ಕ್ರಾಸ್ವೇಸ್ ಬಹುಮಹಡಿ ಕಾಂಪ್ಲೆಕ್ಸ್, ಟೊರಾಂಟೋನಗರ

'ಕ್ರಾಸ್ವೇಸ್ ಟ್ವಿನ್ ಟವರ್, ಬಹುಮಹಡಿ ಕಾಂಪ್ಲೆಕ್ಸ್', [೧] ಉತ್ತರ ಅಮೆರಿಕದ, ಕೆನಡಾ ರಾಷ್ಟ್ರದ,ಆರ್ಥಿಕ ರಾಜಧಾನಿಯೆಂದು ಹೆಗ್ಗಳಿಕೆಗಳಿಸಿದ ಟೊರಾಂಟೋನಗರದ ಪಶ್ಚಿಮದಲ್ಲಿ 'ಕಮರ್ಶಿಯಲ್ ಹಾಗೂ ವಸತಿಸೌಕರ್ಯಕ್ಕಾಗಿಯೇ ಆಧುನಿಕ ಫ್ಲಾಟ್ ಗಳು 'ಲಭ್ಯವಿವೆ. ಈ ವಸತಿ ಕಟ್ಟಡ ಅತ್ಯಂತ ಗಟ್ವಿಮುಟ್ಟಾದ ದೊಡ್ಡ ಕಲ್ಲುಗಳು, ಕಬ್ಬಿಣ, ಹಾಗೂ ತೇಗದ ಮರದ ಸೇರ್ಪಡೆಯಿಂದ ಸುರಕ್ಷಿತ ಸ್ಥಳವೆಂದು ಹೆಸರುವಾಸಿಯಾಗಿವೆ. ಕೆನಡ ದೇಶದ, ಸುಪ್ರಸಿದ್ಧ 'ಸಿ.ಎನ್.ಟವರ್',ಹಾಗೂ ಹಲವಾರು ಸುಪ್ರಸಿದ್ಧ ಕಟ್ಟಡಗಳ ನಿರ್ಮಾಪಕರೇ, ಇಂಜಿನಿಯರ್ ಗಳೇ [೨] ಇಲ್ಲೂ ತಮ್ಮ ಅಮೂಲ್ಯವಾದ ಯೋಗದಾನ ಮಾಡಿದ್ದಾರೆ.

'ಕ್ರಾಸ್ವೇಸ್ ಬಹುಮಹಡಿ ಕಾಂಪ್ಲೆಕ್ಸ್ ನ ಪ್ರಮುಖದ್ವಾರ'


'ಟ್ವಿನ್ ಟವರ್ ನ 'ಎ' ಮತ್ತು 'ಬಿ' ವಿಭಾಗಗಳು' ಬದಲಾಯಿಸಿ

  • ಡಂಡಾಸ್ ಸ್ಟ್ರೀಟ್(ಪ)ದಲ್ಲಿರುವ 'ದ ಕ್ರಾಸ್ ವೇಸ್ ಕಾಂಪ್ಲೆಕ್ಸ್ ನ ಎ-ವಿಭಾಗದಲ್ಲಿ', ಕಾಂಪ್ಲೆಕ್ಸ್ ೨೩೫೦,
  • ಡಂಡಾಸ್ ಸ್ಟ್ರೀಟ್(ಪ) ದಲ್ಲಿರುವ 'ದ ಕ್ರಾಸ್ ವೇಸ್ ಕಾಂಪ್ಲೆಕ್ಸ್ ನ ಬಿ-ವಿಭಾಗದಲ್ಲಿ', ಕಾಂಪ್ಲೆಕ್ಸ್ ೨೩೬೦,

ಕ್ರಾಸ್ವೇ ಮಲ್ಟಿ ಸ್ಟೋರಿ ಕಮರ್ಶಿಯಲ್, ಅಂಡ್ ಹೌಸಿಂಗ್ ಕಾಂಪ್ಲೆಕ್ಸ್ ಇರುವ ಸ್ಥಳ ಬದಲಾಯಿಸಿ

ಈ ಬಹುಮಹಡಿ ಮೇಲಿರುವ ಆಧುನಿಕ ಫ್ಲಾಟ್ ಗಳು ಇರುವ ಸ್ಥಾನ, 'ಉತ್ತರ ಪೂರ್ವ ಬ್ಲೂರ್ ಸ್ಟ್ರೀಟ್ ವೆ' ಹಾಗೂ 'ಡಂಡಾ ಸ್ಟ್ರೀಟ್ ವೆ' ಸೇರುವ ಜಾಗದಲ್ಲಿ ಎಂದು ಹೇಳಬಹುದು.'ಟವರ್ ಕಾಂಪ್ಲೆಕ್ಸ್' ನಗರದ ಅತ್ಯುತ್ತಮ 'ಟ್ರಾನ್ಸಿಟ್ ಪರಿವಹನ ನಿಗಮ'ಕ್ಕೆ ತೀರ ಸಮೀಪದಲ್ಲಿದೆ. 'ಡಂಡಾಸ್ ವೆಸ್ಟ್ ಸಬ್ವೇ ಸ್ಟೇಷನ್'. ಟೊರಾಂಟೋ ಟ್ರಾನ್ಸಿಟ್ ಕಮೀಶನ್ ನ ಬ್ಲೂರ್ ಡ್ಯಾನ್ ಫೋರ್ತ್ ಸಬ್ವೇ ಲೈನ್. ಈ ಸ್ಟೇಷನ್ ಡಂಡಾಸ್ ಸ್ಟ್ರೀಟ್ ವೆಸ್ಟ್ ನ ಸ್ಥಾನದಲ್ಲಿದೆ. 'ಕಾಂಪ್ಲೆಕ್ಸ್' ಎದುರಿಗಿರುವ್ ಮುಖ್ಯ ರಸ್ತೆ ದಾಟುವಕಡೆ ಇದೆ.'ಸ್ಟ್ರೀಟ್ ಕಾರ್ ಸರ್ವೀಸ್,' 'ಡಂಡಾಸ್ ಸ್ಟ್ರೀಟ್ ವೆಸ್ಟ್' ನಿಂದ ಶುರುವಾಗುತ್ತದೆ. ಹಾಗೆಯೇ 'ಬಸ್ ಸರ್ವೀಸ್', 'ಬ್ಲೋರ್ ಸ್ಟ್ರೀಟ್ ವೆಸ್ಟ್,' ನಿಂದ ಆರಂಭವಾಗುತ್ತದೆ. 'ಚ್ರಾಸ್ ವೇಸ್ ಸ್ಟಾಪ್'. 'ವೆಸ್ಟ್ ಟೊರಾಂಟೋನ ರೈಲ್ ಪಾತ್,' 'ಕ್ರಾಸ್ವೇಸ್' ಪೂರ್ವದಲ್ಲಿ ಸಾಗಿಹೋಗುತ್ತದೆ. 'ರೈಲ್ವೇ ಕಾರಿಡರ್' ನಿಂದ ಬೇರ್ಪಟ್ಟಿದೆ. 'ಬ್ಲೋರ್ ಗೋ ಸ್ಟೇಷನ್,' 'ರೀಜನಲ್ ಕಮ್ಯೂಟರ್ ಟ್ರೇನ್ಸ್' ಇದೆ. 'ಗೊ ಟ್ರೈನ್ಸ್' ಟೊರಾಂಟೋನಗರದ 'ಯೂನಿಯನ್ ರೈಲ್ವೆ ನಿಲ್ದಾಣ'ದಿಂದ 'ಕಿಚ್ನರ್ ಸ್ಟೇಷನ್' ವರೆಗೆ ಸಂಪರ್ಕ ಕಲ್ಪಿಸುತ್ತವೆ.

 
'೨೯ ಮಹಡಿಯ ಸುಸಜ್ಜಿತ ಕಮರ್ಶಿಯಲ್ ಹಾಗೂ ವಾಸಗೃಹಗಳ ಕಾಂಪ್ಲೆಕ್ಸ್'

ಬಹುಮಹಡಿ-ಕಟ್ಟದ ವಿನ್ಯಾಸ ಬದಲಾಯಿಸಿ

ಈ ಕಾಂಪ್ಲೆಕ್ಸ್ ೨೯ ಮಹಡಿಗಳ ಆಧುನಿಕ ವಾಸ್ತುವಿನ್ಯಾಸದ ೨ ಟವರ್ ಗಳನ್ನು ಹೊಂದಿದೆ. ತ್ರಿಕೋಣಾಕಾರದ ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿದೆ. ಕಟ್ಟಡದ ತಳಭಾಗದಲ್ಲಿ, 'ಅತಿವಿಶಾಲವಾದ ಟೆರೇಸ್' ಗಳಿರುವ 'ಪೋಡಿಯಮ್' ಗಳಿಂದ ಪೋಡಿಯಮ್ ನ ಒಂದು ಮಟ್ಟದಲ್ಲಿ ಒಳಭಾಗದಲ್ಲಿ 'ಅತ್ಯಾದುನಿಕ ಮಾಲ್' ಇದೆ. 'ಕ್ರಾಸ್ವೇಸ್' ಅತಿ ಭಾರಿಗಾತ್ರದ ಕಟ್ಟಡನಿರ್ಮಾಣ ವಸ್ತುಗಳಿಂದ ನಿರ್ಮಾಣವಾಗಿದೆ. 'ವೆಬ್ ಝರೆಫ' (Brutalistik Style)ಹಾಗೂ 'ಮೆನ್ಕೆಸ್ ಹೌಸ್ಡನ್' ಕಟ್ಟಡ ನಿರ್ಮಾಪಕರ, ಸಹಭಾಗಿತ್ವದಲ್ಲಿ ನಿರ್ಮಾಣವಾಗಿದೆ. ಕಟ್ಟಿದವರು, 'ಕನ್ಸಾಲಿಡೇಟೆಡ್ ಬಿಲ್ಡಿಂಗ್ ಕಾರ್ಪೊರೇಶನ್ ಸಂಸ್ಥೆ'ಯವರು. ೧೧೧,೪೮೦ ಚ. ಮೀ (೧.೨ ಮಿಲಿಯನ್ ಚದರ ಅಡಿ)ಕಟ್ಟಡ ೧೯೭೪ ರಲ್ಲಿ ಮುಗಿಯಿತು.

'ಗ್ರಾಹಕರಿಗೆ ಸಿಗುವ ಫ್ಲಾಟ್ ಗಳ ಬಗ್ಗೆ ವಿವರಗಳು' ಬದಲಾಯಿಸಿ

 
' ಕಾಂಪ್ಲೆಕ್ಸ್ ನ ೨ ನೇ ಮಹಡಿಯಲ್ಲಿ ಅತ್ಯಾಧುನಿಕ ಈಜುಕೊಳ'
  • ಒಬ್ಬರ ವಾಸದ ಫ್ಲಾಟ್
  • ಮಕ್ಕಳಿಗಾಗಿ ಫ್ಲಾಟ್
  • ೧ ಬೆಡ್ ರೂಂ ಫ್ಲಾಟ್
  • ೨ ಬೆಡ್ ರೂಂ ಫ್ಲಾಟ್
  • ೩ ಬೆಡ್ ರೂಂ ಫ್ಲಾಟ್

'ಮಾಲ್ ನ ಒಳಭಾಗದ ವಿನ್ಯಾಸ' ಬದಲಾಯಿಸಿ

 
'ಅಲಂಕಾರದ ಲೈಟ್ ನ ಛಾಯೆಯಲ್ಲಿ,ಸುಪ್ರಸಿದ್ಧ ಸಿ.ಎನ್.ಟವರ್, ಗೋಚರಿಸುತ್ತದೆ'

ಸನ್ ೧೯೭೦ ರ ಮಾದರಿಯ, ಡಿಸೈನ್ ಮಾಡೆಲ್ ಗಳು, ನೆಲದಿಂದ ಮೇಲಿನವರೆಗೆ ಇಟ್ಟಿಗೆಯನ್ನು ಬಳಸಿದ ಮುಚ್ಚಬಹುದಾದ ತಾತ್ಕಾಲಿಕ ಖಾಲಿಜಾಗಗಳನ್ನು ಬೇಕಾದಾಗ ಸೂಕ್ತವಾಗಿ ಬಳಸಬಹುದು. ನೆಲಕ್ಕೆ ಕಂದುಬಣ್ಣದ ಟೈಲ್ಸ್ ಗಳು,ಹೇಗೆಬೇಕಾದರೂ ಬದಲಾಯಿಸಬಹುದಾದ ವ್ಯವಸ್ಥೆಯನ್ನು ಹೊಂದಿದ್ದು ಚೆನ್ನಾಗಿ ಭದ್ರವಾದ, ಹಾಗೂ ಮಜಬೂತ್ ಆದ ಕಟ್ಟಡ ಸಾಮಗ್ರಿಗಳನ್ನು ಬಳಸಿ, ಸಾಲಾಗಿ ಕಟ್ಟಿರುವ ಜಾಗಗಳಲ್ಲಿ ಕಟ್ಟಡದ ಹೆಸರಾಂತ ಆರ್ಕಿಟೆಕ್ಟ್, 'ಕ್ರಿಸ್ ಎ ಮಾಂಟೊಗೊಮೆರಿ'ಯವರು ಆ ೩,೯೦೦ (the Brutalist style)(೪೨,೦೦೦ ಚದರ ಅಡಿ)ಹೆಚ್ಚುವರಿ ಭಾಗವನ್ನು ಸೇರಿಸಿದರು. ಈಗಿರುವ ಕಟ್ಟಡಕ್ಕೆ ೨ ಮಹಡಿಗಳನ್ನು ವಾಣಿಜ್ಯ ವಿಭಾಗಗಳಿರುವ ಸುತ್ತಲೂ ಗೋಡೆಗಳಿಂದ ಸುತ್ತುವರಿದ ೭,೯೦೦ ಚದರ ಮೀ (೮೫,೦೦೦ ಚದರ ಅಡಿ) ಆಫೀಸ್ ಜಾಗವನ್ನು, ಕಾಲಾನುಕ್ರಮದಲ್ಲಿ ಸೇರಿಸಲಾಯಿತು.

ಗ್ರಾಹಕರಿಗೆ ದೊರೆತ ಸೌಕರ್ಯಗಳು ಬದಲಾಯಿಸಿ

 
'ಅತ್ಯಾಧುನಿಕ ೧ ಡಾಲರ್ ಗೆ ದೊರಕುವ ವಸ್ತುಗಳ ಗ್ರಾಹಕರ ಮಳಿಗೆ'
  • Canadian Imperial Bank of Commers (CIBC)
  • Jekyl and Hyde Pub
  • City of Toronto Public Health department office
  • Youth Employment Centre
  • Three private vocational colleges—Trebas Institute, Ontario Conservatory of Music, and ICT College
  • An indoor swimming pool for tenants
  • Original globe lighting on terrace frames-a view of the CN Tower
  • Several Eating houses, Dental clinics, Computer Serivices, Consumer Electronics and Provisions Shops.

'ಡಾಲರಮ' ಬದಲಾಯಿಸಿ

'ಡಾಲರಮ ಸ್ಟೋರ್ಸ್', [೩]ಕ್ರಾಸ್ವೇಸ್ ಬಹುಮಹಡಿ ಲಕಾಂಪ್ಲೆಕ್ಸ್ ನ ಮುಖ್ಯದ್ವಾರದ ಆರಂಭದಲ್ಲಿಯೇ ಇದೆ. ಬಹಳ ವಿಶಾಲವಾದ ಮಳಿಗೆಯನ್ನು ಹೊಂದಿರುವ ಈ 'ಸ್ಟೋರ್ಸ್' ನ ಕಪಾಟುಗಳು ಹಲವಾರು ವೈವಿಧ್ಯಮಯ, ಪ್ರತಿದಿನವೂ ಬೇಕಾಗುವ ವಸ್ತುಗಳಿಂದ ತುಂಬಿತುಳುಕುತ್ತಿವೆ. ಈ ಅತ್ಯಾಧುನಿಕ 'ಡಾಲರಮ' ಎಂಪೋರಿಯಂ, ೨೦೧೨ ರ, ಆಗಸ್ಟ್, ೧೪ ರಂದು, ಬಳಕೆದಾರರಿಗೆ ಬಿಡುಗಡೆಮಾಡಲಾಯಿತು.

ಐತಿಹ್ಯ ಬದಲಾಯಿಸಿ

ಏಪ್ರಿಲ್, ೧೯೯೨,ರಲ್ಲಿ ದ 'ಡಾಲರಮ ಬಿಝಿನೆಸ್' ನ, ಸಿ.ಇ.ಒ. 'ಲಾರ್ರಿ ರೊಸ್ಸಿ' ಕ್ವಿಬಿಕ್ ನ ಮಟಾನ್ ನಗರದಲ್ಲಿ ೧ ಡಾಲರ್ ಗೆ ಸಿಗುವ ಎಲ್ಲಾ ಗೃಹಬಳಕೆಯ ವಸ್ತುಗಳ ಮಳಿಗೆಯನ್ನು ಮೊದಲು ಸ್ಥಾಪಿಸಿದರು.[೪] ಈಗ ಸದ್ಯದಲ್ಲಿ ಚಾಲ್ತಿಯಲ್ಲಿರುವ ಮಳಿಗೆಗಳನ್ನು ಡಾಲರಮ ಶಾಪ್ ನ ಮನೋವ್ಯವಸ್ಥೆಗೆ ಅಳವಡಿಸಲು ಪ್ರಯತ್ನನಡೆಯುತ್ತಿದ್ದು ರಾಷ್ಟ್ರದಲ್ಲೆಲ್ಲಾ ವ್ಯಾಪಕವಾಗಿ ಬೆಳೆಸಲು ಬೆಳವಣಿಗೆಗಳು ನಡೆಯುತ್ತಿವೆ. ಕೆನಡಾ ದೇಶದ ಆತಿ ಪ್ರಮುಖ 'ಡಾಲರ್ ಸ್ಟೋರ್' ನಡೆಸುವ ಮಾಲೀಕರು. ಇವರು, ಮೂರನೆಯ ಪೀಳಿಗೆಯ ಗ್ರಾಹಕರು. ಇವರಿಗೆ ಸೇರಿದ, ಒಟ್ಟಾರೆ ೯೦೦ ಶಾಖೆಗಳಿವೆ. ಈ ಮಳಿಗೆಗಳು, ನಗರಗಳ ಒಳ್ಳೆಯ ಮುಖ್ಯ ಜಾಗದಲ್ಲಿದ್ದು, ಗ್ರಾಹಕರಿಗೆ, ಅತ್ಯುತ್ತಮ ನಿಗದಿತ ಬೆಲೆಯಲ್ಲಿ ದಿನಬಳಕೆಯ ವಸ್ತುಗಳು ಸಿಗುವ ವ್ಯವಸ್ಥೆ ಇದೆ. ಇವು ಮೆಟ್ರೋಪಾಲಿಟನ್ ನಗರದ ಪ್ರಮುಖ ಜಾಗಗಳಲ್ಲಿ, ಚಿಕ್ಕ ನಗರಗಳಲ್ಲಿ, ಸಣ್ಣ ಊರುಗಳಲ್ಲೂ ಲಭ್ಯವಿವೆ. ೧ ಡಾಲರ್ ಮಳಿಗೆಯಲ್ಲಿ ಸಿಗುವ ವೈವಿಧ್ಯಮಯ ದಿನಬಳಕೆಯ ವಸ್ತುಗಳನ್ನು ಆರಿಸಿವುದರಲ್ಲಿ ಗ್ರಾಹಕರ ಸಾಮರ್ಥ್ಯತೆ ಇರುತ್ತದೆ. ವರ್ಷದ ಬದಲಾಗುವ ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳುವ ವಸ್ತುಗಳು ಸರಿಯಾದ ದರದಲ್ಲಿ ಅಲ್ಲಿ ದೊರೆಯುವುದರಿಂದ, ಅತಿ ಹೆಚ್ಚೆಂದರೆ ೩ ಡಾಲರ್ ವರೆಗೂ ಕೊಳ್ಳಲು ಉಪಲಭ್ದವಿವೆ. 'ಡಾಲರಮ ಮಾಲ್ ಅಂಗಡಿ'ಯ ಮೊದಲ ಶಾಖೆ ಕ್ವಿಬೆಕ್ ನಗರದ ಹೊರಗೆ, 'ಬ್ರೂನ್ಸ್ ವಿಕ್' ನಗರದ 'ಗ್ರಾಂಡ್ ಫಾಲ್ಸ್' ನಲ್ಲಿ ಶುರುಮಾಡಲಾಯಿತು.

ಉಲ್ಲೇಖಗಳು ಬದಲಾಯಿಸಿ

  1. 'ಕ್ರಾಸ್ವೇಸ್ ಟ್ವಿನ್ ಟವರ್, ಬಹುಮಹಡಿ ಕಾಂಪ್ಲೆಕ್ಸ್',
  2. ಸುಪ್ರಸಿದ್ಧ 'ಸಿ.ಎನ್.ಟವರ್',ಹಾಗೂ ಹಲವಾರು ಸುಪ್ರಸಿದ್ಧ ಕಟ್ಟಡಗಳ ನಿರ್ಮಾಪಕರೇ, ಇಂಜಿನಿಯರ್ ಗಳೇ ಆದ ಮೆಸರ್ಸ್,'WZMH_Architects', ಈ ಕಟ್ಟಡದ ನಿರ್ಮಾಪಕರು-ವಿಕಿಪೀಡಿಯ
  3. 'ಡಾಲರಮ ಎಂಬ ಒಂದು ಡಾಲರ್ ನಲ್ಲಿ ಕೊಳ್ಳಬಹುದಾದ ವಸ್ತುಗಳ ಶಾಪ್'
  4. "100 years of retail experience, Historical Milestones 3 Generations, 1910 to this day". Archived from the original on 2011-06-29. Retrieved 2014-11-23.