ನಮಾಜ಼್ ಇಸ್ಲಾಮ್ ಮತದ ಐದು ಸ್ತಂಭಗಳಲ್ಲಿ ಒಂದಾಗಿದೆ. ಇದು ಪ್ರತಿಯೊಬ್ಬ ಮುಸ್ಲಿಮ್‍ನ ಕಡ್ಡಾಯದ ಧಾರ್ಮಿಕ ಕರ್ತವ್ಯವಾಗಿದೆ. ಇದು ಒಂದು ದೈಹಿಕ, ಮಾನಸಿಕ, ಹಾಗೂ ಆಧ್ಯಾತ್ಮಿಕ ಆರಾಧನೆಯ ಕ್ರಿಯೆಯಾಗಿದೆ. ಇದನ್ನು ಪ್ರತಿದಿನ ಐದು ಬಾರಿ ಸೂಚಿತ ಸಮಯಗಳಲ್ಲಿ ಮಾಡಲಾಗುತ್ತದೆ. ಈ ಧರ್ಮಾಚರಣೆಯಲ್ಲಿ, ಮೆಕ್ಕಾದಲ್ಲಿನ ಕಿಬ್ಲಾದ ಕಡೆಗೆ ಮುಖಮಾಡಿ, ಒಬ್ಬರು ನಿಲ್ಲುವುದು, ಬಾಗುವುದು, ಮತ್ತು ಅಡ್ಡಬೀಳುವುದು ಇರುತ್ತದೆ, ಮತ್ತು ನೆಲದ ಮೇಲೆ ಕುಳಿತುಕೊಳ್ಳುವುದರೊಂದಿಗೆ ಅಂತ್ಯವಾಗುತ್ತದೆ.[೧] ಪ್ರತಿ ಭಂಗಿಯ ಅವಧಿಯಲ್ಲಿ, ಒಬ್ಬರು ನಿರ್ದಿಷ್ಟ ಪಂಕ್ತಿಗಳು, ಪದಸಮುಚ್ಚಯಗಳು, ಹಾಗೂ ಪ್ರಾರ್ಥನೆಗಳನ್ನು ಪಠಿಸುತ್ತಾರೆ ಅಥವಾ ಓದುತ್ತಾರೆ.

ನಾಲ್ಕು ಮುಖ್ಯ ನಮಾಜ಼್ ಭಂಗಿಗಳು ಮತ್ತು ಸಂಬಂಧಿತ ಪ್ರಾರ್ಥನೆಗಳು ಹಾಗೂ ಪಠಣಗಳು.
ನಮಾಜ಼್

ಉಲ್ಲೇಖಗಳು ಬದಲಾಯಿಸಿ

  1. "True Islam - Number of Salat". True Islam - Number of Salat. Archived from the original on 22 February 2016. Retrieved 2016-02-20. {{cite web}}: Unknown parameter |dead-url= ignored (help)

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ನಮಾಜ಼್&oldid=956562" ಇಂದ ಪಡೆಯಲ್ಪಟ್ಟಿದೆ