ಜೇಮ್ಸ್ ಪ್ರೆಸ್ಕಾಟ್ ಜೂಲ್

ಜೇಮ್ಸ್ ಪ್ರೆಸ್ಕಾಟ್ ಜೂಲ್ (ಜನನ:೨೪ ಡೆಸೆಂಬರ್ ೧೮೧೮) ಒಬ್ಬ ಇಂಗ್ಲಿಷ್ ಭೌತಶಾಸ್ತ್ರಜ್ಞ, ಗಣಿತಜ್ಞ ಮತ್ತು ಬ್ರೂವರ್ . ಇವರು ಸಾಲ್ಫೋರ್ಡ್ನಲ್ಲಿ ಜನಿಸಿದರು. ಜೂಲ್ ಶಾಖದ ಸ್ವರೂಪವನ್ನು ಅಧ್ಯಯನ ಮಾಡಿದರು ಮತ್ತು ಯಾಂತ್ರಿಕ ಕೆಲಸಕ್ಕೆ ಅದರ ಸಂಬಂಧವನ್ನು ಕಂಡುಹಿಡಿದರು . ಇದು ಲಾ ಆಫ್ ಕನ್ಸರ್ವೇಷನ್ ಆಫ್ ಎನರ್ಜಿ ನಿಯಮಕ್ಕೆ ಕಾರಣವಾಯಿತು ಹಾಗೂ ಥರ್ಮೋಡೈನಮಿಕ್ಸ್ ನ ಮೊದಲ ನಿಯಮದ ಬೆಳವಣಿಗೆಗೆ ಕಾರಣವಾಯಿತು .ಶಕ್ತಿಯನ್ನು ಮಾಪನ ಮಾಡಲು ಜೌಲ್‌ ಎಂಬ SI ಏಕಮಾನವು ಇವರ ನಂತರ ಸ್ವೀಕೃತವಾಗಿದೆ. ಸಂಪೂರ್ಣ ಥರ್ಮೋಡೈನಮಿಕ್ ತಾಪಮಾನದ ಪ್ರಮಾಣವನ್ನು ಅಭಿವೃದ್ಧಿಪಡಿಸಲು ಜೌಲ್ ಲಾರ್ಡ್ ಕೆಲ್ವಿನ್ ಜೊತೆ ಕೆಲಸ ಮಾಡಿದರು , ಇದನ್ನು ಕೆಲ್ವಿನ್ ಸ್ಕೇಲ್ ಎಂದು ಕರೆಯಲಾಯಿತು. ಶಕ್ತಿ ಪರಿವರ್ತನೆಗಳ ಬಗ್ಗೆ ಅವರ ಪ್ರಯೋಗಗಳು ಮೊದಲು ೧೮೪೩ ರಲ್ಲಿ ಪ್ರಕಟವಾದವು.

ಜೇಮ್ಸ್ ಪ್ರೆಸ್ಕಾಟ್ ಜೂಲ್'
FRS, FRSE
ಜನನ೨೪ ಡೆಸೆಂಬರ್ ೧೮೧೮
ಇಂಗ್ಲೆಂಡ್
ಮರಣ೧೧ ಅಕ್ಟೋಬರ್ ೧೮೮೯
ಇಂಗ್ಲೆಂಡ್
ಪೌರತ್ವಬ್ರಟಿಷ್
ಕಾರ್ಯಕ್ಷೇತ್ರಭೌತಶಾಸ್ತ್ರ
ಪ್ರಸಿದ್ಧಿಗೆ ಕಾರಣಥರ್ಮೋಡೈನಾಮಿಕ್ಸ್‌ನ ಮೊದಲ ನಿಯಮ
ಕ್ಯಾಲೋರಿಕ್ ಸಿದ್ಧಾಂತವನ್ನು ನಿರಾಕರಿಸಿದ್ದಕ್ಕೆ
ಪ್ರಭಾವಗಳುಜಾನ್ ಡಾಲ್ಟನ್
ಜಾಣ್ ಡೇವೀಸ್
ಗಮನಾರ್ಹ ಪ್ರಶಸ್ತಿಗಳುರಾಯಲ್ ಮೆಡಲ್ (೧೮೫೨)
ಕೊಪ್ಲಿ ಮೆಡಲ್(೧೮೭೦)
ಆಲ್ಬರ್ಟ್ ಮೆಡಲ್ (೧೮೮೦)
ಸಂಗಾತಿಜೂಲ್ ಅಮೆಲಿಯಾ ಗ್ರಿಮ್ಸ್
(m. ೧೮೪೭ – ೧೮೫೪)
ಮಕ್ಕಳುಬೆಂಜಮಿನ್ ಆರ್ಥರ್ ಜೌಲ್
ಅಲೈಸ್‌ ಅಮೇಲಿಯಾ
ಹೆನ್ರಿ

ಜೀವನ ಬದಲಾಯಿಸಿ

ಇವರು ಇಂಗ್ಲೆಂಡಿನ ಭೌತವಿಜ್ಞಾನಿ .[೧] ಇವರು ೨೪ ಡಿಸೆಂಬರ್, ೧೮೧೮ ರಲ್ಲಿ ಜನಿಸಿದರು. ಎಲ್ಲಾ ಕಾರ್ಯ ಉಷ್ಣವನ್ನು ಉತ್ಪಾದಿಸುತ್ತದೆ ಮತ್ತು ಆ ಉಷ್ಣ ,ಶಕ್ತಿಯ ಒಂದು ರೂಪ ಎಂದು ಪ್ರತಿಪಾದಿಸಿದರು. [೨]

ಸಂಶೋಧನೆ ಬದಲಾಯಿಸಿ

ಒಂದು ದಿನ ಜೂಲ್, ನೀರಿನ ಧಾರಕದಲ್ಲಿ ಗಾಲಿಯನ್ನ ತಿರುಗಿಸಿದಾಗ, ಆ ನೀರು ಬೆಚ್ಚಗಾಯಿತು. ಗಾಲಿಯನ್ನ ಹೆಚ್ಚು ವೇಗವಾಗಿ ತಿರುಗಿಸಿದಾಗ ನೀರು ಹೆಚ್ಚು ಬಿಸಿಯಾಯಿತು. ಗಾಲಿಯ ಮೇಲೆ ನಡೆವ ಕಾರ್ಯವು ಚಲನ ಶಕ್ತಿಯಾಗಿಯೂ ತರುವಾಯ ಉಷ್ಣ ಶಕ್ತಿಯಾಗಿ ಬದಲಾಗುತ್ತದೆ ಎಂಬುದನ್ನು ಅವರು ಈ ಪ್ರಯೋಗದ ಮೂಲಕ ತಿಳಿಸಿಕೊಟ್ಟರು. ಜಲಪಾತದ ತಳಭಾಗದಲ್ಲಿರುವ ನೀರು ಮೇಲ್ಮಟ್ಟದ ನೀರಿಗಿಂತಲೂ ಹೆಚ್ಚು ಬಿಸಿಯಾಗಿರುತ್ತದೆ ಎಂಬ ಸಂಗತಿಯನ್ನೂ ಇವರು ತಿಳಿಸಿಕೊಟ್ಟರು. ಇದರಿಂದ ಧುಮುಕುವ ನೀರಿನ ಶಕ್ತಿಯು ಉಷ್ಣವಾಗಿ ಪರಿವರ್ತನೆಯಾಗುತ್ತದೆ ಎಂಬ ಸಂಗತಿಯು ದೃಢಪಟ್ಟಿತು.[೩] ಒತ್ತಡದಲ್ಲಿರುವ ಅನಿಲವೂ, ಒಂದು ರಂಧ್ರದ ಮೂಲಕ ಕಡಿಮೆ ಒತ್ತಡ ಪ್ರದೇಶಕ್ಕೆ ಹೋಗುವಂತೆ ಮಾಡಿದಾಗ ಅದರ ಉಷ್ಣತೆ ಇಳಿಮುಖವಾಗುತ್ತದೆ. ಇದನ್ನು ಜೂಲ್ ಥಾಮನ್ಸ್ ಅಥವಾ ಜೂಲ್ ಕೆಲ್ವಿನ್ ಪರಿಣಾಮ ಎಂದು ಕರೆಯಲಾಗುತ್ತದೆ.

ಚಲನಶಾಸ್ತ್ರ ಬದಲಾಯಿಸಿ

ಚಲನಶಾಸ್ತ್ರವು ಚಲನೆಯ ವಿಜ್ಞಾನವಾಗಿದೆ. ಜೂಲ್ ಡಾಲ್ಟನ್ ಅವರ ಶಿಷ್ಯರಾಗಿದ್ದರು ಮತ್ತು ಅವರ ಕಾಲದ ಅನೇಕ ವಿಜ್ಞಾನಿಗಳು ಇನ್ನೂ ಸಂಶಯ ಹೊಂದಿದ್ದರೂ ಸಹ ಅವರು ಪರಮಾಣು ಸಿದ್ಧಾಂತದಲ್ಲಿ ದೃಡವಾದ ನಂಬಿಕೆಯನ್ನು ಇಟ್ಟು ಕಲಿತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅನಿಲಗಳ ಚಲನ ಸಿದ್ಧಾಂತದ ಕುರಿತು ಜಾನ್ ಹೆರಾಪಾತ್ ಅವರ ನಿರ್ಲಕ್ಷ್ಯದ ಕೃತಿಯನ್ನು ಸ್ವೀಕರಿಸುವ ಕೆಲವೇ ಜನರಲ್ಲಿ ಅವರು ಒಬ್ಬರಾಗಿದ್ದರು. ಚಲಿಸುವ ಶಕ್ತಿಯ ಅಳತೆಯ ಮೇಲೆ ಪೀಟರ್ ಎವಾರ್ಟ್ ಅವರ ೧೮೧೩ ರ ಸಂಶೂಧನಾ ಕಾಗದದಿಂದ ಅವರು ಮತ್ತಷ್ಟು ಪ್ರಭಾವಿತರಾದರು.[೪]

ಕುಟುಂಬ ಬದಲಾಯಿಸಿ

೧೮೪೭ ರಲ್ಲಿ, ಜೂಲ್ ಅಮೆಲಿಯಾ ಗ್ರಿಮ್ಸ್ ಅವರನ್ನು ವಿವಾಹವಾದರು .[೫] ಇವರಿಗೆ ಒಟ್ಟಿಗೆ ಮೂರು ಮಕ್ಕಳು : ಒಬ್ಬ ಮಗ , ಬೆಂಜಮಿನ್ ಆರ್ಥರ್ ಜೌಲ್ (೧೮೫೦ - ೧೯೨೨), ಮಗಳು, ಅಲೈಸ್‌ ಅಮೇಲಿಯಾ (೧೮೫೨ - ೧೮೯೯) ಮತ್ತು ಎರಡನೇ ಮಗ ಹೆನ್ರಿ (ಜನನ ː೧೮೫೪ , ಇವರು ಮೂರು ವಾರಗಳ ನಮತರ ಮರಣ ಹೊಂದಿದರು).[೬]

ಗೌರವಗಳು ಬದಲಾಯಿಸಿ

 
ಮ್ಯಾಂಚೆಸ್ಟರ್ ಟೌನ್ ಹಾಲ್ ನಲ್ಲಿ ಜೂಲ್ ನ ಪ್ರತಿಮೆ

ಫೆಲೋ ಆಫ್ ದಿ ರಾಯಲ್ ಸೊಸೈಟಿ - ೧೮೫೦ ; ಶಾಖದ ಯಾಂತ್ರಿಕ ಸಮಾನತೆಯ ಕುರಿತಾದ ಇವರ ಸಂಶೋಧನಕ್ಕಾಗಿ ರಾಯಲ್‌ ಮೆಡಲ್‌ - ೧೮೫೦ ;ಶಾಖದ ಕ್ರಿಯಾತ್ಮಕ ಸಿದ್ಧಾಂತದ ಕುರಿತಾದ ಅವರ ಪ್ರಾಯೋಗಿಕ ಸಂಶೋಧನೆಗಳಿಗಾಗಿ , ಕೊಪ್ಲಿ ಮೆಡಲ್ - ೧೮೭೦ ;[೭] ಮ್ಯಾಂಚೆಸ್ಟರ್ ಲಿಟರರಿ ಅಂಡ್ ಫಿಲಾಸಫಿಕಲ್ ಸೊಸೈಟಿಯ ಅಧ್ಯಕ್ಷ - ೧೮೬೦ ; ಬ್ರಿಟಿಷ್ ಅಸೋಸಿಯೇಷನ್ ​​ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ ನ ಅಧ್ಯಕ್ಷ - ೧೮೭೨ , ೧೮೮೭ ; ಗೌರವ ಪದವಿಗಳು : ಎಲ್.ಎಲ್.ಡಿ., ಟ್ರಿನಿಟಿ ಕಾಲೇಜು, ಡಬ್ಲಿನ್ (೧೮೫೭) ; ಡಿಸಿಎಲ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ (೧೮೬೦) ; ಎಲ್.ಎಲ್.ಡಿ. ಎಡಿನ್ಬರ್ಗ್ ವಿಶ್ವವಿದ್ಯಾಲಯ ; ವಿಜ್ಞಾನದಲ್ಲಿನ ಸೇವೆಗಳಿಗಾಗಿ ಜೌಲ್ ೧೮೭೮ ರಲ್ಲಿ ವಾರ್ಷಿಕ ೨೦೦ ನಾಗರಿಕರ ಪಟ್ಟಿಯಲ್ಲಿ ಪಿಂಚಣಿ ಪಡೆದರು ; ಆಲ್ಬರ್ಟ್ ಮೆಡಲ್ ಆಫ್ ರಾಯಲ್ ಸೊಸೈಟಿ ಆಫ್ ಆರ್ಟ್ಸ್ - ೧೮೮೦ .

ಉಲ್ಲೇಖಗಳು ಬದಲಾಯಿಸಿ

  1. https://www.leybold-shop.com/physics/physics-c/heat/kinetic-theory-of-gases/real-gases/joule-thomson-effect.htmlಶ[ಶಾಶ್ವತವಾಗಿ ಮಡಿದ ಕೊಂಡಿ]
  2. http://www.famousscientists.org/james-prescott-joule/
  3. http://www.britannica.com/EBchecked/topic/306625/James-Prescott-Joule
  4. https://www.leybold-shop.com/physics/physics-c/heat/kinetic-theory-of-gases/real-gases/joule-thomson-effect.html[ಶಾಶ್ವತವಾಗಿ ಮಡಿದ ಕೊಂಡಿ]
  5. https://www.rse.org.uk/cms/files/fellows/biographical_index/fells_indexp1.pdf
  6. https://www.famousscientists.org/james-prescott-joule/
  7. https://royalsocietypublishing.org/doi/10.1098/rsnr.2011.0045