ಪೈ (ಖಾದ್ಯ)

ಬೇಯಿಸಿದ ಖಾದ್ಯ

ಪೈ ಸಾಮಾನ್ಯವಾಗಿ ಮುಚ್ಚುವ ಅಥವಾ ವಿವಿಧ ಸಿಹಿ ಅಥವಾ ಉಪ್ಪುಖಾರದ ಪದಾರ್ಥಗಳ ಹೂರಣವನ್ನು ಸಂಪೂರ್ಣವಾಗಿ ಒಳಗೊಳ್ಳುವ ಪೇಸ್ಟ್ರಿ ಕಣಕ ಕವಚದಿಂದ ತಯಾರಿಸಲಾದ ಒಂದು ಬೇಕ್ ಮಾಡಲಾದ ಖಾದ್ಯ. ಪೈಗಳನ್ನು ಅವುಗಳ ಪದರಗಳಿಂದ ವ್ಯಾಖ್ಯಾನಿಸಲಾಗುತ್ತದೆ. ಏಕಪದರ ಅಥವಾ ಕೆಳಪದರ ಪೈ ಪೇಸ್ಟ್ರಿ ಪದರವನ್ನು ಬೇಕಿಂಗ್ ಪಾತ್ರೆಯ ಮೇಲೆ ಮತ್ತು ಹೂರಣವನ್ನು ಅದರ ಮೇಲೆ ಹೊಂದಿದ್ದರೆ, ಮೇಲ್ಪದರ ಪೈ ಹೂರಣವನ್ನು ಪಾತ್ರೆಯ ಕೆಳಗೆ ಹೊಂದಿ ಮೇಲೆ ಪೇಸ್ಟ್ರಿ ಅಥವಾ ಇತರ ಹೊದಿಕೆಯನ್ನು ಹೊಂದಿದ್ದರೆ, ದ್ವಿಪದರ ಪೈ ಪೇಸ್ಟ್ರಿ ಕವಚದಲ್ಲಿ ಹೂರಣವನ್ನು ಹೊಂದಿರುತ್ತದೆ. ಪೈಗಳು ತುತ್ತು ಗಾತ್ರದಿಂದ ಹಿಡಿದು ಹಲವು ತುಂಡುಗಳಿಗಾಗಿ ವಿನ್ಯಾಸಗೊಳಿಸಲಾದ ಗಾತ್ರಗಳವರೆಗೆ ವಿವಿಧ ಗಾತ್ರಗಳಲ್ಲಿ ಇರುತ್ತವೆ.