ಕೊರೋನಾವೈರಸ್ ಪಾರ್ಟಿ

ಕೊರೋನಾವೈರಸ್ ಪಾರ್ಟಿ (Corona-Party) ಮೇಲ್ನೋಟಕ್ಕೆ COVID-೧೯ ಅನ್ನು ಪಡೆಯಲು ಒಂದು ಒಗ್ಗೂಡುವಿಕೆಯಾಗಿದೆ. ಆದರೆ ಕೆಲವೊಮ್ಮೆ ಭಾಗವಹಿಸುವವರು ವೈಯಕ್ತಿಕವಾಗಿ ಅಥವಾ ಸಮುದಾಯಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ ಎಂಬ ಆಧಾರದ ಮೇಲೆ ನಡೆಸಲಾಗುತ್ತದೆ. ಈ ವಿದ್ಯಮಾನವನ್ನು ಜರ್ಮನಿ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ಗುರುತಿಸಲಾಗಿದೆ.[೨] ನೆದರ್ಲ್ಯಾಂಡ್ಸ್ ದೇಶದಲ್ಲಿ ಇಂತಹ ಕೂಟಗಳನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ.[೩]

ಆರು ಪ್ಯಾಕ್ ಕೊರೋನಾ ಬಿಯರ್, ಕೆಲವೊಮ್ಮೆ ಕೊರೋನಾವೈರಸ್ ಪಾರ್ಟಿಗಳಲ್ಲಿ ಕುಡಿಯಲಾಗುತ್ತದೆ[೧]
ಆಸ್ಟ್ರೇಲಿಯಾದಲ್ಲಿ ಸ್ಥಳೀಯರಿಗೆ ಮಾತ್ರ "ಕೊರೋನಾಪಾರ್ಟಿ" ಗೆ ಆಹ್ವಾನ

ಉದಾಹರಣೆಗಳು ಬದಲಾಯಿಸಿ

ಕೆಂಟುಕಿಯಲ್ಲಿ ಇಂತಹ ಪಾರ್ಟಿಯಲ್ಲಿ ಭಾಗವಹಿಸಿದವರೊಬ್ಬರು ವೈರಸ್‌ಗೆ ಧನಾತ್ಮಕತೆ ಹೊಂದಿರುವುದನ್ನು ದೃಢಪಡಿಸಲಾಗಿದೆ.[೪]

ಕೊರೋನಾವೈರಸ್ ವಿಷಯದ ಕೂಟಗಳಂತಹ ಇತರ ಕೂಟಗಳನ್ನು ಸಹ ಅವಿವೇಕದ ಕೂಟ ಎಂದು ಖಂಡಿಸಲಾಗಿದೆ.[೧]

ಹೊಸ ನಿಯಮಗಳು ಜಾರಿಗೆ ಬರುವ ಮೊದಲು ಅನೇಕ ಜನರು ಸಂಜೆ ಈ ಕೊರೋನಾವೈರಸ್ ಪಾರ್ಟಿಯನ್ನು ಆಚರಿಸಿದ್ದಾರೆ ಎಂದು ಬೆಲ್ಜಿಯಂ ಪತ್ರಿಕೆ ಹೆಟ್ ಲಾಟ್ಸ್ಟೆ ನ್ಯೂಸ್ (Belgian newspaper Het Laatste nieuws) ೧೫ ಮಾರ್ಚ್ ೨೦೨೦ ರಂದು ವರದಿ ಮಾಡಿದೆ. ಕೊನೆಯ ಘಳಿಗೆಯಲ್ಲಿ ಹೆಚ್ಚಿನ ಸಂಖ್ಯೆಯ 'ಕೊರೋನಾ-ಪಾರ್ಟಿ'ಗಳನ್ನು ಆಯೋಜಿಸಲಾಗಿದೆ.[೫]

ಮಾರ್ಚ್ ೧೯, ೨೦೨೦ ರಂದು ಜರ್ಮನ್ ರಾಜ್ಯವಾದ ಬಾಡೆನ್-ವುರ್ಟೆಂಬರ್ಗ್‌ನಲ್ಲಿ ಹಲವಾರು ಕೊರೋನಾ-ಪಾರ್ಟಿಗಳನ್ನು ನಿಲ್ಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಭಾಗವಹಿಸಿದವರು ೧೫ ವರ್ಷದಿಂದ ಇಪ್ಪತ್ತರ ಮಧ್ಯದ ವಯಸ್ಸಿನವರು. ಯುವಕರು ಶಾಲೆಯ ಅಂಗಳದಲ್ಲಿ, ಬಾರ್ಬೆಕ್ಯೂ ತಾಣಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಭೇಟಿಯಾದರು. ತಮ್ಮ ಮಕ್ಕಳ ಮೇಲೆ ನಿಗಾ ವಹಿಸುವಂತೆ ಪೋಷಕರನ್ನು ಪೊಲೀಸ್ ಮುಖ್ಯಸ್ಥರು ಕೇಳಿಕೊಂಡರು.[೬]

ಆಸ್ಟ್ರಿಯನ್ ಬ್ರಾಡ್‌ಕಾಸ್ಟರ್ ಒಆರ್‌ಎಫ್ ಪ್ರಕಾರ, ನಾಲ್ಕು ಪುರುಷರು ೨೦೨೦ ರ ಮಾರ್ಚ್ ೨೧, ಶನಿವಾರದಂದು ಹೆಲಿಜೆನ್‌ಕ್ರೂಜ್ ಆಮ್ ವಾಸೆನ್‌ನ ಕ್ಲಬ್ ಹೌಸ್‌ನಲ್ಲಿ ಭೇಟಿಯಾದರು. ಪುರುಷರಲ್ಲಿ ಒಬ್ಬರು ಸ್ಟೈರಿಯಾದ ರಾಜ್ಯ ಸಂಸತ್ತಿನ ಸದಸ್ಯರಾದ ಗೆರ್ಹಾರ್ಡ್ ಹಿರ್ಷ್ಮನ್ (FPÖ). ಇತರೆ ಪಕ್ಷಗಳು ಅವರ ನಡವಳಿಕೆಯನ್ನು ಖಂಡಿಸಿದವು.[೭]

ಪ್ರತಿಕ್ರಿಯೆಗಳು ಬದಲಾಯಿಸಿ

ಜರ್ಮನಿಯ ಪತ್ರಿಕೆ FAZನ ಪ್ರಕಾರ, ಕೆಲವು ಜನರು ತಾವು ಪಾರ್ಟಿ ಮಾಡುವುದನ್ನು ನಿಲ್ಲಿಸಲು ಬಯಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸೋಂಕಿನ ಅಪಾಯದ ನಡುವೆಯೂ ಕೆಲವರು ಪಾರ್ಟಿ ಮಡುತ್ತಾರೆ. ಇತರರು ಈ ಸಾಧ್ಯತೆಯಿಂದಾಗಿ ಒಟ್ಟುಗೂಡುತ್ತಾರೆ. ಸೋಂಕು ಮತ್ತು ಅನಾರೋಗ್ಯದ ನಂತರ ಅವರು ರೋಗನಿರೋಧಕರಾಗುತ್ತಾರೆ ಮತ್ತು ನಂತರ ಅವರ ಸಾಮಾನ್ಯ ಜೀವನಕ್ಕೆ ಹಿಂತಿರುಗಬಹುದು ಎಂದು ಅವರು ನಂಬುತ್ತಾರೆ. ಖಾಸಗಿಯಾಗಿ ಸಂಘಟಿತವಾದ, "ಕೊರೋನಾಪಾರ್ಟಿಗಳು" ಎಂದು ಕರೆಯಲ್ಪಡುವ ಇವು ಈ ಯೋಜನೆಯ ಫಲಿತಾಂಶವಾಗಿದೆ.[೮]

ಇದನ್ನೂ ಸಹ ನೋಡಿ ಬದಲಾಯಿಸಿ

  • ಪೋಕ್ಸ್ ಪಾರ್ಟಿ

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ "Friends throw 'coronavirus party' with face masks, 'Quarantini' drinks, Pandemic game". Retrieved 25 March 2020.
  2. "Police chief slams nightclub over coronavirus party post". 20 March 2020.
  3. Noodverordening van de voorzitter van de veiligheidsregio [...], page 7 (Article 2.1: 'Verboden samenkostem en evenementen) 26 March 2020, accessed 28 March 2002.
  4. "A group of young adults held a coronavirus party in Kentucky to defy orders to socially distance. Now one of them has coronavirus". Retrieved 25 March 2020.
  5. Het Laatste Nieuws: “Schaam je!”
  6. Badische Neueste Nachrichten: Polizei löst „Corona-Partys“ in Baden-Baden, Bühl und Durmersheim auf Archived 2020-03-21 ವೇಬ್ಯಾಕ್ ಮೆಷಿನ್ ನಲ್ಲಿ., 20 March 2020, last seen on 21 March 2020.
  7. FPÖ-Abgeordneter feierte „Corona-Party“ orf.at, 20 March 2020, last seen on 21 March 2020.
  8. FAZ.net: Feiern bis der Arzt kommt, 19 March 2020, last seen on 22 March 2020.

ಬಾಹ್ಯ ಸಂಪರ್ಕಗಳು ಬದಲಾಯಿಸಿ