ಜುಂಜೆ ಗೌಡನು ಕುರುಬ ಗೌಡ ಸಮಾಜಕ್ಕೆ ಸೇರಿದ ಒಬ್ಬ ಸಹುಕಾರನಾಗಿದ್ದ, ಈತನು ಪ್ರಸಿದ್ದ ಮಲೈ ಮಾದೇಶ್ವರ ದೇವಸ್ಥಾನವನ್ನು ಕಟ್ಟಿದವನು. ಮೊದಲು ಈತನು ಮಾದೇಶ್ವರ ದೇವರೆಂದು ನಂಬಲಿಲ್ಲ, ಆದರೆ ಮಾದೇಶ್ವರ ಸ್ವಾಮಿಯ ಪವಾಡಗಳನ್ನು ತನ್ನ ಕಣ್ಣಾರೆ ಕಂಡ ಮೇಲೆ ಗೌಡನಿಗೆ ನಂಬಿಕೆ ಬಂದು ತನ್ನ ಅಪಾರ ಸಂಪತ್ತು ಬಳಿಸಿ ಮಾದೇಶ್ವರ ಗುಡಿಯನ್ನು ಕಟ್ಟಿದನು. ಕಾಲ ಕ್ರಮೇಣ ಇವನು ಕಟ್ಟಿದ ಗುಡಿ ಮಾದೇಶ್ವರನ ಶಕ್ತಿ ಹಾಗು ಪವಾಡಗಳಿಂದ ಪ್ರಸಿದ್ದಿ ಗಳಿಸಿತು. ಜುಂಜೆ ಗೌಡನ ಹೆಸರು ಮಾದೇಶ್ವರ ಸ್ವಾಮಿ ಜೊತೆ ಶಾಶ್ವತವಾಗಿ ಉಳಿಯಿತು.