ಜೀವ ಸಂಸಾರದಿಂದ ಪಡೆಯುವ ಬಿಡುಗಡೆಗೆ ಸಾಮಾನ್ಯವಾಗಿ ಕೈವಲ್ಯ ಎಂಬ ಹೆಸರಿದೆ. ಐಕ್ಯ, ಮೋಕ್ಷ, ನಿರ್ವಾಣ ಇವು ಪರ್ಯಾಯ ನಾಮಗಳು. ಕೈವಲ್ಯದ ಅರ್ಥ ಒಂದೊಂದು ದರ್ಶನದಲ್ಲಿ ಒಂದೊಂದು ಬಗೆಯಾಗಿದೆ. ವೇದಾಂತ ಶಾಖೆಯಾದ ಅದ್ವೈತದಲ್ಲಿ ಕೈವಲ್ಯವೆಂದರೆ ಆತ್ಮ-ಬ್ರಹ್ಮರ ಐಕ್ಯ. ಆತ್ಮ ಮಾಯಾ ಸಂಬಂಧದಿಂದ ಕೇವಲತೆಯನ್ನು ಹೊಂದಿ ಬ್ರಹ್ಮವಾಗುವುದು. ದ್ವೈತದಲ್ಲಿ ಕೈವಲ್ಯ ಅಥವಾ ಮೋಕ್ಷವೆಂದರೆ ಆತ್ಮ ಆತ್ಮವಾಗಿಯೇ ಉಳಿದು ವಿಷ್ಣುಸಾಲೋಕ್ಯ, ಸಾಮೀಪ್ಯಗಳನ್ನು ಹೊಂದಿ ಅನುಗುಣವಾದ ಆನಂದವನ್ನು ಅನುಭವಿಸುವುದು. ಸಾಂಖ್ಯದರ್ಶನದ ಪ್ರಕಾರ ಪ್ರಕೃತಿ ಸಂಪರ್ಕವನ್ನು ಪುರುಷ ಕಳೆದುಕೊಳ್ಳುವುದೇ ಕೈವಲ್ಯ. ಪಾತಂಜಲಯೋಗದರ್ಶನದ ಅರ್ಥ ಇದೇ. ಅವೈದಿಕ ಧರ್ಮವಾದ ಜೈನಸಿದ್ಧಾಂತದ ಪ್ರಕಾರ ಆತ್ಮ ಅಜೀವರೂಪವಾದ ಕರ್ಮದಿಂದ ಬಿಡುಗಡೆ ಹೊಂದುವುದೇ ಕೈವಲ್ಯ. ಬೌದ್ಧರಲ್ಲಿ ಕೈವಲ್ಯ ಅಥವಾ ಬಿಡುಗಡೆಯೆಂದರೆ ನಿರ್ವಾಣ ಹೊಂದುವಿಕೆ ಎಂದರ್ಥ.


ಪತಂಜಲಿ ಬದಲಾಯಿಸಿ

ಪತಂಜಲಿಯ ಯೋಗಸೂತ್ರಗಳ ನಾಲ್ಕನೇ ಅಧ್ಯಾಯದ ಸೂತ್ರಗಳು ಜನ್ಮದ ನಮ್ಮ ಮುಗಿಯದ ಆವರ್ತಗಳಿಂದ ಹಿಂದೆಬಿಡಲಾದ ಪ್ರಭಾವಗಳನ್ನು ಮತ್ತು ಅಂತಹ ಪ್ರಭಾವಗಳನ್ನು ಅಳಿಸುವ ಅಗತ್ಯದ ಹಿಂದಿನ ತಾರ್ಕಿಕಾಧಾರವನ್ನು ಚರ್ಚಿಸುತ್ತವೆ. ಇದು ಕೈವಲ್ಯವನ್ನು ಸಾಧಿಸಿದ ಯೋಗಿಯನ್ನು ಎಲ್ಲ ಬಂಧನಗಳಿಂದ ಸ್ವಾತಂತ್ರ್ಯವನ್ನು ಪಡೆದಿರುವ, ಮತ್ತು ಸಮಾಧಿ ಪದದಲ್ಲಿ ವಿವರಿಸಲಾಗಿರುವ ರಿತಂಭರ ಪ್ರಜ್ಞೆ ಅಥವಾ ಪರಮ ನೈಜ ಪ್ರಜ್ಞೆಯನ್ನು ಸಾಧಿಸಿರುವ ಘಟಕವಾಗಿ ಚಿತ್ರಿಸುತ್ತದೆ.

ಮೂಲಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೈವಲ್ಯ&oldid=914910" ಇಂದ ಪಡೆಯಲ್ಪಟ್ಟಿದೆ