'ಮಹಾಭಾರತ'ದಲ್ಲಿ ಉದ್ಧರಿಸಿರುವ, ಮತ್ತು ಶಿವಪುರಾಣದಲ್ಲೂ ಉಲ್ಲೇಖವಾಗಿರುವ ನೈಮಿಶಾರಣ್ಯ, [೧] ಉತ್ತರ ಪ್ರದೇಶದ 'ಗೋಮತಿ' ನದಿಯ ದಡದಲ್ಲಿದೆ. ನೈಮಿಶಾರಣ್ಯ ನೀಮ್ಸಾರ್, ಸೀತಾಪುರ್ ಜಿಲ್ಲೆಯ ಚಿಕ್ಕ ನಗರ, ಲಖ್ನೊವಿನಿಂದ ೯೦ ಕಿ.ಮೀ ದೂರದಲ್ಲಿದೆ. ಪಾಂಚಾಲ, ಕೋಸಲ ಭೂಭಾಗಗಳ ನಡುವೆ. ಮಹಾಭಾರತದ ಪುರಾಣವನ್ನು ನೈಮಿಶಾರಣ್ಯದಲ್ಲೇ ವಿರಚಿಸಲಾಯಿತು. ಉತ್ತರ ಪ್ರದೇಶ ಪ್ರಮುಖ ಯಾತ್ರಾಸ್ಥಳಗಳಲ್ಲೊಂದು. ದೆಹಲಿ ಲಖ್ನೊ ರಾಷ್ಟ್ರೀಯ ಹೆದ್ದಾರಿ-೨೪ ರಲ್ಲಿದೆ. ಶೌನಕ ಮುನಿ. ವಿಶ್ವಶಾಂತಿಗೆ ಯಾಗ,ಮಾಡಲು ಸೂತ ಮುನಿಗೆ ಉಪದೇಶಮಾಡಿ ಕಥೆಹೇಳುವ ಉಗ್ರಸ್ರವ ಸೌತಿ ಮಹಾಭಾರತ ಕಥೆಯನ್ನು ವಿವರಿಸಿದನು. ಭರತನ ವಂಶದ ಶೌನಕನಿಗೆ ಕೌರವ, ಪಾಂಡವರ ಕಥೆ ಕುರುಕ್ಷೇತ್ರದಲ್ಲಿ ಯುದ್ಧವಾದ ಬಗೆಯನ್ನು ವಿವರಿಸಿ ಹೇಳಿದನು. ಸಂತರು, ಋಷಿಗಳು ಮತ್ತು ತಪಸ್ವಿಗಳು ಕಲಿಯುಗದ ಆಗಮನದಲ್ಲಿ ವಿಶ್ವಕ್ಕೆ ಹಿತವನ್ನು ಆಶಿಸಿ, ಬ್ರಹ್ಮನ ಹತ್ತಿರಬಂದರು. ಕಲಿಯಿಂದ ಪಾರಾಗಿರಲು, ಸ್ಥಳವೊಂದನ್ನು ಅರಸುತ್ತಿರುವಾಗ, ಬ್ರಹ್ಮ ತನ್ನ ಚಕ್ರವನ್ನು ಭೂಮಿಯಮೇಲೆ ಉರುಳು ಬಿಡುತ್ತಾನೆ. ಅದು ಉರುಳುತ್ತಾ ಸಾಗುತ್ತದೆ. ಕೊನೆಗೆ ಅದು ನಿಂತ ಸ್ಥಳವೇ ನೈಮಿಶಾರಣ್ಯ ಕಾನನ. ಅಲ್ಲಿ ತಪಸ್ಸು, ಧ್ಯಾನಗಳನ್ನು ಮಾಡಲು ಅತ್ಯತ್ತುಮ ಸ್ಥಳವೆಂದು ಋಷಿಮುನಿಗಳು ಅಭಿಪ್ರಾಯಪಟ್ಟರು. ರಾಮಾಯಣದಲ್ಲೂ ಇದರ ಉಲ್ಲೇಖವಿದೆ. ಯುದ್ಧಕಾಂಡ ೬ ರಲ್ಲಿ, ಶ್ರೀರಾಮಚಂದ್ರನ ಪುತ್ರರಾದ ಲವ ಕುಶರಿಗೆ, ವಾಲ್ಮಿಕಿ ಮಹರ್ಷಿಗಳು ಕಥೆ ಹೆಳುತ್ತಾರೆ. ನೈಮಿಶಾರಣ್ಯದಲ್ಲಿ 'ಅಶ್ವಮೇಧ ಯಜ್ಞ' ಜರುಗುತ್ತದೆ. ಹೀಗೆ, ಹಲವು ಪುರಾವೆಗಳಿಂದ ನೈಮಿಶಾರಣ್ಯವು, ಉತ್ತರ ಪ್ರದೇಶದ ಸೀತಾಪುರದ ಹತ್ತಿರದ ಅರಣ್ಯವೆಂದು ತಿಳಿದುಬರುತ್ತದೆ. ಆ ಸ್ಥಳದಲ್ಲಿ ಸುಮಾರು ೮೮ ಸಹಸ್ರ ವೈದಿಕರು ತಪಸ್ಸನ್ನು ಆಚರಿಸುತ್ತಿದ್ದರು. ಮರ್ಯಾದಾ ಪುರುಷೋತ್ತಮ, ಶ್ರೀರಾಮ ಒಮ್ಮೆ ಅಲ್ಲಿ ತನ್ನ ಅಶ್ವಮೇಧ ಯಾಗವನ್ನು ಮಾಡಿದನು. ಆಗ ಲವ, ಮತ್ತು ಕುಶರೂ, ಇದ್ದರು. ಮಹಾಭಾರತದ ಸಮಯದಲ್ಲಿ ಈ ಪುಣ್ಯಭೂಮಿಯನ್ನು ಯುಧಿಷ್ಟಿರ ಮತ್ತು ಅರ್ಜುನರಿದ್ದರು. 'ನೈಮಿಶಾರಣ್ಯ,' ಒಂದು ದೊಡ್ಡ ಅರಣ್ಯಪ್ರದೇಶ. ಪ್ರಶಾಂತವಾದ ಜಾಗ ಯಾವ ಸದ್ದುಗದ್ದಲವೂ ಇಲ್ಲದ ನದಿತೀರ ಹುಲ್ಲು ಪ್ರದೇಶ ಮರಗಿಡ ಬಳ್ಳಿ, ಪಶುಪಕ್ಷಿಗಳಿಂದ ಪ್ರದೇಶವಾಗಿತ್ತು. ಹೆದರಿಕೆಯ ಇರಲಿಲ್ಲ. ವಿದ್ಯಾಭ್ಯಾಸ, ತಪಸ್ಸು, ಧ್ಯಾನ, ಮುಂತಾದವುಗಳಿಗೆ ಪ್ರಶಸ್ಥ್ಯವಾದ ಸ್ಥಳವೆಂದು ಅಭಿಪ್ರಾಯವಾಗಿತ್ತು. ಕೂರ್ಮ ಪುರಾಣದಲ್ಲೂ ಇದರ ಉಲ್ಲೇಖವಿದೆ. 'ಬದ್ರಿನಾಥ್' ಮತ್ತು 'ಕೇದಾರ್ನಾಥ್' ಪುಣ್ಯಸ್ಥಳಗಳ ಯಾತ್ರೆಗೆ ಮೊದಲು 'ನೈಮಿಶಾರಣ್ಯದ ಯಾತ್ರೆ' ಅತಿಮುಖ್ಯವಾದದ್ದು ಎಂದು ಅಭಿಪ್ರಾಯಹೊಂದಿದ್ದಾರೆ.

Naimisaranya
ಭೂಗೋಳ
ದೇಶIndia
ರಾಜ್ಯಉತ್ತರ ಪ್ರದೇಶ
ಸ್ಥಳನೈಮಿಷಾರಣ್ಯ
ಸಂಸ್ಕೃತಿ
ಮುಖ್ಯ ದೇವರುDeva Rajan
(Vishnu)
ಮುಖ್ಯ ದೇವಿPundarikavallai
(Lakshmi)
ಕವಿಗಳುTirumangai Alvar


ಚಿತ್ರ:P32.JPG
'ಸ್ಥಳ ಮಹಾತ್ಮೆ'
ಚಿತ್ರ:P35.JPG
'ಶ್ರೀರಾಮ, ಲಕ್ಷ್ಮಣ, ಸೀತಾ ಮಂದಿರ'
ಚಿತ್ರ:P3280069.JPG
'ಸೂತ ಮಹಾಮುನಿಗಳು ಕೂಡುವ ಸ್ಥಾನ'
ಚಿತ್ರ:P3280075.JPG
'ಚಕ್ರತೀರ್ಥ'

ಸತ್ಯನಾರಾಯಣ ಕಥೆ ಬದಲಾಯಿಸಿ

ಸ್ಕಾಂದ ಪುರಾಣದಲ್ಲಿ ’ಸತ್ಯನಾರಾಯಣ ಕಥೆ’ಯನ್ನು ನೀಮ್ಸಾರ್ ತೀರ್ಥದ ಹತ್ತಿರವೇ ನೆರವೇರಿಸಿದ್ದು. ಮಹರ್ಷಿ ವ್ಯಾಸ ಮಹಾಮುನಿಗಳು, ಈ ಕ್ಷೇತ್ರದಲ್ಲಿ ವಿರಚಿಸಿದರು. ಪುರಾಣಗಳನ್ನು ಪುಣ್ಯ ಕಥೆಗಳನ್ನು ಸತ್ಯನಾರಾಯಣ ಕಥೆಯ ಮೊದಲ ಸಾಲುಗಳು, " एकदा नैमिशारंये ऋषयः शौनकादयः " ಇಲ್ಲಿಂದಲೇ ಶುರುವಾಗಿದ್ದು. ೧೬ ನೆಯ ಶತಮಾನದಲ್ಲಿ ’ಐನೆ ಅಕ್ಬರಿ’ ಎಂಬ ಉರ್ದು ಗ್ರಂಥದಲ್ಲಿ ಹಲವಾರು ಸಂಗತಿಗಳನ್ನು ವಿವರಿಸಲಾಗಿದೆ. ಶ್ರೀಕೃಷ್ಣ, ಅಣ್ಣ ಬಲರಾಮ ಭೆಟ್ಟಿಮಾಡಿದ್ದು ಇಲ್ಲೇ ; ಹಾಗೂ ಯಜ್ಞವನ್ನು ನೆರವೇರಿಸಿದನು.

ಗೋಸ್ವಾಮಿ ತುಳಸೀದಾಸರ ರಾಮಚರಿತ ಮಾನಸಗ್ರಂಥ ಬದಲಾಯಿಸಿ

'ಗೋಸ್ವಾಮಿ ತುಳಸಿದಾಸ'ರು ತಮ್ಮ 'ರಾಮಚರಿತಮಾನಸ' ಗ್ರಂಥದಲ್ಲಿ ಇದರ ಪ್ರಾಮುಖ್ಯತೆಯನ್ನು ಬಣ್ಣಿಸಿದ್ದಾರೆ. ನೈಮಿಷವೆಂಬ ಅಡವಿಯ ಹೆಸರಿನಿಂದ ನೈಮಿಶಾರಣ್ಯ ತೀರ್ಥವೆಂದು ಗುರುತಿಸಲಾಗಿದೆ. ಮಹಾಭಾರತದ ಯುದ್ಧದ ಬಳಿಕ, ಯತಿಗಳು, ಮರ್ಷಿಗಳು ಸಂತರು, ಮುಂದೆ ಕಲಿಯುಗದ ಆಗಮನದ ಮೇಲೆ ಆಗುವ, ಅಧರ್ಮ, ಅತ್ಯಾಚಾರ, ಅನಾಸ್ತಿಕತೆಗಳ ಬಗ್ಗೆ ವಿಚಲಿತರಾಗಿ, ಬ್ರಹ್ಮದೇವರ ಬಳಿ ಮೊರೆಹೋದರು ಕಲಿಯುಗದ ವೈಷಮ್ಯ, ಅಧಿಕಾರದಾಹ, ಮತ್ತು ಅಧರ್ಮಗಳ ಅರಿವು ಅವರಿಗಾಗಿತ್ತು. ಚಕ್ರತೀರ್ಥಕ್ಕೆ ಭಕ್ತರು ಆಗಮಿಸಿ ದರ್ಶನಪಡೆಯುತ್ತಾರೆ.

  • ಭೂತೇಶ್ವರ ದೇವಸ್ಥಾನ,
  • ವ್ಯಾಸಗದ್ದಿ,
  • ಹವನಕುಂಡ್,
  • ಲಲಿತಾದೇವಿ ದೇವಾಲಯ,
  • ಪಂಚ ಪ್ರಾಯಾಗ್,
  • ಶೇಷ್ ದೇವಾಲಯ,
  • ಶಿವಾಲಯ, ಭೈರವ್ ಮಂದಿರ,
  • ಸೂತ ಗದ್ದಿ,
  • ಶ್ರೀ ಹನುಮಾನ್ ಗರ್ಹಿ,

ಮೊದಲಾದ ಕೆಲವು ಪುಣ್ಯ ಸ್ಥಳಗಳಿವೆ. ಮಿಶ್ರಿಖ್ ೧೦ ಕಿ.ಮೀ ದೂರದಲ್ಲಿದೆ.

ಚಕ್ರತೀರ್ಥ ಬದಲಾಯಿಸಿ

'ದುಂಡನೆಯ ಶೈಲಿಯ ಪವಿತ್ರ ಸರೋವರ'. ಇಲ್ಲಿನ ಸರೋವರದಲ್ಲಿ ಭಕ್ತರು ಮಿಂದು, ದೇವತೆಗಳನ್ನು ಪೂಜಿಸುತ್ತಾರೆ. ಮಹಾಭಾರತದಲ್ಲಿ, ಬ್ರಹ್ಮ ಮತ್ತು ಸ್ಕಾಂದ ಪುರಾಣದಲ್ಲಿ ಇದರ ಬಗ್ಗೆ ತಿಳಿಸಿದೆ. ಈ ಪುಷ್ಕರಣಿಯ ಸುತ್ತಮುತ್ತಲೂ ಪುರಾತನ ದೇವಾಲಯಗಳಿವೆ. ಸರೋವರದ ದ್ವಾರ ಸುಂದರವಾಗಿದೆ. ಬ್ರಹ್ಮದೇವರು ಬಿಟ್ಟ ಚಕ್ರ ಇಲ್ಲಿ ನೆಲೆನಿಂತಿತು. ಮತ್ತು ಭೂಗರ್ಭದಲ್ಲಿ ಲೀನವಾಯಿತು. ಆದರೆ, ಈ ಭೂಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿತ್ತು. ಹಾಗಾಗಿ ಇಲ್ಲಿನ ಜಾಗವೆಲ್ಲಾ ನೀರಿನಿಂದ ಅವೃತವಾಯಿತು. ಋಷಿಗಳು ಪುನಃ ಬ್ರಹ್ಮನನ್ನು ಕುರಿತು ತಪಸ್ಸನ್ನು ಆಚರಿಸಿ, ಪ್ರವಾಹವನ್ನು ತಡೆಯಲು ಮನವಿಸಲ್ಲಿಸಿದರು. ಆಗ ಲಲಿತಾದೇವಿ ಬ್ರಹ್ಮನ ಆದೇಶದಂತೆ ನೀರಿನ ಒತ್ತಡವನ್ನು ಕಡಿಮೆಮಾಡಿ, ಚಕ್ರವನ್ನು ಪುನರ್ಸ್ಥಾಪಿದಳು. ನದಿಯ ಪ್ರಕೋಪ ಕಡಿಮೆಯಾಗಿ, ನೀರು ವ್ಯವಸ್ಥಿತವಾಗಿ ಹರಿಯಲು ಪ್ರಾರಂಭಿಸಿ, ಎಲ್ಲರಿಗೂ ಉಪಕಾರವಾಯಿತು. ಭಕ್ತಾದಿಗಳು 'ಸೋಮವತಿ ಅಮಾವಾಸ್ಯ'ದ ದಿನ ಇಲ್ಲಿಗೆ ಬರುತ್ತಿದ್ದಾರೆ. ನೈಮಿಶಾರಣ್ಯದ ಸಮೀಪದಲ್ಲಿರುವ ಮತ್ತಿತರ ದೇವಾಲಯಗಳು,

  • ಸೂತಗದ್ದಿ,
  • ಚಕ್ರನಾರಾಯಣ ದೇವಾಲಯ,
  • ಬದ್ರಿನಾರಾಯಣ ದೇವಾಲಯ
  • ಶಿವಾಲಯ ಭೈರವಿ,
  • ಕಾಶಿಕುಂಡ್

ವ್ಯಾಸ ಗದ್ದಿ ಬದಲಾಯಿಸಿ

ಪುರಾಣಗಳಲ್ಲಿ ತಿಳಿಸಿರುವಂತೆ, 'ಮಹರ್ಷಿ, ವೇದವ್ಯಾಸರು', 'ವೇದ', 'ಪುರಾಣ', 'ಮಹಾಭಾರತ', ಮೊದಲಾದ ಪವಿತ್ರ ಗ್ರಂಧಗಳನ್ನು 'ನೈಮಿಶಾರಣ್ಯ'ದಲ್ಲೇ ರಚಿಸಿದರು. ಇಲ್ಲೇ ಒಂದು 'ಅತ್ಯಂತ ಪುರಾತನ ವಟವೃಕ್ಶ'ವಿದೆ. ಮನು ಸಹಿತ ತನ್ನ ಪುರಾಣದಲ್ಲಿ ಇವನ್ನು ದಾಖಲಿಸಿದ್ದಾನೆ.

ಲಲಿತಾ ದೇವಿ ದೇವಸ್ಥಾನ ಬದಲಾಯಿಸಿ

'ಲಲಿತಾ ದೇವಿಯ ದೇವಾಲಯ', ಪುರಾತನಕಾಲದ್ದು. ಬ್ರಹ್ಮದೇವರ ಅಪ್ಪಣೆಯಂತೆ, ಲಲಿತ ದೇವಿ ಈ ಪ್ರದೇಶದಲ್ಲಿ ಪ್ರಕಟವಾಗಿ, ದೇವಾಸುರರನ್ನು ಸಂಹರಿಸಿದಳು. ಶಕ್ತಿಪುರಾಣದಲ್ಲಿ ಲಲಿತಾದೇವಿಯ ವಿಶಯ ಬರುತ್ತದೆ. ಚಕ್ರತೀರ್ಥದಲ್ಲಿ ಸ್ನಾನ ಪುಣ್ಯಪ್ರದವಾದುದು. ಇಲ್ಲಿಂದ ದೇವಾಲಯಗಳನ್ನು ಸಂದರ್ಶಿಸಬಹುದು.

ಮಿಶ್ರಿಖ್-ದಧೀಚಿ ಕುಂಡ ಬದಲಾಯಿಸಿ

ನೈಮಿಶಾರಣ್ಯದಿಂದ ೧೦ ಕಿ.ಮೀ. ದೂರದಲ್ಲಿ ಮಿಶ್ರಿಖ್ ಎಂಬ ಪವಿತ್ರ ತೀರ್ಥವಿದೆ. ದೇವತೆಗಳು ಅಸುರನಾಗಿದ್ದ ವೃತ್ತಾಸುರನನ್ನು ವಧೆಮಾಡಲು, ಬ್ರಹ್ಮನನ್ನು ಬೇಡಿದರು. ಆಗ ಮಹರ್ಷಿ ದಧೀಚಿ ಎಂಬ ಮಹರ್ಶಿಯ ಬೆನ್ನು ಮೂಳೆಯ ಉಪಯೋಗದಿಂದ ವಜ್ರಾಯುಧವನ್ನು ಮಾಡಿದಾಗ, ರಕ್ಕಸನ ವಧೆ ಸಾಧ್ಯವೆಂದು ಗೊತ್ತಾಯಿತು. ಆಗ ಮಹರ್ಷಿ ಹಲವು ಪುಣ್ಯ ನದಿಗಳ ಮಿಲನದಿಂದ ರಚಿತವಾದ ಕುಂಡದಲ್ಲಿ ಮಿಂದು ಪದ್ಮಪುರಾಣದ, ಆದಿಖಂಡದಲ್ಲಿ ವಿವರಿಸಲ್ಪಟ್ಟಿದೆ.

ಸೀತಾಕುಂಡ್ ಬದಲಾಯಿಸಿ

ವನವಾಸಕ್ಕೆ ಬಂದಾಗ, ಶ್ರೀ.ರಾಮ, ಲಕ್ಷ್ಮಣ್, ಮತ್ತು ಸೀತಾದೇವಿಯರು ಈ ಪ್ರದೇಶಕ್ಕೆ ಬಂದಿದ್ದರು. ಇಲ್ಲಿ ಸ್ನಾನಮಾಡಿದರು ಅದಕ್ಕಾಗಿ 'ಸೀತಾಕುಂಡ'ವೆಂಬ ಹೆಸರು ಬಂತು.==ಪುರಮ್ ಮಂದಿರ್, ಮತ್ತು ಮಾ ಆನಂದ ಮಾಯಿ ದೇವಸ್ಥಾನ== ಇದು, ಅತಿ ಪ್ರಾಚೀನ ಮಂದಿರಗಳಲ್ಲೊಂದು. ಇಲ್ಲಿ, ೪ ವೇದಗಳನ್ನೂ ಇಟ್ಟಿದ್ದಾರೆ. ಹತ್ತಿರದಲ್ಲಿ ಮಾ ಆನಂದ ಮಾಯಿ ಮಂದಿರವಿದೆ. ಸ್ವಾಮಿ ನಾರ್ದಾನಂದ ದೇವಸ್ಥಾನ ಅಧ್ಯಾತ್ಮ, ವಿದ್ಯೆಯನ್ನು ಬೋಧಿಸಲಗುತ್ತದೆ. ಚೈತನ್ಯ ಮಹಾಪ್ರಭು, ಪರಮಹಂಸ್ ಮಠದಿವೆ. (ಗರಿಯ ಮಠ್)

ಹವನ್ ಕುಂಡ್ ಬದಲಾಯಿಸಿ

ಅತಿ ಪ್ರಾಚೀನ ಕಾಲದ, ಹವನ ಕುಂಡವಿದೆ. ಇದನ್ನು ಋಶಿಗಳು ಮತ್ತು ಸಂತರು, ಯಜ್ಞಮಾಡಲು ಬಳಸುತ್ತಿದ್ದರು. 'ಪುರಾನ್ ದೇವಸ್ಥಾನ' ಮತ್ತು 'ಮಾ ಅನಂದ ಆಶ್ರಮವಿದೆ'. ೪ ವೇದಗಳನ್ನು ಇಟ್ಟು ಪೂಜಿಸುತ್ತಾರೆ.

ಪಾಂಡವ ಕಿಲ ಬದಲಾಯಿಸಿ

'ಪಾಂಡವ ಕಿಲ, ಚಕ್ರತೀರ್ಥದ ದಕ್ಷಿಣ ಪಶ್ಚಿಮದಲ್ಲಿ ಗೋಮತಿ ನದಿಯ ತೀರದಲ್ಲಿದೆ. ಇದು, ಮಹಾಭಾರತದ ವಿರಾಟರಾಜನ ಕೋಟೆ. ವನವಾಸದ ಸಮಯದಲ್ಲಿ ಪಾಂಡವರು ಇಲ್ಲಿ ವಾಸವಾಗಿದ್ದ್ರು. ಪಾಂಡವರ ಮತ್ತು ಶ್ರೀಕೃಷ್ಣನ ಸುಂದರ ವಿಗ್ರಹಗಳಿವೆ. ಸನ್, ೧೩೦೫ ರಲ್ಲಿ ಅಲ್ಲಾಉದ್ದೀನ್ ಖಿಲ್ಜಿಯ ಹಿಂದು ದಿವಾನ, ಈ ಕೋಟೆಯ ನಿರ್ಮಾಣಮಾಡಿದರು.

ಹನುಮಾನ್ ಗರ್ಹಿ ಬದಲಾಯಿಸಿ

ಪಾಂಡವ ಕೀಲದ ಹತ್ತಿರ, ಭಾರಿ ದೇವಾಲಯ ಕಲ್ಲಿನ ಹನುಮಾನ್ ಇದೆ. ಶ್ರೀ ರಾಮ ಮತ್ತು ಲಕ್ಷ್ಮಣ್ ಹನುಮಾನ್ಜಿ ಭುಜದಮೇಲೆ ವಿರಾಜಮಾನರಾಗಿದ್ದಾರೆ. ಅಹಿರಾವಣನ ಮೇಲೆ ವಿಜಯಯಾತ್ರೆಯನಂತರ, ಹನುಮಾನ್ ಜಿ, ಮೊದಲು ಇಲ್ಲಿಗೆ ಬಂದರು. ದೇವಾಲಯದ ಮೆಟ್ಟಿಲಿನಮೇಲೆ, ಗಣೇಶ್ ಜಿ, ಮಕರ್ಧ್ವಜ, ಮೊದಲಾದವರ ಗುಡಿಗಳಿವೆ. ಹನುಮಾನ್ ಜಿ, ದಕ್ಷಿಣ ದಿಕ್ಕಿಗೆ ಮುಖವಿರುವುದರಿಂದ ದಕ್ಷಿಣೇಶ್ವರ್ ಹನುಮಾನ್ ಎಂದು ಹೆಸರು.

ದೂರ ಬದಲಾಯಿಸಿ

  • ಹರ್ಡೋಯಿ: ೩೪ ಕಿ. ಮೀ.
  • ಸಿಧೌಲಿ : ೪೭ ಕಿ. ಮೀ.
  • ಲಖ್ನೋ: ೯೦ ಕಿ. ಮೀ.
  • ಗೋಲ ಗೋಕರಣ್ ನಾಥ್ : ೧೧೦ ಕಿ. ಮೀ.
  • ದುಧವಾ ನ್ಯಾಷನಲ್ ಪಾರ್ಕ್, : ೧೭೦ ಕಿ. ಮೀ.
  • ಕಾನ್ಪುರ್: ೧೭೫ ಕಿ. ಮೀ.
  • ಬಿಧುರ್: ೧೯೭ ಕಿ. ಮೀ.
  • ಅಯೋಧ್ಯ: ೨೩೫ ಕಿ. ಮೀ.

ನೈಮಿಶಾರಣ್ಯ ತಲುಪಲು ಬದಲಾಯಿಸಿ

ಲಖ್ನೋ ನಿಂದ ಸಿಂಧೌಲಿಗೆ ಬಂದು, ಸೀತಾಪುರ್ ರಸ್ತೆಯಲ್ಲಿ ಎಡಕ್ಕೆ ತಿರುಗಿ, ೨೪ ಕಿ.ಮೀ ಡ್ರೈವ್ ಮಾಡಿ, ಒಂದು ಕ್ರಾಸಿಂಗ್ ಇದೆ. ಎಡಕ್ಕೆ ತಿರುಗಿ. ೧೨ ಕಿ.ಮೀ ಡ್ರೈವ್,ಮಾಡಿದರೆ, ನೈಮಿಶಾರಣ್ಯ ತಲುಪುವಿರಿ. ನೈಮಿಶಾರಣ್ಯಕ್ಕೆ ಬಸ್, ಟ್ಯಾಕ್ಸಿ ಮತ್ತು ರೈಲ್ ನಲ್ಲಿ ಪ್ರಯಾಣದ, ಅನುಕೂಲವಿದೆ. ಇಲ್ಲಿಂದ, 'ಲಖ್ನೋ ವಿಮಾನ ನಿಲ್ದಾಣ' ೧೧೦ ಕಿ.ಮೀ ದೂರದಲ್ಲಿದೆ.

ಉಲ್ಲೇಖಗಳು ಬದಲಾಯಿಸಿ

  1. http://www.lucknow.org.uk/excursions/naimisaranya.html
  1. http://www.lucknow.org.uk/excursions/naimisaranya.html