ಡಾಲ್‍ಫಿನ್ - ಸಿಟೇಷಿಯ ವರ್ಗ ಹಾಗೂ ಓಡಂಟಾಸೆಟಿ ಉಪವರ್ಗಗಳ ಡೆಲ್ಫಿನಿಡೀ ಮತ್ತು ಪ್ಲಾಟನಿಸ್ಟಿಡೀ ಕುಟುಂಬಗಳಿಗೆ ಸೇರಿದ ಹಲವಾರು ಬಗೆಯ ಜಲವಾಸಿ ಸಸ್ತನಿಗಳಿಗೆ ಇರುವ ಸಾಮಾನ್ಯ ಹೆಸರು. 'ಡಾಲ್ಫಿನ್' ಗಳು ಹಲ್ಲಿನ ತಿಮಿಂಗಿಲ ಉಪವರ್ಗಕ್ಕೆ ಸೇರಿದ ಸಸ್ತನಿಗಳು. ಇವು ತಿಮಿಂಗಿಲಗಳ ಸಂಬಂಧಿಗಳು. ಪ್ರಪಂಚದ ಎಲ್ಲ ಕಡೆಗಳಲ್ಲೂ ಕಂಡುಬರುವ ಇವು ಸಾಗರಗಳಲ್ಲೂ ದೊಡ್ಡ ನದಿಗಳಲ್ಲೂ ವಾಸಿಸುತ್ತವೆ.

ಡೊಲ್ಫಿನ್

೧೭ ಜಾತಿಯಲ್ಲಿನ ಡಾಲ್ಫಿನ್ ಗಳು ಸುಮಾರು ನಲವತ್ತು ತಳಿಗಳಿವೆ. ಅವು ಪ್ರಪಂಚದಾದ್ಯಂತ ಕಂಡುಬರುತ್ತದೆ, ಹೆಚ್ಚಾಗಿ ಆಳವಿಲ್ಲದ ಸಮುದ್ರದ ಭೂಪದರಗಳಲ್ಲಿ ಕಂಡುಬರುತ್ತದೆ. ಇವುಗಳು ಹೆಚ್ಚಾಗಿ ಮೀನು ಮತ್ತು ಸ್ಕ್ವಿಡ್ ತಿನ್ನುವ ಮಾಂಸಾಹಾರಿಗಳು.[೧]

ವಿವರಣೆ ಬದಲಾಯಿಸಿ

ದೇಹದ ಉದ್ದ ಸುಮಾರು 4ಮೀ. ತೂಕ 30-160 ಕಿ.ಮೀ. ಮೂತಿ ಉದ್ದವಾಗಿ ಕೊಕ್ಕಿನಂತೆ ಚಾಚಿಕೊಂಡಿರುವುದು ಇವುಗಳ ವಿಶಿಷ್ಟ ಲಕ್ಷಣ. ಮೇಲ್ದವಡೆ ಮತ್ತು ಕೆಳದವಡೆಗಳೆರಡರಲ್ಲೂ ಒಂದೇ ತೆರನಾಗಿರುವ ಹಲ್ಲುಗಳುಂಟು. ದೇಹದಬಣ್ಣ ಬೆನ್ನುಭಾಗದಲ್ಲಿ ಬೂದು, ಅಥವಾ ಬೂದು ಮಿಶ್ರಿತ ಕಪ್ಪು; ಉದರಭಾಗದಲ್ಲಿ ಬಿಳಿ. ಬೆನ್ನಿನ ಮೇಲೆ ಒಂದು ಈಜುರೆಕ್ಕೆಯೂ ದೇಹದ ಪಾಶ್ರ್ವಗಳಲ್ಲಿ ಎರಡು ಈಜು ರೆಕ್ಕೆಗಳೂ ಹಿಂತುದಿಯಲ್ಲಿ ಅಡ್ಡವಾಗಿ ವಿಸ್ತರಿಸಿರುವ ಬಾಲದ ಈಜುರೆಕ್ಕೆಗಳೂ ಇವೆ. ಪಾಶ್ರ್ವದ ಈಜುರೆಕ್ಕೆಗಳೇ ಮುಂಗಾಲುಗಳು. ಡಾಲ್‍ಫಿನ್ನುಗಳಲ್ಲಿ ಬೆವರು ಅಥವಾ ತೈಲ ಗ್ರಂಥಿಗಳಾಗಲೀ ಇಲ್ಲ. ನೆತ್ತಿಯ ಮೇಲೆ ಒಂದೇ ಒಂದು ಮೂಗಿನ ಹೊಳ್ಳೆಯಿದೆ. ಡಾಲ್‍ಫಿನ್ನುಗಳು ತುಂಬ ಶೀಘ್ರಗತಿಯಲ್ಲಿ ಸೊಗಸಾಗಿ ಈಜುತ್ತವೆ. ಈಜುವಾಗ ಬಾಲದ ಈಜುರೆಕ್ಕೆಯನ್ನು ಮೇಲಕ್ಕೂ ಕೆಳಕ್ಕೂ ಆಡಿಸುವುವು. ಸಾಮಾನ್ಯವಾಗಿ ಗುಂಪುಗಳಲ್ಲಿ ಇವುಗಳ ವಾಸ. ಮೀನು, ಸೀಗಡಿ, ಸಾಗರತಳದಲ್ಲಿ ವಾಸಿಸುವ ಹಲವಾರು ಬಗೆಯ ಜೀವಿಗಳನ್ನು ತಿಂದುಹಾಕುತ್ತವೆ. ಇವುಗಳ ದೃಷ್ಟಿ ಬಹಳ ದುರ್ಬಲವಾಗಿರುವುದರಿಂದ ಆಹಾರಪ್ರಾಣಿಗಳನ್ನು ಸದ್ದಿನ ಮೂಲಕ ಕಂಡು ಹಿಡಿದು ತಿನ್ನುತ್ತವೆ.

ಗರ್ಭಧಾರಣೆಯ ಅವಧಿ ಸುಮಾರು 9 ತಿಂಗಳು. ಒಂದುಸಲಕ್ಕೆ ಒಂದೇ ಒಂದು ಮರಿ ಹುಟ್ಟುತ್ತದೆ. ತಾಯಿಯು ಮರಿಯನ್ನು ಬಲು ಅಕ್ಕರೆಯಿಂದ ಪೋಷಿಸುತ್ತದೆ.

ಬಗೆಗಳು ಬದಲಾಯಿಸಿ

ಡಾಲ್‍ಫಿನ್ನುಗಳಲ್ಲಿ ಹಲವಾರು ಬಗೆಗಳುಂಟು . ಇವುಗಳಲ್ಲಿ ಪ್ಲಾಟನಿಸ್ಟಿಡೀ ಕುಟುಂಬಕ್ಕೆ ಸೇರಿದ ಪ್ಲಾಟನಿಸ್ಟ ಗ್ಯಾಂಜೆಟಿಕ (ಗಂಗಾ ನದಿಯ ಡಾಲ್‍ಫಿನ್-ಶಿಶುಮಾರ), ಐನಿಯ ಜೆಫ್ರೆನ್ಸಿಸ್ (ದಕ್ಷಿಣ ಅಮೆರಿಕದ ಅಮೆeóÁನ್ ಮತ್ತು ಓರಿನೋಕೊ ನದಿಗಳ ಡಾಲ್‍ಫಿನ್) ಲೈಪೋಟಿಸ್ ವೆಕ್ಸಿಲಿಫರ್ (ಚೀನದ ಡಾಲ್‍ಫಿನ್)ಗಳೂ ಡೆಲ್ಫಿನಿಡೀ ಕುಟುಂಬಕ್ಕೆ ಸೇರಿದ ಡೆಲ್ಫಿನಸ್ ಡೆಲ್ಫಿಸ್ (ಸಾಮಾನ್ಯ ಡಾಲ್‍ಫಿನ್), ಲ್ಯಾಜನೊರಿಂಕಸ್ ಆಬ್ಲಿಕ್ವಿಡೆನ್ಸ್ (ಪೆಸಿಫಿಕ್ ಡಾಲ್‍ಫಿನ್), ಸೊಟೇಲಿಯ (ನದಿಯ ಡಾಲ್‍ಫಿನ್) ಮತ್ತು ಸ್ಟೆನೆಲಗಳೂ (ಚುಕ್ಕೆ ಡಾಲ್‍ಫಿನ್) ಮುಖ್ಯ ಬಗೆಗಳೆನಿಸಿವೆ.

ಇತಿಹಾಸ ಬದಲಾಯಿಸಿ

'ಡಾಲ್ಫಿನ್' ಎಂಬ ಪದವನ್ನು ಗ್ರೀಕ್ ಭಾಷೆಯಿಂದ ಆರಿಸಲಾಗಿದೆ, ಇದು 'ಗರ್ಭ' ಎಂಬ ಪದವನ್ನು ಹೋಲುತ್ತದೆ. 'ಡಾಲ್ಫಿನ್' ಎಂಬ ಪದವು ಉಪವರ್ಗ Odontoceti ಅಡಿಯಲ್ಲಿ ಸೂಚಿಸಲು ಬಳಸಬಹುದು. ಸಾಮಾನ್ಯ ಬಳಕೆಯಲ್ಲಿ 'ತಿಮಿಂಗಿಲ' ಪದವನ್ನು, ಕೇವಲ ದೊಡ್ಡ ತಿಮಿಂಗಿಲ ಜಾತಿಗೆ ಬಳಸಲಾಗುತ್ತದೆ. ಡಾಲ್ಫಿನ್ ಗಳು ಒಂದು ಕೊಕ್ಕಿನ ಅಥವಾ ಮುಂದೆ ಮೂಗು ಸಣ್ಣದಾಗಿರುವ ಜಾತಿಗೆ ಪರಿಗಣಿಸಲ್ಪಡುತ್ತವೆ. ಡಾಲ್ಫಿನ್ನಿನ ಒಂದು ಗುಂಪನ್ನು ಒಂದು " ಶಾಲಾ " ಅಥವಾ ಒಂದು "ಪಾಡ್" ಎಂದು ಕರೆಯಲಾಗುತ್ತದೆ. ಪುರುಷ ಡಾಲ್ಫಿನ್ ಗಳನ್ನು "ಬುಲ್ಸ್ " , ಹೆಣ್ಣು ಡಾಲ್ಫಿನ್ ಗಳನ್ನು " ಹಸುಗಳು " ಎಂದು ಕರೆಯಲಾಗುತ್ತದೆ ಮತ್ತು ಯುವ ಡಾಲ್ಫಿನ್ ಗಳನ್ನು " ಮರಿಗಳು " ಎಂದು ಕರೆಯಲಾಗುತ್ತದೆ.

ಡಾಲ್‍ಫಿನ್ನುಗಳು ಮತ್ತು ಮಾನವರು ಬದಲಾಯಿಸಿ

ಡಾಲ್‍ಫಿನ್ನುಗಳು ಮಾನವನಿಗೆ ಬಹಳ ಹಿಂದಿನ ಕಾಲದಿಂದಲೂ ಪರಿಚಿತವಾಗಿವೆ. ಸಮುದ್ರದಲ್ಲಿ ಸಾಗುವ ಹಡಗುಗಳ ಸುತ್ತ ಆಟವಾಡುತ್ತ ಹಿಂಬಾಲಿಸಿಕೊಂಡು ಬರುವ ಸೋಜಿಗದ ಸ್ವಭಾವವನ್ನು ಇವು ಪ್ರದರ್ಶಿಸುವುವು. ಇವು ಸ್ನೇಹಪರಜೀವಿಗಳೂ ಹೌದು. ಅಂತೆಯೇ ಬುದ್ಧಿವಂತ ಪ್ರಾಣಿಗಳು ಕೂಡ. ಅಲ್ಲದೆ ಇವು ಹಲವಾರು ರೀತಿಯ ಶಬ್ದಗಳನ್ನು ಉಂಟುಮಾಡುತ್ತ ಪರಸ್ಪರ ಸಂಪರ್ಕಿಸುವುವು; ಇದರಿಂದಾಗಿ ಅಮೆರಿಕದ ಕೆಲವು ರಾಜ್ಯಗಳಲ್ಲಿ ಇವಕ್ಕೆ ವಿಶೇಷ ರೀತಿಯ ಆಟಗಳನ್ನು ಕಲಿಸಿ ಮನರಂಜನೆಗಾಗಿ ಸಾಕುತ್ತಾರೆ. ಇವುಗಳ ಬುದ್ಧಿಮಟ್ಟದ ಬಗ್ಗೆ, ಭಾಷೆಯ ಬಗ್ಗೆ ವೈಜ್ಞಾನಿಕ ಅಧ್ಯಯನಗಳೂ ನಡೆದಿವೆ. ಕೆಲವೆಡೆ ಇವುಗಳ ಮಾಂಸವನ್ನು ತಿನ್ನುವ ಕ್ರಮ ಇದೆ. ಇವುಗಳಿಂದ ಒಂದು ಬಗೆಯ ಎಣ್ಣೆಯನ್ನು ತೆಗೆದು ದೀಪ ಉರಿಸಲು ಬಳಸುವುದುಂಟು.

ಉಲ್ಲೇಖ ಬದಲಾಯಿಸಿ

  1. http://www.defenders.org/dolphin/basic-facts
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: