Lua error in package.lua at line 80: module 'Module:Pagetype/setindex' not found.

For a topical guide to this subject, see Outline of James Bond.
James Bond
ಲೇಖಕರುIan Fleming
ದೇಶUnited Kingdom
ಭಾಷೆEnglish
ವಿಷಯSpy fiction
ಪ್ರಕಾರAction/Suspense
ಪ್ರಕಾಶಕರುJonathan Cape
ಪ್ರಕಟವಾದ ದಿನಾಂಕ
1953–present

ಜೇಮ್ಸ್ ಬಾಂಡ್ 007 ಎಂಬುದು 1953 ರಲ್ಲಿ ಲೇಖಕ ಇಯಾನ್ ಫ್ಲೆಮಿಂಗ್‌‍ನಿಂದ ಸೃಷ್ಟಿಯಾದ ಒಂದು ಕಾಲ್ಪನಿಕ ಪಾತ್ರ. ಹನ್ನೆರಡು ಕಾದಂಬರಿಗಳುಹಾಗೂ ಎರಡು ಸಣ್ಣ ಕಥೆಗಳಲ್ಲಿ ಇದು ಒಳಗೊಂಡಿದೆ. 1962ರಲ್ಲಿ ತಯಾರಾದ ಡಾ.ನೋ ದಿಂದ ಪ್ರಾರಂಭಗೊಂಡ ಈ ಪಾತ್ರವು ಆಂಗ್ಲ ಭಾಷೆಯ ಅತಿ ಹೆಚ್ಚು ಓಡಿದ ಹಾಗೂ ದುಡ್ಡು ಗಳಿಸಿದ ಚಿತ್ರ ಸರಣಿಯಾಗಿದೆ.[೧][೨][೩]

1964 ರಲ್ಲಿ ಫ್ಲೇಮಿಂಗ್‌‍ನ ಸಾವಿನ ನಂತರ ಮುಂದಿನ ಜೇಮ್ಸ್ ಬಾಂಡ್ ಕಾದಂಬರಿಗಳು ಕಿಂಗ್ಸ್ಲೇ ಆಮಿಸ್ (ರಾಬರ್ಟ್ ಮಾರ್ಕಾಮ್), ಜಾನ್ ಪರ್ಸನ್, ರೇಮಂಡ್‌‍ ಬೆನ್ಸನ್, ಜಾನ್ ಗಾರ್ಡನ್ ಮತ್ತು ಸಬಾಸ್ಟಿಯನ್ ಫಾಕ್ಸ್‌‍ರಿಂದ ಬರೆಯಲ್ಪಟ್ಟವು. ಕ್ರಿಸ್ಟೋಫರ್ ವೂಡ್‌‍ಸ್ಕ್ರೀನ್‌ ಪ್ಲೇಗಳನ್ನು ಕಾದಂಬರಿಗಳನ್ನಾಗಿಸಿದ ಚಾರ್ಲಿ ಹಿಗ್ಸನ್ ಯುವ ಜೇಮ್ಸ್‌‍ ಬಾಂಡ್‌ಮೇಲೆ ಬರೆದನು, ಉಳಿದ ಲೇಖಕರು ಪಾತ್ರದ ಅನಧಿಕೃತ ಆವೃತ್ತಿಯನ್ನು ಬರೆದಿದ್ದಾರೆ.[೪]

ಇ.ಓ.ಎನ್. ನಿರ್ಮಾಣದಚಿತ್ರಸರಣಿಗಳಲ್ಲಿ 22 ಚಲನಚಿತ್ರಗಳು ಹೊರಬ೦ದಿದ್ದು, ಇತ್ತೀಚಿನದೆಂದರೆ 31 ಅಕ್ಟೋಬರ್ 2008ರಲ್ಲಿ ಬಿಡುಗಡೆಯಾದ ಕ್ವಾಂಟಮ್‌ ಆಪ್‌‌ ಸೊಲೇಸ್ ಅಮೇರಿಕದ ದೂರದರ್ಶನದ ನಿರ್ಮಾಣಗಳು ಹಾಗೂ ಎರಡು ಪ್ರತ್ಯೇಕ ವಿಶೇಷ ನಿರ್ಮಾಣ ಇದರೊಂದಿಗೆ ಸೇರಿದೆ. ಚಲನಚಿತ್ರಗಳು ಹಾಗೂ ದೂರದರ್ಶನವನ್ನು ಹೊರತುಪಡಿಸಿ ರೇಡಿಯೋ ನಾಟಕಗಳು, ಕಾಮಿಕ್ಸ್ ಗಳು, ವೀಡಿಯೋ ಗೇಮ್ಸ್ ಮುಂತಾದವುಗಳಲ್ಲಿ ಕೂಡ ಜೇಮ್ಸ್ ಬಾಂಡ್ ಪಾತ್ರದ ಬಳಕೆಯಾಗಿದೆ.

ಇ.ಓ.ಎನ್ ನಿರ್ಮಾಣದ ಚಿತ್ರಗಳು ಸಾಮಾನ್ಯವಾಗಿ ಅಧಿಕೃತ ಚಿತ್ರಗಳೆಂದು ಪರಿಗಣಿಸಲ್ಪಡುತ್ತಿದ್ದು, ಜೇಮ್ಸ್ ಬಾಂಡ್ ಚಿತ್ರಗಳ ನಿರ್ಮಾಪಕ ಹ್ಯಾರಿ ಸಾಜ್ಮೆನ್ನಿಂದ 1950ರಲ್ಲಿ ಖರೀದಿಸಲ್ಪಟ್ಟಿವೆ.

ಸೃಷ್ಟಿ ಹಾಗೂ ಸ್ಪೂರ್ತಿ ಬದಲಾಯಿಸಿ

[[ಸಿಡ್ನಿ ರೇಲಿ,ದಿ ಏಸ್ ಆಪ್‌ ಸ್ಪೈಸ್|ಸಿಡ್ನಿ ರೇಲಿ,ದಿ ಏಸ್ ಆಪ್‌ ಸ್ಪೈಸ್]] ಕಮಾಂಡರ‍್ ಸರ್ ಜೇಮ್ಸ್ ಬಾಂಡ್ (ಕೆ.ಸಿ.ಎಮ್.ಜಿ , ಆರ್.ಎನ್.ವಿ ಆರ್)ಒಬ್ಬ ಬ್ರಿಟೀಷ್‌ ಗುಪ್ತಚರ ದಳದ ಅಧಿಕಾರಿ.(ಎಸ್.ಐ.ಎಸ್. ಅಥವಾ ಎಮ್ಐ 6) 1952 ಜನವರಿ ತಿಂಗಳಿನ ರಜಾಕಾಲದಲ್ಲಿ ಗೋಲ್ದನ್ ಐ, ಜಮೈಕನ್ ಎಸ್ಟೇಟ್‌‍ನಲ್ಲಿ ಬ್ರಿಟೀಷ್‌ ಪತ್ರಕರ್ತ ಇಯಾನ್ ಫ್ಲೇಮಿಂಗ್‌ನ ಕಲ್ಪನೆಯಲ್ಲಿ ಈತ ಸೃಷ್ಟಿಯಾದ. ಅಮೆರಿಕದ ಒಬ್ಬ ಪಕ್ಷಿಶಾಸ್ತ್ರಜ್ಞ, ಕೆರಬಿಯನ್ನಿನ ಪಕ್ಷಿ ತಜ್ಞ, ಹಾಗೂ ಸವಿವರ ಸ್ಥಳ ವೀಕ್ಷಣೆಯ ಪುಸ್ತಕ ’ಬರ್ಡ್ಸ್‌ ಆಫ್‌‌ ವೆಸ್ಟ್‌‌ ಇಂಡೀಸ್‌‍’ ಪುಸ್ತಕದ ಲೇಖಕ ಸರ್‌‍ ಜೇಮ್ಸ್‌ಬಾಂಡ್‌‍ ಹೆಸರನ್ನು ಫ್ಲೆಮಿಂಗ್‌ ಅವರ ಕಲ್ಪನೆಯ ನಾಯಕನ ಪಾತ್ರಕ್ಕೆ ನೀಡಿದರು. ಪಕ್ಷಿ ವೀಕ್ಷಣೆಯಲ್ಲಿ ತೀವ್ರ ಆಸಕ್ತಿಯಿದ್ದ ಫ್ಲೇಮಿಂಗ್‌‍ನ ಬಳಿ ’ಗೋಲ್ದನ್ ಐ’ನಲ್ಲಿದ್ದಾಗ ಬಾಂಡ್‌ ಅವರ ಸ್ಥಳ ವೀಕ್ಷಣೆಯ ’ಬರ್ಡ್ಸ್‌‍ ಆಫ್‌‌ ವೆಸ್ಟ್‌‌ ಇಂಡೀಸ್’ ಪುಸ್ತಕದ ಪ್ರತಿಯಿತ್ತು. ರೀಡರ್ಸ್‌‍ ಡೈಜೆಸ್ಟ್‌‍‌ನ ಸಂದರ್ಶನವೊಂದರಲ್ಲಿ ಫ್ಲೆಮಿಂಗ್‌‍ ಜೇಮ್ಸ್‌‌ ಬಾಂಡ್‌‍ ಪಾತ್ರಕ್ಕೆ ಅತ್ಯಂತ ಸರಳ ಹಾಗೂ ಆಸಕ್ತಿದಾಯಕ ಹೆಸರೊಂದನ್ನು ಇಡಲು ತಾನು ಬಯಸಿದ್ದು ಪೆರೆಗ್ರಿನ್‌‍ ಕಾರಥರ್ಸ್‌‍ನಂತಹ ಜಟಿಲವಾದ ಹೆಸರು ಬೇಕಿರಲಿಲ್ಲ ಎಂದಿದ್ದಾನೆ. ಅನೇಕ ಆಸಕ್ತಿದಾಯಕ ಘಟನೆಗಳು ಆತನ ಸುತ್ತಮುತ್ತ ನಡೆದರೂ ಆತ ಒಬ್ಬ ಸ್ಥಿತಪ್ರಜ್ಞೆಯ ವ್ಯಕ್ತಿತ್ವದ, ಸರ್ಕಾರದ ಹರಿತ ಆಯುಧದಂತಹ ವ್ಯಕ್ತಿಯ ಚಿತ್ರಣ ಆತನದ್ದು.[೫]

ಆದರೆ ಸುದ್ದಿ ಮೂಲಗಳು ಆ ಕಾಲದ ಗುಪ್ತಚರ ಅಧಿಕಾರಿಗಳಾದ ಸಿಡ್ನಿ ರೈಲಿ ಅಥವಾ ವಿಲಿಯಂ ಸ್ಟೆಫನ್‌‍ (ಯುದ್ಧ ಕಾಲದಲ್ಲಿ ಈತ ಇಂಟ್ರೆಪಿಡ್‌‍ ಎಂಬ ಗುಪ್ತನಾಮ ಹೊಂದಿದ್ದ)ರಿಂದ ಸ್ಫೂರ್ತಿ ಹೊಂದಿ ಜೇಮ್ಸ್ ಬಾಂಡ್ ಪಾತ್ರ ಸೃಷ್ಟಿ ಮಾಡಲಾಯಿತೆಂದು ಊಹಿಸಿ ಬರೆಯುತ್ತಿದ್ದವು. ಆದರೆ ಇವೆಲ್ಲವೂ ಬಾಂಡ್ ವ್ಯಕ್ತಿತ್ವಕ್ಕೆ ಹೋಲುತ್ತಿದ್ದರೂ ಫ್ಲೆಮಿಂಗ್ ಅಥವಾ ಫ್ಲೆಮಿಂಗ್ ಪ್ರಕಾಶನ ಹಾಗೂ ಆತನ ಆತ್ಮಚರಿತ್ರೆಯನ್ನು ಬರೆದ ಜಾನ್ ಪೆರ್ಸನ್ ಮತ್ತು ಆಂಡ್ರ್ಯೂ ಲಿಸೆಟ್‌‌ ಆಗಲೀ ಇದನ್ನು ಖಾತ್ರಿಪಡಿಸಲಿಲ್ಲ.

ಜೇಮ್ಸ್ ಬಾಂಡ್‌‌ನ ತಂದೆ ಆಂಡ್ರ್ಯೂ ಬಾಂಡ್‌‍, ಸ್ಕಾಟ್‌‍ಲ್ಯಾಂಡ್‌‍ನವನು, ತಾಯಿ ಮೊನಿಕ್ ಡೆಲಾಕ್ರಿಕ್ಸ್ ಸ್ವಿಟ್ಜರ್‌ರ್ಲ್ಯಾಂಡ್ನ ಕ್ಯಾಂಟನ್ ದೇ ವೋಡ್‌‌ನವಳು. ಆನ್ ಹರ್‌‌‍ ಮೆಜಸ್ಟೀಸ್‌‍ ಸೀಕ್ರೆಟ್ ಸರ್ವಿಸ್ ಕಾದಂಬರಿಯಲ್ಲಿ ಇದು ಉಲ್ಲೇಖಿತವಾಗಿದೆ. ಫ್ಲೆಮಿಂಗ್‌‍ನು ಸೀಯಾನ್‌‍ ಕ್ಯಾನರಿಯ ಚಿತ್ರಣ ವ್ಯಕ್ತಿ ವಿವರದ ರೀತಿಯಂತೆ ಬಾಂಡ್‌ನ ಸ್ಕಾಟಿಶ್‌ ಸಂಸ್ಕ್ರತಿಯ ಚಿತ್ರಣ ನೀಡಿದ್ದಾನೆ. ಅದರಂತೆ ಬಾಂಡ್‌ನ ತಾಯಿಗೆ ಫ್ಲೆಮಿಂಗ್‌ ತನ್ನ ಸ್ವಿಸ್‌ ಪ್ರೆಯಸಿ ಹೆಸರನ್ನು ಇಟ್ಟಿದ್ದಾನೆ. ಆತ ಬರೆಯಲಿದ್ದ ಕಾದಂಬರಿಯೊಂದರಲ್ಲಿ ಫ್ಲೆಮಿಂಗ್ ತಾಯಿ ಒಬ್ಬ ಸ್ಕಾಟ್ ಮಹಿಳೆಯಾಗುವ ಸಾಧ್ಯತೆಯಿತ್ತು. ಇಯಾನ್ ಫ್ಲೆಮಿಂಗ್ ಒಂದು ಪ್ರಮುಖ ಸ್ಕಾಟಿಶ್‌‍ ಬ್ಯಾಂಕಿಂಗ್‌ ಕುಟುಂಬದ ಸದಸ್ಯನಾಗಿದ್ದ.[೬] ಬಾಂಡ್‌‍ನ ಕಲ್ಪಿತ ಆತ್ಮಕಥೆ ಸೀಕ್ರೆಟ್ ಏಜೆಂಟ್ 007ಯಲ್ಲಿ, ಜಾನ್ ಪಿಯರ್ಸನ್ ಬಾಂಡ್‌‍ನ ಹುಟ್ಟಿದ ದಿನಾಂಕ 11 ನವೆಂಬರ್(ಆರ್ಮಿಸ್ಟೈಸ್‌‍ ಡೇ)1920 ಎಂದು ಉಲ್ಲೇಖಿಸಿದ್ದ. ("ಫಾರ್ ಯುವರ್ ಐಸ್ ಓನ್ಲಿ" ಚಿತ್ರದ ಪ್ರಾರಂಭದಲ್ಲಿ ಬಾಂಡ್‌‌ನ ಪತ್ನಿಯ ಜನ್ಮ ದಿನಾಂಕವನ್ನು ೧೯೪೩ ಎಂದು ತೋರಿಸಲಾಗುತ್ತದೆ. ಇದರಿಂದಾಗಿ ಬಾಂಡ್‌‍ನ ವಯಸ್ಸು ಪಿಯರ್ಸನ್ ಉಲ್ಲೇಖಿಸಿದ್ದಕ್ಕಿಂತ ಕಡಿಮೆಯಿರಬಹುದು ಎಂದುಕೊಳ್ಳಬಹುದಾಗಿದೆ). ಯು ಲಿವ್ ಓನ್ಲಿ ಟ್ವೈಸ್‌ ಚಿತ್ರದಲ್ಲಿ ಮತ್ತೊಮ್ಮೆ ಬಾಂಡ್‌‍ನ ಜನ್ಮ ದಿನಾಂಕದ ಪ್ರಸ್ತಾಪವಾಗುತ್ತದೆ, ಟನಾಕ ಎಂಬ ಪಾತ್ರಧಾರಿ ಬಾಂಡ್ ಹುಟ್ಟಿದ ವರ್ಷ 'ಇಯರ್‌ ಆಫ್‌ ದಿ ರಾಟ್‌’(1924/25 ಅಥವಾ 1912/13 ) ಎಂದು ಹೇಳುತ್ತಾನೆ. ಆನ್‌‍ ಹರ್‌‍ ಮೆಜೆಸ್ಟಿಸ್‌ ಸೀಕ್ರೆಟ್‌‍ ಸರ್ವಿಸ್‌ ಕಾದಂಬರಿಯಲ್ಲಿ ಬಾಂಡ್ ಕುಟುಂಬದ ಗುರಿ "Orbis non sufficit" (ದ ವರ್ಲ್ಡ್ ಇಸ್ ನಾಟ್ ಇನಫ್) ಎಂದು ಗುರುತಿಸಲಾಗುತ್ತದೆ. ಆದರೆ ಇದೇ ಕಾದಂಬರಿಯಲ್ಲಿ ಉಲ್ಲೇಖಿತವಾದಂತೆ ಇದೇ ಜೇಮ್ಸ್‌‌ ಬಾಂಡ್‌‍ ಇದೇ ಕುಟುಂಬಕ್ಕೆ ಸೇರಿರಲಾರ ಎನ್ನಲಾಗಿದೆ.[೭]

 
ಹೌಗಿ ಕಾರ್ಮೈಕಲ್-ಇನ್ನೊಬ್ಬ ಜೇಮ್ಸ್‌ ಬಾಂಡ್‌ ಮಾಡೆಲ್‌.

ಕ್ಯಾಸಿನೊ ರೊಯಾಲ್‌‍ ಪುಸ್ತಕವನ್ನು ಬರೆದು ಪೂರ್ಣಗೊಳಿಸಿದ ನಂತರ, ಫ್ಲೇಮಿಂಗ್‌ ತನ್ನ ಸ್ನೇಹಿತ, ಸಂಪಾದಕ, ಕವಿಯಾದ ವಿಲಿಯಂ ಪ್ಲೂಮರ್‌ಗೆ ಅದನ್ನು ಓದಲು ಅನುಮತಿಸಿದ್ದನು. ಪ್ಲೂಮರ್‌ ಅದನ್ನು ಇಷ್ಟಪಟ್ಟು, ಅದನ್ನು ಜೊನಾಥನ್‌ ಕೆಫೆಗೆ ನೀಡಿದ್ದರು, ಅವರು ಅಷ್ಟಾಗಿ ಇಷ್ಟಪಡಲಿಲ್ಲ. ಕೆಫೆ ಅವರು ಅಂತಿಮವಾಗಿ ಅದನ್ನು 1953 ರಲ್ಲಿ ಫ್ಲೇಮಿಂಗ್‌ನ ದೊಡ್ಡ ಸಹೋದರ,ಪ್ರವಾಸಿ ಬರಹಗಾರನೆಂದು ಗುರುತಿಸಿಕೊಂಡಿದ್ದಂತಹ ಪೀಟರ್‌ ಅವರ ಶಿಫಾರಸ್ಸಿನ ಮೇರೆಗೆ ಪ್ರಕಟಗೊಳಿಸಿದರು.[೮]

ಅನೇಕ ಸಂಶೋಧಕರು ಜೇಮ್ಸ್‌ ಬಾಂಡ್‌‌‌ನನ್ನು ಸ್ವತ: ರಸಿಕನಾಗಿದ್ದ ಇಯಾನ್‌ ಫ್ಲೆಮಿಂಗ್‌ನ ಸ್ತ್ರೀಲಂಪಟತನದ ರೂಪವೆಂದು ಒಪ್ಪಿಕೊಂಡಿದ್ದರು. ಫ್ಲೇಮಿಂಗ್‌ ಮತ್ತು ಬಾಂಡ್‌ ಒಂದೇ ಶಾಲೆಗೆ ಸೇರಿದ್ದರು, ಒಂದೇ ರೀತಿಯ ಆಹಾರ (ಸ್ಕ್ರಾಂಬಲ್ಡ್‌‍ ಮೊಟ್ಟೆ‌ ಮತ್ತು ಕಾಫಿ)ಯನ್ನು ಆರಿಸಿಕೊಂಡಿದ್ದರು, ಒಂದೇ ರೀತಿಯ ಹವ್ಯಾಸ(ಮದ್ಯಪಾನ,ಧೂಮಪಾನ,ಚಿಕ್ಕ-ತೋಳಿನ ಶರ್ಟ್ಸ್‌ಗಳನ್ನು ಧರಿಸುತ್ತಿದ್ದರು)ಗಳನ್ನು ರೂಡಿಸಿಕೊಂಡಿದ್ದರು, ನೋಟ ಮತ್ತು ಶೈಲಿಗಳಲ್ಲಿ ಅಂದವಾದ ಮಹಿಳೆಯ ಬಗ್ಗೆಯೂ ಒಂದೇ ರೀತಿಯ ಒಲವನ್ನು ಇಟ್ಟುಕೊಂಡಿದ್ದರು ಮತ್ತು ನೌಕಾದಳಕ್ಕೆ ಸಂಬಂಧಿಸಿದಂತೆ ಕೆಲಸದಲ್ಲಿಯೂ ಸಾಮ್ಯತೆಯನ್ನು ಹೊಂದಿದ್ದರು(ನೌಕಾದಳದ ಕಮಾಂಡರ್‌ ದರ್ಜೆಗೆ ಇಬ್ಬರು ಏರಿದ್ದರು). ಅವರು ಸಾಮ್ಯತೆಯುಳ್ಳ ಎತ್ತರ, ಕೇಶವಿನ್ಯಾಸ ಮತ್ತು ಕಣ್ಣಿನ ಬಣ್ಣವನ್ನು ಸಹ ಹೊಂದಿದ್ದರು. ಬಾಂಡ್‌ನ ವಿನಮ್ರತೆ ಮತ್ತು ಉನ್ನತ ಮಟ್ಟದ ವ್ಯಕ್ತಿತ್ವದ ಕೆಲವು ನಡವಳಿಕೆಗಳನ್ನು ಯುವಹೌಗಿ ಕಾರ್ಮಿಕೈಲ್‌ ಎಂಬುವವನ್ನು ಆಧಾರಿಸಲ್ಪಟ್ಟಿವೆ. ಕಾಸಿನೊ ರಾಯಲೆ ಯಲ್ಲಿ, ನಾಯಕಿ ವೆಸ್ಪರ್‌ ಲೈಂಡ್‌ "ಹೌಗಿ ಕಾರ್ಮಿಕೈಲ್‌ಗಿಂತ ಹೆಚ್ಚಾಗಿ ನನಗೆ ಬಾಂಡ್‌ ನೆನಪಾಗುತ್ತಾನೆ, ಆದರೆ ಅದರಲ್ಲಿ ಸ್ವಲ್ಪ ನಿರ್ಬಾವುಕ ಮತ್ತು ಕರುಣೆಯಿಲ್ಲದ ವ್ಯಕ್ತಿತ್ವವನ್ನು ಬಿಂಬಿಸಲಾಗಿದೆ." ಅಂತೆಯೇ, ಮೂನ್‌ರಾಕರ್‌ ನಲ್ಲಿ,ವಿಶೇಷ ಶಾಖೆಯ ಅಧಿಕಾರಿ ಗಾಲಾ ಬ್ರಾಂಡ್‌ ಅವರು ಬಾಂಡ್‌ "ನಿಸ್ಸಂದೇಹವಾಗಿ ಸುಂದರವಾಗಿದ್ದಾರೆ ಎಂದು ಯೋಚಿಸುತ್ತಿರುತ್ತಾರೆ.. ಅಲ್ಲದೆ ಹೌಗಿ ಕಾರ್ಮಿಕೈಲ್‌ಗಿಂತಲೂ ಹೆಚ್ಚಾಗಿಯೂ ಕೂಡ. ಬಲ ಹುಬ್ಬಿನ ಕೆಳಗೆ ಸಂಪೂರ್ಣವಾಗಿ ಬೀಳುವ ಕಪ್ಪು ಕೂದಲು. ಇಬ್ಬರೂ ಒಂದೇ ರೀತಿಯ ಮೂಳೆಗಳು ಹೊಂದಿದ್ದಾರೆ. ಆದರೆ ಆ ಬಾಯಿಯಲ್ಲಿ ಕೊಂಚ ಕ್ರೂರತೆ ಮತ್ತು ಕಣ್ಣುಗಳು ನಿರ್ಬಾವುಕವಾಗಿದ್ದವು."[೯]

ಫ್ಲೇಮಿಂಗ್‌ ನೌಕಾ ಕಾರ್ಯಾಲಯನೌಕಾ ಗುಪ್ತಮಾಹಿತಿ ವಿಭಾಗದಲ್ಲಿನ ತನ್ನ ಸೇವೆಯಿಂದ ಭಾಗಶಃ ಪ್ರಭಾವಿತನಾಗಿದ್ದೆ ಎಂದು ಹೇಳಿದರು,ಕಾಸಿನೊ ರೊಯಾಲ್‌‍ ಚಿತ್ರದಲ್ಲಿ ಫ್ಲೇಮಿಂಗ್‌ ಮತ್ತು ನೌಕಾ ಗುಪ್ತ ಮಾಹಿತಿಯ ನಿರ್ದೇಶಕ ಅಡ್ಮಿರಾಲ್‌ ಗೊಡ್‌ಫ್ರೇ ಅವರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಲಿಸ್ಬನ್‌ ಮೂಲಕ ಯುನೈಟೆಡ್‌ ಸ್ಟೇಟ್ಸ್‌ಗೆ ದಂಡಯಾತ್ರೆ ಹೋಗಿದ್ದಾಗ ನಡೆದ ಘಟನೆಯಿಂದ ಹೆಚ್ಚು ಪ್ರಭಾವಿತರಾಗಿದ್ದೆಂದು ವರ್ಣಿಸಲ್ಪಟ್ಟಿದ್ದರು. ಎಸ್ಟೊರಿಲ್‌ ಕ್ಯಾಸಿನೊ ಚಿತ್ರದಲ್ಲಿ,ಪೊರ್ಚುಗೀಸರ ಅಲಿಪ್ತ ನೀತಿಯ ಹಿನ್ನೆಯಲ್ಲಿ ಯುದ್ಧಸೇನೆಗಳ ಗೂಢಚಾರರು ಇದ್ದರು, ಫ್ಲೇಮಿಂಗ್‌, ಚೆಮಿನ್‌ ಡೆ ಫರ್‌ ಆಟದಲ್ಲಿ "ಚೀಫ್‌ ಜರ್ಮನ್‌ ಏಜೆಂಟ್‌"ನಿಂದ ಸೋಲಲ್ಪಟ್ಟರು. ಅಡ್ಮಿರಲ್‌ ಗೊಡ್‌ಫ್ರೇ ಅವರ ಕಲ್ಪನೆಯು ಫ್ಲೆಮಿಂಗ್‌ ಅವರ ಕಲ್ಪನೆಗಿಂತ ಬೇರೆಯಾಗುತ್ತದೆ. ಫ್ಲೆಮಿಂಗ್‌ ತನ್ನ ಕಲ್ಪನೆಯಲ್ಲಿ ಪೋರ್ಚುಗೀಸ್‌ ವ್ಯವಹಾರಸ್ಥನಂತೆ ಅವನನ್ನು ಚಿತ್ರಿಸಿದ್ದಾನೆ. ಅಲ್ಲದೆ ಅವನನ್ನು ಫ್ಲೆಮಿಂಗ್‌ ಅತಿರಂಜಿತ ರೀತಿಯಲ್ಲಿ ಜರ್ಮನ್‌ ಎಜೆಂಟ್‌ಗಳನ್ನು ಕಾರ್ಡ್ಸ್‌ ಆಟದಲ್ಲಿ ಸೋಲಿಸಿದಂತೆ ಚಿತ್ರಿಸಿದ್ದಾನೆ. ಹೆಚ್ಚಿನದಾಗಿ, ಕ್ಯಾಸಿನೊ ರೊಯಾಲ್‌‌‌ನಲ್ಲಿ "ಕೆಂಪು ಭಾರತೀಯರು" ಎಂದು ಕೆಲವು ಬಾರಿ ಸೂಚಿಸಲಾಗುತ್ತದೆ. ಅಲ್ಲದೆ(ನಾಲ್ಕು ಬಾರಿ; ಕೊನೆ ಪುಟದಲ್ಲಿ ಎರಡು ಬಾರಿ)30 ದಾಳಿ ಮಾಡುವಂತಹ ಯೂನಿಟ್‌ ಬಗ್ಗೆಯೂ ಉಲ್ಲೇಖವನ್ನು ನೀಡಲಾಗುತ್ತದೆ.

ಕಾದಂಬರಿಗಳು ಹಾಗೂ ಸಂಬಂಧಿತ ಕೃತಿಗಳು ಬದಲಾಯಿಸಿ

1952 ರ ಫೆಬ್ರುವರಿ ತಿಂಗಳಲ್ಲಿ ಇಯಾನ್ ಫ್ಲೇಮಿಂಗ್ ಅವರು ಮೊದಲ ಜೇಮ್ಸ್ ಬಾಂಡ್ ಕಾದಂಬರಿಯನ್ನು ಬರೆಯಲು ಪ್ರಾರಂಭಿಸಿದರು. ಈ ಸಮಯದಲ್ಲಿ ಫ್ಲೇಮಿಂಗ್‌‍ ಲಂಡನ್ಡೇಲಿ ಎಕ್ಸಪ್ರೆಸ್‌ ಪತ್ರಿಕೆಯ ಮಾಲಿಕ ಕೆಮ್‌‍ಸ್ಲೇಯ ವಿದೇಶೀ ಕಾರ್ಯನಿರ್ವಾಹಕನಾಗಿದ್ದ. ಜೈಮೈಕಾದಲ್ಲಿ ಬರವಣಿಗೆಗೆ ಅನುಕೂಲವಾಗುವಂತೆ ಕೆಲಸಕ್ಕೆ ಸೇರುವ ಸಮಯದಲ್ಲಿ ಫ್ಲೇಮಿಂಗ್‌ ವರ್ಷದಲ್ಲಿ ಎರಡು ತಿಂಗಳ ರಜೆ ಸಿಗುವಂತೆ ಕೇಳಿಕೊಂಡಿದ್ದ. 1953ರಿಂದ 1964ರಲ್ಲಿ ಈತ ಸಾಯುವ ಮೊದಲು ಹನ್ನೆರಡು ಕಾದಂಬರಿಗಳು ಹಾಗೂ ಒಂದು ಸಣ್ಣ ಕಥಾ ಸಂಕಲನ (ಎರಡನೆಯದು ಈತನ ಮರಣೋತ್ತರ ಪ್ರಕಟಗೊಂಡಿತು)ಗಳು ಪ್ರಕಟಗೊಂಡವು.

ನಂತರದಲ್ಲಿ ಈ ಕಾದಂಬರಿಗಳುಕಿಂಗ್ಸ್‌‍ಲೆ ಆಮಿಸ್,(ರಾಬರ್ಟ್ ಮಾರ್ಕಾಮ್), ಜಾನ್ ಗಾರ್ಡ್ನರ್,  ಚಾರ್ಲಿ ಹಿಗ್ಸನ್ , ರೇಮಂಡ್‌‌ ಬೆನ್ಸನ್| ಜಾನ್ ಗಾರ್ಡ್ನರ್, ಚಾರ್ಲಿ ಹಿಗ್ಸನ್ , ರೇಮಂಡ್‌‌ ಬೆನ್ಸನ್]]]](ಅಮೆರಿಕದ ಮೊದಲ ಜೇಮ್ಸ್ ಬಾಂಡ್ ಪುಸ್ತಕದ ಲೇಖಕ)ರಿಂದ ಮುಂದುವರೆಸಲ್ಪಟ್ಟಿತು. ಯುವ ಬಾಂಡ್‌‍ನ ಕಥೆಗಳನ್ನೊಳಗೊಂಡ ಸರಣಿಗಳು 2005ರ ಜುಲೈನಲ್ಲಿ  ಚಾರ್ಲಿ ಹಿಗ್ಸನ್‌‍ನಿಂದ ಆರ೦ಭಗೊಂಡಿತು.[೧೦][೧೧]

2007ರ ಜುಲೈನಲ್ಲಿ ಫ್ಲೇಮಿಂಗ್‌‍ನ 100ನೇ ಹುಟ್ಟುಹಬ್ಬದ ಸ್ಮರಣಾರ್ಥ ಹೊಸದೊಂದು ಬಾಂಡ್‌‍ ಕಾದಂಬರಿ ರಚಿಸಲು ಸಬಾಸ್ಟಿಯನ್ ಫಾಕ್ಸ್‌‌ರಿಗೆ ಅವಕಾಶ ನೀಡಲಾಯಿತು. ಡೆವಿಲ್ ಮೇ ಕೇರ್ ಎಂಬ ಹೆಸರಿನ ಈ ಪುಸ್ತಕ 2008ರ ಮೇ 27 ರಂದು ಬಿಡುಗಡೆಗೊಂಡಿತು.

ಇಯಾನ್‌ ಫ್ಲೇಮಿಂಗ್‌ನ ಕಾದಂಬರಿಗಳು ಬದಲಾಯಿಸಿ

ರೂಪಾಂತರಗಳು ಬದಲಾಯಿಸಿ

ಚಲನಚಿತ್ರಗಳು ಬದಲಾಯಿಸಿ

ಸ್ಥೂಲ ಅವಲೋಕನ ಬದಲಾಯಿಸಿ

1966 ರಲ್ಲಿ ಇ.ಒ.ಎನ್ ನಿರ್ಮಾಣ ಸಂಸ್ಥೆಯ ಕ್ಯಾಸಿನೊ ರಾಯಲ್ ಒಂದನ್ನು ಹೊರತುಪಡಿಸಿ (1999ರಲ್ಲಿ ಇದು ಮರುಸ್ವಾಧೀನಗೊಂಡಿತು) ಎಲ್ಲ ಬಾಂಡ್ ಕಾದಂಬರಿಗಳ ಚಿತ್ರದ ಹಕ್ಕುಗಳ ಹೊಣೆಗಾರಿಕೆಯನ್ನು ಪಡೆಯಿತು.[೨೬]

1962ರಲ್ಲಿ ಸೀನ್ ಕ್ಯಾನರಿಯನ್ನು ಒಳಗೊಂಡ 007 ನ ಡಾ.ನೋ ಚಿತ್ರವು 1962ರಲ್ಲಿ ನಿರ್ಮಾಣಗೊಂಡಿತು. ಕ್ಯಾನರಿ ನಂತರದ ಇನ್ನೂ ಆರು ಚಿತ್ರಗಳಲ್ಲಿ ನಟಿಸಿದರು. (1983ರ ನೆವರ್ ಸೇ ನೆವರ್ ಅಗೇನ್ ಸೇರಿದಂತೆ. ಆದರೆ ಇದು ಇ.ಓ.ಎನ್  ಸರಣಿಯದಾಗಿರಲಿಲ್ಲ. ಇ.ಓ.ಎನ್ ಚಿತ್ರಗಳ ಕೊನೆಯ ನಿರ್ಮಾಣಕ್ಕಿಂತ ಮೊದಲು ಕ್ಯಾನರಿ ಬದಲು ಜಾರ್ಜ್ ಲೆಜೆನ್ಬಿ( ಒಂದು ಚಿತ್ರದಲ್ಲಿ ) ನಟಿಸಿದ್ದು, ನಂತರದ ಭಾಗದಲ್ಲಿರೋಜರ್ ಮೂರ್ (ಏಳು ಚಿತ್ರಗಳಿಗೆ), ತಿಮೋಥಿ ಡಾಲ್ಟನ್ (ಎರಡು ಚಿತ್ರ), ಪಿಯರ್ಸ್ ಬ್ರೊನಾನ್ (ನಾಲ್ಕು ಚಿತ್ರ),  ಮತ್ತು ಡೇನಿಯಲ್ ಕ್ರೇಗ್‌‌ (2008ರಲ್ಲಿ ಎರಡು ಚಿತ್ರಗಳು)ನಟಿಸಿದರು ಇ.ಒ.ಎನ್ ಸರಣಿಗಳಲ್ಲಿ 2008ರವರೆಗೆ 22 ಚಿತ್ರಗಳಿವೆ. ಡೇನಿಯಲ್ ಕ್ರೇಗ್‌‍, ಜೇಮ್ಸ್‌‌‍ ಬಾಂಡ್‌‌ ಆಗಿ ನಟಿಸಿದ  21ನೇ ಚಿತ್ರ ಕಾಸಿನೊ ರೊಯಾಲ್‌‍  2006, ನವೆಂಬರ್ 14ರಂದು ಪ್ರಥಮ ಪ್ರದರ್ಶನ ಕಂಡಿತು.[೨೭] ಅದೇ ದಿನ ಏಶಿಯಾ ಹಾಗೂ ಮಧ್ಯ ಪೌರಾತ್ಯದೇಶಗಳಲ್ಲೂ ಬಿಡುಗಡೆಗೊಂಡಿತು.[೨೮] ಇದು ಚೈನಾದಲ್ಲಿ ಪ್ರದರ್ಶನಗೊಂಡ ಪ್ರಥಮ ಬಾಂಡ್‌‍ ಚಿತ್ರ ಎಂಬುದು ಗಮನಾರ್ಹ. ಡೇನಿಯಲ್ ಕ್ರೇಗ್‌‌ ನಟಿಸಿದ ಎರಡನೇ ಚಿತ್ರ ಕ್ವಾಂಟಮ್ ಆಫ್‌ ಸೊಲೇಸ್‌ ಚಿತ್ರದ ಹೆಸರನ್ನು ಇಯಾನ್ ಫ್ಲೇಮಿಂಗ್‌‍ನ ಸಣ್ಣ ಕಥೆಯ ಶೀರ್ಷಿಕೆಯಿಂದ ಇಡಲಾಗಿದೆ. ( ಫಾರ್ ಯುವರ್ ಐಸ್ ಓನ್ಲೀ 1960 ರಲ್ಲಿ) ಆದರೆ ಇವೆರಡರಲ್ಲಿರುವ ಕಥಾವಸ್ತುಗಳು ಬೇರೆ. ಇನ್ನೂ ಹೆಸರಿಡದ ಮೂರನೇ ಚಿತ್ರ ಬಾಂಡ್ 23ರಲ್ಲಿ ಮತ್ತೆ ಡೇನಿಯಲ್ ಕ್ರೇಗ್‌‍ ಜೇಮ್ಸ್‌‍ ಬಾಂಡ್‌‍ ಆಗಿ ಮರಳಲಿದ್ದಾರೆಂದು ನಿರೀಕ್ಷಿಸಲಾಗುತ್ತಿದೆ.[೨೯]

ಬಾಂಡ್ ಚಿತ್ರ ಸರಣಿಗಳು ಪ್ರಪ೦ಚದಾದ್ಯಂತ 4 ಬಿಲಿಯನ್‌‌ಗೂ ಹೆಚ್ಚು ಹಣ ಗಳಿಸಿದ್ದು,(2 ಬಿಲಿಯನ್ ಪೌಂಡ್) (ಹಣದುಬ್ಬರಕ್ಕೆ ಸುಮಾರು 11 ಬಿಲಿಯನ್ ಡಾಲರ್) ಈವರೆಗಿನದರಲ್ಲೇ ಅತಿ ಹೆಚ್ಚು ಹಣಗಳಿಸಿದ ಸರಣಿ ಚಿತ್ರಗಳಾಗಿವೆ.[೩] ಹೊಸ 22ನೆಯ ಚಿತ್ರಕ್ವಾಂಟಮ್ ಆಫ್‌ ಸೊಲೇಸ್‌ ಚಿತ್ರವು ಬ್ರಿಟನ್‌‌ನಲ್ಲಿ 2008ರ ಅಕ್ಟೋಬರ್ 31ರಲ್ಲಿ ಬಿಡುಗಡೆಗೊಂಡು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌‌ನಲ್ಲಿ ಸುಮಾರು 161 ಡಾಲರ್ ಹಣಗಳಿಸಿದ್ದಲ್ಲದೇ,ಹ್ಯಾರಿಪಾಟರ್ ಚಲನಚಿತ್ರ ಸರಣಿಗಳು ಕೂಡ ಇದನ್ನು ಹಿಂದಿಕ್ಕಲಾಗಲಿಲ್ಲ.[೩೦][೩೧]

ಇ.ಓ.ಎನ್ ಸರಣಿಗಳು ಬದಲಾಯಿಸಿ

Franchise Count Title ವರ್ಷ Actor Director Total Box Office * Budget * Inflation Adjusted
Total Box Office *
1 Dr. No 1962 Sean Connery Terence Young $59,600,000 $1,200,000 $425,488,741
2 From Russia with Love 1963 $78,900,000 $2,500,000 $555,909,803
3 Goldfinger 1964 Guy Hamilton $124,900,000 $3,500,000 $868,659,354
4 Thunderball 1965 Terence Young $141,200,000 $11,000,000 $966,435,555
5 ಯು ಲಿವ್ ಓನ್ಲಿ ಟ್ವೈಸ್ 1967 Lewis Gilbert $111,600,000 $9,500,000 $720,388,023
6 ಆನ್ ಹರ್ ಮೆಜೆಸ್ಟಿಸ್ ಸೀಕ್ರೆಟ್ ಸರ್ವೀಸ್ 1969 George Lazenby Peter R. Hunt $87,400,000 $7,000,000 $513,445,231
7 ಡೈಮಂಡ್ಸ್ ಆರ್ ಫಾರೆವರ್ 1971 Sean Connery Guy Hamilton $116,000,000 $7,200,000 $617,520,987
8 ಲಿವ್ ಅಂಡ್ ಲೆಟ್ ಡೈ 1973 Roger Moore $161,800,000 $12,000,000 $785,677,477
9 ದ ಮ್ಯಾನ್ ವಿಥ್ ದ ಗೋಲ್ಡನ್ ಗನ್ 1974 $97,600,000 $13,000,000 $426,826,774
10 ದ ಸ್ಪೈ ಹೂ ಲವ್ಡ್ ಮಿ 1977 Lewis Gilbert $187,300,000 $28,000,000 $666,367,656
11 ಮೂನ್‌ರೇಕರ್ 1979 $210,300,000 $34,000,000 $624,527,272
12 ಫಾರ್ ಯುವರ್ ಐಸ್ ಓನ್ಲಿ 1981 John Glen $202,800,000 $28,000,000 $481,005,579
13 ಆಕ್ಟೋಪುಸ್ಸಿ 1983 $187,500,000 $27,500,000 $405,873,493
14 ಎ ವೀವ್ ಟು ಎ ಕಿಲ್ 1985 $157,800,000 $30,000,000 $316,186,616
15 ದ ಲೀವಿಂಗ್ ಡೇಲೈಟ್ಸ್ 1987 Timothy Dalton $191,200,000 $40,000,000 $362,876,056
16 ಲೈಸೆನ್ಸ್ ಟು ಕಿಲ್ 1989 $156,200,000 $42,000,000 $271,586,451
17 ಗೋಲ್ಡನ್‌ಐ

(1995)

Pierce Brosnan Martin Campbell $353,400,000 $60,000,000 $499,954,330
18 ಟುಮಾರೋ ನೆವರ್ ಡೈಸ್

1997

Roger Spottiswoode $346,600,000 $110,000,000 $465,588,535
19 ದ ವರ್ಲ್ಡ್ ಈಸ್ ನಾಟ್ ಇನಫ್

1999).

Michael Apted $390,000,000 $135,000,000 $504,705,882
20 ಡೈ ಅನದರ್ ಡೇ 2002 Lee Tamahori $456,000,000 $142,000,000 $546,490,272
21 ಕ್ಯಾಸಿನೋ ರಾಯೇಲ್

(2006)

Daniel Craig Martin Campbell $599,200,000 $150,000,000 $640,803,677
22 ಕ್ವಾಂಟಮ್ ಆಫ್ ಸೊಲೇಸ್ 2008 Marc Forster $586,090,727 $230,000,000 $586,090,727
ಒಟ್ಟು ಚಲನಚಿತ್ರಗಳು 1-22 $4,809,157,447 $1,123,000,000 $11,686,214,000

* ಎಲ್ಲಾ ಅಂಕಿಅಂಶಗಳು US ಡಾಲರ್‌ಗಳಲ್ಲಿ [೩೨]
ಅಂಕಿಅಂಶಗಳು 2008 ಗೆ ಡಾಲರ್ ಏಕೆಂದರೆ 24 ಮಾರ್ಚ್ 2008 ರ ಅಂಕಿಅಂಶಗಳು ಗ್ರಾಹಕರ ಬೆಲೆ ಸೂಚಕದ ಮೇಲೆ ಆಧಾರಿತವಾಗಿವೆ.

ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳು ಬದಲಾಯಿಸಿ

1954ರಲ್ಲಿ ದೂರದರ್ಶನದ ಕ್ಲೈಮಾಕ್ಸ್! ಸರಣಿಯ ಒಂದು ತಾಸಿನ ಸಾಹಸ ಕಾರ್ಯಕ್ರಮಕ್ಕಾಗಿ ಅಳವಡಿಸಿಕೊಳ್ಳಲು ಸಿ.ಬಿ.ಎಸ್ಇಯಾನ್ ಫ್ಲೇಮಿಂಗ್‌‍ಗೆ ಹಣ ನೀಡಿಕ್ಯಾಸಿನೊ ರೊಯಾಲ್ ಚಿತ್ರದ ಬದಲಾವಣೆಯ ಹಕ್ಕುಗಳನ್ನು ಖರೀದಿಸಿತು. ಅದೇನೆ ಇದ್ದರೂ ಬ್ಯಾರಿ ನೆಲ್ಸನ್‌‍ ಸಿಐಎ ಎಜೆಂಟ್‌‍ ಜಿಮ್ಮಿ ಬಾಂಡ್‌‍ ಪಾತ್ರವನ್ನು ನಿರ್ವಹಿಸಿದ, ಮೈಕೆಲ್‌ ಪೇಟ್ ಅವರು ಬ್ರಿಟೀಷ್‌‍ ಎಜೆಂಟ್‌ ಕ್ಲಾರೆನ್ಸ್‌‍ ಲೈಟರ್‌‍ ಪಾತ್ರವನ್ನು ಮತ್ತು ಲೆ ಚಿಫ್ರೆ ಆಗಿ ಪೀಟರ್‌‍ ಲೋರ್‌‍ ನಟಿಸಿದ್ದಾರೆ.

1956ರಲ್ಲಿ ದಕ್ಷಿಣ ಆಫ್ರಿಕಾದ ರೆಡಿಯೋ ಅವತರಣಿಕೆ ಮೂನ್‌ರಾಕರ್‌ , ನಟ ಬಾಬ್‌‍ ಹೋಲ್‌‍ನೆಸ್‌‍ ಅನ್ನು ಜೇಮ್ಸ್‌‌ ಬಾಂಡ್‌ನನ್ನು ಚಿತ್ರಿಸಲು ಬಳಸಿಕೊಂಡ ಎರಡನೆ ನಟನನ್ನಾಗಿಸಿತು.

ಡೇಂಜರ್‌‍ ಮ್ಯಾನ್‌‍ ಎಂಬ ಸೌಂಡ್‌‌ಟ್ರ್ಯಾಕ್‌‍ನ ಬರಹದಲ್ಲಿ ಆಂಡ್ರೂ ಪಿಕ್ಸ್ಲೆ‌‍ಯು ರಾಲ್ಫ್‌ ಸ್ಮಾರ್ಟ್ ಹಾಗೂ ಐಯಾನ್‌ ಫ್ಲೇಮಿಂಗ್‌ ಸೇರಿ ಜೇಮ್ಸ್ ಬಾಂಡ್‌‌ನನ್ನು ದೂರದರ್ಶನ ಸರಣಿಗೆ ತರುವುದಾಗಿ ಉಲ್ಲೇಖಿಸಿದ್ದ. ಆದರೆ ರಾಲ್ಫ್‌ ಸ್ಮಾ‍ರ್ಟ್‌ನು ಪ್ಯಾಟ್ರಿಕ್ ಮಾಕ್‌‍ಗುಹಾನ್ ಎಂಬುವವನ ಜೊತೆ ಸೇರಿ‍ ಡೇಂಜರ್‌‍ಮ್ಯಾನ್‌‌ ಎಂಬ ದೂರದರ್ಶನ ಸರಣಿಯನ್ನು ನಿರ್ಮಿಸಿದ.

ರಾಲ್ಫ್‌‍ ಸ್ಮಾರ್ಟ್‌‍ ಪ್ಯಾಟ್ರಿಕ್ ಮ್ಯಾಕ್ ಗುಹಾನ್ಜೊತೆಗೆ ಡೇಂಜರ್‌ ಮ್ಯಾನ್‌‍  ಚಿತ್ರ ತಯಾರಿಕೆಗೆ ತೊಡಗಿದ ಇವನೇ ನಂತರ ಜೇಮ್ಸ್‌‌ ಬಾಂಡ್‌‍ ಪಾತ್ರವನ್ನು ನಿರ್ವಹಿಸಿದನು.

1967ರಲ್ಲಿ ಕ್ಯಾಸಿನೊ ರೊಯಾಲ್‌‍ ಚಿತ್ರದ ಅಣಕ ಬಾಂಡ್‌‌ ಚಿತ್ರದಲ್ಲಿ ಸರ್‌‌‍ ಜೇಮ್ಸ್ ಬಾಂಡ್ 007 ಆಗಿ ಡೆವಿಡ್ ನಿವೆನ್,, ವೆಸ್ಪರ್ ಲಿಂಡ್ ಆಗಿ ಉರ್ಸುಲಾ ಆಂಡ್ರೆಸ್ ನಟನೆಯಲ್ಲಿದ್ದರು. ಡೇವಿಡ್‌‍ ನಿವೆನ್‌ ಮೊದಲು ಇಯಾನ್ ಫ್ಲೆಮಿಂಗ್‌‍ನಿಂದ ಬಾಂಡ್‌ ಪಾತ್ರದ ಒಂದು ಭಾಗವನ್ನು ಪೂರೈಸಲು ಸೂಕ್ತ ವ್ಯಕ್ತಿ ಎಂದು ಗುರುತಿಸಿಕೊಳ್ಳಲಾಗಿತ್ತು.[೩೩] ಇ.ಓ.ಎನ್‌‌ ನಂತರದಲ್ಲಿ ಸಿಯಾನ್‌‍ ಕ್ಯಾನರಿಯನ್ನು ಈ ಪಾತ್ರಕ್ಕೆ ಆರಿಸಿತು. ಫ್ಲೇಮಿಂಗ್‌‍ನ ನಂತರದ ಎರಡು ಕಾದಂಬರಿಗಳಲ್ಲಿ ಪಾತ್ರವೊಂದರ ಹೆಸರು ಡೇವಿಡ್ ನಿವೇನ್ ಆನ್ ಹರ್ ಮೆಜೆಸ್ಟಿ’ಸ್ ಸೀಕ್ರೆಟ್ ಸರ್ವೀಸ್ ಕಾದಂಬರಿಯಲ್ಲಿ ಬಾಂಡ್‌‍ ವಿಶೇಷ ಸ್ಕಿ ಪ್ರವಾಸಿ ಧಾಮಕ್ಕೆ ಹೋದಾಗ ಡೇವಿಡ್‌‍ ನಿವೇನ್ ಅಲ್ಲಿಯ ನಿಯಮಿತ ಸಂದರ್ಶಕನೆಂದು ಹೇಳುತ್ತಾನೆ. ಯು ಒನ್ಲಿ ಲಿವ್ ಟ್ವೈಸ್ ನಲ್ಲಿ ನಟಿಸಿದ ಕಿಸ್ಸಿ ಸುಜುಕಿ ತನ್ನೊಂದಿಗೆ ಅತ್ಯಂತ ದಯಾಳುವಾಗಿ ವರ್ತಿಸಿದ ಕೇವಲ ಒಬ್ಬನೇ ಒಬ್ಬ ವ್ಯಕ್ತಿ ಈತನಾಗಿದ್ದಾನೆ ಎಂದು ಹಾಲಿವುಡ್‌ ಕುರಿತ ಸಣ್ಣ ಸಂದರ್ಶನವೊಂದರಲ್ಲಿ ಅವಳು ಹೇಳಿಕೊಂಡಿದ್ದಾಳೆ. ಸ್ಕಿ ರೆಸಾರ್ಟ್‌‍ನಲ್ಲಿರುವವರಲ್ಲಿ ಉರ್ಸುಲಾ ಆಂಡ್ರೆಸ್ ಹೆಸರು ಕೂಡ ಆನ್ ಹರ್ ಮೆಜೆಸ್ಟಿ’ಸ್ ಸೀಕ್ರೆಟ್ ಸರ್ವೀಸ್ ಕಾದಂಬರಿಯಲ್ಲಿ ಉಲ್ಲೇಖಿತವಾಗಿದೆ.

1973ರ ಬಿಬಿಸಿ ಸಾಕ್ಷ್ಯಚಿತ್ರ ಓಮ್ನಿಬಸ್‌‍: ದಿ ಬ್ರಿಟೀಷ್‌ ಹೀರೊ ಇದು ನಟ ಕ್ರಿಸ್ಟೋಫರ್ ಕೆಜೆನೋವ್ನು ಅನೇಕ ಆ ರೀತಿಯ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾನೆ. ( ಉ.ದಾ.ರಿಚರ್ಡ್ ಹೆನ್ನೇ ಮತ್ತು ಬುಲ್ ಡಾಗ್ ಡ್ರಮೊಂಡ್ )ಗಮನಾರ್ಹ ದೃಶ್ಯವೆಂದರೆ ಗೋಲ್ಡ್ ಫಿಂಗರ್‌ ‌ ಕಾದಂಬರಿಯಲ್ಲಿ ನಾಯಕನನ್ನು ವ್ರತ್ತಾಕಾರದ ಗರಗಸದಿಂದ ಹೆದರಿಸಲಾಗುತ್ತದೆ, ಆದರೆ ಚಿತ್ರದಲ್ಲಿ ಲೇಸರ್ ಕಿರಣವನ್ನು ಬಳಸಲಾಗಿದೆ. (ಡೈಮಂಡ್ಸ್ ಆರ್ ಫರೋರೆವರ್)
ಕಾನೂನಿನ ಸಣ್ಣ ತಪ್ಪಿನಿಂದಾಗಿ ಥಂಡರ್ಬಾಲ್‌ ನ ರಿಮೇಕ್ ಆದ ನೆವೆರ್ ಸೇ ನೆವರ್ ಅಗೈನ್  ಚಿತ್ರ 1983 ರಲ್ಲಿ ಬಿಡುಗಡೆಯಾಯಿತು.  ಬಾಂಡ್ ಆಗ ಸೀನ್ ಕ್ಯಾನ‍ರ್‌ ನಟಿಸಿದ ಇದ್ದ ಇ.ಓ.ಎನ್ ನಿರ್ಮಾಣ ಹಾಗೂ ಯುನೈಟೆಡ್ ಆರ್ಟಿಸ್ಟ್ ದ ಭಾಗವಾಗಿಲ್ಲವಾಗಿಲ್ಲದೇ ಬಾಂಡ್ ಸರಣಿಗಳ ಅಧಿಕೃತ ಹಕ್ಕುಗಳನ್ನು ಪಡೆದಿಲ್ಲದ ಕಾರಣ ಅಧಿಕೃತ ಜೇಮ್ಸ್ ಬಾಂಡ್ ಚಿತ್ರವೆಂದು ಪರಿಗಣಿಸಲ್ಪಟ್ಟಿಲ್ಲ. ಪ್ರಸ್ತುತ ಇದು ಯುನೈಟೆಡ್ ಆರ್ಟಿಸ್ಟ್‌ಪೇರೆಂಟ್ ಎಮ್.ಜಿ.ಎಮ್ ನ ಸ್ವಾಮಿತ್ವದಲ್ಲಿದೆ. 1983 ರಲ್ಲಿ ಇದರ ಮೂಲಚಿತ್ರ ಬಿಡುಗಡೆಗೊಂಡಾಗ ಅದೇ ಸಮಯದಲ್ಲಿ ಬಿಡುಗಡೆಗೊಂಡ ಇ.ಓ.ಎನ್ ಸರಣಿಯ ಇನ್ನೊಂದು ಬಾಂಡ್ ಚಿತ್ರ ಓಕ್ಟೋಪಸಿ‌  ದಿಂದಾಗಿ ಕೆಲಕಾಲ ಗೊಂದಲದ ಸನ್ನಿವೇಶ ನಿರ್ಮಾಣಗೊಂಡಿತ್ತು.   ಇದರ ನಂತರ ಎಮ್.ಜಿ.ಎಮ್ ನಿರ್ಮಾಣವು ಗೊಂದಲದ ಪುನರಾವರ್ತನೆಯನ್ನು ತಡೆಯಲು ಜೇಮ್ಸ್ ಬಾಂಡ್ ಹೆಸರನ್ನು ಖರೀದಿಸಿತು.
ವರ್ಷ ಶೀರ್ಷಿಕೆ ವಿಧಗಳು ನಟ ಟೋಟಲ್‌ ಬಾಕ್ಸ್‌ ಆಫೀಸ್‌ ಬಡ್ಜೆಟ್‌ ಹಣದುಬ್ಬರ ಸರಿದೂಗುವಿಕೆ
ಟೋಟಲ್‍ ಬಾಕ್ಸ್‌ ಆಫೀಸ್‌**
1954 ಕಾಸಿನೊ ರೋಯಲ್ ದೂರದರ್ಶನ ಬ್ಯಾರಿ ನೆಲ್ಸನ್ ಲಭ್ಯವಿಲ್ಲ $25,000 ಲಭ್ಯವಿಲ್ಲ
1956 ಮೂನ್ ರಾಕರ್ ರೇಡಿಯೋ ಬಾಬ್ ಹೊಲ್ನೆಸ್ ಲಭ್ಯವಿಲ್ಲ align=right ಲಭ್ಯವಿಲ್ಲ
1967 ಕಾಸಿನೊ ರೋಯಲ್ ಚಿತ್ರ ಡೇವಿಡ್ ನೀವೇನ್ $44,400,000 $12,000,000 $286,605,987
1983 ನೆವರ್ ಸೆ ನೆವರ್ ಅಗೇನ್ ಚಿತ್ರ ಸೀನ್ ಕ್ಯಾನರಿ $160,000,000 $36,000,000 $346,345,380
1990). ಯು ಓನ್ಲಿ ಲಿವ್ ಟ್ವೈಸ್ ರೇಡಿಯೋ ಮೈಕೆಲ್ ಜೆಸ್ಟನ್ ಲಭ್ಯವಿಲ್ಲ align=right ಲಭ್ಯವಿಲ್ಲ
1991 ಜೇಮ್ಸ್ ಬಾಂಡ್ ಜೂನಿಯರ್ ದೂರದರ್ಶನ ಕಾರ್ಟೂನ್ ಸರಣಿಗಳು ಕೋರೆ ಬರ್ಟನ್ ಲಭ್ಯವಿಲ್ಲ align=right ಲಭ್ಯವಿಲ್ಲ
2008 ಡಾ. ನೋ ರೇಡಿಯೋ ಟೋಬಿ ಸ್ಟೇಫನ್ಸ್ ಲಭ್ಯವಿಲ್ಲ align=right ಲಭ್ಯವಿಲ್ಲ
2010 ಗೊಲ್ಡ್ ಫಿಂಗರ್ ರೇಡಿಯೋ ಟೋಬಿ ಸ್ಟೇಫನ್ಸ್]] ??? ಲಭ್ಯವಿಲ್ಲ align=right ಲಭ್ಯವಿಲ್ಲ

|Totals | | | |align=right|$204,400,000 |align=right|$48,000,000 |align=right|$602,860,000 |}

ನಟರುಗಳು ಬದಲಾಯಿಸಿ

ಸಾಂಸ್ಕೃತಿಕ ಪ್ರಭಾವ ಬದಲಾಯಿಸಿ

ಚಿತ್ರ:Brosnan and Connery at Madame Tussauds.jpg
ಮೇಡಮ್‌‍ ಟ್ಯೂಸ್ಸಾಡ್ಸ್‌‍ ಸಂಗ್ರಹಾಲಯದಲ್ಲಿ ಬಾಂಡ್‌ ಕಲಾವಿದರಾದ ಫಿಯರ್ಸ್‌ ಬ್ರೊನ್‌ಸಾನ್‌‍ ಮತ್ತು ಶಾನ್‌ ಕೂನೆರಿ ಅವರ ಮೂರ್ತಿಗಳನ್ನು ಮಾಡಲಾಗಿದೆ.
ಜೇಮ್ಸ್ ಬಾಂಡ್ ಹೆಸರು ಮನೆಮಾತಾಗಿದ್ದು ಈ ಚಿತ್ರ ಪ್ರಕಾರದ ಮೇಲೆ ದೊಡ್ದ ಪರಿಣಾಮವನ್ನು ಬೀರಿದೆ  ನಿರ್ಮಾಪಕ ಹಾಗೂ ಹಾಸ್ಯ ಕಲಾವಿದ ಮೈಕ್ ಮೀರ್ಸ್‌ನ ಆಸ್ಟಿನ್ ಪವರ್ಸ್  ಚಿತ್ರ ಸರಣಿಗಳು, ಇತರ ಅಣಕ ಚಿತ್ರಗಳಾದ ಜಾನಿ ಇಂಗ್ಲಿಶ್,  (2003 )ಬೇನ್ಸ್ ಬೇಸರ್ಸ್ ದೆ ಹಾಂಗ್ ಕಾಂಗ್,  ಓಕೆ ಕ್ಯಾನರಿ,  ಡೆರೇಕ್ ಫ್ಲಿಂಟ್ ಆಗಿ ಜೇಮ್ಸ್ ಕೊಬರ್ನ್ ನಟಿಸಿದ ಫ್ಲಿಂಟ್ ಸರಣಿ, ಡಿಯೆನ್ ಮಾರ್ಟಿನ್ ಹಾಗೂ ಕ್ಯಾಸಿನೊ ರಾಯೇಲ್ ಅವರನ್ನೊಳಗೊಂಡ ಮ್ಯಾಟ್‌ಹೆಮ್ ಚಿತ್ರ (2003)ಗಳು ಬಾಂಡ್‌ನ ಜನಪ್ರಿಯತೆ, ಪ್ರಸಿದ್ಧಿಯನ್ನು ತೋರಿಸುತ್ತವೆ.

ಬಾಂಡ್ ಸರಣಿಗಳು ಜನಪ್ರಿಯ ಮಾಧ್ಯಮಗಳಲ್ಲೂ ಗೌರವ, ವಿಡಂಬನೆಗಳೆರಡನ್ನೂ ಗಳಿಸಿವೆ. 1960ರ ಸಮಯದಲ್ಲಿ ದೂರದರ್ಶನದಲ್ಲಿ ಜೇಮ್ಸ್ ಬಾಂಡ್ ಅನುಕರಣೆಯಾದ ಐ ಸ್ಪೈ , ಗೆಟ್ ಸ್ಮಾರ್ಟ್ ,ಚಾರ್ಲ್ಸ್‌ ವೈನ್ ‌, ಮಾಟ್ ಹೆಮ್ , ಮತ್ತು ದ ಮ್ಯಾನ್ ಫ್ರಮ್ ಯು.ಎನ್.ಸಿ.ಎಲ್.ಇ ಗಳೂ ಕೂಡ ಪ್ರಸಿದ್ಧಿ ಪಡೆದವಲ್ಲದೇ, ಫ್ಲೇಮಿಂಗ್ ಕೊನೆಯ ಚಿತ್ರಕ್ಕೆ ಸಹಾಯ ನೀಡಿದ್ದ.:ನಾಟಕದ ಪ್ರಮುಖ ಪಾತ್ರ ನೆಪೋಲಿಯನ್ ಸೊಲೊ ಫ್ಲೇಮಿಂಗ್ ನ ಕಾದಂಬರಿ ಗೋಲ್ಡ್ ಫಿಂಗರ್ ನ ಪಾತ್ರವೊಂದರಿಂದ ಹೆಸರಿಡಲ್ಪಟ್ಟಿತು. ಫ್ಲೇಮಿಂಗ್ ಎಪ್ರಿಲ್ ಡಾನ್ಸರ್ ಹೆಸರನ್ನು ಕೂಡ ಸೂಚಿಸಿದ್ದರು. ನಂತರದಲ್ಲಿ ಇದು ದ ರಿಟರ್ನ್ ಆಪ್‌ ದ ಮ್ಯಾನ್ ಫ್ರಮ್ ಯು.ಎನ್.ಸಿ.ಎಲ್.ಇ ಪುನರ್ ಅವತರಣಿಕೆ ದ ಗರ್ಲ್ ಫ್ರಮ್ ಯು.ಎನ್.ಸಿ.ಎಲ್.ಇ ಸರಣಿಯಲ್ಲಿ ಬಳಸಲ್ಪಟ್ಟಿತ್ತು.[೩೪] ಫ್ಲೆಮಿಂಗ್ ಸ್ಮರಣಾರ್ಥವಾದ ದ ರಿಟರ್ನ್ ಆಪ್‌ ದ ಮ್ಯಾನ್ ಫ್ರಮ್ ಯು.ಎನ್.ಸಿ.ಎಲ್.ಇ ದೂರದರ್ಶನ ಸರಣಿಯಲ್ಲಿ ಜೇಮ್ಸ್ ಬಾಂಡ್ ಪಾತ್ರದಲ್ಲಿ ಜಾರ್ಜ್ ಲೆಜೆನ್ಬಿ ನಟಿಸಿರುವುದು ಗಮನಾರ್ಹ. (ಕೆಲ ಕಾನೂನುಬದ್ಧ ಕಾರಣಗಳಿಗಾಗಿ ಈ ಪಾತ್ರವು ಜಿ.ಬಿ ಎಂಬ ಹೆಸರಿನಲ್ಲಿ ಬಳಸಲ್ಪಟ್ಟಿತು.)

ಶಾನ್ ಕ್ಯಾನರಿಯಿಂದ ನಟಿಸಲ್ಪಟ್ಟ ಬಾಂಡ್ ವ್ಯಕ್ತಿಚಿತ್ರವು ಇಂಡಿಯಾನಾ ಜೋನ್ಸ್ ಪಾತ್ರಕ್ಕೆ ಪ್ರಮುಖ ಸ್ಪೂರ್ತಿ ಎಂದು ಅನೇಕ ಸಂದರ್ಭಗಳಲ್ಲಿ ಉಲ್ಲೇಖಿಸಿರುವ ಜಾರ್ಜ್ ಲುಕಾಸ್, ಈ ಸರಣಿಯ ಮೂರನೆ ಚಿತ್ರದಲ್ಲಿ ಇಂಡಿಯಾನ ಜೋನ್ಸ್‌ನ ತಂದೆಯ ಪಾತ್ರಕ್ಕೆ ಕ್ಯಾನರಿಯನ್ನು ಆಯ್ಕೆ ಮಾಡಲು ಇದೇ ಕಾರಣವಾಯಿತು ಎಂದಿದ್ದಾರೆ.[೩೫][೩೬]

ಸಂಗೀತ ಬದಲಾಯಿಸಿ

"ಜೇಮ್ಸ್ ಬಾಂಡ್ ಸಂಗೀತ"ವನ್ನು ಮಾಂಟಿ ನೋರ್ಮನ್ ಬರೆದಿದ್ದು, ಜಾನ್‌ ಬ್ಯಾರಿ ಯಿಂದ 1962 ರಲ್ಲಿ ಡಾ.ನೋ ಚಿತ್ರಕ್ಕಾಗಿ ಮೊದಲ ಬಾರಿಗೆ ಸಂಯೋಜಿಸಲ್ಪಟ್ಟಿತು. ಆದರೆ ಈ ಸಂಗೀತದ ನಿಜವಾದ ಮಾಲೀಕತ್ವ ಅನೇಕ ವರ್ಷಗಳಿಂದ ವಿವಾದದ ವಿಷಯವಾಗಿದೆ. 2001 ರಲ್ಲಿ ಬಾಂಡ್ ಸಂಗೀತ ರಚನೆ ಪೂರ್ತಿಯಾಗಿ ಬ್ಯಾರಿ ಅವರದ್ದು ಎಂದು ಹೇಳಿದ ಬ್ರಿಟೀಷ್‌ ಪತ್ರಿಕೆ ಸಂಡೇ ಟೈಮ್ಸ್ ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ನೋರ್ಮನ್ 30,000 ಪೌಂಡ್‌ಗಳನ್ನು ಗೆದ್ದರು.[೩೭]

ಡಾ.ನೋ  ಸೇರಿದಂತೆ ಹನ್ನೊಂದು ಬಾಂಡ್ ಚಿತ್ರಗಳಿಗೆ ಬ್ಯಾರಿ ಸಂಯೋಜಿಸಿದ ಸಂಗೀತವು 007 ಹೆಸರಿನೊಂದಿಗೆ ಗೌರವಿಸಲ್ಪಟ್ಟಿತಲ್ಲದೇ ಅನೇಕ ಚಿತ್ರಗಳಲ್ಲಿ ಪರ್ಯಾಯ ಬಾಂಡ್ ಸಂಗೀತವಾಗಿ ಬಳಸಲ್ಪಟ್ಟಿತು. ಈ ರಾಗ ಆನ್ ಹರ್ ಮೆಜೆಸ್ಟಿ’ಸ್ ಸೀಕ್ರೆಟ್ ಸರ್ವೀಸ್ ಚಿತ್ರದಿಂದ ಜನಪ್ರಿಯಗೊಂಡಿತು.  ಹಾಗೂ ಜೇಮ್ಸ್ ಬಾಂಡ್ ರಾಗ ಹಾಗೂ ಆನ್ ಹರ್ ಮೆಜೆಸ್ಟಿ’ಸ್ ಸೀಕ್ರೆಟ್ ಸಂಗೀತವು ಆರ್ಟ್ ಆಪ್‌ ನೈಸ್, ಮೋಬಿ, ಪೌಲ್ ಓಕನ್ಫಲ್ಡ್, ಮತ್ತು ಪ್ರೊಫೆಲ್ಲರೆಡ್ಸ್ ಸೇರಿದಂತೆ ಜನಪ್ರಿಯ ಕಲಾವಿದರಿಂದ ಸಾಕಷ್ಟು ಬಾರಿ ಮರುಸಂಯೋಜಿಸಲ್ಪಟ್ಟಿತು.  ಪಾಶ್ಚಾತ್ಯ ಸಂಗೀತ ತಂಡಗಳು ತಮ್ಮ ಹಾಡು ಹೆಲ್ಪ್ ನ ಅಮೇರಿಕಾ ರೂಪಾಂತರ ಹೆಲ್ಪ್ ಎಲ್.ಪಿ ಯನ್ನು ಪರಿಚಯಿಸಲು ಬಾಂಡ್ ರಾಗದ ಒಂದು ಭಾಗವನ್ನು ಬಳಸಿಕೊಂಡರು. ಬ್ರಿಟೀಷ್‌/ ಆಸ್ಟ್ರೇಲಿಯಾ ವಾದ್ಯಗಾರಬಾಂಡ್ ಹೆಸರಿನ ತಂಡವೊಂದು ತನ್ನ  ರಚನೆಯೊಂದಕ್ಕೆ ಬಾಂಡ್ ಆನ್ ಬಾಂಡ್ (ಉದ್ದೇಶಪೂರ್ವಕವಾಗಿಯೇ ಚಿಕ್ಕ ಅಕ್ಷರಗಳಲ್ಲಿ) ಎಂದು ಹೆಸರಿಟ್ಟುಕೊಂಡಿದೆ.[೩೮]
ಬ್ಯಾರಿಯ ಬಳುವಳಿ ನಂತರದಲ್ಲಿ ಡೇವಿಡ್ ಆರ್ನೋಲ್ಡ್, ಇನ್ನಿತರ ಹೆಸರುವಾಸಿ ಸಂಗೀತ ರಚನೆಕಾರರಾದ ಕ್ರಿಸ್ ಮೈನರ್, ಮತ್ತು ಕಾರ್ಬಿನ್ ಓಟ್, ಧ್ವನಿಮುದ್ರಣ ನಿರ್ಮಾಪಕರುಗಳಾದ ಜಾರ್ಜ್ ಮಾರ್ಟಿನ್, ಬಿಲ್ ಕೋಂಟಿ. ಮೈಕೆಲ್ ಕ್ಯಾಮನ್, ಮಾರ್ವಿನ್ ಹ್ಯಾಮ್ಲಿಚ್, ಮತ್ತು ಎರಿಕ್ ಸೆರಾ ರಿಂದಲೂ ಮುಂದುವರೆಸಲ್ಪಟ್ಟಿತು.  ಸಂಗೀತ ಸಂಯೋಜಕ ಆರ್ನೋಲ್ಡ್ 22 ನೇ ಬಾಂಡ್ ಚಿತ್ರ ಕ್ವಾಂಟಮ್ ಆಫ್‌ ಸೊಲೇಸ್  ಚಿತ್ರದ ಸಂಗೀತ ಸಂಯೋಜಕನಾಗಿದ್ದು, ಬಾಂಡ್ ಸರಣಿಗಳ ಪ್ರಸ್ತುತ ಹಾಗೂ ಮೆಚ್ಚಿನ ಸಂಗೀತ ಸಂಯೋಜಕನೂ ಕೂಡ.
ಬಾಂಡ್ ಚಿತ್ರದ ಮುಖ್ಯ ಭಾಗ ಸಂಗೀತವಾಗಿದ್ದು, ಶೀರ್ಷಿಕೆ ಸಮಯದಲ್ಲಿ ಬರುವ ಇದನ್ನು ಪ್ರಮುಖ ಜನಪ್ರಿಯ ಹಾಡುಗಾರರು ಹಾಡಿದ್ದಾರೆ.?(ಟೀನಾ ಟರ್ನರ್, ಪೌಲ್ ಮೆಕ್-ಕಾರ್ಟ್ನಿ ಮತ್ತು ವಿಂಗ್ಸ್, ಶೆರ್ಲಿ ಕ್ರೌ ಹಾಗೂ ಟೋಮ್ ಜೋನ್ಸ್ ಮುಂತಾದವರು)   ಶೆರ್ಲಿ ಬಸ್ಸೇ ಮೂರು ಬಾರಿ ಇದನ್ನು ಹಾಡಿದ್ದಾರೆ.   ಡಾ. ನೋ  ದ ನಂತರ ಆನ್ ಹರ್ ಮೆಜೆಸ್ಟಿ’ಸ್‌ ಸಿಕ್ರೆಟ್‌ ಸರ್ವೀಸ್‌  ಒಂದೇ ವಾದ್ಯದಲ್ಲಿ ಹಾಡಲ್ಪಟ್ಟ ಏಕೈಕ ಬಾಂಡ್‌ ಚಿತ್ರ. ವಿ ಹ್ಯಾವ್ ಆಲ್ ದ ಟೈಮ್ ಇನ್ ದ ವರ್ಲ್ಡ್ ಹಾಡಿನಲ್ಲಿ ಬಾಂಡ್ ಮತ್ತು ಅವನ ಹೆಂಡತಿ ಟ್ರೇಸಿ ಇರುವ ದೃಶ್ಯದಲ್ಲಿ ಹಾಡಲ್ಪಡುವ ಪ್ರೀತಿಯ ಹಾಡನ್ನು ಲೂಯಿಸ್ ಆರ್ರ್ಮ್ ಸ್ಟ್ರಾಂಗ್ ಹಾಡಿದ್ದಾರೆ. ಇದು ಬಾಂಡ್ ಚಿತ್ರದಲ್ಲಿಯ ಕೊನೆಯ ವಾಕ್ಯವಾಗಿದ್ದು ಅನಧಿಕೃತ ರಾಗವೆಂದು ಪರಿಗಣಿಸಲ್ಪಟ್ಟಿದೆ.  ಹಾಗೆಯೇ ಫ್ರಾಂ ರಷಿಯಾ ವಿಥ್ ಲವ್  ಚಿತ್ರದಲ್ಲಿ ಬಳಸಿರುವ ವಾದ್ಯ ಸಲಕರಣೆಗಳು ಎರಡನೇ ಭಾಗದಲ್ಲಿ ಮ್ಯಾಟ್ ಮಾನ್ರೋ ಸಾಹಿತ್ಯ ರಚಿಸಿ ಹಾಡಿರುವ ಚಿತ್ರದಲ್ಲಿ ಕೇಳಬಹುದಾಗಿದೆ ಹಾಗೂ ಚಿತ್ರದ ಸೌಂಡ್ ಟ್ರಾಕ್ ಆಲ್ಬಮ್‌ನಲ್ಲಿ ಕೂಡ ಬಳಸಿಕೊಳ್ಳಲಾಗಿದೆ.
ಥೀಮ್‌ಗಳು ಸಾಮಾನ್ಯವಾಗಿ ಚಿತ್ರದ ಜೊತೆಗೆ ಗುರುತಿಸಲ್ಪಡುತ್ತವೆ. ಥಂಡರ್ಬಾಲ್  ನ ಕಿಸ್ ಕಿಸ್ ಬ್ಯಾಂಗ್ ಬ್ಯಾಂಗ್ ಹಾಡನ್ನು ತಿರಸ್ಕರಿಸಲು ಇದು ಚಿತ್ರದೊಂದಿಗೆ ಗುರುತಿಸಲ್ಪಡದಿದ್ದೇ ಪ್ರಮುಖ ಕಾರಣ.  ದ ಸ್ಪೈ ಹೂ ಲವ್ ಮಿ ಚಿತ್ರದ ನೋಬಡಿ ಡಸ್ ಇಟ್ ಬೆಟರ್ ಥೀಮ್ ಬಾಂಡ್ ಚಿತ್ರದೊಂದಿಗೆ ಗುರುತಿಸಲ್ಪಡದ ಪ್ರಥಮ ಥೀಮ್ ಆಗಿದ್ದರೂ ದ ಸ್ಪೈ ಹೂ ಲವ್ ಮಿ  ಎನ್ನುವ ವಾಕ್ಯ ಅದರಲ್ಲಿ ಅಲ್ಲಲ್ಲಿ ಬಳಕೆಯಾಗಿದೆ.   ಈ ಹಾಡು ಚಿತ್ರದುದ್ದಕ್ಕೂ, ಹಾಗೂ ಹೆಸರು ನೀಡುವ ಹಂತದಲ್ಲಿ ವಾದ್ಯಗಳಲ್ಲಿ ಬಳಕೆಯಾಗಿದೆ.  ನೋಬಡಿ ಡಸ್ ಇಟ್ ಬೆಟರ್ 1977 ರ ಅತ್ಯುತ್ತಮ ನೈಜ ರಾಗವೂ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಯಿತು. ಆದರೆ ಯು ಲೈಟ್ ಅಪ್ ಮೈ ಲೈಫ್  ಸಂಗೀತ ರಾಗಕ್ಕೆ ಪ್ರಶಸ್ತಿ ಕೈತಪ್ಪಿತು.   ಹಾಮ್ಲಿಚ್ ನ ಚಿತ್ರ ಕೂಡ ಗಳಿಕೆಯಿಂದಾಗಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದರೂ ಜಾನ್ ವಿಲ್ಲಿಯಮ್ಸ್ಸ್ಟಾರ್ ವಾರ್ಸ್‌  ಚಿತ್ರದೆದುರು ಸೋಲೊಪ್ಪಿಕೊಂಡಿತು.

ಅಕಾಡೆಮಿ ಪ್ರಶಸ್ತಿಯ ಅತ್ಯುತ್ತಮ ಹಾಡಿಗೆ ಆಯ್ಕೆಯಾದ ಇನ್ನಿತರ ಬಾಂಡ್ ರಾಗಗಳೆಂದರೆ ಪೌಲ್ ಮತ್ತು ಲಿಂಡಾ ಮೆಕ್ ಕಾರ್ತ್ನಿ ಸಾಹಿತ್ಯ ಹಾಗೂ ಅವರದ್ದೇ ತಂಡ ವಿಂಗ್ಸ್‌ ದಿಂದ ಹಾಡಲಾದ "ಲಿವ್ ಎಂಡ್ ಲೆಟ್ ಡೈ", ಹಾಗೂ ಬಿಲ್ ಕಂಟಿ, ಮೈಕೆಲ್ ಲೀಸನ್ ಬರೆದು ಶೀನ ಈಸ್ಟನ್ ಹಾಡಿರುವ ಫಾರ್ ಯುವರ್ ಐಸ್ ಓನ್ಲಿ.

ಅಮೇರಿಕಾದ ಪಾಪ್ ಹಾಡುಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಗಳಿಸಿದ ಏಕೈಕ ಬಾಂಡ್ ಚಿತ್ರವೆಂದರೆ ಡ್ಯುರಾನ್ ಡ್ಯುರಾನ್ ನ "ಅ ವ್ಯೂ ಟು ಕಿಲ್".

ಫಾರ್ ಯುವರ್ ಐಸ್ ಓನ್ಲಿ ಚಿತ್ರದ ಶೀರ್ಷಿಕೆ ದೃಶ್ಯಗಳಲ್ಲಿ ಕಾಣಿಸಿಕೊಂಡ ಏಕಮಾತ್ರ ಗಾಯಕಿ ಶೀನಾ ಈಸ್ಟನ್. ಮಡೋನಾ, ಚಿತ್ರದ ಶೀರ್ಷಿಕೆ ಹಾಡಿನಲ್ಲಿ ಒಂದು ಪಾತ್ರವಾಗಿ ಕಾಣಿಸಿಕೊಂಡ ಏಕೈಕ ಗಾಯಕಿ. ಈಕೆ ಬೋಧಕ ವೆರಿಟಿ ಯೊಂದಿಗೆ ಖಡ್ಗವಿದ್ಯೆ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಡೈ ಅನದರ್ ಡೇ ಗೆ ಥೀಮ್ ಕೊಡುಗೆ ನೀಡಿದಳು.

ಗಮನಾರ್ಹ ಸಂಗತಿಯೆಂದರೆ ಶೀರ್ಷಿಕೆ ಗೀತೆಯಲ್ಲಿ ಚಿತ್ರದ ಸಾರಾಂಶವನ್ನು ತೋರಿಸಿದ ಏಕೈಕ ಚಲನಚಿತ್ರ ಡೈ ಅನದರ್ ಡೇ . ಉಳಿದ ಚಲನಚಿತ್ರಗಳಲ್ಲಿ ಕೇವಲ ಅಮೂರ್ತ ಚಿತ್ರಗಳನ್ನು ತೋರಿಸಲಾಗುತ್ತಿತ್ತು. ಇತ್ತೀಚೆಗಿನ ರಾಗ ಎಲಿಸಿಯಾ ಮತ್ತು ಜಾಕ್ ವೈಟ್ ನ ಡೈ ಅನದರ್ ಡೇ ಆಗಿದ್ದು, ಇದು ಸಾಹಿತ್ಯದಲ್ಲಿ ಚಿತ್ರದ ಹೆಸರು ಹೊಂದಿರದ ಮೊದಲ ಬಾಂಡ್ ಚಿತ್ರ ಕೂಡ ಹೌದು.
ಇತ್ತೀಚಿನ ಹಾಡೆಂದರೆ ಅಲಿಸಾ ಕೇಯ್ಸ್ ಮತ್ತು ಜಾಕ್ ವೈಟ್ ಹಾಡಿದ ಕ್ವಾಂಟಮ್ ಆಪ್‌ ಸೊಲೇಸ್ಅನದರ್ ವೇ ಟು ಡೈ. ಇದು ಜೇಮ್ಸ್ ಬಾಂಡ್ ರಾಗದ ಮೊದಲ ಯುಗಳ ಗೀತೆ. ಇದು ಸಾಹಿತ್ಯದಲ್ಲಿ ಚಿತ್ರದ ಹೆಸರು ಹೊಂದಿರದ ಮೊದಲ ಬಾಂಡ್ ಚಿತ್ರ ಕೂಡ ಹೌದು.

1998ರಲ್ಲಿ ಬ್ಯಾರಿ ಸಂಗೀತ ನೀಡಿದ ಯು ಲಿವ್ ಓನ್ಲಿ ಟ್ವೈಸ್ ರಾಗವನ್ನು ಜನಪ್ರಿಯ ಹಾಡು ಮಿಲ್ಲೇನಿಯಂ ನಿರ್ಮಾಪಕ, ಗೈ ಚೇಂಬರ್ ರಚನೆಕಾರ ರಾಬಿ ವಿಲ್ಲಿಯಮ್ಸ್ ಗಾಗಿ ಅಳವಡಿಸಿಕೊಳ್ಳಲಾಗಿತ್ತು. ವಿಲ್ಲಿಯಂಸ್ ನ ಆಲ್ಬಮ್‌ನಲ್ಲಿ ಜೇಮ್ಸ್ ಬಾಂಡ್ ಅಣಕವಿದ್ದು, ಬಾಂಡ್ ಚಿತ್ರಗಳಾದ ಥಂಡರ್ ಬಾಲ್ , ಫ್ರಂ ರಷಿಯಾ ವಿಥ್ ಲವ್ ಚಿತ್ರಗಳ ಉಲ್ಲೇಖವಿದೆ. ಗಮನಾರ್ಹ ಸಂಗತಿಯೆಂದರೆ ಇದರ ಚಿತ್ರೀಕರಣವಾಗಿದ್ದು ಹೆಚ್ಚಿನ ಬಾಂಡ್ ಚಿತ್ರಗಳು ತಯಾರಿಸಲ್ಪಟ್ಟ ಪೈನ್ ವುಡ್ ಸ್ಟುಡಿಯೋದಲ್ಲಿ.

2004 ರಲ್ಲಿ ಕ್ಯಾವಲಿಯರ್ಸ್ ಡ್ರಂ ಹಾಗೂ ಬ್ಯೂಗಲ್ ಕೊರ್ಪ್ಸ್ ತಂಡಗಳು ಡೇವಿಡ್ ಆರ್ನಾಲ್ಡ್ ರಚಿಸಿದ "007" ಬಾಂಡ್ ಸಂಗೀತವನ್ನು ಬಳಸಿ ಡ್ರಂ ಕೊರ್ಪ್ಸ್ ಇಂಟರ್ನ್ಯಾಷನಲ್ ವರ್ಲ್ಡ್ ಚಾಂಪಿಯನ್‌ಶಿಪ್‌ ಪಡೆದವು.  ಗೋಲ್ಡನ್ ಐ , ಡೈ ಅನದರ್ ಡೇ  (ಹೊವರ್ ಕಾಸ್ಟ್ ರಾಗ ಮತ್ತು ವೆಲ್ಕಂ ಟು ಕ್ಯೂಬಾ) ಮತ್ತು ಟುಮಾರೋ ನೆವರ್ ಡೈಸ್  ಗಳ ತುಣುಕನ್ನು ಕ್ಯಾವಲಿಯರ್ಸ್ ಪ್ರದರ್ಶಿಸಿತು.

ಆದರೆ 1967 ದ ಲುಕ್ ಫಾರ್ ಲವ್ ರಾಗವೂ ಇದ್ದ ಕ್ಯಾಸಿನೋ ರೋಯಲ್ ಗಾಗಿ ಬರ್ಟ್‌ ಬಾಚರಾಚ್ಸ್ ತಂಡವು ಅಕಾಡಮಿ ಪ್ರಶಸ್ತಿಯ ಉತ್ತಮ ಸಂಗೀತ ವಿಭಾಗಕ್ಕೆ ಆಯ್ಕೆಯಾಯಿತಲ್ಲದೆ, ಸೆರ್ಜಿಯೋ ಮೆಂಡೆಸ್‌ ಮತ್ತು ಬ್ರೇಸಿಲ್ '66 ಅವರಿಂದ ದ್ವನಿಮುದ್ರಣಗೊಂಡು (1968 ರ ಬಿಲ್‌ಬೋರ್ಡ್‌ ಪಾಪ್ ಪಟ್ಟಿಯಲ್ಲಿ #4ನೇ ಸ್ಥಾನ )ಅತಿ ಹೆಚ್ಚು ಮಾರಾಟವಾದ ಆ ಕಾಲಮಾನದ ಗುಣಮಟ್ಟದ ಸಂಗೀತವಾಗಿ ಹೆಸರಾಯಿತು. ಮತ್ತೊಮ್ಮೆ ಕ್ಯಾಸಿನೋ ರೋಯಲ್ ಯಿಂದ ಪ್ರೇರಿತವಾದ ಇದು ಪ್ರಥಮ ಆಸ್ಟಿನ್ ಪವರ್ಸ್‌ ಚಿತ್ರದಲ್ಲಿ ಕೇಳಿಬಂತು.

ವಿಡಿಯೋ ಗೇಮ್ಸ್ ಬದಲಾಯಿಸಿ

ಪಾರ್ಕರ್‌ ಸಹೋದರರಿಂದ ತಯಾರಿಸಿ ಪ್ರಕಟಿಸಲ್ಪಟ್ಟ ಮೊದಲ ಬಾಂಡ್ ವೀಡಿಯೋ ಗೇಮ್ ಅಟಾರಿ 2600, ದ ಅಟಾರಿ 5200, ದ ಅಟಾರಿ 800, ದ ಕೊಮೊಡೋರ್ 64, ಮತ್ತು ಸೊಲಿಸೋ ವಿಶನ್ 1983 ರಲ್ಲಿ ಬಿಡುಗಡೆಗೊಂಡಿತು.[೩೯] ಬಾಂಡ್ ಚಲನಚಿತ್ರಗಳು, ಅಥವಾ ಕಾದಂಬರಿಯಿಂದ ಪ್ರೇರಿತಗೊಂಡ ಇನ್ನೂ ಅನೇಕ ವೀಡಿಯೋ ಗೇಮ್ ಗಳು ಬಂದಿವೆ.

1997ರ ಗೋಲ್ಡನ್ ಐ 007 ನ ನಿನ್ಟೆನ್ಡೊ 64 ಬರುವವರೆಗೆ ಬಾಂಡ್ ವೀಡಿಯೋ ಗೇಮ್‌ಗಳು ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ನಂತರದಲ್ಲಿ ಬಂದ ಎಲ್ಲ ವೀಡಿಯೋ ಗೇಮ್‌ಗಳು ಜನಪ್ರಿಯತೆಗಾಗಿ ಗೋಲ್ಡನ್ ಐ 007 ಅನ್ನು ಅನುಕರಣೆ ಮಾಡಿದವು. ಇಲ್ಲಿಯವರೆಗಿನ ಎಲ್ಲ ಬಾಂಡ್ ಗೇಮ್ ಗಳು ಗೋಲ್ಡನ್ ಐ 007 ದ ಚಿತ್ರಕಥೆ ಅಥವಾ ಶೀರ್ಷಿಕೆ ಗಳನ್ನಿಟ್ಟುಕೊಂಡೇ ಹೊರಬಂದಿವೆ; GoldenEye: Rogue Agent ಒಂದು ಗೇಮ್ ನ ಹೆಸರು ಗೋಲ್ಡನ್ ಐ ರೋಗ್ ಎಜೆಂಟ್. ಗೋಲ್ಡನ್ ಐ ಚಿತ್ರಕ್ಕೂ. ಗೋಲ್ಡನ್ ಐ ,ಗೋಲ್ಡನ್ ಐ ೦೦೭ ಗೇಮ್ ಗಳಿಗೂ ಯಾವುದೇ ಸಂಬಂಧವಿಲ್ಲ. ಒಂದರಲ್ಲಿ ಸ್ವತಹ ಬಾಂಡ್ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡು ವರ್ಚುವಲ್ ರಿಯಾಲಿಟಿ ಮಿಶನ್‌‍ಗಾಗಿ ಸಾಯುವ ಪಾತ್ರದ ಚಿತ್ರಣವಿದೆ. ಇದು ಗೇಮ್‌ನ ಮೊದಲ ಭಾಗವಾಗಿತ್ತು.

1999ರಲ್ಲಿ ಸಿಕ್ಕ ಪರವಾನಗಿಯ ನಂತರ ಎಲೆಕ್ಟ್ರೋನಿಕ್ ಆರ್ಟ್ಸ್ ಕಂಪನಿಯು ಎಂಟು ವೀಡಿಯೋ ಗೇಮ್ ಗಳನ್ನೂ ಬಿಡುಗಡೆ ಮಾಡಿತು. ಜನಪ್ರಿಯ ಕಾದಂಬರಿ ಎವರಿಥಿಂಗ್ ಆರ್ ನಥಿಂಗ್ ಸೇರಿದಂತೆ ಐದು ಗೇಮ್‌ಗಳು ಮೂಲ ಕಥೆಗಳನ್ನು ಬಳಸಿಕೊಂಡಿದ್ದು, ಗೋಲ್ಡನ್ ಐ 007 ದಿಂದ ಪ್ರಾರಂಭವಾದ ’ಫರ್ಸ್ಟ್‌ ಪರ್ಸನ್‌ ಶೂಟರ್‌’ಪದ್ಧತಿಯನ್ನು ಮುರಿದವು (ಏಜೆಂಟ್ ಅಂಡರ್ ಫೈರ್ ಹಾಗೂ ನೈಟ್ ಫೈರ್ ಮುಂತಾದವು ), ಅದರ ಬದಲು ’ಥರ್ಡ್‌-ಪರ್ಸನ್‌ ಪರ್ಸ್ಪೆಕ್ಟಿವ್‌’ ಬಳಸಿದವು. ಇವುಗಳಲ್ಲಿ ಜನಪ್ರಿಯ ನಟರುಗಳಾದ ವಿಲ್ಲಿಯಮ್‌ ಡೆಫೋ, ಹೇಡಿ ಕ್ಲಂ, ಜೋಡಿ ಡೆಂಚ್, ಜಾನ್ ಕ್ಲೀಸ್ ಮತ್ತು ಪಿಯರ್ಸ್ ಬ್ರೋಸ್ನಾನ್ ಕೂಡ ಇದ್ದರು. ಮುಂಚಿನ ಕೆಲವು ಗೇಮ್‌ ಗಳಲ್ಲಿ ಬಾಂಡ್ ಆಗಿ ಬ್ರೋಸನ್‌ ರನ್ನು ಬಳಸಿಕೊಂಡಿದ್ದವು. 2005 ರಲ್ಲಿ ಎಲೆಕ್ಟ್ರೋನಿಕ್ ಆರ್ಟ್ಸ್ ಕಂಪನಿಯು ಫ್ರಂ ರಷಿಯಾ ವಿಥ್ ಲವ್ ನ್ನು ಅಳವಡಿಸಿಕೊಂಡು ಮತ್ತೊಂದು ವೀಡಿಯೋ ಗೇಮ್ ಬಿಡುಗಡೆ ಮಾಡಿತು ಇದೇ ಎಳೆಯ ಮೇಲೆ ಬಂದ ಇನ್ನೊಂದು ಗೇಮ್ ಎವರಿಥಿಂಗ್ ಆರ್ ನಥಿಂಗ್. ಇದು ಸೀನ್ ಕಾನ್ನೆರಿ ಬಾಂಡ್ ನ ಚಿತ್ರ ಆಧರಿಸಿ ಬಂದ ಎರಡನೇ ಗೇಮ್ ( ಮೊದಲನೆಯದು ೧೯೮೦ ರ ಗೋಲ್ಡ್ ಫಿಂಗರ್ ನ ಸಾಹಿತ್ಯ ಆಧಾರಿತ ) ಹಾಗೂ ಸೀನ್ ಕಾನ್ನೆರಿ ಯನ್ನಾಗಿ ಆಡಲು ಅವಕಾಶವಿದ್ದ ಮೊದಲ ಗೇಮ್. ಇದರಲ್ಲಿ ಕಾನ್ನೆರಿ ಸ್ವತಹ ಧ್ವನಿ ನೀಡಿದ್ದರು ಮತ್ತು ೨೨ ವರ್ಷಗಳಲ್ಲಿ ಮೊದಲ ಸಲ ಬಾಂಡ್ ಪಾತ್ರದಲ್ಲಿ ನಟಿಸಿದ್ದರು.

2006ರಲ್ಲಿ ಆಕ್ಟಿವಿಸನ್‌ ಕಂಪೆನಿಯು ಬಾಂಡ್‌ಗೆ ಸಂಬಂಧಪಟ್ಟ ಗೇಮ್ಸ್‌ಗಳನ್ನು ತಯಾರಿಸಲು ಪರವಾನಗಿಯನ್ನು ಪಡೆದುಕೊಂಡಿತು. ಸ್ವಲ್ಪ ಮಟ್ಟದ ಪರವಾನಗಿಯನ್ನು EAಯ ಜೊತೆಗೆ ಹಂಚಿಕೊಳ್ಳುವಂತೆ ನಂತರದಲ್ಲಿ ಅದನ್ನು ಸಂಪೂರ್ಣವಾಗಿ ತಾನೇ ಪಡೆದುಕೊಂಡಿತು. 2007 ಸೆಪ್ಟೆಂಬರ್‌‌ನಲ್ಲಿ ಇದು ಸಂಪೂರ್ಣವಾಗಿ ಆಕ್ಟಿವಿಸನ್‌ ಕಂಪೆನಿಯ ಪರವಾಯ್ತು.[೪೦] ಆಕ್ಟಿವಿಸನ್‌ನ ಸ್ಟುಡಿಯೋ ಟ್ರೆಯಾರ್ಕ್‌ ಇದು ಹೊಸ ಜೇಮ್ಸ್‌ಬಾಂಡ್‌ ಗೇಮ್‌ "ಕ್ವಾಂಟಮ್‌ ಆಫ್ ಸೊಲೇಸ್‌" ಅನ್ನು ಬಿಡುಗಡೆ ಮಾಡಿತು. ಇದು "ಕ್ಯಾಸಿನೊ ರೊಯಾಲ್‌" ಮತ್ತು "ಕ್ವಾಂಟಮ್‌ ಆಪ್‌ ಸೊಲೇಸ್‌" ಸಿನೆಮಾದ ಅಂಶಗಳನ್ನು ಹೊಂದಿತ್ತು ("ಗೋಲ್ಡನ್‌ಐ 007"ರೀತಿಯದ್ದಲ್ಲ). ಇದರಲ್ಲಿ ಒಬ್ಬ ಮುಖ್ಯ ಶೂಟರ್‌ ಅಲ್ಲದೆ ಹೊಸದಾಗಿ ’ಡ್ಯಾಶಿಂಗ್‌ ಟು ಕವರ್‌’ ಮತ್ತು ’ಕವರ್ ಫೈರ್‌’ ಎಂಬ ಮೂರು ಜನ ಆಡಬಹುದಾದ ಅವಕಾಶ ಕೂಡ ನೀಡಲಾಗಿತ್ತು.

ಸೋನಿ ಎರಿಕ್ಸನ್ 21ನೇ ಬಾಂಡ್ ಚಿತ್ರಕ್ಕೆ ಸಂಬಂಧಿಸಿದ ಕ್ಯಾಸಿನೋ ರೋಯಲೇ ಯನ್ನು ತನ್ನ ಕೆ.800i ಮೊಬೈಲ್ ಫೋನ್‌‌ಗಳಲ್ಲಿ ಬಿಡುಗಡೆಗೊಳಿಸಿತು ಇದರಲ್ಲಿ ಜಾವಾ ಎಂ.ಇ ಗೇಮ್ ಚಲನಚಿತ್ರದ ಮೇಲೆ ಆಧಾರಿತಗೊಂಡಿತ್ತು ವಡಾಫೋನ್ ಕೂಡ ಇದೆ ಕಥೆಯ ಆಧಾರದಲ್ಲಿ 007 ಎಂಬ ಗೇಮ್ ಬಿಡುಗಡೆಗೊಳಿಸಿತು. ಇದನ್ನು ಅಭಿವೃದ್ಧಿಗೊಳಿಸಿದ್ದು ಐ.ಓ.ಎಂ.ಓ.

ಕಾಮಿಕ್ ಪುಸ್ತಕಗಳು ಹಾಗೂ ಬದಲಾಯಿಸಿ

1957ರಲ್ಲಿ ಲಾರ್ಡ್ ಬೀವರ್ ಬ್ರೂಕ್ಒಡೆತನದ ದಿನಪತ್ರಿಕೆ ಡೈಲಿ ಎಕ್ಸ್‌ಪ್ರೆಸ್ ಇಯಾನ್ ಫ್ಲೆಮಿಂಗ್ ನನ್ನು ಭೇಟಿ ಮಾಡಿ ಕಾಮಿಕ್ ಪುಸ್ತಕಗಳಿಗಾಗಿ ಆತನ ಕಥೆಗಳನ್ನು ಬಳಸಿಕೊಳ್ಳಲು ಕೇಳಿಕೊಂಡಿತು. ಸ್ಟ್ರಿಪ್ ಗಳಿಂದಾಗಿ ಬರಹದ ಗುಣಮಟ್ಟ ಕೆಡುವುದೆಂಬ ಅನಿಸಿಕೆಯಿಂದ ಪ್ರಾರಂಭದಲ್ಲಿ ಇಷ್ಟವಿಲ್ಲದಿದ್ದರೂ ಫ್ಲೆಮಿಂಗ್ ನಂತರ ಒಪ್ಪಿದ್ದರಿಂದ ಮೊದಲ ಸ್ಟ್ರಿಪ್ ಕ್ಯಾಸಿನೋ ರಾಯೇಲ್ 1958ರಲ್ಲಿ ಪ್ರಕಟಗೊಂಡಿತು ಇದಾದ ನಂತರ ಫ್ಲೆಮಿಗ್‌‍ನ ಕಾದಂಬರಿ, ಸಣ್ಣ ಕಥೆಗಳು ಹಾಗೂ ಕಿಂಗ್ಸ್‌ಲೇ ಆಮಿಸ್‌ನ ಕರ್ನಲ್ ಸನ್ ಸೇರಿದಂತೆ ಅನೇಕ ಸಚಿತ್ರ ಬಾಂಡ್ ಸಾಹಸಗಾಥೆಗಳು ಪ್ರಕಟಗೊಂಡವು. ಮುಂದೆ 1983ರವರೆಗೂ ಮೂಲ ಕಥೆಗಳನ್ನೊಳಗೊಂಡ ಕಾಮಿಕ್ ಸ್ಟ್ರಿಪ್‌ಗಳು ಹೊರಬಂದವು.

ಟೈಟಾನ್ ಪುಸ್ತಕವು ಈ ಕಾಮಿಕ್ ಗಳನ್ನು ಗ್ರಾಫಿಕ್ ಕಾದಂಬರಿ ವಿನ್ಯಾಸದ ಸ್ಟ್ರಿಪ್ ಸರಣಿಗಳ ಶೈಲಿಯಲ್ಲಿ ಪುನರ್ಮುದ್ರಿಸಿತು. ೨೦೦೫ ರ ಅಂತ್ಯದಲ್ಲಿ ಇದು ಎಲ್ಲ ಫ್ಲೆಮಿಂಗ್ ಸಾಹಿತ್ಯ ಆಧಾರಿತ ಹಾಗೂ ಕೊಲೋನಲ್ ಸನ್ ಗಳನ್ನೂ ಮುಗಿಸಿ ಮೂಲ ಕಥೆಗಳ ಪುನರ್ಮುದ್ರಣಕ್ಕೆ ಪ್ರಾರಂಭಿಸಿತು

ಜೇಮ್ಸ್ ಬಾಂಡ್ ಸಿನೆಮಾ ಕಥೆ ಆಧಾರಿತ ಸಾಕಷ್ಟು ಕಾಮಿಕ್ಸ್‌ ಪುಸ್ತಕಗಳು ಹಲವಾರು ವರ್ಷದುದ್ದಕ್ಕೂ ಪ್ರಕಟವಾದವು, ಅಲ್ಲದೆ ಸಾಕಷ್ಟು ಮೂಲ ಕಥೆಗಳೂ ಕೂಡ ಕಂಡುಬಂದವು.

ಇತ್ತೀಚೆಗೆ, ಬಾಂಡ್‌ ಕಥಾ ಆಧಾರಿತ ಸಣ್ಣ-ಆವೃತ್ತಿಯ ಪುಸ್ತಕ (ಕೃತಿ ಸ್ವಾಮ್ಯ ಸಂಬಂಧಪಟ್ಟ ಸಮಸ್ಯೆಗಳನ್ನು ಕಡಿಮೆಮಾಡುವ ಸಲುವಾಗಿ ’ಜಿಮ್ಮಿ’ ಎಂದು ಕರೆಯಲಾಯ್ತು) ಕಂಡುಬಂದಿತು. The League of Extraordinary Gentlemen: Black Dossier ಈ ಕಥೆಯಲ್ಲಿ, ಬಾಂಡ್‌ ಖಳನಾಯಕನಾಗಿದ್ದು; ಅವನು ನಾಯಕರಾಗಿರುವ ಮಿನಾ ಮುರ್ರೆ ಮತ್ತು ಅಲನ್ ಕ್ವಾಟರ್‌ಮೈನ್‌ರನ್ನು ಲಂಡನ್‌ನ ಸುತ್ತ ಹಿಂಬಾಲಿಸಿಕೊಂಡು ಹೋಗುತ್ತಾನೆ. ಅಲ್ಲದೆ ಇದರ ಜೊತೆಗೆ ರೂಪಬದಲಿಸಿದ ಆವೃತ್ತಿಯಾದ ಬುಲ್‌ಡಾಗ್‌ ಡ್ರಮ್ಮೊಂಡ್‌ ("ಹ್ಯೂಗೊ ಡ್ರಮ್ಮೊಂಡ್‌") ಮತ್ತು ಎಮ್ಮಾ ಪೀಲ್ ("ಮಿಸ್‌ ನೈಟ್‌"). ಜಿಮ್ಮಿಯನ್ನು ಬ್ರಿಟನ್‌ನ ಕೆಲಸಗಾರ ಆದರೆ ಯುಎಸ್‌ನ ಕೆಲಸಗಾರನಂತೆ ನಟಿಸುವ ಅದಕ್ಷ ಹಾಗೂ ಅಪ್ರಿಯ ನೌಕರನಂತೆ ಚಿತ್ರಿಸಲಾಗಿದೆ.

ಪಾತ್ರಗಳು ಬದಲಾಯಿಸಿ

ಜೇಮ್ಸ್ ಬಾಂಡ್ ಸರಣಿಯ ಕಾದಂಬರಿ ಹಾಗೂ ಚಲನಚಿತ್ರಗಳಲ್ಲಿ ಸಾಕಷ್ಟು ಈಲೀಸ್ ಹಾಗೂ ಖಳನಾಯಕರಿದ್ದಾರೆ. ಕಾದಂಬರಿಗಳಲ್ಲಿ ಬಾಂಡ್ ನ ಗುಪ್ತಚರ ದಳದ ಉನ್ನತಾಧಿಕಾರಿಗಳು ಅಕ್ಷರಗಳಿಂದ ಗುರುತಿಸಲ್ಪಡುತ್ತಾರೆ. ಉದಾಹರಣೆಗೆ M ಮತ್ತು Q . ಬಾಂಡ್ ನಿಗೆ ಲಿಯೋಲಿಯಾ ಪೋನ್ಸೊಂಬಿ ಮತ್ತು ಮೇರಿ ಗುಡ್ ನೈಟ್ ಎಂಬ ಇಬ್ಬರು ಕಾರ್ಯದರ್ಶಿಗಳನ್ನು ನೇಮಿಸಿಕೊಂಡಿದ್ದು ಚಲನಚಿತ್ರಗಳಲ್ಲಿ ಈ ಪಾತ್ರಗಳಿಲ್ಲ. ಅಪರೂಪಕ್ಕೊಮ್ಮೆ ಬಾಂಡ್ ಆತನ ಸ್ನೇಹಿತ ಸಿ.ಐ.ಎ ಏಜೆಂಟ್ ಫೆಲಿಕ್ಸ್ ಲಯಟರ್ ನೊಂದಿಗೆ ಕೆಲಸ ಹಂಚಿಕೊಳ್ಳುತ್ತಾನೆ.

ಬಾಂಡ್ ಕಾದಂಬರಿಗಳು ಹಾಗೂ ಚಲನಚಿತ್ರಗಳಲ್ಲಿ ಒಂದೇ ಪಾತ್ರಗಳು ಅನೇಕ ಬಾರಿ ಕಾಣಿಸಿಕೊಳ್ಳುತ್ತವೆ. ಕೆಲವು ನೆನಪಿನಲ್ಲುಳಿಯುವ ಪಾತ್ರಗಳೆಂದರೆ ಬಿಲ್ ಟ್ಯಾನರ್, ರೆನೆ ಮಾಥಿಸ್, ಜಾಕ್ ವೇಡ್, ಜಾವ್ಸ್, ಮತ್ತು ಚಾರ್ಲ್ಸ್ ರಾಬಿನ್ಸನ್. [ ನೂರಾ ಎಂಟು] ಜೆ.ವಿ. ಪೆಪ್ಪರ್ ಮತ್ತೊಮ್ಮೆ ಇಲ್ಲಿ ಪಾತ್ರವಾಗಿದ್ದಾರೆ.

ವಾಹನಗಳು ಮತ್ತು ಯಂತ್ರೋಪಕರಣಗಳು ಬದಲಾಯಿಸಿ

ಜೇಮ್ಸ್ ಬಾಂಡ್ ನ ಸಾಹಿತ್ಯ ಮತ್ತು ಚಲನಚಿತ್ರಗಳಲ್ಲಿ ವಿನೂತನ ಬೇಹುಗಾರಿಕೆ ಮತ್ತು ಯಂತ್ರೋಪಕರಣಗಳು ಜನಪ್ರಿಯ ಮೂಲವಸ್ತುಗಳು ಇವು ಕೆಲವೊಮ್ಮೆ ಬಾಂಡ್ ನ ಮಿಶನ್ ಗಳನ್ನು ಸಂಪೂರ್ಣ ಗೆಲುವಿನೊಂದಿಗೆ ಮುಗಿಸಲು ಅಗತ್ಯ ಸಾಧನಗಳೆನ್ನಬಹುದು.

 
ಗೋಲ್ಡ್‌‍ಫಿಂಗರ್ ಸಿನೆಮಾದಲ್ಲಿ ಕಂಡುಬಂದಂತೆ ಆಸ್ಟನ್‌ ಮಾರ್ಟಿನ್ DB5.

ಫ್ಲೆಮಿಂಗ್ ನ ಕಾದಂಬರಿಗಳು ಹಾಗೂ ಮೊದಲಿನ ದೃಶ್ಯ ಅಳವಡಿಕೆಗಳು ಬೂಬಿ ಟ್ರಾಪ್ಡ್ ಅಟ್ಯಾಚ್‌ ಕೇಸ್‌‍ನಂತಹ ಅತಿಚಿಕ್ಕ ಸಾಧನಗಳನ್ನು ಫ್ರಮ್‌ ರಷಿಯಾ ವಿಥ್ ಲವ್‌‍ ಸಿನೆಮಾದಲ್ಲಿ ತೋರಿಸಿದ್ದವು. ಡಾ. ನೋದಲ್ಲಿ ಬಾಂಡ್‌ನ ಏಕೈಕ ಸಾಧನಗಳೆಂದರೆ ಗೈಗರ್‌ ಕೌಂಟರ್‌‍ಗಳಾಗಿದ್ದು ಹೊಳೆಯುವ ಕೈಗಡಿಯಾರ(ಮತ್ತು ವಿಕಿರಣಶೀಲ)ಗಳಾಗಿದ್ದವು. ೧೯೬೪ ರಲ್ಲಿ ಬಂದ ಗೋಲ್ಡ್ ಫಿಂಗರ್ ನಲ್ಲಿ ಈ ಯಂತ್ರೋಪಕರಣಗಳು ಉನ್ನತ ವ್ಯಕ್ತಿಚಿತ್ರವನ್ನು ಊಹಿಸುವಂತೆ ಇದ್ದವು. ಈ ಚಿತ್ರದ ಗೆಲುವು Q ವಿಭಾಗದಿಂದ ಬಾಂಡ್ ಗೆ ಇಂತಹ ಹೆಚ್ಚಿನ ಗೂಢಚಾರ ಉಪಕರಣಗಳು ಸರಬರಾಜಾಗುವಂತೆ ಮಾಡಿತು ಉದಾಹರಣೆಗೆ 1979 ರ ವಿಜ್ಞಾನ ಕಲ್ಪಿತಾಧಾರಿತ ಚಿತ್ರ ಮೂನ್ ವಾಕರ್ ಹಾಗೂ ೨೦೦೨ ರ ದಿ ಅನದರ್ ಡೇ.

ಜೇಮ್ಸ್‌ ಬಾಂಡ್‌ನ ಕಾರುಗಳು ಆಸ್ಟನ್ DB5,V8 ವ್ಯಾ0ಟೇಜ್, v12 ವ್ಯಾನ್ಕಿಶ್ DBS (00s ), ಲೋಟಸ್ ಎಸ್ಪ್ರಿಟ್, BMW Z23 ಮತ್ತು BMW 750iL BMW Z8. ಬಾಂಡ್ ನ ಅತಿ ಜನಪ್ರಿಯ ಕಾರ್ ಸಿಲ್ವರ್ ಗ್ರೇ ಆಸ್ಟಿನ್ ಮಾರ್ಟಿನ್ DB5. ಮೊದಲು ಗೋಲ್ಡ್ ಫಿಂಗರ್ ನಲ್ಲಿ ಕಾಣಿಸಿಕೊಂಡ ಇದು ನಂತರ ಥಂಡರ್ ಬಾಲ್ , ಗೋಲ್ಡನ್ ಐ , ಟುಮಾರೋ ನೆವರ್ ಡೈಸ್ , ಕ್ಯಾಸಿನೋ ರಾಯಲ್ ಚಿತ್ರಗಳಲ್ಲಿ ಬಂತು. ಚಲನಚಿತ್ರಗಳು ಅನೇಕ ಆಸ್ಟಿನ್ ಮಾರ್ಟಿನ್ DB5 ಕಾರ್ ಗಳನ್ನು ಚಿತ್ರಕ್ಕಾಗಿ ಹಾಗೂ ಪ್ರಚಾರಕ್ಕಾಗಿ ಬಳಸಿದವು. ಇದು ಜನವರಿ ೨೦೦೬ ರಲ್ಲಿ ಆರಿಜೋನಾದಲ್ಲಿ ನಡೆದ ಹರಾಜಿನಲ್ಲಿ ಅನಾಮಧೇಯ ಯುರೋಪಿಯನ್ ಒಬ್ಬನಿಂದ ಖರೀದಿಸಲ್ಪಟ್ಟಿತು. ಈ ನಿರ್ದಿಷ್ಟ ಕಾರು 1970 ರಲ್ಲಿ 5000 ಪೌಂಡ್‌ಗಳಿಗೆ ಮಾರಾಟವಾಗಿತ್ತು.[೪೧]

ಫ್ಲೆಮಿಂಗ್‌ನ ಪುಸ್ತಕದಲ್ಲಿ ಬಾಂಡ್ ಬೆಂಟ್ಲೇ ಕಂಪೆನಿಯ "ಬ್ಯಾಟ್ಲ್‌ ಶಿಫ್‌ ಗ್ರೇ" ಕಾರಿನ ಬಗ್ಗೆ ಅಭಿರುಚಿಯುಳ್ಳವನಾಗಿದ್ದು, ಗಾರ್ಡ್ನರ್ ಅವನನ್ನು ನವೀಕೃತ ಸಾಬ್‌ 900 ಟರ್ಬೋ(ಉಪನಾಮ-ಸಿಲ್ವರ್ ಬೀಸ್ಟ್) ಹಾಗೂ ನಂತರ ಬೆಂಟ್ಲೇ ಮುಲ್ಸಾನ್ ಟರ್ಬೋ ನೀಡಿ ಪುರಸ್ಕರಿಸುತ್ತಾನೆ.
ಜೇಮ್ಸ್‌ ಬಾಂಡ್ ಚಿತ್ರದ ಅಳವಡಿಕೆಗಳಲ್ಲಿ ಬಾಂಡ್ ಅನೇಕ ಚಿರಪರಿಚಿತ ಕೈಗಡಿಯಾರಗಳನ್ನು ಹೊಂದಿದ್ದು, ನಿರ್ಮಾಣ ಮಾದರಿಗಳಲ್ಲಿ ಸಿಗದ ಅತ್ಯಾಧುನಿಕ ಲಕ್ಷಣಗಳುಳ್ಳದ್ದನ್ನು ತೊಡುತ್ತಾನೆ.  ರೋಲೆಕ್ಸ್ ಸಬ್ ಮ್ಯಾರಿನರ್ ಪದೇ ಪದೇ ಕಾಣಿಸಿಕೊಳ್ಳುವ ವಿನ್ಯಾಸಗಳಾಗಿದ್ದು ಶಾನ್ ಕ್ಯಾನರಿ, ಜಾರ್ಜ್ ಲೆಜನ್ಬಿ, ರೋಜರ್ ಮೂರ್ ಹಾಗೂ ತಿಮೊಂಟಿ ಡಾಲ್ತನ್ ಇವುಗಳನ್ನು ಧರಿಸಿದ್ದಾರೆ.   ರೋಜರ್ ಮೂರ್ ಕೂಡ ಅನೇಕ ಪಲ್ಸರ್ ಹಾಗೂ ಸೀಕೋ ದ ಕೈಗಡಿಯಾರಗಳನ್ನು ಧರಿಸಿದ್ದಾನೆ.  ಪಿಯರ್ಸ್ ಬ್ರೊನ್ಸನ್ ಮತ್ತು ಡೇನಿಯಲ್ ಕ್ರೇಗ್ ರ ಬಾಂಡ್ ಪಾತ್ರಗಳಿಗೆ ಒಮೇಗಾ ಸೀಮಾಸ್ಟರ್ ನ ಮೆಚ್ಚಿನದು.   ಜೇಮ್ಸ್ ಬಾಂಡ್ ನ ಕೈಗಡಿಯಾರದ ಆಯ್ಕೆ ಹಣ ಮತ್ತು ವಿನ್ಯಾಸ ಎರಡು ವಿಷಯಕ್ಕೂ ಮಹತ್ವದ್ದಾಗಿದೆ. ಕೈಗಡಿಯಾರದ ಉತ್ಪನ್ನದ ನಿಯೋಜನಾ ಒಡಂಬಡಿಕೆ ನಿಯಮಿತವಾಗಿ ಆಗುತ್ತಿರುತ್ತದೆ.
ಡಾ. ನೋ  ಚಿತ್ರದಲ್ಲಿ ಬಾಂಡ್ ನ ಆಯುಧದ ಆಯ್ಕೆ ಇಟಲಿ ನಿರ್ಮಿತ  ಬೇರೆಟ್ಟಾ 418.25 ಕ್ಯಾಲಿಬರ್. ನಂತರದಲ್ಲಿ ಜರ್ಮನ್ ನಿರ್ಮಿತ ವೆಲ್ದರ್ PPK, 7.65 ಎಮ್ ಎಮ್ ಅಳತೆಯದ್ದು. (ಗೋಲ್ಡನ್ ಐವ್ಯಾಲಂಟೈನ್ ಜುಕೊಸ್ಕಿ, PPK  ಯು ಹೆಚ್ಚಾಗಿ ಅಮೆರಿಕ ಮತ್ತು  ಪಶ್ಚಿಮ ಯುರೋಪ್ ನಲ್ಲಿ 380 ACP ಯೊಂದಿಗೆ ಬಳಸಲ್ಪಡುವ ವಿಲಕ್ಷಣ ಆಯ್ಕೆ)   PPk ಯು ಮುಂದಿನ ಅನೇಕ ಚಿತ್ರಗಳಲ್ಲಿ ಬಾಂಡ್ ನ ಸಾಂಕೇತಿಕ ಆಯುಧವಾಗಿ ಟುಮಾರೋ ನೆವರ್ ಡೈಸ್  ನ ವರೆಗೂ ಬಳಸಲ್ಪಟ್ಟಿತು..(ಇದರಲ್ಲಿ ಬಾಂಡ್ ವೆಲ್ದರ್ P99 ನ್ನು ಸುಧಾರಿತಗೊಳಿಸುತ್ತಾನೆ). ನಂತರದಲ್ಲಿ ಟುಮಾರೋ ನೆವರ್ ಡೈಸ್ , ದ ವರ್ಲ್ಡ್ ಈಸ್ ನಾಟ್ ಎನಫ್ , ದಿ ಅನದರ್ ಡೇ , ಕ್ಯಾಸಿನೋ ರಾಯಲ್  ನಲ್ಲಿ P99 ಪಿಸ್ತೂಲು ಉಪಯೋಗಿಸುತ್ತಾನೆ ವಿಚಿತ್ರವೆಂದರೆ ಕ್ವಾಂಟಮ್ ಆಫ್ ಸೋಲೆಸ್, ಕ್ಯಾಸಿನೋ ರಾಯಲ್ ನ ಮುಂದುವರಿಕೆಯಲ್ಲಿ ಬಾಂಡ್  PPK ಯನ್ನು ಉಪಯೋಗಿಸಿದ್ದಾನೆ.

ಇದನ್ನೂ ನೋಡಿರಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. Copyright 1998-2007. "MI6:: The Home Of James Bond 007". Mi6.co.uk. Archived from the original on 2009-12-31. Retrieved 2009-01-06.{{cite web}}: CS1 maint: numeric names: authors list (link)
  2. By (2008-12-30). "'Harry Potter' toots box office horn - Entertainment News, Los Angeles, Media - Variety". Variety.com. Retrieved 2009-01-06.
  3. ೩.೦ ೩.೧ "Agent James Bond 007 - Quantum of Solace". Jamesbond007.se. Retrieved 2009-06-14.[ಶಾಶ್ವತವಾಗಿ ಮಡಿದ ಕೊಂಡಿ]
  4. Copyright 1998-2007 (1953-04-13). "MI6:: The Home Of James Bond 007". Mi6.co.uk. Retrieved 2009-01-06.{{cite news}}: CS1 maint: numeric names: authors list (link)
  5. Chancellor, Henry (2005). James Bond: The Man and His World. John Murray. ISBN 0-7195-6815-3.
  6. Zacharek, Stephanie (2006-11-25). "Bond, by the book | Salon Books". Salon.com. Archived from the original on 2009-03-30. Retrieved 2009-01-06.
  7. "Biography of the Literary James Bond". Archived from the original on 2009-09-14. Retrieved 2009-12-15.
  8. "Ian Fleming Biography Discussing Early Writings". Archived from the original on 2008-05-17. Retrieved 2009-12-15.
  9. Amis, Kingsley (1965). The James Bond Dossier. Jonathan Cape.
  10. "Charlie Higson interview with CommanderBond.net". The Charlie Higson CBn Interview. Archived from the original on 2007-02-03. Retrieved February 23 2005. {{cite web}}: Check date values in: |accessdate= (help); Unknown parameter |dateformat= ignored (help)
  11. Benson, Raymond (1984). The James Bond Bedside Companion. Dodd, Mead. ISBN 1-4011-0284-0.
  12. Fleming, Ian (1953). [[Casino Royale (novel)|Casino Royale]]. James Bond. Jonathan Cape. p. 213. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  13. Fleming, Ian (1954). [[Live and Let Die (novel)|Live and Let Die]]. James Bond. Jonathan Cape. p. 234. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  14. Fleming, Ian (1955). [[Moonraker (novel)|Moonraker]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  15. Fleming, Ian (1956). [[Diamonds Are Forever (novel)|Diamonds Are Forever]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  16. Fleming, Ian (1957). [[From Russia, with Love (novel)|From Russia, with Love]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  17. Fleming, Ian (1958). [[Dr. No (novel)|Dr. No]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  18. Fleming, Ian (1959). [[Goldfinger (novel)|Goldfinger]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  19. Fleming, Ian (1960). [[For Your Eyes Only (short story collection)|For Your Eyes Only]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  20. Fleming, Ian (1961). [[Thunderball (novel)|Thunderball]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  21. Fleming, Ian (1962). [[The Spy Who Loved Me (novel)|The Spy Who Loved Me]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  22. Fleming, Ian (1963). [[On Her Majesty's Secret Service (novel)|On Her Majesty's Secret Service]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  23. Fleming, Ian (1964). [[You Only Live Twice (novel)|You Only Live Twice]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  24. Fleming, Ian (1965). [[The Man with the Golden Gun (novel)|The Man with the Golden Gun]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: URL–wikilink conflict (help); Unknown parameter |month= ignored (help)
  25. Fleming, Ian (1966). [[Octopussy and The Living Daylights]]. James Bond. Jonathan Cape. Archived from the original on 2017-06-13. Retrieved 2009-12-15. {{cite book}}: Cite has empty unknown parameter: |month= (help); URL–wikilink conflict (help)
  26. "Bond, from the beginning?". Archived from the original on 2007-03-19. Retrieved 2009-12-15.
  27. "Stars out for Bond royal premiere". BBC. Retrieved 2006-11-15.
  28. "Casino Royale - Worldwide release dates". Sony Pictures. Archived from the original on 2006-11-06. Retrieved 2006-10-25.
  29. ಬಾಂಡ್ ಚೈನಾಗೆ ವಿಳಂಬವಾಗಿ ಭೇಟಿ ನೀಡಿದ್ದು- ಬಿ.ಬಿ.ಸಿ ವಾರ್ತೆ 23 ಏಪ್ರಿಲ್ 2007 ರಿಂದ ಪಡೆದದ್ದು.
  30. ಕ್ವಾಂಟಮ್ ಆಫ್ ಸೋಲೇಸ್ - ಅಂತರರಾಷ್ಟ್ರೀಯ ಬಾಕ್ಸ್ ಆಫೀಸ್ ಫಲಿತಾಂಶಗಳು
  31. "Potter films most successful ever". CBBC. 2007-09-11. Retrieved 2007-12-15.
  32. ಬಾಂಡ್ ಫ್ರಾಂಚೈಸಿ ಬಾಕ್ಸ್ ಆಫೀಸ್ ನಂಬರ್ಸ್, [೧], ಕ್ಯಾಸಿನೋ ರಾಯೇಲ್ ಬಾಕ್ಸ್ ಆಫೀಸ್ ನಂಬರ್ಸ್ (1967), ಬಾಕ್ಸ್ ಆಫೀಸ್ ನಂಬರ್ಸ್ + ಇನ್‌ಫ್ಲೇಶನ್ Archived 2007-02-06 ವೇಬ್ಯಾಕ್ ಮೆಷಿನ್ ನಲ್ಲಿ.
  33. "Ian Fleming, Author or Spy ?". Archived from the original on 2011-07-09. Retrieved 2007-08-24.
  34. "James Bond and Man From U.N.C.L.E ties". Archived from the original on 1999-02-10. Retrieved 2009-12-15.
  35. "Bond Inspiration For Indiana Jones". Archived from the original on 2008-04-22. Retrieved 2009-12-15.
  36. Fleurier, Nicolas (2006). James Bond & Indiana Jones. Action figures. Histoire & Collections. ISBN 2-35250-005-2.
  37. "Monty Norman sues for libel". Bond theme writer wins damages. Retrieved March 9 2006. {{cite news}}: Check date values in: |accessdate= (help); Unknown parameter |dateformat= ignored (help)
  38. ""Bond on Bond", the Redux of The Bond Theme". Archived from the original on 2010-02-10. Retrieved 2009-12-15.
  39. "James Bond Games: James Bond 007". Retrieved 2007-03-12.[ಶಾಶ್ವತವಾಗಿ ಮಡಿದ ಕೊಂಡಿ]
  40. Fritz, Ben (2006-05-03). "Action traction: Bond, Superman games on the move". Variety. Retrieved 2006-07-01.
  41. "Aston Martin DB5 auction". James Bond car sold for over £1 m. Retrieved February 8 2006. {{cite news}}: Check date values in: |accessdate= (help); Unknown parameter |dateformat= ignored (help)

ಬಾಹ್ಯ ಲಿಂಕ್‌ಗಳು ಬದಲಾಯಿಸಿ

ಕನ್ನಡ ವಿಕಿಸೋರ್ಸ್ ನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದಲ್ಲಿನ ಮಾಹಿತಿಪುಟ

 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಜೇಮ್ಸ್ ಬಾಂಡ್‌]]
ಅಧಿಕೃತ ಜಾಲತಾಣ
ಅನದಿಕೃತ ವೆಬ್‌ಸೈಟ್‌ಗಳು
  1. REDIRECT Template:James Bond