ತಿಜೋರಿಯು ಅಮೂಲ್ಯವಾದ ವಸ್ತುಗಳನ್ನು ಕಳ್ಳತನವಾಗದಂತೆ ಮತ್ತು/ಅಥವಾ ಬೆಂಕಿಯಿಂದ ಹಾನಿಯಾಗದಂತೆ ಭದ್ರವಾಗಿಡಲು ಬಳಸಲಾಗುವ ಭದ್ರವಾದ ಬೀಗ ಹಾಕಬಲ್ಲ ಪೆಟ್ಟಿಗೆ. ತಿಜೋರಿಯು ಸಾಮಾನ್ಯವಾಗಿ ಟೊಳ್ಳಾದ ಘನಭ ಅಥವಾ ಉರುಳೆಯಾಗಿರುತ್ತದೆ ಮತ್ತು ಇದರ ಒಂದು ಮುಖವು ತೆರೆಯಬಲ್ಲದ್ದಾಗಿರುತ್ತದೆ ಅಥವಾ ಬಾಗಿಲನ್ನು ರಚಿಸಲು ತಿರುಗಣೆಯನ್ನು ಹೊಂದಿರುತ್ತದೆ. ಪ್ರಧಾನಭಾಗ ಮತ್ತು ಬಾಗಿಲನ್ನು (ಉಕ್ಕಿನಂತಹ) ಲೋಹದಿಂದ ಎರಕಹೊಯ್ದಿರಬಹುದು ಅಥವಾ ಊದು ಅಚ್ಚೊತ್ತುವಿಕೆ ಮೂಲಕ ಪ್ಲಾಸ್ಟಿಕ್‍ನಿಂದ ರಚಿಸಿರಬಹುದು. ಬ್ಯಾಂಕ್ ಎಣಿಸುಗನ ತಿಜೋರಿಗಳನ್ನು ಸಾಮಾನ್ಯವಾಗಿ ಮುಂಗಟ್ಟೆಗೆ ಲಗತ್ತಿಸಲಾಗಿರುತ್ತದೆ, ಮತ್ತು ಇವು ಬಾಗಿಲನ್ನು ತೆರೆಯದೆ ತಿಜೋರಿಯೊಳಗೆ ಅಮೂಲ್ಯ ವಸ್ತುಗಳನ್ನು ಹಾಕಲು ಸೀಳು ರಂಧ್ರ, ಮತ್ತು ಕಳ್ಳರು ಹಾಗೂ/ಅಥವಾ ದರೋಡೆಕೋರರ ಉದ್ದೇಶ ವಿಫಲಗೊಳಿಸಲು ಕಾಲವಿಳಂಬ ಸಂಯೋಜನೆಯ ಬೀಗವನ್ನು ಹೊಂದಿರುತ್ತವೆ. ವಿವಿಧ ಪ್ರಕಾರಗಳ ತಿಜೋರಿಗಳ ನಡುವಿನ ಒಂದು ಗಮನಾರ್ಹ ವ್ಯತ್ಯಾಸವೆಂದರೆ ತಿಜೋರಿಯನ್ನು ಒಂದು ಗೋಡೆ ಅಥವಾ ರಚನೆಗೆ ಲಗತ್ತಿಸಲಾಗಿರುತ್ತದೆಯೇ ಅಥವಾ ಅದನ್ನು ಸುತ್ತಮುತ್ತ ಚಲಿಸಬಹುದೇ ಎಂಬುದು.

ವಿದ್ಯುನ್ಮಾನ ಬೀಗವುಳ್ಳ ತಿಜೋರಿ

ಹೆಚ್ಚಿನ ಓದಿಗೆ ಬದಲಾಯಿಸಿ

  • Locks, Safes, and Security: An International Police Reference, published by Charles Thomas Publishers, Springfield, Illinois, United States. (2000)  ISBN 0-398-07079-2.
"https://kn.wikipedia.org/w/index.php?title=ತಿಜೋರಿ&oldid=960545" ಇಂದ ಪಡೆಯಲ್ಪಟ್ಟಿದೆ