ಜಮ್ಮು ಮತ್ತು ಕಾಶ್ಮೀರದಲ್ಲಿನ ಬಂಡಾಯ


ಜಮ್ಮ ಮತ್ತು ಕಾಶ್ಮೀರದಲ್ಲಿನ ಬಂಡಾಯ ― ಇದನ್ನು ಕಾಶ್ಮೀರ ಬಂಡಾಯ ಎಂದು ಕೂಡ ಕರೆಯಲಾಗುತ್ತದೆ. ಇದು 1947 ರಿಂದ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪ್ರಾದೇಶಿಕ ವಿವಾದವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತೀಯ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತ್ಯೇಕತಾವಾದಿ ಉಗ್ರಗಾಮಿ ಬಂಡಾಯವಾಗಿದೆ. ಈ ಬಂಡಾಯವು ಹಲವು ಸ್ವರೂಪಗಳಲ್ಲಿ ಅಸ್ತಿತ್ವದಲ್ಲಿದೆ. ಬಂಡಾಯ ಮತ್ತು ಅದರ ಶಮನಗಳ ಎರಡೂ ರೀತಿಯ ಚಟುವಟಿಕೆಗಳು ದಿನೇ ದಿನೇ ತೀವ್ರಗೊಳ್ಳುತ್ತಿರುವುದರಿಂದ ೧೯೮೯ರಿಂದೀಚೆಗೆ ಸಾವಿರಾರು ಜೀವಗಳು ಬಲಿಯಾಗಿವೆ.

Insurgency in Jammu and Kashmir

Kashmir : Shown in green is the Kashmiri region under Pakistani control. The dark-brown region represents Indian-controlled Jammu and Kashmir while the Aksai Chin is under Chinese control.
ದಿನಾಂಕ1989-present
ಸ್ಥಳJammu and Kashmir
ಫಲಿತಾಂಶ Conflict ongoing, largely subsided
ಯುದ್ಧಾಕಾಂಕ್ಷಿಗಳು
India

Jammu Kashmir Liberation Front
Harkat-ul-Jihad al-Islami
Lashkar-e-Taiba
Jaish-e-Mohammed
Hizbul Mujahideen
Harkat-ul-Mujahideen

Al-Badr
ದಂಡನಾಯಕರು ಮತ್ತು ನಾಯಕರು

Deepak Kapoor
Lt Gen P C Bhardwaj

Pradeep Vasant Naik

Amanullah Khan
Hafiz Muhammad Saeed
Maulana Masood Azhar
Sayeed Salahudeen
Fazlur Rehman Khalil
Farooq Kashmiri
Arfeen Bhai(until 1998)

Bakht Zameen
ಸಂಖ್ಯಾಬಲ
30,000[೧]-600,000[೨] 800[೩]-3,200[೪]
ಸಾವುನೋವುಗಳು ಮತ್ತು ನಷ್ಟಗಳು
7,000 police killed[೫] 20,000 militants killed[೫]
29,000[೪]-100,000 civilians killed[೬][೭][೮][೯]
Organizations listed as terrorist groups by India
North-East India
National Socialist Council of Nagaland-Isak-Muivah (NSCN-IM)
Naga National Council-Federal (NNCF)
National Council of Nagaland-Khaplang
United Liberation Front of Asom
People's Liberation Army
(Manipur)
Kanglei Yawol Kanna Lup (KYKL)
Zomi Revolutionary Front
Kashmir
Al-Badr
Al-Badr Mujahideen
Al Barq (ABQ)
Al Fateh Force (AFF)
Al Jihad Force (AJF)/Al Jihad
Al Mujahid Force (AMF)
Al Umar Mujahideen (AUR/Al Umar)
Awami Action Committee (AAC)
Dukhtaran-e-Millat (DEM)
Harakat-ul-Ansar
Harkat-ul-Jihad al-Islami
Harakat-ul-Mujahideen
Hizb-ul-Mujahideen (HUM)
Ikhwan-ul-Musalmeen (IUM)
Jaish-e-Mohammed (JEM)
Lashkar-e-Mohammadi
Jammat-ul-Mujahideen (JUM)
Jammat-ul-Mujahideen Almi (JUMA)
Jammu and Kashmir Democratic Freedom Party (JKDFP)
Jammu and Kashmir Islamic Front (JKIF)
Jammu and Kashmir Jamaat-e-Islami (JKJEI)
Lashkar-e-Toiba (LET)
Jaish-e-Mohammed
Kul Jammat Hurriyat Conference (KJHC)
Mahaz-e-Azadi (MEA)
Muslim Janbaaz Force (MJF/Jaanbaz Force)
Muslim Mujahideen (MM)
Hizbul Mujahideen
Harkat-ul-Mujahideen
Farzandan-e-Milat
United Jihad Council
Al-Qaeda
Students Islamic Movement of India Tehreek-e-Jihad (TEJ)
Pasban-e-Islami (PEI/Hizbul Momineen HMM)
Shora-e-Jihad (SEJ)
Tehreek-ul-Mujahideen (TUM)
North, Central and South India
Babbar Khalsa
Bhindranwala Tigers Force of Khalistan
Communist Party of India (Maoist)
Dashmesh Regiment
International Sikh Youth Federation (ISYF)
Kamagata Maru Dal of Khalistan]
Khalistan Liberation Force
Khalistan Commando Force
Khalistan Liberation Army
Khalistan Liberation Front
Khalistan Liberation Organisation
Khalistan National Army
Khalistan Guerilla Force
Khalistan Security Force
Khalistan Zindabad Force
LTTE
Naxals
Ranvir Sena

ವಿವಾದಿತ ೧೯೮೭ರ ಚುನಾವಣೆಯ ನಂತರ ರಾಜ್ಯದ ಶಾಸನಸಭೆಯ ಕೆಲವು ಶಕ್ತಿಗಳು ಆ ಪ್ರಾಂತ್ಯದಲ್ಲಿನ ಸಶಸ್ತ್ರ ಬಂಡಾಯದ ಆಕಸ್ಮಿಕ ಬೆಳವಣಿಗೆಗೆ ವೇಗವರ್ಧಕವಾಗಿ ಪರಿಣಮಿಸುವಂತೆ ಉಗ್ರಗಾಮಿ ತಂಡಗಳನ್ನು ಕಟ್ಟುವುದನ್ನು ಆರಂಭಿಸಿದಾಗ ಕಾಶ್ಮೀರದಲ್ಲಿ ವ್ಯಾಪಕ ಸಶಸ್ತ್ರ ಬಂಡಾಯವು ಆರಂಭವಾಯಿತು.[೧೦][೧೧]

ಮುಜಾಹಿದೀನ್‌ಗಳನ್ನು[೧೨][೧೩] ಬೆಂಬಲಿಸುವ ಹಾಗೂ ಅವರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೋರಾಡಲು ತರಬೇತಿ ನೀಡುತ್ತಿರುವ ಆರೋಪವನ್ನು ಭಾರತವು ಪಾಕಿಸ್ತಾನದ ಗೂಢಚರ ಸಂಸ್ಥೆ ಇಂಟರ್‌-ಸರ್ವೀಸಸ್‌ ಇಂಟೆಲಿಜೆನ್ಸ್‌ ಮೇಲೆ ಮಾಡುತ್ತಿದೆ.[೧೪][೧೫] ಜಮ್ಮು ಮತ್ತು ಕಾಶ್ಮೀರ ಶಾಸನಸಭೆಯಲ್ಲಿ (ಭಾರತದ ನಿಯಂತ್ರಣದಲ್ಲಿರುವ) ಬಿಡುಗಡೆ ಮಾಡಲಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಒಟ್ಟಾರೆ ೩,೪೦೦ ನಾಪತ್ತೆ ಪ್ರಕರಣಗಳು ಕಂಡುಬಂದಿವೆ ಹಾಗೂ ಈ ಹೋರಾಟವು ಜುಲೈ ೨೦೦೯ರ ವೇಳೆಗೆ ಸುಮಾರು ೪೭,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಜನರನ್ನು ಸಾವಿಗೆ ದೂಡಿದೆ. ಆದಾಗ್ಯೂ ರಾಜ್ಯದಲ್ಲಿನ ಬಂಡಾಯ-ಸಂಬಂಧಿತ ಸಾವುಗಳ ಸಂಖ್ಯೆಯು ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಿಧಾನವಾಗಿ ಮುಂದುವರೆಯುತ್ತಿರುವ ಶಾಂತಿ ಪ್ರಕ್ರಿಯೆಗಳು ಆರಂಭವಾದಾಗಿನಿಂದ ದಿಢೀರ್‌ ಇಳಿಕೆ ಕಂಡಿದೆ.[೧೬]

ಬಂಡಾಯದ ಇತಿಹಾಸ ಬದಲಾಯಿಸಿ

೧೯೪೭-೧೯೮೭ ಬದಲಾಯಿಸಿ

ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ ಭಾರತ ಮತ್ತು ಪಾಕಿಸ್ತಾನಗಳು ರಾಜಾಡಳಿತದಲ್ಲಿದ್ದ ಕಾಶ್ಮೀರ ರಾಜ್ಯದ ವಿಚಾರವಾಗಿ ಯುದ್ಧವನ್ನು ಮಾಡಿವೆ. ಯುದ್ಧವು ಅಂತ್ಯವಾದ ನಂತರ ಭಾರತ ಕಾಶ್ಮೀರದ ಮೌಲ್ಯಭರಿತ ಭಾಗಗಳ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಿಕೊಂಡಿತು.[೧೭] ಆ ಸಮಯದಲ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಹಿಂಸಾಚಾರಗಳು ನಡೆಯುತ್ತಿದ್ದರೂ ಯಾವುದೇ ರೀತಿಯ ಸಂಘಟಿತ ಬಂಡಾಯ ಚಟುವಟಿಕೆಗಳಿರಲಿಲ್ಲ.[೧೮]

ಈ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಸನಬದ್ಧವಾದ ಚುನಾವಣೆಗಳು ಮೊತ್ತಮೊದಲಿಗೆ ೧೯೫೧ರಲ್ಲಿ ನಡೆದವು, ಆಗ ಷೇಕ್‌ ಅಬ್ದುಲ್ಲಾರ ಪಕ್ಷವು ಅವಿರೋಧ ಆಯ್ಕೆ ಕಂಡಿತು. ಆದಾಗ್ಯೂ ಷೇಕ್‌ ಅಬ್ದುಲ್ಲಾರು ಕೇಂದ್ರ ಸರ್ಕಾರದ ಕೃಪಾಕಟಾಕ್ಷದಿಂದ ಆಗೊಮ್ಮೆ ಈಗೊಮ್ಮೆ ಹೊರತಾಗಿ ಅಧಿಕಾರ ಕಳೆದುಕೊಳ್ಳುವುದು ಹಾಗೂ ಕೆಲಕಾಲದಲ್ಲಿಯೇ ಮತ್ತೆ ನೇಮಕಗೊಳ್ಳುವುದು ನಡೆಯುತ್ತಲೇ ಇತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಸಮಯವು ರಾಜಕೀಯ ಅಸ್ಥಿರತೆಯಿಂದ ಕೂಡಿದ ಅವಧಿಯಾಗಿತ್ತು ಹಾಗೂ ಒಕ್ಕೂಟ ಸರ್ಕಾರದಿಂದ ಹಲವು ಬಾರಿ ರಾಷ್ಟ್ರಪತಿಗಳ ಆಡಳಿತಕ್ಕೆಒಳಪಡುವುದು ನಡೆಯುತ್ತಲೇ ಇತ್ತು.[೧೯]

೧೯೮೭-೨೦೦೪ ಬದಲಾಯಿಸಿ

ಷೇಕ್‌ ಅಬ್ದುಲ್ಲಾರ ಸಾವಿನ ನಂತರ, ಅವರ ಪುತ್ರ ಫಾರೂಕ್‌ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅಂತಿಮವಾಗಿ ಫಾರೂಕ್‌ ಅಬ್ದುಲ್ಲಾ ಕೂಡಾ ಕೇಂದ್ರ ಸರ್ಕಾರದ ಕೃಪಾಕಟಾಕ್ಷದಿಂದ ಹೊರತಾಗಬೇಕಾಯಿತು ಹಾಗೂ ಅದರ ಫಲವಾಗಿ ಭಾರತದ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ಅವರನ್ನು ವಜಾಗೊಳಿಸಿದರು. ಒಂದು ವರ್ಷದ ನಂತರ ಫಾರೂಕ್‌ ಅಬ್ದುಲ್ಲಾ ೧೯೮೭ರ ಚುನಾವಣೆಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿಯನ್ನು ಘೋಷಿಸಿದರು.[೧೯] ಆಪಾದಿಸಲಾದಂತೆ ಆಗಿನ ಚುನಾವಣೆಗಳನ್ನು ಫಾರೂಕ್‌ ಅಬ್ದುಲ್ಲಾರ ಪರವಾಗಿರುವಂತೆ ವಂಚನಾಪೂರ್ವಕವಾಗಿ ನಡೆಸಲಾಗಿತ್ತು.[೧೯][೨೦]

ಇದರ ಪರಿಣಾಮವಾಗಿ ಅನ್ಯಾಯವಾಗಿ ಚುನಾವಣೆಗಳಲ್ಲಿ ಸೋಲು ಕಂಡವರು ಕೊಂಚ ಮಟ್ಟಿಗೆ ಪಾಲ್ಗೊಂಡಿರಬಹುದಾದ ಸಶಸ್ತ್ರ ಬಂಡಾಯ ಚಟುವಟಿಕೆಗಳು ಉಗಮವಾದವು.[೨೧] ಪಾಕಿಸ್ತಾನವು ಇಂತಹಾ ಬಂಡಾಯದ ತಂಡಗಳಿಗೆ ಸೈನ್ಯ ವ್ಯವಸ್ಥಾಪನಾ ಬೆಂಬಲ, ಶಸ್ತ್ರಾಸ್ತ್ರಗಳು, ಜನರು ಹಾಗೂ ತರಬೇತಿಗಳ ವ್ಯವಸ್ಥೆಯನ್ನು ಕೊಡಮಾಡಿತು.[೧೯][೨೦][೨೧][೨೨][೨೩]

೨೦೦೪–ಇದುವರೆಗೆ ಬದಲಾಯಿಸಿ

೨೦೦೪ರಿಂದ ಕಾಶ್ಮೀರದಲ್ಲಿನ ಬಂಡಾಯಗಾರರಿಗೆ ತಾನು ನೀಡುತ್ತಲಿದ್ದ ಬೆಂಬಲವನ್ನು ಪಾಕಿಸ್ತಾನವು ಹಂತ ಹಂತವಾಗಿ ಹಿಂತೆಗೆದುಕೊಳ್ಳಲಾರಂಭಿಸಿತು. ಹೀಗೇಕಾಯಿತೆಂದರೆ ಕಾಶ್ಮೀರಕ್ಕೆ ಸಂಬಂಧಪಟ್ಟ ಭಯೋತ್ಪಾದಕ ತಂಡಗಳು ಎರಡು ಬಾರಿ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌‌ರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದರು.[೨೩] ಅವರ ಉತ್ತರಾಧಿಕಾರಿಯಾದ ಅಸಿಫ್‌ ಅಲಿ ಜರ್ದಾರಿ ಕಾಶ್ಮೀರದಲ್ಲಿನ ಬಂಡಾಯಗಾರರನ್ನು “ಭಯೋತ್ಪಾದಕರು” ಎಂದು ಹೆಸರಿಸುತ್ತಾ ಅದೇ ಕಾರ್ಯನೀತಿಯನ್ನು ಮುಂದುವರೆಸಿಕೊಂಡು ಹೋದರು.[೨೪] ಬಂಡಾಯಕ್ಕೆ[೨೪][೨೫][೨೬] ಸಹಾಯ ಹಸ್ತ ನೀಡುತ್ತಿರುವ ಹಾಗೂ ನಿಯಂತ್ರಿಸುತ್ತಿರುವ ಸಂಸ್ಥೆ ಎಂದು ಭಾವಿಸಲಾಗುತ್ತಿರುವ ಪಾಕಿಸ್ತಾನದ ಗೂಢಚರ ಸಂಸ್ಥೆ ಇಂಟರ್‌-ಸರ್ವೀಸಸ್‌ ಇಂಟೆಲಿಜೆನ್ಸ್‌ ಕಾಶ್ಮೀರದಲ್ಲಿನ ಬಂಡಾಯಗಳಿಗೆ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುವ ಪಾಕಿಸ್ತಾನದ ಬದ್ಧತೆಯನ್ನು ಅನುಸರಿಸುತ್ತಿದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.[೨೪]

ಬಾಹ್ಯ ಶಕ್ತಿಗಳಿಂದ ಪ್ರೇರಿತವಾದ ವಿದ್ಯಮಾನವಾಗಿದ್ದ ಬಂಡಾಯದ ಪ್ರವೃತ್ತಿಯು ಪ್ರಮುಖವಾಗಿ ಸ್ಥಳೀಯ ಅವ್ಯವಸ್ಥೆಯಿಂದ ಪ್ರೇರಿತ ಹೋರಾಟ ಚಟುವಟಿಕೆಗಳಾಗಿ ರೂಪಾಂತರಗೊಂಡರೂ[೧೭][೨೪][೨೭][೨೮][೨೯] ಭಾರತ ಸರ್ಕಾರವು ಭಾರತದ ಗಡಿಪ್ರದೇಶಗಳಿಗೆ ಸೇನಾ ತುಕಡಿಗಳನ್ನು ಕಳಿಸುವ ಹಾಗೂ ಆ ಮೂಲಕ ಪೌರಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದೆ.[೨೭][೨೯][೩೦] ಭಾರತದ ಆಳ್ವಿಕೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಲಿವೆ.[೨೭]

ಬಂಡಾಯಕ್ಕೆ ಕಾರಣಗಳು ಬದಲಾಯಿಸಿ

ಪ್ರಜೆಗಳ ಮೇಲೆ ನಡೆಸುತ್ತಿರುವ ದುರಾಚಾರಗಳು ಬದಲಾಯಿಸಿ

ಕೆಲವು ವಿಶ್ಲೇಷಣಕಾರರು ಜಮ್ಮು ಮತ್ತು ಕಾಶ್ಮೀರಗಳಲ್ಲಿರುವ ಭಾರತೀಯ ತುಕಡಿಗಳ ಸಂಖ್ಯೆಯು ೬೦೦,೦೦೦ರ ಸಮೀಪವಿದೆ ಎಂದು ಆರೋಪಿಸಿದ್ದರೂ ಅಂದಾಜುಗಳ ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದು ಭಾರತ ಸರ್ಕಾರವು ಈ ಬಗ್ಗೆ ಅಧಿಕೃತ ಅಂಕಿಅಂಶಗಳನ್ನು ಬಹಿರಂಗ ಪಡಿಸಲು ನಿರಾಕರಿಸುತ್ತಿದೆ.[೩೧] ಈ ತರಹದ ಸೇನಾ ತುಕಡಿಗಳು ವ್ಯಾಪಕ ಮಾನವಪೀಡಕ ದುರಾಚಾರಗಳಲ್ಲಿ[೨೯] ತೊಡಗಿದ್ದು ನ್ಯಾಯಬಾಹಿರ ಹತ್ಯೆಗಳನ್ನು ಕೈಗೊಳ್ಳುವುದರಲ್ಲಿ ನಿರತವಾಗಿದ್ದು,[೩೦] ಇವೆಲ್ಲವೂ ಅನೇಕ ವೇಳೆ ಕೇವಲ ಮನರಂಜನೆಗಾಗಿರುತ್ತದೆ.[೩೨] ಈ ಪರಿಸ್ಥಿತಿಯು ಬಂಡಾಯಕ್ಕೆ ಬೆಂಬಲಗಳು ರೂಪುಗೊಳ್ಳಲು ಕಾರಣವಾಗಿದೆ. ಆದಾಗ್ಯೂ ಅಕ್ಟೋಬರ್‌‌ ೨೦೧೦ರಲ್ಲಿ, ಸೇನಾ ಮುಖ್ಯಸ್ಥ Gen VK ಸಿಂಗ್‌ರವರು ಸಂದರ್ಶನವೊಂದರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ೯೫%ಕ್ಕೂ ಹೆಚ್ಚಿನ ಆಪಾದನೆಗಳು ಸುಳ್ಳು ಆರೋಪಗಳೆಂದು ಸಾಬೀತಾಗಿದ್ದು ಅವುಗಳನ್ನು ಸುವ್ಯಕ್ತವಾಗಿ "ಸಶಸ್ತ್ರ ಪಡೆಗಳ ಮೇಲೆ ಅಪಪ್ರಚಾರ ಮಾಡುವ ದುರುದ್ದೇಶದ ಅಗೋಚರ ಹಿತಾಸಕ್ತಿಗಳಿಂದ" ಹೊರಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.[೩೩] ಜಮ್ಮು ಮತ್ತು ಕಾಶ್ಮೀರಗಳಲ್ಲಿ ೧೯೯೪ರಿಂದ ಇದುವರೆಗೆ ಸೇನಾ ಸಿಬ್ಬಂದಿಗಳ ವಿರುದ್ಧ ೯೮೮ ಆರೋಪಗಳು ದಾಖಲಾಗಿವೆ ಎಂದು ವಿವರಗಳನ್ನು ನೀಡುತ್ತಾ ಹೇಳಿದ್ದರು. ಇವುಗಳಲ್ಲಿ ೯೬೫ ಪ್ರಕರಣಗಳ ತನಿಖೆ ನಡೆಸಲಾಗಿದ್ದು ಅವುಗಳಲ್ಲಿ ೯೪೦ ಪ್ರಕರಣಗಳು ಸುಳ್ಳು ಪ್ರಕರಣಗಳೆಂದು ಪತ್ತೆಯಾಗಿದ್ದು ಇದರ ಪ್ರಮಾಣ ಪ್ರತಿಶತ ೯೫.೨ರಷ್ಟಿದೆ.[೩೩]

ಜಮ್ಮು ಮತ್ತು ಕಾಶ್ಮೀರಗಳಲ್ಲಿರುವ ಸೇನಾ ಪಡೆಗಳು ಕೇಂದ್ರ ಸರ್ಕಾರದಿಂದ ತಮಗೆ ನೀಡಲ್ಪಟ್ಟ ತುರ್ತು ಪರಿಸ್ಥಿತಿಯ ಅಧಿಕಾರಗಳಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ರೀತಿಯ ಅಧಿಕಾರಗಳು ಸೇನಾಪಡೆಗಳಿಗೆ ನಾಗರಿಕ ಸ್ವಾತಂತ್ರ್ಯಗಳನ್ನು ಮೊಟಕು ಮಾಡುವ ಅವಕಾಶವನ್ನು ನೀಡುತ್ತದೆ ಹಾಗೂ ಬಂಡಾಯಕ್ಕೆ ಮತ್ತಷ್ಟು ಬೆಂಬಲವನ್ನು ನೀಡಲು ಕಾರಣವಾಗುತ್ತದೆ.[೩೪]

ಬಂಡಾಯಗಾರರು ಕೂಡಾ ಕೆಲವರು ಜನಾಂಗೀಯ ಶುದ್ಧೀಕರಣ ಎಂದು ಕರೆಯುವ ಚಟುವಟಿಕೆಯಲ್ಲಿ ತೊಡಗಿ ಸಾಕಷ್ಟು ಮಟ್ಟಿಗೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ.[೩೫] ಜನರನ್ನು ತನ್ನದೇ ಸೇನಾಪಡೆಗಳಿಂದ ಹಾಗೂ ಬಂಡಾಯಗಳಿಂದ ಎರಡರಿಂದಲೂ ರಕ್ಷಿಸಲಾರದ ಸರ್ಕಾರದ ಅಸಮರ್ಥತೆಯು ಸರ್ಕಾರವು ಮತ್ತಷ್ಟು ಬೆಂಬಲವನ್ನು ಕಳೆದುಕೊಳ್ಳಲು ಕಾರಣವಾಗುತ್ತಿದೆ.[೩೬]

ISIನ ಪಾತ್ರ ಬದಲಾಯಿಸಿ

ಪಾಕಿಸ್ತಾನಿ ಗೂಢಚರ ಸಂಸ್ಥೆಯಾದ ಇಂಟರ್‌-ಸರ್ವೀಸಸ್‌ ಇಂಟೆಲಿಜೆನ್ಸ್‌ ಸಂಸ್ಥೆಯು ಬಂಡಾಯವನ್ನು ಬೆಂಬಲಿಸುತ್ತಾ ಬಂದಿದೆ ಹಾಗೂ ಸಹಾಯ ಹಸ್ತವನ್ನು ಕೂಡಾ ಚಾಚಿದೆ.[೨೪][೨೫][೨೬][೩೭] ಕಾಶ್ಮೀರದಲ್ಲಿನ ಭಾರತದ ಆಳ್ವಿಕೆಯ ನ್ಯಾಯಸಮ್ಮತತೆಯ ಬಗ್ಗೆ ಅದು ತಕರಾರು ಹೊಂದಿರುವುದರಿಂದ ಭಾರತದ ಸೇನಾಪಡೆಗಳ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಹಾಗೂ ಭಾರತದ ಮೇಲೆ ಅಂತರರಾಷ್ಟ್ರೀಯ ತಿರಸ್ಕಾರ ಉಂಟಾಗುವ ಹಾಗೆ ಮಾಡಲು ಸುಲಭವಾದ ದಾರಿ ಬಂಡಾಯವನ್ನು ಉಂಟು ಮಾಡುವುದೆಂದು ಕಂಡುಕೊಂಡಿರುವುದರಿಂದ ಆ ಸಂಸ್ಥೆಯು ಹಾಗೆ ಮಾಡುತ್ತದೆ.[೧೭]

ರಾಜಕೀಯ ಹಕ್ಕುಗಳು ಬದಲಾಯಿಸಿ

ಕಾಶ್ಮೀರಿಗಳ ರಾಜಕೀಯ ಹಕ್ಕುಗಳ ಬಗ್ಗೆ ಭಾರತದ ಸರ್ಕಾರವು ದಿವ್ಯ ನಿರ್ಲಕ್ಷ್ಯವನ್ನು ತೋರಿಕೊಂಡು ಬರುತ್ತಿದೆ. ಇದರ ವಿರುದ್ಧವಾಗಿ ೧೯೮೭ರಲ್ಲಿನ ರಾಜ್ಯ ಚುನಾವಣೆಗಳಲ್ಲಿ ಬಲವಂತದ/ನಕಲಿ ಮತದಾನಗಳು ಔಪಚಾರಿಕವಾಗಷ್ಟೇ ಬಂಡಾಯದ ಕಿಡಿ ಹೊತ್ತಿಸಲು ಕಾರಣವಾಗಿದ್ದವು.[೧೯][೨೦] ಇದು ಸರ್ಕಾರ ವಿರೋಧಿ ಮನೋಭಾವನೆ ಉಂಟಾಗಲು ತನ್ನ ಕೊಡುಗೆಯನ್ನಿತ್ತಂತಾಗಿದೆ.

ಕಾಶ್ಮೀರದ ಸಂಪೂರ್ಣ ಪಂಚಾಯತ್‌ ರಾಜ್‌ ಸ್ಥಾನಗಳೆಲ್ಲವುಗಳ ಪೈಕಿ ಬಹುತೇಕ ಅರ್ಧದಷ್ಟು ಸ್ಥಾನಗಳು ಖಾಲಿಯಿದ್ದು ಹಾಗಿರುವುದಕ್ಕೆ ಕಾರಣ ಈ ಘರ್ಷಣೆಗಳು ಉಂಟುಮಾಡುವ ಅಸ್ಥಿರತೆಯಾಗಿದೆ ಎಂದು ಸರ್ಕಾರದ ವರದಿಯೊಂದು ಹೇಳಿದೆ. ಪಂಚಾಯತ್‌ ರಾಜ್‌ ವ್ಯವಸ್ಥೆಯು ಭಾರತದ ಸಂವಿಧಾನಕ್ಕೆ ೭೩ನೆಯ ತಿದ್ದುಪಡಿಯೊಂದನ್ನು ತರುವ ಮೂಲಕ ರೂಪಿಸಲಾದ ಗ್ರಾಮಗಳ ಮಟ್ಟದ ಚುನಾಯಿತ ಆಡಳಿತ ವ್ಯವಸ್ಥೆಯಾಗಿರುತ್ತದೆ. ಇದೇ ವರದಿಯು ಪರಿಣಾಮಕಾರಿಯಾಗಿ ಆಡಳಿತ ನಡೆಸುವ ಅವರ ಸಾಮರ್ಥ್ಯವನ್ನೇ ಇಲ್ಲಿ 'ಕುಂಠಿತಗೊಳಿಸಲಾಗಿದೆ' ಎಂದು ಪ್ರತಿಪಾದಿಸಿದೆ.[೩೮]

ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರವು ಕಾಶ್ಮೀರಿಗಳ ರಾಜಕೀಯ ದೃಷ್ಟಿಕೋನವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಲಾರಂಭಿಸಿದೆ, ಅದರಲ್ಲೂ ವಿಶೇಷವಾಗಿ ಚುನಾವಣೆಗಳ ಮೂಲಕ ವ್ಯಕ್ತಪಡಿಸಿದಂತಹ ದೃಷ್ಟಿಕೋನವನ್ನು ಪರಿಗಣಿಸಲಾರಂಭಿಸಿದೆ ಎಂಬುದರ ಬಗ್ಗೆ ಕೆಲವು ಸೂಚನೆಗಳು ಕಂಡುಬರುತ್ತಿವೆ. ೨೦೦೮ರ ಜಮ್ಮು ಮತ್ತು ಕಾಶ್ಮೀರಗಳ ರಾಜ್ಯ ಶಾಸನಸಭೆ ಚುನಾವಣೆಗಳ ಸಮಯದಲ್ಲಿ, ರಾಷ್ಟ್ರಮಟ್ಟದ ಆಡಳಿತಾರೂಢ ಪಕ್ಷವು ತಮ್ಮ ಹಿತಾಸಕ್ತಿಗಳಿಗೆ ನೇರ ವಿರುದ್ಧವಾಗಿದ್ದರೂ ಚುನಾವಣೆಯ "ಜನಾದೇಶವನ್ನು ಗೌರವಿಸುವ " ಉದ್ದೇಶದಿಂದ ಬಹುಮತ ಪಡೆದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಯಿತು.[೩೯]

ಮುಜಾಹಿದೀನ್‌ಗಳ ಪ್ರಭಾವ ಬದಲಾಯಿಸಿ

ಸೋವಿಯೆತ್‌ ಒಕ್ಕೂಟವು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮುಜಾಹಿದೀನ್‌ ಹೋರಾಟಗಾರರು, ತೀವ್ರಗಾಮಿ ಮಹಮ್ಮದೀಯ ಸಿದ್ಧಾಂತವನ್ನು ಹರಡುವ ಉದ್ದೇಶದೊಂದಿಗೆ ಪಾಕಿಸ್ತಾನದ ಸಹಾಯಹಸ್ತದಿಂದ ಸಾವಕಾಶವಾಗಿ ಕಾಶ್ಮೀರದೊಳಕ್ಕೆ ರಹಸ್ಯವಾಗಿ ನುಸುಳಿದ್ದರು.[೨೦]

ಧಾರ್ಮಿಕತೆ ಬದಲಾಯಿಸಿ

ಜಮ್ಮು ಮತ್ತು ಕಾಶ್ಮೀರ ರಾಜ್ಯವು ಹಿಂದೂ ಬಹು-ಸಂಖ್ಯಾತ ಭಾರತದಲ್ಲಿರುವ ಏಕೈಕ ಮುಸಲ್ಮಾನ ಬಹುಸಂಖ್ಯಾತ ರಾಜ್ಯವಾಗಿದೆ. ಭಾರತವು ತನ್ನ ಮಟ್ಟಿಗೆ ಜಾತ್ಯತೀತ ರಾಷ್ಟ್ರವಾದರೂ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ಇಡೀ ಭಾರತವನ್ನು ಪರಿಗಣಿಸಿದರೆ ಮುಸಲ್ಮಾನರು ಪ್ರಾಧಾನ್ಯರಹಿತರಾಗಿದ್ದಾರೆ.[೪೦] ಈ ಪರಿಸ್ಥಿತಿಯು ಮುಸಲ್ಮಾನರು ಭಾರತಕ್ಕೆ ಸೇರಿದವರಲ್ಲ ಎಂಬ ಭಾವನೆ ಮೂಡುವಂತೆ ಮಾಡಿದ್ದು ಕಾಶ್ಮೀರಿ ಜನರನ್ನು ವಿಮುಖರಾಗುವಂತೆ ಮಾಡಿದೆ.[೨೦] ಹಿಂದೂ ಸಂಘಟನೆಯೊಂದಕ್ಕೆ ೯೯ ಎಕರೆಗಳಷ್ಟು ಅರಣ್ಯಭೂಮಿಯನ್ನು ಹಸ್ತಾಂತರಿಸುವ ಸರ್ಕಾರದ ನಿರ್ಧಾರವು ಈ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬೃಹತ್‌ ಪ್ರತಿಭಟನಾ ಮೆರವಣಿಗೆಗಳಲ್ಲಿ ಒಂದಕ್ಕೆ ಕಾರಣವಾಯಿತು.[೪೧]

ಇತರೆ ಕಾರಣಗಳು ಬದಲಾಯಿಸಿ

ಭಾರತದ ರಾಷ್ಟ್ರೀಯ ಜನಗಣತಿಯು ಕಾಶ್ಮೀರವು ಬಹುತೇಕ ಸಾಮಾಜಿಕ ಅಭಿವೃದ್ಧಿ ಸೂಚಕಗಳಾದ ಸಾಕ್ಷರತೆಯ ಪ್ರಮಾಣಗಳಲ್ಲಿ ಇತರ ರಾಜ್ಯಗಳಿಗಿಂತ ಹಿಂದಿದ್ದು ನಿರುದ್ಯೋಗವು ಅಸಾಧಾರಣ ಮಟ್ಟವನ್ನು ಮುಟ್ಟಿದೆ. ಇದು ಮತ್ತಷ್ಟು ಸರ್ಕಾರ ವಿರೋಧಿ ಮನೋಭಾವನೆಯು ಉಂಟಾಗುವುದಕ್ಕೆ ಕಾರಣವಾಗಿದೆ.[೪೨]

ತಂತ್ರಗಳು ಬದಲಾಯಿಸಿ

ಭಾರತ ಬದಲಾಯಿಸಿ

ಕಾಲ ಕಳೆಯುತ್ತಾ ಹೋದಂತೆ ಭಾರತದ ಸರ್ಕಾರವು ಕಾಶ್ಮೀರದಲ್ಲಿನ ತನ್ನ ಗುರಿಗಳನ್ನು ಸಾಧಿಸಲು ಸೇನಾ ಪಡೆಯ ಉಪಸ್ಥಿತಿ ಹಾಗೂ ನಾಗರಿಕ ಸ್ವಾತಂತ್ರ್ಯಗಳ ಮೊಟಕುಗೊಳಿಸುವಿಕೆಯನ್ನೇ ಹೆಚ್ಚು ಹೆಚ್ಚಾಗಿ ಅವಲಂಬಿಸುತ್ತಾ ಬಂದಿದೆ.[೨೯] ಸೇನಾಪಡೆಯು ಗಮನಾರ್ಹ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಾ ಬಂದಿದೆ.[೩೨]

ಬಂಡಾಯದ ಇತಿಹಾಸದ ಬಹುಭಾಗದ ಅವಧಿಯಲ್ಲಿ ಸರ್ಕಾರವು ಕಾಶ್ಮೀರಿ ಜನಸಮೂಹದ ರಾಜಕೀಯ ದೃಷ್ಟಿಕೋನಗಳಿಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿರಲಿಲ್ಲ. ಕೇಂದ್ರ ಸರ್ಕಾರವು ಆಗ್ಗಾಗ್ಗೆ ಅಲ್ಲಿನ ಶಾಸನಸಭೆಗಳನ್ನು ವಿಸರ್ಜಿಸುವುದು, ಚುನಾಯಿತ ಪ್ರತಿನಿಧಿಗಳನ್ನು ದಸ್ತಗಿರಿ ಮಾಡುವುದು ಹಾಗೂ ರಾಷ್ಟ್ರಪತಿ ಆಡಳಿತವನ್ನು ಹೇರುವುದು ತರಹದ ನಡವಳಿಕೆಗಳನ್ನೇ ಮಾಡಿಕೊಂಡು ಬಂದಿತ್ತು. ಕೇಂದ್ರಸರ್ಕಾರವು ೧೯೮೭ರಲ್ಲಿ ಚುನಾವಣೆಗಳಲ್ಲಿಯೇ ಬಲವಂತದ/ನಕಲಿ ಮತದಾನಗಳನ್ನು ಕೂಡಾ ನಡೆಸಿತ್ತು.[೧೯] ಇತ್ತೀಚಿನ ದಿನಗಳಲ್ಲಿ ಕೇಂದ್ರಸರ್ಕಾರವು ಸ್ಥಳೀಯ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದರ ಬಗ್ಗೆ ಸೂಚನೆಗಳು ಕಂಡುಬರುತ್ತಿವೆ.[೩೯]

ಕೇಂದ್ರ ಸರ್ಕಾರವು ಕಾಶ್ಮೀರಕ್ಕೆ ಅಭಿವೃದ್ಧಿಕಾರ್ಯಗಳಿಗೆ ಸಹಾಯಧನವನ್ನು ಕೂಡಾ ಹರಿಸುತ್ತಿದೆ. ಹಾಗಾಗಿ ಈ ಮೂಲಕ ಕಾಶ್ಮೀರವು ಪ್ರಸ್ತುತ ಒಕ್ಕೂಟದ ತಲಾ ವ್ಯಕ್ತಿಗೆ ಅತಿ ಹೆಚ್ಚಿನ ಮೊತ್ತದ ಸಹಾಯಧನವನ್ನು ಪಡೆಯುವ ರಾಜ್ಯವಾಗಿ ಮಾರ್ಪಟ್ಟಿದೆ.[೪೩]

ಪಾಕಿಸ್ತಾನ ಬದಲಾಯಿಸಿ

ಪಾಕಿಸ್ತಾನದ ಸರ್ಕಾರವು ಮೂಲತಃ ಕಾಶ್ಮೀರದಲ್ಲಿ ಬಂಡಾಯವನ್ನು ಬೆಂಬಲಿಸಿ, ತರಬೇತಿ ಕೊಟ್ಟು ಹಾಗೂ ಶಸ್ತ್ರ ಸರಬರಾಜುಗಳನ್ನು ಮಾಡುತ್ತಾ ಬಂದಿತ್ತು, ಆದಾಗ್ಯೂ ಕಾಶ್ಮೀರಿ ಬಂಡಾಯಕ್ಕೆ ಸಂಬಂಧಿಸಿದ ಸಂಘಟನೆಗಳು ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ರನ್ನು ಹತ್ಯೆ ಮಾಡಲು ಎರಡು ಬಾರಿ ಪ್ರಯತ್ನಿಸಿದ ನಂತರ, ಮುಷರ್ರಫ್‌ರು ಅಂತಹ ಸಂಘಟನೆಗಳಿಗೆ ಬೆಂಬಲವನ್ನು ಮುಂದುವರೆಸದಿರಲು ನಿರ್ಧರಿಸಿದರು.[೨೩] ಅವರ ಉತ್ತರಾಧಿಕಾರಿಯಾದ ಆಸಿಫ್‌ ಅಲಿ ಜರ್ದಾರಿ ಬಂಡಾಯಗಾರರನ್ನು ಕಾಶ್ಮೀರದಲ್ಲಿನ “ಭಯೋತ್ಪಾದಕರು” ಎಂದು ಕರೆದು ಅದೇ ಕಾರ್ಯನೀತಿಯನ್ನು ಮುಂದುವರೆಸಿದರು.[೨೪]

ಪಾಕಿಸ್ತಾನಿ ಗೂಢಚರ ಸಂಸ್ಥೆಯಾದ ಇಂಟರ್‌-ಸರ್ವೀಸಸ್‌ ಇಂಟೆಲಿಜೆನ್ಸ್‌ ಸಂಸ್ಥೆಯು ಪಾಕಿಸ್ಥಾನ ಸರ್ಕಾರವು ನೀಡಿದ ಸೂಚನೆಯನ್ನು ಅನುಸರಿಸಿ ಕಾಶ್ಮೀರದಲ್ಲಿನ ಬಂಡಾಯಗಾರ ಗುಂಪು/ತಂಡಗಳಿಗೆ[೨೪][೨೫][೨೬] ನೀಡುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲದೇ ಹೋದರೂ ಬಂಡಾಯಗಳಿಗೆ ಪಾಕಿಸ್ತಾನಿಯರ ಬೆಂಬಲವಂತೂ ಖಂಡಿತಾ ಕಡಿಮೆಯಾಗಿದೆ.[೨೯]

ಬಂಡಾಯಗಾರರು ಬದಲಾಯಿಸಿ

೨೦೦೦ರ ಸರಿಸುಮಾರು ವೇಳೆಯಿಂದ ‘ಬಂಡಾಯ’ವು ಸಾಕಷ್ಟು ಮಟ್ಟಿಗೆ ಕಡಿಮೆಯೆನಿಸುವಷ್ಟು ಹಿಂಸಾಚಾರವನ್ನು ಹೊಂದಿದ್ದು ತನ್ನ ಹಾದಿಯನ್ನು ಪ್ರತಿಭಟನೆಗಳು ಹಾಗೂ ಮೆರವಣಿಗೆಗಳ ಸ್ವರೂಪವನ್ನು ಪಡೆದುಕೊಂಡಿದೆ.[೪೧] ಕೆಲವು ನಿರ್ದಿಷ್ಟ ತಂಡ/ಗುಂಪುಗಳು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಹಾಗೂ ಬಿಕ್ಕಟ್ಟಿಗೆ ಶಾಂತಿಪೂರ್ವಕ ಪರಿಹಾರವನ್ನು ಕಂಡುಕೊಳ್ಳುವ ದಾರಿಯನ್ನು ಆಯ್ಕೆ ಮಾಡಿಕೊಂಡಿವೆ.[೪೪]

ಗುಂಪುಗಳು ಬದಲಾಯಿಸಿ

ಬೇರೆ ಬೇರೆ ದಂಗೆಕೋರ ಗುಂಪುಗಳು ತಮ್ಮದೇ ಆದ ಬೇರೆ ಬೇರೆ ಗುರಿಗಳನ್ನು ಕಾಶ್ಮೀರದಲ್ಲಿ ಹೊಂದಿವೆ. ಕೆಲವು ಗುಂಪುಗಳು ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳಿಂದಲೂ ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸಿದರೆ, ಕೆಲವು ಪಾಕಿಸ್ತಾನದೊಂದಿಗೆ ಏಕೀಕೃತಗೊಳ್ಳಲು ಬಯಸುತ್ತಿವೆ ಹಾಗೂ ಇನ್ನೂ ಕೆಲವು ಭಾರತದ ಸರ್ಕಾರದಿಂದ ಇನ್ನೂ ಹೆಚ್ಚಿನ ಮಟ್ಟದ ಸ್ವಾಯತ್ತತೆಯನ್ನಷ್ಟೇ ಕೇಳುತ್ತಿವೆ.[೪೫]

೨೦೧೦ರಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ೪೩% ಜನರು ಸ್ವಾತಂತ್ರ್ಯವನ್ನು ಬಯಸುತ್ತಾರೆ , ಪ್ರಾಂತ್ಯದಾದ್ಯಂತ ಹೀಗೆ ಸ್ವಾತಂತ್ರ್ಯ ಚಳುವಳಿಗೆ ಬೆಂಬಲವು ಅಸಮವಾಗಿ ಹಂಚಿಹೋಗಿದೆ.[೪೬]

ಗುರುತು ಬದಲಾಯಿಸಿ

ಕಳೆದ ಎರಡು ವರ್ಷಗಳ ಅವಧಿಯಲ್ಲಿ, ಭಯೋತ್ಪಾದಕ ಸಂಘಟನೆಯಾದ ಲಷ್ಕರ್‌-ಎ-ತೊಯ್ಬಾವು ಎರಡು ಬಣಗಳಾಗಿ ವಿಭಜಿತಗೊಂಡಿದೆ: ಅವುಗಳೆಂದರೆ ಅಲ್‌ ಮನ್‌ಸೂರಿನ್‌ ಮತ್ತು ಅಲ್‌ ನಾಸಿರೀನ್‌. ಪ್ರವರ್ಧಮಾನಕ್ಕೆ ಬಂದಿದೆಯೆಂದು ವರದಿಯಾದ ಮತ್ತೊಂದು ನವೀನ ಸಂಘಟನೆಯೆಂದರೆ ಕಾಶ್ಮೀರ ಉಳಿಸಿ ಚಳುವಳಿಯಾಗಿದೆ. ಹರ್ಕತ್‌-ಉಲ್‌-ಮುಜಾಹಿದೀನ್‌ (ಈ ಹಿಂದೆ ಹರ್ಕತ್‌-ಉಲ್‌-ಅನ್ಸಾರ್‌ ಎಂದು ಕರೆಸಿಕೊಳ್ಳುತ್ತಿತ್ತು) ಹಾಗೂ ಲಷ್ಕರ್‌-ಎ-ತೊಯ್ಬಾ ಸಂಘಟನೆಗಳು ಅನುಕ್ರಮವಾಗಿ ಪಾಕಿಸ್ತಾನದ ಮುಝಫರಾಬಾದ್‌, ಆಜಾದ್‌ ಕಾಶ್ಮೀರ ಮತ್ತು ಮುರಿಡ್ಕೆಗಳಿಂದ ಕಾರ್ಯಾಚರಿಸುತ್ತಿವೆ ಎಂದು ಭಾವಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಇತರೆ ಹೆಚ್ಚೇನೂ ಪ್ರಸಿದ್ಧವಾಗಿಲ್ಲದ ಸಂಘಟನೆಗಳೆಂದರೆ ಫ್ರೀಡಮ್‌ ಫೋರ್ಸ್‌ (ಸ್ವಾತಂತ್ರ್ಯ ದಳ) ಮತ್ತು ಫರ್ಜಂದಾನ್‌-ಎ-ಮಿಲ್ಲತ್‌ ಗಳಾಗಿವೆ. ಅಲ್‌-ಬದರ್ಎಂ ಬ ಸಣ್ಣ ಗುಂಪೊಂದು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಚಟುವಟಿಕೆಯಲ್ಲಿದೆ ಹಾಗೂ ಈಗಲೂ ಕಾರ್ಯನಿರ್ವಹಿಸುತ್ತಿದೆಯೆಂದು ಭಾವಿಸಲಾಗಿದೆ. ಸರ್ವ ಪಕ್ಷಗಳ ಹುರಿಯತ್‌ ಒಕ್ಕೂಟವು , ಕಾಶ್ಮೀರಿಗಳ ಹಕ್ಕುಗಳ ಬಗ್ಗೆ ಒತ್ತಾಯವನ್ನು ಹೇರುತ್ತಿರುವ ಸೌಮ್ಯವಾದಿ ಸಂಘಟನೆಯಾಗಿದ್ದು, ಇದು ನವ ದೆಹಲಿ ಹಾಗೂ ದಂಗೆಕೋರ ಗುಂಪುಗಳ ನಡುವೆ ಮಧ್ಯಸ್ಥಿಕೆಯ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಅಲ್-ಖೈದಾ ಬದಲಾಯಿಸಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್‌ ಖೈದಾ ಅಸ್ತಿತ್ವದಲ್ಲಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಡೊನಾಲ್ಡ್‌ ರಮ್ಸ್‌ಫೆಲ್ಡ್‌ರು ಅವರು ಸಕ್ರಿಯರಾಗಿದ್ದಾರೆ ಎಂದು ಸೂಚಿಸಿದ್ದರು[೪೭] ಆದ್ದರಿಂದ ೨೦೦೨ರಲ್ಲಿ SAS ಸಂಸ್ಥೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಒಸಾಮಾ ಬಿನ್‌ ಲಾಡೆನ್‌ಗಾಗಿ ಹುಡುಕಾಟ ನಡೆಸಿತು.[೪೮] ಅಲ್‌ ಖೈದಾ ತಾನು ಜಮ್ಮು ಮತ್ತು ಕಾಶ್ಮೀರ [೪೯] ರಾಜ್ಯದಲ್ಲಿ ತನ್ನದೊಂದು ನೆಲೆಯನ್ನು ಹೊಂದಿರುವುದಾಗಿ ಹೇಳಿಕೊಂಡಿದೆ.

ಆದಾಗ್ಯೂ ಅಂತಹ ಹೇಳಿಕೆಗೆ ಯಾವುದೇ ರೀತಿಯ ಸಾಕ್ಷ್ಯಾಧಾರವು ದೊರಕಿಲ್ಲ.[೪೭][೪೮][೪೯] ಭಾರತೀಯ ಸೇನಾ ಪಡೆಯೂ ಕೂಡಾ ಜಮ್ಮು ಮತ್ತು ಕಾಶ್ಮೀರಗಳಲ್ಲಿ ಅಲ್‌ ಖೈದಾವು ಅಸ್ತಿತ್ವದಲ್ಲಿದೆ ಎಎಂಬುದರ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದೇ ಪ್ರತಿಪಾದಿಸುತ್ತದೆ.[೫೦]

ಪಾಕಿಸ್ತಾನಿ ಆಕ್ರಮಿತ ಕಾಶ್ಮೀರ ಹಾಗೂ ಇನ್ನೂ ಕೆಲವು ಪ್ರದೇಶಗಳಲ್ಲಿ ಅಲ್ ಖೈದಾ ತನ್ನ ನೆಲೆಗಳನ್ನು ಸ್ಥಾಪಿಸಿಕೊಂಡಿದ್ದು ರಾಬರ್ಟ್‌ ಗೇಟ್ಸ್‌ ಸೇರಿದಂತೆ ಹಲವರು ಹೇಳುವ ಪ್ರಕಾರ ಅವರು ಭಾರತದ ಮೇಲೆ ದಾಳಿಗಳನ್ನು ಯೋಜಿಸಿ ನಡೆಸುವುದಕ್ಕೆ ಸಹಾಯವನ್ನು ಮಾಡಿದ್ದಾರೆ.[೫೦][೫೧][೫೨]

ಇವನ್ನೂ ಗಮನಿಸಿ ಬದಲಾಯಿಸಿ

ಬಿಕ್ಕಟ್ಟಿನ ವಿವರ ಬದಲಾಯಿಸಿ

ಉಲ್ಲೇಖಗಳು‌ ಬದಲಾಯಿಸಿ

  1. [೧], [೨] Archived 2009-04-14 ವೇಬ್ಯಾಕ್ ಮೆಷಿನ್ ನಲ್ಲಿ., [೩] Archived 2006-06-30 ವೇಬ್ಯಾಕ್ ಮೆಷಿನ್ ನಲ್ಲಿ. Multiple sources for the number of Indian counter-insurgency troops in the region
  2. "Reduction of India troops in Kashmir". Archived from the original on 2009-04-14. Retrieved 2011-04-23.
  3. 800 Militants Active in Kashmir: Army
  4. ೪.೦ ೪.೧ "Facts on Kashmiri Terrorism". Archived from the original on 2008-10-06. Retrieved 2011-04-23.
  5. ೫.೦ ೫.೧ "ಆರ್ಕೈವ್ ನಕಲು". Archived from the original on 2011-06-06. Retrieved 2011-04-23.
  6. "Kashmir Death Toll Hits 1,980 In 2003". The Washington Post. 21 November 2003. Archived from the original on 14 ಜೂನ್ 2011. Retrieved 23 ಏಪ್ರಿಲ್ 2011.
  7. "India revises Kashmir death toll to 47,000". Reuters. 21 November 2008. Archived from the original on 23 ಮೇ 2010. Retrieved 23 ಏಪ್ರಿಲ್ 2011.
  8. "Kashmir fighting death toll hits 19 - CNN.com". CNN. 23 March 2009. Retrieved 5 May 2010.
  9. "India revises Kashmir death toll to 47,000". Reuters. Hindustan Times. November 21, 2008]. {{cite news}}: Check date values in: |date= (help)[ಶಾಶ್ವತವಾಗಿ ಮಡಿದ ಕೊಂಡಿ]
  10. "Kashmir insurgency". BBC (in English). London: BBC. Retrieved November 1, 2010.{{cite news}}: CS1 maint: unrecognized language (link)
  11. Hussain, Altaf (14 September 2002). "Kashmir's flawed elections". BBC (in English). London: BBC. Retrieved November 1, 2010.{{cite news}}: CS1 maint: unrecognized language (link)
  12. ಪಾಕಿಸ್ತಾನದ ನೆರಳಿನಂತಹಾ ಗುಪ್ತಚರ ಇಲಾಖೆ - BBC ನ್ಯೂಸ್‌
  13. "ನ್ಯಾಟೋದ ಅಗ್ರ ಶ್ರೇಣಿಯ ಮುಖಂಡರು ತಾಲಿಬಾನ್‌ಗೆ ಸಹಾಯ ಹಸ್ತ ಚಾಚುತ್ತಿರುವುದಾಗಿ ಪಾಕಿಸ್ತಾನದ ಮೇಲೆ ಆರೋಪಿಸಿದ್ದಾರೆ - ಟೆಲಿಗ್ರಾಫ್‌". Archived from the original on 2008-03-27. Retrieved 2021-08-10.
  14. ಗಡಿಯಲ್ಲಿ ನಡೆಸಲಾಗುವ ತಾಲಿಬಾನ್‌ ದಾಳಿಗಳಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಸೂಚನೆಗಳು ದೊರೆಯುತ್ತಿವೆ - ನ್ಯೂಯಾರ್ಕ್‌ ಟೈಮ್ಸ್
  15. A NATION CHALLENGED: THE SUSPECTS; ಡೆತ್‌ ಆಫ್‌ ರಿಪೋರ್ಟರ್‌ ಪುಟ್ಸ್‌ ಫೋಕಸ್‌ ಆನ್ ಪಾಕಿಸ್ತಾನ್‌ ಇಂಟೆಲಿಜೆನ್ಸ್‌ ಯೂನಿಟ್ - ನ್ಯೂಯಾರ್ಕ್‌ ಟೈಮ್ಸ್
  16. ಭಾರತೀಯ ಅಧಿಕಾರಿಗಳು ಆಕ್ರಮಿತ ಕಾಶ್ಮೀರದಲ್ಲಿ 3,400 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳುತ್ತಾರೆ (ಆಗಸ್ಟ್‌ 18, 2009; AFP)
  17. ೧೭.೦ ೧೭.೧ ೧೭.೨ Bose, Sumantra.Kashmir: Roots of Conflict, Paths to Peace. Harvard, 2005.
  18. Swami, Praveen.India, Pakistan and the Secret Jihad. 2006.
  19. ೧೯.೦ ೧೯.೧ ೧೯.೨ ೧೯.೩ ೧೯.೪ ೧೯.೫ Altaf, Hussein.[೪] “Kashmir’s Flawed Elections”
  20. ೨೦.೦ ೨೦.೧ ೨೦.೨ ೨೦.೩ ೨೦.೪ BBC News.[೫] “Kashmir Insurgency”
  21. ೨೧.೦ ೨೧.೧ Jamar, Arif.The untold story of Jihad in Kashmir. 2009.
  22. Hasan, Syed Shoaib.[೬] “Why Pakistan is boosting Kashmir militants”
  23. ೨೩.೦ ೨೩.೧ ೨೩.೨ Khan, Aamer Ahmed.[೭] “Pakistan: Where have the militants gone?”
  24. ೨೪.೦ ೨೪.೧ ೨೪.೨ ೨೪.೩ ೨೪.೪ ೨೪.೫ ೨೪.೬ Stephens, Bret.[೮] “The most difficult job in the world”
  25. ೨೫.೦ ೨೫.೧ ೨೫.೨ Cole, Juan.[೯] “Does Obama understand his biggest foreign-policy challenge?”
  26. ೨೬.೦ ೨೬.೧ ೨೬.೨ Rediff.[೧೦] “Links between ISI, militant groups: Straw”
  27. ೨೭.೦ ೨೭.೧ ೨೭.೨ The Economist. Stony Ground. July 2010.
  28. The Economist. Your Place or Mine?. February 2004.
  29. ೨೯.೦ ೨೯.೧ ೨೯.೨ ೨೯.೩ ೨೯.೪ The Economist. Grim Up North. June 2009.
  30. ೩೦.೦ ೩೦.೧ BBC News.[೧೧] “Kashmir's extra-judicial killings”
  31. Nathan, Joanna.[೧೨] “India’s leader makes peace overtures in Kashmir”
  32. ೩೨.೦ ೩೨.೧ Human Rights Watch, Patricia Gossman. “India's secret army in Kashmir : new patterns of abuse emerge in the conflict “, 1996
  33. ೩೩.೦ ೩೩.೧ "95% HR violation cases against Army in J&K false". zeenews.
  34. Jim Yardley. India Reopens Kashmir’s Schools, but Many Stay Away . The New York Times, 27th September 2010.
  35. Pallone, Frank.[೧೩] “Resolution condemning Human Rights Violations against Kashmiri Pandits”
  36. Human Rights Watch. Rights Abuses Behind Kashmir Fighting July 1999.
  37. GlobalSecurity.org.[೧೪] “Directorate for Inter-Services Intelligence [ISI]”
  38. Planning Commission of India Jammu & Kashmir Development Report 2003.
  39. ೩೯.೦ ೩೯.೧ Ramaseshan, Radhika.[೧೫] “Cong dilemma: young Omar or PDP” The Telegraph
  40. Nomani, Asra Q.[೧೬] “Muslims -- India's new 'untouchables'” Los Angeles Times
  41. ೪೧.೦ ೪೧.೧ Thottam, Jyoti [೧೭] “Valley of Tears” Time Magazine, September 2008
  42. Government of India Indian National Census 2001 2001.
  43. Sanghvi, Vir [೧೮] “Think the unthinkable” Hindustan Times, August 2008
  44. Gupta, Amit; Leather, Kaia.[೧೯] “Kashmir: Recent Developments and US Concerns”, June 2002
  45. BBC News [೨೦] “The Future of Kashmir?”
  46. Bradnock, Robert “Kashmir: Paths to Peace” Chatham House, London, 2008
  47. ೪೭.೦ ೪೭.೧ Abbas, Zaffar.[೨೧] “Analysis: Is al-Qaeda in Kashmir?”
  48. ೪೮.೦ ೪೮.೧ Smith, Michael.[೨೨] “SAS joins Kashmir hunt for bin Laden” The Telegraph 2002
  49. ೪೯.೦ ೪೯.೧ International Herald Tribune.[೨೩] “Al Qaeda Claim of Kashmiri Link Worries India”
  50. ೫೦.೦ ೫೦.೧ The Hindu.[೨೪] “No Al Qaeda presence in Kashmir: Army”
  51. Dawn.[೨೫] “Al Qaeda could provoke new India-Pakistan war: Gates”, January 2010
  52. Smucker, Phillip.[೨೬] “Al Qaeda thriving in Pakistani Kashmir”