ಡೇನಿಯಲ್ ವೆಟ್ಟೊರಿ

ಡೇನಿಯಲ್ ಲುಕಾ ವೆಟ್ಟೊರಿ (ಜನನ 27 ಜನವರಿ 1979) ಒಬ್ಬ ಕ್ರಿಕೆಟ್ ಆಟಗಾರ ಹಾಗು ನ್ಯೂಜಿಲೆಂಡ್ ಕ್ರಿಕೆಟ್ ತಂಡ ದ ಹಾಲಿ ನಾಯಕ. ಈತ ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿ 300 ವಿಕೆಟ್ ಗಳನ್ನು ಹಾಗು 3,000 ರನ್ನುಗಳನ್ನು ಗಳಿಸಿದ ಎಂಟನೇ ಆಟಗಾರ. ಕಳೆದ 1996-97ರಲ್ಲಿ ತನ್ನ 18ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ ಮಾಡಿ, ಟೆಸ್ಟ್ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರನಾಗಿದ್ದಾನೆ. ವೆಟ್ಟೊರಿ ಒಬ್ಬ ಬೌಲಿಂಗ್ ಆಲ್ ರೌಂಡರ್, ಈತ ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಸ್ಪಿನ್ ಬೌಲಿಂಗ್ ಮಾಡುತ್ತಾನೆ. ಈತ ಅದ್ಭುತವಾಗಿ ಚೆಂಡನ್ನು ತಿರುಗಿಸುವುದಕ್ಕಾಗಲಿ ಅಥವಾ ಅತಿ ಸೂಕ್ಷ್ಮ ನಿಖರತೆಗಿಂತ ಹೆಚ್ಚಾಗಿ ತನ್ನ ಬೌಲಿಂಗ್‌ನಲ್ಲಿ ಫ್ಲೈಟ್ ಹಾಗು ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈತನ ಬ್ಯಾಟಿಂಗ್ ಸರಾಸರಿ ಸುಮಾರು 30ರಷ್ಟಿದೆ. ಇದು ಈತನನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಒಬ್ಬ ಸ್ಥಿರ ಹಾಗು ಉತ್ತಮ ಬ್ಯಾಟ್ಸ್‌ಮ್ಯಾನ್‌ನನ್ನಾಗಿ ರೂಪಿಸಿದೆ.

ಡೇನಿಯಲ್ ವೆಟ್ಟೊರಿ

Daniel Vettori at the University Oval in 2009
ಚಿತ್ರ:Flag of ನ್ಯೂಜಿಲೆಂಡ್.svg [[ಕ್ರಿಕೆಟ್ ತಂಡ|]]
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ಡೇನಿಯಲ್ ಲುಕಾ ವೆಟ್ಟೊರಿ
ಅಡ್ಡಹೆಸರು Dan
ಹುಟ್ಟು 1 27 1979
Auckland, New Zealand
ಎತ್ತರ 6 ft 3 in (1.91 m)
ಪಾತ್ರ All-rounder, New Zealand captain
ಬ್ಯಾಟಿಂಗ್ ಶೈಲಿ Left-handed
ಬೌಲಿಂಗ್ ಶೈಲಿ Slow left-arm orthodox
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap 200) 6 February 1997: v England
ಕೊನೆಯ ಟೆಸ್ಟ್ ಪಂದ್ಯ 11 December 2009: v Pakistan
ODI ಪಾದಾರ್ಪಣೆ (cap 100) 25 March 1997: v Sri Lanka
ಕೊನೆಯ ODI ಪಂದ್ಯ 9 November 2009: v Pakistan
ODI ಅಂಗಿಯ ಸಂಖ್ಯೆ 11
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
1996 – present Northern Districts
2006 Warwickshire
2003 Nottinghamshire
2008-present Queensland
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIFCLA
ಪಂದ್ಯಗಳು 98 255 150 322
ಒಟ್ಟು ರನ್ನುಗಳು 3,802 1,895 5,649 3,149
ಬ್ಯಾಟಿಂಗ್ ಸರಾಸರಿ 30.41 17.07 30.53 20.44
೧೦೦/೫೦ 5/21 0/4 8/31 2/10
ಅತೀ ಹೆಚ್ಚು ರನ್ನುಗಳು 140 83 140 138
ಬೌಲ್ ಮಾಡಿದ ಚೆಂಡುಗಳು 24,352 12,111 35,077 15,529
ವಿಕೆಟ್ಗಳು 318 268 492 347
ಬೌಲಿಂಗ್ ಸರಾಸರಿ 33.61 31.22 31.70 30.40
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 18 2 28 2
೧೦ ವಿಕೆಟುಗಳು ಪಂದ್ಯದಲ್ಲಿ 3 n/a 3 n/a
ಶ್ರೇಷ್ಠ ಬೌಲಿಂಗ್ 7/87 5/7 7/87 5/7
ಕ್ಯಾಚುಗಳು /ಸ್ಟಂಪಿಂಗ್‍ಗಳು 55/– 71/– 79/– 102/–

ದಿನಾಂಕ 16 March, 2010 ವರೆಗೆ.
ಮೂಲ: Cricinfo

ಈತ ಆಕ್ಲಂಡ್ ನಲ್ಲಿ ಹುಟ್ಟಿ ಹ್ಯಾಮಿಲ್ಟನ್ ನಲ್ಲಿ ಬೆಳೆದಿದ್ದಾನೆ. ಇವನು ಕ್ರಮವಾಗಿ ಮರಿಯನ್ ಶಾಲೆ ಹಾಗು St. ಪಾಲ್'ಸ್ ಕಾಲೇಜಿಯೇಟ್ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ. ತನ್ನ ಬಿಡುವಿನ ಅವಧಿಯಲ್ಲಿ, ಈತ ನಾರ್ತ್ಹನ್ ಡಿಸ್ಟ್ರಿಕ್ಟ್ಸ್ ಪರವಾಗಿ ಪ್ರಾಂತೀಯ ಕ್ರಿಕೆಟ್ ನ್ನು ಆಡುವುದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಪರ ಆಡುವ ಅಂತಾರಾಷ್ಟ್ರೀಯ ಆಟಗಾರ. ವೆಟ್ಟೊರಿ KFC ಟ್ವೆಂಟಿ20 ಬಿಗ್ ಬ್ಯಾಷ್ ಕ್ವೀನ್ಸ್ ಲ್ಯಾಂಡ್ ಬುಲ್ಲ್ಸ್ ತಂಡವನ್ನೂ ಸಹ ಪ್ರತಿನಿಧಿಸುತ್ತಾನೆ. ಆಟವನ್ನು ಆಡುವಾಗ ವೈದ್ಯರ ಸಲಹೆಯ ಮೇರೆಗೆ ಕನ್ನಡಕ ವನ್ನು ಧರಿಸುವ ಕೆಲವೇ ಕೆಲವು ಅಂತಾರಾಷ್ಟ್ರೀಯ ಕ್ರೀಡಾಪಟುಗಳಲ್ಲಿ ಒಬ್ಬ ಹಾಗು ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವ ಮೊದಲ ಇಟಲಿಯನ್ ಸಂತತಿಯ ಕ್ರಿಕೆಟ್ ಆಟಗಾರ.

ಬೌಲಿಂಗ್ ದಾಖಲೆಗಳು ಬದಲಾಯಿಸಿ

ಈತ ತನ್ನ 300ನೇ ಟೆಸ್ಟ್ ವಿಕೆಟ್ ನ್ನು ಶ್ರೀಲಂಕಾದಲ್ಲಿ 2009ರಲ್ಲಿ ಪಡೆಯುವುದರ ಜೊತೆಗೆ ಆ ದಾಖಲೆಯನ್ನು ಮುರಿದ ಎರಡನೇ ನ್ಯೂಜಿಲೆಂಡ್ ಬೌಲರ್[೧] (ರಿಚರ್ಡ್ ಹ್ಯಾಡ್ಲಿ ಯ ನಂತರ). ಇದಲ್ಲದೆ ಈತ ಸದ್ಯಕ್ಕೆ ನ್ಯೂಜಿಲೆಂಡ್ ನ ಪರ ODI ನಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದವನಾಗಿದ್ದಾನೆ.[೨]

ವೆಟ್ಟೊರಿ ಟೆಸ್ಟ್ ಕ್ರಿಕೆಟ್ ನಲ್ಲಿ, ಶ್ರೀಲಂಕಾ, ಆಸ್ಟ್ರೇಲಿಯ ಹಾಗು ಬಾಂಗ್ಲಾದೇಶದ ವಿರುದ್ಧ ಮೂರು ಬಾರಿ 10 ವಿಕೆಟ್ಟುಗಳನ್ನು ಗಳಿಸಿದ್ದಾರೆ. ಆಕ್ಲಂಡ್ ನಲ್ಲಿ 1999-2000ದಲ್ಲಿ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ 7/87 ಗಳಿಸಿದ ಅವನ ಸಾಧನೆಯು ಅತ್ಯುತ್ತಮ ಇನ್ನಿಂಗ್ಸ್ ಅಂಕಿಅಂಶಗಳೆನಿಸಿವೆ. ಆ ಪಂದ್ಯದಲ್ಲಿ ಆತ 12/149 ಗಳಿಸುವುದರೊಂದಿಗೆ ತನ್ನ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದ. ಇದು ನ್ಯೂಜಿಲೆಂಡ್ ಆಟಗಾರ ಗಳಿಸಿದ ಎರಡನೇ ಅತ್ಯುತ್ತಮ ಸಾಧನೆಯಾಗಿದ್ದು,ರಿಚರ್ಡ್ ಹ್ಯಾಡ್ಲಿ ಈತನಿಗಿಂತ ಪಂದ್ಯವೊಂದರಲ್ಲಿ ಅಧಿಕ ವಿಕೆಟ್ಟನ್ನು ಗಳಿಸಿದ್ದಾನೆ. ಚಿತ್ತಗಾಂಗ್ ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 12 ವಿಕೆಟ್ಟುಗಳನ್ನು ಗಳಿಸುವುದರೊಂದಿಗೆ, ಈತ ಎರಡು ಸಂದರ್ಭಗಳಲ್ಲಿ ಟೆಸ್ಟ್ ಪಂದ್ಯದಲ್ಲಿ ಒಂದು ಡಜನ್ ವಿಕೆಟ್ಟನ್ನು ಕಬಳಿಸಿದ ಏಕೈಕ ನ್ಯೂಜಿಲೆಂಡ್ ಆಟಗಾರನೆನಿಸಿದ.

ಈತ ಟೆಸ್ಟ್ ಪಂದ್ಯಾವಳಿಯಲ್ಲಿ ಹೆಚ್ಚಿನ ಬಾರಿ ಶೇನ್ ವಾರ್ನ್ ರನ್ನು ಔಟು ಮಾಡಿದ ಬೌಲರ್. ವಾರ್ನ್ ರನ್ನು ಒಂಬತ್ತು ಬಾರಿ ಔಟ್ ಮಾಡಿದ್ದಾನೆ. ಪರ್ತ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಈತನ ಬೌಲಿಂಗ್‌ನಲ್ಲಿ ವಾರ್ನ್ 99 ರನ್ನಿಗೆ ಔಟ್ ಆದದ್ದು ಬಹಳ ಗಮನಾರ್ಹವಾಗಿದೆ. ಕಾಕತಾಳೀಯವಾಗಿ, ವೆಟ್ಟೊರಿ, 2009-10ರ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧದ 1ನೇ ಟೆಸ್ಟ್‌ನಲ್ಲಿ, 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಶತಕಗಳ ದಾಖಲೆ ಬೆನ್ನಟ್ಟಿ, ಸ್ವತಃ 99 ರನ್‌ಗಳಿಸಿ ಔಟಾದ.

ನಾಯಕತ್ವ ಬದಲಾಯಿಸಿ

ಕಳೆದ 2007ರಲ್ಲಿ ಒಂದು ಕಾಯಂ ಆಧಾರದ ಮೇಲೆ ನಾಯಕನಾಗುವ ಮೊದಲು, ವೆಟ್ಟೊರಿ,ಬ್ಲಾಕ್ ಕ್ಯಾಪ್ಸ್ ಕಾಯಂ ನಾಯಕ ಸ್ಟೀಫನ್ ಫ್ಲೆಮಿಂಗ್ ODI ಕ್ರಿಕೆಟ್ ಗೆ ಅಲಭ್ಯವಾದ ಸಂದರ್ಭಗಳಲ್ಲಿ ತಂಡದ ನಾಯಕತ್ವವನ್ನು ಆಗಾಗ್ಗೆ ವಹಿಸಿಕೊಳ್ಳುತ್ತಿದ್ದ. ಕಳೆದ 2006ರ ಕೊನೆಯಲ್ಲಿ, ಅವನು ನ್ಯೂಜಿಲೆಂಡ್ ತಂಡದ 11 ಪಂದ್ಯಗಳಿಗೆ ನಾಯಕತ್ವವನ್ನು ವಹಿಸಿದ. ಇದರಲ್ಲಿ ತಂಡವು 8 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿತು.

ಸೌತ್ ಆಫ್ರಿಕಾದಲ್ಲಿ ನಡೆದ ಟ್ವೆಂಟಿ20 ವರ್ಲ್ಡ್ ಚಾಂಪಿಯನ್ ಶಿಪ್ಉದ್ಘಾಟನಾ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ತಂಡದ ನಾಯಕನಾಗಿದ್ದ.[೩] ತರುವಾಯ, ವೆಟ್ಟೊರಿಯನ್ನು ಪಂದ್ಯದ ಎಲ್ಲ ರೂಪಗಳಿಗೂ ಬ್ಲಾಕ್ ಕ್ಯಾಪ್ಸ್ ನ ನಾಯಕನೆಂದು ಘೋಷಿಸಲಾಯಿತು: ಟ್ವೆಂಟಿ20, ODIs ಹಾಗು ಟೆಸ್ಟ್ ಪಂದ್ಯಾವಳಿಗಳು. ಪ್ರಾರಂಭದಲ್ಲಿ, ಇವರನ್ನು ಮೊದಲ ಎರಡು ಪಂದ್ಯಗಳಿಗೆ ಮಾತ್ರ ನಾಯಕನೆಂದು ಘೋಷಿಸಲಾಗಿತ್ತು.[೪]

ವೆಟ್ಟೊರಿಯ ನಾಯಕತ್ವವು ಕಠಿಣ ಹಾದಿಯಲ್ಲಿ ಆರಂಭವಾಯಿತು, ತಂಡವು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲಿ ಸೋಲನ್ನು ಅನುಭವಿಸಿತು. ದಿ ಓವಲ್ ನಲ್ಲಿ ನಡೆದ ಅದರ ಮುಂದಿನ ODI ಸರಣಿಯಲ್ಲಿ, ವಿವಾದಾತ್ಮಕ ರನ್ ಔಟ್‌ಗೆ ಸಂಬಂಧಿಸಿದಂತೆ ಬಾಲ್ಕನಿಯಿಂದ ಕೋಪೋದ್ರಿಕ್ತರಾಗಿ ಕೂಗಿಕೊಂಡು ಕೆಲವರ ಟೀಕಾಪ್ರವಾಹಗಳಿಗೆ ವೆಟ್ಟೋರಿ ಗುರಿಯಾದ. ಆತ ಪಂದ್ಯದ ನಂತರ ಇಂಗ್ಲೆಂಡ್ ತಂಡದ ಜೊತೆಗೆ ಹಸ್ತಲಾಘವ ಮಾಡಲು ನಿರಾಕರಿಸಿದ.[೫] ಇದು ಫ್ಲೆಮಿಂಗ್‌ರ ಆಸಕ್ತಿರಹಿತ, ವಿಶ್ರಮಿಸಿಕೊಳ್ಳುವ ಶೈಲಿಗೆ ವಿರುದ್ಧವಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಬ್ಯಾಟಿಂಗ್ ಬದಲಾಯಿಸಿ

ವೆಟ್ಟೊರಿ ಒಬ್ಬ ಉಪಯುಕ್ತ ಕೆಳ-ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಆಗಿ ಪಕ್ವತೆಯನ್ನು ಹೊಂದಿದ್ದಾನೆ. ಜೊತೆಗೆ 3,000 ಟೆಸ್ಟ್ ರನ್ನುಗಳನ್ನು ಗಳಿಸಿದ್ದಾರೆ, ಇದರಲ್ಲಿ ಐದು ಶತಕಗಳು ಹಾಗು (2009ರಲ್ಲಿ ಪಾಕಿಸ್ತಾನದ ವಿರುದ್ಧ 134, 2009ರಲ್ಲಿ ಶ್ರೀಲಂಕಾ ವಿರುದ್ಧ 140, 2003ರಲ್ಲಿ ಪಾಕಿಸ್ತಾನದ ವಿರುದ್ಧ 137*, 2005ರಲ್ಲಿ ಜಿಂಬಾಬ್ವೆ ವಿರುದ್ಧ 127 ಹಾಗು 2009ರಲ್ಲಿ ಭಾರತದ ವಿರುದ್ಧ 118)ಹಾಗೂ ಹಲವಾರು ಅರ್ಧ-ಶತಕಗಳು ಸೇರಿವೆ. ಆದಾಗ್ಯೂ, ವೆಟ್ಟೊರಿ 17.24 ಸರಾಸರಿಯಲ್ಲಿ ತಮ್ಮ ಮೊದಲ 1,000 ರನ್ನುಗಳನ್ನು ಗಳಿಸಲು 47 ಟೆಸ್ಟ್ ಗಳನ್ನೂ ಎದುರಿಸಿದರೂ,ಎರಡನೇ ಸಾವಿರ ರನ್ನುಗಳನ್ನು ಅವನು ಪ್ರತಿ ಇನ್ನಿಂಗ್ಸ್ ಗೆ ಶೇಕಡ 42.52 ರೇಟ್‌ನಲ್ಲಿ ಕೇವಲ 22 ಟೆಸ್ಟ್‌ಗಳಲ್ಲಿ ಗಳಿಸಿದ.

ಡಿಸೆಂಬರ್ 2006ರಿಂದ, ವೆಟ್ಟೊರಿ ಸ್ವತಃ ಒಬ್ಬ ಆಲ್-ರೌಂಡರ್ ಆಗಿ ಸ್ಥಾಪಿಸಿಕೊಳ್ಳುವುದರ ಜೊತೆಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ.

ಕಳೆದ 4 ಡಿಸೆಂಬರ್ 2009ರಲ್ಲಿ, ಪಾಕಿಸ್ತಾನ್ ವಿರುದ್ಧ ಬ್ಲಾಕ್ ಕ್ಯಾಪ್ಸ್ ಕೇವಲ 99 ರನ್ನುಗಳನ್ನು ಗಳಿಸಿದರೂ, ವೆಟ್ಟೊರಿ ಬ್ಯಾಟಿಂಗ್ ನ 8ನೇ ಕ್ರಮಾಂಕದಲ್ಲಿ ಅತ್ಯಂತ ಹೆಚ್ಚಿನ ಟೆಸ್ಟ್ ರನ್ನುಗಳನ್ನು ಗಳಿಸಿದವರೆನಿಸಿದ. ಹಾಗೂಶೇನ್ ವಾರ್ನ್ ರ ಹಿಂದಿನ ದಾಖಲೆಯನ್ನು ಮುರಿದ. ಕಳೆದ 11 ಡಿಸೆಂಬರ್ 2009ರಲ್ಲಿ ಪಾಕಿಸ್ತಾನ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ, ವೆಟ್ಟೊರಿ, ಬ್ಯಾಟಿಂಗ್ ನ 6ನೇ ಕ್ರಮಾಂಕಕ್ಕೆ ಸ್ವತಃ ಭಡ್ತಿ ಪಡೆದ. ಇವರು ಭವಿಷ್ಯದ ಟೆಸ್ಟ್ ಪಂದ್ಯಗಳಲ್ಲಿ ಇದೇ ಕ್ರಮಾಂಕದಲ್ಲಿ ಆಡಬಹುದೆಂದು ಎಣಿಸಲಾಗಿದೆ.

ಸಾಧನೆಗಳು ಬದಲಾಯಿಸಿ

ಟೆಸ್ಟ್ ಶತಕಗಳು ಬದಲಾಯಿಸಿ

  • ಅಂಕಣದಲ್ಲಿರುವುದು ರನ್ನುಗಳು ,* ಚಿಹ್ನೆಯು ನಾಟ್ ಔಟ್ ನ್ನು ಸೂಚಿಸುತ್ತದೆ.
  • ಅಂಕಣದ ಶೀರ್ಷಿಕೆ ಮ್ಯಾಚ್ ಅವರ ವೃತ್ತಿಜೀವನದ ಮ್ಯಾಚ್ ನಂಬರ್ ಅನ್ನು ಸೂಚಿಸುತ್ತದೆ.
ಡೇನಿಯಲ್ ವೆಟ್ಟೊರಿಯ ಟೆಸ್ಟ್ ಶತಕಗಳು[೬]
# ರನ್ನುಗಳು ಪಂದ್ಯ ವಿರುದ್ಧ ನಗರ/ರಾಷ್ಟ್ರ ಸ್ಥಳ ವರ್ಷ ಫಲಿತಾಂಶ
[1] 137* 49  ಪಾಕಿಸ್ತಾನ ಹ್ಯಾಮಿಲ್ಟನ್, ನ್ಯೂಜಿಲೆಂಡ್ ಸೆಡ್ಡೋನ್ ಪಾರ್ಕ್ 2003 ಡ್ರಾ
[2] 127 63  ಜಿಂಬಾಬ್ವೆ ಹರಾರೆ, ಜಿಮ್ಬಾಬ್ವೆ ಹರಾರೆ ಸ್ಪೋರ್ಟ್ಸ್ ಕ್ಲಬ್ 2005 ಗೆಲುವು
[3] 118 90  ಭಾರತ ಹ್ಯಾಮಿಲ್ಟನ್, ನ್ಯೂಜಿಲೆಂಡ್ ಸೆಡ್ಡೋನ್ ಪಾರ್ಕ್ 2009 ಸೋಲು
[4] 140 94  ಶ್ರೀಲಂಕಾ ಕೊಲಂಬೊ, ಶ್ರೀಲಂಕಾ ಸಿನ್ಹಲೀಸ್ ಸ್ಪೋರ್ಟ್ಸ್ ಕ್ಲಬ್ 2009 ಸೋಲು
[5] 134 97  ಪಾಕಿಸ್ತಾನ ನೇಪಿಯರ್, ನ್ಯೂಜಿಲೆಂಡ್ ಮ್ಯಾಕ್ ಲೀನ್ ಪಾರ್ಕ್ 2009 ಡ್ರಾ

ಟೆಸ್ಟ್‌ಗಳಲ್ಲಿ ಐದು-ವಿಕೆಟ್‌ ಗಳಿಕೆ ಬದಲಾಯಿಸಿ

ಡೇನಿಯಲ್ ವೆಟ್ಟೊರಿಯ ಟೆಸ್ಟ್ 5-ವಿಕೆಟ್ ಗಳಿಕೆಗಳು[೭]
# ಅಂಕಿಅಂಶಗಳು ಪಂದ್ಯ ವಿರುದ್ಧ ನಗರ/ರಾಷ್ಟ್ರ ಸ್ಥಳ ವರ್ಷ ಫಲಿತಾಂಶ
[1] 5-84 4  ಶ್ರೀಲಂಕಾ ಹ್ಯಾಮಿಲ್ಟನ್, ನ್ಯೂಜಿಲೆಂಡ್ ಸೆಡ್ಡನ್ ಪಾರ್ಕ್ 1997 ಗೆಲುವು
[2] 6-64 14  ಶ್ರೀಲಂಕಾ ಕೊಲಂಬೊ, ಶ್ರೀಲಂಕಾ ಸಿನ್ಹಲೀಸ್ ಸ್ಪೋರ್ಟ್ಸ್ ಕ್ಲಬ್ 1998 ಸೋಲು
[3] 6-127 25  ಭಾರತ ಕಾನ್ಪುರ್, ಭಾರತ ಗ್ರೀನ್ ಪಾರ್ಕ್ 1999 ಸೋಲು
[4] 5-62 29  ಆಸ್ಟ್ರೇಲಿಯಾ ಆಕ್ಲಂಡ್, ನ್ಯೂಜಿಲೆಂಡ್ ಈಡೆನ್ ಪಾರ್ಕ್ 2000 ಸೋಲು
[5] 7-87
[6] 5-138 33  ಆಸ್ಟ್ರೇಲಿಯಾ ಹೋಬರ್ಟ್, ಆಸ್ಟ್ರೇಲಿಯ ಬೆಲ್ಲೇರಿವ್ ಓವಲ್ 2001 ಡ್ರಾ
[7] 6-87 34  ಆಸ್ಟ್ರೇಲಿಯಾ ಪರ್ತ್, ಆಸ್ಟ್ರೇಲಿಯ W.A.C.A. ಮೈದಾನ 2001 ಡ್ರಾ
[8] 6-28 56  ಬಾಂಗ್ಲಾದೇಶ ಡ್ಹಾಕ, ಬಾಂಗ್ಲಾದೇಶ ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣ 2004 ಗೆಲುವು
[9] 6-70 57  ಬಾಂಗ್ಲಾದೇಶ ಚಿತ್ತಗಾಂಗ್, ಬಾಂಗ್ಲಾದೇಶ MA ಅಜಿಜ್ ಕ್ರೀಡಾಂಗಣ 2004 ಗೆಲುವು
[10] 6-100
[11] 5-152 59  ಆಸ್ಟ್ರೇಲಿಯಾ ಅಡೆಲೈಡ್, ಆಸ್ಟ್ರೇಲಿಯ ಅಡೆಲೈಡ್ ಓವಲ್ 2004 ಸೋಲು
[12] 5-106 60  ಆಸ್ಟ್ರೇಲಿಯಾ ಕ್ರೈಸ್ಟ್ ಚರ್ಚ್, ನ್ಯೂಜಿಲೆಂಡ್ AMI ಕ್ರೀಡಾಂಗಣ 2005 ಸೋಲು
[13] 7-130 73  ಶ್ರೀಲಂಕಾ ವೆಲ್ಲಿಂಗ್ಟನ್, ನ್ಯೂಜಿಲೆಂಡ್ ಬೇಸಿನ್ ರಿಸರ್ವ್ 2006 ಸೋಲು
[14] 5-69 81  ಇಂಗ್ಲೆಂಡ್ ಲಂಡನ್, ಇಂಗ್ಲೆಂಡ್ ಲಾರ್ಡ್ಸ್ 2008 ಡ್ರಾ
[15] 5-66 82  ಇಂಗ್ಲೆಂಡ್ ಮ್ಯಾನ್ಚೆಸ್ಟರ್, ಇಂಗ್ಲೆಂಡ್ ಓಲ್ಡ್ ಟ್ರಫೋರ್ಡ್ 2008 ಸೋಲು
[16] 5-59 84  ಬಾಂಗ್ಲಾದೇಶ ಚಿತ್ತಗಾಂಗ್, ಬಾಂಗ್ಲಾದೇಶ ಜೊಹುರ್ ಅಹ್ಮದ್ ಚೌಧರಿ ಕ್ರೀಡಾಂಗಣ 2008 ಗೆಲುವು
[17] 5-66 85  ಬಾಂಗ್ಲಾದೇಶ ಡ್ಹಾಕ, ಬಾಂಗ್ಲಾದೇಶ ಶೆರೆ ಬಾಂಗ್ಲ ರಾಷ್ಟ್ರೀಯ ಕ್ರೀಡಾಂಗಣ 2008 ಡ್ರಾ
[18] 6-56 88  ವೆಸ್ಟ್ ಇಂಡೀಸ್ ಡುನೆಡಿನ್, ನ್ಯೂಜಿಲೆಂಡ್ ಯುನಿವರ್ಸಿಟಿ ಓವಲ್ 2008 ಡ್ರಾ

= ಬದಲಾಯಿಸಿ

ಏಕದಿನ ಅಂತಾರಾಷ್ಟ್ರೀಯ 5-ವಿಕೆಟ್ ಗಳಿಕೆ ===

ಡೇನಿಯಲ್ ವೆಟ್ಟೊರಿಯ ಏಕದಿನ ಅಂತಾರಾಷ್ಟ್ರೀಯ 5-ವಿಕೆಟ್ ಗಳಿಕೆ[೮]
# ಅಂಕಿಅಂಶಗಳು ಪಂದ್ಯ ವಿರುದ್ಧ ನಗರ/ರಾಷ್ಟ್ರ ಸ್ಥಳ ವರ್ಷ ಫಲಿತಾಂಶ
[1] 5-30 137   ವೆಸ್ಟ್ ಇಂಡೀಸ್ ಲಂಡನ್, ಇಂಗ್ಲೆಂಡ್ ಲಾರ್ಡ್ಸ್ 2004 ಗೆಲುವು
[2] 5-7 210   ಬಾಂಗ್ಲಾದೇಶ ಕ್ವೀನ್ಸ್ ಟೌನ್, ನ್ಯೂಜಿಲೆಂಡ್ ಕ್ವೀನ್ಸ್ ಟೌನ್ ಈವೆಂಟ್ಸ್ ಸೆಂಟರ್ 2007 ಗೆಲುವು

ವೈಯಕ್ತಿಕ ಜೀವನ ಬದಲಾಯಿಸಿ

ವೆಟ್ಟೊರಿ, ಮೇರಿ ಓ'ಕಾರ್ರೋಲ್ ರನ್ನು ವಿವಾಹವಾಗಿದ್ದಾರೆ. ಇವರು ತಮ್ಮ ಪತ್ನಿಯ ಜೊತೆ ವಾಸಿಸಲು ಹಾಮಿಲ್ಟನ್ ನಿಂದ ಆಕ್ಲಂಡ್‌ಗೆ ಸ್ಥಳ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ನಾರ್ತ್ಹನ್ ಡಿಸ್ಟ್ರಿಕ್ಟ್ಸ್ ನೈಟ್ಸ್ ತಂಡದ ಪರವಾಗಿ ಆಟವನ್ನು ಮುಂದುವರೆಸಿದ್ದಾರೆ.[೯] ಅವರಿಗೆ ಜೇಮ್ಸ್ ಎಂಬ ಮಗನಿದ್ದಾನೆ[೧೦](ಜನನ 8 ಮಾರ್ಚ್ 2009).[೧೧]

ಜೀವನ ಚರಿತ್ರೆ ಬದಲಾಯಿಸಿ

ವೆಟ್ಟೊರಿಯ ಜೀವನಚರಿತ್ರೆಯನ್ನು ಆಗಸ್ಟ್ 2008ರಲ್ಲಿ ಪ್ರಕಟಿಸಲಾಯಿತು.[೧೨] ಡೇನಿಯಲ್ ವೆಟ್ಟೊರಿ, ನ್ಯೂಜಿಲೆಂಡ್ ಆಲ್ ಬ್ಲಾಕ್ಸ್ ನ ಮಾಜಿ ಒಂದು ಟೆಸ್ಟ್ ಫೈವ್-ಏತ್ ಆಟಗಾರನಾಗಿದ್ದು,ಈಗ ಸೂಪರ್14 ಫ್ರಾಂಚೈಸ್ ವೆಸ್ಟರ್ನ್ ಫೋರ್ಸ್ ತಂಡದ ಪರ ಆಡುತ್ತಾರೆ.

ಟಿಪ್ಪಣಿಗಳು ಬದಲಾಯಿಸಿ

  1. Ackerman, Sam (2009-08-27). "Vettori joins cricket's elite 300 wicket, 3,000 run club". 3 News. Archived from the original on 2012-09-05. Retrieved 2009-08-27.
  2. "Records / New Zealand / One-Day Internationals / Most wickets". Cricinfo. Retrieved 2009-08-27.
  3. Leggat, David (2007-08-10). "Vettori for captain as Fleming hits 145". The New Zealand Herald. Retrieved 2009-08-27.
  4. "Changing of the guard for Black Caps". TVNZ. 2007-09-12. Archived from the original on 2012-10-08. Retrieved 2009-08-27.
  5. "NZ snub England". The Sydney Morning Herald. 2008-06-26. Retrieved 2009-08-27.
  6. ಸ್ಟಾಟ್ಸ್ ಗುರು: ಡೇನಿಯಲ್ ವೆಟ್ಟೊರಿ, ಕ್ರಿಕ್‌‌‌ಇನ್ಫೋ , 12 ಮಾರ್ಚ್ 2010.
  7. ಸ್ಟಾಟ್ಸ್ ಗುರು: ಡೇನಿಯಲ್ ವೆಟ್ಟೊರಿ , ಕ್ರಿಕ್‌‌‌ಇನ್ಫೋ , 12 ಮಾರ್ಚ್ 2010.
  8. ಸ್ಟಾಟ್ಸ್ ಗುರು: ಡೇನಿಯಲ್ ವೆಟ್ಟೊರಿ , ಕ್ರಿಕ್‌‌‌ಇನ್ಫೋ , 12 ಮಾರ್ಚ್ 2010.
  9. "Vettori to marry girlfriend, move to Auckland". The New Zealand Herald. 2007-05-06. Retrieved 2009-08-27.
  10. "What the Kiwi gossip mags say". stuff.co.nz. 2009-04-07. Retrieved 2009-08-27.
  11. "Baby boy for Vettori". The New Zealand Herald. 2009-03-09. Retrieved 2009-08-27.
  12. ಬೂಕ್ಕ್, R. (2008) ಡೇನಿಯಲ್ ವೆಟ್ಟೊರಿ:ಟರ್ನಿಂಗ್ ಪಾಯಿಂಟ್ , ಹೊಡೆರ್ ಮೊಅ ISBN 1869711335

ಬಾಹ್ಯ ಕೊಂಡಿಗಳು ಬದಲಾಯಿಸಿ

ಪೂರ್ವಾಧಿಕಾರಿ
Stephen Fleming
New Zealand national cricket captain (interim)
2005/6
ಉತ್ತರಾಧಿಕಾರಿ
Stephen Fleming
ಪೂರ್ವಾಧಿಕಾರಿ
Stephen Fleming
New Zealand national cricket captain
2007/8
ಉತ್ತರಾಧಿಕಾರಿ
incumbent