ಛಾಯಾಚಿತ್ರವು (ಫೋಟೊ) ದೀಪ ಸಂವೇದಿ ಪದರ, ಸಾಮಾನ್ಯವಾಗಿ ಛಾಯಾಗ್ರಾಹಿ ಪೊರೆ ಅಥವಾ ಸಿಸಿಡಿಯಂತಹ ವಿದ್ಯುನ್ಮಾನ ಚಿತ್ರಕ ಅಥವಾ ಸಿಮಾಸ್ ಚಿಪ್‍ನ ಮೇಲೆ ಬೀಳುವ ಬೆಳಕಿನಿಂದ ಸೃಷ್ಟಿಯಾದ ಒಂದು ಚಿತ್ರ. ಬಹುತೇಕ ಛಾಯಾಚಿತ್ರಗಳು, ದೃಶ್ಯದ ಬೆಳಕಿನ ಗೋಚರವಾಗುವ ತರಂಗಾಂತರಗಳನ್ನು ಮಾನವ ನೇತ್ರ ಕಾಣಬಲ್ಲ ನಕಲಾಗಿ ಕೇಂದ್ರೀಕರಿಸಲು ಮಸೂರವನ್ನು ಉಪಯೋಗಿಸುವ ಕ್ಯಾಮರಾ ಬಳಸಿ ಸೃಷ್ಟಿಸಲ್ಪಡುತ್ತವೆ. ಛಾಯಾಚಿತ್ರಗಳನ್ನು ಸೃಷ್ಟಿಸುವ ಪ್ರಕ್ರಿಯೆ ಮತ್ತು ಆಚರಣೆಯನ್ನು ಛಾಯಾಚಿತ್ರಣವೆನ್ನಲಾಗುತ್ತದೆ.

ಸೌರಲೇಖನ ಪ್ರಕ್ರಿಯೆಯ ಮೂಲಕ ನೀಸೆಫರ ನಿಯೆಪ್ಸ್‍ರಿಂದ ೧೮೨೫ರಲ್ಲಿ ರಚಿತವಾದ ಇದು ಅಸ್ತಿತ್ವದಲ್ಲಿರುವ ಅತ್ಯಂತ ಮುಂಚಿನ ಸೌರಲೇಖೀಯ ರೇಖನ ಎಂದು ತಿಳಿಯಲಾಗಿದೆ. ಒಬ್ಬ ವ್ಯಕ್ತಿ ಕುದುರೆಯನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ತೋರಿಸುವ ಈ ಚಿತ್ರ ೧೭ನೇ ಶತಮಾನದ ಫ್ಲ್ಯಾಂಡರ್ಸ್ ಪ್ರದೇಶದ ಒಂದು ರೇಖನವಾಗಿದೆ.