ಫೋರ್ಟ್ ಸೇಂಟ್ ಜಾರ್ಜ್, ಚೆನ್ನೈ

ಭಾರತದ ಚೆನ್ನೈನಲ್ಲಿರುವ ಕೋಟೆ

ಬ್ರಿಟಿಷರು ದಕ್ಷಿಣ ಭಾರತಕ್ಕೆ ಪಾದಾರ್ಪಣೆಮಾಡಿ, ನಿರ್ಮಿಸಿದ ಚೆನ್ನೈನ ಪ್ರಥಮ ಕೋಟೆ ! ಭಾರತೀಯರಿಗೆ 'ಕಂಪೆನಿ ಸರ್ಕಾರ'ವೆಂದು ಜನಪ್ರಿಯರಾದ ಇಂಗ್ಲೀಷರು, ಸನ್. ೧೬೦೦ ರಲ್ಲೇ ವ್ಯಾಪಾರಕ್ಕಾಗಿ ಬಂದು, ಗುಜರಾತಿನ, 'ಸೂರತ್ ನಗರ'ದಲ್ಲಿ ಅಲ್ಲಿನ ಸುಲ್ತಾನನ ಅಪ್ಪಣೆಪಡೆದು, ತಮ್ಮ ವ್ಯಾಪಾರಗಳನ್ನು ರೂಢಿಕೊಳ್ಳುತ್ತಾ ಸಾಗಿದರು. ಹಾಗೆಯೇ ಮುಂದುವರೆಯುತ್ತಾ, ದಕ್ಷಿಣ ಭಾರತದ ಈಗಿನ ಚೆನ್ನೈಗೆ (ಆಗಿನ ಮದ್ರಾಸ್) ಗೆ, ಹೋಗಿ ಅಲ್ಲಿ ತಳವುರುತ್ತಾ ಬಂದ ಅವರು, ಸನ್. ೧೬೪೪ ರಲ್ಲಿ ನಗರದ ಸಮುದ್ರದ ಹತ್ತಿರದಲ್ಲಿಯೇ ಒಂದು ಕೋಟೆಯನ್ನು ನಿರ್ಮಿಸಿದರು. ಆ ಭಾಗದ ಜಮೀನನ್ನು ಖರೀದಿಸಿದರು. 'ಸೇಂಟ್ ಜಾರ್ಜ್', (ಬಿಳಿಯರ ವಸತಿ ತಾಣ) ಆಂಗ್ಲರು, ಆಗಿನ 'ಮದ್ರಾಸ್ ನಗರ ಕೋಟೆ ಪ್ರದೇಶ'ಕ್ಕೆ ಕೊಟ್ಟ ಹೆಸರು. ಈ ಚಾರಿತ್ರ್ಯಿಕ ಬೆಳವಣಿಗೆ, ಭಾರತದಲ್ಲಿ ಪಾದಾರ್ಪಣೆಮಾಡಿದ ಅವರಿಗೆ, ತಮ್ಮ ವ್ಯಾಪಾರ ಲೇವಾದೇವಿ, ಮತ್ತು ದೇಸಿವಸ್ತುಗಳನ್ನು ಕೊಂಡು ತಮ್ಮ ದೇಶಕ್ಕೆ ರಫ್ತುಮಾಡುವ ನೆಲೆಯಲ್ಲಿ ಮತ್ತಷ್ಟು ಗಟ್ಟಿ ತಳವೂರಿನಿಲ್ಲಲು ದಾರ್ಷ್ಟ್ಯ ಸಿಕ್ಕಂತಾಯಿತು. ಈ ಪ್ರದೇಶ ಸ್ಥಾನಿಯ ಜನರ್ಯಾರೂ ಹೆಚ್ಚಿಗೆ ಸುತ್ತಾಡಳು ಆಶಿಸದ ಸ್ಸ್ಥಿಯಲ್ಲಿದ್ದಿದ್ದು ನಂತರ ಬ್ರಿಟಿಷ್ ಜನರ ವಾಸಪ್ರದೇಶವಾಗಿ ಮಾರ್ಪಟ್ಟಿತು. ಮದ್ರಾಸ್ ಮತ್ತು ನೆರೆರಾಜ್ಯವಾದ ಕೇರಳದ 'ಸಾಂಬಾರ್ ಕೃಷಿ ಉತ್ಪನ್ನ' ಗಳನ್ನು ಪಡೆದು ಅವನ್ನು ತಮ್ಮ ದೇಶಕ್ಕೆ ಕಳಿಸುವ ಏರ್ಪಾಡುನಡೆಯುತ್ತಿತ್ತು.

ಚಿತ್ರ:P55.JPG
'ಚೆನ್ನೈನ ಗವರ್ನಮೆಂಟ್ ವಸ್ತು ಸಂಗ್ರಹಾಲಯ'
ಚಿತ್ರ:2012 018.JPG
'ಕ್ವೀನ್ ವಿಕ್ಟೋರಿಯ ಮೆಮೋರಿಯಲ್ ಹಾಲ್'

ಐತಿಹ್ಯ ಬದಲಾಯಿಸಿ

'ಚೆನ್ನಿರಾಯರ್ ಪಟ್ಟಿನಮ್'/'ಚನ್ನಪಟ್ನಮ್' ಮುಂತಾದ ಹೆಸರುಗಳಿಂದ ಗುರುತಿಸುತ್ತಿದ್ದ ಈ ಹೊಸ ಪ್ರದೇಶವನ್ನು 'ಮಲಕ್ಕನ್ ಸ್ಟ್ರೇಟ್' ಗ ಹತ್ತಿರದಲ್ಲಿ ಕಟ್ಟುವ ಬಗ್ಗೆ ಯೋಚಿಸಿದರು. ವಿಜಯನಗರದ ಪ್ರಮುಖ 'ದಮೇರ್ಲ ' 'ಚಂದ್ರಗಿರಿ'ಯ ವಾಸಿ, 'ಚೆನ್ನಪ್ಪ ನಾಯಕ,'ನಿಂದ ಖರೀದಿಸಿ, ತಮ್ಮ ಕೋಟೆ ಮತ್ತು ಬಂದರನ್ನು ೨೩ ಏಪ್ರಿಲ್ ೧೬೪೪ ನಿರ್ಮಿಸಿದರು. ಇಂಗ್ಲೆಂಡಿನ 'ಸಂತ ಸೇಂಟ್ ಜಾರ್ಜ್' ಜನ್ಮ ದಿನದಂದು ಪೂರ್ಣಗೊಂಡಿದ್ದರಿಂದ, 'ಜಾರ್ಜ್ ಟೌನ್' ಎಂಬ ಹೆಸರನ್ನೂ ಕೊಟ್ಟರು. ಕಡಲಿನ ಕಡೆ ಮುಖವಿದ್ದ, ಈ ಪಟ್ಟಣ, ಚೆನ್ನಿರಾಯರ್ ಪಟ್ನಂನ, ಬೆಸ್ತರ ಹಟ್ಟಿಯ ಜಾಗಕ್ಕೆ ಹತ್ತಿರವಾಗಿತ್ತು. ಇಂತಹ ಹೊಸ ಬೆಳವಣಿಗೆ, ಬ್ರಿಟಿಷ್ ಕಂಪನಿ ಸರಕಾರಕ್ಕೆ, ಆಗಲೇ 'ಪಾಂಡಿಚೆರಿ'ಯಲ್ಲಿ ಭದ್ರವಾಗಿ ನೆಲೆಹೊಂದಿದ್ದ ಫ್ರೆಂಚರ ಪ್ರಭಾವವನ್ನು ಕುಂಠಿತಗೊಳಿಸುವ ನಿಟ್ಟಿನಲ್ಲಿ ನೆರವಾಯಿತು. ಹಾಗೆಯೇ ನಿಧಾನವಾಗಿ, ಅವರು, ಕರ್ನಾಟಕ ಮತ್ತು ಆರ್ಕಾಟ್ ದೊರೆಗಳ ಸ್ನೇಹ ಬೆಳೆಸಲೂ ಸುಲಭವಾಯಿತು.

ಚಿತ್ರ:P33.JPG
'ವಸ್ತು ಸಂಗ್ರಹಾಲಯದ ಪುರಾತನ ಕಟ್ಟಡ'

ಬ್ರಿಟಿಷ್ ಕಂಪೆನಿ ಸರಕಾರದ ಆಸಕ್ತಿಗಳು ಬದಲಾಯಿಸಿ

೧೮ ನೆಯ ಶತಮಾನದ ಆಕ್ರಮಣಗಳನ್ನು ಸರಿಗಟ್ಟುವ ಸಾಮರ್ಥ್ಯವನ್ನು ಹೊಂದಿದ, ೬ ಮೀಟರ್ ಎತ್ತರದ ಗೋಡೆಗಳಿಂದ ಆವೃತವಾಗಿತ್ತು. ಸನ್ ೧೭೪೬ ರಿಂದ ೧೭೪೯ ರವರೆಗೆ ಸ್ವಲ್ಪ ಕಾಲ ಇದು ಫ್ರೆಂಚ್ ಅಧೀನದಲ್ಲಿತ್ತು. ಆದರೆ Aix-la-Chapelle ಒಪ್ಪಂದ ನಂತರ, ಮತ್ತೆ ಬ್ರಿಟಿಶರ ಕೈಸೇರಿತು.

ಈಗಿನ ತಮಿಳುನಾಡು ಸರ್ಕಾರದ ಆಡಾಳಿತ ಕಛೇರಿ ಬದಲಾಯಿಸಿ

ಈಗ ಈಕೋಟೆ ತಮಿಳುನಾಡು ರಾಜ್ಯದ ಲೆಜಿಸ್ಲೇಟೀವ್ ಅಸೆಂಬ್ಲಿಯ ಆಡಳಿತ ಕಛೇರಿಯ ಪ್ರಮುಖ ಸ್ಥಾನಾವಾಗಿ ಪರಿಗಣಿಸಲ್ಪಟ್ಟಿದೆ. ಈ ಸ್ಥಾನದಲ್ಲಿ ಈಗಲೂ 'ಗ್ಯಾರಿಸನ್ ಆಫ್ ಟ್ರೂಪ್ಸ್' ನ ದಕ್ಷಿಣ ಭಾರತದ ಮತ್ತು ಅಂಡಮಾನ್ ದ್ವೀಪಸಮೂಹದ ಅನೇಕ ತಾಣಗಳನ್ನು ಹೊಂದಿದೆ. ಫೋರ್ಟ್ ವಸ್ತುಸಂಗ್ರಹಾಲಯದಲ್ಲಿ ಹಲವಾರು, ಮದ್ರಾಸ್ ನ ಅಂದಿನ ಗವರ್ನರ್ ಗಳ ಭಾರಿಗಾತ್ರದ ತೈಲಚಿತ್ರಗಳಿಂದ ಹಿಡಿದು, ಬ್ರಿಟಿಷ್ ಸಾಮ್ರಾಜ್ಯದ ನೆನೆಪಿನ ಕುರುಹುಗಳು, ಮತ್ತಿತರ ಮಹತ್ವದ ಸಂಗ್ರಗಳು ಪ್ರದರ್ಶನಾಲಯದ ಇತಿಹಾಸ ಪ್ರಿಯರ, ಮತ್ತು ಇತಿಹಾಸದ ವಿದ್ಯಾರ್ಥಿಗಳ ಮಾಹಿತಿ ಗಳಿಕೆಯ ಪ್ರಮುಖ ಆಕರ್ಶಣೆಯ ವಸ್ತುಗಳಾಗಿವೆ.

ಮಿಲಿಟರಿ ತರಪೇತಿ ಕೇಂದ್ರ ಬದಲಾಯಿಸಿ

ಆಧುನಿಕ ಭಾರತೀಯ ಮಿಲಿಟರಿಯ ತರಪೇತಿಯ ಕೇಂದ್ರವಾಗಿದೆ. ಚೆನ್ನೈನಗರದ ಅತಿ ಮಹತ್ವದ ಸ್ಥಾನವೆಂದು ಗಮನಿಸಲ್ಪಟ್ಟಿದೆ. ೧೭ ನೆಯ ಶತಮಾನದ ಕೊನೆಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಕಾಲುಗಳು ಭಾರತದಲ್ಲಿ ಭದ್ರವಾಗಿ ಸ್ಥಾಪಿಸಲ್ಪಟ್ಟವು. ಬ್ರಿಟಿಷರು ತಮ್ಮ ವ್ಯಾಪಾರವನ್ನು ಸಮರ್ಥವಾಗಿ ನಡೆಸಿಕೊಂಡುಹೋಗಲಾರಂಭಿಸಿಸರು. ದಿನಕಳೆದಂತೆ ಕಂಪೆನಿಯ ವಹಿವಾಟುಗಳನ್ನು ಯಾವ ಅಡಚನೆಯೂ ಇಲ್ಲದೆ ನಡೆಸಲು ಜಮೀನನ್ನು ಕೊಂಡು ಅಲ್ಲಿ ತಮ್ಮ ವಸಾಹತುಗಳನ್ನು ನಿರ್ಮಿಸಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡರು. ಅವರ ಚಟುವಟಿಕೆಗಳನ್ನು ೨ ಭಾಗವಾಗಿ ವಿಂಗಡಿಸಲ್ಲ್ಪಟ್ಟಿವೆ.

ಸೇಂಟ್ ಮೇರಿ ಚರ್ಚ್ ಬದಲಾಯಿಸಿ

ದೇಶದಲ್ಲೇ ಬ್ರಿಟಿಷರು ನಿರ್ಮಿಸಿದ ಇಂದಿಗೂ ಕಾರ್ಯಚಟುವಟಿಕೆಯಲ್ಲಿರುವ ಅತಿ ಹಳೆಯ 'ಆಂಗ್ಲಿಕನ್ ಇಗರ್ಜಿ'ಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸುಂದರ ವಾಸ್ತುಶಿಲ್ಪದ ಕಟ್ಟಡ ಸನ್ ೧೬೮೦ ರಲ್ಲಿ ನಿರ್ಮಿಸಲ್ಪಟ್ಟಿತು. ಹೊರಾಂಗಣದಲ್ಲಿ ರುವ ’ಸ್ಮಶಾನದಲ್ಲಿ ಸಮಾಧಿಗಳು ಅತಿ ಪ್ರಾಚೀನವಾದವುಗಳು. ಮತ್ತೊಂದು ೧೫೦ ಅಡಿ ಎತ್ತರದ ಗೋಪುರ ಟೀಕ್ ಮರದಲ್ಲಿ ನಿರ್ಮಿಸಲ್ಪಟ್ಟಿದೆ. 'ಪೂರ್ವದ ವೆಸ್ಟ್ ಮಿನ್ಸ್ಟರ್ ಅಬ್ಬೆ 'ಎಂದು ಹೆಸರಾಗಿದೆ.

ಫೋರ್ಟ್ ವಸ್ತು ಸಂಗ್ರಹಾಲಯ ಬದಲಾಯಿಸಿ

ಬಹು ಮೆಚ್ಚಿಗೆ ಪಡೆದ ತಾಣವನ್ನು , ವಿದ್ಯಾರ್ಥಿಗಳು ಸಂಶೋಧನೆಗಾಗಿ, ತಮ್ಮ ಹೆಚ್ಚಿನ ವ್ಯಾಸಂಗಕ್ಕೆ ಉಪಯೋಗವನ್ನು ಪಡೆಯುತ್ತಿದ್ದಾರೆ. ಸನ್. ೧೭೯೫ ರಲ್ಲಿ ಕಟ್ಟಡದ ಕಾರ್ಯ ಮುಗಿಯಿತು. 'ಮದ್ರಾಸ್ ಬ್ಯಾಂಕ್ 'ಆಗಿ ಕಾರ್ಯ ನಿರ್ವಹಿಸಿತ್ತು. ಸಾರ್ವಜನಿಕ ಕೂಟಗಳಿಗೆ, ಸಮಾರಂಭಗಳಿಗೆ ಎಡೆಮಾಡಿಕೊಟ್ಟಿತ್ತು. ಕಂಪೆನಿ ಸರ್ಕಾರಕ್ಕೆ ಸೇರಿದ, ಬ್ರಿಟಿಷ್ ಕಾಲೋನಿಯ ಕಾಲದ ಪುರಾತನ ನಾಣ್ಯಗಳು, ಪದಕಗಳು, ಚಿತ್ರಕಲಾಮಾದರಿಗಳು, ಕೈಬರಹದ ಪ್ರತಿಗಳು, ಅತ್ಯಂತ ಸಮರ್ಪಕವಾಗಿ ಕಪಾಟುಗಳಲ್ಲಿ ಸಜಾಯಿಸಿ ಇಡಲಾಗಿದೆ. ಕೋಟೆಯ ಪರಿಸರದಲ್ಲೇ ಅಂದಿನ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯ ಹೆಸರಿನಲ್ಲಿ, ’ವೆಲ್ಲೆಸ್ಲಿ ಹೌಸ್' ಎಂಬ ಹೆಸರಿನ ಒಂದು 'ಬ್ಯಾಂಕ್ವೆಟ್ ಹಾಲ್' ಇದೆ.

ಲಾರ್ಡ್ ಕಾರನ್ವಾಲೀಸ್ ನ ಪ್ರತಿಮೆ ಬದಲಾಯಿಸಿ

೧೪.೫ ಅಡಿ ಎತ್ತರದ ಲಾರ್ಡ್ ಕಾರನ್ವಾಲಿಸ್ ಪ್ರತಿಮೆ, ಕಟ್ಟಡದ ಮುಂದೆಯೇ ಸ್ಥಾಪಿಸಲಾಗಿದೆ. ಮ್ಯೂಸಿಯಂ ಕಲೆಯ ಆಗರವಾಗಿದೆ. ಆ ವಿಶೇಷ ಮೂರ್ತಿಗಳು, ಪತಿಮೆಗಳನ್ನೆಲ್ಲಾ ಬ್ರಿಟನ್ ನಿಂದ ಹಡಗಿನಲ್ಲಿ ತರಿಸಿಕೊಳ್ಳಲಾಯಿತು. ಈಸ್ಟ್ ಇಂಡಿಯ ಕಂಪೆನಿಯ ಅಧಿಕಾರಿಗಳು ಟಿಪ್ಪು ಸುಲ್ತಾನ್ ಜೊತೆ ಅವನ ಇಬ್ಬರು ಮಕ್ಕಳಿರುವ ಇರುವ ಕೆಲವು ಕಲೆಯ ಪ್ರಕಾರಗಳಿವೆ. ಈ ಮ್ಯೂಸಿಯಂ, ಭಾರತೀಯ ಸೈನ್ಯಕ್ಕೆ ಒಂದು ಮೂಲಸ್ಥಾನವಾಗಿ ಸೇವೆಸಲ್ಲಿಸುತ್ತಿದೆ. ಸ್ವತಂತ್ಯಾನಂತರ, ಭಾರತೀಯ ಪುರಾತನ ವಸ್ತು ಸಂರಕ್ಷಣಾ ಇಲಾಖೆಯವರು, ಈ ವಸ್ತುಸಂಗ್ರಹಾಲಯದ ಕಾರ್ಯಕ್ರಮಗಳನ್ನು ಅತ್ಯಂತ ಸಮರ್ಥವಾಗಿ ನೋಡಿಕೊಳ್ಳುತ್ತಿದ್ದಾರೆ.