ಬರಗೂರು ರಾಮಚಂದ್ರಪ್ಪ

ಬರಗೂರು ರಾಮಚಂದ್ರಪ್ಪನವರು ಬೆಂಗಳೂರು ವಿಶ್ವವಿದ್ಯಾನಿಲಯ ದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಕನ್ನಡನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಬಂಡಾಯ ಸಾಹಿತ್ಯ ಚಳುವಳಿಯ ನೇತಾರರಲ್ಲಿ ಒಬ್ಬರು. ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಪ್ರೊ.

ಡಾ.ಬರಗೂರು ರಾಮಚಂದ್ರಪ್ಪ
Born(೧೯೪೬-೧೦-೧೮)೧೮ ಅಕ್ಟೋಬರ್ ೧೯೪೬
ಬರಗೂರು, ಸಿರಾ, ತುಮಕೂರು, ಕರ್ನಾಟಕ, ಭಾರತ
Nationalityಭಾರತೀಯ
Citizenshipಭಾರತೀಯ
EducationMA graduate
Occupation(s)ಪ್ರಾಧ್ಯಾಪಕ, ಚಿತ್ರ ನಿರ್ದೇಶಕ, ಕವಿ, ಸಮಾಜವಾದಿ
Notable workಸುಂಟರಗಾಳಿ,ಒಂದು ಊರಿನ ಕಥೆಗಳು,ಕನ್ನಡಾಭಿಮಾನ, ಕಪ್ಪು ನೆಲದ ಕೆಂಪುಕಾಲು,ಮರಕುಟಿಕ,ರಾಜಕಾರಣಿ,ಸೂತ್ರ, ಕಾಂಟೆಸ್ಸಾ ಕಾವ್ಯ"
Titleಗೌರವ ಡಾಕ್ಟರೇಟ್
Awards
  • ಕಥಾಸಂಕಲನ ಸುಂಟರಗಾಳಿಗೆ ರಾಜ್ಯಸಾಹಿತ್ಯ ಅಕ್ಯಾಡೆಮಿ ಬಹುಮಾನ * ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗಾ ಸಾಹಿತ್ಯ ಪ್ರಶಸ್ತಿ-೨೦೧೩ * ರಾಯಚೂರಿನಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಜನನ ಬದಲಾಯಿಸಿ

ಬರಗೂರು ರಾಮಚಂದ್ರಪ್ಪನವರು, ೧೯೪೬ ಅಕ್ಟೋಬರ್ ೧೮ರಂದು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ.

  • ಬೆಂಗಳೂರು ವಿವಿ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಇವರು ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಇವರು ಕೆಲಸ ನಿರ್ವಹಿಸಿದ್ದಾರೆ. ೨೦೧೬ ಡಿಸೆಂಬರ್ ೨ ರಂದು ರಾಯಚೂರಿನಲ್ಲಿ ನಡೆದ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ [೧] ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಆಯ್ಕೆಮಾಡಲಾಯಿತು[೨]

ವಿದ್ಯಾಭ್ಯಾಸ ಬದಲಾಯಿಸಿ

ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದುದ್ದು ಬರಗೂರಿನಲ್ಲಿ. ತುಮಕೂರಿನಲ್ಲಿ ಬಿ.ಎ. ಪದವಿ ಪಡೆದ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇರಿ, ತುಮಕೂರು ಸ್ನಾತಕೋತ್ತರ ಕೇಂದ್ರದ ಮೊದಲ ನಿರ್ದೇಶಕರಾಗಿ, ಕೇಂದ್ರದ ಬೆಳವಣಿಗೆಗೆ ಕಾರಣಕರ್ತರಾಗಿ, ಸುಮಾರು ವರ್ಷಗಳ ಕಾಲ ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದು ಸ್ವಯಂ ನಿವೃತ್ತರು

ಬರಗೂರು ಅವರ ಸ್ವಂತ ಜೀವನದ ನೆನಪುಗಳು ಬದಲಾಯಿಸಿ

  • 5 Dec, 2016
  • ೮೨ನೇ ರಾಯಚೂರು ಸಾಹಿತ್ಯ ಸಮ್ಮೇಳನ ಕೊನೆಯ ದಿನವಾದ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬರಗೂರುರವರ ಮಾತುಗಳು:
  • ಬಾಲ್ಯದ ನೆನಪು: ‘ಬಾಲ್ಯದಲ್ಲಿ ನನಗೆ ಡ್ರೈವರ್ ಆಗಬೇಕು ಎಂಬ ಕನಸು ಇತ್ತು. ಇದಕ್ಕೆ ಕಾರಣ ಮನೆಯಲ್ಲಿ ನನ್ನ ತಂದೆ ಅಣ್ಣನನ್ನು ಕಂಡಕ್ಟರ್ ಮಾಡಬೇಕು ಎಂದುಕೊಂಡಿದ್ದರು. ಅಣ್ಣನಿಗಿಂತ ನಾನು ಒಂದು ಹೆಜ್ಜೆ ಮುಂದಕ್ಕೆ ದೊಡ್ಡವನಾಗಬೇಕು ಎಂಬ ಬಯಕೆ ನನ್ನದು. ಹೀಗಾಗಿ ಕೆಂಪು ಬಸ್ಸಿನ ಚಾಲಕನಾಗಬೇಕು ಎಂದು ಕೊಂಡಿದ್ದೆ. ಆದರೆ, ಮನಸ್ಸಿನ ಆಳದಲ್ಲಿ ಅಸ್ಮಿತೆಯ ಭಾವನೆ ಪುಟಿದೆದ್ದಿತ್ತು. ಇದರಿಂದ ಶಾಲೆಯಲ್ಲಿ ಚೆನ್ನಾಗಿ ಓದಲು ಆರಂಭಿಸಿದ್ದು ಮಾತ್ರವಲ್ಲ. ತರಗತಿಯಲ್ಲಿ ಪ್ರತಿ ವರ್ಷವೂ ಮೊದಲಿಗನಾಗಿರುತ್ತಿದ್ದೆ’ ಎಂದು ನೆನಪಿಸಿಕೊಂಡರು.
  • ಆರೋಗ್ಯದ ಗುಟ್ಟು: ‘ನನ್ನ ಆರೋಗ್ಯ ಚೆನ್ನಾಗಿರಲು ಮುಖ್ಯ ಕಾರಣ ಇನ್ನೊಬ್ಬರ ಕಾಲೆಳೆಯುವ ಗುಣ ನನ್ನಲ್ಲಿ ಇಲ್ಲ. ಹೊಟ್ಟೆಕಿಚ್ಚು ಪಡುವುದಿಲ್ಲ. ಇನ್ನೊಬ್ಬರ ಏಳಿಗೆ ಕಂಡು ಸಂತಸ ಪಡುತ್ತೇನೆ. ಬೆಂಗಳೂರಿನಲ್ಲಿ ಸರಿಯಾದ ಸಮಯದಲ್ಲಿ ಮನೆಗೆ ತಲುಪುವ ಬೆರಳೆಣಿಕೆ ಸಾಹಿತಿಗಳ ಪೈಕಿ ನಾನೂ ಒಬ್ಬ. ಬೇರೆ ಹವ್ಯಾಸಗಳಂತೂ ಇಲ್ಲ. ಕುಟುಂಬದ ಸದಸ್ಯರಿಗೆ ಸಮಯ ಕೊಡುತ್ತೇನೆ.
  • ರಾತ್ರಿ 9 ಗಂಟೆಯ ಬಳಿಕ ಅಥವಾ ಬೆಳಿಗ್ಗೆ ಮುಂಚೆ ಎದ್ದು ಓದುವ ಅಭ್ಯಾಸವನ್ನು ಇಟ್ಟುಕೊಂಡಿದ್ದೇನೆ. ಸಮಯವನ್ನು ಹೇಗೆ ಬೇಕೊ ಹಾಗೆ ನಿರ್ವಹಿಸುತ್ತೇನೆ. ಇವೆಲ್ಲದರ ಜೊತೆಗೆ ಸಾಹಿತಿಯೂ ಹೌದು, ಚಳವಳಿಗಾರನೂ ಹೌದು ಮತ್ತು ಸಿನಿಮಾಗಳನ್ನೂ ಮಾಡಿದ್ದೇನೆ. ಒಳ್ಳೆ ಸಾಹಿತಿ ಹೌದೊ ಅಲ್ಲವೋ ಎಂಬುದನ್ನು ವಿಮರ್ಶಕರು ನಿರ್ಧರಿಸುತ್ತಾರೆ. ಆದರೆ, ಒಳ್ಳೆಯ ಮನುಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ' ಎಂದು ಹೇಳಿದರು.
  • ಕನಸು ಕಾಣುವುದನ್ನು ಬಿಡಬೇಡಿ: ‘ಏಕಲವ್ಯನಂತೆ ಬೆಳೆದು ಬಂದ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ಕನಸು ಎಂದೂ ಕಂಡಿರಲಿಲ್ಲ. ಬೆವರಿನ ಸಂಸ್ಕೃತಿಯ ಹಿನ್ನೆಲೆಯಿಂದ ನಾವೂ ಕೂಡ ಇಂತಹ ಸ್ಥಾನ ಏರಬಹುದು ಎಂಬುದಕ್ಕೆ ನಾನೇ ಉದಾಹರಣೆ. ಹೀಗಾಗಿ ಕನಸು ಕಾಣುವುದನ್ನು ಯಾರೂ ಬಿಡಬಾರದು. ಮೂರನೇ ತರಗತಿಯಷ್ಟೇ ಓದಿದ್ದ ಡಾ. ರಾಜ್‌ಕುಮಾರ್‌ ಅವರಿಗೆ ಜಾತಿ ಹಿನ್ನೆಲೆ ಇರಲಿಲ್ಲ, ಹಣವೂ ಇರಲಿಲ್ಲ. ಆದರೆ, ಅವರ ಶ್ರಮ, ಶ್ರದ್ಧೆ ಮತ್ತು ಸವಾಲುಗಳನ್ನು ಎದುರಿಸಿದ ರೀತಿಯೇ ಅವರು ಅತ್ಯಂತ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು' ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.[೩]

ಕವನ ಸಂಕಲನಗಳು ಬದಲಾಯಿಸಿ

  • ಕನಸಿನ ಕನ್ನಿಕೆ (೧೯೬೮)
  • ಮರಕುಟಿಗ (೧೯೭೩)
  • ನೆತ್ತರಲ್ಲಿ ನೆಂದು ಹೂವು (೧೯೮೩)
  • ಗುಲಾಮಗೀತೆ (೧೯೯೦)
  • ಮಗುವಿನ ಹಾಡು (೧೯೯೩)
  • ಕಾಂಟೆಸ್ಸಾದಲ್ಲಿ ಕಾವ್ಯ (೨೦೦೧)

ಕಥಾ ಸಂಕಲನಗಳು ಬದಲಾಯಿಸಿ

  • ಸುಂಟರಗಾಳಿ (೧೯೭೫)
  • ಬಯಲಾಟ ಭೀಮಣ್ಣ (೧೯೯೭)
  • ಒಂದು ಊರಿನ ಕತೆಗಳು(೧೯೯೯)
  • ಕಪ್ಪು ನೆಲದ ಕೆಂಪುಕಾಲು

ಕಾದಂಬರಿಗಳು ಬದಲಾಯಿಸಿ

  • ಸೂತ್ರ (೧೯೭೪)
  • ಸೀಳು ನೆಲ (೧೯೮೦)
  • ಸಂಗಪ್ಪನ ಸಾಹಸಗಳು (೧೯೮೧)
  • ಬೆಂಕಿ (೧೯೮೨)
  • ಸೂರ್ಯ (೧೯೮೨)
  • ಭರತ ನಗರಿ (೧೯೮೩)
  • ಕೋಟೆ (೧೯೯೩)
  • ಗಾಜಿನ ಮನೆ (೧೯೯೯)
  • ಸ್ವಪ್ನ ಮಂಟಪ (೧೯೯೯)
  • ಶಬರಿ (೨೦೦೫)

ವಿಮರ್ಶೆ ಬದಲಾಯಿಸಿ

  • ಕನ್ನಡಾಭಿಮಾನ
  • ಸಂಸ್ಕೃತಿ: ಶ್ರಮ ಮತ್ತು ಸೃಜನಶೀಲತೆ
  • ಕನ್ನಡ ಪ್ರಜ್ಞೆ [೪]
  • ಕನ್ನಡ ಸಾಹಿತ್ಯವೆಂಬ ಸ್ವಾತಂತ್ರ್ಯ ಹೋರಾಟ.
  • ಪರಂಪರೆಯೊಂದಿಗೆ ಪಿಸುಮಾತು.
  • ಬಂಡಾಯ ಸಾಹಿತ್ಯ ಮೀಮಾಂಸೆ. ‌
  • ಸಂಸ್ಕೃತಿ ಉಪ ಸಂಸ್ಕೃತಿ.
  • ಕನ್ನಡ ಸಾಹಿತ್ಯ ಮತ್ತು ಸಿನಿಮಾ.
  • ಶಬ್ದವಿಲ್ಲದ ಯುದ್ಧ.
  • ಜನಪದ ನಾಯಕ ಡಾ.ರಾಜಕುಮಾರ

ನಿರ್ದೇಶಿಸಿದ ಸಿನಿಮಾಗಳು ಬದಲಾಯಿಸಿ

  • ಹಗಲುವೇಷ, ನಿರ್ದೇಶನ
  • ಶಾಂತಿ, ನಿರ್ದೇಶನ
  • ಭಾಗೀರಥಿ, ನಿರ್ದೇಶನ
  • ಕೋಟೆ, ನಿರ್ದೇಶನ
  • ಜನುಮದ ಜೋಡಿ, ಸಂಭಾಷಣೆ

ಪ್ರಶಸ್ತಿಗಳು ಬದಲಾಯಿಸಿ

  • ಬರಗೂರು ರಾಮಚಂದ್ರಪ್ಪನವರ ಕಥಾಸಂಕಲನ ‘ಸುಂಟರಗಾಳಿ’ಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ.
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗ ಸಾಹಿತ್ಯ ಪ್ರಶಸ್ತಿ, ೨೦೧೩.
  • ೮೨ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ಆಯೋಜಿಸಲಾದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.[೫]

ಚಲನಚಿತ್ರ ಪ್ರಶಸ್ತಿಗಳು ಬದಲಾಯಿಸಿ

  1. 1978–79: ಉತ್ತಮ ಕಥೆ ಬರಹಗಾರ–ಒಂದು ಊರಿನ ಕಥೆ
  2. 1978–79: ಅತ್ಯುತ್ತಮ ಸಂಭಾಷಣೆ ಬರಹ–ಒಂದು ಊರಿನ ಕಥೆ
  3. 1983–84: ಅತ್ಯುತ್ತಮ ಸಂಭಾಷಣೆ ಬರಹ:ಬೆಂಕಿ
  4. 1986–87: ಎರಡನೆಯ ಅತ್ಯುತ್ತಮ ಚಿತ್ರ-ಸೂರ್ಯ
  5. 1988–89: ಚಿತ್ರ ಸಂಭಾಷಣೆಗಾಗಿ ಜ್ಯುರಿಯವರ ವಿಶೇಷ ಪ್ರಶಸ್ತಿ–ಕೋಟೆ
  6. 1996–97: ಅತ್ಯುತ್ತಮ ಸಾಮಾಜಿಕ ಪ್ರಜ್ಞೆಯ ಕಥೆ-ಕರಡಿ ಪುರ
  7. 1996–97: ಅತ್ಯುತ್ತಮ ಸಂಭಾಷಣೆ ಬರಹ Best- ಜನುಮದ ಜೋಡಿ
  8. 1999–00:ಅತ್ಯುತ್ತಮ ಸಂಭಾಷಣೆ ಬರಹ-ಹಗಲು ವೇಷ
  9. 2002–03: ಎರಡನೆಯ ಅತ್ಯುತ್ತಮ ಚಿತ್ರ-ಕ್ಷಾಮ
  10. 2003–04: ಎರಡನೆಯ ಅತ್ಯುತ್ತಮ ಚಿತ್ರ-ಶಾಂತಿ
  11. 2005–06: ಅತ್ಯುತ್ತಮ ಸಾಮಾಜಿಕ ಪ್ರಜ್ಞೆಯ ಕಥೆ-ತಾಯಿ
  12. 2005–06: ಅತ್ಯುತ್ತಮ ಸಂಭಾಷಣೆ ಬರಹ-ತಾಯಿ
  13. 2007–08: ಅತ್ಯುತ್ತಮ ಮಕ್ಕಳ ಚಿತ್ರ-ಏಕಲವ್ಯ
  14. 2008–09:ಅತ್ಯುತ್ತಮ ಕಥೆ ಬರಹಗಾರ -ಉಗ್ರಗಾಮಿ
  15. 2009–10: ಅತ್ಯುತ್ತಮ ಸಾಮಾಜಿಕ ಪ್ರಜ್ಞೆಯ ಕಥೆ-ಶಬರಿ
  16. 2011: ಅತ್ಯುತ್ತಮ ಸಂಭಾಷಣೆ ಬರಹ-ಭಾಗೀರಥಿ
  17. 2012: ಅತ್ಯುತ್ತಮ ಸಂಭಾಷಣೆ ಬರಹ-ಅಂಗುಲಿಮಾಲ

ಹೆಚ್ಚಿನ ಮಾಹಿತಿಗೆ ಬದಲಾಯಿಸಿ

ಹೊರ ಸಂಪರ್ಕ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ೮೨ನೇ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಪ್ರಜಾವಾಣಿ ಸುದ್ದಿ,೦೩-೧೨-೨೦೧೬
  2. ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ
  3. ಬಂಡಾಯ ಸಾಹಿತ್ಯದ ನಾಯಕತ್ವ ವಹಿಸಲು ಸಿದ್ಧ:ಬರಗೂರು;ಎಸ್‌. ರವಿಪ್ರಕಾಶ್‌;5 Dec, 2016
  4. ಕರ್ನಾಟಕ ಮಲ್ಲ,ಮುಂಬಯಿ, ೨೧,ನವೆಂಬರ್,೨೦೧೬, ಪ್ರೊ.ಬರಗೂರು ಅವರ ಕನ್ನಡ ಪ್ರಜ್ಞೆ, ಮತ್ತು ಕಟುವಾಸ್ತವ-ಡಾ.ಜಿ.ಎನ್.ಉಪಾಧ್ಯ,ಮುಖ್ಯಸ್ಥರು,ಮುಂಬಯಿ ವಿಶ್ವವಿದ್ಯಾಲಯ[ಶಾಶ್ವತವಾಗಿ ಮಡಿದ ಕೊಂಡಿ]
  5. "ಕನ್ನಡಿಗರು ಉಳಿದರೆ ಕನ್ನಡ ಉಳಿದೀತು", ವಿ.ಕ.ಸುದ್ದಿಲೋಕ,೧೦,ಅಕ್ಟೋಬರ್,೨೦೧೬

ಬಾಹ್ಯ ಸಂಪರ್ಕಗಳು ಬದಲಾಯಿಸಿ