳೊಂದಿಗೆ ಹೊಂದಿಕೊಳ್ಳುವ ಬೀಗಲ್‌ ನಾಯಿಗಳು ಸರಾಸರಿಗಿಂತ ಕಡಿಮೆ ಗಾತ್ರದ್ದಾಗಿರುತ್ತವೆ. ಅಮೆರಿಕನ್‌ ಕೆನೆಲ್ ಕ್ಲಬ್‌ ಪ್ರಮಾಣಗಳು 15 inches (38 cm) ಮೀರಿದ ನಾಯಿಗಳನ್ನು ಪರಿಗಣಿಸುವುದಿಲ್ಲ. 16 inches (41 cm)

ಪಾಕೆಟ್‌ ಬೀಗಲ್‌ ನಾಯಿಗಳನ್ನು ಕೆಲವೊಮ್ಮೆ ಮಾರಾಟಕ್ಕಿಡಲಾಗಿದೆ ಆದರೆ ಈ ವಿವಿಧಕ್ಕಾಗಿ ತಳಿ ಅಳಿದುಹೋಗಿದೆ. UK ಕೆನೆಲ್‌ ಕ್ಲಬ್‌ 1901ರಲ್ಲಿಯೇ ಪಾಕೆಟ್‌ ಬೀಗಲ್‌ಗಾಗಿ ಪ್ರಮಾಣಗಳನ್ನು ನಿಗದಿಪಡಿಸಿದ್ದರೂ, ಈ ಜಾತಿಯನ್ನು ಯಾವ ಕೆನೆಲ್‌ ಕ್ಲಬ್‌ ಸಹ ಮನ್ನಣೆ ನೀಡುತ್ತಿಲ್ಲ. ಆಗಾಗ್ಗೆ, ಅಸಮರ್ಪಕ ಸಾಕಣೆ ಅಥವಾ ಕುಬ್ಜತೆಯ ಕಾರಣ ಅತಿ ಸಣ್ಣ ಗಾತ್ರದ ಬೀಗಲ್‌ ನಾಯಿಗಳು ಹುಟ್ಟಿಬರುತ್ತವೆ.[೮]

ವಿಲೆಟ್‌ ರ್‌ಯಾಂಡಲ್‌ ಮತ್ತು ತಮ್ಮ ಕುಟುಂಬವು ಇಸವಿ 1896ರಿಂದ, ಪ್ಯಾಚ್‌ ಹೌಂಡ್ಸ್‌ ಎಂಬ ಜಾತಿಯ ನಾಯಿಗಳ ಸಾಕಣೆ ಮಾಡಿತು. ಈ ಜಾತಿಯ ನಾಯಿಗಳು ಮೊಲಗಳನ್ನು ಬೇಟೆಯಾಡುವ ಸಾಮರ್ಥ್ಯ ಹೊಂದಿದ್ದವು. ಫೀಲ್ಡ್‌ ಚ್ಯಾಂಪಿಯನ್‌ ಪ್ಯಾಚ್‌ನೊಂದಿಗೆ ಅವು ತಮ್ಮ ತಳಿ ಸಂಬಂಧ ಹೊಂದಿವೆ. ಆದರೆ ಅವು ಯಾವುದೇ ಸಂಬಂಧಿತ ಗುರುತು ಹೊಂದಿಲ್ಲ.[೩೬]

ಸಂಕರ ತಳಿಗಳು ಬದಲಾಯಿಸಿ

1850ರ ದಶಕದಲ್ಲಿ, ಬೀಗಲ್‌ ಹಾಗೂ ಸ್ಕಾಟಿಷ್‌ ಟೆರಿಯರ್‌ನ ಸಂಕರತಳಿಗಾಗಿ ಸ್ಟೋನ್‍‌ಹೆಂಜ್‌ ಶಿಫಾರಸು ಮಾಡಿದನು. ಈ ಸಂಕರ ತಳಿಯು ಚೆನ್ನಾಗಿ ಕಾರ್ಯ ನಿರ್ವಹಿಸುವ, ಹೆಚ್ಚಿಗೆ ಸದ್ದು ಮಾಡದ ಹಾಗೂ ಹೇಳಿದಂತೆ ಕೇಳುವ ನಾಯಿಯೆಂದು ಮನಗಂಡನು. ಆದರೆ ಅದು ಬಹಳ ಸಣ್ಣ ಗಾತ್ರದ್ದಾಗಿದ್ದು, ಒಂದು ಮೊಲವನ್ನು ಒಯ್ಯುವಷ್ಟು ಶಕ್ತಿಯನ್ನೂ ಹೊಂದಿರಲಿಲ್ಲ.[೩೭] ಇತ್ತೀಚೆಗೆ 'ಹೇಳಿ ಮಾಡಿಸಿದಂತಹ' ನಾಯಿಗಳಿಗೆ ಬೇಡಿಕೆ ಹೆಚ್ಚಾಗಿರುವುದು ವಿದ್ಯಮಾನವಾಗಿದೆ. ಬೀಗಲ್‌/ಪಗ್‌ ಸಂಕರ ತಳಿಯಾದ ಪಗಲ್‌ ಎಂಬ ನಾಯಿಗೆ ಅಪಾರ ಬೇಡಿಕೆಯಿದೆ. ಬೀಗಲ್‌ನಷ್ಟು ಕೆರಳದ ಹಾಗೂ ಕಡಿಮೆ ವ್ಯಾಯಮದ ಅಗತ್ಯವಿರುವ ಈ ತಳಿಯ ನಾಯಿಗಳು ನಗರದಲ್ಲಿ ವಾಸಿಸಲು ಸೂಕ್ತವಾಗಿವೆ.[೩೮]

ಮನೋಧರ್ಮ ಬದಲಾಯಿಸಿ

 
ಬೀಗಲ್ ಗಳಲ್ಲಿ ಕೆಲಸದ ಮತ್ತು ವಿರಾಮದ ಕಾಲದಲ್ಲೂ ವಿಶ್ರಾಂತಿ ಅಗತ್ಯವಿರುತ್ತದೆ.

ಬೀಗಲ್‌ ನಾಯಿಯು ಏಕಪ್ರಕಾರದ ಮನೋಧರ್ಮವುಳ್ಳದ್ದು ಹಾಗೂ ಸೌಮ್ಯ ಪ್ರವೃತ್ತಿ ಹೊಂದಿರುವ ನಾಯಿಯಾಗಿದೆ. ಹಲವು ಸಾಕಣೆ ಪ್ರಮಾಣಗಳಲ್ಲಿ ವಿವರಿಸಿದಂತೆ, ಇದು ಸಾಮಾನ್ಯವಾಗಿ 'ಖುಷಿಯ ಮನೋಧರ್ಮ' ಹೊಂದಿರುತ್ತದೆ; ಅವು ಆಕ್ರಮಣಕಾರಿಯೂ ಅಲ್ಲ, ಇನ್ನೊಂದೆಡೆ ಅಂಜುಬುರುಕನೂ ಅಲ್ಲ. ಅವು ಸಾಂಗತ್ಯದಲ್ಲಿ ಬಹಳಷ್ಟು ಖುಷಿಪಡುತ್ತವೆ. ಮೊದಲಿಗೆ ಅವು ಅಪರಿಚಿತರಿಗೆ ಹೆಚ್ಚು ಸಲಿಗೆ ಕೊಡದಿದ್ದರೂ ಸುಲಭವಾಗಿ ಸ್ನೇಹ ಪ್ರವೃತ್ತಿ ಬೆಳೆಸಬಹುದು. ಈ ಕಾರಣಕ್ಕಾಗಿಯೇ, ಪಹರೆ ನಾಯಿಯ ಪಾತ್ರಗಳು ಬೀಗಲ್‌ ನಾಯಿಗಳಿಗೆ ಸರಿಹೊಂದುವುದಿಲ್ಲ. ಯಾರಾದರೂ ಅಪರಿಚಿತರು ಎದುರಾದಾಗ ಬೊಗಳುವ ಪ್ರವೃತ್ತಿ ಹೊಂದಿರುವ ಕಾರಣ, ಒಳ್ಳೆಯ ಕಾವಲುನಾಯಿಯಾಗಬಲ್ಲದು. ಬೆನ್‌ ಮತ್ತು ಲಿನೆಟ್‌ ಹಾರ್ಟ್‌ 1985ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಯಾರ್ಕ್‌ಷೈರ್‌ ಟೆರಿಯರ್‌, ಕೇರ್ನ್‌ ಟೆರಿಯರ್‌, ಮಿನಿಯೇಚರ್‌ ಷ್ನಾಜರ್‌, ವೆಸ್ಟ್‌ ಹೈಲೆಂಡ್‌ ವೈಟ್‌ ಟೆರಿಯರ್‌ ಹಾಗೂ ಫಾಕ್ಸ್‌ ಟೆರಿಯರ್‌ ನಾಯಿಗಳೊಂದಿಗೆ ಬೀಗಲ್‌ಗೂ ಅತಿ ಹೆಚ್ಚು ಕೆರಳಬಹುದಾದ ನಾಯಿಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು.[೩೯][c] ಬೀಗಲ್ ನಾಯಿಗಳು ಬಹಳ ಬುದ್ಧಿವಂತಿಕೆಯ ಪ್ರಾಣಿಗಳಾಗಿವೆ. ಆದರೂ ಬಹಳ ದೂರದ ತನಕ ಅಟ್ಟುವಿಕೆಗಾಗಿ ತರಬೇತಿ ನೀಡಿರುವ ಕಾರಣ ಅವು ಏಕಚಿತ್ತ ಹಾಗೂ ನಿಶ್ಚಿತತೆಯ ಧೋರಣೆ ಪ್ರದರ್ಶಿಸುತ್ತವೆ. ಈ ಕಾರಣಗಳಿಂದಾಗಿ ಬೀಗಲ್‌ ನಾಯಿಗಳಿಗೆ ತರಬೇತಿ ನೀಡುವುದು ಸುಲಭದ ಮಾತಲ್ಲ. ಅವುಗಳು ಸಾಮಾನ್ಯವಾಗಿ ಹೇಳಿದಂತೆ ಕೇಳುತ್ತವೆ. ಆದರೆ ಒಮ್ಮೆ ಅದು ವಾಸನೆಯ ಜಾಡು ಹಿಡಿದಲ್ಲಿ ಅದನ್ನು ವಾಪಸ್‌ ಕರೆಸಿಕೊಳ್ಳುವುದು ಕಷ್ಟಸಾಧ್ಯ. ತನ್ನ ಸುತ್ತಲಿರುವ ವಾಸನೆಗಳಿಂದ ಬೀಗಲ್‌ ನಾಯಿಯು ವಿಚಲಿತವಾಗಬಹುದು. ಹೇಳಿದಂತೆ ಕೇಳುವ ಕುರಿತು ಪ್ರಯೋಗಗಳಲ್ಲಿ ಅವು ಸಾಮಾನ್ಯವಾಗಿ ಕಾಣಸಿಗುವುದಿಲ್ಲ. ಅವು ಜಾಗರೂಕ ಸ್ವಭಾವ ಹೊಂದಿದ್ದು, ಆಹಾರ-ನೀಡಿ ತರಬೇತಿ ಕೊಡುವುದಕ್ಕೆ ಚೆನ್ನಾಗಿ ಪ್ರತಿಕ್ರಿಯೆ ನೀಡುತ್ತವೆ. ಅವುಗಳನ್ನು ತೃಪ್ತಿಗೊಳಿಸುವುದು ಸುಲಭ. ಅವು ಬಹಳ ಸುಲಭವಾಗಿ (ನೀರಸ ವಾತಾವರಣದಲ್ಲಿ) ಬೇಸರಗೊಳ್ಳುತ್ತವೆ ಅಥವಾ ವಿಚಲಿತವಾಗುತ್ತವೆ. ಸ್ಟ್ಯಾನ್ಲಿ ಕೊರೆನ್‌ದಿ ಇಂಟೆಲಿಜೆನ್ಸ್‌ ಆಫ್‌ ಡಾಗ್ಸ್‌ ಪಟ್ಟಿಯಲ್ಲಿ ಬೀಗಲ್‌ ನಾಯಿಗೆ 72ನೆಯ ಸ್ಥಾನ ನೀಡಲಾಗಿದೆ. ಇದರಂತೆ, ಈ ನಾಯಿಗೆ ಕಡಿಮೆ ಪ್ರಮಾಣದ ಕಾರ್ಯಕಾರಿ/ವಿಧೇಯತೆ ಬುದ್ಧಿವಂತಿಕೆ ಹೊಂದಿದೆ ಎನ್ನಲಾಗಿದೆ. ಕೊರೆನ್‌ರ ಮಾಪನವು ಅರ್ಥೈಸಿಕೊಳ್ಳುವಿಕೆ, ಸ್ವಾತಂತ್ರ್ಯ ಅಥವಾ ರಚನಾತ್ಮಕತೆಯನ್ನು ನಿರ್ಣಯಿಸುವುದಿಲ್ಲ.

ಪುಟ್ಟಮಕ್ಕಳೊಂದಿಗೆ ಬೀಗಲ್‌ ನಾಯಿಗಳು ಬಹಳ ಸ್ನೇಹದಿಂದಿರುತ್ತವೆ. ಈ ಕಾರಣಕ್ಕಾಗಿಯೇ ಅವನ್ನು ಹಲವು ಮನೆಗಳಲ್ಲಿ ಸಾಕಲಾಗಿದೆ. ಆದರೆ ಅವು ಸಾಂಗತ್ಯ ಜೀವನ ಪ್ರವೃತ್ತಿ ಹೊಂದಿರುವುದರಿಂದ, ಅಗಲುವಿಕೆಯ ಗಾಬರಿಗೊಳಗಾಗಬಹುದು.[೪೦] ಎಲ್ಲಾ ಬೀಗಲ್‌ ನಾಯಿಗಳು ಕೂಗಿಕೊಳ್ಳುವುದಿಲ್ಲ, ಆದರೆ ಯಾವುದಾದರೂ ಅಪರಿಚಿತ ಸ್ಥಿತಿಗಳು ಎದುರಾದಲ್ಲಿ ಅವು ಬೊಗಳುತ್ತವೆ. ಯಾವುದಾದರೂ ಸಂಭಾವ್ಯ ಶತ್ರು ಎದುರಾದಲ್ಲಿ, ಕೆಲವು ನಾಯಿಗಳು ಊಳಿಡುತ್ತವೆ (ಇದಕ್ಕೆ 'ಮಾತನಾಡುವುದು', 'ನಾಲಗೆ ಚಾಚುವುದು' ಅಥವಾ 'ತೆರೆದುಕೊಳ್ಳುವಿಕೆ' ಎನ್ನಲಾಗುತ್ತದೆ).[೪೧] ಇತರೆ ನಾಯಿಗಳೊಂದಿಗೂ ಸಹ ಸಂಯಮದಿಂದಿರುತ್ತವೆ. ವ್ಯಾಯಾಮದ ಕುರಿತು ಅವು ಅಷ್ಟೇನೂ ಕಠಿಣ ಧೋರಣೆ ಹೊಂದಿರುವುದಿಲ್ಲ. ಅವುಗಳಲ್ಲಿನ ಆಂತರಿಕ ಶಕ್ತಿಯ ಫಲವಾಗಿ ಅವುಗಳನ್ನು ವ್ಯಾಯಾಮ ಅಥವಾ ಹೆಚ್ಚಿನ ದೈಹಿಕ ಚಟುವಟಿಕೆಗೆ ಒಳಪಡಿಸಿದಾಗ ಆಯಾಸವಾಗುವುದಿಲ್ಲ. ಅವು ವಿಶ್ರಮಿಸಬೇಕಾದಲ್ಲಿ ಆಯಾಸವಾಗುವಂತೆ ನಡೆಸಿಕೊಳ್ಳುವ ಅಗತ್ಯವಿಲ್ಲ. ಆದರೆ, ಬೀಗಲ್‌ ನಾಯಿಗಳಲ್ಲಿ ತೂಕ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ದಿನವೂ ವ್ಯಾಯಾಮ ಮಾಡಿಸಿದಲ್ಲಿ ಅವುಗಳ ತೂಕ ಹೆಚ್ಚಾಗುವಿಕೆಯನ್ನು ತಪ್ಪಿಸಬಹುದು.[೪೨]

ಆರೋಗ್ಯ ಬದಲಾಯಿಸಿ

 
ಹಿಂದಿನ ಕಾಲದ ಬೀಗಲ್ ಮರಿಗಳು

ಬೀಗಲ್‌ ನಾಯಿಗಳ ಸರಾಸರಿ ಆಯುಷ್ಯವು 12-15 ವರ್ಷಗಳು.[೪೩] ಇದು ಅವುಗಳ ಗಾತ್ರದ ನಾಯಿಯ ಸಾಮಾನ್ಯ ಆಯುಷ್ಯವಾಗಿರುತ್ತದೆ.[೪೪]

ಬೀಗಲ್‌ ನಾಯಿಗಳು ಅಪಸ್ಮಾರಕ್ಕೆ ತುತ್ತಾಗಬಹುದು. ಆದರೆ ಔಷಧೀಯ ಚಿಕಿತ್ಸೆಯ ಮೂಲಕ ಇದನ್ನು ನಿಯಂತ್ರಿಸಬಹುದು. ಬೀಗಲ್‌ ನಾಯಿಗಳಲ್ಲಿ ಥೈರಾಯಿಡ್‌ ಕೊರತೆ ಹಾಗೂ ಗಿಡ್ಡತನ ಸಮಸ್ಯೆಗಳು ಸಂಭವಿಸುವವು. ಎರಡು ಸ್ಥಿತಿಗಳು ವಿಶಿಷ್ಟವಾಗಿ ಈ ತಳಿಯ ನಾಯಿಗಳಿಗೆ ಸೇರಿವೆ: ಫನ್ನಿ ಪಪ್ಪಿ - ಇದರಲ್ಲಿ ನಾಯಿಯು ಬಹಳ ನಿಧಾನವಾಗಿ ಬೆಳೆದು, ದುರ್ಬಲ ಕಾಲುಗಳು, ಡೊಂಕಾದ ಬೆನ್ನು ಹೊಂದಿರುತ್ತವೆ. ಸಹಜ ಆರೋಗ್ಯದಿಂದಿದ್ದರೂ, ಇದು ಹಲವು ರೀತಿಗಳ ಅಸ್ವಾಸ್ಥ್ಯಕ್ಕೂ ತುತ್ತಾಗುತ್ತವೆ;[೪೫] ಹಿಪ್ ಡಿಸ್ಪ್ಲೇಶಿಯಾ(ಸೊಂಟದ ಊತ) - ಹ್ಯಾರಿಯರ್‌ಗಳಲ್ಲಿ ಮತ್ತು ಕೆಲವು ದೊಡ್ಡ ಗಾತ್ರದ ನಾಯಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇದು ಬೀಗಲ್‌ ನಾಯಿಗಳಲ್ಲಿ ಬಹಳ ಅಪರೂಪವಾಗಿರುತ್ತದೆ.[೪೬] ಬೀಗಲ್‌ ನಾಯಿಗಳು ಕಾಂಡ್ರೊಡಿಸ್ಟ್ರೋಫಿಕ್ (ಅಸ್ಥಿಪಂಜರದ ಸಮಸ್ಯೆಯುಳ್ಳ) ತಳಿಗೆ ಸೇರುತ್ತವೆ. ಇದರಿಂದಾಗಿ ಅವುಗಳು ಮೂಳೆ-ಕೀಲು ಸಮಸ್ಯೆಗಳಿಗೆ ತುತ್ತಾಗುತ್ತವೆ.[೪೭]

 
ಇವುಗಳಲ್ಲಿ ತೂಕ ಹೆಚ್ಚಳದ ಸಮಸ್ಯೆಯು ವಯಸ್ಸಾದಂತೆ ಉದ್ಭವಿಸುತ್ತದೆ,ಇದರಿಂದ ಹೃದಯ ಮತ್ತು ಸ್ನಾಯುಗಳ ಕೀಲು,ಸಂಧು ಸಮಸ್ಯೆ ಬರುತ್ತದೆ.

ಅಪರೂಪ ಸಂಗತಿಗಳಲ್ಲಿ, ಬೀಗಲ್‌ ನಾಯಿಗಳು ಎಳೆಯ ವಯಸ್ಸಿನಲ್ಲೇ ಪ್ರತಿರೋಧಕ ಮಧ್ಯಸ್ಥಿಕೆಯ ಬಹು-ತಳೀಯ ಮೂಳೆ ಸಮಸ್ಯೆಗೆ ತುತ್ತಾಗುತ್ತವೆ (ಆಗ ಪ್ರತಿರೋಧಕಗಳು ಮೂಳೆ-ಕೀಲುಗಳನ್ನು ಆಕ್ರಮಿಸುತ್ತವೆ). ಕೆಲವೊಮ್ಮೆ ಸ್ಟೀರಾಯ್ಡ್‌ ಚಿಕಿತ್ಸೆಗಳ ಮೂಲಕ ಈ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.[೪೫]

ಅವುಗಳು ಉದ್ದನೆಯ ಜೋತುಬೀಳುವ ಕಿವಿಗಳನ್ನು ಹೊಂದಿರುವ ಕಾರಣ, ಅವುಗಳ ಒಳಕಿವಿಗೆ ಗಾಳಿ ಹರಿವಾಗದೆ, ತೇವವಾದ ಗಾಳಿಯು ಕಿವಿಗಳೊಳಗೇ ಇದ್ದುಹೋಗಿ, ಕಿವಿಗಳು ಸೋಂಕಿಗೊಳಗಾಗುವ ಸಾಧ್ಯತೆಯಿರುತ್ತದೆ. ಬೀಗಲ್‌ ನಾಯಿಗಳಿಗೆ ಕಣ್ಣಿನ ತೊಂದರೆಗಳೂ ಸಂಭವಿಸಬಹುದು: ಗ್ಲಾಕೊಮ ಹಾಗೂ ಕಾರ್ನಿಯಾದ ಕ್ಷಯವು ಎರಡು ಸಾಮಾನ್ಯ ಕಣ್ಣಿನ ತೊಂದರೆಗಳಾಗಿವೆ.[೪೮]ಚೆರ್ರಿ ಐ ಎಂಬ ಮೂರನೆಯ ಕಣ್ಣುಗುಡ್ಡೆಯ ಗ್ರಂಥಿಯ ಊತ, ಹಾಗೂ, ಡಿಸ್ಟಿಕಿಯಾಸಿಸ್‌ - ರೆಪ್ಪೆಗೂದಲು ಕಣ್ಣಿನೊಳಗೆ ಬೆಳೆದು ನವೆಯುಂಟಾಗಿಸುವ ಸಮಸ್ಯೆ. ಶಸ್ತ್ರಚಿಕಿತ್ಸೆಯ ಮೂಲಕ ಇವೆರಡೂ ಸಮಸ್ಯೆಗಳನ್ನು ಸರಿಪಡಿಸಬಹುದು.[೪೫] ಬೀಗಲ್‌ ನಾಯಿಗಳು ಹಲವು ತರಹದ ಅಕ್ಷಿಪಟ ಕ್ಷಯಗಳಿಂದ ನರಳಬಹುದು. ನೆಸೊಲ್ಯಾಕ್ರಿಮಲ್‌ ನಾಳ ವ್ಯವಸ್ಥೆಯ ವೈಫಲ್ಯದಿಂದಾಗಿ ನಾಯಿಗೆ ಒಣಗಿದ ಕಣ್ಣು ಅಥವಾ ಕಣ್ಣೀರು ಮುಖದ ಮೇಲೆ ಹರಿಯುವ ಸಮಸ್ಯೆಯಾಗಬಹುದು.[೪೫]

ಸಂಚಾರಿ ನಾಯಿಗಳು ತರಚುಗಳು, ಉಳುಕುಗಳಂತಹ ಸಣ್ಣ ಪುಟ್ಟ ಗಾಯಗಳಿಗೆ ಈಡಾಗುತ್ತವೆ. ಅವು ಹೆಚ್ಚು ಸಕ್ರಿಯವಾಗಿಲ್ಲದಿದ್ದಲ್ಲಿ, ಸ್ಥೂಲಕಾಯತ್ವವು ಸಾಮನ್ಯ ಸಮಸ್ಯೆಯಾಗುವುದು. ಏಕೆಂದರೆ ಆಹಾರ ಲಭಿಸಿದಾಗೆಲ್ಲ ತಿಂದು ಅವು ತಮ್ಮ ತೂಕವನ್ನು ನಿಯಂತ್ರಿಸಿಕೊಳ್ಳುವಲ್ಲಿ (ವ್ಯಾಯಾಮ ಮಾಡಿಸಲು) ತಮ್ಮ ಮಾಲೀಕರನ್ನು ಅವಲಂಬಿಸುತ್ತವೆ.[೪೫] ಓಡಾಡುವಾಗ ಈ ನಾಯಿಗಳು ಚಿಗಟಗಳು, ಉಣ್ಣಿ ಹುಳುಗಳು, ಸುಗ್ಗಿ ನುಸಿಗಳು ಹಾಗೂ ಲಾಡಿಹುಳುಗಳಂತಹ ಕ್ರಿಮಿಕೀಟಗಳ ದಾಳಿಗೆ ಒಳಗಾಗಬಹುದು. ಹುಲ್ಲು ಬೀಜಗಳಂತಹ ಉದ್ರೇಕಕಾರಿಗಳು ಅವುಗಳ ಕಣ್ಣು, ಕಿವಿ ಅಥವಾ ಪಂಜಗಳಲ್ಲಿ ಸಿಕ್ಕಿಕೊಳ್ಳಬಹುದು.[೪೯]

ಬೀಗಲ್‌ ನಾಯಿಗಳು ವಿಮುಖ ಸೀನು ಹಾಕುತ್ತವೆ; ಇದರಲ್ಲಿ ಅವು ಉಸಿರುಕಟ್ಟುವಂತೆ ತೋರಿದರೂ ವಾಸ್ತವವಾಗಿ ಅವು ಬಾಯಿ ಹಾಗೂ ಮೂಗಿನಿಂದ ಉಸಿರೆಳೆದುಕೊಳ್ಳುತ್ತವೆ. ಈ ರೀತಿಯ ವರ್ತನೆಗೆ ಕಾರಣ ತಿಳಿದಿಲ್ಲ. ಆದರೆ ಇದು ನಾಯಿಗೆ ಯಾವುದೇ ಹಾನಿಯೊಡ್ಡದು.

ಚಟುವಟಿಕೆಗಳ ಜೀವನ ಬದಲಾಯಿಸಿ

ಬೇಟೆಯಾಡುವುದು ಬದಲಾಯಿಸಿ

 
ದಿ ಕೆಯನ್ ಶ್ಯಾಮ್ ಫೂಟ್ ಬೀಗಲ್ಸ್(c.1885)

ಬೀಗಲ್‌ ನಾಯಿಗಳನ್ನು ಸಾಮಾನ್ಯವಾಗಿ ಮೊಲಗಳನ್ನು ಬೇಟೆಯಾಡಲು ಬಳಸಲಾಗುತ್ತಿತ್ತು. ಈ ಚಟುವಟಿಕೆಗೆ ಬೀಗ್ಲಿಂಗ್‌ ಎನ್ನಲಾಗುತ್ತಿತ್ತು. ವೃದ್ಧರು ಹೆಚ್ಚು ಶ್ರಮಪಡದೆ ಕುದುರೆ ಸವಾರರಾಗಿ ಹೋಗುವಾಗ ಬೀಗಲ್‌ ನಾಯಿಗಳು ಸೂಕ್ತ ಜತೆಗಾರರಾಗುತ್ತಿದ್ದವು. ಕಿರಿಯರು ಸಣ್ಣ ಕುದುರೆ ಸವಾರರಾಗಿ ಬೀಗಲ್‌ ನಾಯಿಯ ತೋರಿಸುವ ಜಾಡಲ್ಲಿ ಸಾಗಬಹುದು. ಬೇಟೆ ಕುದುರೆಗಳನ್ನು ಕೊಂಡು ಸಾಕಲಾಗದ ಬಡ ಬೇಟೆಗಾರರಿಗೂ ಬೀಗಲ್‌ ನಾಯಿ ಸಹಯೋಗ ನೀಡುವುದುಂಟು.[೫೦] ಹತ್ತೊಂಬತ್ತನೆಯ ಶತಮಾನದಲ್ಲಿ ನರಿಗಳ ಬೇಟೆ ಆರಂಭವಾಗುವ ಮುನ್ನ, ಬೇಟೆಯಾಡುವ ಚಟುವಟಿಕೆಯು ಹಗಲಿನ ಹೊತ್ತು ನಡೆಯುತ್ತಿತ್ತು. ಬೇಟೆಯನ್ನು ಕೊಲ್ಲುವುದಕ್ಕಿಂತಲೂ ಹೆಚ್ಚಾಗಿ ಅದನ್ನು ಅಟ್ಟುವುದರಲ್ಲಿ ಹೆಚ್ಚು ಮಜಾ ದೊರಕುತ್ತಿತ್ತು. ಈ ವ್ಯವಸ್ಥೆಯಲ್ಲಿ ಪುಟ್ಟ ಬೀಗಲ್‌ ನಾಯಿಯು ಮೊಲಕ್ಕೆ ಸರಿಸಾಟಿಯೆನಿಸುತ್ತಿತ್ತು. ಹ್ಯಾರಿಯರ್‌‌ ನಾಯಿಗಳಂತೆ ಅವು ಬೇಟೆಯನ್ನು ಮುಗಿಸುತ್ತಿರಲಿಲ್ಲ, ಬದಲಿಗೆ ಅತ್ಯುತ್ತಮವಾದ ವಾಸನೆಯ ಜಾಡು ಹಿಡಿಯುವ ಸಾಮಾರ್ಥ್ಯ ಮತ್ತು ಶಕ್ತಿಯಿಂದಾಗಿ ಅವು ಮೊಲವನ್ನು ಹಿಡಿಯುವುದರಲ್ಲಿ ಯಶಸ್ಸಾಗುತ್ತಿದ್ದವು. ಬೀಗಲ್‌ಗಳ ಗುಂಪಾಗಿದ್ದರೆ ಒಂದುಗೂಡಿ ಓಡುತ್ತವೆ ('ಬಟ್ಟೆಹಾಸು ಹೊದಿಸುವಷ್ಟು ಸನಿಹಲ್ಲಿ ಓಡುತ್ತವೆ'[೧೦]), ಇದು ದೀರ್ಘಾವಧಿಯ ಬೇಟೆಯಲ್ಲಿ ಉಪಯುಕ್ತವಾಗುತ್ತಿತ್ತು. ಇದರಿಂದ ನಾಯಿಗಳು ದಾರಿತಪ್ಪಿ ಜಾಡನ್ನು ಮರೆಮಾಚುವುದನ್ನು ತಪ್ಪಿಸಬಹುದಾಗಿತ್ತು. ದಟ್ಟ ಪೊದೆಗಳುಳ್ಳ ನೆಲಗಳಲ್ಲಿ ಫೆಸೆಂಟ್‌ ಹಕ್ಕಿಗಳನ್ನು ಬೇಟೆಯಾಡುವಾಗ, ಸ್ಪ್ಯಾನಿಯಲ್ ನಾಯಿ‌ಗಳ ಬದಲಿಗೆ ಬೀಗಲ್‌ ನಾಯಿಗಳನ್ನು ಜೊತೆಗೆ ಒಯ್ಯಲಾಗುತ್ತಿತ್ತು.[೫೧]

ಇನ್ನಷ್ಟು ವೇಗದ ಬೇಟೆ ಆರಂಭವಾದಾಗ, ಬೀಗಲ್‌ ನಾಯಿಗಳ ಬಳಕೆ ಕಡಿಮೆಯಾಯಿತು. ಆದರೆ ಮೊಲಗಳನ್ನು ಬೇಟೆಯಾಡಲು ಬೀಗಲ್‌ ನಾಯಿಗಳ ಬಳಕೆ ಮುಂದುವರೆಯಿತು. ಅನೆಕ್ಡೋಟ್ಸ್‌ ಆಫ್‌ ಡಾಗ್ಸ್‌ ನಲ್ಲಿ, ಜೆಸ್ಸೆ ಹೀಗೆ ಹೇಳುತ್ತಾನೆ:

In rabbit-shooting, in gorse and thick cover, nothing can be more cheerful than the beagle; and they have been called rabbit-beagles from this employment, for which they are peculiarly qualified, especially those dogs which are somewhat wire-haired.[೬]

 
ಮೊಲ ಮತ್ತು ಮೊಲ ಜಾತಿಯ ಪ್ರಾಣಿಗಳ ಬೇಟೆಗೆ ಇವುಗಳನ್ನು ಆರಂಭಿಕ ತಳಿ ಅಭಿವೃದ್ಧಿಯ ಸಂದರ್ಭದಲ್ಲೇ ಬೀಗಲ್ ಬಳಕೆಯಾಗಿತ್ತು.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅವುಗಳನ್ನು ಆಮದು ಮಾಡಿಕೊಂಡ ಕಾಲದಿಂದಲೂ ಮುಖ್ಯವಾಗಿ ಮೊಲಗಳ ಬೇಟೆಯಾಡಲು ಬಳಸಲಾಗಿದೆ. ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ಬ್ರಿಟನ್‌ನಲ್ಲಿ ಬೀಗಲ್‌ಗಳೊಂದಿಗೆ ಮೊಲಗಳನ್ನು ಬೇಟೆಯಾಡುವುದು ಪುನಃ ಜನಪ್ರಿಯ ಹವ್ಯಾಸವಾಯಿತು. ಇದು 2002ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ಪ್ರೊಟೆಕ್ಷನ್‌ ಆಫ್‌ ವೈಲ್ಡ್‌ ಮ್ಯಾಮಲ್ಸ್‌ (ಸ್ಕಾಟ್ಲೆಂಡ್‌) ಆಕ್ಟ್ 2002 ಹಾಗೂ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಹಂಟಿಂಗ್‌ ಆಕ್ಟ್‌ 2004 ಮೊಲಗಳ ಬೇಟೆಯನ್ನು ನಿಷೇಧಿಸುವವರೆಗೆ ಮುಂದುವರೆದಿತ್ತು. ಈ ಶಾಸನದಡಿ, ಜಮೀನು ಮಾಲೀಕರ ಅನುಮತಿಯ ಮೇರೆಗೆ ಬೀಗಲ್‌ ನಾಯಿಗಳು ಮೊಲಗಳನ್ನು ಬೇಟೆಯಾಡಬಹುದು. ಬೇಟೆಗೆ ಅನುಮತಿಯಿಲ್ಲದ ಸ್ಥಳಗಳಲ್ಲಿ ಹಾಗೂ ರಕ್ತ ಚೆಲ್ಲುವಂತಹ ಕ್ರೀಡೆಗಳಲ್ಲಿ ಭಾಗವಹಿಸಲು ಬಯಸದ ಮಾಲೀಕರು ತಮ್ಮ ನಾಯಿಗಳ ಸಹಜ ಕುಶಲತೆಗಳಿಗೆ ಅಭ್ಯಾಸ ಕೊಡಿಸುವ ಸಲುವಾಗಿ, ಜನಪ್ರಿಯವಾದ ಅಣಕು ಬೇಟೆ ನಡೆಸುತ್ತಾರೆ.

ಸಾಂಪ್ರದಾಯಿಕ ಬೇಟೆ ನಾಯಿಗಳ ತಂಡವು ಸುಮಾರು 70 ಬೀಗಲ್‌ಗಳನ್ನು ಒಳಗೊಂಡಿರುತ್ತದೆ. ಈ ತಂಡವನ್ನು ನಿರ್ದೇಶಿಸುವ ಬೇಟೆಗಾರರೇ ರಚಿಸುತ್ತಾರೆ. ಇವರು ಬೇಟೆ ನಾಯಿಗಳನ್ನು ಚದುರದಂತೆ ನೋಡಿಕೊಳ್ಳುವ ಅನೇಕ ಸಹಾಯಕರನ್ನು ಹೊಂದಿರುತ್ತಾರೆ, ಇವರ ಕಾರ್ಯವೆಂದರೆ ಗುಂಪಿನಿಂದ ತಪ್ಪಿಸಿಕೊಂಡ ನಾಯಿಗಳನ್ನು ಮತ್ತೆ ಗುಂಪಿಗೆ ಮರಳಿಸುವುದು. ಬೇಟೆ ನಾಯಿಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ಅಧಿಕಾರಿಯು ತಂಡದ ಪ್ರತಿ ದಿನದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಅಲ್ಲದೇ ಇವರು ಬೇಟೆಗಾರನ ಪಾತ್ರವನ್ನು ವಹಿಸಬಹುದು ಅಥವಾ ವಹಿಸದೇ ಇರಬಹುದು. ಬೀಗಲ್‌‌ಗಳನ್ನು ಪ್ರತ್ಯೇಕವಾಗಿ ಅಥವಾ ಜೊತೆಯಲ್ಲಿ (ಜೋಡಿಯಾಗಿ) ಕೆಲಸಕ್ಕೆ ಹಚ್ಚಬಹುದು.[೫೨]

ಯುವಜನರಿಗೆ ಬೀಗಲ್‌‌ಗಳ ಜೊತೆಯಲ್ಲಿ ಬೇಟೆಯಾಡುವುದು ಶ್ರೇಷ್ಠವಾದುದ್ದಾಗಿದೆ. ಆದ್ದರಿಂದ ಹಲವು ಬ್ರಿಟಿಷ್ ಪಬ್ಲಿಕ್ ಸ್ಕೂಲ್ಸ್ ಸಾಂಪ್ರದಾಯಿಕವಾಗಿ ಬೀಗಲ್‌ ತಂಡಗಳನ್ನು ಹೊಂದಿರುತ್ತವೆ. 1902ರಲ್ಲಿ ಬೀಗಲ್‌‌ಗಳನ್ನು ಬೇಟೆಗಾಗಿ ಬಳಸುತ್ತಿರುವುದಕ್ಕೆ ಸಂಬಂಧಿಸಿದಂತೆ ಎಟನ್ ಕಾಲೇಜಿನ ಮೇಲೆ ಪ್ರತಿಭಟನೆ ಮಾಡಲಾಗಿತ್ತು. ಆದರೆ ಈ ಬೇಟೆ ನಾಯಿಗಳ ತಂಡಗಳು ಅಲ್ಲಿ ಈಗಲೂ ಅಸ್ತಿತ್ವದಲ್ಲಿವೆ.[೫೩] ಅಲ್ಲದೇ ಕೆಂಟ್‌ನ ವೇಯಲ್ಲಿರುವ ಇಮ್ ಪೀರಿಯಲ್ ಕಾಲೇಜ್ ಬಳಸುತ್ತಿದ್ದ ಬೇಟೆ ನಾಯಿಗಳ ತಂಡವೊಂದನ್ನು 2001ರಲ್ಲಿ ಅನಿಮಲ್ ಲಿಬರೇಷನ್ ಫ್ರಂಟ್ ಕಳವುಮಾಡಿತು.[೫೪] ಶಾಲೆಗಳ ಹಾಗು ವಿಶ್ವವಿದ್ಯಾನಿಲಯಗಳ ಬೇಟೆನಾಯಿಗಳ ತಂಡಗಳನ್ನು ಎಟನ್, ಮಾರ್ಲಬರೋ, ವೇ, ರಾಡ್ಲೇ,ದಿ ರಾಯಲ್ ಅಗ್ರಿಕಲ್ಚರ್ ಕಾಲೇಜ್ ಹಾಗು ಆಕ್ಸ್ ಫರ್ಡ್‌ನ ಕ್ರಿಸ್ಟ್ ಚರ್ಚ್ ಮೊದಲಾದುವು ಈಗಲೂ ಹೊಂದಿವೆ.[೫೫]

ಬೀಗಲ್‌‌ಗಳನ್ನು ಹಿಮ ಮೊಲಗಳು, ಹತ್ತಿಬಾಲದ ಮೊಲಗಳು, ಆಟದ ಹಕ್ಕಿಗಳು, ಸಣ್ಣಜಾತಿಯ ಜಿಂಕೆ, ಕೆಂಪು ಜಿಂಕೆ, ಕಾಡುಬೆಕ್ಕು, ಹುಲ್ಲುಗಾವಲು ತೋಳ, ಕಾಡು ಹಂದಿ ಮತ್ತು ನರಿಗಳನ್ನೂ ಒಳಗೊಂಡಂತೆ ಅನೇಕ ಪ್ರಾಣಿಗಳನ್ನು ಬೇಟೆಯಾಡುವ ಆಟಗಳಲ್ಲಿ ಬಳಸಲಾಗುತ್ತದೆ. ಅಲ್ಲದೇ ಮುಂಗುಸಿಯಂತಹ ಮಾಂಸಹಾರಿ ಪ್ರಾಣಿಯನ್ನು ಬೇಟೆಯಾಡಲೂ ಬಳಸಲಾಗುತ್ತದೆ ಎಂಬುದು ದಾಖಲಾಗಿದೆ.[೫೨][೫೬] ಈ ಸಂದರ್ಭಗಳಲ್ಲಿ, ಬೇಟೆಗಾರನ ಕೋವಿಗೆ ಬೇಟೆಯನ್ನು ಹುಡುಕಿ ತಂದು ಕೊಡುವ ಆಟದಲ್ಲಿ ಬೀಗಲ್‌ ಕೋವಿ ನಾಯಿಯಾಗಿ ಕಾರ್ಯ ನಿರ್ವಹಿಸುತ್ತದೆ.[೫೨]

ಸಂಪರ್ಕ ತಡೆ ಬದಲಾಯಿಸಿ

 
ಬೀಗಲ್ ಗಳಿಗೆ ಅತ್ಯಂತ ಚುರುಕಿನ ಮೂಗುಗಳಿವೆ,US ನ ಸೀಮಾ ಶುಲ್ಕ ಮತ್ತು ಗಡಿ ರಕ್ಷಣಾ ಪಡೆಯಸಂಸ್ಥೆವರು ಇವುಗಳನ್ನು ನೇಮಿಸುತ್ತಾರೆ.

ಬೀಗಲ್‌ಗಳನ್ನು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಅಗ್ರಿಕಲ್ಚರ್‌ಬೀಗಲ್‌ ಬ್ರಿಗೇಡ್ ತಂಡದಲ್ಲಿ ಪತ್ತೇದಾರಿ ನಾಯಿಗಳಾಗಿ ಬಳಸಲಾಗುತ್ತದೆ. ಈ ನಾಯಿಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಕೊಂಡೊಯ್ಯುವ ಆಹಾರ ಪದಾರ್ಥಗಳನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ. ಹಲವು ತಳಿಗಳನ್ನು ಪರೀಕ್ಷಿಸಿದ ನಂತರ ಬೀಗಲ್‌ಗಳನ್ನು ಆರಿಸಲಾಯಿತು. ಏಕೆಂದರೆ ಅವು ಗಾತ್ರದಲ್ಲಿ ಚಿಕ್ಕದಾಗಿವೆ ಹಾಗು ನಾಯಿಗಳನ್ನು ಕಂಡರೆ ಹೆದರುವ ಜನರಿಗೆ ಹೆಚ್ಚು ಭಯವುಂಟು ಮಾಡುವುದಿಲ್ಲ. ಅಲ್ಲದೇ ನೋಡಿಕೊಳ್ಳುವುದು ಸುಲಭ ಹಾಗು ಬುದ್ಧಿವಂತ ನಾಯಿಗಳಾಗಿರುತ್ತವೆ, ಚೆನ್ನಾಗಿ ಕೆಲಸ ಮಾಡಲು ಯೋಗ್ಯವಾಗಿರುತ್ತವೆ.[೫೭] ಇವುಗಳನ್ನು ನ್ಯೂಜಿಲ್ಯಾಂಡ್‌ನ ಕೃಷಿ ಮತ್ತು ಅರಣ್ಯ ಇಲಾಖೆಯಲ್ಲಿ ,ಆಸ್ಟ್ರೇಲಿಯಾದ ಸಂಪರ್ಕ ತಡೆ ಮತ್ತು ತನಿಖಾ ಸೇವೆಯಲ್ಲಿ, ಹಾಗು ಕೆನಡಾ, ಜಪಾನ್ ಮತ್ತು ಪಿಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಒಳಗೊಂಡಂತೆ ಹಲವು ರಾಷ್ಟ್ರಗಳಲ್ಲಿ ಇದೇ ಉದ್ದೇಶಕ್ಕಾಗಿ ಬಳಸಲಾಗುತ್ತದೆ.[೫೮] ಸ್ಪೋಟಕಗಳನ್ನು ಪತ್ತೆ ಹಚ್ಚುವ ಕ್ರಿಯೆಯು ಹೆಚ್ಚಾಗಿ ಪ್ರಯಾಣಿಕರ ಸಾಮಾನಿನ ಮೇಲೆ ಹಾಗು ಸಾಮಾನನ್ನು ಹೊತ್ತಿರುವ ಸುತ್ತುಪಟ್ಟಿಯ ಮೇಲೆ ಹತ್ತುವ ಕಾರ್ಯಾಚರಣೆಯನ್ನು ಒಳಗೊಂಡಿರುವುದರಿಂದ ಇದಕ್ಕೆ ಚಿಕ್ಕ ಬೀಗಲ್‌ಗಳನ್ನು ಬಳಸಲು ಸಾಧ್ಯವಾಗದ ಕಾರಣ ದೊಡ್ಡ ತಳಿಗಳನ್ನು ಬಳಸಲಾಗುತ್ತದೆ.[೫೯]

ಪ್ರಯೋಗ ಬದಲಾಯಿಸಿ

ಬೀಗಲ್‌ಗಳು ಅವುಗಳ ಗಾತ್ರದಿಂದ ಹಾಗು ಪ್ರತಿಭಟಿಸದ ವರ್ತನೆಯಿಂದ ಹೆಚ್ಚಾಗಿ ಪ್ರಯೋಗಕ್ಕೆ ಒಳಪಡುವಂತಹ ನಾಯಿಗಳ ತಳಿಗಳಾಗಿವೆ. UK ಯಲ್ಲಿ 2004ನೇ ಇಸವಿಯಲ್ಲಿ ಪ್ರಯೋಗದಲ್ಲಿ ಬಳಸಲಾದ ಒಟ್ಟು 8,018 ನಾಯಿಗಳಲ್ಲಿ 7,799 ನಾಯಿಗಳು ಬೀಗಲ್‌ಗಳಾಗಿದ್ದವು (97.3%).[೬೦] UKಯಲ್ಲಿ 1986ರಲ್ಲಿ ಬಳಕೆ ಬಂದ ಪ್ರಾಣಿಗಳ (ವೈಜ್ಞಾನಿಕ ವಿಧಾನಗಳು)ಕಾನೂನು, ಪ್ರೈಮೇಟ್, ಕುದುರೆಯಂಥಹ ಪ್ರಾಣಿ, ಬೆಕ್ಕುಗಳು ಹಾಗು ನಾಯಿಗಳಿಗೆ ವಿಶೇಷ ಪ್ರಾಧಾನ್ಯವನ್ನು ನೀಡಿತು. 2005ರಲ್ಲಿ ರಚನೆಗೊಂಡ ಪ್ರಾಣಿಗಳ ನಿರ್ವಾಹಣ ಸಮಿತಿಯು (ಕಾನೂನಿನಿಂದ ರಚಿಸಲ್ಪಟ್ಟದ್ದು), ಅತ್ಯಂತ ಹೆಚ್ಚು ಪ್ರತ್ಯೇಕ ಪ್ರಾಣಿಗಳನ್ನು ಒಳಗೊಂಡಿದ್ದರೂ, ಇಲಿಗಳ ಮೇಲೆ ಪ್ರಯೋಗ ಮಾಡುವುದನ್ನು ಒಪ್ಪಿಗೊಳ್ಳಬಹುದಾಗಿದೆ ಎಂಬ ನಿಯಮವನ್ನು ಮಾಡಿತು.[೬೧] 2005ರಲ್ಲಿ UKಯಲ್ಲಿ ಪ್ರಾಣಿಗಳ ಮೇಲೆ ಮಾಡಿದ ಒಟ್ಟು ಪ್ರಾಯೋಗಗಳಲ್ಲಿ 0.3% ಗಿಂತಲು ಕಡಿಮೆ ಪ್ರಾಯೋಗಗಳಲ್ಲಿ ಬೀಗಲ್‌ಗಳು ಪಾಲ್ಗೊಂಡಿದ್ದವು. ಆದರೆ ನಾಯಿಗಳ ಮೇಲೆ ಮಾಡಿದಂತಹ 7670 ಪ್ರಯೋಗಗಳಲ್ಲಿ 7406ರಲ್ಲಿ ಬೀಗಲ್‌ಗಳು (96.6%) ಪಾಲ್ಗೊಂಡಿದ್ದವು.[೬೨] ಬಹುಪಾಲು ನಾಯಿಗಳನ್ನು ಹರ್ಲ್ಯಾನ್‌ನಂತಹ ಕಂಪೆನಿಗಳು ನಿರ್ದಿಷ್ಟ ಉದ್ದೇಶಕ್ಕಾಗಿ ಬೆಳೆಸುತ್ತವೆ. UK ಯಲ್ಲಿ ಸಂಶೋಧನೆಗಾಗಿ ಪ್ರಾಣಿಗಳನ್ನು ಸಾಕುವಂತಹ ಕಂಪೆನಿಗಳು ಪ್ರಾಣಿಗಳ (ವೈಜ್ಞಾನಿಕ ವಿಧಾನಗಳು) ಕಾನೂನಿನಿಂದ ಪರವಾನಗಿಯನ್ನು ತೆಗೆದುಕೊಂಡಿರಬೇಕು.[೬೧]

ಚಿತ್ರ:Dogs6CCcopy.jpg
ಒಂದು ಗುಂಪಾಗಿ ಸಾಕಿದ ನಾಯಿಗಳ ಮೂಲಕ ಜೀವರಕ್ಷಕ ಔಷಧಿಗಳ ಗುಣಮಟ್ಟ ಪರೀಕ್ಷೆಗೆ ಬಳಸಬಹುದು,ಆಗಷ್ಟ್ 2000

ಯುರೋಪಿಯನ್ ಸಮುದಾಯದ ಸದಸ್ಯ ರಾಷ್ಟ್ರಗಳಲ್ಲಿ ಪ್ರಾಣಿಗಳ ಮೇಲೆ ಸೌಂದರ್ಯ ಉತ್ಪನ್ನಗಳ ಪ್ರಯೋಗವನ್ನು ನಿಷೇಧಿಸಲಾಗಿದೆ.[೬೩] ಆದರೂ ಫ್ರಾನ್ಸ್ ಈ ನಿಷೇಧವನ್ನು ವಿರೋಧಿಸುವುದರ ಜೊತೆಯಲ್ಲಿ ಅದನ್ನು ಮತ್ತೆ ಜಾರಿಗೆ ತರಲು ಪ್ರಯತ್ನಿಸಿತು.[೬೪] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇದಕ್ಕೆ ಅನುಮತಿ ದೊರೆಯಿತು. ಆದರೆ ಇತರ ವಿಧಾನಗಳಿಂದ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳುವವರೆಗೆ ಹಾಗು ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್(FDA)ನಿಂದ ಪ್ರಯೋಗದ ಬಗೆಯನ್ನು ನಿರ್ಧರಿಸುವವರೆಗೂ ಇದು ಕಡ್ಡಾಯವಲ್ಲ. ಆಹಾರಕ್ಕೆ ಸೇರಿಸುವಂತಹ ಪದಾರ್ಥಗಳಲ್ಲಿರುವ ವಿಷತ್ವ, ಆಹಾರದ ಕಲ್ಮಶಕಾರಕವನ್ನು ಹಾಗು ಕೆಲವು ಔಷಧಿಗಳನ್ನು ಮತ್ತು ರಾಸಾಯನಿಕಗಳನ್ನು ಪರೀಕ್ಷಿಸುವಾಗ, ನೇರವಾಗಿ ಮನುಷ್ಯನ ಮೇಲೆ ಪ್ರಯೋಗ ಮಾಡುವುದರ ಬದಲಿಗೆ FDA ಬೀಗಲ್‌ಗಳನ್ನು ಮತ್ತು ಮರಿ-ಹಂದಿಗಳನ್ನು ಬಳಸಿಕೊಳ್ಳುತ್ತದೆ.[೬೫]

ಸಜೀವಚ್ಛೇಧನ-ವಿರೋಧಿ ಗುಂಪು, ಪ್ರಯೋಗಗಳಲ್ಲಿ ಪ್ರಾಣಿಗಳನ್ನು ಬಳಸುವುದನ್ನು ವಿರೋಧಿಸಿದೆ. 1997ರಲ್ಲಿ ಒಬ್ಬ ಸ್ವತಂತ್ರ ಪತ್ರಿಕೋದ್ಯಮಿಯು, UK ಯ ಹಂಟಿಂಗ್ ಡನ್ ಲೈಫ್ ಸೈನ್ಸಸ್‌ನಲ್ಲಿ ಬೀಗಲ್‌‌ಗಳನ್ನು ಕೋಲಿನಲ್ಲಿ ಹೊಡೆಯುತ್ತಿದ್ದುದನ್ನು ಹಾಗು ಅವುಗಳ ಮೇಲೆ ಅರಚುತ್ತಿದ್ದುದನ್ನು ರಹಸ್ಯವಾಗಿ ಚಿತ್ರೀಕರಿಸಿದನು.[೬೬] ಪ್ರಯೋಗಕ್ಕಾಗಿ ಬೀಗಲ್‌‌ಗಳನ್ನು ಬೆಳೆಸುವಂತಹ UK-ಮೂಲದ ಕಂಪನಿಯಾದ ಕನ್ ಸರ್ಟ್ ಕೆನೆಲ್ಸ್, ಪ್ರಾಣಿಗಳ ಹಕ್ಕುಗಳಿಗೆ ಸಂಬಂಧಿಸಿದ ಗುಂಪುಗಳು ಹೇರಿದ ಒತ್ತಡದಿಂದಾಗಿ 1997ರಲ್ಲಿ ಮುಚ್ಚಲ್ಪಟ್ಟಿತು.[೬೭]

ವೈದ್ಯಕೀಯ ಸಂಶೋಧನೆ ಬದಲಾಯಿಸಿ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬಳಸುವಂತಹ ನಾಯಿಗಳ ತಳಿಗಳನ್ನು ಖಚಿತಪಡಿಸಿಲ್ಲ (ಆದರೂ ಪ್ರಕಟಿಸಲಾದ ಸಂಶೋಧನ ಬರಹಗಳು ಬೀಗಲ್‌ಗಳನ್ನು ಚಿತ್ರಿಸಿವೆ). 1972ರಿಂದ 2004ರ ಅವಧಿಯಲ್ಲಿ ಪ್ರತಿವರ್ಷ ಪ್ರಾಣಿಗಳ ಮೇಲೆ ನಡೆಸುತ್ತಿದ್ದಂತಹ ಪ್ರಯೋಗಗಳ ಸಂಖ್ಯೆಯು ಮೂರನೇ ಎರಡು ಭಾಗದಷ್ಟು 195,157 ನಿಂದ 64,932 ರಷ್ಟು ಕಡಿಮೆಯಾಯಿತು.[೬೮] ಜಪಾನ್‌ನಲ್ಲಿ ಪ್ರಾಣಿಗಳ ಪ್ರಯೋಗಪರೀಕ್ಷೆಗಳ ಮೇಲಿರುವ ಕಾನೂನಿನ ಪ್ರಕಾರ, ಪ್ರಯೋಗಕ್ಕೆ ಬಳಸುವ ಪ್ರಾಣಿಗಳ ಸಂಖ್ಯೆ ಅಥವಾ ವಿಧಗಳನ್ನು ವರದಿಮಾಡುವ ಅಗತ್ಯವಿಲ್ಲ.[೬೯] ಅಲ್ಲದೇ ಫ್ರಾನ್ಸ್‌ನಲ್ಲಿ ಪ್ರಯೋಗಗಳ ಸೌಲಭ್ಯಗಳನ್ನು ತನಿಖೆಮಾಡುವವರಲ್ಲಿ ನಿಯಂತ್ರಿತ ವ್ಯವಸ್ಥೆಯು ಅವಶ್ಯಕವಾಗಿರಬೇಕಾಗುತ್ತದೆ.[೬೯]

ಬೀಗಲ್‌ಗಳನ್ನು ಹಲವಾರು ಸಂಶೋಧನ ವಿಧಾನಗಳಲ್ಲಿ ಬಳಸಲಾಗುತ್ತಿದೆ: ಮೂಲಭೂತ ಜೀವಿವಿಜ್ಞಾನದ ಸಂಶೋಧನೆ, ಅನ್ವಯಿಕ ಮಾನವ ಔಷಧಿ, ಅನ್ವಯಿಕ ಪಶುವೈದ್ಯದ ಔಷಧಿ, ಹಾಗು ಮನುಷ್ಯ, ಪ್ರಾಣಿಗಳು ಅಥವಾ ಪರಿಸರದ ಸಂರಕ್ಷಣೆ.[೬೨][೬೯]

ಇತರ ಪಾತ್ರಗಳು ಬದಲಾಯಿಸಿ

ಬೇಟೆಗಾಗಿ ಸಾಕಿದರೂ ಕೂಡ, ಬೀಗಲ್‌ಗಳು ಬಹುಮುಖ ಸಾಮರ್ಥ್ಯವುಳ್ಳವಾಗಿವೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಇತರ ಕಾರ್ಯಗಳಲ್ಲಿ ಉದಾಹರಣೆಗೆ ಪತ್ತೆಹಚ್ಚಲು, ಚಿಕಿತ್ಸೆಯಲ್ಲಿ ಹಾಗು ಸಾಕು ನಾಯಿಯಾಗಿ ಬಳಸಲಾಗುತ್ತದೆ.[೩೦] ಬೀಗಲ್‌ಗಳನ್ನು ಆಸ್ಟ್ರೇಲಿಯದಲ್ಲಿ ಗೆದ್ದಲನ್ನು ಪತ್ತೆ ಹಚ್ಚುವ ಮೂಸು ನಾಯಿಯಾಗಿ ಬಳಸಲಾಗುತ್ತದೆ.[೭೦] ಅಲ್ಲದೇ ಇವುಗಳನ್ನು ಮಾದಕ ದ್ರವ್ಯ ಹಾಗು ಸ್ಫೋಟಕಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ.[೭೧][೭೨] ಅವುಗಳ ಉತ್ತಮ ವರ್ತನೆ ಹಾಗು ಪರಿಣಾಮಕಾರಿಯಲ್ಲದ ಆಕಾರದಿಂದ ಅವುಗಳನ್ನು ಪ್ರಾಣಿ ಚಿಕಿತ್ಸೆಯಲ್ಲಿ ಸತತವಾಗಿ ಬಳಸಲಾಗುತ್ತಿದೆ, ಅಂದರೆ ಆಸ್ಪತ್ರೆಗಳಲ್ಲಿ ವಯಸ್ಸಾದವರನ್ನು ಮತ್ತು ರೋಗಿಗಳನ್ನು ಭೇಟಿಮಾಡುವುದು.[೭೩] ಜೂನ್ 2006ರಲ್ಲಿ, ತರಬೇತಿ ಪಡೆದ ಬೀಗಲ್‌ ನಾಯಿಯೊಂದು ಮಾಲೀಕನ ಮೊಬೈಲ್‌ನಲ್ಲಿ ತುರ್ತು ಸಂಖ್ಯೆಗಳನ್ನು ಕರೆ ಮಾಡುವುದರ ಮೂಲಕ ಮಾಲೀಕನ ಜೀವವನ್ನು ಉಳಿಸಿ ಪ್ರಶಂಸೆಗೆ ಪಾತ್ರವಾಯಿತು.[೭೪] 2010ರಲ್ಲಿ ಉಂಟಾದ ಹೈತಿ ಭೂಕಂಪದ ಪರಿಣಾಮಗಳಲ್ಲಿ, ಬೀಗಲ್‌ ಕೊಲಂಬಿಯ ರಕ್ಷಣ ಪಡೆಯ ಜೊತೆಯಲ್ಲಿ ಹುಡುಕುವ ಮತ್ತು ರಕ್ಷಿಸುವ ಬೀಗಲ್ ನಾಯಿ ಮೋಂಟಾನ ಹೋಟೆಲ್‌ನ ಮಾಲೀಕನನ್ನು ಸ್ಥಳಾಂತರಿಸುವ ಮೂಲಕ ಪ್ರಶಂಸೆಯನ್ನು ಪಡೆಯಿತು. ಇವನು ಬಿದ್ದಹೋಗಿದ್ದ ಕಟ್ಟಡದ ಕೆಳಗೆ 100 ಗಂಟೆಗಳನ್ನು ಕಳೆದ ನಂತರ ಬೀಗಲ್‌ನಿಂದ ರಕ್ಷಿಸಲ್ಪಟ್ಟನು.[೭೫]

ಜನಪ್ರಿಯ ಸಂಸ್ಕೃತಿಯಲ್ಲಿ ಬದಲಾಯಿಸಿ

ಬೀಗಲ್‌ಗಳನ್ನು ಸಮೂಹ ಮಾಧ್ಯಮ ವಲಯಗಳಲ್ಲೂ ಹೆಚ್ಚಾಗಿ ಚಿತ್ರಿಸಲಾಗಿದೆ. ಬರಹಗಾರರಾದ ವಿಲಿಯಂ ಶೇಕ್ ಸ್ಪಿಯರ್, ಜಾನ್ ವೆಬ್‌ಸ್ಟರ್, ಜಾನ್ ಡ್ರೈಡನ್, ಥಾಮಸ್ ಟೈಕೆಲ್, ಹೆನ್ರಿ ಫೀಲ್ಡಿಂಗ್ ಮತ್ತು ವಿಲಿಯಂ ಕೌಪರ್, ಹಾಗು ಅಲೆಕ್ಸಾಂಡರ್ ಪೋಪ್‌ನ ಅನುವಾದಿತ ಕೃತಿಗಳಾದ ಹೋಮರ್, ಇಲಿಯಡ್ ‌ನಲ್ಲಿ 19ನೇ ಶತಮಾನದ ಮೊದಲು ಇದ್ದಂತಹ ನಾಯಿಗಳ ಬಗ್ಗೆ ಉಲ್ಲೇಖವಿದೆ.[d]

1950 ರಿಂದ ಪಿನಟ್ ‌ನ ಸ್ನೂಪಿ ಪಾತ್ರದ ಜೊತೆಯಲ್ಲಿ ("ಪ್ರಪಂಚದ ಅತ್ಯಂತ ಜನಪ್ರಿಯ ಬೀಗಲ್‌" ಆಗಿ ಚಿತ್ರಿಸಲಾಗಿದೆ[೧]). ಗಾರ್ ಫೀಲ್ಡ್ ನ ಹಾಸ್ಯಭಾಗದ ಒಡಿಯೆ ಪಾತ್ರದ ಜೊತೆಯಲ್ಲಿ , ವಾಲ್ಟ್ ಡಿಸ್ನಿ ಬೀಗಲ್‌ ಬಾಯ್ಸ್ ಮತ್ತು ಬೀಗಲ್ ಬೀಗಲ್‌, ಹನ್ನ-ಬಾರ್ಬರ ಗ್ರೇಪ್ ಅಪೆ ಪ್ರದರ್ಶನಗಳ ಅವಿರತ ಯಶಸ್ಸಿನ ಮೂಲಕ ಬೀಗಲ್‌ಗಳು ಹಾಸ್ಯ ಭಾಗಗಳಲ್ಲಿ ಹಾಗು ಆನಿಮೇಟೆಡ್ ಕಾರ್ಟುನ್ಸ್ಗಳಲ್ಲಿ ಕಂಡುಬಂದಿವೆ.

ಅವುಗಳು ಅನೇಕ ಚಲನಚಿತ್ರಗಳಲ್ಲೂ ಕಂಡುಬಂದಿವೆ. ಕ್ಯಾಟ್ಸ್ ಮತ್ತು ಡಾಗ್ಸ್ ಚಲನಚಿತ್ರದ ಪ್ರಮುಖ ಪಾತ್ರದಲ್ಲಿ ಹಾಗು ಫಿಲಿಸ್ ರೆನಾಲ್ಡ್ಸ್ ನೇಯ್ಲರ್‌ನ ಶಿಲೊ ಪುಸ್ತಕದಲ್ಲಿ ಶೀರ್ಷಿಕೆ ಪಾತ್ರದಲ್ಲಿ ಮತ್ತು ಅಂಡರ್ ಡಾಗ್ ‌ನ ನೇರ-ಕಾರ್ಯ ಆವೃತ್ತಿಯಲ್ಲಿ ಕಂಡುಬಂದಿವೆ. ಅವುಗಳು ಆಡಿಷನ್ , ದಿ ಮಾನ್ ಸ್ಟರ್ ಸ್ಕ್ವಾಡ್ ಮತ್ತು ದಿ ರಾಯಲ್ ಟೆನೆನ್ ಬೌಮ್ಸ್ ಚಲನಚಿತ್ರಗಳನ್ನು ಒಳಗೊಂಡಂತೆ ಅನೇಕ ಚಲನಚಿತ್ರಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿವೆ. ಅಲ್ಲದೇ ದೂರದರ್ಶನದಲ್ಲಿ Star Trek: Enterprise , ಈಸ್ಟ್ ಎಂಡರ್ಸ್ , ದಿ ವಂಡರ್ ಇಯರ್ , ಮತ್ತು ಟು ದಿ ಮ್ಯಾನಾರ್ ಬಾರ್ನ್ ಇತರರ ಜೊತೆಯಲ್ಲಿಯೂ ಕಾಣಿಸಿಕೊಂಡಿವೆ.

ಬ್ಯಾರಿ ಮ್ಯಾನಿಲೊನ ಎರಡು ಬೀಗಲ್‌ಗಳಲ್ಲಿ ಒಂದಾದ ಬೀಗಲ್ ಅವನ ಅನೇಕ ಆಲ್ಬಂ ಮುಖಪುಟದಲ್ಲಿ ಕಾಣಿಸಿಕೊಂಡಿದೆ. US ನ ಮಾಜಿ ಅಧ್ಯಕ್ಷ ಲಿಂಡನ್ ಬೈನ್ಸ್ ಜಾನ್ ಸನ್ ಅನೇಕ ಬೀಗಲ್‌ಗಳನ್ನು ಹೊಂದಿದ್ದನು. ವೈಟ್ ಹೌಸ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಅಧಿಕೃತ ಸ್ವಾಗತ ಕಾರ್ಯಕ್ರಮದಲ್ಲಿ ಅವನು ಒಂದು ಬೀಗಲ್ಅನ್ನು ಎತ್ತಿಕೊಂಡ ಕಾರಣ ಬೊಬ್ಬೆಗೆ ಕಾರಣವಾಯಿತು.[೭೬]

ಚಾಲ್ಸ್ ಡಾರ್ವಿನ್ನ ಪ್ರವಾಸ ಪುಸ್ತಕ ದಿ ವಯೇಜ್ ಆಫ್ ದಿ ಬೀಗಲ್‌ ‌ಗೆ ವಿಷಯವನ್ನು ಒದಗಿಸಿದ ಮತ್ತು ಆನ್ ದ ಒರಿಜಿನ್ ಆಫ್ ಸ್ಪೀಸೀಸ್‌ ಗೆ ಸ್ಫೂರ್ತಿಯನ್ನು ನೀಡಿದ ಅವನು ಪ್ರಯಾಣ ಮಾಡಿದಂತಹ ಹಡಗಿಗೆ ಬೀಗಲ್‌ನ ತಳಿಯ ನಂತರ HMS ಬೀಗಲ್‌ ಎಂಬ ಹೆಸರಿಸಿಡಲಾಯಿತು. ಅಲ್ಲದೆ ಇದರ ಹೆಸರನ್ನು ಮಾರ್ಟಿಯನ್‌‌ನ ಬೀಗಲ್‌ 2 ಎಂಬ ಗೃಹನೌಕೆಗೂ ನೀಡಲಾಯಿತು.

ಟಿಪ್ಪಣಿಗಳು ಬದಲಾಯಿಸಿ

a ^ ಈ ಲೇಖನದಲ್ಲಿ "ಬೀಗಲ್‌" (ದೊಡ್ಡಕ್ಷರ B ಯ ಜೊತೆಯಲ್ಲಿ) ಅನ್ನು ಇತರ ಬೀಗಲ್‌-ವಿಧದ ನಾಯಿಗಳನ್ನು ಆಧುನಿಕ ತಳಿಗಳೊಡನೆ ವಿಂಗಂಡಿಸಲು ಬಳಸಲಾಯಿತು.

B ^ ದಕ್ಷಿಣ ಪ್ರದೇಶದ ನಾಯಿಗಳು ಬ್ರಿಟಿಷ್ ಐಸ್ ಲೆಸ್ ನ ಪ್ರಾಣಿಗಳಾಗಿರಬಹುದು,ಹಾಗು ಪ್ರಾಚೀನ ಬ್ರಿಟನನ್ನರು ಇವುಗಳನ್ನು ಬೇಟೆಗೆ ಬಳಸುತ್ತಿದ್ದರಬಹುದು.[೭೭]

C ^ ಹರ್ಟ್ಸ್ ಈ ಕೆಳಗಿನ ಪ್ರಶ್ನೆಗಳನ್ನು 96 ಜನತಜ್ಞರ ತಂಡದ ಮುಂದಿಟ್ಟನು, ಇದರಲ್ಲಿ ಅರ್ಧ ಜನ ಪಶುವೈದ್ಯರಾಗಿದ್ದರು ಹಾಗು ಉಳಿದ ಅರ್ಧಜನ ನಾಯಿ ನಿಷ್ಠತೆಯನ್ನು ಪರೀಕ್ಷಿಸುವ ತೀರ್ಪುಗಾರರು:

A dog may normally be quite calm but can become very excitable when set off by such things as a ringing doorbell or an owner's movement toward the door. This characteristic may be very annoying to some people. Rank these seven breeds from least to most excitable.

D ^ ಕೆಳಗೆ ಕೊಟ್ಟಿರುವ ಲೇಖಕರ ಬರವಣಿಗೆಯಲ್ಲಿ ತೆಗೆದುಕೊಳ್ಳಲಾದ ನಿರ್ದಿಷ್ಟ ಉಲ್ಲೇಖಗಳು:
ಶೇಕ್ ಸ್ಪಿಯರ್: "ಸರ್ ಟಾಬಿ ಬೆಲ್ಚ್ : ಶಿ ಈಸ್ ಬೀಗಲ್‌, ನಿಜವಾದ-ತಳಿ, ಹಾಗು ನನ್ನನ್ನು ಗೌರವಿಸುವವಳು: ವಾಟ್ ಓ' ದೆಟ್?" ಟ್ವೆಲ್ತ್ ನೈಟ್ (c.1600) ಅಂಕ II ದೃಶ್ಯ III
ವೆಬ್ ಸ್ಟರ್: "ಮಿಸ್ಟ್ರೆಸ್ಸ್ ಟೆನ್ ಟರ್ ಹುಕ್: ಯು ಆರ್ ಅ ಸ್ವೀಟ್ ಬೀಗಲ್‌" ವೆಸ್ಟ್ ವಾರ್ಡ್ ಹೊ (1607) ಅಂಕ III ಸೀನ್ IV:2
'' ಡ್ರೈಡೆನ್: "ದಿ ರೆಸ್ಟ್ ಇನ್ ಶೇಪ್ ಅ ಬೀಗಲ್‌'ಸ್ ವೆಲ್ಪ್ ತ್ರೂ ಔಟ್, ವಿತ್ ಬ್ರಾಡರ್ ಫೋರ್ ಹೆಡ್ ಅಂಡ್ ಅ ಶಾರ್ಪರ್ ಸ್ನೌಟ್" ದಿ ಕಾಕ್ ಅಂಡ್ ದಿ ಫಾಕ್ಸ್ , ಎಂಡ್ ಅಗೇನ್: "ಅಬೌಟ್ ಹರ್ ಫೀಟ್ ವರ್ ಲಿಟ್ಟಲ್ ಬೀಗಲ್ಲ್ಸ್ ಸೀನ್" ಇನ್ ಪಾಲಮಾನ್ ಅಂಡ್ ಅರ್ಸೈಟ್ ಬೋತ್ ಫ್ರಮ್ ಫ್ಯಾಬಲ್ಸ್, ಏನ್ ಷ್ಯಂಟ್ ಅಂಡ್ ಮಾಡರ್ನ್ (1700)
ಟಿಕ್ ಕೆಲ್: "ಹಿಯರ್ ಲೆಟ್ ಮಿ ಟ್ರೇಸ್ ಬಿನೀತ್ ದಿ ಪರ್ಪಲ್ಡ್ ಮಾರ್ನ್, ದಿ ಡೀಪ್-ಮೌತ್'ಡ್ ಬೀಗಲ್‌, ಅಂಡ್ ದಿ ಸ್ಪ್ರೈಟ್ಲಿ ಹಾರ್ನ್" ಟು a ಲೇಡಿ ಬಿಫೋರ್ ಮ್ಯಾರೇಜ್ (ಮರಣದ ನಂತರ ೧೭೪೯ ರಲ್ಲಿ ಪ್ರಕಟಿಸಲಾಯಿತು)
ಫೀಲ್ಡಿಂಗ್: "'ವಾಟ್ ದ ಡೆವಿಲ್ ವುಡ್ ಯು ಹ್ಯಾವ್ ಮಿ ಡು?' ಕ್ರೈಸ್ ದಿ ಸ್ಕ್ವೇಯರ್, ಟರ್ನಿಂಗ್ ಟು ಬ್ಲಿಫಿಲ್, 'ಐ ಕ್ಯಾನ್ ನೊ ಮೋರ್ ಟರ್ನ್ ಹರ್, ದ್ಯಾನ್ ಅ ಬೀಗಲ್‌ ಕ್ಯಾನ್ ಟರ್ನ್ ಆನ್ ಓಲ್ಡ್ ಹೇರ್.'" ದಿ ಹಿಸ್ಟ್ರಿ ಆಫ್ ಟಾಮ್ ಜೊನ್ಸ್ ,ಎ ಫೌಂಡ್ಲಿಂಗ್ (1749) ಚಾಪ್ಟರ್7.
ಕೌಪರ್: "ಅತ್ಯತ್ತಮ ಬೆನ್ನುಟ್ಟುವ ಸಾಮರ್ಥ್ಯ,ದಾಪುಗಾಲಿನ ಬಲ, ಇದು ನಿಜವಾದ ಬೀಗಲ್ ನ ವಾಸನೆ ನಾಯಿಯ ಗುಣವಾಗಿದೆ"ದಿ ಪ್ರೊಗ್ರೆಸ್ ಆಫ್ ಎರರ್ (1782)
ಪೋಪ್: "ಹೀಗೆ ಉತ್ತಮವಾಗಿ ಅಭಿವೃದ್ಧಿಪಡಿಸಿದ ಈ ತಳಿಯು ಉತ್ತಮ ಕಾರ್ಯಚಟುವಟಿಕೆಯ ಮತ್ತು ಚುರುಕಿನ ನಡಿಗೆಗೆ ಹೆಸರಾಗಿದೆ"ದಿ ಇಲಿಯದ್ ಆಫ್ ಹೊಮರ್ (1715–20) ಬುಕ್ XV:697–8

ಆಕರಗಳು ಬದಲಾಯಿಸಿ

  • Arnold, David and Hazel (1998). A New Owner's Guide to Beagles. T.F.H. Publications, Inc. ISBN 079382785X.
  • Blakey, Robert (1854). Shooting. George Routledge and Co.
  • Daglish, E. Fitch (1961). Beagles. London: Foyles. ISBN 0707106311.
  • Fogle, Bruce (1990). The Dog's Mind. Howell Book House. ISBN 0876055137.
  • Jesse, George (1866). Researches into the History of the British Dog Volume II. London: Robert Hardwicke.
  • Jesse, Edward (1858). Anecdotes of Dogs. H. G. Bohn.
  • Kraeuter, Kristine (2001). Training Your Beagle. Barron's. ISBN 0764116487.
  • Maxwell, William Hamilton (1833). The Field Book: Or, Sports and Pastimes of the United Kingdom. E. Wilson.
  • Hendrick, George (1977). Henry Salt: Humanitarian Reformer and Man of Letters. University of Illinois Press. ISBN 0252006119.
  • Mills, John (1845). The Sportsman's Library. W. Paterson.
  • Rackham, Oliver (2000). The History of the Countryside. Weidenfeld & Nicholson History. ISBN 1842124404.
  • Rice, Dan (2000). The Beagle Handbook. Barron's. ISBN 0764114646.
  • Scott, John (1845). The Sportsman's Repository. Henry G. Bohn.
  • Smith, Steve (2002). The Encyclopedia of North American Sporting Dogs. Willow Creek Press. ISBN 1572235012.
  • "Stonehenge", (J. H. Walsh) (1856). Manual of British Rural Sports. London: G. Routledge and Co.
  • Xenophon (translated by H. G. Dakyns) (2007). On Hunting: A Sportsman's Manual Commonly Called Cynegeticus. eBooks@Adelaide. Archived from the original on 2007-06-13. Retrieved 2010-07-01. {{cite book}}: Unknown parameter |origdate= ignored (|orig-year= suggested) (help)
  • Youatt, William (1852). The Dog. Blanchard and Lea.

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ "Places to Visit". United Feature Syndicate, Inc. 2005. Retrieved 9 July 2007.
  2. ೨.೦ ೨.೧ "ದಿ ಬೀಗಲ್ ಕ್ಲಬ್ ಆಫ್ NSW (ಆಸ್ಟ್ರೇಲಿಯಾ)", ಬೀಗಲ್‌Clubnsw.org.au, ಏಪ್ರಿಲ್ 2009, web: BC-NSW-inf Archived 2010-06-15 ವೇಬ್ಯಾಕ್ ಮೆಷಿನ್ ನಲ್ಲಿ..
  3. ಡ್ಯಾಗ್ ಲಿಶ್ ಪುಟ7
  4. ರಾಖಾಮ್ ಪುಟ130
  5. ಸ್ಮಿತ್ ಪುಟ209
  6. ೬.೦ ೬.೧ ಜೆಸ್ಸೆ (1858) ಪುಟಗಳು438–9
  7. G. Jesse vol II, pp.223-232
  8. ೮.೦ ೮.೧ "What is a Pocket Beagle?". American Kennel Club. Archived from the original on 13 ಫೆಬ್ರವರಿ 2010. Retrieved 9 July 2007.
  9. "The New Sporting Magazine". Vol. 4. Baldwin and Craddock. 1833. {{cite magazine}}: Cite magazine requires |magazine= (help)
  10. ೧೦.೦ ೧೦.೧ ಯೋಟ್ಟ್. ಪುಟ110
  11. ಮಿಲ್ಸ್ ಪುಟ172
  12. ಕ್ರೆಯೆಟರ್ ಪುಟ7
  13. ಸ್ಕೊಟ್ ಪುಟಗಳು75–8
  14. ೧೪.೦ ೧೪.೧ ಸ್ಟೊನ್ ಹೆಂಜೆ ಪುಟಗಳು98–9
  15. ೧೫.೦ ೧೫.೧ ಕ್ರೆಯೆಟರ್ ಪುಟ9
  16. ೧೬.೦ ೧೬.೧ ೧೬.೨ ಅರ್ನೊಲ್ಡ್ ಪುಟ12
  17. ಡ್ಯಾಗ್ ಲಿಶ್ ಪುಟ9
  18. ಅರ್ನೊಲ್ಡ್ ಪುಟ14
  19. ಡ್ಯಾಗ್ ಲಿಶ್ ಪುಟಗಳು10–12
  20. ಅರ್ನೊಲ್ಡ್ ಪುಟಗಳು14–5
  21. "Beagle Breakthrough: Westminster Crowd Favorite Uno Is Top Dog". Bloomberg. 2008-02-12. Retrieved 13 February 2008.
  22. "Beagle Breed Standard". United Kennel Club. 1996. Archived from the original on 27 ಸೆಪ್ಟೆಂಬರ್ 2007. Retrieved 9 July 2007.
  23. "AKC Registration Statistics" (PDF). American Kennel Club. 2006. Retrieved 11 July 2007.
  24. "AKC Breed Registration Statistics". American Kennel Club. 2006. Retrieved 11 July 2007.
  25. "Registration statistics for all recognised dog breeds - 2005 and 2006". The Kennel Club. Archived from the original on 28 ಜೂನ್ 2007. Retrieved 9 July 2007.
  26. "Beagle". Online Etymology Dictionary. Retrieved 9 July 2007.
  27. "Kerry Beagle". Breeds of Dog. Retrieved 9 July 2007.
  28. ಡ್ಯಾಗ್ ಲಿಶ್ ಪುಟ37
  29. ರೈಸ್ ಪುಟ147
  30. ೩೦.೦ ೩೦.೧ "What you need to know about Beagles" (PDF). The Beagle Club of Queensland. Archived from the original (PDF) on 10 July 2007. Retrieved 9 July 2007.
  31. ಮೇಲಿನ ಲೇಖನದಲಿ ವಿಭಿನ್ನ ತಳಿಗಳ ಬಗ್ಗೆ,ಅವುಗಳ ಗುಣಮಟ್ಟದ ಬಗ್ಗೆ ಬ್ರೀಡ್ ಬಾಕ್ಸ್ ನಲ್ಲಿ ನೋಡಬಹುದಾಗಿದೆ.
  32. ಡ್ಯಾಗ್ ಲಿಶ್ ಪುಟ44
  33. "Beagle Colors". American Kennel Club. Retrieved 9 July 2007.
  34. ೩೪.೦ ೩೪.೧ ಫೊಗಲ್ ಪುಟ40
  35. ಫೊಗಲ್ ಪುಟ173
  36. Randall, Willet (1967). The Patch Hounds. p. 9. Archived from the original (Flash) on 2009-06-24. Retrieved 2010-07-01. ಮರು ಪಡೆದದ್ದು 12 ಜುಲೈ 2007.
  37. ಸ್ಟೊನ್ ಹೆಂಜೆ ಪುಟ46
  38. Raakhee Mirchandani (4 November 2005). "Designer Dogs: Meet the Puggle". Fox News. Retrieved 9 July 2007.
    * "Designing A Cuter Dog". CBS. 6 August 2006. Archived from the original on 1 ಜುಲೈ 2007. Retrieved 9 July 2007.
    * "Stars fuel designer dogs fashion". BBC News. 6 February 2006. Retrieved 9 July 2007.
  39. ಫೊಗಲ್ ಪುಟಗಳು176–7
  40. ಕ್ರೆಯೆಟರ್ ಪುಟಗಳು77–8
  41. ಕ್ರೆಯೆಟರ್ ಪುಟಗಳು96
  42. ಡ್ಯಾಗ್ ಲಿಶ್ ಪುಟ55
  43. K. M. Cassidy (2007). "Dog Longevity: Breed Longevity Data". Retrieved 21 July 2007.
  44. K. M. Cassidy (2007). "Dog Longevity: Breed Weight and Lifespan". Retrieved 21 July 2007.
  45. ೪೫.೦ ೪೫.೧ ೪೫.೨ ೪೫.೩ ೪೫.೪ "Beagle Health Problems". American Kennel Club. Archived from the original on 11 ಜೂನ್ 2007. Retrieved 9 July 2007.
  46. ರೈಸ್ ಪುಟ161
  47. "Spine - Abstract: Volume 31(10) May 1, 2006 p 1094-1099 Notochord Cells Regulate Intervertebral Disc Chondrocyte Proteoglycan Production and Cell Proliferation". Spinejournal.com. Retrieved 2008-11-03.
  48. Gelatt, Kirk N. (ed.) (1999). Veterinary Ophthalmology (3rd ed.). Lippincott, Williams & Wilkins. pp. 656, 718. ISBN 0-683-30076-8. {{cite book}}: |author= has generic name (help)
  49. ರೈಸ್ ಪುಟಗಳು167–74
  50. ಮ್ಯಾಕ್ಸ್ ವೆಲ್ ಪುಟ42
  51. ಬ್ಲ್ಯಾಕಿ ಪುಟ77
  52. ೫೨.೦ ೫೨.೧ ೫೨.೨ ಕ್ರೆಯಟರ್ ಪುಟಗಳು97–104
  53. ಹೆಂಡ್ರಿಕ್ ಪುಟಗಳು68–71
  54. "Activists steal beagle pack". BBC News. 5 January 2001. Retrieved 2007. {{cite web}}: Check date values in: |accessdate= (help)
  55. "Directory of UK hunts 2006/2007". Horse and Hound. 20 November 2006. Archived from the original on 6 ಅಕ್ಟೋಬರ್ 2007. Retrieved 2007. {{cite web}}: Check date values in: |accessdate= (help)
  56. "Submission to Lord Burns' Committee of Inquiry into Hunting with Dogs". The Mammal Society. 16 March 2000. Archived from the original on 12 ಮೇ 2010. Retrieved 9 July 2007.
  57. "USDA's Detector Dogs: Protecting American Agriculture: Why Beagles?". United States Department of Agriculture: Animal and Plant Health Inspection Service. Archived from the original on 2007-02-02. Retrieved 2007. {{cite web}}: Check date values in: |accessdate= (help)
  58. "A beagle honored as a defender at national gate". People's Daily Online. 6 December 2006. Retrieved 9 July 2007.
    * "Old dogs — new tricks Original quarantine K9's on the scent of retirement". Australian Government: Department of Agriculture, Fisheries and Forestry. 30 November 2000. Archived from the original on 5 ಮಾರ್ಚ್ 2009. Retrieved 9 July 2007.
    * M.E. Nairn, P.G. Allen, A.R. Inglis and C. Tanner (1996). "Australian Quarantine a shared responsibility" (PDF). Department of Primary Industries and Energy. Archived from the original (PDF) on 10 ಜುಲೈ 2007. Retrieved 9 July 2007.{{cite web}}: CS1 maint: multiple names: authors list (link)
  59. "USDA's Detector Dogs: Protecting American Agriculture: More Detector Dog Programs". United States Department of Agriculture: Animal and Plant Health Inspection Service. Archived from the original on 10 ಆಗಸ್ಟ್ 2007. Retrieved 9 July 2007.
  60. "Statistics of Scientific Procedures on Living Animals Great Britain 2004" (PDF). Home Office. 2004. Retrieved 9 July 2007.
  61. ೬೧.೦ ೬೧.೧ "Report of the Animal Procedures Committee for 2004" (PDF). Home Office. 2004. Retrieved 9 July 2007.
  62. ೬೨.೦ ೬೨.೧ "Statistics of Scientific Procedures on Living Animals Great Britain 2005" (PDF). Home Office. 2005. Retrieved 9 July 2007.
  63. "Cosmetics and animal tests". European Commission — Enterprise and Industry Directorate General. 2007. Archived from the original on 29 ಜೂನ್ 2007. Retrieved 9 July 2007.
  64. "Animal-Testing Ban for Cosmetics to Be Upheld, EU Court Rules". Bloomberg. 24 May 2005. Retrieved 9 July 2007.
  65. "How to do Business with FDA". US Department of Health and Human Services. Archived from the original on 29 ಸೆಪ್ಟೆಂಬರ್ 2007. Retrieved 11 July 2007.
  66. Zoe Broughton (2001). "Seeing Is Believing — cruelty to dogs at Huntingdon Life Sciences". The Ecologist. Archived from the original on 8 ಜುಲೈ 2012. Retrieved 9 July 2007. {{cite web}}: Unknown parameter |month= ignored (help)
  67. Nicola Woolcock (25 August 2005). "Extremists seek fresh targets close to home". London: The Times. Retrieved 9 July 2007.
  68. "FY 2004 AWA Inspections" (PDF). United States Department of Agriculture: Animal and Plant Health Inspection Service. 2004. Archived from the original (PDF) on 10 ಡಿಸೆಂಬರ್ 2006. Retrieved 9 July 2007.
  69. ೬೯.೦ ೬೯.೧ ೬೯.೨ "Select Committee on Animals In Scientific Procedures Report". House of Lords. 2002. Retrieved 9 July 2007.
  70. "Termite Detection Dogs". K9 Centre.com. Archived from the original on 13 ಏಪ್ರಿಲ್ 2007. Retrieved 9 July 2007.
  71. "Police Powers (Drug Detection Dogs) Bill". Parliament of New South Wales. 13 December 2001. Archived from the original on 29 ಸೆಪ್ಟೆಂಬರ್ 2007. Retrieved 9 July 2007.
  72. Tom Geoghegan (13 July 2005). "The unlikely enemy of the terrorist". BBC News Magazine. Retrieved 9 July 2007.
  73. ಕ್ರೆಯಟರ್ ಪುಟಗಳು89–92
  74. "Dog praised for life-saving call". BBC News. 20 June 2006. Retrieved 9 July 2007.
  75. "In Haiti, a shattered symbol reluctantly yields dead". Twin Cities Pioneer Press. 25 January 2010. Retrieved 26 January 2010.
  76. "President Johnson's Dogs". Lyndon Baines Johnson Library and Museum. Archived from the original on 11 ಜುಲೈ 2007. Retrieved 9 July 2007.
  77. ಯೊವಟ್ಟ್ ಪುಟ133

ಬಾಹ್ಯಕೊಂಡಿಗಳು ಬದಲಾಯಿಸಿ

"https://kn.wikipedia.org/w/index.php?title=ಬೀಗಲ್‌&oldid=1162810" ಇಂದ ಪಡೆಯಲ್ಪಟ್ಟಿದೆ