ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34 (ಪಿಎಸ್ಎಲ್ವಿ)

ಪಿಎಸ್‌ಎಲ್‌ವಿ–ಸಿ 34 ರಾಕೆಟ್ ಬದಲಾಯಿಸಿ

 
ಪಿಎಸ್`ಎಲ್`ವಿ.ಯ ಮಾದರಿ ಚಿತ್ರ
  • ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ದಿ.22-6-2016 ಬುಧವಾರ ಬೆಳಿಗ್ಗೆ 9.26ಕ್ಕೆ, ‘ಕಾರ್ಟೊಸ್ಯಾಟ್–2’ ಒಳಗೊಂಡ ಒಟ್ಟು 20 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಉಡಾವಣೆ ಮಾಡಿತು. ನಗರ, ಗ್ರಾಮೀಣ ಮತ್ತು ಕಡಲ ತೀರದ ಪ್ರದೇಶಗಳಲ್ಲಿ ಕೃಷಿ, ಪರಿಸರ, ಸಂವಹನ, ಜಲ ಪೂರೈಕೆ, ಭೂಬಳಕೆ ನಕ್ಷೆಯೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಹಿತಿ ಕ್ರಾಂತಿಯನ್ನು ಸೃಷ್ಟಿಸಬಲ್ಲ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ 34 ರಾಕೆಟ್, ನಭಕ್ಕೆ ಯಶಸ್ವಿ ಹಾರಿತು. ಹೀಗೆ 20 ಉಪಗ್ರಹಗಳನ್ನು ಒಟ್ಟಿಗೆ ಅಂತರಿಕ್ಷಕ್ಕೆ ಕಳಿಸಿ ಹೊಸ ದಾಖಲೆ ರಚಿಸುತ್ತದೆ.
ಪಿಎಸ್‌ಎಲ್‌ವಿ–ಸಿ 34 ರಾಕೆಟ್
  • ಹೆಸರು = ಪಿಎಸ್‌ಎಲ್‌ವಿ–ಸಿ 34 ರಾಕೆಟ್
  • ಯೋಜನಾ ಉದ್ದೇಶ = 20ಉಪಗ್ರಹ ಉಡಾವಣೆ
  • ಆಯೋಜಕರು = ಇಸ್ರೊ
  • ಕ್ರಿಯಾಯೋಜನೆಯ ಕಾಲ =26 ನಿ.30ಸೆ.
  • ರಾಕೆಟ್ ವಾಹಕ = ಪಿಎಸ್‌ಎಲ್‌ವಿ -34
  • ತಯಾರಕರು =ಭಾರತೀಯ ಬಾಹ್ಯಾಕಾಶ ಸ0ಶೋಧನಾ ಸಂಸ್ಥೆ
  • ಜಿಗಿತದ ತೂಕ =3200 ಕ್ವಿಂಟಾಲು
  • ಉಡಾವಣೆ ದಿನ =22-6- 2016.ಬೆಳಿಗ್ಗೆ 9.25
  • ಉಡಾವಣೆ ಸ್ಥಳ = ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ : ಶ್ರೀಹರಿಕೋಟಾ
  • ಉಡಾವಣೆ ಗತ್ತಿಗೆದಾರ = ಇಸ್ರೊ
  • 20 ಉಪಗ್ರಹಗಳ ಒಟ್ಟು ತೂಕ=1288 ಕೆ.ಜಿ.
  • 1).ಕಾರ್ಟೊಸ್ಯಾಟ್ 3 :ತೂಕ :727.5 ಕೆ.ಜಿ.
  • 2) 12 ಡೋವ್ ಉಪಗ್ರಹ = ತಲಾ 4.7ಕೆ.ಜಿ.
  • 3)ಸತ್ಯಭಾಮಾ =1 ಕ.ಜಿ.
  • 4)ಸ್ವಯಮ್ =1 ಕೆ.ಜಿ
  • 5. ವಿದೇಶೀ ಉಪಗ್ರಹ
  • 1.ಯು.ಎಸ್; 2.ಕೆನಡ; 3. ಜೆರ್ಮನಿ;
4.ಇಂಡೋನೇಷ್ಯಾ; 5 ಕೆನಡದ 2 ಕಂಪನಿ;
6.ಜೆರ್ಮನಿಯ ಬ್ರೊಯಿಸ್`ಕಂ. ;
7.ಸ್ಕೈ ಸ್ಯಾಟ್ ವಂಶ 2-1 ;
8.ಯು.ಎಸ್`ನ = 12 ಕಪೋತ ಉಪಗ್ರಹ

ಉಡಾವಣಾ ವೆಚ್ಚ = ಇತರೆ ದೇಶದ ದರದ 1/10 ಭಾಗ

  • ಆಧಾರ:[1]
.


  • ಆ ಮೂಲಕ ಏಕಕಾಲಕ್ಕೆ ಬರೊಬ್ಬರಿ 20 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ವಿಶ್ವದ 2ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಹಿಂದೆ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಗ್ರಹಗಳ ಉಡಾವಣೆ ಮಾಡಿದ ದಾಖಲೆ ರಷ್ಯಾ ಹೆಸರಲ್ಲಿದ್ದು, ರಷ್ಯಾದ ಡ್ನೆಪರ್ ಸಿಲೋ ರಾಕೆಟ್ ಮೂಲಕ 2014ರ ಜೂನ್ 19 ರಂದು 33 ಉಪಗ್ರಹಗಳನ್ನು ಒಂದೇ ಬಾರಿ ಉಡಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲು 2013ರ ನವೆಂಬರ್‌ನಲ್ಲಿ 32 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಇದರಲ್ಲಿ 5 ಕಿಲೋದಿಂದ ಹಿಡಿದು 100 ಕಿಲೋಗ್ರಾಂವರೆಗೆ ತೂಕವಿರುವ ಉಪಗ್ರಹಗಳಿದ್ದವು.
  • ಕಾರ್ಟೊಸ್ಯಾಟ್‌–2 ಉಪಗ್ರಹ 727.5 ಕೆ.ಜಿ.ಯ ತೂಕ ಹೊಂದಿದೆ. ಅಲ್ಲದೇ, ಅಮೆರಿಕ, ಕೆನಡಾ, ಜರ್ಮನಿ, ಇಂಡೋನೇಷ್ಯಾ ರಾಷ್ಟ್ರಗಳ ಉಪಗ್ರಹಗಳು ಇದರಲ್ಲಿ ಸೇರಿವೆ. ಈ ಮೂಲಕ ಒಂದೇ ರಾಕೆಟ್ ಮೂಲಕ ಅತಿ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ 2ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.[೧]

[೨]

  • ಹರ್ಷದ ಘಟನೆ:ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಲ್ಲಿ ನಿಗದಿಯಂತೆ 9.26ಕ್ಕೆ ಸರಿಯಾಗಿ 44.4 ಮೀಟರ್ ಉದ್ದ ಮತ್ತು 320 ಟನ್ ಭಾರದ ಪಿಎಸ್‌ಎಲ್‌ವಿ-34 ಲಾಂಚರ್ (ವೊಲಾರ್ ಸೆಟಲ್ಲೈಟ್ ಲಾಂಚ್ ವೆಹಿಕಲ್) ಒಟ್ಟು 1,288 ಕೆಜಿ ತೂಕದ 20 ಉಪಗ್ರಹಗಳನ್ನು ಹೊತ್ತು ಭಾರೀ ಶಬ್ದದೊಂದಿಗೆ ಗಗನದತ್ತ ರಭಸವಾಗಿ ಚಿಮ್ಮುತ್ತಿದ್ದಂತೆ ವಿಜ್ಞಾನಿಗಳು, ಅಧಿಕಾರಿಗಳು ಸೇರಿದಂತೆ ನೆರೆದಿದ್ದ ನೂರಾರು ಜನ ಹರ್ಷೋದ್ಗಾರ ಮಾಡಿದರು.[೩]

ಇತಿಹಾಸ ಬದಲಾಯಿಸಿ

  • ಸಾಮಾನ್ಯವಾಗಿ ಒಂದು ರಾಕೆಟ್‌ನಲ್ಲಿ ಒಂದೇ ಉಪಗ್ರಹವನ್ನು ಉಡಾವಣೆ ಮಾಡಿದ್ದೇ ಹೆಚ್ಚು. ಆದರೂ ಕೆಲವೊಮ್ಮೆ ವಿವಿಧ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಕೂರಿಸಿದ ಖ್ಯಾತಿ ಇಸ್ರೋಗಿದೆ. 2008 ಏಪ್ರಿಲ್‌ನಲ್ಲಿ ಪಿಎಸ್‌ಎಲ್‌ವಿ ಸಿ 34 ರಾಕೆಟ್‌ ಬಳಸಿ ಇಸ್ರೋ 10ದೇಶ-ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಒಂದು ಸಾಧನೆ. 2015ರಲ್ಲಿ ಮೂರು ಬಾರಿ ಜುಲೈನಲ್ಲಿ 5, ಸೆಪ್ಟೆಂಬರ್‌ನಲ್ಲಿ 7, ಡಿಸೆಂಬರ್‌ನಲ್ಲಿ 6 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಿದ್ದೂ ದಾಖಲೆಯಾಗಿದೆ. ಇದರ ಪೂರ್ವದಲ್ಲೂ ಏಕಕಾಲದಲ್ಲಿ ಹಲವು ಉಪಗ್ರಹ ಉಡಾವಣೆ ಮಾಡಿದ ಅನುಭವವನ್ನು ಇಸ್ರೋ ಹೊಂದಿತ್ತು.ಈ ಕುರಿತ ತಂತ್ರಜ್ಞಾನವನ್ನೂ ಇಸ್ರೋ ಹೊಂದಿದ್ದು, ಹೆಚ್ಚು ಹೆಚ್ಚು ಉಪಗ್ರಹಗಳ ಉಡಾವಣೆಗೆ ಸಹಕಾರಿಯಾಗಿದೆ.
*ಫೋಟೊ:[[https://web.archive.org/web/20160624020434/http://www.udayavani.com/kannada/news/specials/154610/isro-the-rocket-20-satellite Archived 2016-06-24 ವೇಬ್ಯಾಕ್ ಮೆಷಿನ್ ನಲ್ಲಿ.]]

ಒಂದೇ ಬಾರಿಗೆ ಹಲವು ಉಪಗ್ರಹ ಉಡಾವಣೆ ವಿಧಾನ ಬದಲಾಯಿಸಿ

  • ಒಂದು ರಾಕೆಟ್‌ನಲ್ಲಿ ಒಂದು ಉಪಗ್ರಹ ಉಡಾವಣೆಯ ತಂತ್ರಜ್ಞಾನ ವಿಶ್ವದ ಹಲವು ದೇಶಗಳಿಗೆ ಇನ್ನೂ ಲಭ್ಯವಾಗಿಲ್ಲ. ಆದರೆ ಇಸ್ರೋ, ಈ ವಿಚಾರದಲ್ಲಿ ಗಟ್ಟಿಗನೆನಿಸಿಕೊಂಡಿದೆ. ಸದ್ಯ ಏಕಕಾಲಕ್ಕೆ ಹಲವು ಉಪಗ್ರಹ ಉಡಾವಣೆಗೆ ಇಸ್ರೋ ತನ್ನ ಅತಿ ಯಶಸ್ವಿ ರಾಕೆಟ್‌ ಪಿಎಸ್‌ಎಲ್‌ವಿ ಸಿ-34 ಮಾದರಿಯ ರಾಕೆಟ್‌ ಅನ್ನು ಬಳಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ರಾಕೆಟ್‌ನ ಕೊನೆಯ ಹಂತದ ಬಳಿಕ (ತುದಿಯಲ್ಲಿ) ಉಪಗ್ರಹಗಳನ್ನು ಇಡಲಾಗುತ್ತದೆ. ದೊಡ್ಡ ಉಪಗ್ರಹಗಳನ್ನು ಮೇಲ್ಭಾಗದಲ್ಲೂ, ಅದರ ಕೆಳಭಾಗದಲ್ಲಿ ಇತರ ಸಣ್ಣ ಉಪಗ್ರಹಗಳನ್ನೂ ಇಡಲಾಗುತ್ತದೆ. (ಟಿಫಿನ್‌ ಬಾಕ್ಸ್‌ ಮಾದರಿ ಪೇರಿಸಿ ಇಟ್ಟಂತೆ, ಇದನ್ನು ಸ್ಯಾಟಲೈಟ್‌ ಪ್ಯಾಕೇಜ್‌ ಎನ್ನುತ್ತಾರೆ) ಅಂತರಿಕ್ಷಕ್ಕೆ ತಲುಪುತ್ತಿದ್ದಂತೆ ವಿಶಿಷ್ಟ ತಂತ್ರಜ್ಞಾನದ ಮೂಲಕ ಪ್ರತಿಯೊಂದು ಒಂದಾದ ಮೇಲೊಂದರಂತೆ ಕಳಚಿಕೊಳ್ಳುತ್ತದೆ. "ಸ್ಯಾಟಲೈಟ್‌ ಪ್ಯಾಕೇಜ್‌' ಎಂಬ ಉಪಗ್ರಹ ಪೇರಿಸುವ ಮೂರು ವಿಧಾನಗಳು ಸದ್ಯ ಚಾಲ್ತಿಯಲ್ಲಿವೆ. ಇದರೊಂದಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಉಪಗ್ರಹಗಳನ್ನು ಕಕ್ಷೆಯಲ್ಲಿ ಸ್ಥಾಪಿಸುವುದನ್ನು ಕ್ರಮಬದ್ಧವಾಗಿ ನಡೆಸುವುದು, ಎಲ್ಲಾ ಉಪಗ್ರಹಗಳನ್ನು ರಾಕೆಟ್‌ ಒಳಗೆ ಜೋಡಿಸುವುದು ಸವಾಲು.
  • ೨೨-ಜೂನ್ ೨೦೧೬- ಬೆಳಗ್ಗೆ 9.25ಕ್ಕೆ ಪಿಎಸ್‌ಎಲ್‌ವಿ ಸಿ34 ರಾಕೆಟ್‌ ಶ್ರೀಹರಿಕೋಟಾದಿಂದ ಉಡ್ಡಯನ. ಅದಾಗಿ 26 ನಿಮಿಷ 30 ಸೆಕೆಂಡ್‌ನ‌ಲ್ಲಿ ರಾಕೆಟ್‌ ನಭಕ್ಕೇರಿ ಉಪಗ್ರಹಗಳನ್ನು ಕಕ್ಷೆಗೆ ಬಿಟ್ಟಿದೆ. ಮೊದಲು ಇಸ್ರೋ ನಿರ್ಮಿತಿಯ ಕಾಟೋìಸ್ಯಾಟ್‌-2 ಉಪಗ್ರಹ ಪ್ರತ್ಯೇಕಗೊಳ್ಳಲಿದ್ದು, ನಂತರ ಪುಟಾಣಿ 12 ಡೋವ್‌ ಉಪಗ್ರಹಗಳು ಪ್ರತ್ಯೇಕಗೊಳ್ಳಲಿವೆ.

ಸ್ಥಾಪನೆ ಬದಲಾಯಿಸಿ

  • ಪಿಎಸ್‌ಎಲ್‌ವಿಯು ನಿಗದಿತ ಸಮಯಕ್ಕೆ ಸರಿಯಾಗಿ, ‘ಧ್ರುವೀಯ ಸೂರ್ಯ ಸ್ಥಾಯಿ ಕಕ್ಷೆ’ಯಲ್ಲಿ ಅಂದರೆ ಭೂಮಿಯಿಂದ 508 ಕಿ.ಮೀ ಎತ್ತರದಲ್ಲಿ ಭೂಸಮಭಾಜಕಕ್ಕೆ 97.5 ಡಿಗ್ರಿ ಕೋನದಲ್ಲಿ ಉಪಗ್ರಹಗಳನ್ನು ನೆಲೆಗೊಳಿಸಿತು.
  • ನಾಲ್ಕನೇ ಹಂತದ ಪ್ರಜ್ವಲನೆ ಬಳಿಕ ಪಿಎಸ್‌ಎಲ್‌ವಿಯಿಂದ ಬೇರ್ಪಟ್ಟ ಎಲ್ಲ 20 ಉಪಗ್ರಹಗಳೂ ಕೇವಲ ಹತ್ತು ನಿಮಿಷಗಳ ಅವಧಿಯಲ್ಲಿ ನಿಗದಿತ ತಮ್ಮ ಕಕ್ಷೆಗಳಲ್ಲಿ ನೆಲೆ ನಿಂತವು. ಈ ಎಲ್ಲ ಉಪಗ್ರಹಗಳು ಧ್ರುವದಿಂದ ಧ್ರುವಕ್ಕೆ ವೃತ್ತಾಕಾರದಲ್ಲಿ ಪರಿಭ್ರಮಣ ನಡೆಸುತ್ತವೆ. ಅಂದರೆ, ನಿರ್ದಿಷ್ಟ ಸಮಯದಲ್ಲಿ ಭೂಮಿಯ ಗೊತ್ತಾದ ಪ್ರದೇಶದ ಮೇಲೆ ಸರದಿಯಲ್ಲಿ ಹಾದು ಹೋಗುವಂತೆ ಉಪಗ್ರಹಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ.[೪]

ಸ್ಥಾಪನೆ ಬದಲಾಯಿಸಿ

  • ಪಿಎಸ್‌ಎಲ್‌ವಿಯು ನಿಗದಿತ ಸಮಯಕ್ಕೆ ಸರಿಯಾಗಿ, ‘ಧ್ರುವೀಯ ಸೂರ್ಯ ಸ್ಥಾಯಿ ಕಕ್ಷೆ’ಯಲ್ಲಿ ಅಂದರೆ ಭೂಮಿಯಿಂದ 508 ಕಿ.ಮೀ ಎತ್ತರದಲ್ಲಿ ಭೂಸಮಭಾಜಕಕ್ಕೆ 97.5 ಡಿಗ್ರಿ ಕೋನದಲ್ಲಿ ಉಪಗ್ರಹಗಳನ್ನು ನೆಲೆಗೊಳಿಸಿತು.
  • ನಾಲ್ಕನೇ ಹಂತದ ಪ್ರಜ್ವಲನೆ ಬಳಿಕ ಪಿಎಸ್‌ಎಲ್‌ವಿಯಿಂದ ಬೇರ್ಪಟ್ಟ ಎಲ್ಲ 20 ಉಪಗ್ರಹಗಳೂ ಕೇವಲ ಹತ್ತು ನಿಮಿಷಗಳ ಅವಧಿಯಲ್ಲಿ ನಿಗದಿತ ತಮ್ಮ ಕಕ್ಷೆಗಳಲ್ಲಿ ನೆಲೆ ನಿಂತವು. ಈ ಎಲ್ಲ ಉಪಗ್ರಹಗಳು ಧ್ರುವದಿಂದ ಧ್ರುವಕ್ಕೆ ವೃತ್ತಾಕಾರದಲ್ಲಿ ಪರಿಭ್ರಮಣ ನಡೆಸುತ್ತವೆ. ಅಂದರೆ, ನಿರ್ದಿಷ್ಟ ಸಮಯದಲ್ಲಿ ಭೂಮಿಯ ಗೊತ್ತಾದ ಪ್ರದೇಶದ ಮೇಲೆ ಸರದಿಯಲ್ಲಿ ಹಾದು ಹೋಗುವಂತೆ ಉಪಗ್ರಹಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ.[೪]

ಕಾರ್ಟ್ರೋ ಸ್ಯಾಟ್ 2 ಸರಣಿ ಬದಲಾಯಿಸಿ

ಕಾರ್ಟ್ರೋ ಸ್ಯಾಟೇ ಅತಿ ದೊಡ್ಡ ಉಪಗ್ರಹ
  • ಪಿಎಸ್‌ಎಲ್‌ವಿ ಸಿ34 ರಾಕೆಟ್‌ ಒಳಗೆ ಇಸ್ರೋದ ಭೂಸರ್ವೇಕ್ಷಣಾ ಉಪಗ್ರಹ ಕಾರ್ಟೋಸ್ಯಾಟ್‌ 2 ಅತಿ ದೊಡ್ಡದು. ಉಡ್ಡಯನದಲ್ಲಿನ ಮುಖ್ಯ ಉಪಗ್ರಹ ಇದು 727.5 ಕೇಜಿ ಭಾರ ಹೊಂದಿದೆ. ಇದರೊಂದಿಗೆ 19 ಪುಟ್ಟ ಉಪಗ್ರಹಗಳಿವೆ. ಇದರಲ್ಲಿ ಜರ್ಮನಿಯ ಬ್ರಿಯೋಸ್‌, ಕೆನಡಾದ ಎಮ್‌3ಎಮ್‌ಸ್ಯಾಟ್‌, ಜಿಎಚ್‌ಎಸ್‌ಸ್ಯಾಟ್‌-ಡಿ, ಅಮೆರಿಕದ ಸ್ಕೈಸ್ಯಾಟ್‌ ಜೆನ್‌2-1 (ಗೂಗಲ್‌ನದ್ದು) ಮತ್ತು 12 ಡೋವ್‌ ಉಪಗ್ರಹಗಳು, ಇಂಡೋನೇಷ್ಯಾದ ಲಾಪಾನ್‌-ಎ3 ಉಪಗ್ರಹಗಳಿವೆ. ಜೊತೆಗೆ 2 ವಿದ್ಯಾರ್ಥಿ ಉಪಗ್ರಹಗಳು ಚೆನ್ನೈ ಸತ್ಯಭಾಮಾ ವಿವಿ ಮತ್ತು ಪುಣೆ ಕಾಲೇಜ್‌ ಆಫ್ ಎಂಜಿನಿಯರಿಂಗ್‌ನ ಪುಟಾಣಿ ಉಪಗ್ರಹಗಳಿವೆ. ಈ ಎಲ್ಲಾ[೫]

ಕಾರ್ಟೋಸ್ಯಾಟ್-2ಸಿ ಬದಲಾಯಿಸಿ

  • ಇಸ್ರೋ 2007ರಲ್ಲಿ ಉಡಾವಣೆ ಮಾಡಿರುವ ಕಾರ್ಟೋಸ್ಯಾಟ್-2ಎ ಗೆ ಹೋಲಿಸಿದರೆ ಕಾರ್ಟೋಸ್ಯಾಟ್ 2ಸಿ (Cartosat-2 satellite for earth observation) ಉಪಗ್ರಹ ಮಾಹಿತಿ ಕ್ರಾಂತಿಯನ್ನೇ ಸೃಷ್ಟಿಸಲಿದೆ. ಬಾಹ್ಯಾಕಾಶದಿಂದ ಭೂಮಿಯ ಮೇಲೆ ನಿಗಾವಹಿಸಲಿರುವ ಈ ಉಪಗ್ರಹ ಗಡಿಭಾಗ ಹಾಗೂ ಕರಾವಳಿ ಪ್ರದೇಶ, ಹವಾಮಾನ, ಕೃಷಿ, ಭೂ ನಕ್ಷೆ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಿದೆ. ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಲಿದ್ದು, ನೆರೆರಾಷ್ಟ್ರಗಳಿಂದ ಕ್ಷಿಪಣಿ ಉಡಾವಣೆ ಮಾಡಿದರೂ ಇದು ಮಾಹಿತಿ ನೀಡಲಿದೆ. ಇದನ್ನು ಅಹಮದಾಬಾದ್​ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್(ಎಸ್​ಎಸಿ)ನಲ್ಲಿ ನಿರ್ವಿುಸಲಾಗಿದ್ದು, 690 ಕಿಲೋ ತೂಕವಿದೆ. ಇದು ಹೈ ರೆಸಲೂಷನ್​ನ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 0.65 ರೆಸಲೂಷನ್​ನ ಪ್ಯಾಂಕ್ರೋಮ್ಯಾಟಿಕ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಿಂದ ಫೋಟೋ ಮಾತ್ರವಲ್ಲದೆ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಂಪ್ರೆಸ್ ಮಾಡಿ, ಶೇಖರಿಸಲು ಹಾಗೂ ರವಾನಿಸುವುದಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಅಮೆರಿಕ ಮತ್ತು ಚೀನಾ ಉಪಗ್ರಹಗಳಿಗೆ ಸರಿಸಮವಾಗಿರುವ ಕಣ್ಗಾವಲು ಉಪಗ್ರಹ ಉಡಾವಣೆ ಮಾಡಿದ ಕೀರ್ತಿ ಭಾರತದ್ದಾಗಲಿದೆ. ಚೀನಾ 2014ರಲ್ಲೇ 0.65 ರೆಸಲ್ಯೂಷನ್ ಕ್ಯಾಮೆರಾ ಹೊಂದಿರುವ ‘ಯೋಗಾನ್ 24’ ಉಪಗ್ರಹ ಉಡಾವಣೆ ಮಾಡಿತ್ತು. [೬]

ಗೂಗಲ್ ಉಪಗ್ರಹ ಬದಲಾಯಿಸಿ

  • ವಿದೇಶಿ ಉಪಗ್ರಹಗಳಲ್ಲಿ, ಸ್ಕೈಸ್ಯಾಟ್ ಜೆನ 2-1 (SkySat Gen2-1) ಎಂಬ ಗೂಗಲ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳಿಸಲಾಗುತ್ತದೆಸ್ಕೈಸ್ಯಾಟ್ ಜೆನ 2-1 ವಿನ್ಯಾಸ ಒಂದು ಗೂಗಲ್ ಕಂಪನಿಯ ಟೆರ್ರಾ ಬೆಲ್ಲಾ, ನಿರ್ಮಿಸಿದ ಒಂದು ಭೂಮಿಯ ಚಿತ್ರಣ ಮಾಡುವ ಸಣ್ಣ ಉಪಗ್ರಹವಾಗಿದೆ.
  • ಇದು 110 ಕೆಜಿ ತೂಕದ ಉಪಗ್ರಹ. ಉಪ ಮೀಟರ್ ಪೃಥಕ್ಕರಣದ (sub-meter resolution imagery and HD video) ಚಿತ್ರಣಗಳನ್ನು ಮತ್ತು ಎಚ್`ಡಿ ವಿಡಿಯೋ ಸೆರೆಹಿಡಿಯಲು ಸಮರ್ಥವಾಗಿದೆ.1

ಪ್ರಮುಖ ವಿಷಯಗಳು ಬದಲಾಯಿಸಿ

  • 1.ಭಾರತದ ಭೂ ವೀಕ್ಷಣೆಯ ಈಗಿನ ಉಪಗ್ರಹ, ಕಾರ್ಟೊಸ್ಯಾಟ್ -2 (ಸರಣಿ), ಹಿಂದಿನ ಕಾರ್ಟೊಸ್ಯಾಟ್ -2, 2ಎ ಮತ್ತು 2ಬಿ ಗಳನ್ನು ಹೋಲುತ್ತದೆ.
  • 2.ಪಿಎಸ್ಎಲ್ವಿ ಅ34 ನಭಕ್ಕೆ ಕಳಿಸಿದ ಎಲ್ಲಾ ಉಪಗ್ರಹಗಳ ಒಟ್ಟು ತೂಕ 1,288 ಕೆಜಿ; 19 ಸಹ ಪ್ರಯಾಣಿಕ ಉಪಗ್ರಹಗಳ ತೂಕ 560ಞg,.
  • 3.ಉಡಾಯಿತ ವಿದೇಶಿ ಉಪಗ್ರಹಗಳು: ಲಾಪಾನ್ ಎ3 (LAPAN-A3)(ಇಂಡೋನೇಷ್ಯಾ), ಬೈರೊಸ್ (BIROS)(ಜರ್ಮನಿ), ಎಮ್೩ಎಮ್`ಸ್ಯಾಟ್ (ಕೆನಡಾ), ಸ್ಕೈ ಸ್ಯಾಟ್`ಜ-2-1(Gen2-1) ( (ಯುಎಸ್),ಎಮ್೩ಎಮ್`ಸ್ಯಾಟ್ (M3MSat) (ಕೆನಡಾ), 12 ಕಪೋತ/ಡವ್ (Dove:ಚಿಕ್ಕದು) ಉಪಗ್ರಹಗಳು (ಅಮೇರಿಕಾದ್ದು).
  • 4.ಭಾರತೀಯ ವಿಶ್ವವಿದ್ಯಾಲಯಗಳು ಎರಡು ಚಿಕ್ಕ-ಉಪಗ್ರಹಗಳನ್ನು ಕಳಿಸಿಸಿದವು. ಪುಣೆ ಮಹಾವಿದ್ಯಾಲಯ ‘ ಸ್ವಯಂ’ ಉಪಗ್ರಹವನ್ನೂ ಮತ್ತು ಚೆನೈನ ಸತ್ಯಭಾಮಾ ವಿಶ್ವವಿದ್ಯಾಲಯದಿಂದ ªಸತ್ಯಭಾಮಾ ಸ್ಯಾಟ್`ನ್ನು ಪಿಎಸ್ಎಲ್ವಿ ಅ34 ನಭಕ್ಕೆ ಕಳಿಸಿದೆ.
  • 5. ಪಿಎಸ್ಎಲ್ವಿ ಸಿ34ರ 17 ವಿದೇಶಿ ಉಪಗ್ರಹಗಳು ಸೇರಿದಂತೆ, ಇಸ್ರೋ ಒಟ್ಟು 74 ಉಪಗ್ರಹಗಳನ್ನು ಜಾಗತಿಕ ಗ್ರಾಹಕರಿಗಾಗಿ ಉಡಾಯಿಸಿದೆ.
  • 6.ಈ ಉಡ್ಡಯನ ಪಿಎಸ್ಎಲ್ವಿಯ 36 ನೇ ಯಾನ ಮತ್ತು 14ನೇ ಪಿಎಸ್ಎಲ್ವಿ- ಎಕ್ಸ್ಎಲ್`ನ ಚಂದ್ರಯಾನ ಮತ್ತು ಮಂಗಳ ಯಾನಗಳು ಇಸ್ರೋ (ISRO)ದ ಅತ್ಯಂತ ವಿಶಿಷ್ಟ ಶಕ್ತಿಶಾಲಿ ಕಾರ್ಯವಾದ ಉಡಾಯನ ಆಗಿತ್ತು .
  • 7.ಇಸ್ರೊದ ಹಿಂದಿನ ದಾಖಲೆ; ಏಪ್ರಿಲ್ 28, 2008 ರಂದು ಪಿಎಸ್ಎಲ್ವಿ ಸಿ8,ರ ಮೂಲಕ ಕಕ್ಷೆಗೆ 10 ಉಪಗ್ರಹಗಳನ್ನು ಕಳಿಸಿತ್ತು. ಆಗಿತ್ತು. ಅದೇ ಒಂದು ಅತ್ಯಧಿಕ ಸಂಖ್ಯೆಯ ಉಪಗ್ರಹಗಳನ್ನು ಕಳೀಸಿದ ದಾಖಲೆ ಆಗಿತ್ತು.
  • 8.ನಾಸಾ 2013 ರಲ್ಲಿ 29 ಉಪಗ್ರಹಗಳನ್ನೂ ಮತ್ತು ರಶಿಯಾ 2014 ರಲ್ಲಿ 33 ಉಪಗ್ರಹಗಳನ್ನೂ ಒಂದೇ ಉಡಾವಣೆಯಲ್ಲಿ ಹಾರಿಸಿವೆ.
  • 9. ಇಸ್ರೊ ಸಣ್ಣ ಉಪಗ್ರಹಗಳ ಉಡಾವಣೆಗೆ ಪ್ರಮುಖ ಸೇವಾ-ನೀಡುಗರ (key service provider) ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ.
  • 10.ಪಿಎಸ್ಎಲ್ವಿಯ ಸತತ ಯಶಸ್ಸು ಮತ್ತು ಕಡಿಮೆ ವೆಚ್ಚ, ಈ ಕಾರ್ಯಾಚರಣೆಯ ವಾಣಿಜ್ಯೀಕರಣಕ್ಕೆ ಇಸ್ರೊಕ್ಕೆ ಹೆಚ್ಚಿನ ಶಕ್ತಿ ನೀದಿವೆ.2

ಉಡಾವಣೆಯಾದ ಉಪಗ್ರಗಳ ವಿವರ ಬದಲಾಯಿಸಿ

ಯಾರ ಉಪಗ್ರಹ ಉಪಗ್ರಹಗಳ ವಿವರ
ಭಾರತ (ಸ್ವದೇಶಿ) ಕಾರ್ಟೊ ಸ್ಯಾಟ್‌–2 ಉಪಗ್ರಹ: 725.5 ಕೆ.ಜಿ ತೂಕ
ಇಂಡೋನೇಷ್ಯಾ ಲಾಪಾಸ್ ಎ-3: 120 ಕೆ.ಜಿ.
ಕೆನಡಾ ಎಂ3ಎಂ ಸ್ಯಾಟ್ - 85 ಕೆ.ಜಿ. ಮತ್ತು ಜೆ ಎಚ್ ಸ್ಯಾಟ್-ಡಿ = 25.5 ಕೆ.ಜಿ.
ಜರ್ಮನಿ ಬ್ರಿಯೋಸ್ - 130 ಕೆ.ಜಿ.
ಅಮೇರಿಕ ಸ್ಕೈಸ್ಯಾಟ್` ಜೆನ್`-2-1 110ಕ.ಜಿ.(ಗೂಗಲ್`) +12ಡೋವ್`-ತಲಾ 4.7 ಕೆ.ಜಿ.
ಶೈಕ್ಷಣಿಕ ಉಪಗ್ರಹಗಳು
ಚನ್ನೈನ ಸತ್ಯಭಾಮಾ ವಿದ್ಯಾಲಯ ಸತ್ಯಭಾಮಾ ಸ್ಯಾಟ್` 1.5 ಕೆ.ಜಿ.
ಪುಣೆಯ ಕಾಲೇಜ್ ಆಫ್ ಇಂಜನೀಯರಿಂಗ ಸ್ವಯಂ ಉಪಗ್ರಹ 1 ಕೆ.ಜಿ.

[೭]

ಚಿತ್ರಗಳು ಬದಲಾಯಿಸಿ

ನೋಡಿ ಬದಲಾಯಿಸಿ

ಆಧಾರ ಬದಲಾಯಿಸಿ

  • 1.ದಿ.೨೨-೬-೨೦೧೬:hindustantimes:[[೪]]
  • 2.ದಿ.೨೨-೬-೨೦೧೬:timesofindia:[[೫]]

ಉಲ್ಲೇಖ ಬದಲಾಯಿಸಿ

  1. [[೬]]hindustantimes
  2. [[೭]]kannadaprabha[ಶಾಶ್ವತವಾಗಿ ಮಡಿದ ಕೊಂಡಿ]
  3. "ಆರ್ಕೈವ್ ನಕಲು". Archived from the original on 2016-06-23. Retrieved 2016-06-22.
  4. ೪.೦ ೪.೧ ಏಕಕಾಲಕೆħ-20-ಉಪಗ್ರಹಗಳ-ಉಡಾವಣೆ
  5. [[https://web.archive.org/web/20160624020434/http://www.udayavani.com/kannada/news/specials/154610/isro-the-rocket-20-satellite#PjAXUCslceddSXv4.99 Archived 2016-06-24 ವೇಬ್ಯಾಕ್ ಮೆಷಿನ್ ನಲ್ಲಿ.]]udayavani
  6. http://vijayavani.net/?p=1797324&number=20160622162349[ಶಾಶ್ವತವಾಗಿ ಮಡಿದ ಕೊಂಡಿ]
  7. :w:prajavani.net/article/ಏಕಕಾಲಕೆħ-20-ಉಪಗ್ರಹಗಳ-ಉಡಾವಣೆ|prajavani-೨೩-೬-೨೦೧೬