ನಾರ್ಮನ್ ಬೊರ್ಲಾಗ್


ನಾರ್ಮನ್ ಬೊರ್ಲಾಗ್ (ಮಾರ್ಚ್ ೨೫,೧೯೧೪ – ಸೆಪ್ಟೆಂಬರ್ ೧೨,೨೦೦೯) ಅಮೆರಿಕದ ಜೀವಶಾಸ್ತ್ರಜ್ಞ. ಇವರು ಒಬ್ಬ ಮಹಾನ್ ಮಾನವತಾವಾದಿ.ಇವರನ್ನು "ಹಸಿರುಕ್ರಾಂತಿ ಯ ಪಿತಾಮಹ","ಕೃಷಿಯ ಅತ್ಯಂತ ಮೇಧಾವಿ ವಕ್ತಾರ" "ಮಿಲಿಯಗಟ್ಟಲೆ ಜನರ ಪ್ರಾಣ ಉಳಿಸಿದ ಮಹಾನುಭಾವ" ಎಂದೂ ಕರೆಯಲಾಗುತ್ತಿತ್ತು. ಇವರಿಗೆ ಜಗತ್ತಿನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ನೊಬೆಲ್ ಶಾಂತಿ ಪುರಸ್ಕಾರ, ಭಾರತದಲ್ಲಿ ಹಸಿರುಕ್ರಾಂತಿಗಾಗಿ ಇವರ ಕೊಡುಗೆಗೆ ಪದ್ಮ ವಿಭೂಷಣ ದೊರೆತಿದೆ.

ನಾರ್ಮನ್ ಬೊರ್ಲಾಗ್
Borlaug speaking at the Ministerial Methodist Conference and Expo on Agricultural Science and Technology, June 2003
ಜನನNorman Ernest Borlaug
(೧೯೧೪-೦೩-೨೫)೨೫ ಮಾರ್ಚ್ ೧೯೧೪
Cresco, Iowa
ಮರಣSeptember 12, 2009(2009-09-12) (aged 95)
Dallas, Texas
ಪೌರತ್ವUnited States
ರಾಷ್ಟ್ರೀಯತೆAmerican
ಕಾರ್ಯಕ್ಷೇತ್ರAgronomy
ಸಂಸ್ಥೆಗಳು
ಅಭ್ಯಸಿಸಿದ ವಿದ್ಯಾಪೀಠUniversity of Minnesota
ಮಹಾಪ್ರಬಂಧVariation and Variability in Fusarium Lini (1942)
ಪ್ರಸಿದ್ಧಿಗೆ ಕಾರಣ
ಗಮನಾರ್ಹ ಪ್ರಶಸ್ತಿಗಳು


ಹಸಿರುಕ್ರಾಂತಿಯ ಹರಿಕಾರ ಬದಲಾಯಿಸಿ

 
ಮೆಕ್ಸಿಕೋ,ಭಾರತ ಮತ್ತು ಪಾಕಿಸ್ತಾನಗಳಲ್ಲಿ ಗೋಧಿಯ ಉತ್ಪಾದನೆ ೧೯೫೦ರಿಂದ ೨೦೦೪. ಸ್ಥಿರಾಂಕ ೫೦೦ ಕೆ.ಜಿ/ ಹೆಕ್ಟೇರಿಗೆ


ಜಗತ್ತಿನ ಹಸಿವು ನೀಗಿಸುವ ಆಹಾರ ದಾನ್ಯಗಳ ಮುಖ್ಯವಾಗಿ ಗೋಧಿಯ ಉತ್ಪಾದನೆಯ ಹೆಚ್ಚಳದಲ್ಲಿ ನಾರ್ಮನ್ ಬೊರ್ಲಾಗ್‍ರವರ ಸಂಶೋಧನೆ ಕ್ರಾಂತಿಯನ್ನೆ ಉಂಟುಮಾಡಿದೆ. ಮೆಕ್ಸಿಕೋ, ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಇವರ ಸಂಶೋಧನೆಯ ಫಲವಾಗಿ ಉತ್ಪಾದನೆಯು ಸುಮಾರು ಮೂರುಪಟ್ಟಿಗಿಂತಲೂ ಹೆಚ್ಚಾಯಿತು. ಇದರಿಂದಾಗಿ ಈ ಪ್ರದೇಶಗಳು ಆಹಾರ ಸ್ವಾವಲಂಬಿಗಳಾಗಲು ಸಹಕಾರಿಯಾಯಿತು.

  1. doi:10.1098/rsbm.2013.0012
    This citation will be automatically completed in the next few minutes. You can jump the queue or expand by hand